Search
  • Follow NativePlanet
Share
» »ಅತೃಪ್ತ ಪ್ರವಾಸಿಗನ ಮನ ತಣಿಸುವ ತೇಣಿ

ಅತೃಪ್ತ ಪ್ರವಾಸಿಗನ ಮನ ತಣಿಸುವ ತೇಣಿ

By Vijay

ಪಶ್ಚಿಮ ಘಟ್ಟಗಳ ಅನನ್ಯ ಸೌಂದರ್ಯದಲ್ಲಿ ಇಣುಕಿ ಇಣುಕಿ ನೋಡುತ್ತ ಪ್ರವಾಸಿಗರನ್ನು ಕೈಬಿಸಿ ಕರೆಯುವ ಒಂದು ಸುಂದರ ಪಟ್ಟಣ ತೇಣಿ. ಬೆಟ್ಟಗುಡ್ಡಗಳ ರಮಣೀಯ ನೋಟ, ತಾಜಾ ನೀರಿನ ಕೆರೆ ತೊರೆಗಳು, ಸುಗಂಧ ಪಸರಿಸುವ ಚಹಾ ತೋಟಗಳು ತೇಣಿಯ ಅವಿಭಾಜ್ಯ ಅಂಗಳಾಗಿವೆ.

ಕ್ಲಿಯರ್ ಟ್ರಿಪ್ ನಿಂದ ಹೋಟೆಲ್ ಬುಕ್ಕಿಂಗ್ ಮೇಲೆ ಅಮೋಘ 50% ರಷ್ಟು ಕಡಿತ

ಹತ್ತಿ, ಏಲಕ್ಕಿ, ದ್ರಾಕ್ಷಿ ಹಾಗೂ ಮೆಣಸಿನಕಾಯಿಗಳು ಈ ಪಟ್ಟಣದ ಪ್ರಮುಖ ಉತ್ಪನ್ನಗಳಾಗಿವೆ. ಅಷ್ಟೆ ಅಲ್ಲ, ಇಲ್ಲಿ ಜರುಗುವ ವಾರದ ಬೃಹತ್ ಸಂತೆಯು ತಮಿಳುನಾಡು ರಾಜ್ಯದಲ್ಲೆ ಎರಡನೆಯ ಹಾಗೂ ದ.ಭಾರತದಲ್ಲೆ ನಾಲ್ಕನೆಯ ದೊಡ್ಡ ಸಂತೆ ಎಂಬ ಹೆಗ್ಗಳಿಕೆ ಪಡೆದಿದೆ.

ವಿಶೇಷ ಲೇಖನ : ಮುನ್ನಾರ್ ಭೇಟಿಯ ಹಿಂದಿರುವ ರಹಸ್ಯ

ತಮಿಳುನಾಡು ರಾಜ್ಯದ ಪಶ್ಚಿಮಕ್ಕೆ ಹಾಗೂ ಕೇರಳ ರಾಜ್ಯದ ಗಡಿ ಬಳಿ ನೆಲೆಸಿರುವ ತೇಣಿಯು ಪ್ರವಾಸಿ ದೃಷ್ಟಿಯಿಂದಲೂ ಸಹ ಮಹತ್ವ ಪಡೆದಿದ್ದು, ಒಮ್ಮೆ ಭೇಟಿ ನೀಡಿದಾಗ ಸುಲಭವಾಗಿ ಮರೆಯದ ಹಾಗೆ ಮೋಡಿ ಮಾಡುತ್ತದೆ. ಸ್ವರ್ಗ ಸದೃಶ ಪ್ರಕೃತಿಯ ಸುಂದರ ದೃಶ್ಯಾವಳಿಗಳು ಪ್ರವಾಸಿಗನ ಮನದಲ್ಲಿ ಕಟ್ಟಿಡುವಂತೆ ಮಾಡುತ್ತದೆ ಈ ಸುಂದರ ಪಟ್ಟಣ.

ವಿಶೇಷ ಲೇಖನಗಳು : ಅದ್ಭುತ ಜೇನುತುಪ್ಪದ ನೆಲ ತೆನ್ಮಲ ಕೇರಳದ ಅದ್ಭುತ ಕಾಡುಗಳು

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ತಮಿಳುನಾಡಿನಲ್ಲಿ ಇತ್ತೀಚೆಗಷ್ಟೇ ರೂಪಗೊಂಡ ಒಂದು ಬಹುಮುಖ್ಯ ಜಿಲ್ಲೆ ತೇಣಿ. ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಈ ಊರು ಪ್ರವಾಸಕ್ಕೆ ಹೇಳಿಮಾಡಿಸಿದ ಪ್ರದೇಶ.

ಚಿತ್ರಕೃಪೆ: Raj

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಈ ಹೊಸ ಜಿಲ್ಲೆಯು ಪೆರಿಯಾಕುಳಂ, ಉತ್ತಮಪಾಳ್ಯಂ ಮತ್ತು ಆಂಡಿಪಟ್ಟಿಗಳನ್ನು ಒಳಗೊಂಡಿದೆ. ಇವು ಕರಕುಶಲ ಕಲೆ ಮತ್ತು ಕೈಮಗ್ಗದ ವಸ್ತ್ರಗಳಿಗೆ ಹೆಸರುವಾಸಿಯಾದ ಊರುಗಳು.

ಚಿತ್ರಕೃಪೆ: NSiddhu

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ತೇಣಿ ಮೃದುವಾದ ಟವಲ್ಲುಗಳು, ರಸಭರಿತ ಮಾವಿನಹಣ್ಣುಗಳು, ಉತ್ತಮ ಹತ್ತಿ ರೇಷ್ಮೆ ವಸ್ತ್ರಗಳು, ಏಲಕ್ಕಿ, ಕೆಂಪು ಮೆಣಸಿನಕಾಯಿ, ಕಾಫಿ ಬೀಜ ಮತ್ತು ಹಸಿರು ಟೀಗೆ ಪ್ರಸಿದ್ಧವಾದದ್ದು. ನೀವು ತೇಣಿಗೆ ಹೋದಾಗ ಇವುಗಳ ಖರೀದಿ ಮಾಡಲು ಮರೆಯದಿರಿ.

ಚಿತ್ರಕೃಪೆ: Sivaraj.mathi

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ತೇಣಿಯಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ವಾಗೈ, ಮೇಘಮಲೈ, ಸೊತ್ತುಪ್ಪಾರಿ, ಷಣ್ಮುಗನಾಥೈ ಆಣೆಕಟ್ಟುಗಳು ಅತಿಸುಂದರವಾದ ಪ್ರವಾಸಿ ತಾಣಗಳು.

ಚಿತ್ರಕೃಪೆ: Ramesh Rasaiyan

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಇವಲ್ಲದೆ ಸುರಳಿ, ಕುಂಬಕ್ಕರೈ ಮತ್ತು ಚಿನ್ನ ಸುರುಳಿಯಂತಹ ಮನಮೋಹಕ ಜಲಪಾತಗಳಿವೆ. ಹಲವು ಪ್ರಸಿದ್ಧವಾದ ಹಾಗೂ ಪುರಾತನವಾದ ದೇವಾಲಯಗಳೂ ಸಹ ಇಲ್ಲಿವೆ.

ಚಿತ್ರಕೃಪೆ: Mprabaharan

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಭಾರತದ ಎಲ್ಲ ಮೂಲೆಗಳಿಂದಲೂ ಭಕ್ತಾದಿಗಳು ಕುಚನೂರು, ಮಾವೊತ್ತು, ತೀರ್ಥ ತೊಟ್ಟಿ, ಕೌಮಾರಿಯಮ್ಮನ್ ದೇವಾಲಯ, ದೇವದಾನಪಟ್ಟಿ ಕಾಮಾಕ್ಷಿ ಅಮ್ಮನ್ ದೇವಾಲಯ ಮತ್ತು ಬಾಲಸುಬ್ರಮಣ್ಯ ದೇವಾಲಯಗಳಿಗೆ ಬರುತ್ತಾರೆ. ರಾತ್ರಿಯಲ್ಲಿ ತೇಣಿಯು ಜಗಮಗಿಸುವ ಪರಿ.

ಚಿತ್ರಕೃಪೆ: Vijay S

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ತೇಣಿಯಲ್ಲಿ ಪೊಂಗಲ್, ಶಿವರಾತ್ರಿ ಮತ್ತು ಮಾಸಿ ಮಾಘಂ ಹಬ್ಬಗಳನ್ನು ಅದ್ದೂರಿಯಾಗಿ ಮಾಡುತ್ತಾರೆ. ಈ ಹಬ್ಬಗಳನ್ನು ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಆಚರಿಸುತ್ತಾರೆ. ತೇಣಿಯ ಪ್ರಸಿದ್ಧವಾದ ಎತ್ತಿನಗಾಡಿ ಸ್ಪರ್ಧೆಯು ಈ ಹಬ್ಬದ ಅವಧಿಯಲ್ಲಿ ನಡೆಯುತ್ತದೆ.

ಚಿತ್ರಕೃಪೆ: Mprabaharan

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ತೇಣಿಗೆ ವರ್ಷದ ಯಾವ ತಿಂಗಳಲ್ಲಿ ಬೇಕಾದರೂ ಹೋಗಬಹುದು. ಆದರೆ ಹಬ್ಬದ ಸಮಯದಲ್ಲಿ ನಿಮ್ಮ ಪ್ರವಾಸವನ್ನು ರೂಪಿಸಿಕೊಂಡರೆ ಹಬ್ಬದಲ್ಲಿ ಪಾಲ್ಗೊಳ್ಳಬಹುದು. ಈ ಸಮಯದಲ್ಲಿ ಸೆಖೆ ಹೆಚ್ಚಾಗಿರುವುದಿಲ್ಲ ಮತ್ತು ಹವಾಮಾನವು ಓಡಾಟಕ್ಕೆ ತಂಪಾಗಿ ಅನುಕೂಲವಾಗಿರುತ್ತದೆ. ಆದ್ದರಿಂದ ಇದು ತೇಣಿಗೆ ಭೇಟಿ ನೀಡಲು ಉತ್ತಮ ಸಮಯ.

ಚಿತ್ರಕೃಪೆ: Vinoth Chandar

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಮೇಘಮಲೈ ಗಿರಿಶ್ರೇಣಿಯು ತೇಣಿಯಿಂದ 70 ಕಿಮೀ ದೂದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿದೆ. ಇದು ಸಮುದ್ರ ಮಟ್ಟದಿಂದ 500 ಅಡಿಗಳಷ್ಟು ಎತ್ತರದಲ್ಲಿದೆ. ಇಲ್ಲಿ ಪ್ರಾಕೃತಿಕ ಸಂಪತ್ತು ಮತ್ತು ವನ್ಯಜೀವಿಗಳು ಹೇರಳವಾಗಿವೆ.

ಚಿತ್ರಕೃಪೆ: Mprabaharan

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಇಲ್ಲಿ ಸುಮಾರು 100 ಬಗೆಯ ಪಕ್ಷಿ ಪ್ರಭೇದಗಳನ್ನು ಕಾಣಬಹುದು. ಇದು ಪಕ್ಷಿವೀಕ್ಷಕರಿಗೆ ಪ್ರಿಯವಾದ ತಾಣ. ಇಲ್ಲಿನ ಜೈವಿಕ ವೈವಿಧ್ಯವನ್ನು ಕಾಪಾಡುವ ಸಲುವಾಗಿ ತಮಿಳುನಾಡು ಸರ್ಕಾರವು ಇದನ್ನು ವನ್ಯಜೀವಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದೆ.

ಚಿತ್ರಕೃಪೆ: Chandru0072

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಈ ಗಿರಿ ಪಂಕ್ತಿಯು ಹಲವು ರೀತಿಯ ಪ್ರಾಣಿಗಳಿಗೆ, ಸರೀಸೃಪಗಳಿಗೆ ಮತ್ತು ಚಿಟ್ಟೆಗಳಿಗೆ ತವರು ಮನೆ. ಇಲ್ಲಿ ಚಿರತೆ, ಹುಲಿ, ಕಾಡು ಹಂದಿ, ನೀಲಗಿರಿ ತಾರ್, ಮುಳ್ಳು ಹಂದಿ, ಕಾಡೆತ್ತು, ಹಾರುವ ಅಳಿಲು, ಚುಕ್ಕೆ ಜಿಂಕೆ, ಕಪ್ಪು ಕರಡಿ, ಊಳಿಡುವ ಜಿಂಕೆ, ಮೃದು ಚರ್ಮದ ನೀರುನಾಯಿ, ಸಾಂಬಾರು ಜಿಂಕೆ, ಉದ್ದಬಾಲದ ಕೋತಿ, ನೀಲಗಿರಿ ಕೋತಿಗಳು, ಸಾಧಾರಣ ಕೋತಿಗಳು ಇನ್ನೂ ಹಲವು ಬಗೆಯ ಪ್ರಾಣಿಗಳನ್ನು ಇಲ್ಲಿ ಕಾಣಬಹುದು.

ಚಿತ್ರಕೃಪೆ: Vinoth Chandar

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಈ ಸ್ಥಳವು ಟೀ ಮತ್ತು ಏಲಕ್ಕಿ ತೋಟಗಳಿಗೆ ಪ್ರಸಿದ್ಧವಾದದ್ದು. ಆದರೆ ಹೆಚ್ಚಿನ ಭೂಪ್ರದೇಶವು ಅರಣ್ಯದಿಂದ ಆವೃತವಾಗಿದೆ. ಇಲ್ಲಿ ಮೆಣಸು ಮತ್ತು ದಾಲ್ಚಿನ್ನಿಯನ್ನು ಕೂಡ ಬೆಳೆಯುತ್ತಾರೆ. ಮೇಘಮಲೈ ಹೆಸರೇ ಹೇಳುವಂತೆ ಇವು ಮೋಡಗಳನ್ನು ಚುಂಬಿಸುವಷ್ಟು ಎತ್ತರವಾಗಿದೆ. ಈ ಎತ್ತರದ ಕಾರಣದಿಂದಲೇ ಸುತ್ತಲ ಪ್ರದೇಶಗಳ ಸುಂದರ ನೋಟಗಳನ್ನು ಇಲ್ಲಿಂದ ನೋಡಬಹುದು.

ಚಿತ್ರಕೃಪೆ: Sivaraj.mathi

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಸುರಳಿ ಜಲಪಾತವು 18 ನೇ ಶತಮಾನದಲ್ಲಿ ಕೊರೆಯಲಾದ 18 ಗವಿಗಳಿಗೆ ಪ್ರಸಿದ್ಧಿಯಾಗಿದೆ. ಇದು ಭಾರತದ ಶಿಲಾ ವಾಸ್ತು ಕೌಶಲ್ಯಕ್ಕೆ ಉದಾಹರಣೆಯಾಗಿದೆ. ತೇಣಿಯಿಂದ 56 ಕಿಮೀ ದೂರದಲ್ಲಿ ಈ ಜಲಪಾತವಿದೆ. ಈ ಜಲಪಾತವು ಎರಡು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಮೊದಲಿಗೆ 150 ಅಡಿ ಎತ್ತರದಿಂದ ಬೀಳುವ ಜಲಪಾತವು ಅಲ್ಲೊಂದು ಹಳ್ಳದಲ್ಲಿ ಶೇಖರಣೆಯಾಗಿ ಮತ್ತೆ ಅಲ್ಲಿಂದ ಮತ್ತೆ 40 ಅಡಿ ಕೆಳಕ್ಕೆ ಧುಮುಕುತ್ತದೆ.

ಚಿತ್ರಕೃಪೆ: Vinoth Chandar

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಬೋಡಿ ಮೆಟ್ಟು ತೇಣಿಯಲ್ಲಿನ ಒಂದು ಗಿರಿಪ್ರದೇಶ. ಇದು ಪಶ್ಚಿಮ ಘಟ್ಟಗಳ ಮಡಿಲಲ್ಲಿ ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ. ಇದೊಂದು ಸುಂದರ ಪ್ರವಾಸಿತಾಣ. ಇಲ್ಲಿಗೆ ಪ್ರತಿವರ್ಷವೂ ನೂರಾರು ಮಂದಿ ಪ್ರವಾಸಿಗರು ಬರುತ್ತಾರೆ. ಬೋಡಿ ಮೆಟ್ಟು ಸಸ್ಯ ಮತ್ತು ಪ್ರಾಣಿ ಸಂಪತ್ತಿನಿಂದ ಶ್ರೀಮಂತವಾಗಿದೆ. ಇಲ್ಲಿ ಹಲವು ಪ್ರಭೇದಗಳ ಅಪರೂಪದ ಹಕ್ಕಿ ಮತ್ತು ಪ್ರಾಣಿಗಳನ್ನು ಕಾಣಬಹುದು. ಇದು ಬೋಡಿನಾಯಕ್ಕನೂರಿನಿಂದ ತೇಣಿಗೆ ಹೋಗುವ ಮಾರ್ಗದಲ್ಲಿ ತೇಣಿಯಿಂದ 43 ಕಿಮೀ ದೂರದಲ್ಲಿದೆ.

ಚಿತ್ರಕೃಪೆ: Million Moments

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಕೌಮಾರಿಯಮ್ಮನ ದೇವಾಲಯವನ್ನು 14ನೇ ಶತಮಾನದ ಪಾಂಡ್ಯ ದೊರೆ ವೀರಪಾಂಡ್ಯ ಕಟ್ಟಬೊಮ್ಮನ್ ನಿರ್ಮಿಸಿದನು. ಸ್ಥಳೀಯ ನಂಬಿಕೆಗಳ ಪ್ರಕಾರ, ದೊರೆ ವೀರಪಾಂಡ್ಯನು ಕೌಮಾರಿಯಮ್ಮ ಮತ್ತು ಕನ್ನೇಶ್ವರಮುಡಿಯಾರ್ರನ್ನು ಪೂಜಿಸಿದ್ದರಿಂದ ತನ್ನ ದೃಷ್ಟಿಯನ್ನು ಮರಳಿ ಪಡೆದನು. ಕೌಮಾರಿಯಮ್ಮ ದೇವಿಯು ಭಕ್ತಾದಿಗಳ ಇಷ್ಟಾರ್ಥಗಳನ್ನು ಸಲ್ಲಿಸುತ್ತಾಳೆ ಮತ್ತು ಅವರ ಸಂಕಟಗಳನ್ನು, ರೋಗಗಳನ್ನು ಪರಿಹರಿಸುತ್ತಾಳೆ ಎಂಬ ನಂಬಿಕೆಯಿದೆ. ಈ ದೇವಾಲಯವು ತೇಣಿಯಿಂದ 8 ಕಿಮೀ ದೂರದಲ್ಲಿರುವ ವೀರಪಾಂಡಿ ಎನ್ನುವ ಹಳ್ಳಿಯಲ್ಲಿದೆ. ಇದು ಮುಳೈ ಎನ್ನುವ ನದಿ ದಂಡೆಯಲ್ಲಿದೆ.

ಚಿತ್ರಕೃಪೆ: theni.tn.nic.in

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಕುಂಬಕ್ಕಾರಿ ಜಲಪಾತವು ಕೊಡೈಕೆನಾಲಿನಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ ಹುಟ್ಟುತ್ತದೆ. ಇದು ಪೆರಿಯಾಕುಳಂನಿಂದ 9 ಕಿಮೀ ದೂರದಲ್ಲಿರುವ ಕುಂಬಕ್ಕಾರಿ ಎಂಬಲ್ಲಿದೆ. ತೇಣಿಯಿಂದ 24 ಕಿಮೀ ದೂರದಲ್ಲಿದೆ. ನಿಸರ್ಗದ ನಡುವಿನ ಈ ಜಲಪಾತವು ಹಕ್ಕಿಗಳ ಚಿಲಿಪಿಲಿಯೊಂದಿಗೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಈ ಜಲಪಾತವು ಎರಡು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಜಲಪಾತ ತಾಣದ ಬಳಿಯಿರುವ ಮುರುಗನ ಪ್ರತಿಮೆ.

ಚಿತ್ರಕೃಪೆ: SarThePhotographer

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಕುಚನೂರು ಶನಿ ದೇವಾಲಕ್ಕೆ ಪ್ರಸಿದ್ಧವಾದದ್ದು. ಭಾರತದಲ್ಲಿ ಕಂಡುಬರುವ ಕೇವಲ ಶನಿ ದೇವರಿಗೆಯೇ ಅರ್ಪಿತವಾಗಿರುವ ದೇವಾಲಯಗಳಲ್ಲಿ ಇದೂ ಒಂದು. ಶನಿಯು ಈ ಪ್ರದೇಶದಲ್ಲಿ ತನ್ನ ನೈಜ ರೂಪದಲ್ಲಿ ಪ್ರತ್ಯಕ್ಷನಾಗಿದ್ದಾನೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಪ್ರದೇಶಕ್ಕೆ ಶನಿ ದೇವರ ಹೆಸರುಗಳಲ್ಲಿ ಒಂದಾದ ಕುಬ್ಜನೂರ್ ಎಂಬ ಹೆಸರು ಬಂದಿತು. ಕ್ರಮೇಣ ಇದು ಕುಚನೂರು ಎಂದಾಯಿತು. ಕುಚನೂರು ಹಳ್ಳಿಯಲ್ಲಿ ಹರಿಯುವ ಸುರಭಿ ಎನ್ನುವ ನದಿ ದಂಡೆಯ ಮೇಲೆ ಈ ಶನಿದೇವಾಲಯವಿದೆ.

ಚಿತ್ರಕೃಪೆ: theni.tn.nic.in

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ಷಣ್ಮುಗನಾಥೈ ಆಣೆಕಟ್ಟು ಮೇಘಮಲೈ ಗಿರಿಶ್ರೇಣಿಯ ಸುಂದರ ಹಿನ್ನೆಲೆಯಲ್ಲಿದೆ. ಈ ಆಣೆಕಟ್ಟನ್ನು ತೇಣಿ ಜಿಲ್ಲೆಯ ರಾಯಪಾನಪಟ್ಟಿಯಲ್ಲಿನ ಷಣ್ಮುಗ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ತೇಣಿ ಜಿಲ್ಲೆಯ ಆಡಿಪಟ್ಟಿ, ವೇಲೈಮ್ಮಾಳ್ಪುರಂ, ಪುಸಾರಿಕೌಂಡನ್ ಪಟ್ಟಿ, ಒಡೈಪಟ್ಟಿ, ಸೆಪಾಲಕೊಟ್ಟೈ ಮತ್ತು ಸುಕ್ಕಂಗಳ್ ಪಟ್ಟಿಗೆ ಈ ಆಣೆಕಟ್ಟಿನ ನೀರನ್ನು ಬಿಡಲಾಗುತ್ತದೆ. ಆಣೆಕಟ್ಟಿನಿಂದ ಸುಮಾರು 1 ಕಿಮೀ ದೂರದಲ್ಲಿ ಷಣ್ಮುಗನ ದೇವಾಲಯವಿದೆ.

ಚಿತ್ರಕೃಪೆ: Kujaal

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ತೇಣಿಯು ತಮಿಳುನಾಡಿನ ಎಲ್ಲ ಪ್ರದೇಶಗಳಿಗೆ ತಲುಪುವ ಉತ್ತಮ ರಸ್ತೆಗಳನ್ನು ಹೊಂದಿದೆ. ಈ ಸ್ಥಳವನ್ನು ಎಲ್ಲ ಹತ್ತಿರದ ಸ್ಥಳಗಳಿಂದ ಸುಲಭವಾಗಿ ಬಸ್ಸುಗಳ ಮೂಲಕ ತಲುಪಬಹುದು. ತಮಿಳುನಾಡು ಸರ್ಕಾರದ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ತೇಣಿ ಮತ್ತು ತಮಿಳು ನಾಡಿನ ಇತರ ಪ್ರದೇಶಗಳ ನಡುವೆ ಓಡಾಡುತ್ತವೆ.

ಚಿತ್ರಕೃಪೆ: VnGrijl

ಮನ ತಣಿಸುವ ತೇಣಿ:

ಮನ ತಣಿಸುವ ತೇಣಿ:

ತೇಣಿ ತಮಿಳುನಾಡಿನ ಒಂದು ಮುಖ್ಯ ಜಿಲ್ಲೆಯಾಗಿರುವುದರಿಂದ ಇಲ್ಲಿ ರೈಲ್ವೇ ನಿಲ್ದಾಣವಿದೆ. ಈ ನಿಲ್ದಾಣ ಮದುರೈ ಮತ್ತು ಬೋಡಿಯ ನಡುವಿನ ಮುಖ್ಯ ಜಂಕ್ಷನ್. ಇಲ್ಲಿಂದ ರಾಜ್ಯದ ಎಲ್ಲ ಮುಖ್ಯ ನಗರಗಳಿಗೆ ರೈಲ್ವೇ ಸೌಲಭ್ಯವಿದೆ. ರೈಲಿನಲ್ಲಿ ಹೋಗುವುದು ಉತ್ತಮ ಆಯ್ಕೆ.

ಚಿತ್ರಕೃಪೆ: Hemanthjijo

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X