Search
  • Follow NativePlanet
Share
» »ರೋಮಾಂಚನದ ಜೊತೆ ಭಯಪಡಿಸುವ ಸರಿಸ್ಕಾ ನೋಡ್ಬೇಕಾ?

ರೋಮಾಂಚನದ ಜೊತೆ ಭಯಪಡಿಸುವ ಸರಿಸ್ಕಾ ನೋಡ್ಬೇಕಾ?

ಹುಲಿಗಳ ಅದ್ಭುತ ಸಂರಕ್ಷಣೆಯ ತಾಣವಾಗಿರುವ ಸರಿಸ್ಕಾ ರಾಷ್ಟ್ರೀಯ ಉದ್ಯಾನವನವು ರಾಜಸ್ಥಾನ ರಾಜ್ಯದ ಅಲ್ವಾರ್ ಜಿಲ್ಲೆಯಲ್ಲಿದ್ದು ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ

By Vijay

ಮೊದ ಮೊದಲು ಅಂದರೆ ರಾಜರುಗಳ ಸಮಯದಲ್ಲಿ ಒಂದು ಪಟ್ಟಣದಿಂದ ಇನ್ನೊಂದು ಪಟ್ಟಣಕ್ಕೆ ಹೋಗಬೇಕೆಂದರೆ ಬಂಡಿಗಳನ್ನು ಕಟ್ಟಿಕೊಂಡು ಹೊರಡಬೇಕಾಗುತ್ತಿತ್ತು. ಅದರಲ್ಲೂ ಜನರು ಗುಂಪು ಗುಂಪಾಗಿ ಹಾಗೂ ವಿಶೇಷವಾಗಿ ದಿನದ ಸಮಯದಲ್ಲೆ ಪ್ರಯಣ ಮಾಡಬಯಸುತ್ತಿದ್ದರು.

ಇದಕ್ಕೆ ಮುಖ್ಯ ಕಾರಣ ಅವರು ಕಾಡುಗಳ ಮಧ್ಯದಿಂದ ಸಾಗಬೆಕಾಗಿತ್ತು. ಇನ್ನೂ ಕಾಡೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಭಯವೆ. ಡಕಾಯಿತರ ಅಂಜಿಕೆ ಒಂದೆಡೆಯಾದರೆ ಇನ್ನೊಂದೆಡೆ ಕಾಡುಗಳಲ್ಲಿರುವ ದೃಷ್ಟ ಮೃಗಗಳ ಆಕ್ರಮಣದ ಹೆದರಿಕೆ. ಅದರಲ್ಲೂ ಹುಲಿ, ಸಿಂಹಗಳಂತೂ ಬಂದರೆ ಮುಗಿದೆ ಹೋಯಿತು. ಹೀಗೆ ಅನಾದಿ ಕಾಲದಿಂದಲೂ ಹುಲಿಯಾಗಲಿ, ಸಿಂಹವಾಗಲಿ ನಮ್ಮ ಮನಗಳಲ್ಲಿ ಭಯದ ಜೊತೆ ಒಂದು ರೀತಿಯ ಕುತೂಹಲ ಉಂಟು ಮಾಡುವ ಜೀವಿಗಳಾಗಿವೆ.

ಜಿಮ್ ಕಾರ್ಬೆಟ್ ಎಂಬ ಸೆಳೆಯುವ "ಮ್ಯಾಗ್ನೆಟ್"

ಇಂದಿಗೂ ಪ್ರಾಣಿ ಮೃಗಾಲಯದಲ್ಲಿ ಹುಲಿಗಳನ್ನು ನೋಡುವುದೆಂದರೆ ರೋಮಾಂಚನ ಉಂಟಾಗದೆ ಇರಲಾರದು. ಅಷ್ಟಕ್ಕೂ ಮೃಗಾಲಯ ಹೊರತು ಪಡಿಸಿ ಅವುಗಳನ್ನು ಅವುಗಳ ನೈಜ ತಾಣದಲ್ಲೆ ನೋಡುವುದೆಂದರೆ ಹೇಗಿರಬೇಡ. ಉತ್ಸಾಹದ ಜೊತೆ ಧೈರ್ಯವೂ ಇರಲೇಬೇಕಲ್ಲವೆ. ಹಾಗಿದ್ದಲ್ಲಿ ಯಾಕೆ ನೀವೊಮ್ಮೆ ಭಾರತದ ಬಲು ಪ್ರಸಿದ್ಧ ಹಾಗೂ ಸುಂದರವಾದಂತಹ ಹುಲಿ ಸಂರಕ್ಷಿತ ಕಾಡುಗಳಲ್ಲಿ ಒಂದಾದ ಸರಿಸ್ಕಾ ಅರಣ್ಯಧಾಮಕ್ಕೆ ಭೇಟಿ ನೀಡಬಾರದು. ಇದು ಕೇವಲ ಹುಲಿಗಳಿಗೆ ಮಾತ್ರವಲ್ಲದೆ ಭಾರತದಲ್ಲಿ ಕಂಡುಬರುವ ಇನ್ನೂ ಹತ್ತ ಹಲವು ಜೀವಿಗಳಿಗೆ ಆಶ್ರಯ ನೀಡಿದ ತಾಣವಾಗಿದೆ.

ಕಾಡಿನ ಮಧ್ಯದಲ್ಲಿರುವ ಪ್ರಾಚೀನ ಕೋಟೆಗಳ ಅವಶೇಷಗಳು, ನಿರ್ಜನವಾಗಿ ಹಾಗೆಯೆ ಬಿಟ್ಟ ಪಾಳು ಮಂದಿರಗಳು, ಮಳೆಗಾಲದಿ ಅಪರೂಪವಾಗಿ ಕಂದುಬರುವ ಚಿಕ್ಕ ಜಲಪಾತಗಳು, ಪ್ರಶಾಂತತೆಯ ನಡುವೆಯೂ ಭಯ ಮೂಡಿಸುವಂತಹ ಪ್ರಾಣಿ ಪಕ್ಷಿಗಳ ಹಾರಾಟ ಚಿರಾಟಗಳು. ಭಯ ಮೂಡಿಸುವಂತಹ ಆಗುಂತಕ ಸ್ಥಳಕ್ಕೆ ಬಂದ ಅನುಭವ. ಹೆಜ್ಜೆ ಹೆಜ್ಜೆಗೂ ಮುಂದೇನೋ ಎನ್ನುವಂತಹ ಕುತೂಹಲ. ಭಯದ ಜೊತೆ ರೋಮಾಂಚಕತೆಯ ಅನುಭೂತಿ. ಇವೆಲ್ಲವನ್ನು ಒಮ್ಮೆ ಅನುಭವಿಸಬೇಕೆಂದಿದ್ದಲ್ಲಿ ಸರಿಸ್ಕಾ ಅರಣ್ಯಕ್ಕೆ ಭೇಟಿ ನೀಡಿ.

ನೋಡಲೇಬೇಕಾದ

ನೋಡಲೇಬೇಕಾದ

ಪ್ರಸ್ತುತ ಲೇಖನದ ಮೂಲಕ ಸರಿಸ್ಕಾ ಅರಣ್ಯ ಪ್ರವಾಸ ಎಷ್ಟು ರೋಮಾಂಚನಕಾರಿಯಾಗಿರುತ್ತದೆ ಎಂಬುದರ ಕುರಿತು ತಿಳಿಯಿರಿ. ದಕ್ಷಿಣದಲ್ಲಿರುವ ಹಲವಾರು ರಾಷ್ಟ್ರೀಯ ಉದ್ಯಾನಗಳಿಗೆ ನೀವಿ ಈಗಾಗಲೆ ಸಾಕಷ್ಟು ಸಾರಿ ಭೇಟಿ ನೀಡಿದ್ದರೆ, ಯಾಕೊಮ್ಮೆ ಉತ್ತರ ಭಾರತದ ಈ ಅದ್ಭುತ ಕಾಡಿಗೆ ಭೇಟಿ ನೀಡಬಾರದು?

ಚಿತ್ರಕೃಪೆ: Corey Theiss

ಅಲ್ವಾರ್

ಅಲ್ವಾರ್

ಮರಭೂಮಿಯ ನಾಡೆಂದೆ ಪ್ರಸಿದ್ಧವಾದ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿರುವ ಸರಿಸ್ಕಾ ಒಂದು ರಾಷ್ಟ್ರೀಯ ಉದ್ಯಾನವನವಾಗಿರುವುದಲ್ಲದೆ ಭಾರತದ ಪ್ರಸಿದ್ಧ ಹುಲಿ ಮೀಸಲು ಪ್ರದೇಶಗಳಲ್ಲಿ ಒಂದಾಗಿದೆ. 273.8 ಚ.ಕಿ.ಮೀ ಗಳಷ್ಟು ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಕಾಡು ಪ್ರದೇಶವು ರಾಜಸ್ಥಾನದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿ ಗಮನಸೆಳೆಯುತ್ತದೆ.

ಚಿತ್ರಕೃಪೆ: A. J. T. Johnsingh

ಘೋಷಿಸಲ್ಪಟ್ಟಿತು

ಘೋಷಿಸಲ್ಪಟ್ಟಿತು

ಸರಿಸ್ಕಾ ಹುಲಿ ಮೀಸಲು ಪ್ರದೇಶವು 1982 ರಲ್ಲಿ ಭಾರತ ಸರ್ಕಾರದಿಂದ ರಾಷ್ಟ್ರಿಯ ಉದ್ಯಾನವನ ಎಂದು ಅಧಿಕೃತವಾಗಿ ಘೋಷಿಸಲ್ಪಟ್ಟಿತು. ರಾಜಸ್ಥಾನದ ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣವಾದ ಜಯಪುರದಿಂದ 107 ಕಿ.ಮೀ ಹಾಗೂ ದೇಶದ ರಾಜಧಾನಿ ನಗರ ದೆಹಲಿಯಿಂದ 200 ಕಿ.ಮೀ ಗಳಷ್ಟು ದೂರದಲ್ಲಿರುವ ಸರಿಸ್ಕಾಗೆ ತೆರಳಲು ಬಸ್ಸುಗಳು ಹಾಗೂ ಬಾಡಿಗೆ ಟ್ಯಾಕ್ಸಿಗಳು ಸುಲಭವಾಗಿ ದೊರೆಯುತ್ತವೆ.

ಚಿತ್ರಕೃಪೆ: Rprishi

ಅರಾವಳಿ ಪರ್ವತಗಳು

ಅರಾವಳಿ ಪರ್ವತಗಳು

ಇದು ರಾಜಸ್ಥಾನದಲ್ಲಿ ಸ್ಥಿತವಿದೆ ಎಂದಾಕ್ಷಣ ಇಲ್ಲಿ ಎಲ್ಲಿ ನೋಡಿದರೂ ಮರಳಿನ ರಾಶಿಯಿರಬಹುದೆಂಬ ನಿಮ್ಮ ಊಹೆ ಸಹಜವಾಗಿದ್ದರೂ ಆ ರೀತಿಯಾಗಿ ಇಲ್ಲವೆ ಇಲ್ಲ. ಬದಲಾಗಿ ಪ್ರಖರ ಸೂರ್ಯನ ಈ ನಾಡಿನಲ್ಲಿ ದಟ್ಟ ಗಿಡ-ಮರಗಳು, ಒಣ ಹುಲ್ಲುಗಳ ಮೈದಾನಗಳು, ನೀರಿನ ಮುಲಗಳು ಹಾಗೂ ಕಲ್ಲು-ಬಂಡೆಗಳ ಬೆಟ್ಟ ಗುಡ್ಡಗಳು ಎಲ್ಲೆಡೆ ಕಂಡುಬರುತ್ತವೆ. ಅರಾವಳಿ ಪರ್ವತ ಶ್ರೇಣಿಗಳಿಂದ ಇದು ಸುತ್ತುವರೆದಿದೆ.

ಚಿತ್ರಕೃಪೆ: Rprishi

ಕಣಿವೆ ಪ್ರದೇಶ

ಕಣಿವೆ ಪ್ರದೇಶ

ಒಂದೊಮ್ಮೆ ಅಲ್ವಾರ್ ಸಾಮ್ರಾಜ್ಯದ ಮಹಾರಾಜರ ಬೇಟೆಯ ಪ್ರದೇಶವಾಗಿದ್ದ ಸಾರಿಸ್ಕಾ ಮೂಲತಃ ಒಂದು ಕಣಿವೆ ಪ್ರದೇಶವಾಗಿದ್ದು ಬಗೆಯ ಬಗೆಯ ಗಿಡ-ಮರಗಳಿಂದ ಸುತ್ತುವರೆದಿರುವುದೂ ಅಲ್ಲದೆ ಆಯಕಟ್ಟಿನ ಸ್ಥಳಗಳಲ್ಲಿ ಪ್ರಾಚೀನ ಕೋಟೆಗಳು ಹಾಗೂ ದೇವಾಲಯಗಳಿಂದ ಕೂಡಿದೆ.

ಚಿತ್ರಕೃಪೆ: Rprishi

ನೆಚ್ಚಿನ ತಾಣ

ನೆಚ್ಚಿನ ತಾಣ

ಹಾಗಾಗಿ ನಿಸರ್ಗಪ್ರೀಯರ ಜೊತೆ ಇತಿಹಾಸಪ್ರಿಯ ಹಾಗು ಧಾರ್ಮಿಕಾಸಕ್ತಿಯುಳ್ಳ ಪ್ರವಾಸಿಗರ ಆಕರ್ಷಕ ಕೇಂದ್ರವಾಗಿಯೂ ಸಾರಿಸ್ಕಾ ಗಮನಸೆಳೆಯುತ್ತದೆ. ಇಲ್ಲಿ ಹತ್ತನೇಯ ಶತಮಾನದ ಪಾಳುಬಿದ್ದ ಕಂಕ್ವಾರಿ ಕೋಟೆಯ ಅವಶೇಷಗಳು, ನೀಲಕಂಠನ ದೇವಾಲಯ, ಭರ್ತಾರಿ ದೇವಾಲಯ ಹಾಗೂ ಬೂಢಾ ಹಣುಮಂತನ ದೇವಾಲಯಗಳನ್ನು ಇದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಬಹುದು.

ಚಿತ್ರಕೃಪೆ: Naina Sandhir

ನಿಶಾಚಾರಿಗಳು

ನಿಶಾಚಾರಿಗಳು

ಉಳಿದ ಹುಲಿ ಮೀಸಲು ಪ್ರದೇಶಗಳಲ್ಲಿ ಕಂಡುಬರುವಂತೆ ಇಲ್ಲಿನ ಹುಲಿಗಳು ಇಲ್ಲದಿರುವುದು ಮತ್ತೊಂದು ಗಮನಸೆಳೆವ ಅಂಶ. ಅಂದರೆ ಇಲ್ಲಿರುವ ಬಹುತೇಕ ಹುಲಿಗಳು ನಿಶಾಚರಿಗಳು. ಕೇವಲ ರಾತ್ರಿಯ ಹೊತ್ತಿನಲ್ಲಿ ಮಾತ್ರವೆ ಬೇಟೆಗೆಂದು ಹೊರಬರುತ್ತವೆ. ದಿನದ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತವೆ.

ಚಿತ್ರಕೃಪೆ: commons.wikimedia

ಬೇಟೆಗಾರರು ಬಿಲದಿಂದ ಹೊರಗೆ!

ಬೇಟೆಗಾರರು ಬಿಲದಿಂದ ಹೊರಗೆ!

ಸಂಜೆಯಾಗುತ್ತಿದ್ದಂತೆ ಈ ಕಾಡಿನಲ್ಲಿ ಮುಳ್ಳು ಹಂದಿಗಳ, ಹೈನಾಗಳ ವಿಹಾರವು ಬಲು ಜೋರಾಗಿರುವುದನ್ನು ಗಮನಿಸಬಹುದು. ಜೊತೆಗೆ ಭಾರತೀಯ ಚಿರತೆ, ನರಿ, ಸಾಂಬಾರ ಹಾಗು ಜಿಂಕೆಗಳು ಚುರುಕಾಗಿರುವುದನ್ನು ಗಮನಿಸಬಹುದು. ಪಕ್ಷಿ ವೀಕ್ಷಣಾ ಪ್ರಿಯ ಪ್ರವಾಸಿಗರಿಗೂ ಇಲ್ಲಿ ನಿರಾಸೆಯಾಗದು. ಹಲವಾರು ವೈವಿಧ್ಯಮಯ ಪಕ್ಷಿಗಳು ಇಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Dan Lundberg

ಬಲು ಬಿಸಿಲು

ಬಲು ಬಿಸಿಲು

ಸರಿಸ್ಕಾದಲ್ಲಿ ವಾತಾವರಣವು ವಿಪರೀತವಾಗಿರುವ ವಾತಾವರಣ ಎಂದೆ ಹೇಳಬಹುದು. ಬೇಸಿಗೆಯು ಎಪ್ರಿಲ್ ನಿಂದ ಪ್ರಾರಂಭವಾಗಿ ಜೂನ್ ವರೆಗೆ ಚಾಚಿದ್ದರೆ ಚಳಿಗಾಲವು ಅಕ್ಟೋಬರ್ ನಿಂದ ಮಾರ್ಚ್ ವರೆಗೆ ವ್ಯಾಪಿಸಿರುತ್ತದೆ. ಬೇಸಿಗೆಯಲ್ಲಿ ತಾಪಮಾನವು ಗರಿಷ್ಠ 40 ಡಿಗ್ರಿ ಸೆಲ್ಶಿಯಸ್ ವರೆಗೂ ಚಳಿಗಾಲದಲ್ಲಿ ಕನಿಷ್ಠ 14 ಡಿಗ್ರಿ ಸೆಲ್ಶಿಯಸ್ ವರೆಗೂ ಇರುತ್ತದೆ.

ಚಿತ್ರಕೃಪೆ: Varunsk

ಹಸಿರು ಹುಲ್ಲುಗಾವಲು

ಹಸಿರು ಹುಲ್ಲುಗಾವಲು

ಮಳೆಗಾಲವು ಅಷ್ಟೇನು ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯುವುದಿಲ್ಲ. ಆದಾಗ್ಯೂ ಈ ಸಮಯದಲ್ಲಿ ಇಲ್ಲಿ ದಟ್ಟ ಹಸಿರಿನ ಹುಲ್ಲುಗಾವಲು ಪ್ರದೇಶಗಳು ಸೊಂಪಾಗಿ ಬೆಳೆದಿರುವುದನ್ನು ಕಾಣಬಹುದು. ಹಲವು ನೀರಿನ ಮೂಲಗಳು ಮದುಂಬಿಕೊಂಡು ಪ್ರಾಣಿ ಪಕ್ಷಿಗಳಿಗೆ ನೀರಿನ ಬವಣೆಯನ್ನು ದೂರ ಮಾಡಿರುವುದನ್ನು ಕಾಣಬಹುದು.

ಚಿತ್ರಕೃಪೆ: Nikhil Shanker

ಬೇಸಿಗಯಲ್ಲಿ ಪ್ರಾಣಿಗಳು ಕಾಣಿಸುತ್ತವೆ

ಬೇಸಿಗಯಲ್ಲಿ ಪ್ರಾಣಿಗಳು ಕಾಣಿಸುತ್ತವೆ

ಇನ್ನೊಂದು ವಿಷಯವೆಂದರೆ ಸರಿಸ್ಕಾ ಅರಣ್ಯಧಾಮವು ವರ್ಷಪೂರ್ತಿ ಭೇಟಿ ನೀಡಲು ಯೋಗ್ಯವಾದ ತಾಣವಾಗಿದೆ. ಅಷ್ಟಕ್ಕೂ ಒಳ್ಳೆಯ ಸಮಯವೆಂದರೆ ಚಳಿಗಾಲ ಹಾಗೂ ಬೇಸಿಗೆ. ಬೇಸಿಗೆಯ ಸಮಯದಲ್ಲಿ ಗಿಡಗಳಲ್ಲಿ ಎಲೆಗಳು ಸಾಕಷ್ಟು ಉದುರುವುದರಿಂದ, ಹುಲ್ಲುಗಾವಲುಗಳು ಹೆಚ್ಚು ಬೆಳೆಯದೆ ಇರುವುದರಿಂದ ಪ್ರಾಣಿ ಪಕ್ಷಿಗಳ ವೀಕ್ಷಣೆಯನ್ನು ಸುಲಭವಾಗಿ ಮಾಡಬಹುದು.

ಚಿತ್ರಕೃಪೆ: Tanishq Jain 662

ವೈವಿಧ್ಯಮಯ

ವೈವಿಧ್ಯಮಯ

ಇನ್ನೂ ಇಲ್ಲಿನ ಜೀವಸಂಕುಲದ ವಿಷಯಕ್ಕೆ ಬಂದರೆ ಇಲ್ಲಿ ಸಾಕಷ್ಟು ಬಗೆ ಬಗೆಯ ಪ್ರಾಣಿ ಪಕ್ಷಿಗಳು, ಹಲವು ಪ್ರಬೇಧಗಳ ಸರಿಸೃಪಗಳು ಕಂಡುಬರುತ್ತವೆ. ಕಾಡುನಾಯಿ, ಕಾಡುಬೆಕ್ಕು, ತೋಳಗಳು, ನರಿಗಳು, ನೀಲ್ಗಾಯ್, ಸಾರಂಗ ಮೃಗ, ಚೌಸಿಂಗ, ವಿವಿಧ ಬಗೆಯ ಕೋತಿಗಳು ಹಾಗೂ ಮುಖ್ಯವಾಗಿ ಹುಲಿಗಳು, ಚಿರತೆಗಳು ಸಾಮಾನ್ಯವಾಗಿ ಕಂಡುಬರುತ್ತವೆ.

ಚಿತ್ರಕೃಪೆ: Tushmit

ವಿವಿಧ ಪಕ್ಷಿಗಳು

ವಿವಿಧ ಪಕ್ಷಿಗಳು

ಇನ್ನೂ ಬಾನಿನ ಲೋಕವನ್ನು ಪ್ರತಿನಿಸುವ ಪ್ರತಿನಿಧಿಗಳೂ ಸಹ ಇಲ್ಲಿ ಸಾಕಷ್ಟಿದ್ದಾರೆ. ನವಿಲುಗಳು, ಭಾರತೀಯ ಗೂಬೆಗಳು, ಬಾತುಗಳು, ವುಡ್ ಪೆಕ್ಕರ್, ಹಾವು ತಿನ್ನುವ ಹದ್ದುಗಳು, ಹೀಗೆ ನಾನಾ ವಿಧದ ಹಕ್ಕಿಗಳು ಸರಿಸ್ಕಾ ಅರಣ್ಯಧಾಮದಲ್ಲಿ ಕಂಡುಬರುತ್ತವೆ.

ಚಿತ್ರಕೃಪೆ: Dreamscape13

ಹೇಗೆ ತಲುಪಬಹುದು?

ಹೇಗೆ ತಲುಪಬಹುದು?

ಸರಿಸ್ಕಾ ಅರಣ್ಯವನ್ನು ಅಲ್ವಾರ್ ಪಟ್ಟಣದಿಂದ ಸುಲಭವಾಗಿ ತಲುಪಬಹುದಾಗಿದೆ. ಅಲ್ವಾರ್ ನಗರದ ಜಯಪುರ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ಕಚೇರಿಯಿಂದ ಅನುಮತಿ ಪಡೆದು, ಬಾಡಿಗೆ ಜೀಪುಗಳ ಮುಲಕ ಸರಿಸ್ಕಾ ಅರಣ್ಯವನ್ನು ಸುಲಭವಾಗಿ ಪ್ರವೇಶಿಸಬಹುದು. ವರ್ಷಪೂರ್ತಿ ಭೇಟಿ ನೀಡಲು ಯೋಗ್ಯವಾದ ಸ್ಥಳ ಇದಾಗಿದೆ.

ಚಿತ್ರಕೃಪೆ: Arun Prabhu

ಚಳಿಗಾಲವೂ ಉತ್ತಮ

ಚಳಿಗಾಲವೂ ಉತ್ತಮ

ಅಷ್ಟಕ್ಕೂ ನಿಮಗೆ ಕಾಡುಪ್ರಾಣಿಗಳನ್ನು ನೋಡಲೇಬೇಕೆಂಬ ಆಸೆಯಿದ್ದಲ್ಲಿ ಹೆಚ್ಚು ಕಡಿಮೆ ಬೇಸಿಗೆಯ ಸಮಯದಲ್ಲಿ ಭೇಟಿ ನೀಡುವುದು ಉತ್ತಮ. ಈ ಸಮಯದಲ್ಲಿ ನೀರಿನ ಸಮಸ್ಯೆ ಇರುವುದರಿಂದ ಇರುವ ಕೆಲ ನೀರಿನ ಮೂಲಗಳಿಗೆ ಬಾಯಾರಿಕೆ ಆರಿಸಿಕೊಳ್ಳಲೆಂದು ಪ್ರಾಣಿಗಳು ಬರುವುದು ಸಾಮಾನ್ಯವಾಗಿರುವುದರಿಂದ ಅವುಗಳ ನೋಟ ನಿಮಗೆ ದೊರೆಯುತ್ತದೆ. ಆದರೆ ಸುಡು ಬಿಸಿಲನ್ನು ಸಹಿಸಿಕೊಳ್ಳಬೇಕಷ್ಟೆ.

ಚಿತ್ರಕೃಪೆ: Ca.skgupta1979

ಹಿತಕರ ವಾತಾವರಣ

ಹಿತಕರ ವಾತಾವರಣ

ಇನ್ನುಳಿದಂತೆ ಚಳಿಗಾಲ ಹಾಗೂ ಮಳೆಗಾಲ ಸಮಯವು ಪ್ರಾಕೃತಿಕ ಸಮ್ಪತ್ತಿನಿಂದ ಕಂಗೊಳಿಸುತ್ತದೆ. ಸಾಕಷ್ಟು ಹಸಿರುಮಯ ಪರಿಸರವಿದ್ದು ಹಿತಕರವಾದ ವಾತಾವರಣವಿರುತ್ತದೆ. ಪಕ್ಷಿ ವೀಕ್ಷಣೆಗೆ ಬಲು ಪ್ರಶಸ್ತವಾದ ಸಮಯಯವೂ ಇದಾಗಿದೆ.

ಚಿತ್ರಕೃಪೆ: Tushmit

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X