ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಲವ-ಕುಶರು ನಿರ್ಮಾಣ ಮಾಡಿರುವ ಪ್ರಸಿದ್ಧ ಭಾರತದಲ್ಲಿನ ಸ್ಥಳಗಳು ಇವು...

Written by:
Updated: Monday, August 14, 2017, 9:44 [IST]
Share this on your social network:
   Facebook Twitter Google+ Pin it  Comments

ಅಮೃತಸರ್ ಭಾರತದ ಪಂಜಾಬ್ ರಾಜ್ಯದ ಒಂದು ಪ್ರಮುಖವಾದ ನಗರ. ಐತಿಹಾಸಿಕವಾಗಿ ಇದನ್ನು ರಾಮದಾಸ್ಪುರ ಎಂದು ಕರೆಯಲಾಗುತ್ತಿತ್ತು. ಅಮೃತ್‍ಸರ್ ಸಿಖ್ ಧರ್ಮಿಯರ ಆಧ್ಯಾತ್ಮಿಕ ಮತ್ತು ಸಾಂಸ್ಕøತಿಕ ಕೇಂದ್ರ ಗೋಲ್ಡನ್ ಟೆಂಪಲ್ ಆಗಿದೆ. ಈ ಸಿಖ್ ದೇವಾಲಯಕ್ಕೆ ತಾಜ್ ಮಹಲಿಗಿಂತ ಹೆಚ್ಚಾಗಿ ಭೇಟಿ ನೀಡುವ ಆಧ್ಯಾತ್ಮಿಕ ಹಾಗು ಪ್ರವಾಸಿ ತಾಣವಾಗಿದೆ.

ಅಮೃತಸರ್‍ದಲ್ಲಿರುವ ರಾಮತೀರ್ಥ ದೇವಾಲಯವು ರಾಮಾಯಣದ ಲೇಖಕ ಮಹರ್ಷಿ ವಾಲ್ಮೀಕಿಯ ಆಶ್ರಮ ಸ್ಥಳವಾಗಿದೆ ಎಂದು ನಂಬಲಾಗಿದೆ. ಹಿಂದೂ ಪುರಾಣಗಳ ಪ್ರಕಾರ ಸೀತಾ ಮಾತೆಯು ರಾಮತೀರ್ಥ ಆಶ್ರಮದಲ್ಲಿ ರಾಮನ ಪುತ್ರರಾದ ಲವ ಹಾಗು ಕುಶರಿಬ್ಬರಿಗೆ ಜನ್ಮ ನೀಡಿದಳು ಎಂದು ನಂಬಲಾಗಿದೆ. ಕೇವಲ ಪಂಜಾಬ್‍ನಿಂದಲೇ ಅಲ್ಲದೇ ದೇಶ, ವಿದೇಶಗಳಿಂದ ಈ ತೀರ್ಥಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

ಪ್ರಸ್ತುತ ಲೇಖನದ ಮೂಲಕ ಪವಿತ್ರವಾದ ದುರ್ಗಿಯಾನ ದೇವಾಲಯದ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಎಲ್ಲಿದೆ?

ಪವಿತ್ರವಾದ ರಾಮಾಯಣವನ್ನು ಹೋಲುವ ಸ್ಥಳಗಳು ಪಂಜಾಬ್ ರಾಜ್ಯದಲ್ಲಿದೆ. ಇಲ್ಲಿ ಹಲವಾರು ಆಧ್ಯಾತ್ಮಿಕವಾದ ಪ್ರವಾಸಿ ತಾಣಗಳನ್ನು ಕಾಣಬಹುದಾಗಿದೆ. ಲವ-ಕುಶರು ಜನಿಸಿದ ಸ್ಥಳ, ಅಶ್ವಮೇಧ ಯಾಗದ ಸಮಯದಲ್ಲಿ ಅಶ್ವವನ್ನು ವಶಪಡಿಸಿಕೊಂಡು ಹನುಮಂತನಿಗೆ ಮರಕ್ಕೆ ಕಟ್ಟಿಹಾಕಿದ ಸ್ಥಳ ಇರುವುದೆಲ್ಲಾ ಇಲ್ಲೇ...

 

PC:Guilhem Vellut

 

ನಿಂದನೆ

ಗರ್ಭವತಿಯಾಗಿದ್ದ ಸೀತೆಯನ್ನು ಜನ ನಿಂದನೆಗೆ ಒಳಪಡಬಾರದು ಎಂದು ಕಾಡಿಗೆ ದೂಡಿದ ರಾಮ. ತುಂಬು ಗರ್ಭವತಿಯಾಗಿದ್ದ ಸೀತಾ ಮಾತೆಯು ವಾಲ್ಮೀಕಿಯ ಆಶ್ರಯ ತಾಣದಲ್ಲಿ ಇದ್ದಳು. ಆ ಆಶ್ರಯ ತಾಣವೇ ಅಮೃತಸರದ ರಾಮತೀರ್ಥವಾಗಿದೆ.

 

PC:Jaiprakashsingh

 

ಜನ್ಮ

ಈ ರಾಮತೀರ್ಥದಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದಳು. ಅವರೇ ಲವ-ಕುಶ. ಇವರು ತಂದೆಯನ್ನೇ ಮೀರಿಸುವಂತಹ ಪರಾಕ್ರಮ ಶಾಲಿಯಾಗಿ ಬೆಳೆದರು. ಒಂದು ದಿನ ರಾಮನ ಸೇವಕರಿಂದ ಆಶ್ವವನ್ನು ಸ್ವಾಧೀನ ಪಡಿಸಿಕೊಂಡರು. ಆ ಸಮಯದಲ್ಲಿ ರಾಮನು ಆಶ್ವಮೇಧ ಯಾಗವನ್ನು ಮಾಡುತ್ತಿದ್ದನು.

 

PC:Diego Delso

 

ಹನುಮಂತ

ರಾಮನ ಆಶ್ವಮೇಧ ಯಾಗದ ಸಮಯದಲ್ಲಿ ಲವ ಹಾಗು ಕುಶ ರಾಮನ ಕುದುರೆಗಳನ್ನು ವಶಪಡಿಸಿಕೊಂಡಿದ್ದರು. ಅದು ಇಂದಿನ ದುರ್ಗಿಯಾನ ದೇವಾಲಯದ ಬಳಿ ಹನುಮಾನ್ ಅನ್ನು ಮರಕ್ಕೆ ಕಟ್ಟಿ ಹಾಕಿದ್ದರು ಎಂದು ನಂಬಲಾಗಿದೆ. ಹಾಗಾಗಿಯೇ ನವರಾತ್ರಿಯ ದಿನದಂದು ನೂರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ.

 

PC:Guilhem Vellut

 

ಲವ ಕುಶ ಸ್ಥಾಪಿಸಿರುವ ಸ್ಥಳ

ಪಂಜಾಬ್‍ನ ಪ್ರಸಿದ್ಧವಾದ ನಗರಗಳಾದ ಅಮೃತಸರ್, ಲಾಹೋರ್ ಮತ್ತು ಕಾರ್ಸುಗಳನ್ನು ಅನುಕ್ರಮವಾಗಿ ಲವ ಮತ್ತು ಕುಶ ಅವರು ಸ್ಥಾಪಿಸಿದರು. ಪವಿತ್ರವಾದ ಪಂಜಾಬ್‍ನಲ್ಲಿ ಹಿಂದೂಗಳ ಪವಿತ್ರವಾದ ಗ್ರಂಥದ ರಾಮಾಯಾಣದ ಕಥನವನ್ನು ಹೊಂದಿದೆ.

 

PC:Pranita Desai

 

ದುರ್ಗಿಯಾನ ದೇವಾಲಯ

ಲವ-ಕುಶರು ಹನುಮಂತನನ್ನು ಬಂದಿಸಿದ್ದ ದೇವಾಲಯವೇ ಈ ದುರ್ಗಿಯಾನ ದೇವಾಲಯವಾಗಿದೆ. ಈ ದೇವಾಲಯವು ಲಾಹೋರ್ ಗೇಟ್‍ನ ಸಮೀಪದಲ್ಲಿ ಇದೆ. ದುರ್ಗಿಯಾನ ಮಂದಿರ ಹಿಂದೂಗಳ ಪ್ರಮುಖವಾದ ಧಾರ್ಮಿಕ ಸ್ಥಳವಾಗಿದೆ.

 

PC:Ekabhishek

ದುರ್ಗಿಯಾನ

ಹೆಸರೇ ಸೂಚಿಸುವಂತೆ ಈ ದೇವಾಲಯದಲ್ಲಿ ಪಾರ್ವತಿ ಸ್ವರೂಪಿ ದುರ್ಗಿಯು ನೆಲೆಸಿದ್ದಾಳೆ. ಈ ದೇವಾಲಯವನ್ನು ಲಕ್ಷ್ಮೀ ನಾರಾಯಾಣ ಮಂದಿರ ಎಂದೂ ಸಹ ಕರೆಯುತ್ತಾರೆ. ಈ ಧಾರ್ಮಿಕ ಕಟ್ಟಡವನ್ನು 20 ನೇ ಶತಮಾನದಲ್ಲಿ ನಿರ್ಮಾಣ ಮಾಡಲಾಗಿದೆ.

 

PC:Diego Delso

 

ನಿರ್ಮಾಣ ಮಾಡಿದವರು ಯಾರು?

ಈ ದೇವಾಲಯವನ್ನು 20 ನೇ ಶತಮಾನದಲ್ಲಿ ಹರಸಾಯಿಮಲ್ ಕಪೂರ್ ಅವರು ಪಂಜಾಬ್‍ನಲ್ಲಿನ ಸಿಖ್‍ರ ಗೋಲ್ಡನ್ ಟೆಂಪಲ್ ಮಾದರಿಯಲ್ಲಿ ನಿರ್ಮಾಣ ಮಾಡಿದರು.


PC:Diego Delso

 

ದೇವಾಲಯಗಳು

ಈ ದೇವಾಲಯದ ಪ್ರಾಂಗಣದಲ್ಲಿ ಹಿಂದೂ ದೇವತೆಗಳಾದ ದುರ್ಗಾದೇವಿ, ಸೀತಾ ಮಾತೆ ಮತ್ತು ಹನುಮಂತನ ಪ್ರತಿಮೆಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ದೇವಾಲಯದ ಮತ್ತೊಂದು ವಿಶೇಷವೆನೆಂದರೆ ದೇವಾಲಯದ ಒಳಭಾಗದಲ್ಲಿ ದೇವಿ ದುರ್ಗಿಯ ವಿವಿಧ ಅವತಾರಗಳ ಸೂಕ್ಷ್ಮವಾದ ಕೆತ್ತನೆಗಳನ್ನು ಕಾಣಬಹುದಾಗಿದೆ.


PC:Diego Delso

 

ಸಿಲ್ವರ್ ಟೆಂಪಲ್

ದುರ್ಗಿಯಾನ ಮಂದಿರದ ಬಾಗಿಲನ್ನು ಬೆಳ್ಳಿಯಿಂದ ತಯಾರಿಸಲಾಗಿರುವುದರಿಂದ ಇದನ್ನು ಸಿಲ್ವರ್ ಟೆಂಪಲ್ ಎಂದೂ ಕರೆಯುತ್ತಾರೆ. ಹಾಗೆಯೇ ಈ ದೇವಾಲಯದಲ್ಲಿ ಆನೇಕ ಹಿಂದೂಗಳ ಪವಿತ್ರ ಗ್ರಂಥಗಳನ್ನು ಕೂಡ ಕಾಣಬಹುದಾಗಿದೆ.

 


PC:Diego Delso

 

ವಿಶೇಷ

ಈ ದೇವಾಲಯ ಅತ್ಯಂತ ಪವಿತ್ರವಾದುದು ಆದ್ದರಿಂದ ದೇವಾಲಯದ ಸುತ್ತಲೂ ಸುಮಾರು 200 ಮೀಟರ್ ವ್ಯಾಪ್ತಿಯೊಳಗೆ ತಂಬಾಕು, ಮದ್ಯ ಮತ್ತು ಮಾಂಸವನ್ನು ಮಾರಾಟ ಮಾಡುವುದು ನಿಷೇಧಿಸಲಾಗಿದೆ.

 

PC:Diego Delso

 

ಸರೋವರದ ಮಧ್ಯೆ

ಈ ಪವಿತ್ರವಾದ ದೇವಾಲಯವನ್ನು ಒಂದು ಸುಂದರವಾದ ಸರೋವರದ ಮಧ್ಯೆಯಲ್ಲಿ ನಿರ್ಮಾಣ ಮಾಡಲಾಗಿದೆ. ಇದು 160 ಮೀಟರ್ - 130 ಮೀಟರ್ ಅಳತೆಯನ್ನು ಹೊಂದಿದೆ. ಇದರ ಗುಮ್ಮಟ ಮತ್ತು ಹವಳಗಳು ಅಮೃತಸರ್‍ದಲ್ಲಿರುವ ಸಿಖ್ ಧರ್ಮದ ಗೋಲ್ಡನ್ ಟೆಂಪಲ್‍ಗೆ ಹೋಲುವಂತೆಯೇ ಇದೆ.

 

PC:Guilhem Vellut

 

ದೇವಾಲಯದ ಸೊಬಗು

ಸರೋವರದಿಂದ ಅವೃತ್ತಗೊಂಡಿರುವ ಈ ಮಾಹಿಮಾನ್ವಿತವಾದ ದೇವಾಲಯವು ಅತ್ಯಂತ ಸುಂದರವಾಗಿದೆ. ಇಲ್ಲಿ ಹೆಚ್ಚಾಗಿ ಮಾರ್ಬಲ್ ಅನ್ನು ವ್ಯಾಪಕವಾಗಿ ಬಳಸಲಾಗಿದೆ. ಗುಮ್ಮಟವು ವರ್ಣರಂಜಿತ ದೀಪಗಳಿಂದ ಪ್ರಕಾಶಿಸಲ್ಪಟ್ಟಿದೆ. ಇದೊಂದು ಹಿಂದೂ ಧರ್ಮದ ಶ್ರೀಮಂತ ಮಂದಿರವಾಗಿದೆ.


PC:Jaiprakashsingh

 

ವಿಶೇಷವಾದ ಪೂಜೆ

ಈ ದೇವಾಲಯದಲ್ಲಿ ದಸರಾ, ಕೃಷ್ಣ ಜನ್ಮಷ್ಟಮಿ, ರಾಮ ನವಮಿ ಮತ್ತು ದೀಪಾವಳಿ ಹಬ್ಬಗಳನ್ನು ವಿಜೃಂಬಣೆಯಿಂದ ಆಚರಿಸಲಾಗುತ್ತದೆ.

 

PC:Diego Delso

 

ತಲುಪುವ ಬಗೆ?

ಈ ದೇವಾಲಯವು ಅಮೃತಸರ್ ರೈಲು ನಿಲ್ದಾಣಕ್ಕೆ ಅತ್ಯಂತ ಸಮೀಪದಲ್ಲಿದೆ. ಬಸ್ ನಿಲ್ದಾಣದಿಂದ ಸುಮಾರು 1.5 ಕಿ,ಮೀ ದೂರದಲ್ಲಿದೆ. ದೇಶದ ಇತರೆ ಭಾಗಗಳಿಂದ ರಸ್ತೆ, ರೈಲು, ವಿಮಾನ ಮಾರ್ಗದ ಮೂಲಕ ಅಮೃತಸರ್‍ಗೆ ಉತ್ತಮವಾದ ಸಂಪರ್ಕಗಳಿವೆ.

English summary

These are places in India that have been built by Lava-kusha... Suggest an edit

The Durgiana Temple, also known as Lakshmi Narayan Temple, Durga Tirath and Sitla Mandir, is a premier temple situated in the city of Amritsar, Punjab, India. Though a Hindu temple, its architecture is similar to the Golden Temple of Sikh religion. This temple derives its name from the Goddess Durga, the chief Goddess deified and worshipped here. Idols of Goddess Laksmi (goddess of wealth) and Vishnu (the protector of the world) are also deified here and worshipped
Please Wait while comments are loading...