ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಈ ಸತುರಗಿರಿ ಪರ್ವತದಲ್ಲಿ ನೀವು ಎಂದೂ ಊಹಿಸಲಾಗದ ರಹಸ್ಯಗಳಿವೆ

Written by:
Published: Wednesday, July 12, 2017, 9:30 [IST]
Share this on your social network:
   Facebook Twitter Google+ Pin it  Comments

ಈ ದೇವಾಲಯವು ಅತ್ಯಂತ ಮಹಿಮಾನ್ವಿತವಾದ ದೇವಾಲಯ ಇಲ್ಲಿ 18 ಸಿದ್ಧ ಪರುಷರು ಮತ್ತು ಪರಮ ಶಿವನು ನೆಲೆಸಿರುವ ಪವಿತ್ರವಾದ ಕ್ಷೇತ್ರವಾಗಿದೆ. ಇಲ್ಲಿ ಹಲವಾರು ಭಕ್ತರು ಕಾಳಿಯನ್ನು ಹಾಗೂ ಪರಮಶಿವನನ್ನು ದರ್ಶನ ಮಾಡಲು ಭೇಟಿ ನೀಡುತ್ತಾರೆ. ಇಲ್ಲಿನ ದೇವಾಲಯದ ಸುತ್ತ ಮುತ್ತ ಇರುವುದೆಲ್ಲಾ ಆಶ್ರ್ಚಯಕರವಾದುದೇ.

ಈ ದೇವಾಲಯದ ವಾತಾವರಣವು ದಟ್ಟ ಕಾಡು, ಹಾಲಿನ ಹಾಗೆ ಧುಮುಕುತ್ತಿರುವ ಜಲಪಾತಗಳು, ಹಚ್ಚ ಹಸಿರಿನಿಂದ ಕೂಡಿದ ಪರ್ವತಗಳು ರಮಣೀಯ. ಇಲ್ಲಿ ಚೂಣೀ ಎಂಬ ಜಲಪಾತವಿದೆ. ಇಲ್ಲಿಯೇ ಸತುರಗಿರಿ ಎಂಬ ಬೆಟ್ಟವಿದೆ. ಆ ಬೆಟ್ಟದಲ್ಲಿ ಇರುವುದೆಲ್ಲಾ ಆಶ್ಚರ್ಯಕರವಾದ ವಿಷಯಗಳೇ........

ಪ್ರಸ್ತುತ ಲೇಖನದಲ್ಲಿ ಆಶ್ಚರ್ಯಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಚತುರ ಗಿರಿ ಶಿಖರದ ಬಗ್ಗೆ ತಿಳಿಯೋಣ.

ಸತುರ ಗಿರಿ

ಈ ಸತುರ ಗಿರಿಯ ದೇವಿಯ ದರ್ಶನ ಪಡೆಯಲು ಕಾಲು ನಡಿಗೆಯಿಂದ ಸುಮಾರು 10 ಕಿ,ಮೀ ದೂರ ನಡೆಯಬೇಕಾಗುತ್ತದೆ. ಪರ್ವತ ಮೇಲೆ ದೇವಾಲಯವಿರುವುದರಿಂದ ಭಕ್ತರಿಗೆ ಚಿಕ್ಕ ಚಿಕ್ಕದಾದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ.

ಟ್ರೆಕ್ಕಿಂಗ್

ಈ ದೇವಾಲಯವು ಪರ್ವತದ ಮೇಲೆ ಇರುವುದರಿಂದ ಟ್ರೆಕ್ಕಿಂಗ್ ಪ್ರೇಮಿಗಳಿಗೆ ಇದೊಂದು ಸದಾವಕಾಶ ಮಾಹಿಮಾನ್ವಿತ ದೇವಿಯ ದರ್ಶನದ ಜೊತೆ ಜೊತೆಗೆ ಸ್ನೇಹಿತರ ಜೊತೆಗೆ ಟ್ರೆಕ್ಕಿಂಗ್‍ಗೆ ಕೂಡ ಹೊರಡಬಹುದಾಗಿದೆ.

ತೀರ್ಥಕ್ಷೇತ್ರ

ಹೇಳಬೇಕಾದರೆ ಈ ತೀರ್ಥಕ್ಷೇತ್ರಕ್ಕೆ ತೆರಳಲು ಕಾಲು ನಡಿಗೆಯಿಂದ ಹೋಗಬೇಕಾಗಿರುವುದರಿಂದ ಭಕ್ತರಿಗೆ ಯಾವುದೇ ಆಯಾಸವಾಗುವುದಿಲ್ಲ. ಇದು ಕೂಡ ಇಲ್ಲಿನ ದೇವಿಯ ಮಹಿಮೆಗಳಲ್ಲಿ ಒಂದಾಗಿದೆ.

ಮಹಾಲಿಂಗನ ದೇವಾಲಯ

ಸತುರಗಿರಿ ಪರ್ವತದಲ್ಲಿ ಸುಂದರ ಮಹಾಲಿಂಗನ ದೇವಾಲಯವಿದೆ. ಇಲ್ಲಿನ ಸುಂದರ ಮಹಾಲಿಂಗ ಸ್ವಾಮಿಯು ಅತ್ಯಂತ ಮಾಹಿಮಾನ್ವಿತನು ಎಂದು ಹಲವಾರು ಭಕ್ತರು ಈ ಸ್ವಾಮಿಯ ದರ್ಶನ ಹಾಗು ಆರ್ಶಿವಾದ ಕೋರಿ ಇಲ್ಲಿಗೆ ಭೇಟಿ ನೀಡುತ್ತಾರೆ.

ಎಲ್ಲಿದೆ?

ತಮಿಳು ನಾಡಿನ ಮಧುರೈನಿಂದ ಸುಲಭವಾಗಿ ಸತುರಗಿರಿಗೆ ತೆರಳಬಹುದು. ಈ ದೇವಾಲಯವು ಮಧುರೈನ ವಿರುಧನಗರ ಜಿಲ್ಲೆಯ ಥೆಣಿ ತಾಲ್ಲೂಕಿನಲ್ಲಿದೆ.

 

 

ಕಾಳಿ

ಇಲ್ಲಿನ ಆದಿ ಶಕ್ತಿಯು ಕಾಳಿ ರೂಪದಲ್ಲಿ ದರ್ಶನವನ್ನು ನೀಡುತ್ತಾಳೆ. ಕಾಳಿ ಸಾಮಾನ್ಯವಾಗಿ ರೌದ್ರ ಅವತಾರದಲ್ಲಿರುವುದರಿಂದ ಭಯಾನಕವಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ.

ವೃಕ್ಷಗಳು

ದೇವಾಲಯಕ್ಕೆ ಸಾಗುವ ಮಾರ್ಗದಲ್ಲಿ ಹಲವಾರು ಬೃಹತ್ ಗಾತ್ರದ ವೃಕ್ಷಗಳಿವೆ. ಆ ವೃಕ್ಷಗಳ ಕೆಳಗೆ ಋಷಿಮುನಿಗಳು ತಪಸ್ಸು ಮಾಡುತ್ತಿದ್ದರು ಎಂದು ಭಕ್ತರ ನಂಬಿಕೆಯಾಗಿದೆ.

ಗಿಡ ಮೂಲಿಕೆಗಳು

ಕಾಲು ನಡಿಗೆಯಿಂದ ಸಾಗುವ ಹಲವಾರು ಭಕ್ತರಿಗೆ ಹಾಗೂ ಯಾತ್ರಿಕರಿಗೆ ಗಿಡ ಮೂಲಿಕೆಗಳಿಂದ ಕೂಡಿರುವ ವಾತಾವರಣವನ್ನು ಅಸ್ವಾಧಿಸುತ್ತ ಸಾಗಬಹುದಾಗಿದೆ. ಈ ಪ್ರದೇಶದಲ್ಲಿ ಋಷಿ ಮುನಿಗಳು ಉಪಯೋಗಿಸುತ್ತಿದ್ದ ಹಲವಾರು ದಿವ್ಯ ಔಷಧಿಗಳು ಅದೆಷ್ಟೊ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂತೆ.

ಪಂಚ ಲಿಂಗಗಳು

ಈ ಸತುರಗಿರಿ ಪರ್ವತದ ಮೇಲೆ 5 ದೇವಾಲಯಗಳಿವೆ. ಅವುಗಳೆಂದರೆ ಮಹಾಲಿಂಗ, ಸುಂದರ ಮೂರ್ತಿ ಲಿಂಗ, ಚಂದನ ಮಹಾಲಿಂಗ, ದ್ವಿಲಿಂಗ ಹಾಗೂ ಬೃಹತ್ ಲಿಂಗ.

ಭಕ್ತರು

ಈ ದೇವಾಲಯಕ್ಕೆ ಹಲವಾರು ಭಕ್ತರು ಭೇಟಿ ನೀಡುತ್ತಾರೆ. ತಾವು ಬೇಡಿ ಕೊಂಡ ಕಾರ್ಯವು ನಡೆದರೆ ಈ ದೇಗುಲಕ್ಕೆ ಬಂದು ದರ್ಶನ ಭಾಗ್ಯ ಪಡೆಯುತ್ತೇವೆ ಎಂದು ಭಕ್ತರು ಬರುತ್ತಾರೆ.

ವಿಶೇಷ ಪೂಜೆಗಳು

ಈ ದೇವಾಲಯದಲ್ಲಿ ಅಮಾವಸ್ಯೆಯೊಂದು ಹಾಗೂ ಶಿವರಾತ್ರಿಯಂದು ಅತ್ಯಂತ ವಿಜೃಬಣೆಯಿಂದ ಹಬ್ಬಗಳನ್ನು ಆಚರಿಸಲಾಗುತ್ತದೆ.

ಸಂಜೀವಿನಿ ಬೆಟ್ಟ

ಉತ್ತರ ದಿಕ್ಕಿಗೆ ಇರುವ ಮಹಾಲಿಂಗ ದೇವಾಲಯವನ್ನು ಸಂಜೀವಿನಿ ಬೆಟ್ಟ ಎಂದು ಕರೆಯಲಾಗುತ್ತದೆ.

ಭಾರತೀಯ ಅರಣ್ಯ ಇಲಾಖೆ

1940 ನಿಂದಲೂ ಈ ಸತುರಗಿರಿ ಪರ್ವತವನ್ನು ಭಾರತೀಯ ಅರಣ್ಯ ಇಲಾಖೆಯವರು ನಿರ್ವಹಿಸುತ್ತಿದ್ದಾರೆ.

ವೃಕ್ಷ

ಈ ದೇವಾಲಯದ ಪರ್ವತದಲ್ಲಿ ಮುಕರವಿಕಿ ಎಂಬ ಮರವಿದೆ ಈ ಮರವು ಮುಖವು ಊದಿಕೊಂಡಿದ್ದರೆ ಮರದಿಂದ ಬರುವ ಹಾಲನ್ನು ಹಚ್ಚಿಕೊಂಡರೆ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ ಎಂತೆ.

ಹುಲ್ಲು

ಜ್ಯೋತಿಪಾಲ ಹುಲ್ಲುನ್ನು ಬೆಳಗಿನ ಜಾವ ನೀರಿನಲ್ಲಿ ನೆನೆಸಿ ರಾತ್ರಿಯಂದು ಋಷಿ ಮುನಿಗಳು ಈ ಜ್ಯೋತಿಪಾಲದಿಂದ ಬೆಳಕನ್ನು ಪಡೆಯುತ್ತಿದ್ದರಂತೆ.

ಆಳಿಲು

ಸಾಮಾನ್ಯವಾಗಿ ಅಳಿಲು ಚಿಕ್ಕದಾಗಿರುತ್ತದೆ. ಆದರೆ ಈ ಪರ್ವತದಲ್ಲಿ ಅತ್ಯಂತ ದೊಡ್ಡದಾದ ಅಳಿಲುಗಳನ್ನು ಕಾಣಬಹುದಾಗಿದೆ.

ಥವಾಸಿ ಗುಹೆ

ಮಹಾಲಿಂಗ ದೇವಾಲಯದಿಂದ ಸುಮಾರು 1 ಕಿ,ಮೀ ದೂರ ಕ್ರಮಿಸಿದರೆ ಅಲ್ಲಿ ಥವಾಸಿ ಎಂಬ ಗುಹೆ ಇದೆ. ಈ ಗುಹೆಯನ್ನು ಭೇಟಿ ಮಾಡಲೇಬೇಕಂತೆ ಏಕೆಂದರೆ ಈ ಗುಹೆಯಲ್ಲಿ ಸುಮಾರು 18 ಋಷಿ ಮಿನಿಗಳನ್ನು ಕಂಡ ಪುಣ್ಯ ದೊರೆಯುತ್ತದೆಯಂತೆ. ಇಲ್ಲಿ ಹಲವಾರು ಪವಾಡಗಳನ್ನು ಕಾಣಬಹುದಾಗಿದೆ.

ಸಾರಿಗೆ ವ್ಯವಸ್ಥೆ

ಹಲವು ಜನರು ಈ ದೇವಾಲಯಕ್ಕೆ ಸರಿಯಾದ ರಸ್ತೆ ಸಾರಿಗೆ ಇಲ್ಲ ಎಂದು ಭಾವಿಸಿದ್ದಾರೆ. ಆದರೆ ತಮಿಳು ನಾಡು ರಾಜ್ಯದ ಮಟ್ಟುಪೆಟಾಣಿ ಬಸ್ ಸ್ಟೇಷನ್‍ನಿಂದ ಸತುರಗಿರಿಗೆ ಸುಮಾರು 7 ಕಿ,ಮೀ ದೂರವಿದೆ. ಟ್ರೆಕ್ಕಿಂಗ್ ಮಾಡಲು ಸುಮಾರು 10 ಕಿ,ಮೀ ದೂರವಿದೆ.

English summary

This is a secret that you can never imagine in the mountains

The temple is one of the most magnificent temples in the region and is dedicated to Lord Shiva and Lord Shiva. Many devotees visit here to visit Kali and Lord Shiva. All around the temple there is a lot of refinement.
Please Wait while comments are loading...