Search
  • Follow NativePlanet
Share
» »ಆದಿ, ಮಧ್ಯ, ಅಂತ್ಯ ರಂಗಗಳ ಶ್ರೀರಂಗನಾಥ

ಆದಿ, ಮಧ್ಯ, ಅಂತ್ಯ ರಂಗಗಳ ಶ್ರೀರಂಗನಾಥ

By Vijay

ವಿಷ್ಣು ಭಗವಂತನು ಏಳು ಹೆಡೆಗಳ ಸರ್ಪ ಆದಿಶೇಷನ ಮೇಲೆ ಶಯನಾವಸ್ಥೆಯ ಭಂಗಿಯಲ್ಲಿ ಆರೂಢನಾಗಿ ಭಕ್ತರ ಮನದಲ್ಲಿ ಶ್ರೀರಂಗನಾಥ ಸ್ವಾಮಿಯಾಗಿ ಆಶೀರ್ವದಿಸುತ್ತಾನೆ ಎಂಬುದು ಹಿಂದೂ ಧರ್ಮದ ನಂಬಿಕೆ. ಜಗತ್ಪಾಲಕನಾದ ಶ್ರೀರಂಗನಾಥನಿಗೆ ಮುಡಿಪಾದ ಅದೇಷ್ಟೊ ದೇವಸ್ಥಾನಗಳು ನಮ್ಮ ನಾಡಿನಲ್ಲಿವೆ. ಇವುಗಳಲ್ಲಿ ವಿಶೇಷವಾಗಿವೆ ರಂಗನಾಥನ ತ್ರಿರಂಗ ಕ್ಷೇತ್ರಗಳು.

ರಂಗನಾಥನ ಈ ತ್ರಿರಂಗ ಕ್ಷೇತ್ರಗಳು ಆದಿ ರಂಗ, ಮಧ್ಯ ರಂಗ ಹಾಗೂ ಅಂತ್ಯ ರಂಗಗಳೆಂದು ಪ್ರಸಿದ್ಧವಾಗಿದ್ದು ಕಾವೇರಿ ನದಿಯಗುಂಟ ರೂಪಿತವಾದ ಮೂರು ದ್ವೀಪಗಳಲ್ಲಿ ನೆಲೆಸಿವೆ. ಒಂದು ನಂಬಿಕೆಯ ಪ್ರಕಾರ, ಕ್ರಮವಾಗಿ ಈ ಮೂರು ಸ್ಥಳಗಳಲ್ಲಿ ನೆಲೆಸಿರುವ ರಂಗನಾಥನನ್ನು ದರ್ಶಿಸಿದರೆ ಎಲ್ಲ ಪಾಪ-ಕರ್ಮಗಳು ನಾಶ ಹೊಂದಿ ಭಗವಂತನ ಕೃಪೆ ಉಂಟಾಗುತ್ತದೆ ಎನ್ನಲಾಗಿದೆ.

ಪ್ರಸ್ತುತ ಲೇಖನವು ಆ ಮೂರು ರಂಗ ಕ್ಷೇತ್ರಗಳು ಯಾವುವು ಹಾಗೂ ಅವೆಲ್ಲೆಲ್ಲಿವೆ ಎಂಬುದರ ಕುರಿತು ತಿಳಿಸುತ್ತದೆ.

ಶ್ರೀರಂಗಪಟ್ಟಣ:

ಶ್ರೀರಂಗಪಟ್ಟಣ:

ಮೂರು ರಂಗಗಳ ಪೈಕಿ ಮೊದಲನೇಯ ಆದಿ ರಂಗವೆ ಈ ಕ್ಷೇತ್ರ. ಮೈಸೂರು ನಗರಕ್ಕೆ ಅತಿ ಹತ್ತಿರದಲ್ಲಿರುವ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿ ಸ್ಥಿತವಿರುವ ಶ್ರೀರಂಗನಾಥ ಸ್ವಾಮಿ ದೇವಾಲಯವು ಅತಿ ಪ್ರಸಿದ್ಧಿ ಪಡೆದಿದ್ದು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದಿನನಿತ್ಯ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: Ananth BS

ಶ್ರೀರಂಗಪಟ್ಟಣ:

ಶ್ರೀರಂಗಪಟ್ಟಣ:

ಮೈಸೂರು ನಗರದಿಂದ ಕೇವಲ 20 ಕಿ.ಮೀ ದೂರದಲ್ಲಿರುವ ಶ್ರೀರಂಗಪಟ್ಟಣವು ಬೆಂಗಳೂರಿನಿಂದ 120 ಕಿ.ಮೀಗಳಷ್ಟು ದೂರದಲ್ಲಿದೆ. ಎರಡೂ ನಗರಗಳಿಂದ ಇಲ್ಲಿಗೆ ತೆರಳಲು ರೈಲು ಹಾಗೂ ಬಸ್ಸುಗಳು ಸುಲಲಿತವಾಗಿ ದೊರೆಯುತ್ತವೆ. ದರ್ಶನದ ವೇಳೆ ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 01.00 ಘಂಟೆ ಹಾಗೂ ಸಂಜೆ 4.00 ಘಂಟೆಯಿಂದ ರಾತ್ರಿ 8.00 ಘಂಟೆಯವರೆಗೆ.

ಚಿತ್ರಕೃಪೆ: rajesh_dangi

ಶಿವನಸಮುದ್ರಂ:

ಶಿವನಸಮುದ್ರಂ:

ತ್ರಿರಂಗ ಕ್ಷೇತ್ರಗಳ ಎರಡನೇಯ ಕ್ಷೇತ್ರ ಮಧ್ಯ ರಂಗವಾಗಿದ್ದು ಇದು ಶಿವನಸಮುದ್ರಂ ಪಟ್ಟಣದಲ್ಲಿದೆ. ಶ್ರೀರಂಗಪಟ್ಟಣದಿಂದ ಮಳುವಳ್ಳಿ ಮಾರ್ಗವಾಗಿ 87 ಕಿ.ಮೀ ಗಳಷ್ಟು ದೂರದಲ್ಲಿ ಈ ಕ್ಷೇತ್ರವನ್ನು ತಲುಪಬಹುದು. ಸಾಂಕೇತಿಕವಾಗಿ ಇದು ವಿಷ್ಣುವಿನ ಯವ್ವನಾವಸ್ಥೆಯನ್ನು ಸೂಚಿಸುವುದರಿಂದ ಇಲ್ಲಿರುವ ರಂಗನ ದೇವಸ್ಥಾನವನ್ನು ಮೋಹನರಂಗ ಅಥವಾ ಜಗನ್ಮೋಹನ ರಂಗ ದೇವಸ್ಥಾನ ಎಂತಲೂ ಕರೆಯುತ್ತಾರೆ.

ಚಿತ್ರಕೃಪೆ: Wkacnt

ಶ್ರೀರಂಗಂ:

ಶ್ರೀರಂಗಂ:

ತ್ರಿರಂಗಗಳ ಪೈಕಿ ಕೊನೆಯ ಅಥವಾ ಅಂತ್ಯ ರಂಗವು ತಮಿಳು ನಾಡಿನ ಶ್ರೀರಂಗಂನಲ್ಲಿದೆ. ತಿರುಚ್ಚಿಯಿಂದ ಶ್ರೀರಂಗಂಗೆ ಬಸ್ ಸೌಲಭ್ಯವಿದೆ. ಚೆನ್ನೈ, ಕನ್ಯಾಕುಮಾರಿ, ಹೈದರಾಬಾದ್, ಬೆಂಗಳೂರು, ಕೋಯಮತ್ತೂರು, ಮೈಸೂರು, ಮಂಗಳುರು, ಕೊಚ್ಚಿ, ರಾಮೇಶ್ವರಂ, ತಂಜಾವೂರು, ಮದುರೈ, ಚಿದಂಬರಮ್, ತೂತುಕುಡಿ, ಕೊಲ್ಲಮ್, ತೆಂಕಸಿ ಮತ್ತು ತಿರುಪತಿಯಿಂದ ಬಸ್ ಸೌಕರ್ಯಗಳು ತಿರುಚ್ಚಿಗೆ ಇವೆ. ಶ್ರೀರಂಗಂನಲ್ಲಿರುವ ಈ ದೇವಾಲಯವು ತ್ರಿರಂಗಗಳ ಪೈಕಿ ಅತಿ ದೊಡ್ಡ ದೇವಾಲಯವಾಗಿರುವುದೂ ಅಲ್ಲದೆ ದೇಶದ ಅತಿ ದೊಡ್ಡ ದೇವಾಲಯಗಳ ಪೈಕಿಯೂ ಒಂದಾಗಿದೆ.

ಚಿತ್ರಕೃಪೆ: Simply CVR

ಶ್ರೀರಂಗಂ:

ಶ್ರೀರಂಗಂ:

ಶ್ರೀರಂಗಂ ನಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಕೆಲವು ಚಿತ್ರಗಳು.

ಚಿತ್ರಕೃಪೆ: Jean-Pierre Dalbéra

ಶ್ರೀರಂಗಂ:

ಶ್ರೀರಂಗಂ:

ಶ್ರೀರಂಗಂ ನಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಕೆಲವು ಚಿತ್ರಗಳು.

ಚಿತ್ರಕೃಪೆ: Kaushik Narasimhan

ಶ್ರೀರಂಗಂ:

ಶ್ರೀರಂಗಂ:

ಶ್ರೀರಂಗಂ ನಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಕೆಲವು ಚಿತ್ರಗಳು.

ಚಿತ್ರಕೃಪೆ: Ryan

ಚಿತ್ರಕೃಪೆ: Natesh Ramasamy

ಶ್ರೀರಂಗಂ:

ಶ್ರೀರಂಗಂ:

ಶ್ರೀರಂಗಂ ನಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಕೆಲವು ಚಿತ್ರಗಳು.

ಚಿತ್ರಕೃಪೆ: Jean-Pierre Dalbéra

ಶ್ರೀರಂಗಂ:

ಶ್ರೀರಂಗಂ:

ಶ್ರೀರಂಗಂ ನಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಕೆಲವು ಚಿತ್ರಗಳು.

ಚಿತ್ರಕೃಪೆ: Jean-Pierre Dalbéra

ಶ್ರೀರಂಗಂ:

ಶ್ರೀರಂಗಂ:

ಶ್ರೀರಂಗಂ ನಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಕೆಲವು ಚಿತ್ರಗಳು.

ಚಿತ್ರಕೃಪೆ: Nagarjun Kandukuru

ಶ್ರೀರಂಗಂ:

ಶ್ರೀರಂಗಂ:

ಶ್ರೀರಂಗಂ ನಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಸ್ಥಾನದ ಕೆಲವು ಚಿತ್ರಗಳು.

ಚಿತ್ರಕೃಪೆ: Giridhar Appaji Nag Y

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X