Search
  • Follow NativePlanet
Share
» »ಮಹಾಪ್ರಳಯದ ನಂತರವೂ ಇದ್ದ ಕ್ಷೇತ್ರ!

ಮಹಾಪ್ರಳಯದ ನಂತರವೂ ಇದ್ದ ಕ್ಷೇತ್ರ!

ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಕ್ಷೇತ್ರದ ಹೊರವಲಯದಲ್ಲಿರುವ ತಿರುಚೆರೈ ಎಂಬ ಗ್ರಾಮದಲ್ಲಿ ಈ ಸಾರನಾಥನ ದೇವಾಲಯವಿದು ಭಕ್ತರನ್ನು ಸಾಕಷ್ಟು ಸಂಖ್ಯೆಯಲ್ಲಿ ಆಕರ್ಷಿಸುತ್ತದೆ

By Vijay

ಈ ಕ್ಷೇತ್ರದ ಮಹಿಮೆ ಅಪಾರ. ಇಲ್ಲಿನ ಮಣ್ಣಿನ ಮಹಿಮೆಯೂ ಅಪಾರ. ಏಕೆಂದರೆ ಈ ಕ್ಷೇತ್ರವು ಮಹಾಪ್ರಳಯದ ಪ್ರಸಂಗದೊಂದಿಗೆ ತನ್ನ ನಂಟನ್ನು ಹೊಂದಿದೆ. ಹಾಗಾಗಿ ಇದೊಂದು ಸಾರ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಅಲ್ಲದೆ ಈ ಕ್ಷೇತ್ರದಲ್ಲಿ ನೆಲೆಸಿರುವ ಸಾರನಾಥನು ತನ್ನದೆ ಆದ ವಿಶಿಷ್ಟತೆಯನ್ನು ಹೊಂದಿದ್ದಾನೆ.

ಅಂತೆಯೆ ಸಾರನಾಥನಿಗೆ ಮುಡಿಪಾದ ಡೇವಾಲಯ ಇಲ್ಲಿದ್ದು ಸಾಕಷ್ಟು ಮಹತ್ವ ಪಡೆದಿದೆ. ಮೂಲತಃ ಸಾರನಾಥ ದೇವಲಯವು ವಿಷ್ಣುವಿಗೆ ಮುಡಿಪಾದ ಸುಂದರ ವಾಸ್ತುಕಲೆಯ ಅದ್ಭುತ ದೇವಾಲಯವಾಗಿದೆ. ಸಾರನಾಥನಿಗೆ ಸತಿಯಾಗಿ ಸಾರನಾಯಕಿಯ ರೂಪದಲ್ಲಿ ಲಕ್ಷ್ಮಿಯೂ ಸಹ ಇಲ್ಲಿ ನೆಲೆಸಿದ್ದಾಳೆ.

ಮಹಾಪ್ರಳಯದ ನಂತರವೂ ಇದ್ದ ಕ್ಷೇತ್ರ!

ಚಿತ್ರಕೃಪೆ: Ssriram mt

ಆರರಿಂದ ಒಂಭತ್ತನೆಯ ಶತಮಾನದಲ್ಲಿ ತಮಿಳಿನ ಪ್ರಸಿದ್ಧ ಸಂತರಾದ ಅಳ್ವಾರ್ ಸಂತರು ದೇಶ ಪರ್ಯಟನೆ ಮಾಡಿ ವಿಷ್ಣುವನ್ನು ಕೊಂಡಾಡುತ್ತ ವಿಷ್ಣುವಿನ 108 ದೇವಾಲಯಗಳನ್ನು ಪಟ್ಟಿ ಮಾಡಿರುವುದನ್ನು ಗಮನಿಸಬಹುದು. ಅವುಗಳನ್ನು ದಿವ್ಯ ದೇಸಂ ಎಂಬ ಹೆಸರಿನಿಂದಲೆ ಕರೆಯಲಗುತ್ತದೆ.

ದಿವ್ಯ ದೇಸಂ ಮೂಲತಃ ವಿಷ್ಣು ನೆಲೆಸಿರುವ 108 ಅತ್ಯಂತ ಪ್ರಭಾವಿ ಸ್ಥಳಗಳ ಕುರಿತು ಮಾಹಿತಿ ನೀಡುತ್ತದೆ. ಆ ದಿವ್ಯ ದೇಸಂ ಕ್ಷೇತ್ರಗಳ ಪೈಕಿ ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿರುವ ಸಾರನಾಥನ್ ಕ್ಷೇತ್ರವೂ ಸಹ ಒಂದಾಗಿದೆ. ಇಲ್ಲಿರುವ ವಿಷ್ಣುವಿನ ದೇವಾಲಯವನು ಸಾರನಾಥನ್ ದೇವಾಲಯ ಎಂದೆ ಕರೆಯಲಾಗುತ್ತದೆ.

ಮಹಾಪ್ರಳಯದ ನಂತರವೂ ಇದ್ದ ಕ್ಷೇತ್ರ!

ಚಿತ್ರಕೃಪೆ: Ssriram mt

ಈ ದೇವಾಲಯವು ಸಾಕಷ್ಟು ಪುರಾತನವಾಗಿದ್ದು ಶ್ರೀಮಂತ ಐತಿಹ್ಯವನ್ನು ಹೊಂದಿದೆ. ಮಧ್ಯ ಕಾಲದಲ್ಲಾಳಿದ ಚೋಳರಿಂದ ಹಿಡಿದು, ವಿಜಯನಗರ ಅರಸರು ಹಾಗೂ ಮದುರೈ ನಾಯಕರವರೆಗೂ ಸಾಕಷ್ಟು ನವೀಕರಣವನ್ನು ಈ ದೇವಾಲಯ ಕಂಡಿದೆ ಎಂದು ಇತಿಹಾಸದಿಂದ ತಿಳಿದುಬರುವ ವಿಚಾರವಾಗಿದೆ.

ಈ ಕ್ಷೇತ್ರದಲ್ಲಿಯೆ ಮಾರ್ಖಂಡೇಯ, ಕಾವೇರಿ ದೇವಿ ಹಾಗೂ ಇಂದ್ರರಿಗೆ ವಿಷ್ಣು ಸಾರನಾಥನ ರೂಪದಲ್ಲಿ ದರ್ಶನ ನೀಡಿದ್ದ ಎಂಬ ಪ್ರತೀತಿಯಿದೆ. ಹಾಗಾಗಿ ಇದು ತಮಿಳುನಾಡಿನಲ್ಲಿ ಕಂಡುಬರುವ ಪ್ರಸಿದ್ಧ ವೈಷ್ಣವ ಕ್ಷೇತ್ರಗಳ ಪೈಕಿ ಒಂದಾಗಿದ್ದು ಭಕ್ತರನ್ನು ಆಕರ್ಷಿಸುತ್ತದೆ.

ಮಹಾಪ್ರಳಯದ ನಂತರವೂ ಇದ್ದ ಕ್ಷೇತ್ರ!

ಚಿತ್ರಕೃಪೆ: Ssriram mt

ವೈಷ್ಣವ ಸಂಪ್ರದಾಯದಂತೆ ಇಲ್ಲಿ ದಿನನಿತ್ಯ ಸಾರನಾಥನಿಗೆ ಆರು ಬಾರಿ ವಿಶೇಷ ಪೂಜೆ ಪುನಸ್ಕಾರಗಳಿರುತ್ತವೆ. ಅಲ್ಲದೆ ವರ್ಷದಲ್ಲಿ ಮೂರು ಬಾರಿ ಅದ್ದೂರಿ ಉತ್ಸವಗಳನ್ನು ಈ ದೇವಲಯದಲ್ಲಿ ಮಾಡಲಾಗುತ್ತದೆ. ಅದರಲ್ಲಿ ತಮಿಳು ಮಾಸವಾದ ಚಿತ್ತಿರೈನಲ್ಲಿ ನಡೆಸಲಾಗುವ ಉತ್ಸವ ಅತ್ಯಂತ ಪ್ರಮುಖವಾಗಿದ್ದು ಜನಸಾಗರವೆ ಇಲ್ಲಿ ಹರಿದುಬರುತ್ತದೆ.

ದಂತಕಥೆಯಂತೆ, ಒಂದೊಮ್ಮೆ ಹೊಸ ಯುಗ ನಿರ್ಮಾಣ ಮಾಡುವ ಪ್ರಸಂಗ ಬಂದಾಗ ಬ್ರಹ್ಮನು ಜೀವ ಸೃಷ್ಟಿಗೆ ಬೇಕಾದ ಮೂಲ ವಸ್ತುಗಳನ್ನು ಹಾಗೂ ವೇದಶಾಸ್ತ್ರಾದಿಗಳನ್ನು ಉಳಿಸಿಕೊಳ್ಳುವ್ಅ ಬಗೆ ಹೇಗೆಂದು ಗೊಂದಲಕ್ಕೀಡಾಗಿ ಶ್ರೀ ಹರಿಯನ್ನು ಪ್ರಾರ್ಥಿಸಿ ಬೇಡಿಕೊಂಡನು.

ಕೆಲಸದಲ್ಲಿ ತೊಂದರೆಯಿದ್ದರೆ ಇಲ್ಲಿ ಭೇಟಿ ನೀಡಿ!

ಅದಕ್ಕೆ ವಿಷ್ಣುವು ಮಣ್ಣಿನ ಮಡಕೆಯೊಂದನ್ನು ಮಾಡಿ ಅದರಲ್ಲಿ ಬೇಕಾದ ಅವಶ್ಯಕ ವಸ್ತುಗಳನ್ನು ಇರಿಸಲು ಹೇಳಿದ. ಅದರಂತೆ ಬ್ರಹ್ಮ ಮಡಕೆ ಮಾಡಲು ಬಳಸಿದ ಮಣ್ಣೆ ಈ ಕ್ಷೇತ್ರದ್ದು ಎಂಬ ನಂಬಿಕೆಯಿದೆ. ಹಾಗಾಗಿ ಮಹಾಪ್ರಳಯದ ಸಂದರ್ಭದಲ್ಲೂ ಈ ಕ್ಷೇತ್ರ ಹರಿಯ ಅನುಗ್ರಹದಿಂದ ಹಾಗೆ ಇತ್ತು ಎನುತ್ತದೆ ಸ್ಥಳ ಪುರಾಣ.

ಗಂಡಾಂತರದಿಂದ ಕಾಪಾಡುವ ಪ್ರತ್ಯಂಗಿರಾ ದೇವಿ!

ತಮಿಳುನಾಡಿನ ತಂಜಾವೂರು ಜಿಲ್ಲೆಯ ಕುಂಭಕೋಣಂ ಕ್ಷೇತ್ರದ ಹೊರವಲಯದಲ್ಲಿರುವ ತಿರುಚೆರೈ ಎಂಬ ಗ್ರಾಮದಲ್ಲಿ ಈ ಸಾರನಾಥನ ದೇವಾಲಯವಿದು ಭಕ್ತರನ್ನು ಸಾಕಷ್ಟು ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಸಾಮನ್ಯವಾಗಿಕುಂಭಕೋಣಂಗೆ ಭೇಟಿ ನೀಡುವವರು ಈ ಕ್ಷೇತ್ರವನ್ನು
ದರ್ಶಿಸಿ ಬರುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X