Search
  • Follow NativePlanet
Share
» »ಕೊಲಂಜಿ ಕಾಡಿನ ಮುರುಗನ ದೇಗುಲ!

ಕೊಲಂಜಿ ಕಾಡಿನ ಮುರುಗನ ದೇಗುಲ!

ಕೊಲಂಜಿಯಪ್ಪಾರ್ ದೇವಾಲಯವು ತಮಿಳುನಾಡಿನ ಕಡಲೂರು ಜಿಲ್ಲೆಯ ವಿರುಧಾಲಂ ಪಟ್ಟಣದ ಹೊರವಲಯದಲ್ಲಿರುವ ಮನವಲನಲ್ಲೂರು ಎಂಬ ಹಳ್ಳಿಯಲ್ಲಿ ಸ್ಥಿತವಿದೆ

By Vijay

ಇದೊಂದು ಮುರುಗನ ವಿಶಿಷ್ಟ ದೇವಾಲಯವಾಗಿದೆ. ಅಪ್ಪನ ಅಣತಿಯಂತೆ ಕುಮಾರಸ್ವಾಮಿಯು ಈ ಸ್ಥಳಕ್ಕೆ ಬಂದು ಅಪ್ಪನನ್ನು ಮೆಚ್ಚಿಸಿ ಕೊನೆಗೆ ಶಿವನ ಇಚ್ಛೆಯಂತೆ ಇಲ್ಲಿಯೆ ನೆಲೆಸಿ ಸಕಲ ಭಕ್ತಾದಿಗಳನ್ನು ಹರಸುತ್ತಿರುವ ಹರಸುತ್ತಿರುವನೆಂಬ ನಂಬಿಕೆಯು ಇಲ್ಲಿ ಪ್ರಚಲಿತದಲ್ಲಿದೆ.

ಭಕ್ತರು ಸಾಕಷ್ಟು ಬೆಡಿಕೆಗಳನ್ನಿಟ್ಟು ಅದನ್ನು ಪೂರಸುವಂತೆ ಈ ಮುರುಗನನ್ನು ಕೇಳಿಕೊಂಡು ತರುವಾಯ ಅವು ಪೂರ್ಣಗೊಂಡ ನಂತರ ವಿಶೇಷ ಪೂಜೆಗಳನ್ನು ನೆರವೇರಿಸುತ್ತಾರೆ. ಕುರಿ, ಕೋಳಿ, ಆಡುಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ಅಲ್ಲದೆ ಬೇಡಿಕೊಂಡ ಭಕ್ತನ ತೂಕದಷ್ಟೆ ವಸ್ತುಗಳನ್ನೂ, ಧನ-ಕನಕಗಳನ್ನೂ ಸಹ ಸಮರ್ಪಿಸಲಾಗುತ್ತದೆ.

ಕೊಲಂಜಿ ಕಾಡಿನ ಮುರುಗನ ದೇಗುಲ!

ಚಿತ್ರಕೃಪೆ: கி. கார்த்திகேயன்

ಇನ್ನೊಂದು ವಿಶೇಷವೆಂದರೆ, ಪೌರಾಣಿಕ ಕಥೆಗಳಲ್ಲಿ ಹೇಳಲಾಗುವಂತೆ ಮನುಷ್ಯನು ದೇವರನ್ನು ಮೆಚ್ಚಿಸಲು ತನ್ನ ದೇಹದ ಭಾಗಗಳನ್ನೆ ಕತ್ತರಿಸಿ ಸಮರ್ಪಿಸುತ್ತಿದ್ದನಂತೆ. ಅಂತಹ ಒಂದು ಆಚರಣೆಯು ಇಲ್ಲಿದೆಯಾದರೂ ಗಾಬರಿಯಾಗದಿರಿ ಅದು ಕೇವಲ ಸಾಂಕೇತಿಕವಾಗಿ ಮಾತ್ರ. ಅಂದರೆ ದೇಹದ ವಿವಿಧ ಭಾಗಗಳ ಟಿನ್ ನಿಂದ ಮಾಡಲಾದ ಚಿಕ್ಕ ಚಿಕ್ಕ ಪ್ರತಿರೂಪಗಳನ್ನು ಈ ಮುರುಗನಿಗೆ ಅರ್ಪಿಸಲಾಗುತ್ತದೆ.

ಮೂಲತಃ ಈ ದೇವಾಲಯವು ತಮಿಳಿನ ಶೈವ ಸಂತರಾಗಿದ್ದ ಸುಂದರರ್ ಅವರಿಗೆ ಸಂಬಂಧಿಸಿದಂತೆ ದಂತಕಥೆಯೊಂದನ್ನು ಹೊಂದಿದೆ. ಆ ಪ್ರಕಾರವಾಗಿ ಸುಂದರರ್ ಅವರು ಶಿವನ ಪರಮ ಭಕ್ತರಾಗಿದ್ದರು ಹಾಗೂ ಸಿಹವನ ಕುರಿತು ಅನೇಕ ಗೀತೆಅಗಳನ್ನು, ಪದ್ಯಗಳನ್ನು ರಚಿಸಿ, ಸಂಯೋಜಿಸಿ ತುಂಬು ಹೃದಯದಿಂದ ಹಾಡುತ್ತಿದ್ದರು. ಶಿವನ ನೆಲೆಗಳಿಗೆ ಭೇಟಿ ನೀಡುತ್ತ ಶಿವನನ್ನು ಸದಾ ಸ್ತುತಿಸುವಲ್ಲಿ ಮಗ್ನರಾಗಿರುತ್ತಿದ್ದರು.

ತಮಿಳುನಾಡಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕೊಲಂಜಿ ಕಾಡಿನ ಮುರುಗನ ದೇಗುಲ!

ಚಿತ್ರಕೃಪೆ: கி. கார்த்திகேயன்

ವೃದ್ಧಾಪ್ಯದಲ್ಲಿ ಸುಂದರರ್ ಅವರು ಒಂದೊಮ್ಮೆ ಈ ದೇವಾಲಯವಿರುವ ಸ್ಥಳಕ್ಕೆ ಬಂದು ಶಿವನ ರೂಪವಾದ ವೃದ್ಧಗಿರೀಶ್ವರರ್ ಕುರಿತು ಮನಸಿನಿಂದ ಹಾಡಿ ಸ್ತುತಿಸಿದರು. ನಂತರ ಅವರು ತಮ್ಮ ಸಂಚಾರವನ್ನು ಕೈಗೊಂಡರು. ಅವರು ಹಾಡಿದ್ದ ಗೀತೆಯಿಂದ ಶಿವನು ಎಷ್ಟು ಸಂತುಷ್ಟನಾದನೆಂದರೆ ಮತ್ತೊಮ್ಮೆ ಅದೆ ಸ್ಥಳದಲ್ಲಿ ಅವರು ಬಂದು ಹಾಡುವುದನ್ನು ಕೇಳಬಯಸಿದ.

ಅದಕ್ಕಾಗಿ ಮುರುಗನನ್ನು ಕರೆದು ಸುಂದರರ್ ಮತ್ತೆ ಅಲ್ಲಿ ಬಂದು ಹಾಡುವಂತೆ ಮಾಡಬೇಕೆಂದು ಅವನಲ್ಲಿ ಕೇಳಿದ. ಅದಕ್ಕಾಗಿ ಮುರುಗನು ಬೇಟೆಗಾರನೊಬ್ಬನ ವೇಷದಲ್ಲಿ ಬಂದನು. ಈ ಸಮಯದಲ್ಲಿ ಕೊಲಂಜಿ ಅರಣ್ಯದಲ್ಲಿ ಸಂಚರಿಸುತ್ತಿದ್ದ ಸುಂದರರ್ ಸಂತರಿಗೆ ಎದುರಾಗಿ ಅವರ ಬಳಿಯಿದ್ದ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡನು.

ಕೊಲಂಜಿ ಕಾಡಿನ ಮುರುಗನ ದೇಗುಲ!

ಚಿತ್ರಕೃಪೆ: கி. கார்த்திகேயன்

ಸುಂದರರ್ ಬೆಟೆಗಾರನ ಕುರಿತು ತನ್ನ ವಸ್ತುಗಳನು ಮರಳಿಸುವಂತೆ ಪರಿ ಪರಿಯಾಗಿ ಬೇಡಿದಾಗ ಬೇಟೆಗಾರ ತಾನು ಹೇಳುವ ಸ್ಥಳಕ್ಕೆ ಬರಬೇಕೆಂದು ಆದೇಶಿಸಿದ ಹಾಗೂ ಆ ಸ್ಥಳವು ಈ ಹಿಂದೆ ಸುಂದರರ್ ಅವರು ನಿಂತು ಶಿವನನ್ನು ಹಾಡಿ ಹೊಗಳಿದ ಸ್ಥಳವೆ ಆಗಿತ್ತು. ಇದು ದೈವೆಚ್ಚೆ ಎಂಬುದನ್ನು ಅರಿತ ಅವರು ಹಾಗೆಯೆ ಮಾಡಿದರು. ಕೊನೆಗೆ ಮುರುಗನ್ ಪ್ರತ್ಯಕ್ಷನಾಗಿ ಅವರನ್ನು ಹರಸಿ ಅವರ ಕೋರಿಕೆಯಂತೆ ಇಲ್ಲಿಯೆ ನೆಲೆಸಿದ.

ಕದ್ದಿರಾಂಪುರದ ಮುರುಗನ ದೇವಾಲಯ

ಹಾಗೆ ನೆಲೆಸಿದ ಮುರುಗನೆ ಇಂದು ಇಲ್ಲಿ ಕೊಲಂಜಿಯಪ್ಪರ್ ಎಂದು ಪ್ರಸಿದ್ಧನಾಗಿದ್ದಾದೆ ಹಾಗೂ ಈ ದೇವಾಲಯವು ಕೊಲಂಜಿಯಪ್ಪರ್ ದೇವಾಲಯ ಎಂದೆ ಪ್ರಸಿದ್ಧವಾಗಿದೆ. ಕೊಲಂಜಿಯಪ್ಪಾರ್ ದೇವಾಲಯವು ತಮಿಳುನಾಡಿನ ಕಡಲೂರು ಜಿಲ್ಲೆಯ ವಿರುಧಾಲಂ ಪಟ್ಟಣದ ಹೊರವಲಯದಲ್ಲಿರುವ ಮನವಲನಲ್ಲೂರು ಎಂಬ ಹಳ್ಳಿಯಲ್ಲಿ ಸ್ಥಿತವಿದ್ದು ತೆರಳಲು ಕಡಲೂರಿನಿಂದ ಬಸ್ಸುಗಳು ದೊರೆಯುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X