ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ದೆಹಲಿಯ ಕೆಂಪು ಕೋಟೆಯ ಕೆಲವು ಆಶ್ಚರ್ಯಕರವಾದ ವಿಷಯಗಳು

Written by:
Published: Tuesday, June 27, 2017, 14:15 [IST]
Share this on your social network:
   Facebook Twitter Google+ Pin it  Comments

ಕೆಂಪು ಕೋಟೆ ಭಾರತ ನಗರದಲ್ಲಿನ ಸುಂದರವಾದ ಒಂದು ಐತಿಹಾಸಿಕವಾದ ಕೋಟೆ. ಈ ಕೋಟೆಯು ಯಮುನ ನದಿಯ ಮೇಲೆ ನಿರ್ಮಿಸಲಾಗಿದೆ. ಸುಮಾರು 200 ವರ್ಷಗಳ ಕಾಲ ಮೊಘಲ್ ರಾಜವಂಶದ ಚಕ್ರವರ್ತಿಗಳ ಮುಖ್ಯ ನಿವಾಸವಾಗಿತ್ತು. ದೆಹಲಿಯ ಕೆಂಪು ಕೋಟೆ ದೆಹಲಿಯ ಮಧ್ಯೆಭಾಗದಲ್ಲಿದೆ.

ಇಲ್ಲಿ ವಸ್ತು ಸಂಗ್ರಹಾಲಯವನ್ನೂ ಸಹ ಕಾಣಬಹುದಾಗಿದೆ. ಮೋಗಲರ ಚಕ್ರವರ್ತಿಗಳ ನಿವಾಸವೇ ಅಲ್ಲದೇ ರಾಜಕೀಯ ಕೇಂದ್ರ ಸಹ ಆಗಿತ್ತು. ಈ ಕೋಟೆಯು ಹಲವಾರು ರಾಜರು ಹೊಡೆದಾಡಿದ್ದಾರೆ ಹಾಗೂ ಯುದ್ಧಕ್ಕೆ ಸಾಕ್ಷಿ ಎಂದು ಕೂಡ ಕಾಣಬಹುದಾಗಿದೆ.

ಈ ಕೆಂಪು ಕೋಟೆಯಲ್ಲಿಯೇ ನಮ್ಮ ಭಾರತದ ಪ್ರಧಾನಿ ಪ್ರಜೆಗಳನ್ನು ಉದ್ದೇಶಿಸಿ ಮಾತಾನಾಡುತ್ತಾರೆ. ಇಂತಹ ಐತಿಹಾಸಿಕವನ್ನು ಹೊಂದಿರುವ ಕೆಂಪು ಕೋಟೆಯ ಬಗ್ಗೆ ತಿಳಿಯಬೇಕು ಅಲ್ಲವೇ? ಈ ಕೋಟೆಯನ್ನು ಯಾರು ಕಟ್ಟಿಸಿದರು? ಈ ಕೋಟೆಯ ಐತಿಹಾಸಿಕ ಕಥನವೇನು? ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

ಪ್ರಸ್ತುತ ಲೇಖನದ ಮೂಲಕ ದೆಹಲಿಯ ಕೆಂಪು ಕೋಟೆಯ ಬಗ್ಗೆ ತಿಳಿಯಿರಿ.

ಸ್ವಾತಂತ್ರ್ಯ

ಮೊದಲ ಬಾರಿಗೆ ಸ್ವಾತಂತ್ರ್ಯ ಪ್ರಕಟಿಸಿದ ನಂತರ ಭಾರತೀಯ ಧ್ವಜವನ್ನು ಈ ಕೆಂಪು ಕೋಟೆಯ ಮೇಲೆಯೇ ಹಾರಿಸಿದರು. ಇಲ್ಲಿ ಹಲವಾರು ರೀತಿಯ ರಾಷ್ಟ್ರದ ಉತ್ಸವಗಳನ್ನು ನಡೆಸುತ್ತಾರೆ. ಆಗಸ್ಟ್ 15 ರಂದು ಹಲವಾರು ಉತ್ಸವಗಳನ್ನು ಕಣ್ಣು ತುಂಬಿಕೊಳ್ಳಬಹುದು.


PC:Srikumar74

 

ಕಿಲಾ ಮುಬಾರಕ್

ಕೆಂಪು ಕೋಟೆಯನ್ನು ಮೊದಲು ಕಿಲಾ ಮುಬಾರಕ್ ಎಂದು ಕರೆಯುತ್ತಿದ್ದರು. ಇಲ್ಲಿ ಹಲವಾರು ಮೊಗಲ್ ರಾಜ ಚಕ್ರವರ್ತಿಗಳ ಅರಮನೆಯಾಗಿತ್ತು.

 

PC:V.Sathyamurthy

 

ನಿರ್ಮಿಸಿದವರು

ಈ ಸುಂದರವಾದ ಕೋಟೆಯನ್ನು ನಿರ್ಮಿಸಿದವರು ಮೊಗಲ್ ಚಕ್ರವತಿ ಷಹ ಜಹಾನ್. 1639ರಲ್ಲಿ ಈ ಕೋಟೆಯನ್ನು ಷಹಜಹಾನಾಬಾದ್‍ನ ಅರಮನೆಯಾಗಿ ನಿರ್ಮಿಸಿದನು.


PC:Sivashankar96

 

ನಿರ್ಮಾಣ

ಈ ಬೃಹತ್ ಕೋಟೆಯನ್ನು ಕೆಂಪು ಮರಳುಕಲ್ಲಿನಿಂದ ಅದರ ಬೃಹತ್ ಅವರಣದ ಗೋಡೆಗಳಿಂದ ನಿರ್ಮಿಸಲಾಗಿದೆ. ಈ ಕೋಟೆಯನ್ನು ಷಹಜಾಹನ್ ಅಡಿಯಲ್ಲಿ ಮೊಘಲ್ ಸೃಜನಶೀಲತೆ ಎಂದು ಬಣ್ಣಿಸಲಾಗಿದೆ.

 

PC:A.Savin

 

ವಾಸ್ತು ಶಿಲ್ಪ

ಈ ಕೋಟೆಯನ್ನು ಇಸ್ಲಾಮಿಕ್ ಹಾಗೂ ಮೊಗಲರ ಮೂಲ ಮಾದರಿಗಳ ಪ್ರಕಾರ ಯೋಜಿಸಲಾಗಿದೆಯಾದರೂ, ಟಿಮುರಿಡ್ ಮತ್ತು ಪರ್ಷಿಯನ್ ಸಂಪ್ರದಾಯಗಳ ಸಮ್ಮಿಳನವನ್ನು ಪ್ರತಿಬಿಂಬಿಸುತ್ತದೆ.

 

PC:A.Savin

 

ಪ್ರಧಾನಿ

ಭಾರತದ ಸ್ವಾತಂತ್ರ್ಯ ದಿನದಂದು ಪ್ರತಿವರ್ಷ ಆಗಸ್ಟ್ 15 ರಂದು ಪ್ರಧಾನ ಮಂತ್ರಿ ಭಾರತೀಯ "ತ್ರಿವರ್ಣ ಧ್ವಜ" ವನ್ನು ಹಾರಿಸುತ್ತಾರೆ. ನಂತರ ದೇಶದ ಪ್ರಜೆಗಳನ್ನು ಕುರಿತು ಮಾತಾನಾಡುತ್ತಾರೆ. ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಇಲ್ಲಿ ಆಚರಿಸಲಾಗುತ್ತದೆ.

 

PC:Narendra

 

ವಿಶ್ವ ಪಾರಂಪರಿಕ

2007 ರಲ್ಲಿ ಮೊಗಲರ ಅರಮನೆ ಅಂದರೆ ಕೆಂಪು ಕೋಟೆಯನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಗುರುತಿಸಲಾಯಿತು.

 

PC:CC BY

 

ಭೂಮಿಯಲ್ಲಿರುವ ಸ್ವರ್ಗ

ಭೂಮಿಯಲ್ಲಿರುವ ಸ್ವರ್ಗ ಈ ಕಿಲಾ ಮುಬಾರಕ್ (ಕೆಂಪು ಕೋಟೆ) ಎಂದು ಚಿನ್ನದ ಅಕ್ಷರಗಳಲ್ಲಿ ಕೆತ್ತಲಾಗಿದೆ. ಇದನ್ನು ಬರೆದವರು ಪ್ರಸಿದ್ಧವಾದ ಕವಿ ಅಮೀರ್ ಖುಸ್ರೋ.

 


PC:A.Savin

 

ಸತತ ಹತ್ತು ವರ್ಷ

ಈ ಅದ್ಭುತ ಕೋಟೆಯನ್ನು ಸತತ 10 ವರ್ಷಗಳ ಕಾಲ ಅಂದರೆ 1638 ರಿಂದ 1648 ರವರೆಗೆ ನಿರ್ಮಿಸಲಾಗಿದೆ. ಯಮುನ ನದಿಯ ಮೇಲೆ 120 ಎಕರೆಗಳಲ್ಲಿ ನಿರ್ಮಿಸಲಾಗಿದೆ.


PC:Ghulam Ali Khan

 

ಶಿಲ್ಪಿಗಳು

ಈ ಸುಂದರವಾದ ಕೋಟೆಯನ್ನು ಪರ್ಶಿಯ ನಿಪುಣರಿಂದ ನಿರ್ಮಿಸಲಾಗಿದೆ. ಇಲ್ಲಿ ಚಕ್ರವರ್ತಿ ನಡೆಸುವ ಸಭೆಯ ಮಂಟಪವನ್ನು ದಿವಾನ್ ಈ ಆಮ್ ಎಂದು ಕರೆಯುತ್ತಾರೆ.


PC:MADHURANTHAKAN JAGADEESAN

 

ನವಿಲಿನ ಸಿಂಹಾಸನ

ದಿವಾನ್ ಈ ಆಮ್ ಸುಮಾರು 50 ಅಡಿ ಎತ್ತರ ಹಾಗೂ 24 ಅಡಿ ಉದ್ದವಿರುವ ಈ ಸಭಾ ಮಂಟಪವನ್ನು ನಿರ್ಮಿಸಿದ್ದಾರೆ. ಪ್ರಪಂಚ ಪ್ರಖ್ಯಾತವಾದ ನವಿಲಿನ ಸಿಂಹಾಸನವಿರುವುದು ಇಲ್ಲೇ.

PC:Srikumar74

 

ಕೋಟೆಯ ಒಳಭಾಗದಲ್ಲಿ

ಈ ಸುಂದರವಾದ ಕೋಟೆಯಲ್ಲಿ ಉದ್ಯಾನವನಗಳು, ವೈಭವಯುತವಾದ ಮಂಟಪಗಳು, ಕಾರಂಜಿಗಳೆಲ್ಲವೂ ಅದ್ಭುತವಾಗಿರುತ್ತದೆ.


PC:Airunp

 

ಚರಿತ್ರಿಕ ಹಿನ್ನೆಲೆ

ಹಲವಾರು ಚಾರಿತ್ರಿಕ ಹಿನ್ನೆಲೆಗೆ ಈ ಕೋಟೆಯು ಮೌನ ಸಾಕ್ಷಿ. 1657 ರಲ್ಲಿ ಷಹಜಾಹನ್ ತನ್ನ ನಾಲ್ಕು ವಾರಸುದಾರರು ಇದನ್ನು ನೋಡಿದರು. ಸಹೋದರರನ್ನು ಕೊಲ್ಲಿ ಷಹಜಾಹನ್‍ನ್ನು ಕೈದಿ ಮಾಡಿ ಔರಂಗಾ ಜೇಬ್ ಸಿಂಹಾಸನ ರೂಡನಾದನು.

 

PC:Airunp

 

ಚಕ್ರವರ್ತಿ

ನಂತರದ 50 ವರ್ಷ 9 ಚಕ್ರವರ್ತಿಗಳ ಪಾಲನಕ್ಕೆ ಈ ಕೋಟೆಯೇ ಸಾಕ್ಷಿ. ಪರ್ಶಿನ್ ರಾಜ ನಾದಿರ್ ಷಾ ಮೊಹಮದ್ ಷಾ ಮೇಲೆ ದಂಡೆತ್ತಿ ಸೋಲಿಸಿದನು. ಆನೇಕ ಸಂಪತ್ತಿನ ಜೊತೆಗೆ ಪ್ರಖ್ಯಾತವಾದ ನವಿಲು ಸಿಂಹಾಸನವನ್ನು ಕೂಡ ಕೊಳ್ಳೆ ಹೊಡೆದನು.

 

PC:Airunp

 

ಬ್ರಿಟೀಷರು

ನಂತರ ಬ್ರಿಟೀಷರು ಈ ಕೆಂಪು ಕೋಟೆಯನ್ನು ವಶಪಡಿಸಿಕೊಂಡರು. ಸ್ವಾತಂತ್ರ್ಯ ನಂತರ ಅಂದರೆ 1947 ಆಗಸ್ಟ್ 15 ರಂದು ಮೊದಲ ಪ್ರಧಾನಿ ಜವಹಾರ್ ಲಾಲ್ ನೆಹರು ಈ ಕೋಟೆಯಲ್ಲಿ ಧ್ವಜವನ್ನು ಹಾರಿಸಿದರು.


PC:Praks73

 

ನೋಡಬೇಕಾದುದು

ಇಲ್ಲಿ ಮುಮತ್ತಾಜ್ ಮಹಲ್ ಮ್ಯೂಸಿಯಂ, ಮೋತಿ ಮಸೀದಿ, ರಂಗ್ ಮಹಲ್, ವಸ್ತು ಸಂಗ್ರಹಾಲಯ, ಬ್ಲಡ್ ಪೇಂಟಿಂಗ್ ಮ್ಯೂಸಿಯಂ, ಯುದ್ಧ ಪ್ರದರ್ಶನ ಕೊಠಡಿಗಳು ಕೂಡ ಈ ಕೋಟೆಯಲ್ಲಿ ಕಾಣಬಹುದಾಗಿದೆ.


PC:Ghulam Ali Khan

 

ಪ್ರವೇಶ ಸಮಯ

ಈ ಸುಂದರವಾದ ಕೋಟೆಯ ಪ್ರವೇಶವನ್ನು ಪಡೆಯಲು ಬೆಳಗ್ಗೆ 9:30 ರಿಂದ ಸಂಜೆ 4:30 ರವರೆಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ದೇಶದ ಮೂಲೆ ಮೂಲೆಗಳಿಂದ ಹಾಗೂ ವಿದೇಶಗಳಿಂದಲೂ ಕೂಡ ಈ ಕೋಟೆಯ ದರ್ಶನವನ್ನು ಪಡೆಯಲು ಬರುತ್ತಾರೆ.


PC: Airunp

 

ಪ್ರವೇಶ ಶುಲ್ಕ

ಈ ಐತಿಹಾಸಿಕ ಕೋಟೆಯನ್ನು ಕಾಣಲು ಪ್ರವೇಶ ಶುಲ್ಕವನ್ನು ತೆಗೆದುಕೊಳ್ಳಬೇಕಾಗುತ್ತದೆ. ಭಾರತೀಯರಿಗೆ ರೂ 10 ಹಾಗೂ ವಿದೇಶಿಯರಿಗೆ ರೂ 150.


PC:A.Savin

 

ವಿಮಾನ ಮಾರ್ಗದ ಮೂಲಕ

ಕೆಂಪು ಕೋಟೆಯ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ದೆಹಲಿಯ ಇಂದಿರಾ ಗಾಂಧಿ ಇಂಟಲ್ ಏರ್ಪೋಟ್. ಇಲ್ಲಿಂದ ಕೇವಲ 16 ಕಿ,ಮೀ ದೂರದಲ್ಲಿ ಸುಂದರವಾದ ಕೆಂಪು ಕೋಟೆಯನ್ನು ಕಾಣಬಹುದು.

ರೈಲ್ವೆ ಮಾರ್ಗದ ಮೂಲಕ

ಕೆಂಪು ಕೋಟೆಗೆ ಸಮೀಪವಾದ ರೈಲ್ವೆ ಮಾರ್ಗವೆಂದರೆ ಅದು ಚಾಂದಿನಿ ಚೌಕ್ ಮೆಟ್ರೋ ಸ್ಟೇಷನ್. ಇಲ್ಲಿಂದ ಆಟೋ ಅಥವಾ ಟ್ಯಾಕ್ಸಿಯ ಮೂಲಕ ತಲುಪಬಹುದಾಗಿದೆ.

English summary

Some of the amazing things in the Red Fort of Delhi

Red Fort is a beautiful and historic fort in India. The fort is built on the river Yamuna. For nearly 200 years the emperor of the Mughal dynasty was the main residence. Delhi's Red Fort lies in the middle of Delhi. The museum can also be found here. The Mughal Emperor's residence was also a political center. The fort is fought by several rulers and can be seen as evidence of war.
Please Wait while comments are loading...