Search
  • Follow NativePlanet
Share
» »ಕಣ್ಮನ ಸೆಳೆಯುವ ಸುಂದರ ಕಲ್ಯಾಣಿಗಳು

ಕಣ್ಮನ ಸೆಳೆಯುವ ಸುಂದರ ಕಲ್ಯಾಣಿಗಳು

By Vijay

ಸಾಮಾನ್ಯವಾಗಿ ದೇವಾಲಯಗಳ ಪ್ರಾಂಗಣದಲ್ಲಿ ನೀರಿನ ಕೊಳಾಯಿಗಳಿರುವುದನ್ನು ಕಾಣಬಹುದು. ಇವುಗಳನ್ನೆ ಪುಷ್ಕರಿಣಿ, ಕಲ್ಯಾಣಿ, ತೀರ್ಥ, ಕುಂಡ, ಸರೋವರ ಎಂಬಿತ್ಯಾದಿ ನಾಮಗಳಿಂದ ಕರೆಯುತ್ತಾರೆ. ದೇವಾಲಯಗಳಿಗೂ ಕಲ್ಯಾಣಿಗಳಿಗೂ ನಂಟು ಇದ್ದೆ ಇರುತ್ತದೆ.

ಮೇಕ್ ಮೈ ಟ್ರಿಪ್ ಕೂಪನ್ಸ್ : ದೇಶೀಯ ಹೋಟೆಲ್ ಬುಕ್ಕಿಂಗ್ ಮೇಲೆ 4000 ರೂ. ಮರಳಿ ಪಡೆಯಿರಿ

ಹಿಂದೆ ಕಲ್ಯಾಣಿಗಳಲ್ಲಿದ್ದ ನೀರಿನಿಂದಲೆ ದೇವಾಲಯದ ವಿಗ್ರಹಗಳ ಅಭಿಷೇಕ, ಸ್ವಚ್ಛತಾಕಾರ್ಯಾದಿಗಳು ನಡೆಯುತ್ತಿದ್ದವು. ಈಗಲೂ ಸಹ ಸಾಕಷ್ಟು ದೇವಾಲಯಗಳಲ್ಲಿ ಇದು ಇನ್ನೂ ಚಾಲ್ತಿಯಲ್ಲಿದೆ. ಈ ಕಲ್ಯಾಣಿಗಳು ಭಾರತೀಯ ದೇವಾಲಯ ವಾಸ್ತು ಶಿಲ್ಪವನ್ನು ಅವಲೋಕಿಸಿದಾಗ ಇವು ದೇವಾಲಯ ಸಂಕೀರ್ಣಗಳ ಅವಿಭಾಜ್ಯ ಅಂಗಗಳೆಂದು ತಿಳಿದು ಬರುತ್ತವೆ.

ಹಲವು ಕಲ್ಯಾಣಿಗಳು ತಮ್ಮದೆ ಆದ ವಿಶೇಷ ಹಿನ್ನಿಲೆಯನ್ನು ಹೊಂದಿರುತ್ತವೆ. ಇನ್ನೂ ಕೆಲವು ಕಲ್ಯಾಣಿಗಳು ವಿಶೇಷ ವ್ಯಕ್ತಿಗಳಿಗೆ ಮುಡಿಪಾಗಿ ರೂಪಗೊಂಡಿರುತ್ತವೆ. ಪ್ರವಾಸಿ ದೃಷ್ಟಿಯಿಂದ ಗಮನಿಸಿದಾಗ ಈ ಕಲ್ಯಾಣಿಗಳು, ಸರೋವರಗಳು, ಪುಷ್ಕರಣಿಗಳು ಒಂದು ಕುತೂಹಲಕರ ರಚನೆಗಳಾಗಿ ಜನರನ್ನು ಆಕರ್ಷಿಸುತ್ತವೆ.

ವಿಶೇಷ ಲೇಖನ : ಅದ್ಭುತ ವಾಸ್ತುಶೈಲಿಯ ಮೆಟ್ಟಿಲು ಬಾವಿಗಳು

ಹಿಂದೂ ಧರ್ಮದ ಪ್ರಕಾರ, ಕೆಲವು ಕಲ್ಯಾಣಿಗಳಲ್ಲಿರುವ ನೀರು ಪವಿತ್ರ ತೀರ್ಥಕ್ಕೆ ಸಮವಾಗಿದ್ದು ಸಕಲ ಪಾಪ-ಕರ್ಮ, ರೋಗ ರುಜಿನುಗಳನ್ನು ನಿವಾರಿಸುವಂತಹ ಔಷಧೀಯ ಗುಣ ಹೊಂದಿರುತ್ತವೆ ಎಂದೂ ಸಹ ನಂಬಲಾಗುತ್ತದೆ. ಹೀಗಾಗಿ ಧಾರ್ಮಿಕ ಪ್ರವಾಸಿ ಆಕರ್ಷಣೆಗಳಾಗಿಯೂ ಸಹ ಇವು ಜನರನ್ನು ಆಕರ್ಷಿಸುತ್ತವೆ.

ಪ್ರಸ್ತುತ ಲೇಖನದ ಮೂಲಕ ದಕ್ಷಿಣ ಭಾರತದ ಕೆಲವು ವಿಶಿಷ್ಟ ಪುಷ್ಕರಣಿಗಳ ಕುರಿತು ತಿಳಿಯಿರಿ ಹಾಗೂ ಖಂಡಿತವಾಗಿಯೂ ಒಮ್ಮೆ ಭೇಟಿ ನೀಡಿ. ನೀರು ಸಂಗ್ರಹದ ಮೂಲಗಳಾಗಿ, ಜನರ ಬೇಡಿಕೆ ನಿಗಿಸುತ್ತ, ಅದ್ಭುತ ವಾಸ್ತುಶೈಲಿಯಿಂದ ಕಂಗೊಳಿಸುತ್ತ ಇಂದಿಗೂ ಹಿಂದಿನ ಗತ ವೈಭವ ಸಾರುತಿರುವ ಕಲ್ಯಾಣಿಗಳು ಭೇಟಿ ನೀಡ ಯೋಗ್ಯ ರಚನೆಗಳಾಗಿವೆ.

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕೇರಳದ ಕಾಸರಗೋಡಿನಲ್ಲಿರುವ ಅನಂತ ಪದ್ಮನಾಭನ, ಕೇರಳದಲ್ಲಿಯೆ ಎಕೈಕ ಎಂದು ಹೇಳಲಾಗುವ ಪುಷ್ಕರಣಿ ದೇವಾಲಯ. ಇದು ತಿರುವನಂತಪುರಂನಲ್ಲಿರುವ ಶ್ರೀಮಂತ ಪದ್ಮನಾಭ ದೇವಸ್ಥಾನದ ಮೂಲ ಸ್ಥಾನ ಎಂದು ಗುರುತಿಸಲ್ಪಡುತ್ತದೆ. ನೀರಿನ ಮಧ್ಯದಲ್ಲಿ ಈ ಸುಂದರ ದೇವಾಲಯವಿದ್ದು ಸಾಕಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: Noeljoe85

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಈ ಕಲ್ಯಾಣಿಯ ಮತ್ತೊಂದು ವಿಶೇಷವೆಂದರೆ ಇಲ್ಲಿರುವ ದ್ವಾರಪಾಲಕ ಮೊಸಳೆ. ಹೌದು, ಈ ದೇವಸ್ಥಾನಕ್ಕೆ ಕಾವಲುಗಾರನಾಗಿ ಒಂದು ಮೊಸಳೆಯಿದ್ದು ಅದು ಪಕ್ಕಾ ಶಾಖಾಹಾರಿ ಮೊಸಳೆ ಎಂದು ನಂಬಲಾಗಿದೆ. ಭಗವಂತನ ಪೂಜೆಯ ನಂತರ ಪ್ರಸಾದವಾಗಿ ಕೊಡಲಾಗುವ ಅನ್ನ, ಬೆಲ್ಲ ಮುಂತಾದವುಗಳನ್ನು ಮಾತ್ರವೆ ತಿನ್ನುತ್ತದೆ ಎಂದು ಹೇಳಲಾಗಿದೆ. ಸ್ಥಳ ಪುರಾಣದಂತೆ ಇದ್ದ ಮೊಸಳೆ ತೀರಿ ಹೋಯಿತೆಂದರೆ ಮತ್ತೊಂದು ಮೊಸಳೆ ತಾನಾಗಿಯೆ ಪ್ರತ್ಯಕ್ಷವಾಗಿ ಬಿಡುತ್ತದಂತೆ! ಬಬಿಯಾ ಎಂದು ಕರೆಯಲಾಗುವ ಈ ಮೊಸಳೆ ಇಲ್ಲಿಯವರೆಗೂ ಯಾರ ಮೇಲೆಯೂ ದಾಳಿ ಮಾಡಿಲ್ಲವಂತೆ.

ಚಿತ್ರಕೃಪೆ: Vinayaraj

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕೇರಳದ ತಿರುವನಂತಪುರಂನಲ್ಲಿರುವ ಶ್ರೀಮಂತ ದೇವ ಎಂಬ ಹೆಗ್ಗಳಿಕೆಗೆ ಪಾತ್ರವಾದ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಕಲ್ಯಾಣಿ.

ಚಿತ್ರಕೃಪೆ: Ashcoounter

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಅಲಪುಳಾ (ಅಲೆಪ್ಪಿ) ಜಿಲ್ಲೆಯ ಮಾವೆಲಿಕ್ಕರಾ ಎಂಬ ಪಟ್ಟಣದ ಚೆನ್ನಿತಲಾ ಎಂಬ ಪ್ರದೇಶದಲ್ಲಿರುವ ತ್ರಿಪ್ಪೆರುಂದುರಾ ಮಹಾದೇವ ದೇವಾಲಯದ ಕಲ್ಯಾಣಿ.

ಚಿತ್ರಕೃಪೆ: Dvellakat

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಕುನ್ನತಂಬುಲ ದೇಗುಲದ ಸುಂದರ ಕಲ್ಯಾಣಿ.

ಚಿತ್ರಕೃಪೆ: Dvellakat

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಪ್ರಖ್ಯಾತ ಕೊಟ್ಟಾರಕ್ಕರ ಮಹಾ ಗಣಪತಿ ದೇವಸ್ಥಾನದ ಕಲ್ಯಾಣಿ.

ಚಿತ್ರಕೃಪೆ: Vinayaraj

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕೇರಳದ ಅಲೆಪ್ಪಿ ಜಿಲ್ಲೆಯ ಪ್ರಖ್ಯಾತ ಅಂಬಲಪುಳದ ಶ್ರೀಕೃಷ್ಣ ದೆವಸ್ಥಾನದ ಕಲ್ಯಾಣಿ.

ಚಿತ್ರಕೃಪೆ: Vinayaraj

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕೇರಳದ ತ್ರಿಶ್ಶೂರ್ ಜಿಲ್ಲೆಯ ಇರಿಂಜಲಕುಡದಲ್ಲಿರುವ ಕೂಡಲಮಾಣಿಕ್ಯಂ ದೇವಾಲಯದ ಕಲ್ಯಾಣಿ.

ಚಿತ್ರಕೃಪೆ: Haribhagirath

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕೇರಳದ ತಿರುವನಂತಪುರಂ ಜಿಲ್ಲೆಯ ವರ್ಕಲಾ ಪಟ್ಟಣದಲ್ಲಿರುವ ಜನಾರ್ಧನ ಸ್ವಾಮಿ ದೇವಸ್ಥಾನದ ಕಲ್ಯಾಣಿ.

ಚಿತ್ರಕೃಪೆ: Raji.srinivas

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕೇರಳದ ಕಣ್ಣೂರಿನಿಂದ 15 ಕಿ.ಮೀ ದೂರದಲ್ಲಿರುವ ಪೇರಾಳಚೇರಿ ಸುಬ್ರಹ್ಮಣ್ಯ ದೇವಸ್ಥಾನದ ಸುಂದರ ಕಲ್ಯಾಣಿ.

ಚಿತ್ರಕೃಪೆ: Baburajpm

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕೇರಳದ ಕೊಟ್ಟಕ್ಕಲ್ ನಲ್ಲಿರುವ ಪುರಾ ಶಿವ ದೇವಾಲಯದ ಕಲ್ಯಾಣಿ.

ಚಿತ್ರಕೃಪೆ: Mutyalarao

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕಣ್ಣೂರು ಜಿಲ್ಲೆಯಲ್ಲಿರುವ ತಲಿಪರಂಬದ ರಾಜರಾಜೇಶ್ವರ ದೇವಸ್ಥಾನದ ಕಲ್ಯಾಣಿ.

ಚಿತ್ರಕೃಪೆ: Pradeep717

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕರ್ನಾಟಕದ ಶ್ರವನಬೆಳಗೊಳದಲ್ಲಿರುವ ಅದ್ಭುತ ಹಾಗೂ ವಿಶಾಲವಾದ ಕಲ್ಯಾಣಿ.

ಚಿತ್ರಕೃಪೆ: Gaura

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕಾವೇರಿ ಉಗಮಗೊಳ್ಳುವ ಕೊಡಗಿನ ತಲಕಾವೇರಿಯ ಕಾವೇರಿ ಕಲ್ಯಾಣಿ.

ಚಿತ್ರಕೃಪೆ: Pranchiyettan

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕರ್ನಾಟಕದ ಪ್ರಖ್ಯಾತ ಪ್ರವಾಸಿ ಸ್ಥಳವಾದ ಉಡುಪಿಯ ಜನಪ್ರೀಯ ಶ್ರೀಕೃಷ್ಣ ಮಠದ ಕಲ್ಯಾಣಿ.

ಚಿತ್ರಕೃಪೆ: Vaikoovery

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕರ್ನಾಟಕದ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿರುವ ಪುರಾತನ ಕಲ್ಯಾಣಿ ಹಾಗೂ ಬಾವಿ. ಇದು ರಾಷ್ಟ್ರೀಯ ಮಹತ್ವ ಪಡೆದ ಸ್ಮಾರಕವಾಗಿದೆ.

ಚಿತ್ರಕೃಪೆ: Rkiran josh

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿರುವ ಯೋಗನರಸಿಂಹ ದೇವಾಲಯದಿಂದ ಸೆರೆ ಹಿಡಿಯಲಾದ ಕಲ್ಯಾಣಿ.

ಚಿತ್ರಕೃಪೆ: Sbblr0803

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹುಲಿಕೆರೆ ಗ್ರಾಮದಲ್ಲಿರುವ ಪುರಾತನ, ಹೊಯ್ಸಳ ಶೈಲಿಯ ಕಲ್ಯಾಣಿ. ಇದು ರಾಷ್ಟ್ರೀಯ ಮಹತ್ವ ಪಡೆದ ಸ್ಮಾರಕವಾಗಿದೆ.

ಚಿತ್ರಕೃಪೆ: Shriram Swaminathan

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:


ಮಂಗಳೂರಿನ ಕದ್ರಿಯಲ್ಲಿರುವ ಪ್ರಖ್ಯಾತ ಮಂಜುನಾಥೇಶ್ವರ ದೇವಸ್ಥಾನದ ಏಳು ಕುಂಡಗಳ ಕಲ್ಯಾಣಿ. ದಂತ ಕಥೆಯನುಸಾರ ಈ ಏಳು ಕೊಳಗಳು ಶಿವನ ಸಪ್ತ ಕೋಟಿ ಮಂತ್ರಗಳನ್ನು ಪ್ರತಿನಿಧಿಸುತ್ತವೆ ಎನ್ನಲಾಗಿದೆ.

ಚಿತ್ರಕೃಪೆ: Vaikoovery

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕರ್ನಾಟಕದ ಐಹೊಳೆಯಲ್ಲಿರುವ ಶ್ರೀ ಮಂಜುನಾಥ ದೇಗುಲ ಸಂಕೀರ್ಣದಲ್ಲಿರುವ ಕಲ್ಯಾಣಿ.

ಚಿತ್ರಕೃಪೆ: Manjunath Doddamani Gajendragad

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಶಿವಮೊಗ್ಗದಿಂದ 85 ಕಿ.ಮೀ ಹಾಗೂ ಹೊಸನಗರದಿಂದ 17 ಕಿ.ಮೀ ದೂರದಲ್ಲಿರುವ ನಗರ ಎಂಬ ಹಳ್ಳಿಯು ತನ್ನಲಿರುವ ದೇವಗಂಗಾ ಕಲ್ಯಾಣಿ/ಕೊಳಗಳಿಂದ ಪ್ರಸಿದ್ಧವಾಗಿದೆ. ಹಿಂದೆ ಕೆಳದಿಯ ರಾಜಮನೆತನದವರು ಈ ಕಲ್ಯಾಣಿಗಳನ್ನು ಕ್ರೀಡಾ ಚಟುವಟಿಕೆಗಳಿಗಾಗಿ ಬಳಸುತ್ತಿದ್ದರೆಂದು ಇತಿಹಾಸದಿಂದ ತಿಳಿದುಬರುವ ವಿಚಾರ. ಇವೂ ಸಹ ರಾಷ್ಟ್ರೀಯ ಮಹತ್ವ ಪಡೆದ ಸ್ಮಾರಕಗಳಾಗಿವೆ.

ಚಿತ್ರಕೃಪೆ: Suma Sudhakiran

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಕರ್ನಾಟಕದ ಪ್ರಖ್ಯಾತ ಪ್ರವಾಸಿ ಐತಿಹಾಸಿಕ ತಾಣವಾದ ಹಂಪಿಯಲ್ಲಿರುವ ಅದ್ಭುತ ವಾಸ್ತು ಶೈಲಿಯ ಮೆಟ್ಟಿಲು ಬಾವಿ ಅಥವಾ ಕಲ್ಯಾಣಿ. ಹಿಂದೆ ವಿಜಯನಗರ ಸಾಮ್ರಾಜ್ಯದ ಸಂದರ್ಭದಲ್ಲಿ ರಾಜ ಮನೆತನದವರಿಂದ ಇದು ಬಳಸಲ್ಪಡುತ್ತಿತ್ತು. ಇದು ರಾಷ್ಟ್ರೀಯ ಮಹತ್ವ ಪಡೆದ ಸ್ಮಾರಕವಾಗಿದೆ.

ಚಿತ್ರಕೃಪೆ: Induhari

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಹಂಪಿಯ ವಿಠ್ಠಲ ದೇವಾಲಯದ ಎದುರಿಗಿರುವ ಕಲ್ಯಾಣಿ.

ಚಿತ್ರಕೃಪೆ: Dr Murali Mohan Gurram

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಹಂಪಿಯಲ್ಲಿರುವ ಮತ್ತೊಂದು ಸುಂದರ ವಾಸ್ತು ಶೈಲಿಯ ಅದ್ಭುತ ಕಲ್ಯಾಣಿ.

ಚಿತ್ರಕೃಪೆ: Shriram Swaminathan

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಹಂಪಿಯಲ್ಲಿರುವ ಕೃಷ್ಣ ದೇಗುಲದ ಪವಿತ್ರ ಕಲ್ಯಾಣಿ.

ಚಿತ್ರಕೃಪೆ: Dey.sandip

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನದ ಸುಂದರ ಕಲ್ಯಾಣಿ.

ಚಿತ್ರಕೃಪೆ: Poorniyer

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ತಮಿಳುನಾಡು ರಾಜ್ಯದ ಪುದುಕೊಟ್ಟೈ ಜಿಲ್ಲೆಯ ವಿಸಲೂರಿನಲ್ಲಿರುವ ಪ್ರಸಿದ್ಧ ಶಿವ ದೇವಸ್ಥಾನದ ಕಲ್ಯಾಣಿ. ಇದೊಂದು ಎ.ಎಸ್.ಐ (ಆರ್ಕಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ) ಸ್ಮಾರಕವಾಗಿದೆ.

ಚಿತ್ರಕೃಪೆ: Thamizhpparithi Maari

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ತಮಿಳುನಾಡಿನ ತಿರುಚ್ಚಿಯಲ್ಲಿರುವ ಪ್ರಖ್ಯಾತ ಚಿದಂಬರಂನ ಚಿದಂಬರ ದೇವಸ್ಥಾನದ ಸುಂದರ ಕಲ್ಯಾಣಿ.

ಚಿತ್ರಕೃಪೆ: Azzam AWADA

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಚೆನ್ನೈಗೆ ಹತ್ತಿರದಲ್ಲಿರುವ ಕಾಂಚೀಪುರಂ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಆಕರ್ಷಣೆಯ ಮಹಾಬಲಿಪುರಂನಲ್ಲಿರುವ ವಿಶಿಷ್ಟ ಕಲ್ಯಾಣಿ.

ಚಿತ್ರಕೃಪೆ: McKay Savage

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯಲಿರುವ ಸುಚಿಂದ್ರಂ ನಲ್ಲಿರುವ ತನುಮಲಯಂ ದೇವಸ್ಥಾನದ ಕಲ್ಯಾಣಿ.

ಚಿತ್ರಕೃಪೆ: Vinayaraj

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಚೆನ್ನೈ ನಗರದಲ್ಲಿರುವ ವಡಾಪಲನಿ ಪ್ರದೇಶದಲ್ಲಿರುವ ಮುರುಗನ (ಸುಬ್ರಹ್ಮಣ್ಯ) ದೇವಸ್ಥಾನದ ಕಲ್ಯಾಣಿ.

ಚಿತ್ರಕೃಪೆ: Logicwiki

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ತಮಿಳುನಾಡಿನ ತಿರುವಣ್ಣಾಮಲೈನಲ್ಲಿರುವ ಸುಂದರ ಹಾಗೂ ಆಕರ್ಷಕ ಕಲ್ಯಾಣಿ.

ಚಿತ್ರಕೃಪೆ: Govind Swamy

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಚೆನ್ನೈನ ಮೈಲಾಪೋರ್ ನಲ್ಲಿರುವ ಕಬಾಲೀಶ್ವರರ್ ದೇವಸ್ಥಾನದ ಕಲ್ಯಾಣಿ.

ಚಿತ್ರಕೃಪೆ: Govind Swamy

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ತಮಿಳುನಾಡಿನ ನಾಗಾಪಟ್ಟಿನಾಂನಲ್ಲಿರುವ ಶಿವನಿಗೆ ಮುಡಿಪಾದ ವೈಥೀಶ್ವರನ್ ದೇವಾಲಯದ ಕಲ್ಯಾಣಿ.

ಚಿತ್ರಕೃಪೆ: வணக்கம்

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ತಮಿಳುನಾಡಿನ ಮದುರೈನ ಮಾರಿ ಅಮ್ಮನವರ ದೇವಸ್ಥಾನದ ಕಲ್ಯಾಣಿ.

ಚಿತ್ರಕೃಪೆ: எஸ்ஸார்

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿಯಲ್ಲಿರುವ ಪವಿತ್ರ ತಿರುಕಾನೂರು ಕಲ್ಯಾಣಿ.

ಚಿತ್ರಕೃಪೆ: Bhaskaranaidu

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಆಂಧ್ರದ ತಿರುಮಲದಲ್ಲಿರುವ ಪವಿತ್ರ ಸ್ವಾಮಿ ಪುಷ್ಕರಿಣಿ.

ಚಿತ್ರಕೃಪೆ: Raji.srinivas

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಆಂಧ್ರದ ವಿಶಾಖಾಪಟ್ಟಣದಲ್ಲಿರುವ ಸಿಂಹಾಚಲಂ ದೇವಸ್ಥಾನದ ಪವಿತ್ರ ಕಲ್ಯಾಣಿ.

ಚಿತ್ರಕೃಪೆ: Adityamadhav83

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪವಿತ್ರ ಕ್ಷೇತ್ರ ಯಾಗಂಟಿಯಲ್ಲಿರುವ ಉಮಾ ಮಹೇಶ್ವರ ದೇವಸ್ಥಾನದ ಕಲ್ಯಾಣಿ.

ಚಿತ್ರಕೃಪೆ: wikimedia

ದ.ಭಾರತದ ಕಲ್ಯಾಣಿಗಳು:

ದ.ಭಾರತದ ಕಲ್ಯಾಣಿಗಳು:

ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲೆಯ ಹನುಮಕೊಂಡದಲ್ಲಿರುವ ಸಾವಿರ ಕಂಬಗಳ ದೇವಾಲಯದ ಕಲ್ಯಾಣಿ.

ಚಿತ್ರಕೃಪೆ: GorillaWarfare

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X