Search
  • Follow NativePlanet
Share
» »ಪುಣೆಯ ಶನಿವಾರವಾಡಾದ ಘೋರ ರಹಸ್ಯ

ಪುಣೆಯ ಶನಿವಾರವಾಡಾದ ಘೋರ ರಹಸ್ಯ

By Vijay

ಕೆಲ ಸ್ಥಳಗಳ ಕುರಿತು ರಹಸ್ಯ ವಿಚಾರಗಳು, ನಿಗೂಢತೆ ಮುಂತಾದವುಗಳನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ. ಅದರಲ್ಲೂ ವಿಶೇಷವಾಗಿ ಭೂತ ಅಥವಾ ಆತ್ಮಪೀಡಿತ ಸ್ಥಳಗಳ ಕುರಿತು ತಿಳಿಯಲು ನಮ್ಮಲ್ಲಿ ಬಹುತೇಕರಿಗೆ ಬಲು ಆಸಕ್ತಿ. ಕೆಲವರಂತೂ ಅಂತಹ ಸ್ಥಳಗಳಿಗೆ ಭೇಟಿ ನೀಡಲೂ ಸಹ ಬಯಸುತ್ತಾರೆ.

ವಿಶೇಷ ಲೇಖನ : ರಹಸ್ಯಮಯ ಹಾಗೂ ಪಿಶಾಚಗ್ರಸ್ತ ಸ್ಥಳಗಳು

ಇಂದಿನ ವಿಜ್ಞಾನ ಯುಗದಲ್ಲಿ ಭೂತ, ಆತ್ಮ ಮುಂತಾದ ವಿಚಾರಗಳು ಯಾವುದೆ ಮಹತ್ವ ಹೊಂದಿಲ್ಲವಾದರೂ ಕೆಲ ಸ್ಥಳಗಳು ಹಿಂದಿನಿಂದಲೂ ಆಗಿ ಹೋದ ಕೆಲ ಹೃದಯ ವಿದ್ರಾವಕ ಘಟನೆಗಳಿಂದ ಒಂದಲ್ಲ ಒಂದು ರೀತಿಯಲ್ಲಿ ತನ್ನ ಸುತ್ತ ಕಥೆಯನ್ನು ಹೆಣೆದುಕೊಂಡು ಬಂದಿರುತ್ತವೆ. ಈ ಲೇಖನವು ಅಂತಹ ಒಂದು ವಿಸ್ಮಯ, ರೋಚಕ ಹಿನ್ನಿಲೆಯುಳ್ಳ ಒಂದು ಸ್ಮಾರಕದ ಕುರಿತು ತಿಳಿಸುತ್ತದೆ.

ಪುಣೆ ಹೋಟೆಲುಗಳು

ಮಹಾರಾಷ್ಟ್ರ ರಾಜ್ಯದ ಪುಣೆ ನಗರದಲ್ಲಿರುವ ಶನಿವಾರವಾಡಾ ಎಂಬ ಅರಮನೆಯು ಈ ಪ್ರವಾಸಿ ಲೇಖನದ ಸ್ಫೂರ್ತಿ. ಇದೊಂದು ಭೂತಾತ್ಮ ಪೀಡಿತ ತಾಣವೆಂದೂ ಸಹ ಪ್ರಸಿದ್ಧವಾಗಿದೆ. ಅಂದರೆ ಇಲ್ಲಿ ಆತ್ಮಗಳ ಕಾಟವಿದೆಯೆಂದು ಈ ಲೇಖನ ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ಸಾಕಷ್ಟು ಸ್ಥಳೀಯರ ನಂಬಿಕೆಯಂತೆ ಇದು ಪಿಶಾಚಗ್ರಸ್ತವಾಗಿದೆಯೆಂದು ಹೇಳಲಾಗುತ್ತದೆ. ಕಥೆ ಏನೇ ಇರಲಿ ಈ ತಾಣವು ಪುಣೆ ನಗರದ ಒಂದು ಜನಪ್ರೀಯ ಪ್ರವಾಸಿ ಆಕರ್ಷಣೆಯೂ ಹೌದು. ಸಾಕಷ್ಟು ಜನ ಪ್ರವಾಸಿಗರು ಈ ಅರಮೆನೆಗೆ ಭೇಟಿ ನೀಡುತ್ತಿರುತ್ತಾರೆ. ಇದರ ಹಿನ್ನಿಲೆಯ ಕುರಿತು ಸ್ಲೈಡುಗಳಲ್ಲಿ ಓದಿರಿ.

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಪ್ರಮುಖವಾಗಿ ಈ ಅರಮನೆಯು ಮರಾಠಾ ಸಾಮ್ರಾಜ್ಯದ ಅರಸರುಗಳಾಗಿದ್ದ ಪೇಶ್ವಾ ರಾಜವಂಶಸ್ಥರೊಂದಿಗೆ ನಂಟು ಹೊಂದಿದೆ. ಹಿನ್ನಿಲೆಯ ಮುಂಚೆ ಇದರ ಕುರಿತು ಸಂಕ್ಷೀಪ್ತವಾಗಿ ಒಮ್ಮೆ ತಿಳಿದು ಬಿಡಿ. ಈ ಅರಮನೆಯನ್ನು ಒಂದನೆಯ ಬಾಜಿರಾವ್ ಎಂಬ ಪೇಶ್ವೆಯು 1730 ರಲ್ಲಿ ನಿರ್ಮಾಣಿಸಲು ಆದೀಶಿಸಿದ. ಇದರ ಕಾಮಗಾರಿಯು 1732 ರಲ್ಲಿ ಪೂರ್ಣಗೊಂಡಿತು.

ಚಿತ್ರಕೃಪೆ: Ramakrishna Reddy y

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಮರಾಠಿಯಲ್ಲಿ ವಾಡಾ ಎಂದರೆ ವಾಸಿಸುವ ಮನೆ ಅಥವಾ ಪ್ರದೇಶ ಎಂದಾಗುತ್ತದೆ. ಒಂದೊಮ್ಮೆ ಬಾಜಿರಾವನು ಈ (ಅರಮನೆಯಿರುವ) ಸ್ಥಳದಲ್ಲಿ ಮೊಲವೊಂದು ಭಯಂಕರವಾಗಿ ನಾಯಿಯ ಮೇಲೆ ದಾಳಿ ನಡೆಸಲು ಅದನ್ನು ಹಿಂಬಾಲಿಸುತ್ತಿದ್ದುದ್ದನ್ನು ಕಂಡಾಗ, ಆ ಪ್ರಸಂಗವು ಅವನಿಗೆ ಸ್ಫೂರ್ತಿ ತುಂಬಿ ಇಲ್ಲೊಂದು ಕಟ್ಟಡ ನಿರ್ಮಾಣ ಮಾಡಲು ಪ್ರೇರೆಪಿಸಿತು.

ಚಿತ್ರಕೃಪೆ: Bornav27may

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಅಂತೆಯೆ ಆತ ಇಲ್ಲಿ ಶನಿವಾರ ವಾಡಾ ಎಂಬ ಕೋಟೆಯ ಅರಮನೆಯನ್ನು ನಿರ್ಮಿಸಲು ತೀರ್ಮಾನಿಸಿದ. ಇದೊಂದು ಅಜಯ ಕೋಟೆಯಾಗಬೇಕೆಂದು ನಿರ್ಣಯಿಸಿ ಇದರ ಭದ್ರತೆಯ ಕುರಿತು ಸಾಕಷ್ಟು ಕಾಳಜಿವಹಿಸಿದ. ಇಂದು ನಾವು ಆ ಕೋಟೆಯ ಸುರಕ್ಷತೆಯೆಡೆ ಎಷ್ಟು ಗಮನ ಹರಿಸಿದ್ದನೆಂದು ತಿಳಿಯಬಹುದು.

ಚಿತ್ರಕೃಪೆ: Pavanaja

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಮೂಲತಃ ಇದೊಂದು ಏಳು ಅಂತಸ್ತಿನ ಅರಮನೆಯಾಗಿತ್ತು. ಆದರೆ 1828 ರಲ್ಲಿ ಜರುಗಿದ ಅಗ್ನಿ ಅವಗಢದಿಂದ ಇದರ ಸಾಕಷ್ಟು ಭಾಗವು ನಾಶಗೊಂಡಿತು. ಇಂದು ಸ್ಥಳೀಯ ಆಡಳಿತದಿಂದ ಈ ತಾಣವನ್ನು ಸಂರಕ್ಷಿಸಲಾಗಿದ್ದು ಅನೇಕ ಕಾರ್ಯಕ್ರಮಗಳೂ ಕೂಡ ಇಲ್ಲಿ ಜರುಗುತ್ತಿರುತ್ತವೆ.

ಚಿತ್ರಕೃಪೆ: Swapnil99n49

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಆವಾಗಾವಾಗ ಸಂಗೀತ ಕಾರಂಜಿಗಳ ಮನಮೋಹಕ ಚಟುವಟಿಕೆಯು ಇಲ್ಲಿ ಆಯೋಜಿಸಲ್ಪಡುತ್ತಿರುತ್ತದೆ. ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಸಾರ್ವಜನಿಕರಿಗೆ ಇಲ್ಲಿ ಪ್ರವೇಶವನ್ನು ನಿಗದಿತ ಶುಲ್ಕದೊಂದಿಗೆ ಕಲ್ಪಿಸಲಾಗಿದೆ. ಮುಂದಿನ ಸ್ಲೈಡುಗಳಲ್ಲಿ ಇದರ ಮೈನವಿರೇಳಿಸುವ ಕಥೆ ತಿಳಿಯಿರಿ.

ಚಿತ್ರಕೃಪೆ: Gaurav

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಪಾಣಿಪತ್ ಕದನದಲ್ಲಿ ಪೇಶ್ವಾ ದೊರೆ ವಿಶ್ವಾಸ್ ರಾವ್ ಹಾಗೂ ದಂಡನಾಯಕ ಸದಾಶಿವರಾವ್ ಹತರಾದ ನಂತರ ಪೇಶ್ವೆ ಸಾಮ್ರಾಜ್ಯವು ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸುತ್ತಿತ್ತು. ಈ ವಿಷಯ ತಿಳಿದು ಆಘಾತಕ್ಕೊಳಗಾಗಿ ಪೇಶ್ವಾ ಸ್ರೀಮಂತ (ಪೇಶ್ವೆಯಲ್ಲಿನ ಒಂದು ಹುದ್ದೆ) ನಾನಾಸಾಹಿಬ್ ಸಹ ಮರಣ ಹೊಂದಿದರು.

ಚಿತ್ರಕೃಪೆ: Aakash.gautam

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ನಂತರ ಪೇಶ್ವೆ ಸಾಮ್ರಾಜ್ಯದ ರಾಜಕುಮಾರನಾಗಿದ್ದ ಮಾಧವರಾವ್ ರಾಜ್ಯವನ್ನು ಕೆಲ ಕಾಲ ಆಳಿದ ಹಾಗೂ ನಾನಾ ಸಾಹಿಬರ ಕಿರಿಯ ಪುತ್ರನಾದ ರಘುನಾಥ ರಾವ್ ರಾಜಪ್ರತಿನಿಧಿಯಾಗಿ ನೇಮಕಗೊಂಡ. ಆದರೆ ರಘುನಾಥ ರಾವ್ ನಿಗೆ ರಾಜನಾಗಬೇಕೆಂಬ ಮಹದಾಸೆ ಇದ್ದುದರಿಂದ ಆಡಳಿತ ವಿಷಯದಲ್ಲಿ ತನ್ನ ಮೂಗು ತೂರಿಸಲಾರಂಭಿಸಿದ.

ಚಿತ್ರಕೃಪೆ: Sivaraj D

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಅಷ್ಟೆ ಅಲ್ಲದೆ ಹೈದರಾಬಾದಿನ ನಿಜಾಮನೊಂದಿಗೆ ರಹಸ್ಯವಾಗಿ ಸೇರಿ ಪೇಶ್ವೆಯ ವಿರುದ್ಧ ಪಿತೂರಿ ಮಾಡಿದ. ಈ ವಿಷಯ ಪೇಶ್ವೆ ಮನೆತನದವರಿಗೆ ತಿಳಿದು ರಘುನಾಥ ರಾಯನ ಮೇಲೆ ಬೇಸರಗೊಂಡು ಅವನನ್ನು ಮನೆಯಲ್ಲೆ ದಿಗ್ಬಂಧನ ಮಾಡಲಯಿತು.

ಚಿತ್ರಕೃಪೆ: Clayton Tang

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಇತ್ತ ಕೆಲ ಕಾಲಗಳ ರಾಜ್ಯಭಾರದ ನಂತರ ಮಾಧವರಾವ್ ಮರಣ ಹೊಂದಿದ. ನಂತರ ಆ ಗದ್ದುಗೆಯ ಜವಾಬ್ದಾರಿಯು ಅವನ ಕಿರಿಯ ಸಹೋದರನಾದ ನಾರಾಯಣ ರಾವ್ ಮೇಲೆ ಬಿದ್ದಿತು. ಆ ಸಮಯದಲ್ಲಿ ನಾರಾಯಣರಾವನಿಗೆ ಕೇವಲ 14 ವರ್ಷಗಳು.

ಚಿತ್ರಕೃಪೆ: ANI(GM)

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಹೀಗಿರುವಾಗ ರಘುನಾಥರಾಯ ದಿಗ್ಬಂಧನದಿಂದ ಮುಕ್ತಿ ಹೊಂದಿದ. ಮತ್ತೆ ತನ್ನ ಆಸೆಯನ್ನು ಪೂರೈಸಿಕೊಳ್ಳುವ ದೃಷ್ಟಿಯಿಂದ ತನ್ನ ನಂಬಿಕಸ್ಥ ಸೈನಿಕಗೆ, "ನಾರಾಯಣರಾವ್ ಲಾ ಧಾರಾ" ಎಂದು ಆದೇಶಿಸಿದ. ಮರಾಠಿಯಲ್ಲಿ ಹೀಗೆಂದರೆ ನಾರಾಯಣರಾವ್ ನನ್ನು ಹಿಡಿಯಿರಿ ಎಂದರ್ಥ.

ಚಿತ್ರಕೃಪೆ: Ashok Bagade

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಆದರೆ, ರಘುನಾಥರಾಯನ ಹೆಂಡತಿ ಆನಂದಿಬಾಯಿಯೂ ಸಹ ಕುಬುದ್ಧಿ ಹಾಗೂ ಆಸೆಬುರುಕಳಾಗಿದ್ದರಿಂದ ತನ್ನ ಗಂಡನ ಸಂದೇಶವನ್ನು ತಿರುಚಿ ಅದನ್ನು ಸೈನಿಕರಿಗೆ ಪಾಲಿಸಲು ಹೇಳಿದಳು. ಅಂದರೆ ಅವಳು ಧಾರಾ ಅನ್ನುವ ಬದಲು ಮಾರಾ ಎಂದು ಹೇಳಿದಳು. ಇದರ ಅರ್ಥ ಸಾಯಿಸಿ ಎಂದಾಗುತ್ತದೆ.

ಚಿತ್ರಕೃಪೆ: Nitish kharat

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಇದಾದ ಮೇಲೆ ಸೈನಿಕರು ಮನೆಯ ತುಂಬೆಲ್ಲ ನಾರಾಯಣರಾವನನ್ನು ಅಟ್ಟಾಡಿಸಿಕೊಂಡು ತುಂಡು ತುಂಡಾಗಿ ಕತ್ತರಿಸಿ ಹತ್ಯೆಗೈದರು. ಅಟ್ಟಾಡಿಸುವ ಸಂದರ್ಭದಲ್ಲಿ ನಾರಾಯಣ ರಾಯನು "ಕಾಕಾ ಮಲಾ ವಾಚ್ವಾ" ಎಂದು ಅರಚುತ್ತಿದ್ದ. ಅಂದರೆ ಚಿಕ್ಕಪ್ಪ ನನ್ನನ್ನು ರಕ್ಷಿಸು ಎಂದರ್ಥ.

ಚಿತ್ರಕೃಪೆ: Nitish kharat

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಇದಾದ ಮೇಲೆ, ಆ ಹುಡುಗನ ಅತೃಪ್ತ ಆತ್ಮ ಇಂದಿಗೂ ಇಲ್ಲಿ ಅಲೆದಾಡುತ್ತಿದೆ ಎನ್ನಲಾಗುತ್ತದೆ. ಕೆಲ ಸ್ಥಳೀಯರ ಪ್ರಕಾರ, ವರ್ಷದ ಕೆಲ ನಿರ್ದಿಷ್ಟ ಸಮಯದ ಪೌರ್ಣಿಮೆಯ ದಿನದಂದು ರಾತ್ರಿಯ ವೇಳೆ ಆ ಹುಡುಗನ ರೋದನ ಕೇಳಿಸುತ್ತದೆನ್ನಲಾಗುತ್ತದೆ.

ಚಿತ್ರಕೃಪೆ: ANI(GM)

ಶನಿವಾರವಾಡಾ ರಹಸ್ಯ:

ಶನಿವಾರವಾಡಾ ರಹಸ್ಯ:

ಕಥೆ, ನಂಬಿಕೆ, ಘಟನೆ ಏನೇ ಇರಲಿ, ಆದರೆ ಇಂದು ಈ ಅರಮನೆಯು ಶಾಂತವಾಗಿ ನೆಲೆಸಿದ್ದು ಭೇಟಿ ನೀಡುವವರಿಗೆ ತನ್ನ ಅಳಲನ್ನೊ ಅಥವಾ ಕಥೆಯನ್ನೊ ಹೇಳಲು ಬಯಸುತ್ತಿದೆ ಎಂಬ ಭಾವನೆ ಮೂಡಿಸುತ್ತದೆ. ಕಾಲದ ಗರ್ಭದಲ್ಲಿ ಹುದುಗಿ ಹೋದ ಘಟನೆ ಒಂದೆಡೆಯಾದರೆ ಅರಮನೆಯ ಮೋಹಕ, ಆಕರ್ಷಕ ವಾತಾವರಣ ಇನ್ನೊಂದೆಡೆ. ಏನೆ ಆಗಲಿ ಪುಣೆಯಲ್ಲಿದ್ದಾಗ ಒಮ್ಮೆಯಾದರೂ ದರ್ಶಿಸಲೇಬೇಕು ಶನಿವಾರ ವಾಡಾ ಅನ್ನು.

ಚಿತ್ರಕೃಪೆ: Mayur239

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X