Search
  • Follow NativePlanet
Share
» »ತೆಪ್ಪದ ವಿಹಾರ ತಪ್ಪದೆ ಮಾಡಿ

ತೆಪ್ಪದ ವಿಹಾರ ತಪ್ಪದೆ ಮಾಡಿ

ನೀರಲ್ಲಿ ಆಡುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ನೀರಿನ ಮೋಡಿಯೇ ಹಾಗೆ... ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಸಹ ನೀರಿನಲ್ಲಿ ಕುಣಿದು ಕುಪ್ಪಳಿಸಲು ಇಷ್ಟ ಪಡುತ್ತಾರೆ.

By Divya

ನೀರಲ್ಲಿ ಆಡುವುದು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ನೀರಿನ ಮೋಡಿಯೇ ಹಾಗೆ... ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಸಹ ನೀರಿನಲ್ಲಿ ಕುಣಿದು ಕುಪ್ಪಳಿಸಲು ಇಷ್ಟ ಪಡುತ್ತಾರೆ. ರೆಸಾರ್ಟ್, ಫನ್ ಗೇಮ್ಸ್‍ಗಳಲ್ಲಿ ನೀರಿನ ಆಟಗಳಿಂದಲೇ ಜನರನ್ನು ಆಕರ್ಷಿಸುತ್ತಾರೆ. ಬೇಸಿಗೆ ಸಮಯದಲ್ಲಂತೂ ಈ ಆಟಗಳಿಗೆ ಮಾರುಹೋಗದವರಿಲ್ಲ. ಇಂತಹ ನೀರಿನ ಆಟವನ್ನು ಬೆಂಗಳೂರಿನಲ್ಲಿ ನೈಸರ್ಗಿಕವಾಗಿಯೇ ಆಡಬೇಕು ಎನಿಸಿದರೂ ಆಡಲು ಸಾಧ್ಯವಿಲ್ಲ. ಬೆಂಗಳೂರಿನಿಂದಾಚೆ ಕೆಲವು ನಿಗದಿತ ಸ್ಥಳಗಳಿಗೆ ಭೇಟಿ ನೀಡಿದರೆ, ತೆಪ್ಪದ ಖುಷಿಯನ್ನು ಪಡೆಯಬಹುದು.

ಹಳ್ಳಿಗಳಲ್ಲಿ ಹಾಗೂ ಕೆಲವು ಪ್ರವಾಸ ತಾಣಗಳಲ್ಲಿ ತೆಪ್ಪದ ವಿಹಾರ ಇರುವುದು ಕಾಣಬಹುದು. ಹಿಂದಿನ ಕಾಲದಲ್ಲಿ ರಸ್ತೆ ಮಾರ್ಗಗಳಿರಲಿಲ್ಲ. ಅಂತಹ ಸಂದರ್ಭದಲ್ಲಿ ಬೆತ್ತದಿಂದ ತಯಾರಿಸಿದ ತೆಪ್ಪದಿಂದಲೇ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ತಲುಪುತ್ತಿದ್ದರು. ಇಂದು ಈ ತೆಪ್ಪದ ಸವಾರಿ ಒಂದು ಆಟವಾಗಿ ಮಾರ್ಪಟ್ಟಿದೆ. ತೆಪ್ಪದ ಮೇಲೆ ಕುಳಿತು ಸವಾರಿ ಮಾಡುವ ರೋಮಾಂಚಕ ಅನುಭವ ನಿಮ್ಮದಾಗಬೇಕೆಂದರೆ ಈ ತಾಣಗಳಿಗೆ ಬನ್ನಿ...

ದುಬಾರೆ

ದುಬಾರೆ

ಕೂರ್ಗ್‍ನಲ್ಲಿ ಬರುವ ದುಬಾರೆಯ ತಾಣ ಆನೆಗಳ ಸವಾರಿಗೆ ಪ್ರಸಿದ್ಧಿ ಪಡೆದಿದೆ. ಇಲ್ಲಿ ಕಾವೇರಿ ನದಿ ತೀರವೂ ಇರುವುದರಿಂದ ಪ್ರವಾಸಿಗರು ತೆಪ್ಪದಲ್ಲಿ ವಿಹರಿಸಬಹುದು. ಖುಷಿ-ಖುಷಿಯಾಗಿ ನೀರಿನಲ್ಲಿ ಆಡುತ್ತ, ಸುತ್ತಲು ಇರುವ ದಟ್ಟ ಅರಣ್ಯದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಇದು ಬೆಂಗಳೂರಿನಿಂದ 248 ಕಿ.ಮೀ. ದೂರದಲ್ಲಿದೆ.
PC: wikimedia.org

ಕಬಿನಿ

ಕಬಿನಿ

ನಾಗರಹೊಳೆ ಅಭಯಾರಣ್ಯದ ಸಮೀಪ ಇರುವ ಕಬಿನಿ ಹಿನ್ನೀರಿನ ಜಲಾಶಯದಲ್ಲಿ ತೆಪ್ಪದ ವಿಹಾರವಿದೆ. ಅಗಲವಾದ ತಟ್ಟೆಯಂತಹ ತೆಪ್ಪದಲ್ಲಿ ಕುಳಿತು, ಸುತ್ತಲ ಪ್ರಪಂಚವನ್ನು ನೋಡುವುದೇ ಒಂದು ಚೆಂದ. ಚಾರಣ ಮಾಡಲು ಅವಕಾಶ ಇರುವ ಈ ತಾಣ ಬೆಂಗಳೂರಿನಿಂದ 215 ಕಿ.ಮೀ. ದೂರದಲ್ಲಿದೆ.
PC: wikimedia.org

ಭೀಮೇಶ್ವರಿ

ಭೀಮೇಶ್ವರಿ

ಹಲಗೂರಿನಲ್ಲಿ ಬರುವ ಭೀಮೇಶ್ವರಿ ಸಾಹಸ ಕ್ರೀಡೆ ಹಾಗೂ ನೇಚರ್ ಕ್ಯಾಂಪ್‍ಗಳಿಗೆ ಪ್ರಸಿದ್ಧಿ ಪಡೆದ ತಾಣ. ಇಲ್ಲಿ ಹರಿಯುವ ನದಿಯಲ್ಲಿ ತೆಪ್ಪದ ವಿಹಾರವೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ಬೆಂಗಳೂರಿನಿಂದ 105 ಕಿ.ಮೀ. ದೂರದಲ್ಲಿದೆ.
PC: wikipedia.org

ದಾಂಡೇಲಿ

ದಾಂಡೇಲಿ

ಉತ್ತರ ಕರ್ನಾಟಕ ಭಾಗದಲ್ಲಿ ಬರುವ ದಾಂಡೇಲಿ ವಾಟರ್ ರಾಫ್ಟಿಂಗ್ ಹಾಗೂ ತೆಪ್ಪದ ವಿಹಾರಕ್ಕೆ ಹೆಸರುವಾಸಿ. ಇಲ್ಲಿರುವ ರಮ್ಯವಾದ ಪ್ರಕೃತಿಯ ಮಧ್ಯೆ ಪಕ್ಷಿಗಳ ಸುಂದರವಾದ ನೋಟಗಳು ಅದ್ಭುತವಾಗಿರುತ್ತದೆ.
PC: flickr.com

ಕಾರವಾರ

ಕಾರವಾರ

ಹಲವಾರು ರೆಸಾರ್ಟ್‍ಗಳನ್ನು ಒಳಗೊಂಡಿರುವ ಕಾರವಾರ ತೆಪ್ಪದ ಸವಾರಿಗೂ ಹೆಸರುವಾಸಿಯಾಗಿದೆ. ಇಲ್ಲಿರುವ ಪ್ರತಿಯೊಂದು ರೆಸಾರ್ಟ್‍ಗಳು ತೆಪ್ಪದ ವಿಹಾರವನ್ನು ಒಂದು ವಿಶೇಷ ಕ್ರೀಡೆಯಾಗಿ ಪರಿಗಣಿಸಿವೆ. ಒಮ್ಮೆ ಇಲ್ಲಿಗೆ ಬಂದರೆ ತೆಪ್ಪದ ವಿಹಾರವನ್ನು ಆನಂದಿಸಬಹುದು. ಬೆಂಗಳೂರಿನಿಂದ ಈ ತಾಣ 424 ಕಿ.ಮೀ. ದೂರದಲ್ಲಿದೆ.
PC: wikipedia.org

ತಲಕಾಡು

ತಲಕಾಡು

ಬೆಂಗಳೂರಿನಿಂದ 132 ಕಿ.ಮೀ. ದೂರದಲ್ಲಿರುವ ತಲಕಾಡಿಗೆ ಕಾವೇರಿ ನದಿ ತೀರವೂ ಹತ್ತಿರದಲ್ಲಿಯೇ ಇದೆ. ಈ ತೀರದಲ್ಲಿ ತೆಪ್ಪದಲ್ಲಿ ವಿಹರಿಸುವುದು ಒಂದು ಸುಂದರ ಅನುಭವವನ್ನು ನೀಡುತ್ತದೆ. ಇದಕ್ಕೆ ಹತ್ತಿರವೇ ಮರಳಿನಲ್ಲಿ ಹುದುಗಿದ ಅನೇಕ ದೇಗುಲಗಳಿವೆ.
PC: wikimedia.org

ಹೊಗೆನಕಲ್ ಜಲಪಾತ

ಹೊಗೆನಕಲ್ ಜಲಪಾತ

ಹಲವಾರು ಪ್ರವಾಸಿಗರ ಮನಸೂರೆಗೊಳಿಸುವ ಹೊಗೆನಕಲ್ ಜಲಪಾತದಲ್ಲಿ ತೆಪ್ಪ ವಿಹಾರವನ್ನು ಮಾಡಬಹುದು. ಜಲಧಾರೆಯ ಸಮೀಪವೇ ತೆಪ್ಪದಲ್ಲಿ ಕರೆದೊಯ್ಯುವುದರಿಂದ, ಆ ಸಂದರ್ಭದಲ್ಲಿ ಉಂಟಾಗುವ ಖುಷಿಯನ್ನು ಹೇಳಲು ಅಸಾಧ್ಯ. ಏನಿದ್ದರೂ ಅದನ್ನು ಅನುಭವಿಸಬೇಕಷ್ಟೆ. ಬೆಂಗಳೂರಿನಿಂದ 180 ಕಿ.ಮೀ.ದೂರದಲ್ಲಿದೆ.
PC: wikipedia.org

Read more about: kabini
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X