Search
  • Follow NativePlanet
Share
» »ಸಾತೋಡಿಗೆ ಒಮ್ಮೆ ಮೈ ಒಡ್ಡಿ

ಸಾತೋಡಿಗೆ ಒಮ್ಮೆ ಮೈ ಒಡ್ಡಿ

ಉತ್ತರ ಕನ್ನಡ ಜಲಪಾತಗಳಿಗೆ ಸ್ವರ್ಗ ತಾಣ. ಹಾಗಾಗಿ ಇದನ್ನು ಜಲಪಾತಗಳ ಜಿಲ್ಲೆ ಎಂದೇ ಕರೆಯುತ್ತಾರೆ. ನಿತ್ಯ ಹರಿದ್ವರ್ಣದ ಕಾಡುಗಳಿಂದ ಆವೃತ್ತವಾದ ಈ ಪ್ರದೇಶದಲ್ಲಿ ಜಲಧಾರೆಗಳ ವೈಭವ ನೋಡುವಂತಿರುತ್ತದೆ.

By Divya

ಉತ್ತರ ಕನ್ನಡ ಜಲಪಾತಗಳಿಗೆ ಸ್ವರ್ಗ ತಾಣ. ಹಾಗಾಗಿ ಇದನ್ನು ಜಲಪಾತಗಳ ಜಿಲ್ಲೆ ಎಂದೇ ಕರೆಯುತ್ತಾರೆ. ನಿತ್ಯ ಹರಿದ್ವರ್ಣದ ಕಾಡುಗಳಿಂದ ಆವೃತ್ತವಾದ ಈ ಪ್ರದೇಶದಲ್ಲಿ ಜಲಧಾರೆಗಳ ವೈಭವ ನೋಡುವಂತಿರುತ್ತದೆ. ಮುಗಿಲು ಮುಟ್ಟಿರುವ ಬೆಟ್ಟಗಳ ಮೇಲಿಂದ ಭೋರ್ಗರೆಯುತ್ತಾ ಬಂದು ಭೂಮಿಗೆ ಧುಮುಕುತ್ತವೆ. ಭೂಮಿಗೆ ಬಂದ ಮೇಲೆ ಮತ್ತೆ ಸುಮ್ಮನಾಗಿ ನದಿಗೆ ಸೇರುವ ಪರಿ ಅನನ್ಯ. ಅಂತಹ ಒಂದು ಜಲಪಾತದ ಸಾಲಿನಲ್ಲಿ ಸಾತೋಡಿ ಜಲಪಾತ ಮುಂದೆ ನಿಲ್ಲುತ್ತದೆ. ಪ್ರಕೃತಿ ಅದ್ಭುತ "ಜೋಗ್ ಜಲಪಾತ"

Stunning Sathodi Waterfalls

PC:commons.wikimedia.org

ಸಾತೋಡಿ ಜಲಪಾತ
ದಟ್ಟವಾದ ಕಾಡು, ಹಚ್ಚ ಹಸುರಿನ ವನಸಿರಿ, ನಡುವೆ ಹಕ್ಕಿಗಳ ಕಲರವ, ಬಂಡೆಗಳ ಮಧ್ಯೆ ಹಾವಿನಂತೆ ಹರಿದು ಬರುವ ಜಲಧಾರೆ. ಅಬ್ಬಾ! ಇದನ್ನು ನೋಡಲು ಎಷ್ಟು ಸುಂದರ ಎನಿಸುತ್ತದೆ ಅಲ್ಲವಾ? ಹೌದು, ಇಂತಹ ಒಂದು ಸೌಂದರ್ಯಕ್ಕೆ ಕನ್ನಡಿ ಹಿಡಿದು ನಿಲ್ಲುತ್ತದೆ ಸಾತೋಡಿ ಜಲಪಾತ. ವರ್ಷವಿಡೀ ವೈಯಾರದಿಂದ ಶೋಭಿಸುತ್ತದೆ. ಮಳೆಗಾಲದಲ್ಲಿ ಇನ್ನಷ್ಟು ಬಿಳಿ ನೊರೆಯಿಂದ ದುಮ್ಮಿಕ್ಕುತ್ತಾ ತಾನು ಯಾರಿಗೆ ಸರಿಸಾಟಿ ಇಲ್ಲ ಎಂದು ಕೇಳುತ್ತದೆ. ಸಾತೋಡಿಯ ವೈಭವವನ್ನು ಕಾಣಲು ಪ್ರತಿದಿನ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಇದು ಕಾಳಿಯ ಉಪನದಿ ಸುರಬ್ಬಿ ಹಳ್ಳದಿಂದ ಬರುತ್ತದೆ. ಸುಮಾರು 50 ಅಡಿ ಎತ್ತರದಿಂದ ದುಮ್ಮಿಕ್ಕುತ್ತಾ ಮಂದಿಯ ಹೃದಯವನ್ನು ಸೂರೆಗೊಳಿಸುತ್ತದೆ. ಇದನ್ನು ಕೇಳಿ ನಿಮಗೂ ಇಲ್ಲಿಗೆ ಬರಬೇಕು ಅನಿಸಿದರೆ ಒಮ್ಮೆ ಬಂದುಬಿಡಿ. ಮನಸೆಳೆವ ಸಾತೋಡಿ ಹಾಗೂ ಮಾಗೋಡು ಜಲಪಾತಗಳು

Stunning Sathodi Waterfalls

PC: wikipedia.org

Stunning Sathodi Waterfalls

PC: wikipedia.org

ಜಲಪಾತದ ಮೋಡಿ
ಯಾವುದೇ ಮಾಲಿನ್ಯವಿಲ್ಲದೆ ಶುದ್ಧವಾಗಿ ಇರುವ ಸಾತೋಡಿ ಜಲಪಾತದಲ್ಲಿ ಸ್ನಾನ ಮಾಡಬಹುದು. ಜಲಪಾತ ಬೀಳುವ ಸ್ಥಳದಲ್ಲಿ ಜನರು ಹೋಗಬಹುದು. ಚಳಿಯಲ್ಲಿ ಆ ತಂಪು ನೀರಿಗೆ ಮೈ ಒಡ್ಡಿದರೆ ಆ ಪುಳಕದ ಅನುಭವವೇ ಬೇರೆ. ಅಲ್ಲಿಗೆ ಹೋದಾಗ ತಪ್ಪದೆ ಜಲಧಾರೆಗೆ ಒಮ್ಮೆ ಮೈ ಒಡ್ಡಿ ಬನ್ನಿ.

ಹತ್ತಿರದ ಆಕರ್ಷಣೆ
ಸಾತೋಡಿ ಜಲಪಾತಕ್ಕೆ ಬಂದರೆ ಹತ್ತಿರದಲ್ಲಿರುವ ಮಾಗೋಡು ಜಲಪಾತ, ದಾಂಡೇಲಿ ಅಭಯಾರಣ್ಯ, ಶಿರಸಿ ಮಾರಿಕಾಂಬ ದೇಗುಲ, ಗೋಕರ್ಣ ಹಾಗೂ ಕಾರವಾರಕ್ಕೂ ಭೇಟಿ ನೀಡಬಹುದು.

Read more about: uttara kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X