ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಒಂದೇ ರಾತ್ರಿಯಲ್ಲಿ ನಿರ್ಮಿಸಲಾದ ದೇವಾಲಯಗಳು

Written by:
Published: Saturday, July 8, 2017, 12:47 [IST]
Share this on your social network:
   Facebook Twitter Google+ Pin it  Comments

ಭಾರತ ದೇಶವು ದೇವಾಲಯದಿಂದ ತುಂಬಿ ಹೋಗಿದೆ.

ಹಿಂದೂ ಪುರಾಣಗಳ ಪ್ರಕಾರ ಕೆಲವು ದೇವಾಲಯವು ಅತ್ಯಂತ ಪುರಾತನವಾದುದು.

ಸಾಮಾನ್ಯವಾಗಿ ದೇವಾಲಯವನ್ನು ನಿರ್ಮಿಸಬೇಕಾದರೆ ತುಂಬ ವರ್ಷಗಳು ಶ್ರಮಿಸಬೇಕಾಗುತ್ತದೆ.

ಒಂದೇ ರಾತ್ರಿಯಲ್ಲಿ ನಿರ್ಮಿಸಿದ ಹಲವಾರು ದೇವಾಲಯಗಳು ಇವೆ.

ನಿಮಗೆ ಗೊತ್ತ? ಈ ದೇವಾಲಯಗಳನ್ನು ಒಂದೇ ರಾತ್ರಿಯಲ್ಲಿಯೇ ನಿರ್ಮಿಸಲಾಗಿದೆ.

ಗೋವಿಂದ ದೇವ ಜೈ ಮಂದಿರ

ಉತ್ತರ ಪ್ರದೇಶದಲ್ಲಿನ ಬೃಂದಾವನದಲ್ಲಿ ಕೃಷ್ಣ ಪರಮಾತ್ಮನು ನೆಲೆಸಿದ್ದಾನೆ. ಈ ದೇವಾಲಯವನ್ನು ಒಂದೇ ರಾತ್ರಿಯಲ್ಲಿ ನಿರ್ಮಿಸಿರುವುದಾಗಿದೆ.

ಗೋವಿಂದ ದೇವ ಜೈ ಮಂದಿರ

ಈ ದೇವಾಲಯವನ್ನು ಶ್ರೀ ಕೃಷ್ಣ ಲೀಲದ ಕುರಿತು ತಿಳಿಸುತ್ತದೆ. ಇದೊಂದು ಸುಂದರವಾದ ದೇವಾಲಯವಾಗಿದೆ.

ಗೋವಿಂದ ದೇವ ಜೈ ಮಂದಿರ

ದೇವತೆಗಳು ಹಾಗೂ ರಾಕ್ಷಸರು ಸೇರಿ ಈ ದೇವಾಲಯವನ್ನು ನಿರ್ಮಿಸಿದರು ಎಂದು ಪುರಾಣಗಳು ಹೇಳುತ್ತವೆ.

ಗೋವಿಂದ ದೇವ ಜೈ ಮಂದಿರ

ಈ ದೇವಾಲಯದಲ್ಲಿ ಸಮೀಪದಲ್ಲಿ ನೋಡಿದರೆ ಅಸಂಪೂರ್ಣವಾಗಿ ನಿರ್ಮಾಣವಾಗಿ ಕಾಣುತ್ತದೆ.

ಗೋವಿಂದ ದೇವ ಜೈ ಮಂದಿರ

ಈ ದೇವಾಲಯ ನಿರ್ಮಾಣ ಮಾಡುವ ಸಮಯದಲ್ಲಿ ಏನು ಒಂದು ರೀತಿಯ ಶಬ್ಧವಾದ್ದರಿಂದ ದೇವತೆಗಳು ನಿರ್ಮಿಸುತ್ತಿದ್ದ ದೇವಾಲಯವನ್ನು ಬಿಟ್ಟು ಅಲ್ಲಿಂದ ಹೋರಟುಬಿಟ್ಟರು ಎಂದು ಕಥೆಗಳು ಪ್ರಚಾರದಲ್ಲಿದೆ.

 

 

ಹತಿಯಾದೇವಲ್ ದೇವಾಲಯ

ಉತ್ತರಾಖಂಡನಲ್ಲಿರುವ ಈ ಹತಿಯಾ ದೇವಲ್ ದೇವಾಲಯವು ಕೂಡ ಒಂದೇ ರಾತ್ರಿಯಲ್ಲಿ ಒಬ್ಬ ವ್ಯಕ್ತಿಯು ನಿರ್ಮಿಸಿರುವ ದೇವಾಲಯವಾಗಿದೆ.

ಹತಿಯಾದೇವಲ್ ದೇವಾಲಯ

ಈ ಹತಿಯಾ ದೇವಾಲಯದಲ್ಲಿ ಶಿವಲಿಂಗವಿದೆ. ಈ ಶಿವಲಿಂಗವು ದಕ್ಷಿಣಾಭಿಮುಖವಾಗಿ ಇರುತ್ತದೆ.

ಭೋಜೇಶ್ವರ ಮಂದಿರ

ಮಧ್ಯೆ ಪ್ರದೇಶದಲ್ಲಿನ ಭೋಜೇಶ್ವರ ಮಂದಿರವನ್ನು ದ್ವಾಪರಯುಗದಲ್ಲಿ ಪಾಂಡವರು ನಿರ್ಮಿಸಿದರು.

 

 

ಭೋಜೇಶ್ವರ ಮಂದಿರ

ಈ ಭೋಜೇಶ್ವರ ದೇವಾಲಯವನ್ನು ನಿರ್ಮಿಸಲು ಪಾಂಡವರ ತಾಯಿ ಕುಂತಿ ಕೂಡ ಸಾಹಯ ಮಾಡಿದಳಂತೆ. ಈ ದೇವಾಲಯವನ್ನು ಕೂಡ ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡಲಾಗಿದೆ.

ಕಾಕನ ಮಠ ದೇವಾಲಯ

ಮಧ್ಯೆ ಪ್ರದೇಶದಲ್ಲಿನ ಮೋರೆನಾ ಪ್ರದೇಶದಲ್ಲಿರುವ ಕಾಕನ ಮಠ ದೇವಾಲಯವು ಕೂಡ ಶಿವನ ಭಕ್ತರಾದ ರಾಕ್ಷಸರು ನಿರ್ಮಾಣ ಮಾಡಿದರಂತೆ.

ಕಾಕನ ಮಠ ದೇವಾಲಯ

ಒಂದೆ ರಾತ್ರಿಯಲ್ಲಿ ನಿರ್ಮಾಣ ಮಾಡಿದ ಈ ದೇವಾಲಯದ ನಿರ್ಮಾಣವನ್ನು ಮಾಡುವಾಗ ಸುಣ್ಣವೇ ಆಗಲಿ, ಸಿಮೆಂಟ್ ಆಗಲಿ ಬಳಸಲಾಗಿಲ್ಲ.

ದೇವ್‍ಘಡ್

ಜಾರ್ರ್‍ಖಂಡ್‍ನಲ್ಲಿರುವ ದೇವ್‍ಘಡ್ ನಿರ್ಮಾಣವನ್ನು ವಿಶ್ವಕರ್ಮ ನಿರ್ಮಿಸಿದನು ಎಂದು ಪ್ರತೀತಿ ಇದೆ.

ದೇವ್‍ಘಡ್

ಈ ದೆವಾಲಯವನ್ನು ಕೂಡ ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡಿರುವ ಮಂದಿರವಾಗಿದ್ದು, ಪಾರ್ವತಿ ದೇವಿಯ ಮಂದಿರ ಮಾತ್ರ ಅಸಂಪೂರ್ತಿಯಾಗಿದೆ.

ವಿಷ್ಣುಬೈದ್ಯಾನಾಥ್ ದೇವಾಲಯ

ಹಾಗೇಯೆ ಸುತ್ತಮುತ್ತ ಇರುವ ವಿಷ್ಣುಬೈದ್ಯಾನಾಥ್ ದೇವಾಲಯವು ಕೂಡ ಚಿಕ್ಕದಾದುದು.

ಬೈದ್ಯಾನಾಥ್ ದೇವಾಲಯ

ಜ್ಯೋತಿರ್‍ಲಿಂಗಗಳಲ್ಲಿ ಒಂದಾದ ಬೈದ್ಯಾನಾಥ್ ದೇವಾಲಯ ಕೂಡ ಒಂದೇ ರಾತ್ರಿಯಲ್ಲಿ ನಿರ್ಮಾಣ ಮಾಡಲಾಗಿರುವುದು.

English summary

Temples built overnight

India is full of temples. According to Hindu mythology, some temples are ancient. In fact, for years to build a temple, it has to work hard. There are several temples built overnight.
Please Wait while comments are loading...