ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಭಕ್ತನಿಗಾಗಿ ತನ್ನ ದಿಕ್ಕನ್ನೇ ಬದಲಾಯಿಸಿಕೊಂಡ ದೇವಾಲಯ : ಅಂಬರನಾಥ ದೇವಾಲಯ

Written by:
Published: Saturday, August 12, 2017, 9:30 [IST]
Share this on your social network:
   Facebook Twitter Google+ Pin it  Comments

ದೇವತೆಗಳು ಭಕ್ತರಿಗೆ ಪರೀಕ್ಷೆಗಳನ್ನು ಮಾಡುವುದು ಸಹಜ. ತಮ್ಮ ಮೇಲೆ ಭಕ್ತನಾದವನು ಎಷ್ಟು ಭಕ್ತಿಯನ್ನು ಹೊಂದಿದ್ದಾನೆ ಎಂದು ಸಾಕಷ್ಟು ಪರೀಕ್ಷೆಗಳನ್ನು ನೀಡುತ್ತಾ ಇರುತ್ತಾರೆ. ಭಕ್ತನ ಹಲವಾರು ಭೇಡಿಕೆಗಳನ್ನು ತಕ್ಷಣ ನೆರವೇರಿಸುವ ದೇವತಾ ಮೂರ್ತಿಯ ಬಗ್ಗೆ ನಾವು ಪುರಾತನ ಕಾಲದಿಂದಲೂ ಅವುಗಳ ನಿರ್ದಶನವನ್ನು ಕಾಣುತ್ತಾ ಬಂದಿದ್ದೇವೆ.

ಇಂಥಹ ಘಟನೆಗೆ ಸಾಕ್ಷಿ ನಮ್ಮ ಕರ್ನಾಟಕ ರಾಜ್ಯ. ಕನಕದಾಸರ ಭಕ್ತಿಯಿಂದಾಗಿ ಶ್ರೀ ಕೃಷ್ಣನೇ ತನ್ನ ದಿಕ್ಕು ಬದಲಾಯಿಸಿದ ಘಟನೆ ನಮ್ಮ ಉಡುಪಿಯಲ್ಲಿ ನಡೆದಿರುವುದು ಸಾಮಾನ್ಯವಾಗಿ ನಮಗೆ ಗೊತ್ತಿರುವ ಸಂಗತಿಯೇ ಆಗಿದೆ.

ಅದೇ ರೀತಿ ಮಹಾರಾಷ್ಟ್ರದಲ್ಲಿನ ಶಿವಾಲಯದಲ್ಲಿಯೂ ಕೂಡ ಶಿವನು ತನ್ನ ಭಕ್ತನಿಗೆ ದರ್ಶನ ಭಾಗ್ಯ ನೀಡಲು ತನ್ನ ದಿಕ್ಕು ಬದಲಾಯಿಸಿಕೊಂಡ ದೇವಾಲಯವೆಂದರೆ ಅದು ಅಮರೇಶ್ವರ ದೇವಾಲಯವಾಗಿದೆ. ಈ ಅಂಬರನಾಥ ದೇವಾಲಯವು ಅತ್ಯಂತ ಪುರಾತನವಾದ ದೇವಾಲಯವಾಗಿದ್ದು, ಈ ದೇವಾಲಯಕ್ಕೆ ಒಂದು ರೋಚಕ ಕಥೆ ಕೂಡ ಆಧರಿಸಿದೆ.

ಪ್ರಸ್ತುತ ಲೇಖನದ ಮೂಲಕ ಮಾಹಿಮಾನ್ವಿತವಾದ ಅಂಬರನಾಥ ದೇವಾಲಯ ರಹಸ್ಯಗಳ ಬಗ್ಗೆ ತಿಳಿಯೋಣ.

ಎಲ್ಲಿದೆ?

ಈ ಅಂಬರನಾಥ ದೇವಾಲಯವು ಮಹಾರಾಷ್ಟ್ರ ರಾಜ್ಯದ ಅಂಬರ್‍ನಾಥ ಎಂಬ ಊರಿನಿಂದ 2 ಕಿ.ಮೀ ದೂರದಲ್ಲಿ ಅಂಬರೇಶ್ವರ ದೇವಾಲಯವಿದೆ. ಈ ದೇವಾಲಯವನ್ನು ಅಂಬ್ರೇಶ್ವರ ಶಿವ ದೇವಾಲಯವೆಂದೂ ಸಹ ಕರೆಯುತ್ತಾರೆ. ಸ್ಥಳೀಯ ಜನರು ಪುರಟನಾ ಶಿವಲಯ್ ಎಂದು ಕರೆಯುತ್ತಾರೆ.

ಪುರಾತನವಾದ ದೇವಾಲಯ

ನಮ್ಮ ಭಾರತ ದೇಶದಲ್ಲಿ ಹಲವಾರು ಪುರಾತನವಾದ ದೇವಾಲಯಗಳು ಇವೆ. ಅವುಗಳಲ್ಲಿ ಈ ಅಂಬರನಾಥ ದೇವಾಲಯವು ಒಂದಾಗಿದೆ. ಈ ದೇವಾಲಯಕ್ಕೆ ಒಂದು ಸ್ವಾರಸ್ಯಕರವಾದ ಚರಿತ್ರೆಯನ್ನು ಹೊಂದಿದೆ. ಅದೆನೆಂದರೆ ........

ಮಹಾಭಾರತ

ಮಹಾಭಾರತ ಕಾಲದಲ್ಲಿ ಪಾಂಡವರು ವನವಾಸದ ಸಮಯದಲ್ಲಿ ಈ ಅಂಬರನಾಥ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ ಎಂದು ಅಲ್ಲಿನ ಸ್ಥಳ ಪುರಾಣವು ಹೇಳುತ್ತದೆ.

ಸ್ವಯಂ ಭೂ

ಈ ಅಂಬರನಾಥ ದೇವಾಲಯದ ಮತ್ತೊಂದು ವಿಶೇಷವೆನೆಂದರೆ ಇಲ್ಲಿನ ಲಿಂಗ ರೂಪಿ ಪರಮಶಿವನು ಸ್ವಯಂ ಭೂ ಲಿಂಗವಾಗಿದೆ. ಈ ಲಿಂಗವನ್ನು ಅನಂತ ಆಕಾಶ ಲಿಂಗವಾಗಿ ಪಾಂಡವರು ಗುರುತಿಸಿದರು.

ಏಕ ಶಿಲೆ-ಒಂದೇ ರಾತ್ರಿಯಲ್ಲಿ ನಿರ್ಮಾಣ

ಈ ದೇವಾಲಯವನ್ನು ಏಕ ಶಿಲೆಯಲ್ಲಿ ನಿರ್ಮಾಣ ಮಾಡಿದ ಅದ್ಭುತವಾದ ಮಂದಿರವಾಗಿದೆ. ಆಶ್ಚರ್ಯ ಏನಪ್ಪ ಎಂದರೆ ಒಂದೇ ರಾತ್ರಿಯಲ್ಲಿ ಇಂಥಹ ಸುಂದರವಾದ ದೇವಾಲಯವನ್ನು ನಿರ್ಮಾಣ ಮಾಡಿರುವುದು.

ಆಕಾಶಲಿಂಗ

ದೇವಾಲಯದಲ್ಲಿರುವ ಲಿಂಗವು ಆಕಾಶ ಲಿಂಗವಾಗಿರುವುದರಿಂದ ಆ ಲಿಂಗ ಗರ್ಭಗುಡಿಯ ಮೇಲ್ಛಾವಣಿ ನಿರ್ಮಾಣ ಮಾಡಲಿಲ್ಲವಂತೆ. ಇಂದಿಗೂ ಈ ದೇವಾಲಯ ಅದೇ ವಿಧವಾಗಿ ಇದೆ.

ದೇವಾಲಯದ ಜೀರ್ಣೋದ್ಧರಣ

ಆದರೆ ಈ ದೇವಾಲಯದ ಜೀರ್ಣೋದ್ಧರಣ 1060 ರಲ್ಲಿ ನಡೆಯಿತು. ಉತ್ತರ ಭಾರತ ದೇಶವನ್ನು ಕೂಡ ಆಳ್ವಿಕೆ ನಡೆಸಿದ ಶಿಲಾಹಾರ ರಾಜ ವಂಶಕ್ಕೆ ಸೇರಿದ ಚಿತ್ತರಾಜ ಈ ದೇವಾಲಯಕ್ಕೆ ಮೊದಲ ಬಾರಿಗೆ ಜೀರ್ಣೋದ್ಧರಣ ಮಾಡಿದನಂತೆ.

ರಾಜ ಮುಮ್ಮುನಿ

ಈ ಅಂಬರನಾಥ ದೇವಾಲಯವನ್ನು ನಿರ್ಮಾಣ ಮಾಡಿದವರು ಶಿಲಾಹಾರ ರಾಜ ಚಿತ್ತರಾಜ ಇದನ್ನು ಬಹುಶಃ ನಿರ್ಮಾಣ ಮಾಡಿದನು. ನಂತರ ಆತನ ಮಗ ಮುಮ್ಮುನಿ ಈ ದೇವಾಲಯವನ್ನು ಪುನಃ ನಿರ್ಮಾಣ ಹಾಗು ಅಭಿವೃದ್ಧಿ ಮಾಡಿದನಂತೆ.

ಮಹಾ ಅದ್ಭುತ

ಆದರೆ ಈ ದೇವಾಲಯವನ್ನು ಅಭಿವೃದ್ಧಿ ಮಾಡುವ ಮುಂಚೆ ಒಂದು ಮಹಾ ಅದ್ಭುತ ನಡೆದಿತ್ತು ಎಂದು ಅಲ್ಲಿನ ಸ್ಥಳ ಪುರಾಣ ಹೇಳುತ್ತದೆ.

ದಲಿತ

ಅಂದಿನ ಕಾಲದಲ್ಲಿ ಮೇಲ್ಜಾತಿ, ಕೆಳಜಾತಿ ಎಂಬ ವರ್ಗಗಳು ಇದ್ದು, ಕೆಳಜಾತಿಯವರನ್ನು ಹೀನವಾಗಿ ಕಾಣುತ್ತಿದ್ದರು. ಆ ಸಮಯದಲ್ಲಿ ಈ ಅಂಬರನಾಥ ದೇವಾಲಯಕ್ಕೆ ದಲಿತರ ಪ್ರವೇಶ ನಿಶಿದ್ಧವಾಗಿತ್ತು.

ಶಿವಭಕ್ತ

ಪರಮಶಿವಭಕ್ತನಾದ ದಲಿತನು ಪರಮೇಶ್ವರನ ದರ್ಶನವನ್ನು ಪಡೆಯಲು ಈ ಅಂಬರನಾಥ ದೇವಾಲಯಕ್ಕೆ ಪ್ರವೇಶ ಮಾಡಲು ಹೋದನು. ಆದರೆ ಆತನು ನೀಚ ಕುಲಸ್ಥನಾದ್ದರಿಂದ ಅಲ್ಲಿನ ಭದ್ರತಾ ಸಿಬ್ಬಂಧಿ ದೇವಾಲಯದ ಉತ್ತರ ಭಾಗದಲ್ಲಿ ಭಕ್ತನನ್ನು ಹೊರ ದಬ್ಬಿದರು.

ಪಾರ್ಥನೆ

ಇದರ ಬಗ್ಗೆ ಸ್ವಲ್ಪ ಕಾಲ ಚಿಂತಿಸಿದ ಶಿವ ಭಕ್ತನು ಅಲ್ಲಿಯೇ ನಿಂತು ಪರಮಶಿವನ್ನು ಪಾರ್ಥಿಸುತ್ತಾನೆ. ಆ ಸಮಯದಲ್ಲಿ ದೇವಾಲಯವೇ ಉತ್ತರ ದಿಕ್ಕಿಗೆ ತಿರುಗಿತ್ತಂತೆ.

ಮಹಾಭಕ್ತ

ಶಿವನ ಮಹಾಭಕ್ತನಿಗಾಗಿ ತನ್ನ ದಿಕ್ಕನ್ನೇ ಬದಲಾಯಿಸಿಕೊಂಡ ಘಟನೆಯನ್ನು ನೋಡಿದ ಎಲ್ಲರು ಆಶ್ಚರ್ಯ ಚಕಿತರಾಗಿ ಅಂದಿನಿಂದ ಆ ಭಕ್ತನ ಜೊತೆಗೆ ದಲಿತ ಪ್ರಜೆಗಳೆಲ್ಲರಿಗೂ ದೇವಾಲಯದ ಪ್ರವೇಶವನ್ನು ಕಲ್ಪಿಸಿದರಂತೆ.

ಮುಮ್ಮುನಿ

ತುಂಬ ವರ್ಷಗಳಿಂದ ಈ ದೇವಾಲಯವು ವಿಭಿನ್ನವಾಗಿ ಇರುವಾಗ ಈ ದೇವಾಲಯವನ್ನು ಅಭಿವೃದ್ಧಿ ಮಾಡಲು ಬಂದ ಮುಮ್ಮುನಿ. ಗರ್ಭಗುಡಿಯಲ್ಲಿನ ಸ್ವಾಮಿಯು ಪೂರ್ವದಿಕ್ಕಿಗೆ ಇದ್ದು, ಆದರೆ ಪ್ರವೇಶ ದ್ವಾರವು ಉತ್ತರ ದಿಕ್ಕಿಗೆ ಇರುವುದನ್ನು ಗಮನಿಸಿದನಂತೆ.

ನಂದಿ

ದೇವಾಲಯವು ತನ್ನ ಸ್ಥಿತಿಯನ್ನು ಮಾರ್ಪಾಟು ಮಾಡಿಕೊಂಡಿದ್ದರಿಂದ ಪೂರ್ವದಲ್ಲಿ ಇರುವ ನಂದಿಗೆ ಯಾವುದೇ ಮಂಟಪವಿಲ್ಲದೇ ಹೋಯಿತಂತೆ. ಆಗ ವಾಸ್ತು ಸಿದ್ಧಾಂತರ ಮೇರೆಗೆ ಉತ್ತರ ದಿಕ್ಕಿನ ಜೊತೆ ಪೂರ್ವ ಹಾಗು ದಕ್ಷಿಣ ದ್ವಾರಗಳನ್ನು ನಿರ್ಮಾಣ ಮಾಡಿದನು.

ಇಂದಿಗೂ ಗಮನಿಸಿದರೆ

ಇಂದಿಗೂ ಆ ದೇವಾಲಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಉತ್ತರ ದಿಕ್ಕಿನಲ್ಲಿರುವ ದೇವಾಲಯದ ಗೋಡೆಗಳು ಸ್ವಲ್ಪ ಉತ್ತರದಿಕ್ಕನ್ನು ಕಾಣುತ್ತಿವೆ ಎಂಬಂತೆ ಕಾಣುತ್ತದೆ.

ದಕ್ಷಿಣ ಶೈಲಿ ದೇವಾಲಯ

ಉತ್ತರ ಭಾರತದಲ್ಲಿ ದಕ್ಷಿಣ ಶೈಲಿಯಲ್ಲಿ ನಿರ್ಮಾಣ ಮಾಡಿರುವ ಏಕೈಕ ದೇವಾಲಯವೆಂದರೆ ಅದು ಮಹಾರಾಷ್ಟ್ರದ ಅಂಬರನಾಥ ದೇವಾಲಯವಾಗಿದೆ.

ಶಿಲಾಹಾರ ರಾಜವಂಶಸ್ಥರು

ಈ ದೇವಾಲಯವನ್ನು ಅಭಿವೃದ್ಧಿಗೊಳಿಸಿದ ಶಿಲಾಹಾರ ರಾಜವಂಶಸ್ಥರು ದಕ್ಷಿಣ ಹಾಗು ಉತ್ತರ ಭಾರತವನ್ನು ಆಳ್ವಿಕೆ ಮಾಡಿದ್ದರಿಂದ ಈ ಪ್ರದೇಶವನ್ನು ದಕ್ಷಿಣ ಭಾರತ ಶೈಲಿಯಲ್ಲಿ ನಿರ್ಮಾಣ ಮಾಡಿದ್ದಾರೆ.

ಮತ್ತೊಂದು ಅದ್ಭುತ

ಈ ದೇವಾಲಯದ ಅದ್ಭುತವಾದ ಶಿಲ್ಪಗಳನ್ನು ಕಾಣಬಹುದಾಗಿದೆ. ಈ ದೇವಾಲಯದ ಮತ್ತೊಂದು ಅದ್ಭುತವೆಂದರೆ ಅದು ಅಂಬರನಾಥ ಲಿಂಗ.

ಮೇಲ್ಛಾವಣಿ

ಈ ಅಂಬರನಾಥ ದೇವಾಲಯದ ಗರ್ಭಗುಡಿಯಲ್ಲಿ ಮೇಲ್ಛಾವಣಿ ಇಲ್ಲದೇ ಇರುವುದರಿಂದ ಆ ಗರ್ಭಗುಡಿಯ ಗೋಡೆಗಳಿಂದ ನಿಲ್ಲಿಸಲು 4 ಸ್ತಂಭಗಳನ್ನು ಆಧಾರವಾಗಿ ತೆಗೆದುಕೊಂಡು ನಿರ್ಮಾಣ ಮಾಡಿದರಂತೆ. ಆದರೆ ಈ ದೇವಾಲಯದ ಗರ್ಭಗುಡಿಯ ನಿರ್ಮಾಣದ ಶೈಲಿ ಮಹಾಅದ್ಭುತವಾದುದು ಎಂದು ಹೇಳಬಹುದು.

ಸೂರ್ಯಕಿರಣ

ಲಿಂಗದ ಮೇಲೆ ಬೀಳುವ ಸೂರ್ಯಾಕಿರಣಗಳು ವಿಸ್ಮಯವಾಗಿ ಕಾಣುತ್ತದೆ. ಸ್ವಾಮಿಯನ್ನು ದರ್ಶನ ಮಾಡಿಕೊಳ್ಳಬೇಕಾದರೆ ಭೂಮಿಯ ಒಳಭಾಗದಲ್ಲಿ ಇಳಿಯಬೇಕು. ಗರ್ಭಗುಡಿಯಲ್ಲಿ ತೆರಳಿದನಂತರ ಕೆಳಗೆ ಸಾಗಲು 20 ಮೆಟ್ಟಿಲುಗಳು ಇರುತ್ತವೆ. ಅವುಗಳ ಮೂಲಕ ಕೆಳಗೆ ಇಳಿದರೆ ಅಲ್ಲಿ ಸ್ವಾಮಿಯು ದರ್ಶನವನ್ನು ನೀಡುತ್ತಾನೆ.

ಸುರಂಗ ಮಾರ್ಗ

ಈ ದೇವಾಲಯದಲ್ಲಿ ಒಂದು ಕಿ.ಮೀ ಉದ್ದದ ಭೂಗತ ಸುರಂಗವಿದೆ. ಮಹಾಶಿವರಾತ್ರಿಯಲ್ಲಿ ಈ ದೇವಾಲಯವು ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಶಿವನಿಂದ ಆರ್ಶೀವಾದ ಪಡೆಯಲು ದೇವಾಲಯಕ್ಕೆ ಶ್ರಾವಣ ಮಾಸದಲ್ಲಿ ಹೆಚ್ಚಾಗಿ ಭಕ್ತರು ಭೇಟಿ ನೀಡುತ್ತಾರೆ.

ಹೇಗೆ ಸಾಗಬೇಕು?

ವಿಮಾನ ಮಾರ್ಗದ ಮೂಲಕ: ಅಂಬರನಾಥ ದೇವಾಲಯಕ್ಕೆ ಸಮೀಪವಾದ ವಿಮಾನ ಮಾರ್ಗವೆಂದರೆ ಅದು ಮುಂಬೈ ವಿಮಾನ ನಿಲ್ದಾಣವಾಗಿದೆ. ಇಲ್ಲಿಂದ ಟ್ಯಾಕ್ಸಿ ಅಥವಾ ಕ್ಯಾಬ್‍ನ ಮೂಲಕ ಸುಲಭವಾಗಿ ಈ ದೇವಾಲಯಕ್ಕೆ ತಲುಪಬಹುದಾಗಿದೆ.

ರೈಲ್ವೆ ನಿಲ್ದಾಣ ಮಾರ್ಗವಾಗಿ

ಸಮೀಪದ ರೈಲ್ವೆ ನಿಲ್ದಾಣವೆಂದರೆ ಅದು ಮುಂಬೈ. ಈ ಮುಂಬೈ ಮಾರ್ಗವಾಗಿ ಹಲವಾರು ಅಂಬರನಾಥ ಸ್ಟೇಷನ್‍ನಲ್ಲಿ ಇಳಿದು ಇಲ್ಲಿಂದ ಕೇವಲ 2 ಕಿ.ಮೀ ದೂರದಲ್ಲಿ ಈ ದೇವಾಲಯಕ್ಕೆ ತಲುಪಬಹುದಾಗಿದೆ.

English summary

Shiv Mandir, Ambarnath

The Shiv Mandir of Ambarnath is also known as the Ambreshwar Shiva Temple,and known locally as Puratana Shivalaya.. It is situated on the bank of Vadavan river, 2 km away from Ambarnath railway station in Maharashtra, India. The temple was built in 1060 AD in the Hemadpanthi-style, beautifully carved in stone. It was probably built by Shilahara king Chhittaraja, it may also have been rebuilt by his son Mummuni.
Please Wait while comments are loading...