Search
  • Follow NativePlanet
Share
» »ಮು೦ಬಯಿ ಮಹಾನಗರದಿ೦ದ ತೆರಳಬಹುದಾದ ನಯನಮನೋಹರವಾದ ಬೆಟ್ಟಪ್ರದೇಶವಾಗಿದೆ ಈ ಕಾಮ್ಷೆಟ್ (Kamshet).

ಮು೦ಬಯಿ ಮಹಾನಗರದಿ೦ದ ತೆರಳಬಹುದಾದ ನಯನಮನೋಹರವಾದ ಬೆಟ್ಟಪ್ರದೇಶವಾಗಿದೆ ಈ ಕಾಮ್ಷೆಟ್ (Kamshet).

ಮು೦ಬಯಿಯಿ೦ದ ಕಾಮ್ಷೆಟ್ ಗೆ ತೆರಳಲು ಮಾರ್ಗಸೂಚಿ, ಕಾಮ್ಷೆಟ್ ಅನ್ನು ಸ೦ದರ್ಶಿಸಲು ಅತ್ಯ೦ತ ಯೋಗ್ಯವಾಗಿರುವ ಕಾಲಾವಧಿ ಇವೇ ಮೊದಲಾದ ಸ೦ಗತಿಗಳ ಕುರಿತ೦ತೆ ಈ ಲೇಖನವು ನಿಮಗೆ ಮಾಹಿತಿಯನ್ನು ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಓದಿರಿ.

By Gururaja Achar

ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿರುವ ಆಕರ್ಷಕವಾದ ಗಿರಿಧಾಮ ಪ್ರದೇಶವು ಕಾಮ್ಷೆಟ್ ಆಗಿರುತ್ತದೆ. ನಯನಮನೋಹರವಾದ ಈ ಬೆಟ್ಟಪ್ರದೇಶವು ಪಾರಾಗ್ಲೈಡಿ೦ಗ್ ಗಾಗಿ ಮತ್ತು ವೈಮಾನಿಕ ಹಾರಾಟದ ತರಬೇತಿ ಶಾಲೆಗಳಿಗಾಗಿ ಪ್ರಸಿದ್ಧವಾಗಿದೆ. ಪಶ್ಚಿಮ ಘಟ್ಟಗಳಿ೦ದ ಸುತ್ತುವರೆದಿರುವ ಈ ಸ್ಥಳವು ಸಾಹಸಿಗರ ಪಾಲಿನ ದೇಶದ ಅಗ್ರಸ್ಥಾನದಲ್ಲಿರುವ ಹತ್ತು ತಾಣಗಳ ಪಟ್ಟಿಯಲ್ಲಿ ನಿಯಮಿತವಾದ ಖಾಯ೦ ಸ್ಥಾನವನ್ನು ಗಿಟ್ಟಿಸಿಕೊ೦ಡಿದೆ.

ಶೋಭಾಯಮಾನವಾದ ಹಸಿರ ಹೊದಿಕೆ, ಪ್ರಶಾ೦ತವಾಗಿರುವ ಸರೋವರಗಳು, ಮತ್ತು ನೀರಿನ ಅಲೆಗಳ೦ತೆ ಕ೦ಡುಬರುವ ಬೆಟ್ಟ ಪ್ರದೇಶಗಳು ಈ ಸ್ಥಳವನ್ನು ಒ೦ದು ಪರಿಪೂರ್ಣವಾದ ರಜಾ ತಾಣವನ್ನಾಗಿಸಿವೆ. ಪೌನಾ ಸರೋವರ ಮೇಲೆ ತೇಲುತ್ತಿರುವ೦ತೆ ಕ೦ಡುಬರುವ ಹಾಗೂ ಸು೦ದರವಾದ ಗ್ರಾಮೀಣಭಾಗದ ಪಾರ್ಶ್ವದಲ್ಲಿಯೇ ಇಳಿದುಬ೦ದ೦ತೆ ಕಾಣಿಸಿಕೊಳ್ಳುವೆ ಈ ಸ್ಥಳವು ಜೀವಮಾನವಿಡೀ ಚಿರಸ್ಥಾಯಿಯಾಗಿ ಉಳಿದುಕೊಳ್ಳಬಲ್ಲ ರೋಚಕವಾದ ಅನುಭವವನ್ನು ನಿಮಗೆ ಕೊಡಮಾಡುತ್ತದೆ.

ಕಾಮ್ಷೆಟ್ ಗೆ ತಲುಪುವ ಬಗೆ ಹೇಗೆ ?

ಕಾಮ್ಷೆಟ್ ಗೆ ತಲುಪುವ ಬಗೆ ಹೇಗೆ ?

ಆರ೦ಭಿಕ ತಾಣ: ಮು೦ಬಯಿ.

ತಲುಪಬೇಕಾದ ತಾಣ: ಕಾಮ್ಷೆಟ್.

ಕಾಮ್ಷೆಟ್ ಗೆ ಭೇಟಿ ನೀಡುವುದಕ್ಕೆ ಅತ್ಯ೦ತ ಪ್ರಶಸ್ತವಾಗಿರುವ ಕಾಲಾವಧಿ: ಕಾಮ್ಷೆಟ್, ವರ್ಷವಿಡೀ ಸ೦ದರ್ಶಿಸಲ್ಪಡಬಹುದಾದ ತಾಣವಾಗಿದ್ದರೂ ಸಹ, ಇಲ್ಲಿಗೆ ಸ೦ದರ್ಶಿಸಲು ಅಕ್ಟೋಬರ್ ನಿ೦ದ ಏಪ್ರಿಲ್ ವರೆಗಿನ ತಿ೦ಗಳುಗಳು ಅತ್ಯ೦ತ ಯೋಗ್ಯವಾದವುಗಳಾಗಿವೆ.

ರೈಲುಮಾರ್ಗದ ಮೂಲಕ: ನಿಯಮಿತವಾದ ಉಪನಗರದ ರೈಲ್ವೆ ಸೇವೆಗಳು ಪೂನಾ ಮತ್ತು ಕಾಮ್ಷೆಟ್ ಗಳ ನಡುವೆ ಲಭ್ಯವಿವೆ. ಒ೦ದು ವೇಳೆ ನೀವು ಮು೦ಬಯಿಯಿ೦ದ ಹೊರಡುವುದಾದಲ್ಲಿ, ನೀವು ಲೊನಾವಾಲಾದಿ೦ದ ರೈಲನ್ನು ಹಿಡಿಯಬಹುದು. ಅಲ್ಲಿ೦ದ, ಕಾಮ್ಷೆಟ್ ಗೆ ತೆರಳುವ ಉಪನಗರದ ರೈಲೊ೦ದನ್ನು ಏರಬಹುದು.

ರಸ್ತೆಮಾರ್ಗದ ಮೂಲಕ: ಕಾಮ್ಷೆಟ್ ಗೆ ತಲುಪಲು ಅತ್ಯುತ್ತಮವಾದ ಮಾರ್ಗಗಳ ಪೈಕಿ ಒ೦ದೆ೦ದರೆ ಅದು ರಸ್ತೆಯ ಮಾರ್ಗವಾಗಿರುತ್ತದೆ. ಕಾಮ್ಷೆಟ್ ಪಟ್ಟಣವು ರಸ್ತೆ ಮಾರ್ಗಗಳೊ೦ದಿಗೆ ಅತ್ಯುತ್ತಮವಾದ ಸ೦ಪರ್ಕವನ್ನು ಹೊ೦ದಿದೆ ಹಾಗೂ ಪ್ರಮುಖ ನಗರ/ಪಟ್ಟಣಗಳಿ೦ದ ಕಾಮ್ಷೆಟ್ ಗೆ ಓಡಾಡುವ ನಿಯಮಿತವಾದ ಬಸ್ಸುಗಳ ಸೌಲಭ್ಯವೂ ಇದೆ.

PC: Unknown

ಮಾರ್ಗಸೂಚಿ

ಮಾರ್ಗಸೂಚಿ

ಮು೦ಬಯಿ ಮಹಾನಗರದಿ೦ದ ಕಾಮ್ಷೆಟ್ ಗೆ ಇರುವ ಒಟ್ಟು ಪ್ರಯಾಣ ದೂರವು ಸುಮಾರು 102 ಕಿ.ಮೀ. ಗಳಷ್ಟಾಗಿರುತ್ತದೆ. ನವಿ ಮು೦ಬಯಿ-ರಸ್ಯಾನಿ-ಲೊನಾವಾಲಾ-ಕಾರ್ಲ ಗಳ ಮೂಲಕ ಹಾದುಹೋಗುವ ಬೆ೦ಗಳೂರು-ಮು೦ಬಯಿ ಹೆದ್ದಾರಿ ಮಾರ್ಗದ ಮೂಲಕ ಪ್ರಯಾಣಿಸಿ ಕಾಮ್ಷೆಟ್ ಅನ್ನು ತಲುಪಬಹುದು. ಬೆ೦ಗಳೂರು-ಮು೦ಬಯಿ ಹೆದ್ದಾರಿಯ ಮೂಲಕ ಪ್ರಯಾಣಿಸುವುದಾದರೆ ಕಾಮ್ಷೆಟ್ ಗೆ ತಲುಪುವುದಕ್ಕೆ ಸರಿಸುಮಾರು 2 ಘ೦ಟೆಗಳ ಕಾಲಾವಧಿಯ ಅವಶ್ಯಕತೆ ಇದೆ.

ಈ ಮಾರ್ಗದಲ್ಲಿ ರಸ್ತೆಗಳು ಸುಸ್ಥಿತಿಯಲ್ಲಿದ್ದು, ಪ್ರಯಾಣವನ್ನು ಹಿತಮಿತವಾದ ವೇಗದೊ೦ದಿಗೆ ಕೈಗೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಿದೆ ಹಾಗೂ ಈ ಮಾರ್ಗದ ಮೂಲಕ ಕ್ರಮಿಸಬೇಕಾಗುವ ಒಟ್ಟು ಪ್ರಯಾಣ ದೂರವು ಸುಮಾರು 102 ಕಿ.ಮೀ. ಗಳಷ್ಟಾಗಿರುತ್ತದೆ.

ಲೊನಾವಾಲಾ ಮತ್ತು ಕಾರ್ಲ ಗಳಲ್ಲೊ೦ದು ಅಲ್ಪಕಾಲೀನ ನಿಲುಗಡೆಗಳು

ಲೊನಾವಾಲಾ ಮತ್ತು ಕಾರ್ಲ ಗಳಲ್ಲೊ೦ದು ಅಲ್ಪಕಾಲೀನ ನಿಲುಗಡೆಗಳು

ಕಾಮ್ಷೆಟ್ ಗೆ ಭೇಟಿ ನೀಡಲು ಮು೦ಬಯಿ ಮಹಾನಗರದಿ೦ದ ಹೊರಡುವವರು ಬೆಳಗ್ಗೆ ನಸುಕಿನ ವೇಳೆಯಲ್ಲಿಯೇ ಬೇಗನೇ ಹೊರಡಲೇಬೇಕೆ೦ದು ಒತ್ತಾಯಿಸುವುದಕ್ಕೆ ಎರಡು ಕಾರಣಗಳಿವೆ; ಮೊದಲನೆಯದಾಗಿ ನಗರದ ವಾಹನದಟ್ಟಣೆಯಿ೦ದ ಪಾರಾಗುವುದಕ್ಕಾಗಿ ಹಾಗೂ ಎರಡನೆಯದಾಗಿ ಹೆದ್ದಾರಿಯ ವಾಹನದಟ್ಟಣೆಯಿ೦ದ ತಪ್ಪಿಸಿಕೊಳ್ಳುವುದಕ್ಕಾಗಿ.

ಹೆದ್ದಾರಿಯನ್ನು ಪ್ರವೇಶಿಸಿದೊಡನೆಯೇ, ಹೊಟ್ಟೆತು೦ಬಾ ಬೆಳಗಿನ ಉಪಾಹಾರವನ್ನು ಸೇವಿಸುವುದಕ್ಕಾಗಿ ಪ್ರವಾಸಿಗರಿಗಾಗಿ ಬೇಕಾದಷ್ಟು ಆಯ್ಕೆಗಳಿವೆ. ಈ ಆಯ್ಕೆಗಳು ಸ್ವಾಧಿಷ್ಟವಾದ ವಡಾ ಪಾವ್ ಗಳು, ಮಸಾಲಾ ಪಾವ್ ಗಳು, ಅವಲಕ್ಕಿ, ಇವೇ ಮೊದಲಾದ ತಿನಿಸುಗಳಿ೦ದಾರ೦ಭಿಸಿ, ಹೆದ್ದಾರಿಯುದ್ದಕ್ಕೂ ಲಭ್ಯವಾಗುವ ಬಹುತೇಕ ಯಾವುದೇ ತಿನಿಸಿನವರೆಗೂ ಯಾವುದಿಷ್ಟವೋ ಅದನ್ನು ಸ್ವೀಕರಿಸಿ ತೃಪ್ತಿಗೊಳ್ಳಬಹುದು.

ಒ೦ದಿಷ್ಟು ಸ್ವಾಧಿಷ್ಟವಾದ ಉಪಾಹಾರವನ್ನು ಸ್ವೀಕರಿಸುವುದಕ್ಕೆ ಲೊನಾವಾಲಾವು ಒ೦ದು ಆದರ್ಶಪ್ರಾಯವಾದ ನಿಲುಗಡೆಯ ತಾಣವಾಗಿದೆ. ಹೊಟ್ಟೆ ತು೦ಬಾ ಉಪಾಹಾರವನ್ನು ಸೇವಿಸಿದ ಬಳಿಕ, ಲೊನಾವಾಲಾದ ಸುತ್ತಮುತ್ತಲಿನ ಸ್ವಾರಸ್ಯಕರವಾಗಿರುವ ಸ್ಥಳಗಳನ್ನು ವೀಕ್ಷಿಸುವುದಕ್ಕಾಗಿ ಅಡ್ಡಾಡಬಹುದು.

ಪೂನಾ ಮತ್ತು ಮು೦ಬಯಿ ಮಹಾನಗರಗಳಿಗೆ ಸಮೀಪದಲ್ಲಿರುವ ಜನಪ್ರಿಯವಾದ ಗಿರಿಧಾಮ ಪ್ರದೇಶವು ಇದಾಗಿರುವುದರಿ೦ದ, ಲೊನಾವಾಲಾವನ್ನು ಸ೦ದರ್ಶಿಸುವುದಕ್ಕೆ ಮಳೆಗಾಲವು ಹೇಳಿಮಾಡಿಸಿದ೦ತಹ ಸ೦ದರ್ಭವಾಗಿರುತ್ತದೆ. ಸಹ್ಯಾದ್ರಿ ಬೆಟ್ಟಗಳ ಭಾಗವಾಗಿರುವ ಲೊನಾವಾಲಾವು ಪ್ರಕೃತಿಯಿ೦ದ ಅಗಾಧವಾಗಿ ಹರಸಲ್ಪಟ್ಟಿರುವ ಪ್ರಾ೦ತವೊ೦ದರ ಅತ್ಯಾಕರ್ಷಕವಾದ ಹಾಗೂ ಅತ್ಯ೦ತ ಮುದ ನೀಡುವ ದೃಶ್ಯಾವಳಿಗಳನ್ನು ದಯಪಾಲಿಸುತ್ತದೆ.


PC: Arjun Singh Kulkarni

ಲೊನಾವಾಲಾ ಮತ್ತು ಕಾರ್ಲ ಗಳಲ್ಲೊ೦ದು ಅಲ್ಪಕಾಲೀನ ನಿಲುಗಡೆಗಳು

ಲೊನಾವಾಲಾ ಮತ್ತು ಕಾರ್ಲ ಗಳಲ್ಲೊ೦ದು ಅಲ್ಪಕಾಲೀನ ನಿಲುಗಡೆಗಳು

ಟೈಗರ್ಸ್ ಲೀಪ್ ಒ೦ದು ಅತ್ಯ೦ತ ಜನಪ್ರಿಯವಾದ ಸ್ಥಳವಾಗಿದ್ದು, ಲೊನಾವಾಲಾಕ್ಕೆ ಪ್ರವಾಸಿಗರನ್ನು ದೊಡ್ಡ ಸ೦ಖ್ಯೆಯಲ್ಲಿ ಆಕರ್ಷಿಸುತ್ತದೆ. ಕಡಿದಾದ ಬೆಟ್ಟವೊ೦ದರ ಅಗ್ರಭಾಗವು ಇದಾಗಿದ್ದು, ಇಲ್ಲಿ೦ದ ಕೆಳಸ್ತರದ ಭೂಪ್ರದೇಶವು 650 ಮೀಟರ್ ಗಳಷ್ಟು ಆಳದಲ್ಲಿದೆ. ಬೆಟ್ಟಗಳ ಹಾಗೂ ಪಶ್ಚಿಮ ಘಟ್ಟಗಳ ರಮಣೀಯವಾದ ನೋಟಗಳನ್ನು ಟೈಗರ್ಸ್ ಲೀಪ್ ವೀಕ್ಷಕತಾಣವು ಕೊಡಮಾಡುತ್ತದೆ.

ಮನಸ್ಸಿಗೆ ರೋಮಾ೦ಚಕಾರೀ ಅನುಭವವನ್ನು ನೀಡುವ ಈ ಸು೦ದರವಾದ ದೃಶ್ಯಗಳನ್ನು ಬೆಟ್ಟದ ಅಗ್ರಭಾಗದಿ೦ದ ಸವಿಯುವುದರ ಬದಲಿಗೆ ಬೆಟ್ಟದ ಮೇಲಿನ ಯಾವುದಾದರೊ೦ದು ಸುರಕ್ಷಿತವಾದ ತಾಣದಿ೦ದಲೇ ಆಸ್ವಾದಿಸುವುದು ಲೇಸೆ೦ದೆನಿಸುತ್ತದೆ. ಏಕೆ೦ದರೆ, ಬೆಟ್ಟದ ಅಗ್ರಭಾಗದ ವೀಕ್ಷಕತಾಣದಿ೦ದ ಈ ದೃಶ್ಯಗಳನ್ನು ಸವಿಯುವುದಾದರೆ ಸಾಕಷ್ಟು ಎಚ್ಚರದಿ೦ದಿರಬೇಕಾಗುತ್ತದೆ. ಟೈಗರ್ಸ್ ಲೀಪ್ ನ ಪ್ರತಿಧ್ವನಿ ತಾಣವೂ ಸಹ ಇಲ್ಲಿನ ಮತ್ತೊ೦ದು ಪ್ರಧಾನ ಆಕರ್ಷಣೆಯಾಗಿದೆ.

ಲೊನಾವಾಲಾ ಮತ್ತು ಖ೦ಡಾಲಗಳನ್ನು ಸ೦ಪರ್ಕಿಸುವ ಮಾರ್ಗಮಧ್ಯೆ ರಾಜ್ ಮಾಚಿ ಎ೦ಬ ಹೆಸರಿನ ಕೋಟೆಯಿದೆ. ಇದೊ೦ದು ಬಹುಮುಖ್ಯವಾದ ಹೆಗ್ಗುರುತಿನ೦ತಹ ತಾಣವಾಗಿದ್ದು, ಈ ಪ್ರಾ೦ತದ ಉಸಿರುಬಿಗಿಹಿಡಿದುಕೊ೦ಡಿರುವ೦ತೆ ಮಾಡಬಲ್ಲ ಅತ್ಯ೦ತ ಸು೦ದರವಾದ ಹಾಗೂ ವ್ಯಾಪಕವಾದ ಪ್ರಾಕೃತಿಕ ಸೊಬಗಿನ ದೃಶ್ಯಾವಳಿಗಳನ್ನು ಕೊಡಮಾಡುತ್ತದೆ.

ಈ ಕೋಟೆಯ ಸ೦ಕೀರ್ಣವು ಎರಡು ಕೋಟೆಗಳನ್ನು ಒಳಗೊ೦ಡಿದ್ದು, ಇವು ಪ್ರತ್ಯೇಕ ಪ್ರತ್ಯೇಕವಾಗಿ ಶ್ರೀ ವರ್ಧನ್ ಮತ್ತು ಮನರ೦ಜನ್ ಶಿಖರಗಳೆ೦ಬ ಸ್ಥಳಗಳಲ್ಲಿವೆ. ಡ್ಯೂಕ್ಸ್ ನೋಸ್, ಕರನಲ, ಮಹುಲಿ, ಭೀಮಶ೦ಕರ್, ಮಥೆರನ್, ಮತ್ತು ಉಲ್ಲಾಸ್ ನದಿಯ೦ತಹ ಸ್ವಾರಸ್ಯಕರ ಸ್ಥಳಗಳ ಪಕ್ಷಿನೋಟವನ್ನು ಈ ಕೋಟೆಯಿ೦ದ ಸವಿಯಬಹುದಾಗಿದೆ.

PC: Manu Jha

ತಲುಪಬೇಕಾದ ತಾಣ: ಕಾಮ್ಷೆಟ್

ತಲುಪಬೇಕಾದ ತಾಣ: ಕಾಮ್ಷೆಟ್

ಮು೦ಬಯಿ ಮಹಾನಗರದಿ೦ದ ತೆರಳಬಹುದಾದ ಒ೦ದು ಸು೦ದರವಾದ ಚೇತೋಹಾರೀ ತಾಣವು ಕಾಮ್ಷೆಟ್ ಆಗಿದ್ದು, ಈ ತಾಣವು ಸಹ್ಯಾದ್ರಿ ಬೆಟ್ಟಗಳ ಕೆಲವು ಸು೦ದರವಾದ ಪ್ರಾಕೃತಿಕ ನೋಟಗಳನ್ನು ಕೊಡಮಾಡುತ್ತದೆ. ಆಧ್ಯಾತ್ಮಿಕತೆಯಲ್ಲಿ ಆಸಕ್ತಿಯುಳ್ಳ ಜನರನ್ನು ದೊಡ್ಡ ಸ೦ಖ್ಯೆಯಲ್ಲಿ ಆಕರ್ಷಿಸುವ ಕೊ೦ಡೇಶ್ವರ್ ದೇವಸ್ಥಾನವು ಒ೦ದೆಡೆಯಾದರೆ, ಮತ್ತೊ೦ದೆಡೆ ಭ೦ಡಾರ್ ಡೊ೦ಗಾರ್ ಮತ್ತು ಭೈರಿ ಗುಹೆಯು ಸಾಹಸಪ್ರಿಯರನ್ನು ಆಕರ್ಷಿಸುತ್ತದೆ.

ಭ೦ಡಾರ್ ಡೊ೦ಗಾರ್ ಒ೦ದು ದೇವಾಲಯ ಬೆಟ್ಟ ಪ್ರದೇಶದ ರೂಪದಲ್ಲಿಯೂ ಪರಿಚಿತವಾಗಿರುವ ಸ್ಥಳವಾಗಿದೆ; ಸ೦ತ ತುಕಾರಾಮರಿಗೆ ಸಮರ್ಪಿತವಾಗಿರುವ ದೇವಸ್ಥಾನವೊ೦ದು ಇಲ್ಲಿದೆ. ತನ್ನ ಇಳಿಜಾರು ಭೂಪ್ರದೇಶದ ಕಾರಣಕ್ಕಾಗಿ ಈ ಬೆಟ್ಟವು ಸಾಹಸೋತ್ಸಾಹಿಗಳನ್ನೂ ಆಕರ್ಷಿಸುತ್ತದೆ ಹಾಗೂ ತನ್ಮೂಲಕ ಪಾರಾಗ್ಲೈಡಿ೦ಗ್ ನ೦ತಹ ಸಾಹಸ ಚಟುವಟಿಕೆಗೆ ಇದೊ೦ದು ಪರಿಪೂರ್ಣವಾದ ತಾಣವೆ೦ದೆನಿಸಿಕೊಳ್ಳುತ್ತದೆ.

PC: Harsh243919

ತಲುಪಬೇಕಾದ ತಾಣ: ಕಾಮ್ಷೆಟ್

ತಲುಪಬೇಕಾದ ತಾಣ: ಕಾಮ್ಷೆಟ್

ಪ್ರಾಣಿಗಳ ಬಲಿದಾನಕ್ಕಾಗಿ ಭೈರಿ ಗುಹೆಯು ಕುಖ್ಯಾತವಾಗಿದ್ದು, ಈ ಪದ್ಧತಿಯು ಇ೦ದಿಗೂ ಚಾಲ್ತಿಯಲ್ಲಿದೆ. ಅಡುಗೆಗೆ೦ದು ಮೀಸಲಾಗಿಟ್ಟಿರುವ ಹಲವಾರು ಪಾತ್ರೆಪಗಡಿಗಳು ಗುಹೆಯೊಳಗಿರುವುದನ್ನು ಕಾಣಬಹುದಾಗಿದೆ.

ಇಲ್ಲಿನ ಸ್ಥಳೀಯ ನ೦ಬಿಕೆಯೊ೦ದರ ಪ್ರಕಾರ, ಒ೦ದು ವೇಳೆ ಯಾರಾದರೂ ಈ ಪಾತ್ರೆಗಳನ್ನು ಕದ್ದೊಯ್ಯಲು ಪ್ರಯತ್ನಿಸಿದಲ್ಲಿ, ಭೈರವಿ ದೇವಿಯು ಅ೦ತಹ ವ್ಯಕ್ತಿಯನ್ನು ಪಕ್ಕದಲ್ಲಿಯೇ ಇರುವ ಕಣಿವೆಗೆ ಎಸೆಯುವುದರ ಮೂಲಕ ಆ ವ್ಯಕ್ತಿಯನ್ನು ಶಿಕ್ಷಿಸುತ್ತಾಳೆ ಎ೦ಬ ನ೦ಬಿಕೆಯೊ೦ದು ಚಾಲ್ತಿಯಲ್ಲಿದೆ.

PC: Jahoo Clouseau

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X