Search
  • Follow NativePlanet
Share
» »ಕೇರಳದ ಪ್ರಸಿದ್ಧ 10 ದೇವಾಲಯಗಳು

ಕೇರಳದ ಪ್ರಸಿದ್ಧ 10 ದೇವಾಲಯಗಳು

ಕೇರಳ "ದಿ ಲ್ಯಾಂಡ್ ಆಫ್ ಗಾಡ್ಸ್" ಎಂದು ಪ್ರಖ್ಯಾತತೆ ಪಡೆದಿದೆ. ಕೇರಳ ದಕ್ಷಿಣ ಭಾರತದ ಪ್ರಸಿದ್ಧವಾದ ರಾಜ್ಯವಾಗಿದೆ. ಕೇರಳದ ಸ್ಥಳ ಪುರಾಣ, ಕಲೆ, ಪುರಾತನವಾದ ಆಚಾರ ವಿಚಾರ, ಸಂಸ್ಕøತಿ ಇವೆಲ್ಲಾ ಮತ್ತಷ್ಟು ಶ್ರೀಮಂತವಾಗಿಸಿದೆ. ಇಲ್ಲಿ ಹಲವಾರು ದೇ

ಕೇರಳ "ದಿ ಲ್ಯಾಂಡ್ ಆಫ್ ಗಾಡ್ಸ್" ಎಂದು ಪ್ರಖ್ಯಾತತೆ ಪಡೆದಿದೆ. ಕೇರಳ ದಕ್ಷಿಣ ಭಾರತದ ಪ್ರಸಿದ್ಧವಾದ ರಾಜ್ಯವಾಗಿದೆ. ಕೇರಳದ ಸ್ಥಳ ಪುರಾಣ, ಕಲೆ, ಪುರಾತನವಾದ ಆಚಾರ ವಿಚಾರ, ಸಂಸ್ಕøತಿ ಇವೆಲ್ಲಾ ಮತ್ತಷ್ಟು ಶ್ರೀಮಂತವಾಗಿಸಿದೆ. ಇಲ್ಲಿ ಹಲವಾರು ದೇವಾಲಯಗಳು ಇವೆ.

ಇಲ್ಲಿನ ಸುಂದರವಾದ ವಾತಾವರಣಕ್ಕೆ ಅಲ್ಲದೇ ದೇವಾಲಯಗಳಿಗೂ ಹಲವಾರು ಪ್ರವಾಸಿಗರು ಮನಸೋತಿದ್ದಾರೆ. ಕೇರಳದ ಕೆಲವು ದೇವಾಲಯಗಳು ಸುಮಾರು 2000 ವರ್ಷಗಳಿಗಿಂತಲೂ ಹಳೆಯದಾಗಿವೆ. ಅವುಗಳಲ್ಲಿ ಹೆಚ್ಚಾಗಿ ಶಿವ ಮತ್ತು ವಿಷ್ಣುವಿನ ದೇವಾಲಯಗಳೇ ಆಗಿವೆ. ಹಾಗಾಗಿಯೇ ಕೇರಳವನ್ನು ಆಧ್ಯಾತ್ಮಿಕ ಪ್ರವಾಸಿ ತಾಣ ಎಂದು ಪರಿಗಣಿಸಲಾಗಿದೆ.

ಕೇರಳದ ಪುರಾತನ ದೇವಾಲಯಗಳಲ್ಲಿನ ವಾಸ್ತುಶಿಲ್ಪಗಳು, ಸಂಪ್ರದಾಯಗಳು, ಉತ್ಸವಗಳು, ಆಚರಣೆಗಳು ಮತ್ತು ಶಿಲ್ಪಗಳನ್ನು ಕಾಣಬಹುದು. ಪ್ರಸ್ತುತ ಲೇಖನದಲ್ಲಿ ಕೇರಳದ ಪ್ರಸಿದ್ಧ ದೇವಾಲಯಗಳ ಬಗ್ಗೆ ತಿಳಿಯೋಣ. ಹಾಗೆಯೇ ಒಮ್ಮೆ ಕೇರಳ ರಾಜ್ಯಕ್ಕೆ ಪ್ರವಾಸ ಕೈಗೊಂಡಾಗ ಲೇಖನದ ದೇವಾಲಯಗಳಿಗೆ ಭೇಟಿ ನೀಡಿ.

ಶ್ರೀ ಪದ್ಮನಾಭ ಸ್ವಾಮಿ ದೇವಾಲಯ, ತಿರುವನಂತಪುರ

ಶ್ರೀ ಪದ್ಮನಾಭ ಸ್ವಾಮಿ ದೇವಾಲಯ, ತಿರುವನಂತಪುರ

ಶ್ರೀ ಪದ್ಮನಾಭ ಸ್ವಾಮಿ ದೇವಾಲಯವು ಕೇರಳದ ಅತ್ಯಂತ ಜನಪ್ರಿಯವಾದ ದೇವಾಲಯಗಳಲ್ಲಿ ಒಂದಾಗಿದೆ. ಇದು ತನ್ನದೇ ಆದ ವಾಸ್ತು ಶಿಲ್ಪದಿಂದ ವಿಶ್ವವಿಖ್ಯಾತತೆ ಪಡೆದಿದೆ. ಈ ಪವಿತ್ರವಾದ ದೇವಾಲಯವು ಕೇರಳ ರಾಜ್ಯದ ತಿರುವನಂತಪುರದಲ್ಲಿದೆ. ಇಲ್ಲಿನ ಗರ್ಭಗುಡಿಯಲ್ಲಿ ವಿಷ್ಣು ಮೂರ್ತಿಯು ಪದ್ಮನಾಭ ಸ್ವಾಮಿಯಾಗಿ ನೆಲೆಸಿದ್ದಾನೆ.


ಈ ಮಾಹಿಮಾನ್ವಿತವಾದ ದೇವಾಲಯವನ್ನು 8 ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ಪುರಾತನವಾದ ದೇವಾಲಯವಾಗಿದೆ. ದೇವಾಲಯದ ನಿರ್ಮಾಣವು ದ್ರಾವಿಡ ಶೈಲಿಯಲ್ಲಿದೆ. ಇಲ್ಲಿ ಪ್ರಮುಖವಾಗಿ 2 ಹಬ್ಬಗಳನ್ನು ಆಚರಿಸಲಾಗುತ್ತದೆ. ಆ ಸಮಯದಲ್ಲಿ ಪ್ರಪಂಚದಾದ್ಯಂತ ಪ್ರವಾಸಿಗರು ಭೇಟಿ ನೀಡುತ್ತಾರೆ.


PC: Ashcoounter

ಅಂಬಲಪುಳ ಶ್ರೀ ಕೃಷ್ಣ ದೇವಾಲಯ, ಅಂಬಲಪುಳಾ

ಅಂಬಲಪುಳ ಶ್ರೀ ಕೃಷ್ಣ ದೇವಾಲಯ, ಅಂಬಲಪುಳಾ

ಕೇರಳದ ಅಂಬಾಪುಳದಲ್ಲಿರುವ ಅಂಬಳಪುಳ ಶ್ರೀ ಕೃಷ್ಣ ದೇವಾಲಯವು ಮತ್ತೊಂದು ಪ್ರಸಿದ್ಧವಾದ ದೇವಾಲಯವಾಗಿದೆ. ಇದನ್ನು 17 ನೇ ಶತಮಾನದಲ್ಲಿ ನಿರ್ಮಾಣ ಮಾಡಿರುವ ರಾಜ್ಯದ ಅತ್ಯಂತ ಜನಪ್ರಿಯವಾದ ದೇವಾಲಯಗಳಲ್ಲಿ ಇದು ಒಂದಾಗಿದೆ. ಇಲ್ಲಿ ಆ ಶ್ರೀ ಕೃಷ್ಣ ಪರಮಾತ್ಮ ನೆಲೆಸಿದ್ದಾನೆ.

ಇಲ್ಲಿನ ಶ್ರೀ ಕೃಷ್ಣನ ಮೂರ್ತಿಯನ್ನು ಟಿಪ್ಪು ಸುಲ್ತಾನ್ ಆಡಳಿತದ ಸಮಯದಲ್ಲಿ ಗುರುವಾಯೂವಿನಿಂದ ತರಿಸಲಾಗಿತ್ತು ಎಂದು ನಂಬಲಾಗಿದೆ. ಈ ದೇವಾಲಯದಿಂದ ಸುಮಾರು 8 ಕಿ.ಮೀ ದೂರದಲ್ಲಿ ಪ್ರಶಾಂತವಾದ ಅಲಪುಜಾ ಇದೆ. ಇಲ್ಲಿಗೆ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ.

PC:Balagopal.k

ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯ

ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯ

ಕೇರಳದಲ್ಲಿನ ಅತ್ಯಂತ ಜನಪ್ರಿಯವಾದ ದೇವಾಲಯಗಳಲ್ಲಿ ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯ ಅಗ್ರಸ್ಥಾನದಲ್ಲಿದೆ. ಏಕೆಂದರೆ ಅಯ್ಯಪ್ಪನ ಭಕ್ತರು ದೇಶದ ಮೂಲೆ ಮೂಲೆಗಳಿಂದಲೂ ಈ ಸ್ವಾಮಿಯನ್ನು ದರ್ಶನ ಮಾಡಲು ಭೇಟಿ ನೀಡುತ್ತಾರೆ. ಅಪಾರ ಭಕ್ತರನ್ನು ಹೊಂದಿರುವ ಅಯ್ಯಪ್ಪನು ಪಶ್ಚಿಮ ಘಟ್ಟದ ಬೆಟ್ಟದ ತುದಿಯಲ್ಲಿ ನೆಲೆಸಿದ್ದಾನೆ.

ಈ ದೇವಾಲಯವು ಪಥನಮಿತ್ತ ಜಿಲ್ಲೆಯ ಪೆರಿಯಾರ್ ಟೈಗರ್ ರಿಸರ್ವ್ ಸಮೀಪದಲ್ಲಿರುವ ಒಂದು ಪ್ರಸಿದ್ಧವಾದ ಯಾತ್ರಸ್ಥಳವೇ ಇದಾಗಿದೆ. ಈ ದೇವಾಲಯವು ಅಯ್ಯಪ್ಪನಿಗೆ ಸಮರ್ಪಿತವಾಗಿದೆ. ದೇವಾಲಯವು ದಟ್ಟವಾದ ಪರ್ವತಗಳು, ಕಾಡುಗಳಿಂದ ಅವೃತ್ತವಾಗಿದೆ.

PC:Sailesh

ಗುರುವಾಯೂರ್ ಶ್ರೀ ಕೃಷ್ಣ ದೇವಾಲಯ, ಗುರುವಾಯೂರ್

ಗುರುವಾಯೂರ್ ಶ್ರೀ ಕೃಷ್ಣ ದೇವಾಲಯ, ಗುರುವಾಯೂರ್

ಗುರುವಾಯೂರ್ ಶ್ರೀ ಕೃಷ್ಣ ದೇವಾಲಯವು ಒಂದು ಧಾರ್ಮಿಕವಾದ ದೇವಾಲಯವಾಗಿದೆ. ಈ ದೇವಾಲಯವು ಶ್ರೀ ಕೃಷ್ಣನಿಗೆ ಅರ್ಪಿತವಾದ ದೇವಾಲಯವಾಗಿದೆ. ಪಾತಲಾಂಜನ ಕಲ್ಲಿನಿಂದ ಕೃಷ್ಣನ ವಿಗ್ರಹವನ್ನು ಕೆತ್ತನೆ ಮಾಡಲಾಗಿದೆ. ವಿಶೇಷವೆನೆಂದರೆ ಈ ದೇವಾಲಯದಲ್ಲಿ ಹಲವಾರು ಅಕ್ಕಿ, ಆಹಾರ ಸಮಾರಂಭಗಳು ನಡೆಯುತ್ತದೆ.


PC: Common Good

ಚೊಟ್ಟನಿಕರಾ ದೇವಿ ದೇವಾಲಯ, ಎರ್ನಾಕುಲಂ

ಚೊಟ್ಟನಿಕರಾ ದೇವಿ ದೇವಾಲಯ, ಎರ್ನಾಕುಲಂ

ಚೊಟ್ಟನಿಕ್ಕಾರ ದೇವಿಯು ಭಗವತಿ ದೇವಿಗೆ ಅರ್ಪಿತವಾದ ಜನಪ್ರಿಯವಾದ ದೇವಾಲಯ. ಇದು 4 ರಿಂದ 5 ಅಡಿ ಎತ್ತರದಲ್ಲಿದೆ. ಇಲ್ಲಿನ ಮಾಹಿಮಾನ್ವಿತವಾದ ದೇವತೆಯು ಮಾನಸಿಕ ಅಸ್ವಸ್ಥತೆಗಳನ್ನು ಮತ್ತು ಅನಾರೋಗ್ಯಗಳನ್ನು ತೆಗೆದುಹಾಕುತ್ತಾಳೆ ಎಂದು ನಂಬಲಾಗಿದೆ. ಇಲ್ಲಿನ ದೇವಿಯು ಚಿನ್ನದ ಮೂರ್ತಿಯಾಗಿದ್ದಾಳೆ. ನೈಸರ್ಗಿಕವಾದ ಬೆಟ್ಟದ ಮೇಲೆ ಭಗವತಿ ತಾಯಿಯು ನೆಲೆಸಿದ್ದಾಳೆ.

PC: Roney Maxwell

ಎಟ್ಟುಮನೂರ್-ವೈಕೊಮ್-ಕಡುತುರುತಿ ದೇವಾಲಯ

ಎಟ್ಟುಮನೂರ್-ವೈಕೊಮ್-ಕಡುತುರುತಿ ದೇವಾಲಯ

ಎಟ್ಟುವನೂರ್-ವೈಕೊಮ್-ಕಡುತುರುತಿ ದೇವಾಲಯವು ಶಿವನಿಗೆ ಅರ್ಪಿತವಾದ ದೇವಾಲಯವಾಗಿದೆ. ಇದನ್ನು ವೈಕೋಮ್ ಮಹಾದೇವ ದೇವಾಲಯ ಎಂದೂ ಸಹ ಕರೆಯುತ್ತಾರೆ. ಈ ದೇವಾಲಯಕ್ಕೆ ಭೇಟಿ ನೀಡಿದರೆ ತಮ್ಮ ಇಚ್ಛೆಗಳು ಪೂರ್ಣಗೊಳ್ಳುತ್ತವೆ ಎಂದು ನಂಬಲಾಗಿದೆ.

ಮನ್ನರಸಲ, ನಾಗರಾಜ ದೇವಾಲಯ

ಮನ್ನರಸಲ, ನಾಗರಾಜ ದೇವಾಲಯ

ಪುರಾತನವಾದ ಮತ್ತು ವಿಶ್ವ ವಿಖ್ಯಾತ ಮನ್ನಾರಸಲ ನಾಗರಾಜ ದೇವಾಲಯವು ಸರ್ಪ ದೇವರಿಗೆ ಅರ್ಪಿತವಾದ ದೇವಾಲಯವಾಗಿದೆ. ಈ ದೇವಾಲಯವು ಹಚ್ಚ ಹಸಿರಿನ ಸಮೃದ್ಧ ಕಾಡಿನ ಮಧ್ಯೆ ಇದೆ. ಈ ದೇವಾಲಯ ಮರಗಳ ಮೇಲೆ 30,000 ಕ್ಕಿಂತಲೂ ಹೆಚ್ಚಿನ ಹಾವುಗಳು ಇರುತ್ತವೆ. ಹೀಗಾಗಿಯೇ ಪ್ರಪಂಚದಾದ್ಯಂತ ಪ್ರವಾಸಿಗರನ್ನು ಈ ಸ್ಥಳವು ಆಕರ್ಷಿಸುತ್ತದೆ.

PC: Vibitha vijay

ತಿರುವಾಂಚಿಕುಲಂ ಶಿವ ದೇವಾಲಯ, ತ್ರಿಶ್ಯುರ್

ತಿರುವಾಂಚಿಕುಲಂ ಶಿವ ದೇವಾಲಯ, ತ್ರಿಶ್ಯುರ್

ಕೇರಳದ ತ್ರಿಶ್ಯುರ್ ಜಿಲ್ಲೆಯ ಕೊಡುಂಗಲ್ರ್ಲೂನಲ್ಲಿರುವ ತಿರುವಂಚಿಕುಲಂ ಶಿವನ ದೇವಾಲಯವಾಗಿದೆ. ಈ ದೇವಾಲಯವನ್ನು ಮಹಾ ದೇವ ದೇವಾಲಯ ಎಂದು ಸಹ ಕರೆಯುತ್ತಾರೆ. ದೇವಾಲಯದ ಗೋಡೆಯ ಮೇಲೆ ವಿಶಿಷ್ಟವಾದ ಮ್ಯೂರಲ್ ಪೇಟಿಂಗ್‍ಗಳು ಹೊಂದಿದೆ. ಪ್ರಾಚೀನವಾದ ತಮಿಳು ಸಾಹಿತ್ಯವನ್ನು ಇಲ್ಲಿ ಕಾಣಬಹುದಾಗಿದೆ. ಕೇರಳದ ಪುರಾತನ ತತ್ವಗಳನ್ನು ಮತ್ತು ವಿಗ್ರಹಗಳನ್ನು ಪ್ರಸ್ತುತ ಪಡಿಸುವ ಏಕೈಕ ದೇವಾಲಯವೆಂದರೆ ಅದು ತಿರುವಂಚಿಕುಲಂ ಶಿವ ದೇವಾಲಯ.

PC: Vijayakumarblathur


ಲೋಕನಾರ್ಕುವ್ ದೇವಾಲಯ, ಕೋಳಿಕೋಡು

ಲೋಕನಾರ್ಕುವ್ ದೇವಾಲಯ, ಕೋಳಿಕೋಡು

ಲೋಕನಾರ್ಕುವ್ ದೇವಾಲಯವು ಕೇರಳದ ಕೊಲ್ಲಿಕೋಡು ಜಿಲ್ಲೆಯ ವಟಕಾರದಿಂದ ಸುಮಾರು 4 ಕಿ.ಮೀ ದೂರದಲ್ಲಿ ಮೆಮುಂಡಾದಲ್ಲಿದೆ. ಈ ದೇವಾಲಯವನ್ನು 500 ಆರ್ಯನ್ ನಾಗರಿಕರು ಮತ್ತು ಉತ್ತರಾಧಿಕಾರಿಗಳ ಅಧಿಕೃತ ಕುಟುಂಬ ದೇವಾಲಯ ಎಂದು ಪರಿಗಣಿಸಲಾಗಿದೆ. ಇಲ್ಲಿ 30 ದಿನಗಳ ಕಾಲ ಉತ್ಸವಗಳನ್ನು ಆಚರಿಸಲಾಗುತ್ತದೆ.

ಶ್ರೀ ಪಾರಸ್ಸಿನಿಕಡವು ಮುಟ್ಟಪ್ಪನ್ ದೇವಾಲಯ

ಶ್ರೀ ಪಾರಸ್ಸಿನಿಕಡವು ಮುಟ್ಟಪ್ಪನ್ ದೇವಾಲಯ

ಶ್ರೀ ಪಾರಸ್ಸಿನಿಕಡವು ಮುಟ್ಟಪ್ಪನ್ ದೇವಾಲಯವು ಸುಂದರವಾದ ವಾಸ್ತುಶಿಲ್ಪವನ್ನು ಹೊಂದಿದೆ. ಇದು ವಾಲಪಟ್ಟಣಂ ನದಿಯ ದಡದ ಮೇಲೆ ಇದೆ. ಇದು ಮುಟ್ಟಪ್ಪನಿಗೆ ಸಮರ್ಪಿತವಾದ ದೇವಾಲಯವಾಗಿದೆ. ಆಶ್ಚರ್ಯವೆನೆಂದರೆ ದೇವರಿಗೆ ನೈವೇಧ್ಯವಾಗಿ ಮಧ್ಯದ ಬಾಟಲಿಯನ್ನು ದೇವರಿಗೆ ಸರ್ಮಪಿಸುತ್ತಾರೆ. ಈ ದೇವಾಲಯದಲ್ಲಿ ಎಲ್ಲಾ ಜಾತಿ, ಧರ್ಮದವರಿಗೂ ಪ್ರವೇಶವಿದೆ. ನಾಯಿಗಳಿಗೂ ಕೂಡ ಈ ದೇವಾಲಯಕ್ಕೆ ಪ್ರವೇಶವಿದೆ ಎಂದರೆ ನಂಬುತ್ತೀರ?


PC:Reju

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X