Search
  • Follow NativePlanet
Share
» »ಕಣ್ಪಿಳಕಿಸಬೇಡಿ! ಹೇಗಿದೆ ನೋಡಿ! ಜಮ್ಮು ಮತ್ತು ಕಾಶ್ಮೀರ

ಕಣ್ಪಿಳಕಿಸಬೇಡಿ! ಹೇಗಿದೆ ನೋಡಿ! ಜಮ್ಮು ಮತ್ತು ಕಾಶ್ಮೀರ

By Vijay

ಭಾರತದ ಮುಕುಟ ಸುಂದರಿ ಜಮ್ಮು ಮತ್ತು ಕಾಶ್ಮೀರ ರಾಜ್ಯ. ಮುಕುಟದಲ್ಲಿ ಹೇಗೆ ರತ್ನಾಭರಣಗಳು ಮಿಂಚುತ್ತದೆಯೋ ಅದೇ ರೀತಿಯಾಗಿ ಈ ರಾಜ್ಯದ ಒಂದೊಂದು ಸ್ಥಳಗಳೂ ಪ್ರಕೃತಿಯ ಅಗಾಧ ವೈಭವ, ಸೌಂದರ್ಯ, ಗಂಭೀರತೆಗಳನ್ನು ಸುಂದರವಾಗಿ ಹೊಳೆಯುವಂತೆ ಮಾಡುತ್ತ ಪ್ರವಾಸಿಗರಿಗೆ ಅನಾವರಣಗೊಳಿಸುತ್ತದೆ.

ಭೂಮಟ್ಟದಿಂದ ಅತಿ ಎತ್ತರದಲ್ಲಿರುವ ಈ ಸುಂದರ ರಾಜ್ಯವು, ಗಂಭೀರ ಸೌಂದರ್ಯದ ಹಿಮಾಲಯ ಪರ್ವತಗಳ ಸಾಮಿಪ್ಯ ಹಾಗೂ ಅಲ್ಪೈನ್ ಮತ್ತು ದೇವದಾರು ಮರಗಳ ದಟ್ಟವಾದ ಕಾಡುಗಳ ಸಾಂಗತ್ಯದಿಂದ ರಾಜವೈಭವದ ಕಳೆ ಪಡೆದಿದೆ ಎಂದರೂ ತಪ್ಪಾಗಲಾರದು.

ಈ ರಾಜ್ಯಕ್ಕೆ ಭೇಟಿ ನೀಡುವ ದೇಶೀಯ ಹಾಗೂ ವಿದೇಶಿಯ ಯಾವುದೆ ಪ್ರವಾಸಿಗನಾಗಲಿ ಇಲ್ಲಿನ ಸೌಂದರ್ಯರಾಶಿಯನ್ನು ಎಂದಿಗೂ ಮರೆಯಲಾರ. ಇಲ್ಲಿನ ಸದ್ದುಗದ್ದಲವಿಲ್ಲದ ಪ್ರಶಾಂತ ಪರಿಸರ, ಹಿಮಪಾತ ಸಮಯವೊಂದನ್ನು ಹೊರತುಪಡಿಸಿ ಎಲ್ಲಾ ಸಮಯದಲ್ಲಿರುವ ಹಿತಕರವಾದ, ಕಲ್ಮಶರಹಿತ ತಾಜಾ ತಂಪಾದ ವಾತಾವರಣ ಎಂಥವರಾದರೂ ಸರಿ ಮರುಚೈತನ್ಯ ಪಡೆಯುವಂತೆ ಮಾಡುತ್ತದೆ.

ಅಲ್ಲದೆ ಇಲ್ಲಿರುವ ನಯನಮನೋಹರ ಸರೋವರಗಳು, ಹಿಂದು ದೇವಾಲಯಗಳು, ಬೌದ್ಧ ಮಠಗಳು, ಐತಿಹಾಸಿಕ ರಚನೆಗಳು ತಮ್ಮಲ್ಲೆ ತಾವು ವಿಶಿಷ್ಟವಾಗಿದ್ದು ಗತ ಕಾಲದ ಅದ್ಭುತ ಕಥೆಗಳನ್ನು ಹೇಳುತ್ತವೆ. ಈ ರಾಜ್ಯದ ಸೌಂದರ್ಯವನ್ನು ಪದಗಳಲ್ಲಿ ಬರೆಯುತ್ತ ವರ್ಣಿಸುವುದು ಅಸಾಧ್ಯ.

ಆದಾಗ್ಯೂ ಈ ಲೇಖನವು ಜಮ್ಮು ಮತ್ತು ಕಾಶ್ಮೀರದ ಅಗಾಧ ವೈಭವತೆಯನ್ನು ಕಲ್ಪಿಸಿಕೊಳ್ಳಲು ನೆರವಾಗುವಂತೆ ಕೆಲವು ಆಯ್ದ ಚಿತ್ರಗಳ ಪ್ರವಾಸ ಮಾಡಿಸುತ್ತದೆ. ಈ ಚಿತ್ರಗಳಿಂದಲೆ ಈ ರಾಜ್ಯ ಏಕೆ ಭಾರತದ ವಜ್ರಖಚಿತ ಕಿರೀಟ, ವಿದೇಶಿಗರಲ್ಲಿ ಯಾಕಿಷ್ಟು ಜನಪ್ರೀಯ ಮುಂತಾದ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ಒಂದಿಷ್ಟು ಮಟ್ಟಿಗಾದರೂ ನೆರವಾಗುತ್ತದೆ.

ಜಮ್ಮು-ಕಾಶ್ಮೀರ ತಲುಪುವ ಬಗೆ

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಕಾಶ್ಮೀರದ ದಾಲ್ ಸರೋವರ. ಸ್ವರ್ಗ ಎಂದರೆ ಇದೇನಾ!

ಚಿತ್ರಕೃಪೆ: Vinamra Agrawal

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಚೆನಾಬ್ ನದಿ ಹರಿದಿರುವ ಪಡ್ಡರ್ ಕಣಿವೆ.

ಚಿತ್ರಕೃಪೆ: Lalit3407

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಅದ್ಭುತ ಸೌಂದರ್ಯದ ಪಹಲ್ಗಾಮ್ ಕಣಿವೆ.

ಚಿತ್ರಕೃಪೆ: KennyOMG

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಸನ್ಸಾರ್ ನಲ್ಲಿ ರೋಮಾಂಚನಗೊಳಿಸುವ ಪ್ಯಾರಾಗ್ಲೈಡಿಂಗ್.

ಚಿತ್ರಕೃಪೆ: Extremehimalayan

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಅನಂತನಾಗ್ ಜಿಲ್ಲೆಯ ವೆರಿನಾಗ್ ನಲ್ಲಿರುವ ಮುಘಲ್ ಉದ್ಯಾನ.

ಚಿತ್ರಕೃಪೆ: Amitraina

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಲೇಹ್ ಪ್ರಾಂತದಲ್ಲಿರುವ ಥಿಕ್ಸೆ ಬೌದ್ಧ ಮಠ.

ಚಿತ್ರಕೃಪೆ: wikimedia

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಲೇಹ್ ಸುತ್ತಮುತಲ್ಲಿನ ಹಸಿರುಮಯ ಭೂಪ್ರದೇಶ.

ಚಿತ್ರಕೃಪೆ: Sudhakarbichali

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಸ್ಟಾಕ್ ನಿಂದ ಲೇಹ್ ಪಟ್ಟಣ ಕಾಣುವ ರೀತಿ.

ಚಿತ್ರಕೃಪೆ: KennyOMG

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಸೋನಾಮಾರ್ಗದಲ್ಲಿರುವ ಕುಲ್ಲನ್ ಕಣಿವೆ.

ಚಿತ್ರಕೃಪೆ: Purgipa

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಸೋನಾಮಾರ್ಗದ ಜಿರೋ ಪಾಯಿಂಟ್, ವೀಕ್ಷಣಾ ಸ್ಥಳ.

ಚಿತ್ರಕೃಪೆ: Maneeshprajapati

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಪಹಲ್ಗಾಮ್ ನ ಆವತಿಂಪುರದ ಅಳಿದುಳಿದ ಅವಶೇಷಗಳು.

ಚಿತ್ರಕೃಪೆ: Priyank jain

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಪಹಲ್ಗಾಮ್ ಪಟ್ಟಣದ ಗಾಲ್ಫ್ ಆಟದ ಮೈದಾನ.

ಚಿತ್ರಕೃಪೆ: Kreativeart

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಪಹಲ್ಗಾಮ್ ನಿಂದ ಕಂಡುಬರುವ ಮತ್ತೊಂದು ಸುಂದರ ನೋಟ. ಈ ತಾಣವು ಸಾಹಸಮಯ ಕ್ರೀಡಾ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ.

ಚಿತ್ರಕೃಪೆ: Vinayaraj

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಮಂತ್ರಮುಗ್ಧಗೊಳಿಸುವ ಅರು ಕಣಿವೆ ಹಾಗೂ ತರ್ಸಾರ್ ಕೆರೆ.

ಚಿತ್ರಕೃಪೆ: Irfanaru

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಶ್ರೀನಗರದ ದಾಲ್ ಸರೋವರ.

ಚಿತ್ರಕೃಪೆ: Kundra95

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಐಶಾರಾಮಿಯಾಗಿ ಕುಳಿತುಕೊಳ್ಳಬಹುದಾದ ಶಿಕಾರಾಗಳೆಂದು ಕರೆಯಲಾಗುವ ದೋಣಿಗಳು ಪ್ರವಾಸಿಗರ ವಿಹಾರಕ್ಕಾಗಿ ದಾಲ್ ಕೆರೆಯಲ್ಲಿ ಲಭ್ಯವಿರುತ್ತವೆ.

ಚಿತ್ರಕೃಪೆ: Ashish Sharma

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಗುಲ್ಮಾರ್ಗ್ ಜಮ್ಮು ಕಾಶ್ಮೀರ ರಾಜ್ಯದಲ್ಲಿರುವ ಮತ್ತೊಂದು ಸುಂದರ ಪ್ರವಾಸಿ ಸ್ಥಳ. ಇಲ್ಲಿನ ಸೃಷ್ಟಿ ಸೌಂದರ್ಯ ನಿಜಕ್ಕೂ ಮನಸೆಳೆಯುವಂತಿದೆ.

ಚಿತ್ರಕೃಪೆ: Kundra95

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಅದ್ಭುತ ಹಿಮ ಪರ್ವತಗಳ ರಹದಾರಿ, ಖರ್ದುಂಗ್ ಲಾ ಪಾಸ್.

ಚಿತ್ರಕೃಪೆ: kamaljith

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಶ್ರೀನಗರದಲ್ಲಿರುವ ಶಾಲಿಮಾರ್ ಬಾಗ್ ಉದ್ಯಾನ.

ಚಿತ್ರಕೃಪೆ: Vinayaraj

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಶ್ರೀನಗರದಲ್ಲಿರುವ ನಿಶಾಂತ್ ಬಾಗ್ ಉದ್ಯಾನ.

ಚಿತ್ರಕೃಪೆ: Nvvchar

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ನುಬ್ರಾ ಕಣಿವೆ. ಕಣಿವೆಯ ಈ ಭಾಗದಲ್ಲಿ ಪಟ್ಟಣವೊಂದಿದ್ದು ಅದನ್ನು ಹಂಡರ್ ಎಂದು ಕರೆಯುತ್ತಾರೆ.

ಚಿತ್ರಕೃಪೆ: vaidyanathan

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ವಸಂತ ಋತುವಿನ ಸಮಯದಲ್ಲಿ ಗುಲ್ಮಾರ್ಗ್ ಕಂಡುಬರುವ ರೀತಿ.

ಚಿತ್ರಕೃಪೆ: Kashif Pathan

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಲೇಹ್ ಮನಾಲಿ ಮಾರ್ಗವು ಆಕರ್ಷಕ ಪ್ರವಾಸಿ ಮಾರ್ಗವಾಗಿದ್ದು ಇಷ್ಟವಿರುವವರು ಇಲ್ಲಿ ಟೆಂಟ್ ಹಾಕಿಕೊಂಡು ತಂಗಬಹುದು.

ಚಿತ್ರಕೃಪೆ: Raphael Affentranger

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಲಡಾಖ್ ಬಳಿ ಸ್ಥಿತವಿರುವ ಪ್ಯಾಂಗಾಂಗ್ ಕೆರೆ. ಇದು ಲವಣಯುಕ್ತ ನೀರಾಗಿದ್ದು ಮೀನುಗಳಂತಹ ಜೀವಿಗಳಿಲ್ಲ.

ಚಿತ್ರಕೃಪೆ: Karan Dhawan India

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಕಾಶ್ಮೀರದ ಪವಿತ್ರ ಅಮರನಾಥ ಯಾತ್ರೆಗೆ ತೆರಳುತ್ತಿರುವ ಭಕ್ತಾದಿಗಳು.

ಚಿತ್ರಕೃಪೆ: Info-farmer

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಕಾಶ್ಮೀರದ ಶ್ರೀನಗರದಲ್ಲಿರುವ ಟುಲಿಪ್ ಹೂವುಗಳ ಉದ್ಯಾನ.

ಚಿತ್ರಕೃಪೆ: Abdars

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಶ್ರೀನಗರದ ದಾಲ್ ಸರೋವರದಲ್ಲಿ ರೂಪಗೊಂಡಿರುವ ಚಾರ್ ಚಿನಾರ್ ನಡುಗಡ್ಡೆ.

ಚಿತ್ರಕೃಪೆ: Nvvchar

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಲಡಾಖ್ ಬಳಿಯ ವಾನ್ಲಾ ಎಂಬ ಗ್ರಾಮದ ಬಳಿ ಹರಿದಿರುವ ಯಪೋಲಾ ನದಿ.

ಚಿತ್ರಕೃಪೆ: hamon jp

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಜಮ್ಮು ಮತ್ತು ಕಾಶ್ಮೀರ ಎಂಬ ಮಾಯಾಲೋಕ:

ಯಪೋಲಾ ಕಣಿವೆ ಹಾಗೂ ನದಿ.

ಚಿತ್ರಕೃಪೆ: Hamon jp

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X