Search
  • Follow NativePlanet
Share
» »ಈ ಚಿತ್ರಗುಪ್ತನ ದೇವಾಲಯದ ಮುಂದೆ ಪ್ರತಿನಿತ್ಯವೂ ಶವಯಾತ್ರೆಯೇ

ಈ ಚಿತ್ರಗುಪ್ತನ ದೇವಾಲಯದ ಮುಂದೆ ಪ್ರತಿನಿತ್ಯವೂ ಶವಯಾತ್ರೆಯೇ

ಯಮಧರ್ಮ ಅಸ್ಥಾನದಲ್ಲಿ ಮಾನವರ ಪಾಪ ಪುಣ್ಯಗಳನ್ನು ಬರೆಯುವ ಚಿತ್ರಗುಪ್ತನಿಗೆ ಭೂಲೋಕದಲ್ಲಿಯೂ ಕೂಡ ಅಲ್ಲಲ್ಲಿ ದೇವಾಲಯವಿದೆ. ಚಿತ್ರ ಗುಪ್ತನ ದೇವಾಲಯಗಳನ್ನು ಬೆರಳಣಿಕೆಯಷ್ಟು ಎಂದು ಗುರುತಿಸಬಹುದು. ಮುಖ್ಯವಾಗಿ ಏಷ್ಯಾ ಖಂಡದಲ್ಲಿಯೇ ಚಿತ್ರಗುಪ್ತನ ಭ

ಯಮಧರ್ಮ ಅಸ್ಥಾನದಲ್ಲಿ ಮಾನವರ ಪಾಪ ಪುಣ್ಯಗಳನ್ನು ಬರೆಯುವ ಚಿತ್ರಗುಪ್ತನಿಗೆ ಭೂಲೋಕದಲ್ಲಿಯೂ ಕೂಡ ಅಲ್ಲಲ್ಲಿ ದೇವಾಲಯವಿದೆ. ಚಿತ್ರ ಗುಪ್ತನ ದೇವಾಲಯಗಳನ್ನು ಬೆರಳಣಿಕೆಯಷ್ಟು ಎಂದು ಗುರುತಿಸಬಹುದು. ಮುಖ್ಯವಾಗಿ ಏಷ್ಯಾ ಖಂಡದಲ್ಲಿಯೇ ಚಿತ್ರಗುಪ್ತನ ಭಕ್ತರು ಹೆಚ್ಚಾಗಿ ಇದ್ದಾರೆ. ಭರತ ಚಕ್ರವರ್ತಿ ಪಾಲಿಸಿದ ಈ ಭಾರತ ದೇಶದಲ್ಲಿಯೂ ಕೂಡ ಚಿತ್ರಗುಪ್ತನ ದೇವಾಲಯಗಳನ್ನು ಕಾಣಬಹುದಾಗಿದೆ.

ರಾಮನು ಕೂಡ ಚಿತ್ರಗುಪ್ತನ್ನು ಭಕ್ತಿಯಿಂದ ಪೂಜಿಸಿದ ಎಂದು ಪುರಾಣ ಇತಿಹಾಸಗಳಲ್ಲಿ ಇವೆ. ಅದ್ದರಿಂದಲೇ ರಾಮನು ರಾಜ್ಯಭಾರ ಮಾಡಿದ ಅಯ್ಯೋದ್ಯೆಯಲ್ಲಿ ಚಿತ್ರಗುಪ್ತನ ದೇವಾಲಯವಿದೆ. ಸ್ವಯಂ ರಾಮನೇ ಅಲ್ಲಿ ಪೂಜಿಸುತ್ತಿದ್ದನು ಎಂದು ಪ್ರತೀತಿ.

ದೇವಾಲಯವನ್ನು ಧರ್ಮ ಪುರಿ ಚಿತ್ರಗುಪ್ತ ದೇವಾಲಯ ಎಂದು ಕರೆಯುತ್ತಾರೆ. ಉತ್ತರ ಪ್ರದೇಶ ರಾಜ್ಯದಲ್ಲಿನ ಈ ದೇಗುಲಕ್ಕೆ ಹಲವಾರು ಭಕ್ತರು ಭೇಟಿ ನೀಡುತ್ತಾರೆ. ಮಧ್ಯೆ ಪ್ರದೇಶದಲ್ಲಿನ ಮೂರು ಪ್ರದೇಶಗಳಲ್ಲಿ ಚಿತ್ರಗುಪ್ತನ ದೇಗುಲಗಳಿವೆ. ಮಧ್ಯೆ ಪ್ರದೇಶದಲ್ಲಿಯೇ ಒಟ್ಟು 4 ಚಿತ್ರಗುಪ್ತ ದೇವಾಲಯಗಳಿವೆ.

ಎಲ್ಲಿದೆ?

ಎಲ್ಲಿದೆ?

ಉತ್ತರ ಭಾರತ ಪ್ರದೇಶದಲ್ಲಿ, ದಕ್ಷಿಣದ ತಮಿಳುನಾಡಿನ ಕಾಂಚಿಪುರಂನಲ್ಲಿ, ತೆಲಂಗಾಣದಲ್ಲಿ ಚಿತ್ರಗುಪ್ತನ ದೇವಾಲಯವನ್ನು ಕಾಣಬಹುದಾಗಿದೆ. ಇಂತಹ ಅಪರೂಪದ ಚಿತ್ರಗುಪ್ತನ ದೇವಾಲಯವು ಹೈದ್ರಾಬಾದ್‍ನ ಕಂದಿಕಲ್ ಗೇಟ್‍ನ ಪ್ರದೇಶದಲ್ಲಿಯೂ ಕೂಡ ಇದೆ.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ಆದರೆ ಈ ಪ್ರದೇಶದಲ್ಲಿ ಚಿತ್ರಗುಪ್ತನ ದೇವಾಲಯವಿದೆ ಎಂದು ಸ್ಥಳೀಯರಿಗೆ ತಿಳಿದಿಲ್ಲ. ಚಿತ್ರಗುಪ್ತನ ಗುಡಿಯಲ್ಲಿನ ಗಂಟೆ ಶಬ್ದಕ್ಕಿಂತ ಜನರಿಗೆ ಹೆಣ ಹಾಗೂ ಬಂಧುಗಳ ಶೋಕಗಳೇ ಹೆಚ್ಚಾಗಿ ಕೇಳಿಸುತ್ತವೆ.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ದೇವಾಲಯ ಮುಂದೆ ಶವ ಯಾತ್ರೆ ಸಾಗುತ್ತಾ ಇರುತ್ತದೆ. ಏಕೆಂದರೆ ದೇವಾಲಯದ ಸ್ವಲ್ಪ ದೂರದಲ್ಲಿಯೇ ನಲ್ಲವಾಗು ಎಂಬ ದೊಡ್ಡ ಸ್ಮಶಾನವಿದೆ. ಹೀಗಾಗಿ ಈ ದೇವಾಲಯ ಮಾರ್ಗವಾಗಿಯೇ ಶವ ಯಾತ್ರೆಗಳು ಸಾಗುತ್ತದೆ.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ಈ ದೇವಾಲಯ ಪರಿಸರದಲ್ಲಿ ಸಾಂಬ್ರಾಣಿ ಹೊಗೆ ವಾಸನೆ ಹಾಗೂ ಶವ ಧಹನ ವಾಸನೆ ಹೆಚ್ಚಾಗಿ ವಿಪರೀತವಾಗಿರುತ್ತದೆ. ಪಾತ ಬಸ್ತಿಯಲ್ಲಿ ಆ ಸ್ಮಶಾನವೇ ಅತ್ಯಂತ ದೊಡ್ಡದಾಗಿರುವುದರಿಂದ ಇಲ್ಲಿಗೆ ಶವಗಳ ಯಾತ್ರೆ ದಿನವೂ ನಡೆಯುತ್ತಾ ಇರುತ್ತವೆ. ಆಗಾಗ ಕಂದಿಕಲ್ ಗೇಟ್ ರೈಲ್ವೆ ಟ್ರಾಕ್ ಮೇಲೆ ಅಪಘಾತಗಳಾಗಿ ನಡೆಯುವ ಮೃತ್ಯುವಿನ ಶಬ್ಧಗಳನ್ನು ಕೇಳಿಸಿಕೊಳ್ಳಬಹುದಾಗಿದೆ.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ಈ ಚಿತ್ರಗುಪ್ತ ದೇವಾಲಯದ ಬಳಿ ರಾತ್ರಿಯ ಸಮಯದಲ್ಲಿ ಅಷ್ಟಾಗಿ ಜನ ಸಂಚಾರವಿರುವುದಿಲ್ಲ. ದೀಪಾವಳಿ ಹಬ್ಬದ 2 ದಿನದಂದು ಮಾತ್ರ ವಿಜೃಭಣೆಯಿಂದ ಉತ್ಸವವನ್ನು ನಡೆಸುತ್ತಾರೆ. ಸಾಮಾನ್ಯ ದಿನಗಳಲ್ಲಿ ಅಷ್ಟು ಪೂಜೆಗಳು ನಡೆಯುವುದಿಲ್ಲ.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ನಿಜಾಂ ನವಾಬರ ಕಾಲದಲ್ಲಿ ರಾಜ ಕಿಶನ್ ಪರ್ಷಾದ್ ಚಿತ್ರಗುಪ್ತನ ದೇವಾಲಯವನ್ನು ಅಭಿವೃದ್ಧಿಗೊಳಿಸಿದನು.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ಕಿಶನ್ ಪರ್ಷಾದ್ 3 ಹಿಂದೂ ಮಹಿಳೆಯರನ್ನು ಹಾಗೂ ನಾಲ್ಕು ಮುಸ್ಲಿಂ ಮಹಿಳೆಯರನ್ನು ವಿವಾಹ ಮಾಡಿಕೊಂಡಿದ್ದನು. ಹಿಂದೂ ಪತ್ನಿಯರಿಗೆ ಜನಿಸಿದ ಮಕ್ಕಳನ್ನು ಹಿಂದೂಗಳ ಹಾಗೂ ಮುಸ್ಲಿಂ ಪತ್ನಿಯರಿಗೆ ಜನಿಸಿದ ಮಕ್ಕಳನ್ನು ಮುಸ್ಲಿಂರ ಜೊತೆ ವಿವಾಹವನ್ನು ಮಾಡಿದನು.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ಕಿಶನ್ ಪರ್ಷಾದ್‍ನ ಮಕ್ಕಳು ಆಗಾಗ ಈ ದೇವಾಲಯಕ್ಕೆ ಭೇಟಿ ನೀಡುತ್ತಾ ಇರುತ್ತಾರೆ ಎಂದು ಪ್ರತ್ಯಕ್ಷಸಾಕ್ಷಿಗಳು ಹೇಳುತ್ತಾರೆ. ವಾಸ್ತವವಾಗಿ ಈ ದೇವಾಲಯವನ್ನು ನಿರ್ಮಾಣ ಯಾರು ಮಾಡಿದರು ಎಂಬುದು ಯಾರಿಗೂ ತಿಳಿದಿಲ್ಲ.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ಈ ದೇವಾಲಯದಲ್ಲಿ ಪಂಚ ಲೋಹದ ವಿಗ್ರಹವು ಕೆಲವು ವರ್ಷಗಳ ಹಿಂದೆ ಕಳುವು ಆಯಿತು. ಚಿತ್ರಗುಪ್ತನು ತನ್ನ ಇಬ್ಬರು ಪತ್ನಿಯರ ಜೊತೆಯಲ್ಲಿರುವ ವಿಗ್ರಹವನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ಅತ್ಯಂತ ಪುರಾತನವಾದ ಹಾಗೂ ಚಾರಿತ್ರಾತ್ಮಕ ಈ ದೇವಾಲಯವನ್ನು ಸರ್ಕಾರವು ಅಭಿವೃದ್ದಿಗೊಳಿಸಬೇಕು. ಇಲ್ಲವಾದರೆ ಇತಿಹಾಸವುಳ್ಳ ಈ ದೇವಾಲಯವನ್ನು ಕಳೆದುಕೊಳಬೇಕಾಗುತ್ತದೆ.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ವಿಚಿತ್ರವೆನೆಂದರೆ ಈ ದೇವಾಲಯದಲ್ಲಿ ಪೂಜಾ ಸಾಮಾಗ್ರಿಯಾಗಿ ಪೆನ್ನು, ಪೆಪರ್, ಇಂಕು, ಜೇನು, ಬೆಂಕಿ ಪಟ್ಟಣ, ಸಕ್ಕರೆ, ಗಂಧ, ಇನ್ನೂ ಹಲವಾರು ನೀಡುತ್ತಾರೆ.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ಭಕ್ತರು ನ್ಯಾಯ, ಶಾಂತಿ, ವಿದ್ಯಾಭ್ಯಾಸ, ವಿಜ್ಞಾನ ಈ 4 ಗುಣವನ್ನು ಪಡೆಯಲು ಚಿತ್ರ ಗುಪ್ತನ ದೇವಾಲಯಕ್ಕೆ ಈ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತಾರೆ.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ಮಳೆ ಬರುತ್ತದೆ ಎಂದು ಪ್ರಕೃತಿಯನ್ನು ಕಂಡು ಹೇಳಬಹುದು ಆದರೆ ಸಾವು ಯಾವಾಗ ಸಮೀಪಿಸುತ್ತದೆ ಎಂದು ಆ ಯಮಧರ್ಮರಾಜ ಹಾಗೂ ಚಿತ್ರಗುಪ್ತರಿಗೆ ಮಾತ್ರ ತಿಳಿದಿರುತ್ತದೆ.

ಚಿತ್ರಗುಪ್ತ ದೇವಾಲಯ

ಚಿತ್ರಗುಪ್ತ ದೇವಾಲಯ

ಅಕಾಲ ಮೃತ್ಯುವಿನಿಂದಾಗಿ ಆ ಕುಟುಂಬವು ದಿಕ್ಕಿಲ್ಲದೆ ಹೋಗುತ್ತದೆ. ಅವರ ಮೇಲೆ ಆಧಾರವಾಗಿದ್ದವರೆಲ್ಲಾ ಅನಾಥರಾಗುತ್ತಾರೆ. ಆದರೆ ಜನನ ಇದ್ದಾಗ ಮರಣ ಇರಲೇಬೇಕು ಅಲ್ಲವೇ? ಅದೇ ಸೃಷ್ಟಿ ಧರ್ಮ....

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X