Search
  • Follow NativePlanet
Share
» »36 ಶಿವಲಿಂಗ ದರ್ಶನ. ಇದು ಇಂಟರ್ನೆಟ್ ದೇವಸ್ಥಾನ

36 ಶಿವಲಿಂಗ ದರ್ಶನ. ಇದು ಇಂಟರ್ನೆಟ್ ದೇವಸ್ಥಾನ

By Vijay

ಧಾರ್ಮಿಕವಾಗಿ ಶ್ರೀಮಂತವಾಗಿರುವ ಭಾರತ ದೇಶದಲ್ಲಿ ಅನೇಕ ವೈವಿಧ್ಯಮಯ ದೇವರುಗಳನ್ನು ಪರಿಪಾಲಿಸುವವರನ್ನು ಕಾಣಬಹುದು. ಕೆಲವರು ವಿಷ್ಣುವಿನ ನಾಮವನ್ನು ಜಪಿಸಿದರೆ, ಕೆಲವರು ಶಿವನಾಮವನ್ನು ಜಪಿಸುವರು, ಇನ್ನೂ ಕೆಲವರು ಗಣೇಶನನ್ನು ಪಾಲಿಸಿದರೆ, ಇನ್ನೂ ಹಲವರು ಕೃಷ್ಣನನ್ನು ಪೂಜಿಸುವರು. ಇದೆ ರೀತಿಯಾಗಿ ಶಿವ ರೂಪಿ ಶಿವಲಿಂಗಗಳನ್ನು ಪೂಜಿಸುವವರೂ ಕೂಡ ಇಲ್ಲಿ ಕಮ್ಮಿ ಏನೂ ಇಲ್ಲ. ಅದೇನೆ ಇರಲಿ ಮೂಲತಃವಾಗಿ ದೇವನೊಬ್ಬ ನಾಮ ಹಲವು ಎಂಬ ತತ್ವವನ್ನಾಚರಿಸುತ್ತ ಬಂದಿರುವ ನಾವು ದೇವ, ದೇವಿಯರೆಲ್ಲರ ದೇವಾಲಯಗಳಿಗೂ ಭಕ್ತಿ ಶೃದ್ಧೆಯಿಂದ ನಡೆದುಕೊಳ್ಳುತ್ತೇವೆ.

ಇನ್ನು, ನಮ್ಮ ನಾಡಿನಲ್ಲಿ ಹಲವಾರು ಜನಪ್ರಿಯವಾದ ಶಿವಲಿಂಗಗಳನ್ನು ಕಾಣಬಹುದು. ವಿಶೇಷವೆಂದರೆ ಇತರೆ ದೇವಾಲಯಗಳಲ್ಲಿ ಆಯಾ ದೇವರುಗಳ ವಿಗ್ರಹ ಕಂಡುಬರುವಂತೆ, ಶಿವನಿಗೆ ಮುಡಿಪಾದ ಬಹುಶಃ ಎಲ್ಲ ದೇವಾಲಯಗಳಲ್ಲಿ ಆ ರೀತಿಯಿರಲಾರದೆ ಶಿವಲಿಂಗ ಪೂಜಿಸಲ್ಪಡುವುದನ್ನು ಸಾಮಾನ್ಯವಾಗಿ ಕಾಣಬಹುದು. ಪ್ರಸ್ತುತ ಲೇಖನವು ಭಾರತದ ಕೆಲವು ವಿಶಿಷ್ಟ ಶಿವಲಿಂಗಗಳ ದರುಶನ ಮಾಡಿಸುತ್ತದೆ.

ಕೋಟಿಲಿಂಗೇಶ್ವರ:

ಕೋಟಿಲಿಂಗೇಶ್ವರ:

ಕರ್ನಾಟಕದ ಚಿನ್ನದ ಗಣಿಯಾದ ಕೋಲಾರ ಜಿಲ್ಲೆಯ ಕಮ್ಮಸಂದ್ರ ಎಂಬ ಹಳ್ಳಿಯಲ್ಲಿ ಈ ಬೃಹತ್ತಾದ ಶಿವಲಿಂಗವಿರುವ ಕೋಟಿಲಿಂಗೇಶ್ವರ ದೇವಾಲಯವನ್ನು ಕಾಣಬಹುದು. ಪ್ರತಿ ವರ್ಷ ಶಿವರಾತ್ರಿಯ ಸಂದರ್ಭದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಕೋಟಿಲಿಂಗೇಶ್ವರ:

ಕೋಟಿಲಿಂಗೇಶ್ವರ:

ಇಲ್ಲಿರುವ ಬೃಹತ್ ಶಿವಲಿಂಗವು ಏಷಿಯಾ ಖಂಡದಲ್ಲೆ ಅತಿ ಎತ್ತರದ ಶಿವಲಿಂಗವಾಗಿದ್ದು ಸುಮಾರು 108 ಅಡಿಗಳಷ್ಟು ಎತ್ತರವನ್ನು ಹೊಂದಿದೆ ಎಂದರೆ ಅಚ್ಚರಿ ಆಗದೆ ಇರಲಾರದು.

ಚಿತ್ರಕೃಪೆ: gsnewid

ಕೋಟಿಲಿಂಗೇಶ್ವರ:

ಕೋಟಿಲಿಂಗೇಶ್ವರ:

ಈ ಶಿವಲಿಂಗಕ್ಕೆ ಅಭಿಮುಖವಾಗಿ 35 ಅಡಿಗಳಷ್ಟು ಎತ್ತರದ ಬಸವ ಪ್ರತಿಮೆಯನ್ನೂ ಸಹ ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: SGKiron

ಕೋಟಿಲಿಂಗೇಶ್ವರ:

ಕೋಟಿಲಿಂಗೇಶ್ವರ:

ಅಲ್ಲದೆ, ಈ ಲಿಂಗದ ಸುತ್ತಮುತ್ತಲೂ ಸುಮಾರು 15 ಎಕರೆಯಷ್ಟು ವ್ಯಾಪ್ತಿಯ ಪ್ರದೇಶದಲ್ಲಿ ಚಿಕ್ಕ ಪುಟ್ಟ ಗಾತ್ರಗಳುಳ್ಳ ಲಕ್ಷಾನುಗಟ್ಟಲೆ ಶಿವಲಿಂಗಗಳಿರುವುದು ಭೇಟಿ ನೀಡಿದವರೆಲ್ಲರ ಹುಬ್ಬೇರುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಚಿತ್ರಕೃಪೆ: Pponnada

ಬಡವಿಲಿಂಗ:

ಬಡವಿಲಿಂಗ:

ವಿಜಯನಗರದ ವೈಭವ ಸಾರುವ ಪ್ರಸ್ತುತ ಹಂಪಿ ವಿಶ್ವ ಪಾರಂಪರಿಕ ತಾಣದಲ್ಲಿ ಈ ಸುಂದರ ಪ್ರಾಚೀನ ಲಿಂಗವನ್ನು ಕಾಣಬಹುದಾಗಿದೆ. ಹಂಪಿಯ ಪ್ರಖ್ಯಾತ ಲಕ್ಷ್ಮಿ ನರಸಿಂಹ ವಿಗ್ರಹದ ಬಳಿಯಲ್ಲಿ ಸ್ಥಿತವಿರುವ ಈ ಲಿಂಗವು ಯಾವಾಗಲೂ ಒಳಹರಿವ ನೀರಿನಿಂದ ಆವೃತವಾಗಿರುತ್ತದೆ.

ಚಿತ್ರಕೃಪೆ: Dey.sandip

ಹೊಯ್ಸಳೇಶ್ವರ:

ಹೊಯ್ಸಳೇಶ್ವರ:

ಕರ್ನಾಟಕದ ಸುಪ್ರಸಿದ್ಧ ಪಾರಂಪರಿಕ ಅವಳಿ ಪ್ರವಾಸಿ ಕ್ಷೇತ್ರಗಳಾದ ಬೇಲೂರು ಹಳೆಬೀಡಿನ ಹಳೆಬೀಡುವಿನಲ್ಲಿ ಈ ಸುಂದರವಾದ ಶಿವಲಿಂಗವನ್ನು ಹೊಯ್ಸಳೇಶ್ವರ ದೇವಾಲಯದಲ್ಲಿ ಕಾಣಬಹುದು.

ಚಿತ್ರಕೃಪೆ: Anks.manuja

ಸಹಸ್ರಲಿಂಗ:

ಸಹಸ್ರಲಿಂಗ:

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಸಹಸ್ರಲಿಂಗವು ಒಂದು ಧಾರ್ಮಿಕ ಕ್ಷೇತ್ರ. ಇಲ್ಲಿನ ಶಾಲ್ಮಲ ನದಿ ತಟದಲ್ಲಿ ಹೆಸರಿಗೆ ಅನುಗುಣವಾಗಿ ಸಾವಿರಾರುಗಟ್ಟಲೆ ಲಿಂಗರಚನೆಗಳಾಗಿರುವುದನ್ನು ಕಾಣಬಹುದು. ಶಿವರಾತ್ರಿಯ ಸಂದರ್ಭದಲ್ಲಿ ಈ ಪ್ರದೇಶವು ಭಕ್ತ ಜನರಿಂದ ತುಂಬಿ ತುಳುಕುತ್ತಿರುತ್ತದೆ.

ಚಿತ್ರಕೃಪೆ: Unique.creator

ಕದ್ರಿ:

ಕದ್ರಿ:

ಮಂಗಳೂರಿನ ಕದ್ರಿಯಲ್ಲಿರುವ ದೇವಾಲಯದ ಶಿವಲಿಂಗ.

ಚಿತ್ರಕೃಪೆ:Vaikoovery

ತೀರ್ಥಹಳ್ಳಿ:

ತೀರ್ಥಹಳ್ಳಿ:

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತುಂಗಾ ನದಿ ತಟದಲ್ಲಿ ನಿರ್ಮಾಣವಾದ ಪ್ರಾಚೀನ ಶಿವಲಿಂಗ ಹಾಗೂ ನಂದಿ ವಿಗ್ರಹಗಳು. ಎಳ್ಳವಮಾಸ್ಯೆ ಜಾತ್ರೆಯ ಸಂದರ್ಭದಲ್ಲಿ ಅಗಾಧ ಪ್ರಮಾಣದ ಭಕ್ತ ಜನರು ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಚಿತ್ರಕೃಪೆ: Manjeshpv

1008 ಲಿಂಗಗಳು:

1008 ಲಿಂಗಗಳು:

ಕರ್ನಾಟಕದ ಹಂಪಿ ಪಟ್ಟಣದ ಬಂಡೆ ಬೆಟ್ಟಗಳ ನೆಲವನ್ನು ವೀಕ್ಷಿಸುವಾಗ ಒಂದು ನೆಲದ ಮೇಲೆ ಅದ್ಭುತವಾಗಿ ಕಡೆಯಲಾದ 1008 ಲಿಂಗಗಳ ದರುಶನವಾಗುತ್ತದೆ. ಅಂದಿನ ಕಲಾ ಕೌಶಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ ಈ ರಚನೆಗಳು.

ಚಿತ್ರಕೃಪೆ: Pratheepps

ಬೊರ್‍ರಾ ಗುಹೆ ಲಿಂಗಗಳು:

ಬೊರ್‍ರಾ ಗುಹೆ ಲಿಂಗಗಳು:

ಆಂಧ್ರದ ಅದ್ಭುತ ಗಿರಿಧಾಮವಾದ ಅರಕು ಪ್ರದೇಶದ ಅನಂತಗಿರಿ ಬೆಟ್ಟಗಳ ಶ್ರೇಣಿಯಲ್ಲಿರುವ ಬೊರ್‍ರಾ ಗುಹೆಗಳು ಸ್ಟಾಲಗ್ಮೈಟ್ ರಚನೆಗಳಿಗಾಗಿ ಪ್ರಖ್ಯಾತವಾಗಿವೆ. ಈ ಗುಹೆಗಳಲ್ಲಿ ಅದ್ಭುತವಾಗಿ ರೂಪಿತವಾದ ಈ ಶಿವಲಿಂಗಗಳ ರಚನೆಯನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Joshi detroit

ಭೈರವೇಶ್ವರ ಶಿವಲಿಂಗ:

ಭೈರವೇಶ್ವರ ಶಿವಲಿಂಗ:

ಆಂಧ್ರದ ಕಡಪಾ ಜಿಲ್ಲೆಯ ಪುಲಿವೆಂದ್ಲ ತಲೂಕಿನ ಭೈರವೇಶ್ವರ ಶಿವಲಿಂಗ.

ಚಿತ್ರಕೃಪೆ: Mopuru

ಲೇಪಾಕ್ಷಿ:

ಲೇಪಾಕ್ಷಿ:

ಆಂಧ್ರದ ಲೇಪಾಕ್ಷಿಯಲ್ಲಿರುವ ವೀರಭದ್ರನ ದೇವಾಲಯದಲ್ಲಿರುವ ಏಳು ಹೆಡೆಗಳ ಸರ್ಪದ ರಕ್ಷಣೆಯಲ್ಲಿರುವಂತೆ ನಿರ್ಮಿಸಲಾದ ಅದ್ಭುತ ಶಿವಲಿಂಗ.

ಚಿತ್ರಕೃಪೆ: Pavithrah

ರಾಜ್ಬರಿ ಲಿಂಗ:

ರಾಜ್ಬರಿ ಲಿಂಗ:

ಅಸ್ಸಾಂ ರಾಜ್ಯದ ನಗಾಂವ್ ಜಿಲ್ಲೆಯ ಡೊಬೋಕಾ ಬಳಿಯ ಜುಗಿಜಾನ್ ಪ್ರದೇಶದಲ್ಲಿರುವ ರಾಜ್ಬರಿ ಎಂಬ ಪುರಾತನ ಲಿಂಗ.

ಚಿತ್ರಕೃಪೆ: Diganta Talukdar

ದಣಿಧರ್:

ದಣಿಧರ್:

ಗುಜರಾತಿನ ಜಾಮ್ ನಗರ್ ಜಿಲ್ಲೆಯ ಕಲವಡ್ ತಾಲೂಕಿನಲ್ಲಿರುವ ದಣಿಧರ್ ಶಿವ ಲಿಂಗ.

ಚಿತ್ರಕೃಪೆ: જીતેન્દ્રસિંહ

ಬೈಜನಾಥ ಶಿವಲಿಂಗ:

ಬೈಜನಾಥ ಶಿವಲಿಂಗ:

ಹಿಮಾಚಲ ಪ್ರದೇಶದ ಕಂಗ್ರಾ ಪಟ್ಟಣದಲ್ಲಿರುವ ಬೈಜನಾಥ ದೇವಾಲಯದ ಶಿವ ಲಿಂಗವಿದು. ದಂತಕಥೆಯ ಪ್ರಕಾರ, ಸ್ವತಃ ಅಸುರರಾಜ ರಾವಣನೆ ಈ ಲಿಂಗವನ್ನು ಶಿವನಿಂದ ಪಡೆದು ತಂದಿದ್ದನ್ನೆನ್ನಲಾಗುತ್ತದೆ.

ಚಿತ್ರಕೃಪೆ: Jngupta

ಅಮರನಾಥ:

ಅಮರನಾಥ:

ಜಮ್ಮು ಕಾಶ್ಮೀರ ರಾಜ್ಯದ ಅತಿ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ಅಮರನಾಥ. ಸ್ವಾಭಾವಿಕವಾಗಿ ಹಿಮಗಡ್ಡೆಯಿಂದ ಉದ್ಭವಿಸಿರುವ ಈ ಶಿವಲಿಂಗದ ದರುಶನ ಪಡೆಯಲು ಸಾವಿರಾರು ಭಕ್ತರು ಈ ದಿವ್ಯ ಸನ್ನಿಧಿಗೆ ಆಗಮಿಸುತ್ತಿರುತ್ತಾರೆ.

ಚಿತ್ರಕೃಪೆ: Gktambe

ಮಾಮ್ಲೇಶ್ವರ:

ಮಾಮ್ಲೇಶ್ವರ:

ಜಮ್ಮು ಕಾಶ್ಮೀರ ರಾಜ್ಯದ ಪಹಲ್ಘಾಮ್ ಜಿಲ್ಲೆಯ ಮಾಮಲ್ ನಲ್ಲಿರುವ ಮಾಮ್ಲೇಶ್ವರ ಶಿವಲಿಂಗ.

ಚಿತ್ರಕೃಪೆ: Divya Gupta

ಪಹಾಡಿ ಮಂದಿರ ಶಿವಲಿಂಗ:

ಪಹಾಡಿ ಮಂದಿರ ಶಿವಲಿಂಗ:

ಜಾರ್ಖಂಡ್ ರಾಜ್ಯದ ರಾಂಚಿ ಪಟ್ಟಣದ ಗುರುತರ ಪ್ರದೇಶವಾದ ಪಹಾಡಿ ಮಂದಿರದಲ್ಲಿರುವ ಪ್ರಸಿದ್ಧ ಶಿವಲಿಂಗ. ಗುಡ್ಡದ ತುದಿಯ ಮೇಲೆ ಈ ದೇವಾಲಯ ನಿರ್ಮಿತವಾಗಿದ್ದು ನಿತ್ಯ ಹಲವಾರು ಭಕ್ತರು ಈ ಮಂದಿರಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Biswarup Ganguly

ಮಾಹೇಶ್ವರ:

ಮಾಹೇಶ್ವರ:

ಮಧ್ಯ ಪ್ರದೇಶ ರಾಜ್ಯದ ಮಾಹೇಶ್ವರದಲ್ಲಿ ಹರಿದಿರುವ ನರ್ಮದಾ ನದಿ ತಟದಲ್ಲಿ ನಂದಿ ವಿಗ್ರಹದೊಡನೆ ನಿರ್ಮಿತವಾಗಿರುವ ಶಿವಲಿಂಗ.

ಚಿತ್ರಕೃಪೆ: nevil zaveri

ಭೋಜ್ಪುರ್:

ಭೋಜ್ಪುರ್:

ಮಧ್ಯ ಪ್ರದೇಶದ ಭೋಜ್ಪುರ್ ನಲ್ಲಿರುವ ಪುರಾತನ ಶಿವ ದೇವಾಲಯದ ಶಿವಲಿಂಗ.

ಚಿತ್ರಕೃಪೆ: Yann

ಬುಲ್ಲೆ ಸರ್ಕಾರ್:

ಬುಲ್ಲೆ ಸರ್ಕಾರ್:

ಮಧ್ಯ ಪ್ರದೇಶದ ಇಂದೋರ್ ಪಟ್ಟಣದಲ್ಲಿರುವ ಬುಲ್ಲೆ ಸರ್ಕಾರ್ ಎಂಬ ಖ್ಯಾತಿಯ ಶಿವಲಿಂಗ ದೇವಾಲಯ.

ಚಿತ್ರಕೃಪೆ: Mohit8soni

ಖಜುರಾಹೊ:

ಖಜುರಾಹೊ:

ಮಿಥುನ ಶಿಲ್ಪಗಳಿಗೆ ಪ್ರಖ್ಯಾತಿ ಪಡೆದ ಮಧ್ಯ ಪ್ರದೇಶದ ಖಜುರಾಹೊ ಪ್ರದೇಶದಲ್ಲಿರುವ ಶಿವಲಿಂಗವಿರುವ ದೇವಾಲಯ.

ಚಿತ್ರಕೃಪೆ: Rajenver

ಎಲಿಫಂಟಾ ಗುಹೆಗಳು:

ಎಲಿಫಂಟಾ ಗುಹೆಗಳು:

ವಿಶ್ವ ಪಾರಂಪರಿಕ ತಾಣದ ಮಾನ್ಯತೆ ಪಡೆದಿರುವ ಮುಂಬೈನ ಪೂರ್ವಕ್ಕೆ ಸುಮಾರು 10 ಕಿ.ಮೀ ದೂರದಲ್ಲಿರುವ ಎಲಿಫಂಟಾ ಗುಹೆಗಳಲ್ಲಿ ಕಂಡುಬರುವ ಪುರಾತನ ಶಿವಲಿಂಗ.

ಚಿತ್ರಕೃಪೆ: Nehha.1990

ಎಲ್ಲೋರಾ:

ಎಲ್ಲೋರಾ:

ವಿಶ್ವಪಾರಂಪರಿಕ ತಾಣ ಮಾನ್ಯತೆ ಪಡೆದಿರುವ ಮಹಾರಾಷ್ಟ್ರದ ಮತ್ತೊಂದು ಖ್ಯಾತ ಪ್ರವಾಸಿ ತಾಣಗಳಾದ ಅಜಂತಾ ಎಲ್ಲೋರಾ ಗುಹೆಗಳ ಎಲ್ಲೋರಾ ಗುಹೆಯಲ್ಲಿ ಕಂಡುಬರುವ ಪುರಾತನ ಶಿವಲಿಂಗ.

ಸತಾರಾ:

ಸತಾರಾ:

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಬಮ್ನೋಲಿಯ ನಾರಾಯಣ ಮಹಾರಾಜ ಮಠದಲ್ಲಿರುವ ಸುಂದರ ಶಿವಲಿಂಗ.

ಚಿತ್ರಕೃಪೆ: Nilrocks

ಮಹಾದೇವ ದೇವಾಲಯ:

ಮಹಾದೇವ ದೇವಾಲಯ:

ಪುಣೆ ಮಹಾನಗರದಲ್ಲಿರುವ ಮಹಾದೇವ ದೇವಾಲಯದಲ್ಲಿರುವ ವಿನೂತನ ಶಿವಲಿಂಗ.

ಚಿತ್ರಕೃಪೆ: Bsnehal

ರತ್ನಾಗಿರಿ:

ರತ್ನಾಗಿರಿ:

ಮಹಾರಾಷ್ಟ್ರದ ರತ್ನಾಗಿರಿಯ ತಿಬಾ ಪ್ಯಾಲೇಸ್ ನಲ್ಲಿರುವ ಸರ್ಪದ ಆಶ್ರಯದಲ್ಲಿರುವ ಸುಂದರ ಶಿವಲಿಂಗ.

ಚಿತ್ರಕೃಪೆ: Viraat Kothare

ರಾಮೇಶ್ವರ ದೇವಾಲಯ:

ರಾಮೇಶ್ವರ ದೇವಾಲಯ:

ಮಹಾರಾಷ್ಟ್ರದ ಸಿಂಧುದುರ್ಗ ವಿಜಯದುರ್ಗದಲ್ಲಿರುವ ರಾಮೇಶ್ವರ ದೇವಾಲಯದ ಶಿವಲಿಂಗ.

ಚಿತ್ರಕೃಪೆ: कोल्हापुरी

ಬಾಲಸೊರ್:

ಬಾಲಸೊರ್:

ಒಡಿಶಾದ ಭುವನೇಶ್ವರದಿಂದ ಸುಮಾರು 194 ಕಿ.ಮೀ ದೂರದಲ್ಲಿರುವ ಬಾಲಸೊರ್ ಎಂಬ ಪಟ್ಟಣದಲ್ಲಿರುವ ಎತ್ತರದ ಭೂಸಂದೇಶ್ವರ ಶಿವಲಿಂಗ.

ಚಿತ್ರಕೃಪೆ: Psubhashish

ಮೌಂಟ್ ಅಬು:

ಮೌಂಟ್ ಅಬು:

ರಾಜಸ್ಥಾನ ರಾಜ್ಯದ ಪ್ರಖ್ಯಾತ ಗಿರಿಧಾಮ ಪ್ರದೇಶವಾದ ಮೌಂಟ್ ಅಬು ಪಟ್ಟಣದ ಉದ್ಯಾನವೊಂದರಲ್ಲಿ ಕಂಡುಬರುವ ಸುಂದರ ಬೃಹತ್ ಶಿವಲಿಂಗ.

ಚಿತ್ರಕೃಪೆ: 1694

ಬೃಹದೀಶ್ವರ ದೇವಾಲಯ:

ಬೃಹದೀಶ್ವರ ದೇವಾಲಯ:

ತಮಿಳುನಾಡಿನ ತಂಜಾವೂರು ಪಟ್ಟಣದಲ್ಲಿರುವ ವಿಶ್ವ ಖ್ಯಾತಿಯ ಬೃಹದೀಶ್ವರ ದೇವಸ್ಥಾನದಲ್ಲಿರುವ ಬೃಹತ್ ಏಕಶಿಲಾ ಶಿವಲಿಂಗ.

ಚಿತ್ರಕೃಪೆ: Shefali11011

ಧ್ಯಾನಲಿಂಗ ದೇವಾಲಯ:

ಧ್ಯಾನಲಿಂಗ ದೇವಾಲಯ:

ತಮಿಳುನಾಡಿನ ಕೋಯಮತ್ತೂರಿನಲ್ಲಿ ಈ ದೇವಾಲಯವಿದ್ದು ಶಿವರೂಪಿ ಲಿಂಗವು ನೋಡುಗರನ್ನು ಅಪಾರವಾಗಿ ಸೆಳೆಯುತ್ತದೆ.

ಚಿತ್ರಕೃಪೆ: DASHBot

ಜಂಬುಕೇಶ್ವರ:

ಜಂಬುಕೇಶ್ವರ:

ತಮಿಳುನಾಡಿನ ಶ್ರೀಕ್ಷೇತ್ರ ಶ್ರೀರಂಗಂನಲ್ಲಿರುವ ಜಂಬುಕೇಶ್ವರ ದೇವಾಲಯದ ಪವಿತ್ರ ಶಿವಲಿಂಗ.

ಚಿತ್ರಕೃಪೆ: Ilya Mauter

ಅರಸನೇಶ್ವರ:

ಅರಸನೇಶ್ವರ:

ತಮಿಳುನಾಡಿನ ವಿಲ್ಲುಪುರಂನ ರಾಯಪುತುಪಾಕ್ಕಂ ಹಳ್ಳಿಯಲ್ಲಿರುವ ಸುಂದರ ಹಾಗೂ ಅಷ್ಟೆ ಗಂಭೀರವಾದ ಅರಸನೇಶ್ವರ ಶಿವಲಿಂಗ.

ಚಿತ್ರಕೃಪೆ: Arunankapilan

ಹರಿಹರನಾಥ:

ಹರಿಹರನಾಥ:

ಉತ್ತರ ಪ್ರದೇಶದ ಗ್ಯಾನಪುರದಲ್ಲಿರುವ ಹರಿಹರನಾಥ ಮಂದಿರದ ಶಿವಲಿಂಗ.

ಚಿತ್ರಕೃಪೆ: Vikasudayrajsharma

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X