Search
  • Follow NativePlanet
Share
» »ಈ ದೇವಾಲಯದ ಸ್ತಂಭವು ತನಗೆ ತಾನೆ ತಿರುಗುತ್ತದೆ

ಈ ದೇವಾಲಯದ ಸ್ತಂಭವು ತನಗೆ ತಾನೆ ತಿರುಗುತ್ತದೆ

ನಮ್ಮ ಕರ್ನಾಟಕದ ಶ್ರೀಮಂತ ಆಸ್ತಿ ಬೇಲೂರಿನ ಶ್ರೀ ಚೆನ್ನಕೇಶವ ದೇವಾಲಯವನ್ನು ಸತತ 106 ವರ್ಷಗಳ ಕಾಲ ನಿರ್ಮಿಸಿದರು ಎಂಬುದು ನಿಮಗೆ ಗೊತ್ತೆ? ಈ ದೇವಾಲಯದಲ್ಲಿ ನರಸಿಂಹ ಸ್ವಾಮಿ ಸ್ತಂಭಂವಿದೆ. ಇದೊಂದು ಆತ್ಯಧುನಿಕತೆಯಿಂದ ನಿರ್ಮಿಸಿದ ಸ್ತಂಭವಾಗಿದೆ.

ಭಾರತ ದೇಶದಲ್ಲಿ ನಮಗೆ ಗೊತ್ತಿರದ ಹಲವಾರು ದೇವಾಲಯಗಳು, ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಪ್ರತಿಯೊಂದು ದೇವಾಲಯಗಳಲ್ಲಿಯು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುತ್ತದೆ. ಹಲವಾರು ದೇವಾಲಯಗಳು ತನ್ನ ವಾಸ್ತುಶಿಲ್ಪದಿಂದಲೇ ಪ್ರಸಿದ್ಧಿಯನ್ನು ಪಡೆದಿದೆ.

ಹಾಗೆಯೇ ನಮ್ಮ ಕರ್ನಾಟಕದ ಶ್ರೀಮಂತ ಆಸ್ತಿ ಬೇಲೂರಿನ ಶ್ರೀ ಚೆನ್ನಕೇಶವ ದೇವಾಲಯವನ್ನು ಸತತ 106 ವರ್ಷಗಳ ಕಾಲ ನಿರ್ಮಿಸಿದರು ಎಂಬುದು ನಿಮಗೆ ಗೊತ್ತೆ? ಈ ದೇವಾಲಯದಲ್ಲಿ ನರಸಿಂಹ ಸ್ವಾಮಿ ಸ್ತಂಭಂವಿದೆ. ಇದೊಂದು ಆತ್ಯಧುನಿಕತೆಯಿಂದ ನಿರ್ಮಿಸಿದ ಸ್ತಂಭವಾಗಿದೆ. ಈ ಸ್ತಂಭವು ತಿರುಗುತ್ತದೆ ಅದರ ಬಗ್ಗೆ ನಿಮಗೆ ಎಷ್ಟು ಗೊತ್ತು?

ಬೇಲೂರು ಕರ್ನಾಟಕದಲ್ಲಿನ ಮೆರುಗು. ಬೇಲೂರನ್ನು ಯೋಗಾಚಿ ಎಂಬ ನದಿಯ ಮೇಲೆ ಅದ್ಭುತವಾಗಿ ನಿರ್ಮಿಸಲಾಗಿದೆ. ಎಲ್ಲಾ ದೇವಾಲಯಗಳ ಹಾಗೆ ಈ ದೇವಾಲಯದಲ್ಲಿಯೂ ಹಲವಾರು ವಿಶಿಷ್ಟತೆಯನ್ನು ಹೊಂದಿದೆ. ನೀವು ಒಮ್ಮೆ ಪರೀಕ್ಷೀಸಿ.

ಪ್ರಸ್ತುತ ಲೇಖನದಲ್ಲಿ ಬೇಲೂರಿನ ಆಶ್ಚರ್ಯಕರವಾದ ವೈಭವದ ವೈಶಿಷ್ಟತೆಯನ್ನು ತಿಳಿಯೋಣ.

ಯಾರು ನಿರ್ಮಿಸಿದರು?

ಯಾರು ನಿರ್ಮಿಸಿದರು?

ಈ ಅತ್ಯಂತ ಸುಂದರವಾದ ಈ ದೇವಾಲಯವನ್ನು ಹೊಯ್ಸಳ ಚಕ್ರವರ್ತಿ ವಿಷ್ಣುವರ್ಧನ ನಿರ್ಮಿಸಿದನು. ಈ ಪ್ರದೇಶವು ಹೊಯ್ಸಳರ ಮೊದಲ ರಾಜಧಾನಿಯಾಗಿತ್ತು. ಈ ದೇವಾಲಯವು ಹಿಂದೂಗಳ ಪವಿತ್ರವಾದ ದೇವಾಲಯವಾಗಿದೆ.

PC:YOUTUBE

ವಿಷ್ಣುವರ್ಧನ

ವಿಷ್ಣುವರ್ಧನ

ವಿಷ್ಣುವರ್ಧನ ಒಮ್ಮೆ ಚೋಳರ ರಾಜರ ಮೇಲೆ ತಲಕಾಡು ಪ್ರದೇಶದಲ್ಲಿ ಯುದ್ದದಲ್ಲಿ ಗೆದ್ದ ಸಂಭ್ರಮಕ್ಕೆ ಒಂದು ಸುಂದರವಾದ ದೇವಾಲಯವನ್ನು ನಿರ್ಮಿಸಬೇಕು ಎಂದುಕೊಂಡನು. ಇದುವರೆವಿಗೂ ಯಾರು ನಿರ್ಮಿಸಿರಬಾರದು ಹಾಗೂ ಚರಿತ್ರೆಯಲ್ಲಿ ಮತ್ತೆ ಯಾರು ನಿರ್ಮಿಸಬಾರದು ಅಂತಹ ದೇವಾಲಯವನ್ನು ನಿರ್ಮಿಸಲು ತನ್ನ ಮಂತ್ರಿಗೆ ತಿಳಿಸಿದ.


PC:YOUTUBE

ಯಾವ ಮೂರ್ತಿ

ಯಾವ ಮೂರ್ತಿ

ಈ ದೇವಾಲಯವನ್ನು ಶಿವನು ಹಾಗೂ ಮಹಾ ವಿಷ್ಣುವಿನ ಸುಂದರವಾದ ದೇವಾಲಯವಾಗಿದೆ. ಈ ದೇವಾಲಯವನ್ನು ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ರಮಣೀಯ ವಾಸ್ತು ಶಿಲ್ಪಗಳನ್ನು ಹೊಂದಿರುವ ದೇವಾಲಯವಾಗಿದೆ. ಈ ಅದ್ಭುತ ದೇವಾಲಯವನ್ನು ಯುನೆಸ್ಕು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲಾಗಿದೆ.


PC:YOUTUBE

ಹೋಯ್ಸಳೇಶ್ವರ ದೇವಾಲಯ

ಹೋಯ್ಸಳೇಶ್ವರ ದೇವಾಲಯ

ಈ ದೇವಾಲಯವನ್ನು ಹೋಯ್ಸಳೇಶ್ವರ ದೇವಾಲಯ ಹಾಗೂ ಸಂತಾಲೇಶ್ವರ ದೇವಾಲಯವೆಂದೂ ಸಹ ಕರೆಯುತ್ತಾರೆ. ವಿಷ್ಣು ವರ್ಧನನ ಪತ್ನಿ ಹೆಸರು ಸಂತಾಲ ಹಾಗಾಗಿ ಆಕೆಯ ಹೆಸರಿನ ಸೂಚಕವಾಗಿ ಸಂತಾಲೇಶ್ವರ ದೇವಾಲಯವೆಂದೂ ಸಹ ಕರೆಯುತ್ತಾರೆ.

PC:YOUTUBE

ಅದ್ಭುತ ಶಿಲ್ಪಗಳು

ಅದ್ಭುತ ಶಿಲ್ಪಗಳು

ಈ ದೇವಾಲಯದಲ್ಲಿ ಸಾವಿರಾರು ಅದ್ಭುತ ಶಿಲ್ಪಕಲೆಗಳನ್ನು ಕಾಣಬಹುದಾಗಿದೆ. ಸೂಕ್ಷ್ಮ ಕೇತ್ತನೆಗಳಿಂದ ದೇವಾಲಯದ ವೈಭವವನ್ನು ಕಣ್ಣಾರೆ ಕಂಡೇ ಅನುಭವಿಸಬೇಕು. ಅಂದಿನ ರಾಜರ ಕಲಾ ನೈಪುಣ್ಯತೆಯನ್ನು ಎಷ್ಟು ಹೊಗಳಿದರು ಸಾಲುದು.

PC:YOUTUBE

ವಿಶಿಷ್ಟತೆ

ವಿಶಿಷ್ಟತೆ

ಈ ಚೆನ್ನ ಕೇಶವ ದೇವಾಲಯದಲ್ಲಿರುವ ಒಂದು ಸ್ತಂಭವು ಅತ್ಯಂತ ಆಶ್ಚರ್ಯಕರವಾಗಿ ನಿರ್ಮಿಸಿದ್ದಾರೆ. ಅದೇನೆಂದರೆ ಈ ದೇವಾಲಯದಲ್ಲಿರುವ ಸ್ತಂಭವು ಹೇಗೆ ಬೇಕು ಹಾಗೆ ತಿರುಗಿಸಬಹುದಂತೆ. ಈ ಸ್ತಂಭವನ್ನು ನಿರ್ಮಿಸಿದ ಅಂದಿನ ಟೆಕ್ನಾಲಜಿಯನ್ನು ಮೆಚ್ಚಲೇ ಬೇಕು ಅಲ್ಲವೇ?

PC:i10ian


ನರಸಿಂಹ ಸ್ವಾಮಿ ಸ್ತಂಭ

ನರಸಿಂಹ ಸ್ವಾಮಿ ಸ್ತಂಭ

ಬೇಲೂರಿನ ಚೆನ್ನಕೇಶವ ದೇವಾಲಯದ ಮಧ್ಯೆ ಭಾಗದಲ್ಲಿ ನರಸಿಂಗ ಸ್ವಾಮಿಯ ಸ್ತಂಭವಿದೆ. ಈ ಸ್ತಂಭದ ಬಗ್ಗೆ ಆನೇಕ ರಾಮಾಯಣ, ಮಹಾಭಾರತ ಪುರಾಣಗಳಲ್ಲಿ ಉಲ್ಲೇಖವಿದೆ. ಈ ಸ್ತಂಭವು ತನಗೆ ತಾನೆ ತಿರುಗುತ್ತಿದ್ದು ಇದನ್ನು ಆರ್ಕಿಯಾಲಜಿವರು ಈ ಸ್ತಂಭವು ತಿರುಗುವುದನ್ನು ನಿಲ್ಲಿಸಿದರು ಎಂದು ತಿಳಿದು ಬಂದಿದೆ.


PC:Philip Larson


ಭಾರತ ದೇಶದ ದೊಡ್ಡ ನಾಲ್ಕನೇ ದೊಡ್ಡ ನಂದಿ

ಭಾರತ ದೇಶದ ದೊಡ್ಡ ನಾಲ್ಕನೇ ದೊಡ್ಡ ನಂದಿ

ಈ ದೇವಾಲಯದಲ್ಲಿ ಭಾರತದಲ್ಲಿಯೇ ಅತ್ಯಂತ ದೊಡ್ಡದಾದ ನಂದಿ ನೆಲೆಸಿದೆ. ಸಾಮಾನ್ಯವಾಗಿ ಮಹಾ ಶಿವನ ಮುಂದೆ ನಂದಿ ನೆಲೆಸಿರುವುದು ಸಾಮಾನ್ಯ ಆದರೆ ವಿಷ್ಣು ವರ್ಧನ ಚಕ್ರವರ್ತಿಯು ತಾನು ನಿರ್ಮಿಸುವ ದೇವಾಲಯವನ್ನು ಚರಿತ್ರೆಯನ್ನು ಸ್ಮರಣೆಯಾಗಬೇಕೆಂದು ನಿರ್ಮಿಸಿರುವ ದೇವಾಲಯ ಇದಾಗಿದೆ.

PC:YOUTUBE

ಭರತನಾಟ್ಯ ಕಾರಿಣಿ

ಭರತನಾಟ್ಯ ಕಾರಿಣಿ

ವಿಷ್ಣು ವರ್ಧನನ ರಾಣಿ ಸಂತಾಲ ಪ್ರಸಿದ್ಧ ಭರತನಾಟ್ಯಕಾರಿಣಿ. ಅಕೆಯ ಅಭಿರುಚಿಯ ಮೇರೆಗೆ ಈ ದೇವಾಲಯದ ಆನೇಕ ಭರತನಾಟ್ಯ ಭಂಗಿಯನ್ನು ಇರುವ ಶಿಲ್ಪಗಳನ್ನು ನಾವು ಇಲ್ಲಿ ನೋಡಬಹುದಾಗಿದೆ.


PC:YOUTUBE

ಎಲ್ಲಿದೆ?

ಎಲ್ಲಿದೆ?

ಬೇಲೂರು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದೆ. ಇದು ಹಾಸನ ನಗರದಿಂದ ಸುಮಾರು 40 ಕಿ,ಮೀ ಹಾಗೂ ಬೆಂಗಳೂರಿನಿಂದ 220 ಕಿ,ಮೀ ದೂರದಲ್ಲಿದೆ.


PC:YOUTUBE

ಪ್ರವಾಸಿರು

ಪ್ರವಾಸಿರು

ಕರ್ನಾಟಕದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ ಅದರಲ್ಲಿ ಅತ್ಯಂತ ಅದ್ಭುತವಾದ ಹಾಗೂ ಶಿಲ್ಪಕಲೆಗಳಿಗೆ ಹೆಸರುವಾಸಿಯಾದ ದೇವಾಲಯವೆಂದರೆ ಅದು ಹೊಯ್ಸಳರ ಬೇಲೂರು. ಸುಮಾರು 116 ವರ್ಷಗಳು ಸತತವಾಗಿ ನಿರ್ಮಿಸಲಾದ ಈ ದೇವಾಲಯವನ್ನು ದೇಶದ ಮೂಲೆ ಮೂಲೆಯಿಂದಲೇ ಅಲ್ಲದೆ ವಿದೇಶಗಳಿಂದಲೂ ಸಹ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

PC:YOUTUBE

ಮದನಿಕೆಯರು

ಮದನಿಕೆಯರು

ಈ ಸುಂದರವಾದ ದೇವಾಲಯದಲ್ಲಿ ಹೆಣ್ಣಿಗೆ ಪ್ರತಿನಿಧಿಸುವ ದರ್ಪಣ ಸುಂದರಿ, ಗಿಣಿ ಜೊತೆ ಮಹಿಳೆ, ಬೇಟೆಗಾರ ಮತ್ತು ಭಾಸ್ಮ ಮೊಹಿನಿ ಇನ್ನೂ ಹಲವಾರು ಶೀಲಾಬಾಲಿಕೆಯರು, ಮದನಿಕೆಯರು ಇದ್ದಾರೆ.


PC:YOUTUBE

ನೋಡಲೇಬೇಕಾದ ದೇವಾಲಗಳು

ನೋಡಲೇಬೇಕಾದ ದೇವಾಲಗಳು

ಇಲ್ಲಿ ಪ್ರಸಿದ್ಧವಾದ ದೇವಾಲಯಗಳೆಂದರೆ ಹಳೇಬೀಡು, ಕೇದಾರೇಶ್ವರ ದೇವಾಲಯ, ಇನ್ನೂ ಸ್ವಲ್ಪ ದೂರದಲ್ಲಿನ ಪ್ರಸಿದ್ದವಾದ ಪ್ರವಾಸಿ ತಾಣಗಳೆಂದರೆ ಚಿಕ್ಕಮಂಗಳೂರು ಬೇಲೂರಿನಿಂದ ಸುಮಾರು 20 ಕಿ,ಮೀ, ಕುದುರೆಮುಖಕ್ಕೆ 64 ಕಿ,ಮೀ, ಅಗುಂಬೆಗೆ ಸುಮಾರು 91 ಕಿ,ಮೀ, ಕೂರ್ಗ್‍ಗೆ ಸುಮಾರು 83 ಕಿ,ಮೀ ಇನ್ನೂ ಹಲವು.


PC:YOUTUBE

ವಿಮಾನ ಮಾರ್ಗದ ಮೂಲಕ

ವಿಮಾನ ಮಾರ್ಗದ ಮೂಲಕ

ಬೇಲೂರುಗೆ ಯಾವುದೇ ವಿಮಾನ ಮಾರ್ಗವಿಲ್ಲ. ಹಾಗಾಗಿ ಸಮೀಪದ ವಿಮಾನ ಮಾರ್ಗವೆಂದರೆ ಅದು ಬಜ್‍ಪೆ ವಿಮಾನ ನಿಲ್ದಾಣ. ಇಲ್ಲಿಂದ ಬೇಲೂರಿಗೆ ಸುಮಾರು 114 ಕಿ,ಮೀ ದೂರದಲ್ಲಿದೆ.

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ಬೇಲೂರಿಗೆ ತಲುಪಲು ಸಕಲೇಶ್‍ಪುರ ಸಮೀಪದ ರೈಲ್ವೆ ನಿಲ್ದಾಣವಾಗಿದೆ. ಇಲ್ಲಿಂದ ಬೇಲೂರಿಗೆ ಸುಮಾರು 26 ಕಿ,ಮೀ ಅಂತರದಲ್ಲಿದೆ. ಮತ್ತೊಂದು ರೈಲ್ವೆ ನಿಲ್ದಾಣವೆಂದರೆ ಅದು ಹಾಸನ ಜಂಗಷನ್. ಇಲ್ಲಿಂದ ಸುಮಾರು 31 ಕಿ,ಮೀ ದೂರದಲ್ಲಿ ಬೇಲೂರು ಇದೆ.

ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ಬೇಲೂರಿಗೆ ಹಲವಾರು ನಗರಗಳಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‍ಗಳ ವ್ಯವಸ್ಥೆ ಇದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X