Search
  • Follow NativePlanet
Share
» »ಬೆಂಗಳೂರಿನ ಸಾರ್ಥಕ ಪ್ರವಾಸ ಮಾಡಬೇಕೆ?

ಬೆಂಗಳೂರಿನ ಸಾರ್ಥಕ ಪ್ರವಾಸ ಮಾಡಬೇಕೆ?

By Vijay

ಪ್ರಸ್ತುತ ಭಾರತದ ಹೊಸ ಮುಖವಾಗಿರುವ, ಮಾಹಿತಿ ತಂತ್ರಜ್ಞಾನದ ಮಹತ್ವದ ನಗರಿ ಬೆಂಗಳೂರು ಇಂದು ವಿಶ್ವದಲ್ಲೆ ಚಿರಪರಿಚಿತ ಊರಾಗಿದೆ. ದೇಶದ ಮೂಲೆ ಮೂಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾವಂತರು, ಪ್ರತಿಭಾವಂತರು ಬೆಂಗಳೂರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬರುತ್ತಾರೆ. ಅದೇಷ್ಟೊ ಜನರು ಆಸಕ್ತಿಯಿಂದ ಬೆಂಗಳೂರನ್ನು ನೋಡಲೂ ಸಹ ಬರುತ್ತಾರೆ.

ಹಾಗಾದರೆ ಬೆಂಗಳೂರಿನಲ್ಲಿ ನೋಡಲು ಅಂಥದ್ದೇನಿದೆ? ಮಾಡಲು ಏನಿದೆ? ಎಂದು ಅನೇಕ ಬಾರಿ ಬೆಂಗಳೂರಿಗರ ಮನದಲ್ಲಿ ಬಂದಿರಲೂಬಹುದು. ಹೌದು ಇಲ್ಲೆ ಹುಟ್ಟಿ ಬೆಳೆದ ಇಲ್ಲವೆ ಹತ್ತಾರು ವರ್ಷಗಳಿಂದ ವಾಸಿಸುತ್ತಿರುವ ಅನೇಕ ಬೆಂಗಳೂರಿಗರಿಗೆ ಇಲ್ಲಿನ ಲಾಲ್ ಬಾಗ್ ಆಗಲಿ, ಕಬ್ಬನ್ ಪಾರ್ಕ್ ಆಗಲಿ, ಸ್ಯಾಂಕಿ ಕೆರೆಯಾಗಲಿ ಹೊಸದೇನಲ್ಲ. ಎಲ್ಲವೂ ನೋಡಿದಂತಹ ಆಕರ್ಷಣೆಗಳೆ!

ವಿಶೇಷ ಲೇಖನ : ಒಂದು ದಿನ ಬೆಂಗಳೂರಲ್ಲಿ ಹೀಗೂ ಕಳೆಯಬಹುದು!

ಇಷ್ಟೆಲ್ಲದರ ನಡುವೆಯೂ ಬೆಂಗಳೂರು ತನ್ನ ಒಂದು ಆತ್ಮೀಯವಾದ ಕಳೆಯನ್ನು ಸದಾ ಹೊತ್ತಿಕೊಂಡಿದ್ದು ನೀವು ಎಷ್ಟೆ ವರ್ಷಗಳಿಂದ ಇಲ್ಲಿರಿ, ನಿಮ್ಮನ್ನು ಒಂದು ರೀತಿಯಲ್ಲಿ ಮೋಡಿ ಮಾಡುತ್ತಲೆ ಇರುತ್ತದೆ. ಬೆಂಗಳೂರಿನ ವಿಶಿಷ್ಟ ಸಂಸ್ಕೃತಿ, ಕಾಲಾನುಸಾರ ಆಚರಿಸಲಾಗುವ ವಿವಿಧ ಹಬ್ಬ ಹರಿದಿನಗಳು, ಅನನ್ಯ ರುಚಿಗೆ ಹೆಸರುವಾಸಿಯಾದ ಅಲ್ಲಲ್ಲಿ ಇರುವ ಹಾದಿ ಬೀದಿಗಳು, ಋತುಮಾನದರಿವಿಲ್ಲದೆ ಬಿಸಿಲಿನ ಶಾಖ ಹೆಚ್ಚಾದಂತೆ ಅದನ್ನು ಶಮನಗೊಳಿಸಲು ಎರಗುವ ಮಳೆ ಹನಿಗಳು, ಬೆಂಗಳೂರನ್ನು ಒಂದು ವಿಭಿನ್ನ ತಾಣವಾಗಿ ಮಾಡಿವೆ.

ವಿಶೇಷ ಲೇಖನ : ಬೆಂಗಳೂರಿನಲ್ಲಿ ಶಾಪಿಂಗ್

ಬೆಂಗಳೂರಿನಲ್ಲಿ ಏನೆಲ್ಲ ಮಡಬಹುದು, ಬಹು ಸಂಸ್ಕೃತಿ ಮಿಶ್ರಿತ ಪಟ್ಟಣದ ನೈಜ ಸಂಸ್ಕೃತಿ ಏನಿರಬಹುದು ಎಂದು ಒಂದೊಮ್ಮೆ ಆಲೋಚಿಸಿ ಪ್ರವಾಸ ಹೊರಟಾಗ ಮಾತ್ರ ನಿಮಗೆ ಬೆಂಗಳೂರಿನ ಎಲೆ ಮರೆಯ ಕಾಯಿಯಂತಾಗಿರುವ ವಿಶಿಷ್ಟ ಮುಖ ಕಣ್ಣಿಗೆ ಬೀಳುತ್ತದೆ. ಅಂತಹ ಒಂದು ವಿಶಿಷ್ಟ ಬೆಂಗಳೂರನ್ನು ಪರಿಚಯಿಸುವ ಪ್ರಯತ್ನವಾಗಿ ಈ ಲೇಖನವನ್ನು ಪ್ರಸ್ತುತ ಪಡಿಸಲಾಗಿದೆ. ನೀವೇನಾದರೂ ಬೆಂಗಳೂರಿಗೆ ಹೊಸಬರಾಗಿದ್ದರೆ, ಅಥವಾ ಬೆಂಗಳೂರನ್ನು ಇನ್ನೂ ಹತ್ತಿರದಿಂದ ನೋಡಲು ಬಯಸಿದ್ದರೆ, ಈ ಲೇಖನವನ್ನೊಮ್ಮೆ ಓದಿ ಬಿಡಿ.

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಮೊದಲಿಗೆ ಬೆಂಗಳೂರಿನ ಕೆಲವು ವಿಶಿಷ್ಟ ಮಾರುಕಟ್ಟೆಗಳಿಂದ ಆರಂಭಿಸೋಣ. ಕೆ.ಆರ್ ಮಾರ್ಕೇಟ್, ಬೆಂಗಳೂರಿನ ಹಳೆಯ ಹಾಗೂ ಬಲು ಸುಪ್ರಸಿದ್ಧವಾದ ಮಾರುಕಟ್ಟೆ. ಕಡಿಮೆ ದರಗಳಲ್ಲಿ ತರಕಾರಿ, ಹಣ್ಣುಗಳು, ಸ್ಥಳೀಯವಾಗಿ ತಯಾರಿಸಲಾದ ಉಡುಗೆ ತೊಡುಗೆಗಳು, ಅಡುಗೆ ಮನೆಯ ಸಾಮಗ್ರಿಗಳು, ಕುರುಕಲು ತಿಂಡಿಗಳು ಬೇಕಿದ್ದರೆ ಈ ಮಾರುಕಟ್ಟೆಗೆ ಭೇಟಿ ನೀಡಿ. ನಗರ ಕೇಂದ್ರ ಬಸ್ಸು ನಿಲ್ದಾಣದಿಂದ ಇಲ್ಲಿಗೆ ಬರಲು ಸಾಕಷ್ಟು ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Akash Bhattacharya

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಶುಭ ಸಮಾರಂಭಗಳಿಗೆ ಬೇಕಾಗುವ ಸಾಮಗ್ರಿಗಳಿಂದ ಹಿಡಿದು ಎಲ್ಲ ಬಗೆಯ ವಿವಿಧ ವಸ್ತುಗಳು ಈ ಮಾರುಕಟ್ಟೆಯಲ್ಲಿ ಲಭ್ಯ. ಅದು ಕೂಡ ಅತಿ ಕಡಿಮೆ ಬೆಲೆಗಳಲ್ಲಿ...ಆದರೆ ಸ್ವಲ್ಪ ಚೌಕಾಸಿ ಮಾಡಬೇಕಾಗಿರುವುದು ಅನಿವಾರ್ಯ.

ಚಿತ್ರಕೃಪೆ: Ranveig

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ವಿವಿಧ ಬಗೆಯ ಧಾನ್ಯಗಳು ಹಾಗೂ ಸಂಸ್ಕರಿಸಿದ ಸಿದ್ಧ ಪಾನೀಯಗಳು.

ಚಿತ್ರಕೃಪೆ: Purshi

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಬಲು ಹಳೆಯ ಮಸೀದಿಯು ಇರುವುದು ಕೆ.ಆರ್ ಮಾರುಕಟ್ಟೆಯಲ್ಲೆ.

ಚಿತ್ರಕೃಪೆ: Nvvchar

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರು ಬೀದಿ ಬದಿಗಳಲ್ಲಿ ದೊರಕುವ ಕುರುಕಲು ಆಹಾರ ಪದಾರ್ಥಗಳಿಗೂ ಸಹ ಹೆಸರುವಾಸಿಯಾಗಿದೆ. ಬೆಂಗಳೂರಿನ ವಿಶ್ವೇಶ್ವರಪುರಂ (ವಿವಿ ಪುರಂ) ಬಡಾವಣೆಯಲ್ಲಿರುವ ತಿಂಡಿ ಬೀದಿ ಕುರುಕಲು ತಿಂಡಿ ಪ್ರೀಯರ ನೆಚ್ಚಿನ ಪ್ರದೇಶವಾಗಿದೆ. ಇಲ್ಲಿ ಒಂದಕ್ಕಿಂತ ಒಂದು ಭಿನ್ನ ಎಂಬಂತೆ ಬಗೆ ಬಗೆಯ ಆಹಾರ ಪದಾರ್ಥಗಳು ಲಭ್ಯ.

ಚಿತ್ರಕೃಪೆ: Sahilrathod

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ತಿಂಡಿ ಬೀದಿಯ ಉತ್ತಪ್ಪ ಅಥವಾ ಈರುಳ್ಳಿ ದೋಸೆ.

ಚಿತ್ರಕೃಪೆ: Sahilrathod

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ತಿಂಡಿ ಬೀದಿಯಲ್ಲಿ ಪ್ಲೇಟಿಗೆ ಮೂರರಂತೆ ದೊರೆಯುವ ಹಗುರವಾದ ಹಾಗೂ ರುಚಿಕರವಾದ ಇಡ್ಲಿ.

ಚಿತ್ರಕೃಪೆ: Sahilrathod

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ತಿಂಡಿ ಬೀದಿಯಲ್ಲಿ ದೊರಕುವ ಬಿಸಿ ಬಿಸಿ ಪಡ್ಡುಗಳು.

ಚಿತ್ರಕೃಪೆ: Sahilrathod

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೇಸಿಗೆಯಲ್ಲಿ ನೀವು ಬೆಂಗಳೂರನ್ನು ಸುತ್ತುತ್ತಿದ್ದರೆ ಯಾವುದಾದರೊಂದು ಪ್ರದೇಶದಲ್ಲಿ ಚಿತ್ರದಲ್ಲಿ ಕಾಣುತ್ತಿರುವ ಈ ಖಾದ್ಯ ದೊರುಕುವುದು ಸಾಮಾನ್ಯ. ಇದನ್ನು ಭೂಚಕ್ರ ಗಡ್ಡೆ ಎಂದು ಕರೆಯಲಾಗುತ್ತದೆ. ಇದನ್ನು ಎಳೆ ಎಳೆಯಾಗಿ ತುಂಡು ಮಾಡಿ ಸಿಹಿ ಪಾಕ ಲೇಪಿಸಿ ಸೇವಿಸಲಾಗುತ್ತದೆ. ಇದರಲ್ಲಿ ಔಷಧೀಯ ಗುಣಗಳಿವೆ ಎಂದು ಹೇಳಲಾಗಿದೆ.

ಚಿತ್ರಕೃಪೆ: Sahilrathod

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಪ್ರತಿಷ್ಠಿತ ಬಸವನಗುಡಿ ಪ್ರದೇಶದಲ್ಲಿರುವ ಗಾಂಧಿ ಬಜಾರ್, ಮಹಿಳೆಯರಿಗೆ ಹೆಚ್ಚು ಇಷ್ಟವಾಗುವ ಸ್ಥಳ. ಇಲ್ಲಿ ಮಹಿಳೆಯರಿಗೆ ಸಂಬಂಧಿಸಿದ ತರಹೇವಾರಿ ವಸ್ತುಗಳು ದೊರಕುತ್ತವೆ. ಅಲ್ಲದೆ ಸಾಮ್ಪ್ರದಾಯಿಕ ಹಾಗೂ ಪೂಜಾ ಸಾಮಗ್ರಿಗಳೂ ಸಹ ಇಲ್ಲಿ ದೊರೆಯುತ್ತವೆ. ನೀವು ಯಾವಾಗಲದರೂ ಇಲ್ಲಿಗೆ ಬಂದು ಸುತ್ತಾಡಿ, ಶಾಪಿಂಗ್ ಮಾಡುತ್ತ ದಣಿವಾದರೆ ಇಲ್ಲಿರುವ ವಿದ್ಯಾರ್ಥಿ ಭವನಕ್ಕೆ ತೆರಳಿ ದೋಸೆ ತಿಂದು ಬಿಡಿ ಸಾಕು. ದೋಸೆಯ ರುಚಿ ನಿಮ್ಮ ದಣಿವನ್ನು ಕ್ಷಣ ಮಾತ್ರದಲ್ಲಿ ಇಲ್ಲವಾಗಿಸುತ್ತದೆ. ವಿದ್ಯಾರ್ಥಿ ಭವನದ ದೋಸೆ ಬೆಂಗಳೂರಲ್ಲಿ ಬಹು ಜನಪ್ರೀಯ.

ಚಿತ್ರಕೃಪೆ: Sarvagnya

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ದಕ್ಷಿಣ ಭಾಗದ ಕರ್ನಾಟಕದ ಬೆಂಗಳೂರಿನಲ್ಲಿ ಖಾರಕ್ಕೆ ಹೆಚ್ಚು ಹೆಸರುವಾಸಿಯಾದ ಉತ್ತರ ಕರ್ನಾಟಕದ ಊಟ ಮಾಡಲು ಇಷ್ಟವೆ? ಚಿಂತೆಯಿಲ್ಲ ಇಂದು ಬೆಂಗಳೂರಿನ ಹಲವೆಡೆ ಉತ್ತರ ಕರ್ನಾಟಕದ ಖಾದ್ಯ ಲಭ್ಯ. ಆದರೂ ಮೊದಲಿನಿಂದಲೂ ಆ ಊಟವನ್ನು ಬಡಿಸುವ ಹೋಟೆಲುಗಳಲ್ಲಿ ಅದರ ರುಚಿಯೆ ಬೇರೆ. ಮೆಜೆಸ್ಟಿಕ್ ನ ಪೈ ರಿಫ್ರೆಶ್ ಮೆಂಟ್ಸ್, ಕೆಂಚಾಂಬಾ, ರಾಜಾಜಿ ನಗರದ ನಳಪಾಕ ಹಾಗೂ ಕಾಮತ ಯಾತ್ರಿ ನಿವಾಸಗಳಲ್ಲಿ ಉತ್ತರ ಕರ್ನಾಟಕ ಖಾದ್ಯದ ಅದ್ಭುತ ಸ್ವಾದವನ್ನು ಸವಿಯಬಹುದು.

ಚಿತ್ರಕೃಪೆ: Sarvagnya

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಶಾಪಿಂಗ್ ಸಮಯ : ಹೌದು ಬೆಂಗಳೂರು ವಿವಿಧ ರೀತಿಯ ಶಾಪಿಂಗ್ ಗೂ ಸಹ ಹೆಸರುವಾಸಿ. ಸಾಂಪ್ರದಾಯಿಕ, ಪೂಜಾ ವಿಧಿ ವಿಧಾನಗಳಿಗೆ ಸಂಬಂಧಿಸಿದಂತೆ ವಸ್ತುಗಲನ್ನು ಕೊಳ್ಳಲು ಇಷ್ಟವಿದ್ದಲ್ಲಿ ಮಲ್ಲೇಶ್ವರಂ, ರಾಜಾಜಿ ನಗರಗಳಂತಹ ಪ್ರದೇಶಗಳಿಗೆ ಭೇಟಿ ನೀಡುವುದು ಉತ್ತಮ. ಮಲ್ಲೇಶ್ವರಂನ ಬೀದಿಯೊಂದರಲ್ಲಿ ಮಾರಾಟಕ್ಕಿಡಲಾಗಿರುವ ಕೃಷ್ಣನ ಸುಂದರ ವಿಗ್ರಹಗಳು.

ಚಿತ್ರಕೃಪೆ: Ulsci U

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಸ್ವಚ್ಛ ಸುಂದರ ಪರಿಸರ, ಉಲುವಿನ ವಾತಾವರಣ, ಪ್ರತಿಯೊಂದು ವಸ್ತುಗಳು ಒಂದೇ ಸೂರಿನಡಿಯಲ್ಲಿ ದೊರೆಯುವಂತಹ ಜಾಗಗಳನ್ನು ಹುಡುಕುತ್ತಿದ್ದರೆ ಬೆಂಗಳೂರಿನ ವಿವಿಧ ಶಾಪಿಂಗ್ ಮಾಲ್ ಗಳಿಗೊಮ್ಮೆ ಭೇಟಿ ನೀಡಿ. ಆಧುನಿಕ ಬ್ರ್ಯಾಂಡ್ ವಸ್ತುಗಳು, ಲವಲವಿಕೆಯ ವಾತಾವರಣ, ಕಿವಿಗಿಂಪಾದ ಗೀತೆಗಳ ಅಥವಾ ಸಂಗೀತದ ಹಿನ್ನಿಲೆ ಇದೆಲ್ಲವೂ ಮಾಲ್ ಗಳ ವೈಶಿಷ್ಟ್ಯ. ರಾಜಾಜಿನಗರದಿಂದ ಯಶವಂತಪುರದೆಡೆ ಸಾಗುವಾಗ ದೊರಕುವ ಓರಾಯನ್ ಮಾಲ್.

ಚಿತ್ರಕೃಪೆ: Aslambhai

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಬಹುತೇಕ ಮಾಲ್ ಗಳಲ್ಲಿ ಒಂದೆ ರೀತಿಯ ಉತ್ಸಾಹ ಕಂಡುಬರುತ್ತದೆ. ಮಲ್ಲೇಶ್ವರಂನಲ್ಲಿರುವ ಮಂತ್ರಿ ಸ್ಕ್ವೇರ್ ಮಾಲ್.

ಚಿತ್ರಕೃಪೆ: Ashwin Kumar

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಗರುಡಾ ಮಾಲ್.

ಚಿತ್ರಕೃಪೆ: Rameshng

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನಲ್ಲಿರುವ ಫಿನಿಕ್ಸ್ ಮಾರ್ಕೆಟ್ ಸಿಟಿ ಶಾಪಿಂಗ್ ಮಾಲ್.

ಚಿತ್ರಕೃಪೆ: Veera.sj

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಹಳೆಯ ಏರ್ಪೋರ್ಟ್ ರಸ್ತೆಯಲ್ಲಿರುವ ತೋಟಲ್ ಶಾಪಿಂಗ್ ಮಾಲ್.

ಚಿತ್ರಕೃಪೆ: Veera.sj

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಕೋರಮಂಗಲದಲ್ಲಿರುವ ಫೋರಮ್ ಶಾಪಿಂಗ್ ಮಾಲ್.

ಚಿತ್ರಕೃಪೆ: Augustus Binu

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನಲ್ಲಿ ಉದ್ಯಾನಗಳನ್ನು ಸುತ್ತಾಡಿ ಸುತ್ತಾಡಿ ಸಾಕಾಗಿದ್ದರೆ ಸಂಗ್ರಹಾಲಯಗಳಿಗೆ ಭೇಟಿ ನೀಡಬಹುದು. ಇದರಿಂದ ಜ್ಞಾನವೂ ಸಹ ವೃದ್ಧಿಯಾಗುತ್ತದೆ. ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯಾ ಕೈಗಾರಿಕೆ ಹಾಗೂ ತಾಂತ್ರಿಕ ವಸ್ತುಸಂಗ್ರಹಾಲಯವು ಈ ನಿಟ್ಟಿನಲ್ಲಿ, ಮಕ್ಕಳನ್ನು ಕರೆದುಕೊಂಡು ಹೋಗಬಹುದಾದ ಒಂದು ಒಳ್ಳೆಯ ತಾಣವೆನ್ನಬಹುದು. ಹೆಚ್ಚಿನ ವಿವರ.

ಚಿತ್ರಕೃಪೆ: Amanjosan2008

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೇಕಿದ್ದರೆ ಬೆಂಗಳೂರಿನ ಸರ್ಕಾರಿ ಸಂಗ್ರಹಾಲಯಕ್ಕೂ ಸಹ ಭೇಟಿ ನೀಡಬಹುದು. ಬುಧವಾರವೊಂದನ್ನು ಹೊರತು ಪಡಿಸಿ ವಾರದ ಎಲ್ಲ ದಿನಗಳಲ್ಲಿ ಬೆಳಿಗ್ಗೆ ಹತ್ತರಿಂದ ಸಂಜೆ ಐದು ಘಂಟೆಯವರೆಗೆ ಇದು ತೆರೆದಿರುತ್ತದೆ.

ಚಿತ್ರಕೃಪೆ: PP Yoonus

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಹೆಚ್ ಎ ಎಲ್ (ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್) ನ ಬೆಂಗಳೂರು ಶಾಖೆಯಲ್ಲಿರುವ ಸಂಗ್ರಹಾಲಯವೂ ಒಂದು ಆಸಕ್ತಿದಾಯಕ ಸಂಗ್ರಹಾಲಯವಾಗಿದೆ. ವೈಮಾನಿಕ ವಿಷಯಗಳಿಗೆ ಸಂಬಂಧಿಸಿದಂತೆ ಈ ಸಂಗ್ರಹಾಲಯ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Rameshng

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನಲ್ಲಿರುವ ಚೌಡಯ್ಯ ಹಾಲ್ ಒಂದು ಸಾಂಸ್ಕೃತಿಕ ಕೇಂದ್ರವಾಗಿದ್ದು, ಸಂಗೀತ, ನೃತ್ಯ, ನಾಟಕ ಹಾಗೂ ಸ್ಪರ್ಧಾ ಕಾರ್ಯಕ್ರಮಗಳಿಗೆ ಅದ್ಭುತ ವೇದಿಕೆಯಾಗಿದೆ. ಅನೇಕ ಸಂಘ ಸಂಸ್ಥೆಗಳಿಂದ ಈ ಕೇಂದ್ರದಲ್ಲಿ ಆವಾಗಾವಾಗ ಸಂಗೀತ, ನೃತ್ಯ ಮುಂತಾದ ಸದಭಿರುಚಿಯ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿರುತ್ತವೆ. ಇಂತಹ ಒಂದು ಕಾರ್ಯಕ್ರಮದಲ್ಲಿ ಭಾಗವಹಸುವುದರ ಮೂಲಕ ಒಂದು ವಿಶಿಷ್ಟ ಅನುಭವವನ್ನು ಪಡೆಯಬಹುದಾಗಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಚೌಡಯ್ಯ ಸ್ಮಾರಕ ಭವನ.

ಚಿತ್ರಕೃಪೆ: Akshai Srinivasan

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಐತಿಹಾಸಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ಟಿಪ್ಪು ಸುಲ್ತಾನನ ಬೇಸಿಗೆಯ ಅರಮನೆಗೆ ಭೇಟಿ ನೀಡಬಹುದು. ಈ ಅರಮನೆಯು ಬೆಂಗಳೂರಿನ ಕಲಾಸಿಪಾಳ್ಯಂ (ಕೆಆರ್ ಮಾರ್ಕೆಟ್)ನಲ್ಲಿದ್ದು ಇಂದಿಗೂ ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದೆ. ಬೆಂಗಳೂರು ಎಂದರೆ ಬರಿ ಆಧುನಿಕ ಲೋಕ ಎನ್ನುವವರಿಗೆ ಇದೊಂದು ಅದ್ಭುತ ತಾಣವಾಗಿದ್ದು ನಗರದ ಐತಿಹಾಸಿಕ ಶ್ರೀಮಂತಿಕೆಯನ್ನು ಎತ್ತಿ ಹಿಡಿದಿದೆ.

ಚಿತ್ರಕೃಪೆ: SMit224

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಇನ್ನೂ ಟಿಪ್ಪು ಸುಲ್ತಾನನು ರಂಗನಾಥ ಸ್ವಾಮಿಯ ಭಕ್ತನಾಗಿದ್ದನೆಂದು ಹೇಳಲಾಗುತ್ತದೆ. ಅಂತೆಯೆ ಟಿಪ್ಪುವಿನ ಬೇಸಿಗೆಯ ಅರಮನೆಯ ಪಕ್ಕದಲ್ಲೆ ಕೋಟೆ ವೆಂಕಟರಮಣ ಸ್ವಾಮಿಯ ದೇವಸ್ಥಾನವನ್ನು ಕಾಣಬಹುದು ಎಂದು ಹೇಳಲಾಗಿದೆ.

ಚಿತ್ರಕೃಪೆ: Pamri

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ನೀವು ಹಿಂದೂ ಕ್ಯಾಲೆಂಡರಿನ ಮೊದಲ ತಿಂಗಳ ಪೌರಣಮಿಯಂದು ಬೆಂಗಳೂರಿನಲ್ಲೇನಾದರು ಇದ್ದರೆ, ನಗರದ ಪ್ರಮುಖ ಉತ್ಸವವಾದ ಕರಗವನ್ನು ನೋಡಲು ಮರೆಯಬೇಡಿ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಈ ಅದ್ಭುತ ಸಾಂಪ್ರದಾಯಿಕ ಉತ್ಸವವು ಪ್ರಮುಖ ತಿಗಳರ ಸಮುದಾಯದಿಂದ ಆಚರಿಸಲ್ಪಡುತ್ತದೆ. ಮುಖ್ಯವಾಗಿ ಈ ಉತ್ಸವವನ್ನು ಶಕ್ತಿ ದೇವಿಯ ಗೌರವಾದರದ ಸಂಕೇತವಾಗಿದೆ. ಬೆಂಗಳೂರಿನ ವಿಶಿಷ್ಟ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತೋರಿಸುವ ಉತ್ಸವ ಇದಾಗಿದೆ.

ಚಿತ್ರಕೃಪೆ: Thigala4u

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಈ ಉತ್ಸವದ ಮತ್ತೊಂದು ಮುಖ್ಯಾಂಶವೆಂದರೆ ಇದರಲ್ಲಿ ಹಿಂದೂ ಹಾಗೂ ಮುಸ್ಲಿಮ್ ಧರ್ಮದವರಿಬ್ಬರೂ ಕಲೆತು ಆಚರಿಸುವುದು. ಹಿಂದಿನಿಂದಲೂ ದಂತ ಕಥೆಯೊಂದರನುಸಾರವಾಗಿ ಈ ಸಂಪ್ರದಾಯ ನಡೆದುಕೊಂಡು ಬಂದಿದ್ದು ಸಾಮರಸ್ಯ ಜೀವನಕ್ಕೆ ಮಾದರಿ ಎಂದೆ ಹೇಳಬಹುದು. ಕರಗ ಮೆರವಣಿಗೆಯ ಸಂದರ್ಭದಲ್ಲಿ ಕರಗ ಹಿಡಿದಾತನು ತವಕ್ಕಲ್ ಮಸ್ತಾನ್ ಶಾ ದರ್ಗಾದ ಬಳಿ ನಿಂತು ಮೂರು ಪ್ರದಕ್ಷಿನೆಗಳನ್ನು ಹಾಕಿ ಮುಂದುವರೆಯುತ್ತಾನೆ. ಈ ಸಂದರ್ಭದಲ್ಲಿ ಹಿಂದೂ ಹಾಗೂ ಮುಸ್ಲಿಮರು ನಿಂಬೆ ಹಣ್ಣುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ಇದೊಂದು ಅಪರೂಪದ ಕ್ಷಣವಾಗಿ ಗೋಚರಿಸುತ್ತದೆ ಎಂದರೆ ತಪ್ಪಾಗಲಾರದು.
ಕರಗ ಎಂದರೆ (ಕ)ಕೈಯಲ್ಲಿ ಮುಟ್ಟದೆ, (ರ) ರುಂಡದಲ್ಲಿ ಧರಿಸಿ, (ಗ) ಗತಿಸುವುದು/ಚಲಿಸುವುದು ಎಂದಾಗಿದೆ.

ಚಿತ್ರಕೃಪೆ: Thigala4u

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬಡವರ ಬಾದಾಮಿ ಎಂತಲೆ ಕರೆಯಲ್ಪಡುವ ಕಡಲೆ ಬೀಜಕ್ಕೂ ಸಹ ಮುಡಿಪಾದ ಒಂದು ಅದ್ಭುತ ವಿಶಿಷ್ಟ ಉತ್ಸವವೂ ಸಹ ಬೆಂಗಳೂರಿನಲ್ಲಿ ಆಚರಿಸಲ್ಪಡುತ್ತದೆ ಎಂದರೆ ಅಚ್ಚರಿ ಆಗದೆ ಇರಲಾರದು. ಹೌದು ಕಡಲೆಕಾಯಿ ಪರಿಶೆ ಜಾತ್ರೆ ಎಂತಲೆ ಈ ಹಬ್ಬವು ಜನಪ್ರೀಯವಾಗಿದೆ. ಪ್ರತಿ ವರ್ಷ ಡಿಸೆಂಬರ್ ತಿಂಗಳಿನ (ಸಾಮಾನ್ಯವಾಗಿ ನವಂಬರ್ ಇಲ್ಲವೆ ಡಿಸೆಂಬರ್) ಸಮಯದಲ್ಲಿ ಆಚರಿಸಲಾಗುವ ಈ ಉತ್ಸವವು ಅಕ್ಷರಶಃವಾಗಿ ಆಧುನಿಕ ಬೆಂಗಳೂರು ನಗರವನ್ನು ಒಂದು ಸಾಂಪ್ರದಾಯಿಕ ಮದುವಣಗಿತ್ತಿಯಂತೆ ಅಲಂಕರಿಸಿಕೊಂಡು ಕಂಗೊಳಿಸುತ್ತಿರುವಂತೆ ಮಾಡುತ್ತದೆ. ಹೆಚ್ಚಿನ ವಿವರ.

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ನೃತ್ಯಕ್ಕೆಂದೆ ಸಮರ್ಪಿತವಾದ ಹಾಗೂ ಪ್ರವಾಸಿ ಆಕರ್ಷಣೆಯೂ ಸಹ ಆಗಿರುವ ನೃತ್ಯಗ್ರಾಮ ಎಂಬ ಹೆಸರಿನ ಸುಂದರ ಕೃತಕ ಗ್ರಾಮವು ಬೆಂಗಳೂರಿನ ಹೊರವಲಯದಲ್ಲಿ ಶಾಂತವಾಗಿ ಸ್ಥಿತವಾಗಿದೆ. ಬೆಂಗಳೂರಿನ ಗೌಜು ಗದ್ದಲ, ರಭಸದ ಜೀವನ ನಿಮ್ಮ ಮನಸ್ಸಿನ ಮೇಲೆ ಒತ್ತಡ ಉಂಟು ಮಾಡಿದ್ದಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿ ಹಾಯಾಗಿ ಸಮಯ ಕಳೆದು ಒತ್ತಡ ಮುಕ್ತ ಮನಸ್ಸಿನಿಂದ ಮನೆಗೆ ತೆರಳಿ. ಆ ನಿಟ್ಟಿನಲ್ಲಿ ಇದೊಂದು ಉತ್ತಮ ಔಟಿಂಗ್ ಆಗಬಹುದು.

ಚಿತ್ರಕೃಪೆ: pupilinblow

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ನೃತ್ಯಗ್ರಾಮವು ಆಧುನಿಕ ಶೈಲಿಯ ಗುರುಕುಲವಾಗಿದ್ದು ನೃತ್ಯಾರಾಧಕರ ಪಾಲಿನ ಸ್ವರ್ಗವಾಗಿದೆ. ಪ್ರೊತಿಮಾ ಗೌರಿ (ಪ್ರೊತಿಮಾ ಗೌರಿ ಬೇಡಿ) ಎಂಬ ಒಡಿಶಿ ನೃತ್ಯಗಾರ್ತಿಯಿಂದ ಮೇ 11, 1990 ರಲ್ಲಿ ಸ್ಥಾಪಿಸಲ್ಪಟ್ಟಿದೆ. ವಿವಿಧ ನೃತ್ಯಗಳ ಪ್ರಕಾರಗಳು ಹಾಗೂ ಪ್ರದರ್ಶನಗಳು ಇಲ್ಲಿ ಅವ್ಯಾಹತವಾಗಿ ಜರುಗುತ್ತಿರುತ್ತವೆ.

ಚಿತ್ರಕೃಪೆ: pupilinblow

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಬೆಂಗಳೂರಿನ ಅರ್ಥಪೂರ್ಣ ಪ್ರವಾಸ:

ಅಷ್ಟೆ ಅಲ್ಲ, ಹಳ್ಳಿಯ ನೈಜ ವಾತಾವರಣವನ್ನು ಬಿಂಬಿಸುವಂತಹ ಪರಿಸರವನ್ನು ಈ ನೃತ್ಯಗ್ರಾಮದಲ್ಲಿ ಕಾಣಬಹುದು. ಕೇವಲ ಪ್ರದರ್ಶನಗಳಲ್ಲದೆ ಒಡಿಶಿ, ಕಥಕ್ ಹಾಗೂ ಭರತನಾಟ್ಯಂ ನೃತ್ಯಗಳ ತರಬೇತಿಯನ್ನೂ ಸಹ ಇಲ್ಲಿ ನೀಡಲಾಗುತ್ತದೆ. ಬೆಂಗಳೂರು ನಗರ ವಲಯದಿಂದ ಸುಮಾರು 35 ಕಿ.ಮೀ ದೂರದಲ್ಲಿ ಹೆಸರಘಟ್ಟ ಪ್ರದೇಶದಲ್ಲಿ ಈ ನೃತ್ಯಗ್ರಾಮ ಸ್ಥಿತವಿದೆ. ಸಂದರ್ಶಕರಿಗೆಂದು ಮಂಗಳವಾರದಿಂದ ರವಿವಾರದವರೆಗೆ ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 2 ಘಂಟೆಯವರೆಗೆ ತೆರೆದಿರುತ್ತದೆ.

ಚಿತ್ರಕೃಪೆ: pupilinblow

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X