Search
  • Follow NativePlanet
Share
» »ನಮ್ಮ ಈ ಹಣುಮನ ನೋಡಿದಿರಾ.....!

ನಮ್ಮ ಈ ಹಣುಮನ ನೋಡಿದಿರಾ.....!

ತಮಿಳುನಾಡು ರಾಜ್ಯದಲ್ಲಿರುವ ನಾಮಕ್ಕಲ್ ಒಂದು ಜಿಲ್ಲೆಯಾಗಿದ್ದು ಈ ಜಿಲ್ಲೆಯ ನಾಮಕ್ಕಲ್ ತಾಲೂಕು ಪಟ್ಟಣದಲ್ಲಿರುವ ಸುಪ್ರಸಿದ್ಧ ಆಂಜನೇಯನ ದೇವಾಲಯವೆ ನಾಮಕ್ಕಲ್ ಆಂಜನೇಯರ್

By Vijay

"ಹಣುಮನ ನೋಡಿದಿರಾ.....ನಮ್ಮ ಹಣುಮನ ನೋಡಿದಿರಾ" ಎಂಬ ಡಾ. ರಾಜ್ ಅವರ ಮಧುರ ಕಂಠದಲ್ಲಿ ಹಣುಮನ ಈ ಭಕ್ತಿಗೀತೆಯನ್ನು ನಿಮ್ಮಲ್ಲಿ ಬಹುತೇಕರು ಕೇಳಿರಲೇಬೇಕು. ರಾಮಚಂದ್ರನ ಪರಮ ಭಕ್ತನಾದ, ಅಂಜನಿಪುತ್ರನಾದ, ಕೇವಲ ನಾಮ ಜಪದಿಂದಲೆ ದುಷ್ಟ ಶಕ್ತಿಗಳು ದೂರವಾಗುವ ಹಣುಮನ ಕುರಿತು ಯಾರಿಗೆ ತಾನೆ ಗೊತ್ತಿಲ್ಲ.

ಹಿಂದು ಪೌರಾಣಿಕತೆಯ ಅಪ್ರತಿಮ ವೀರ ಅಥವಾ "ಸೂಪರ್ ಮ್ಯಾನ್" ನಮ್ಮ ಅಂಜನಾಸುತ ಹಣುಮಂತ. ಆಂಜನೇಯನಿಗೆ ಮುಡಿಪಾದ ಹಲವಾರು ದೇವಾಲಯಗಳು, ಕ್ಷಮಿಸಿ ಸಹಸ್ರಾರು ದೇವಾಲಯಗಳು ಭಾರತದಾದ್ಯಂತ ಕಾಣಬಹುದಾಗಿದೆ. ಅದೆಷ್ಟೊ ದೇವಾಲಯಗಳು ಶಕ್ತಿಶಾಲಿ ಹಣುಮಂತನ ಜಾಗೃತ ಹಾಗೂ ಪ್ರಭಾವಿ ದೇವಾಲಯಗಳಾಗಿಯೂ ಗಮನಸೆಳೆಯುತ್ತವೆ.

ನಮ್ಮ ಈ ಹಣುಮನ ನೋಡಿದಿರಾ.....!
ಚಿತ್ರಕೃಪೆ: namakkalnarasimhaswamyanjaneyartemple.org

ಅಂತೆಯೆ ಪ್ರತಿನಿತ್ಯ ಇಂತಹ ದೇವಾಲಯಗಳಿಗೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ಭೇಟಿ ನೀಡುತ್ತಲೆ ಇರುತ್ತಾರೆ. ಪ್ರಸ್ತುತ ಲೇಖನದಲ್ಲಿ ಹಣುಮನ ವಿಶಾಲ ಗಾತ್ರದ ಪ್ರತಿಮೆಯಿರುವ ಹಾಗೂ ಆ ಪ್ರದೇಶದ ಅತ್ಯಂತ ಜನಪ್ರೀಯವಾಗಿರುವ ದೇವಾಲಯವೊಂದರ ಕುರಿತು ತಿಳಿಸಲಾಗಿದೆ. ಇವನೆ ನಾಮಕ್ಕಲ್ ಹಣುಮಂತ ಅಥವಾ ನಾಮಕ್ಕಲ್ ಆಂಜನೇಯನ ದೇವಾಲಯ.

ತಮಿಳುನಾಡು ರಾಜ್ಯದಲ್ಲಿರುವ ನಾಮಕ್ಕಲ್ ಒಂದು ಜಿಲ್ಲೆಯಾಗಿದ್ದು ಈ ಜಿಲ್ಲೆಯ ನಾಮಕ್ಕಲ್ ತಾಲೂಕು ಪಟ್ಟಣದಲ್ಲಿರುವ ಸುಪ್ರಸಿದ್ಧ ಆಂಜನೇಯನ ದೇವಾಲಯವೆ ನಾಮಕ್ಕಲ್ ಆಂಜನೇಯರ್ ಅಥವಾ ನಾಮಕ್ಕಲ್ ಆಂಜನೇಯ ದೇವಾಲಯ. ಈ ದೇವಾಲಯದಲ್ಲಿ ಆಮ್ಜನೇಯನು ಹದಿನೆಂಟು ಅಡಿಗಳಷ್ಟು ಎತ್ತರವಾಗಿದ್ದು ವೀರಬಾಹುವಾಗಿ, ಅಪ್ರತಿಮ ವೀರನಾಗಿ ಹಾಗೂ ರಾಮನ ಅವತಾರ ನರಸಿಂಹನನ್ನು ಪೂಜಿಸುತ್ತಿರುವ ಭಂಗಿಯಲ್ಲಿದ್ದಾನೆ.

ನಮ್ಮ ಈ ಹಣುಮನ ನೋಡಿದಿರಾ.....!
ಚಿತ್ರಕೃಪೆ: Booradleyp

ವಿಶೇಷವೆಂದರೆ ಇಲ್ಲಿ ಆಂಜನೇಯನು ಕೈಗಳಲ್ಲಿ ಜಪಮಾಲೆ ಹಿಡಿದು ನಮಸ್ಕರಿಸುತ್ತ ಟೊಂಕದಲ್ಲಿ ಕತ್ತಿಯನ್ನು ಹೊಂದಿರುವ ಭಂಗಿಯಲ್ಲಿ ನಿಂತಿರುವುದು. ಆತ್ಮವಿಶ್ವಾಸ ಮತ್ತು ಧೈರ್ಯಗಳ ಕೊರತೆಯಿರುವವರು ಹಾಗೂ ಶೈಕ್ಷಣಿಕವಾಗಿ ಉನ್ನತಿಯನ್ನು ಸಾಧಿಸಬಯಸುವವರು ವಿಶೇಷವಾಗಿ ನಾಮಕ್ಕಲ್ ಹಣುಮಂತನ ದರ್ಶನ ಪಡೆಯುತ್ತಾರೆ ಹಾಗೂ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಇದರಿಂದ ಅಪೇಕ್ಷಿತ ಫಲ ಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿದೆ.

ಈ ದೇವಾಲಯಕ್ಕೆ ಸಂಬಂಧಿಸಿದಂತೆ ರೋಚಕವಾದ ಪ್ರಸಂಗವೊಂದು ಪುರಾಣಗಳಲ್ಲಿ ಕೇಳಿಬರುತ್ತದೆ. ಆ ಪ್ರಕಾರವಾಗಿ, ಒಂದೊಮ್ಮೆ ಆಂಜನೇಯನು ಇಂದಿನ ನೇಪಾಳದಲ್ಲಿರುವ ಗಂಡಕಿ ನದಿಯಲ್ಲಿ ಸ್ನಾನ ಮಾಡುವಾಗ ಅದ್ಭುತವಾದ ನಾರಾಯಣನ ರುಪವಿರುವ ಸಾಲಿಗ್ರಾಮವೊಂದು ದೊರಕುತ್ತದೆ. ಅದನ್ನು ತೆಗೆದುಕೊಂಡು ಹೊರಟ ಹನುಮನು ಈ ಸ್ಥಳದ ಮೂಲಕ ಹಾದು ಹೋಗುತ್ತಾನೆ.

ನಮ್ಮ ಈ ಹಣುಮನ ನೋಡಿದಿರಾ.....!
ಚಿತ್ರಕೃಪೆ: namakkalnarasimhaswamyanjaneyartemple.org

ಈ ಸ್ಥಳಕ್ಕಾಗಮಿಸಿದ್ದಾಗ ಆಗಲೆ ಸಾಯಂಕಾಲದ ಸಮಯವಾಗಿದ್ದರಿಂದ ನಿತ್ಯಕರ್ಮ ಮಾಡಬೇಕಾದ ಸಂದರ್ಭ ಒದಗಿ ಬಂದು, ಆದರೆ ಸಾಲಿಗ್ರಾಮವನ್ನು ಭೂಮಿಯ ಮೇಲಿಡಬಾರದ ಕಾರಣ ಅತ್ತ ಇತ್ತ ನೋಡುತ್ತಿರುವಾಗ. ಜಗನ್ಮಾತೆ ಲಕ್ಷ್ಮಿ ದೇವಿಯು ತಪಸ್ಸು ಮಾಡುತ್ತಿರುವುದನ್ನು ಕಂದು ಅವಳ ಬಳಿ ತೆರಳಿ ವಿಅಚಾರಿಸುತ್ತಾನೆ. ಆಗ ಲಕ್ಷ್ಮಿಯು ನಾರಾಯಣನ ನರಸಿಂಹ ಅವತಾರವನ್ನು ನೋಡುವ ತವಕದಿಂದ ಧ್ಯಾನಿಸುತ್ತಿರುವ ವಿಷಯ ತಿಳಿಸುತ್ತಾಳೆ.

ಹನುಮನು ತನ್ನ ಸಾಲಿಗ್ರಾಮವನ್ನು ಅವಳ ಕೈಗೆ ಕೊಟ್ಟು ತಾನು ಬರುವವರೆಗೆ ಭೂಮಿಯ ಮೆಲಿಡದಿರಲು ಪ್ರಾರ್ಥಿಸುತ್ತಾನೆ ಹಾಗೂ ಇಂತಿಷ್ಟ ಸಮಯದಲ್ಲೆ ಬರುವೆನೆಂದು ಹೇಳಿ ಹೊರಡುತ್ತಾನೆ. ನಂತರ ಅವನು ತಾನು ಹೇಳಿದ ಸಮಯಕ್ಕೆ ಮರಳದಾದಾಗ ಲಕ್ಷ್ಮಿಯು ಧ್ಯಾನ ಮುಂದುವರೆಸುವ ಉದ್ದೇಶದಿಂದ ಆ ಸಾಲಿಗ್ರಾಮವನ್ನು ಅಲ್ಲಿಯೆ ಭೂಮಿಯ ಮೇಲಿಡುತ್ತಾಳೆ. ಹಾಗೆ ಇಟ್ಟ ತಕ್ಷಣ ಸಾಲಿಗ್ರಾಮ ಬೆಳೆಯಲಾರಂಭಿಸುತ್ತದೆ.

ನಮ್ಮ ಈ ಹಣುಮನ ನೋಡಿದಿರಾ.....!
ಆಂಜನೆಯ ದೇಗುಲದ ಎದುರಿಗಿರುವ ನರಸಿಂಹನ ದೇವಾಲಯ, ಚಿತ್ರಕೃಪೆ: Ilasun

ಹೀಗೆ ಬೆಳೆದು ಬೆಟ್ಟದ ರೂಪ ತಾಳುತ್ತದೆ ಆ ಸಾಲಿಗ್ರಾಮ. ತದನಂತರ ಅದರ ಮುಂದೆ ನರಸಿಂಹನು ಪ್ರತ್ಯಕ್ಷನಾಗಿ ಲಕ್ಷ್ಮಿ ಹಾಗೂ ಹಣುಮರಿಬ್ಬರಿಗೂ ದರ್ಶನ ನೀಡುತ್ತಾನೆ. ತದ ನಂತರ ಅಲ್ಲಿಯೆ ಲಕ್ಷ್ಮಿ-ನರಸಿಂಹನಾಗಿ ನೆಲೆಸುತ್ತಾನೆ. ತನ್ನ ಸ್ವಾಮಿಯ ಅಗಾಧ ರೂಪ ಕಂಡು ತನ್ಮಯನಾದ ಹನುಮನೂ ಸಹ ಅವನನ್ನು ಸ್ತುತಿಸುತ್ತ ಅಲ್ಲಿಯೆ ನೆಲೆಸುತ್ತಾನೆ. ಹಾಗಾಗಿ ಇಂದಿಗೂ ಆಂಜನೇಯನ ದೇವಾಲಯದ ಎದುರಿಗೆ ನರಸಿಂಹನ ದೇಗುಲವಿರುವುದನ್ನು ಇಲ್ಲಿ ಕಾಣಬಹುದಾಗಿದೆ.

ದ.ಭಾರತದ ಹನುಮನ ವಿಶೇಷ ದೇವಸ್ಥಾನಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X