Search
  • Follow NativePlanet
Share
» »ಮೇಲುಕೋಟೆಯಲ್ಲಿನ ಸುಂದರವಾದ ಸ್ಥಳಗಳಿವು

ಮೇಲುಕೋಟೆಯಲ್ಲಿನ ಸುಂದರವಾದ ಸ್ಥಳಗಳಿವು

ಒಂದೇ ಸ್ಥಳದಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬೇಕು ಎಂಬುದು ಸಾಮಾನ್ಯವಾಗಿ ಎಲ್ಲರ ಬಯಕೆಯಾಗಿರುತ್ತದೆ. ದೂರ ದೂರದ ಪ್ರಯಾಣಗಳಿಗಿಂತ ಒಂದೇ ಸೂರಿನಡಿ ಹಲವಾರು ಪ್ರವಾಸಿತಾಣಗಳನ್ನು ಸುತ್ತಿಬರಬೇಕು ಎಂಬುದಾದರೆ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆ

ಒಂದೇ ಸ್ಥಳದಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬೇಕು ಎಂಬುದು ಸಾಮಾನ್ಯವಾಗಿ ಎಲ್ಲರ ಬಯಕೆಯಾಗಿರುತ್ತದೆ. ದೂರ ದೂರದ ಪ್ರಯಾಣಗಳಿಗಿಂತ ಒಂದೇ ಸೂರಿನಡಿ ಹಲವಾರು ಪ್ರವಾಸಿತಾಣಗಳನ್ನು ಸುತ್ತಿಬರಬೇಕು ಎಂಬುದಾದರೆ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮೇಲುಕೋಟೆಗೆ ಒಮ್ಮೆ ಭೇಟಿ ನೀಡಿ.

ಮೇಲುಕೋಟೆ ಎಂದರೆ ಎಲ್ಲರಿಗೂ ಪ್ರಿಯವಾದುದು, ಇಲ್ಲಿನ ದೇವಾಲಯ, ಆಶ್ರಮ, ಸರೋವರ, ಆಭಯಾರಣ್ಯಗಳು, ರಾಯಗೋಪುರ ಹೀಗೆ ಹತ್ತು ಹಲವಾರು ತಾಣಗಳು. ಪ್ರವಾಸಿಗರ ಮನ ಸೆಳೆಯುತ್ತದೆ. ಕರ್ನಾಟಕದಲ್ಲಿನ ಪ್ರವಾಸಿತಾಣಗಳಲ್ಲಿ ಮೇಲುಕೋಟೆಯು ಒಂದಾಗಿದೆ. ಪ್ರವಾಸಿಗರು ಇಲ್ಲಿನ ಸೌಂದರ್ಯಕ್ಕೆ ಮರುಳಾಗದೇ ಇರಲಾರರು.

ಪ್ರಸ್ತುತ ಲೇಖನದಲ್ಲಿ ಕೆಲವು ದಿನಗಳ ಕಾಲ ನಿಮ್ಮ ಪ್ರೀತಿ ಪಾತ್ರದವರ ಜೊತೆ ಒಮ್ಮೆ ಮೇಲುಕೋಟೆಗೆ ತೆರಳಲು 5 ಪ್ರಸಿದ್ಧವಾದ ತಾಣಗಳ ಬಗ್ಗೆ ತಿಳಿಯಿರಿ.

ಚೆಲುವನಾರಾಯಣ ಸ್ವಾಮಿ ದೇವಾಲಯ

ಚೆಲುವನಾರಾಯಣ ಸ್ವಾಮಿ ದೇವಾಲಯ

ಚೆಲುವನಾರಾಯಣ ಸ್ವಾಮಿ ದೇವಾಲಯವನ್ನು ತಿರುನಾರಾಯಣ ಎಂದು ಸಹ ಕರೆಯುತ್ತಾರೆ. ಈ ದೇವಾಲಯವು ಮೇಲುಕೋಟೆಯ ಪ್ರಮುಖ ಆರ್ಕಷಣೆಯಾಗಿದೆ. ಈ ದೇವಾಲಯವು ಯಾದವಗಿರಿ ಎಂಬ ಬೆಟ್ಟದ ಮೇಲೆ ಇದೆ. ಈ ದೇವಾಲಯವು ತನ್ನ ಸರಳವಾದ ಕೆತ್ತನೆ ಹಾಗೂ ಶಿಲ್ಪಕಲೆಯಿಂದ ಪ್ರಸಿದ್ಧಿ ಪಡೆದಿದೆ.


PC:Prathyush Thomas

ಚೆಲುವನಾರಾಯಣ ಸ್ವಾಮಿ ದೇವಾಲಯ

ಚೆಲುವನಾರಾಯಣ ಸ್ವಾಮಿ ದೇವಾಲಯ

ಒಂದು ದಂತಕಥೆಯ ಪ್ರಕಾರ ದೇವಾಲಯದಲ್ಲಿನ ಲೋಹದ ಚಿತ್ರಣವು ಕಳೆದುಹೋಗಿತ್ತು. ನಂತರ ಅದನ್ನು ರಾಮಾನುಜಾಚಾರ್ಯರಿಂದ ವಶಪಡಿಸಿಕೊಳ್ಳಲಾಯಿತು ಎಂದು ಕೆಲವರು ಹೇಳುತ್ತಾರೆ. ವಿಶೇಷವೆನೆಂದರೆ ಮೈಸೂರು ರಾಜರ ವಿಶೇಷ ಪ್ರೋತ್ಸಾಹವನ್ನು ಕೂಡ ಈ ದೇವಾಲಯವು ಪಡೆದಿತ್ತು. ಈ ದೇವಾಲಯದ 3 ಕಿರೀಟಗಳನ್ನು ಸರ್ಕಾರದ ಸುರಕ್ಷಿತ ಬಂಧನದಲ್ಲಿ ಇರಿಸಲಾಗಿದೆ.


PC:Dineshkannambadi

ಯೋಗ ನರಸಿಂಹಸ್ವಾಮಿ ದೇವಾಲಯ

ಯೋಗ ನರಸಿಂಹಸ್ವಾಮಿ ದೇವಾಲಯ

ಯೋಗ ನರಸಿಂಹಸ್ವಾಮಿ ದೇವಾಲಯವು ಹೆಸರೇ ಸೂಚಿಸುವಂತೆ ನರಸಿಂಹ ಸ್ವಾಮಿಗೆ ಸಮರ್ಪಿತವಾದುದು. ಮೇಲುಕೋಟೆಗೆ ಅತ್ಯಂತ ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳಲ್ಲಿ ಈ ದೇವಾಲಯವು ಒಂದು. ಇಲ್ಲಿನ ನರಸಿಂಗಸ್ವಾಮಿಯ ಮೂರ್ತಿಯು ಸೂಕ್ಷ್ಮವಾದ ಕೆತ್ತನೆಯಿಂದ ಸುಂದರವಾಗಿದೆ.


PC:Bikashrd

ಯೋಗ ನರಸಿಂಹಸ್ವಾಮಿ ದೇವಾಲಯ

ಯೋಗ ನರಸಿಂಹಸ್ವಾಮಿ ದೇವಾಲಯ

ಈ ಮಾಹಿಮಾನ್ವಿತ ದೇವಾಲಯವನ್ನು ಭಕ್ತ ಪ್ರಹ್ಲಾದ ನಿರ್ಮಿಸಿರಬಹುದು ಎಂದು ಸ್ಥಳೀಯರು ನಂಬಿದ್ದಾರೆ. ಕೆಲವು ದಂತಕಥೆಗಳ ಪ್ರಕಾರ ರಾಮ, ಕೃಷ್ಣ ಮತ್ತು ಬಲರಾಮ ಇಲ್ಲಿನ ಯೋಗನರಸಿಂಹಸ್ವಾಮಿಗೆ ಪೂಜಿಸುತ್ತಿದ್ದರು ಎಂದು ತಿಳಿಸುತ್ತದೆ. ವಿಶೇಷವೆನೆಂದರೆ ಈ ದೇವಾಲಯದಲ್ಲಿ ಸಂಸ್ಕøತ ಪಾಠಶಾಲೆ ಕೂಡ ಇದೆ. 1853 ರಲ್ಲಿ ಈ ಪಾಠಶಾಲೆಯು ಆರಂಭವಾಯಿತು.

PC:Dineshkannambadi

ಮೇಲುಕೋಟೆಯ ವನ್ಯಜೀವಿಧಾಮ

ಮೇಲುಕೋಟೆಯ ವನ್ಯಜೀವಿಧಾಮ

ಮೇಲುಕೊಟೆಯ ವನ್ಯಜೀವಿಧಾಮವು ಸುಮಾರು 49.82 ಚದರ ಕಿ,ಮೀ ವಿಸ್ತಾರವಾಗಿದೆ. 1974 ರ ಜೂನ್ 17ರಂದು ಅಭಯಾರಣ್ಯವೆಂದು ಘೋಷಿಸಲಾಯಿತು. ಈ ಅಭಯಾರಣ್ಯದಲ್ಲಿ ಸುಮಾರು 199 ಜಾತಿಯ ಪಕ್ಷಿಗಳನ್ನು ಕಾಣಬಹುದಾಗಿದೆ.

PC:mickey

ಮೇಲುಕೋಟೆಯ ವನ್ಯಜೀವಿಧಾಮ

ಮೇಲುಕೋಟೆಯ ವನ್ಯಜೀವಿಧಾಮ

ಇಲ್ಲಿನ ದಾಖಲಾಗಿರುವ ವಲಸಿಗ ಪಕ್ಷಿಗಳೆಂದರೆ ಇಂಡಿಯನ್ ಬ್ಲೂ ರಾಬಿನ್ ಲುಸ್ಸಿನಿಯ ಬ್ರುನ್ನೆಯಾ, ಯೂರೇಶಿಯನ್ ಬ್ಲ್ಯಾಕ್ಬರ್ಡ್ ಟರ್ಡಸ್ ಮೆರುಲಾ, ಅಲ್ಟ್ರಾಮರೀನ್ ಪ್ಲೈಕ್ಯಾಚರ್ ಸೂಪರ್ಸಿಯಾಲಿಸ್ ಎಂಬ ಹಲವಾರು ಬಗೆಯ ಪಕ್ಷಿಗಳನ್ನು ಕಾಣಬಹುದಾಗಿದೆ.


PC:Mathias Appel

ರಾಯಗೋಪುರ

ರಾಯಗೋಪುರ

ಸುಂದರವಾದ ಈ ರಾಯಗೋಪುರದಲ್ಲಿ ಹಲವಾರು ಸಿನಿಮಾಗಳು ಚಿತ್ರಿಕರಣಗೊಂಡಿರುವುದು ಕಾಣಬಹುದಾಗಿದೆ. ಸುಂದರವಾಗಿ ಅಲಂಕರಿಸಿದ ಈ ಸ್ತಂಭಗಳಲ್ಲಿ ಆನೆಯ ಕಲ್ಲಿನ ಕೆತ್ತನೆಗಳನ್ನು ಕಾಣಬಹುದಾಗಿದೆ. ವಿಶೇಷವೆನೆಂದರೆ ಮೈಸೂರಿನ ಆಳ್ವಿಕೆಯಲ್ಲಿ ಟಿಪ್ಪು ಸುಲ್ತಾನ್ ಆನೆಗಳನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂದು ಹೇಳಲಾಗುತ್ತದೆ.


PC:15avinash06

ರಾಯಗೋಪುರ

ರಾಯಗೋಪುರ

ಇಲ್ಲಿ ಯೋಗನರಸಿಂಹನ ಶಿಲ್ಪಕಲೆಯನ್ನು ಕಾಣಬಹುದು. ನರಸಿಂಹನು ತನ್ನ ಪತ್ನಿ ಲಕ್ಷ್ಮಿದೇವಿಯು ತನ್ನ ತೊಡೆದ ಮೇಲೆ ಕುಳಿತಿರುವ ಭಂಗಿ ಅದ್ಭುತವಾದುದು. ಈ ರಾಯಗೋಪುರದ ದ್ವಾರವು ತನ್ನದೇ ವಿಶಿಷ್ಟತೆಯನ್ನು ಒಳಗೊಂಡಿದೆ. ಮೇಲುಕೋಟೆಗೆ ಬರುವ ಅದೆಷ್ಟೂ ಪ್ರವಾಸಿಗರು ಮೊದಲು ನೋಡಲು ಬಯಸುವುದೇ ಈ ರಾಯಗೋಪುರ ಎಂದರೆ ತಪ್ಪಾಗಲಾರದು.


PC:Theconspired

ತೋನ್ನೂರ್ ಸರೋವರ

ತೋನ್ನೂರ್ ಸರೋವರ

ತೋನ್ನೂರ್ ಸರೋವರ ತನ್ನ ಮಾದಕತೆಯಿಂದ ಪ್ರವಾಸಿಗರನ್ನು ಸೆಳೆಯುವ ಅದ್ಭುತವಾದ ಶಕ್ತಿಯನ್ನು ಹೊಂದಿದೆ. ಈ ಸರೋವರವು ಸುತ್ತಮುತ್ತಲಿನ ಬೆಟ್ಟಗಳಿಂದ ಹಾಗೂ ಸ್ವಾಭಿಕವಾದ ಸರೋವರದಿಂದ ಕಂಗೊಳಿಸುತ್ತಿದೆ. ಬೆಟ್ಟದ ತುದಿಯಲ್ಲಿ ಸಣ್ಣ ಗುರ್ಲಿಂಗ್ ಜಲಪಾತವನ್ನು ಇಲ್ಲಿ ಕಾಣಬಹುದಾಗಿದೆ.


PC:sai sreekanth mulagaleti

ತೋನ್ನೂರ್ ಸರೋವರ

ತೋನ್ನೂರ್ ಸರೋವರ

ಈ ತೋನ್ನೂರ್ ಸರೋವರವನ್ನು ತಿರುಮಾಲಾ ಸಾಗರ್ ಎಂದೂ ಸಹ ಕರೆಯುತ್ತಾರೆ. ಈ ಸರೋವರವು ದಂಪತಿಗಳಿಗೆ, ಕುಟುಂಬಿಕರಿಗೆ ಹಾಗೂ ಪಿಕ್ನಿಕ್ ಮಾಡಲು ಆಸಕ್ತಿ ಇರುವವರಿಗೆ ಈ ತಾಣ ಅದ್ಭುತವಾದುದು. ಇಂತಹ ತಾಣ ಎಂದೂ ಮರೆಯಲಾಗದ ಅನುಭೂತಿಯನ್ನು ಉಂಟುಮಾಡುತ್ತದೆ. ಇಷ್ಟೆಲ್ಲಾ ವೈವಿದ್ಯಮಯವಾದ ತಾಣವನ್ನು ಒಮ್ಮೆ ನೋಡಲೇಬೇಕು ಅಲ್ಲವೇ?


PC:sai sreekanth mulagaleti

ತಲುಪುವ ಬಗೆ?

ತಲುಪುವ ಬಗೆ?

ಈ ಸುಂದರವಾದ ಸ್ಥಳಗಳು ಮಂಡ್ಯ ಜಿಲ್ಲೆಯಲ್ಲಿನ ಮೇಲುಕೋಟೆಯಲ್ಲಿದ್ದು ಕರ್ನಾಟಕದ ಪ್ರವಾಸಿಗರಿಗೆ ಸಮೀಪವಾದ ತಾಣ ಎಂದೇ ಹೇಳಬಹುದು.

ವಿಮಾನ ಮಾರ್ಗದ ಮೂಲಕ: ಮೇಲುಕೋಟೆಯ ಈ ತಾಣಗಳಿಗೆಲ್ಲಾ ತಲುಪಲು ಸಮೀಪದ ವಿಮಾನ ಮಾರ್ಗವೆಂದರೆ ಅದು ಬೆಂಗಳೂರು ಇಂಟರ್ ನ್ಯಾಷನಲ್ ಏರ್‍ಪೋಟ್. ಇಲ್ಲಿಂದ ಸುಮಾರು 180 ಕಿ,ಮೀ ದೂರದಲ್ಲಿ ಮೇಲುಕೋಟೆ ಇದೆ.

ತಲುಪುವ ಬಗೆ?

ತಲುಪುವ ಬಗೆ?

ರೈಲ್ವೆ ಮಾರ್ಗದ ಮೂಲಕ: ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಮಂಡ್ಯ. ಇಲ್ಲಿಂದ ಮೇಲುಕೋಟೆಗೆ ಸುಮಾರು 55 ಕಿ,ಮೀ ದೂರದಲ್ಲಿದೆ.

ತಲುಪುವ ಬಗೆ?

ತಲುಪುವ ಬಗೆ?

ರಸ್ತೆ ಮಾರ್ಗದ ಮೂಲಕ: ಬೆಂಗಳೂರಿನಿಂದ ಮೇಲೂಕೋಟೆಗೆ ಸುಮಾರು 140 ಕಿ,ಮೀ ದೂರದಲ್ಲಿದೆ. ಮೈಸೂರಿನಿಂದ ಮೇಲುಕೋಟೆಗೆ ಹಲವಾರು ಬಸ್‍ಗಳ ಸೌಕರ್ಯವಿದೆ. ಸುಲಭವಾಗಿ ತಲುಪಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X