Search
  • Follow NativePlanet
Share
» »ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲೊಂದು ದಿನ

ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲೊಂದು ದಿನ

By Vijay

ಬೆಂಗಳೂರು ಮೊದಲು "ಕೆರೆಗಳ ನಗರ" ಎಂದೆ ಪ್ರಸಿದ್ಧಿ ಪಡೆದಿತ್ತು. ಸುಮಾರು 250 ಕ್ಕೂ ಹೆಚ್ಚು ಕೆರೆಗಳು ಬೆಂಗಳೂರು ಪಟ್ಟಣವನ್ನು ಸಂಪದ್ಭರಿತವನ್ನಾಗಿಟ್ಟಿತ್ತು. ಆದರೆ ಕಾಲಕ್ರಮೇಣ ಮನುಜನ ಸ್ವಾರ್ಥಕ್ಕೆ ಕೆರೆಗಳು ಬಲಿಪಶುವಾಗಿದ್ದು ದುರದೃಷ್ಟಕರ. ಸರಿ, ಅದೇನೆ ಇರಲಿ, ಇಂದು ಇರುವ ಕೆರೆಗಳನ್ನು ಸಂರಕ್ಷಣೆ ಮಾಡಬೇಕಾಗಿರುವುದು ಅತ್ಯಗತ್ಯವಾಗಿದೆ.

ಕೆರೆಗಳು ನಗರದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಜೀವ ರಾಶಿಗಳಿಗೆ ಉತ್ತಮ ಆಶ್ರಯ ತಾಣವಾಗುತ್ತದೆ. ಪರಿಶುದ್ಧ ಹಾಗೂ ನಿರ್ಮಲ ಪರಿಸರಕ್ಕೆ ಸಹಾಕಾರಿಯಾಗಿದೆ. ಅಲ್ಲದೆ ಹಿತಕರ, ಆನಂದಮಯ ಅನುಭೂತಿಯನ್ನೂ ಒದಗಿಸುತ್ತದೆ. ಹಾಗೆ ಸಮಯವಿದ್ದರೆ, ಮನಸ್ಸು ಒತ್ತಡ ಹೊಂದಿದರೆ, ಬೇಸರ ಮೂಡಿದ್ದರೆ ಇಲ್ಲವೆ ಪುಟ್ಟ ಮಕ್ಕಳಿಗೆ ಸಂತಸದ ಕ್ಷಣಗಳನ್ನು ನೀಡಲು ಬಯಸಿದರೆ ಒಂದೊಮ್ಮೆ ಕೆರೆಗೆ ಭೇಟಿ ನೀಡಿ. ಅಲ್ಲಿನ ಪ್ರಶಾಂತ ಪರಿಸರ, ನಿರ್ಮಲ ವಾತಾವರಣ ನಿಮಗೆ ಹೇಳಲಾರದಷ್ಟು ಆನಂದವನ್ನುಂಟು ಮಾಡುತ್ತದೆ. ಇನ್ನೂ ಕೆರೆಯ ಪಕ್ಕದಲ್ಲೆ ಚಿಕ್ಕದೊಂದು ಉದ್ಯಾನವಿದ್ದರೆ...ಅಬ್ಬಾ ಸಂತೋಷ ಇಮ್ಮಡಿಗೊಳ್ಳುತ್ತದೆ.

ಹಾಗಾದರೆ ಬನ್ನಿ ಅಂತಹ ಒಂದು ಉದ್ಯಾನವಿರುವ ನಮ್ಮ ಬೆಂಗಳೂರಿನಲ್ಲೆ ಇರುವ, ಒಂದು ಸುಂದರ ಕೆರೆಗೆ ಭೇಟಿ ನೀಡೋಣ. ಸುಮಾರು 100 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಸ್ಯಾಂಕಿ ಕೆರೆಯ ಪರಿಸರ ಅದ್ಭುತ ಮನಶಾಂತಿಯನ್ನು ಭೇಟಿ ನೀಡುವವರಿಗೆ ಕರುಣಿಸುತ್ತದೆ.

ನಿಮಗಿಷ್ಟವಾಗಬಹುದಾದ ಲೇಖನ : ಬೆಂಗಳೂರಿನ ಕೆರೆಗಳು

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆಯು 37 ಎಕರೆಗಳಷ್ಟು ಪ್ರದೇಶದಲ್ಲಿ ಹರಡಿದೆ. ಇದೊಂದು ಕೃತಕ ಕೆರೆಯಾಗಿದ್ದು, 1882 ರಲ್ಲಿ ಬ್ರಿಟೀಷರ ಆಡಳಿತದಲ್ಲಿ ಕರ್ನಲ್ ಆಗಿದ್ದ ರೈಚರ್ಡ್ ಹೈರ್‍ಯಾಮ್ ಸ್ಯಾಂಕಿ ಎಂಬಾತನು ಈ ಕೆರೆಯ ನಿರ್ಮಾತೃ.

ಚಿತ್ರಕೃಪೆ: Subramanya Prasad

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಬೆಂಗಳೂರಿನ ನೀರಿನ ಬೇಡಿಕೆ ತಣಿಸಲು ನಿರ್ಮಾಣವಾದ ಈ ಕೆರೆ "ಗಂಧದಕೋಟಿ ಕೆರೆ" ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಿತ್ತು. ಏಕೆಂದರೆ ಸರ್ಕಾರದ ಗಂಧದ ಸೋಪ್ ಕಚೇರಿಯು ಕೆರೆಯ ಬಳಿಯಲ್ಲೆ ಕಾರ್ಯ ನಿರ್ವಹಿಸುತ್ತಿತ್ತು.

ಚಿತ್ರಕೃಪೆ: Aravinth Rajan

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಕೆರೆಯೇನೊ ನಿರ್ಮಣವಾಯಿತು. ಕಾಲಾಂತರದಲ್ಲಿ ಕೆರೆಯ ನೀರು ಅತಿಯಾಗಿ ಕಲುಷಿತಗೊಳ್ಳತೊಡಗಿತು. ಎಲ್ಲೆಂದರಲ್ಲಿ ಕಸ ಒಗೆಯುವುದು, ಸಾರ್ವಜನಿಕ ಶೌಚಾಲಯಗಳ ನೀರು ಬೆರೆತು ಹೀಗೆ ಹಲವು ಕಾರಣಗಳು ನೀರು ಕಲುಷಿತಗೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದವು.

ಚಿತ್ರಕೃಪೆ: Marc Smith

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ನಂತರ ಪರಿಸರವಾದಿಗಳ ಕೂಗಿಗೆ ಓಗೋಟ್ಟ ಸರ್ಕಾರ ಕೆರೆಯ ಶುದ್ಧೀಕರಣ ಹಾಗೂ ಅಭಿವೃದ್ಧಿಗಾಗಿ ಸಾಕಷ್ಟು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಂಡಿತು. ಅದರ ಫಲವಾಗಿ ಇಂದು ಸ್ಯಾಂಕಿ ಕೆರೆ ಒಂದು ಸುಂದರ ವಿಶ್ರಾಂತಿ ಸ್ಥಳವಾಗಿ, ಹಿತಕರವಾದ ತಾಣವಾಗಿ, ಮಕ್ಕಳಿಗೆ ಖುಶಿ ಕೊಡುವ ಉದ್ಯಾನವಾಗಿ ಪರಿವರ್ತಿತವಾಗಿದೆ.

ಚಿತ್ರಕೃಪೆ: Najeeb Nayazi

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಅಭಿವೃದ್ಧಿಯ ದೃಷ್ಟಿಯಿಂದ ಅಲ್ಲಲ್ಲಿ ಕೆರೆಯ ಸುತ್ತಲು ರಕ್ಷಣಾ ಬೇಲಿಗಳನ್ನು, ಗಣೇಶ ಮೂರ್ತಿ ವಿಸರ್ಜನೆಗೆ ಪ್ರತ್ಯೆಕವಾದ ಕೊಳವನ್ನು, ಹಸಿರು ಹುಲ್ಲಿನ ಲಾವ್ನ್ ಗಳನ್ನು, ಬಣ್ಣ ಬಣ್ಣದ ಹೂವಿನ ಗಿಡಗಳನ್ನು, ಜಾಗ್ ಮಾಡಲು, ನಡೆಯಲು ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: David Brossard

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ನಗರಪಾಲಿಕೆಯ ಸುಪರ್ದಿಯಲ್ಲಿರುವ ಈ ಉದ್ಯಾನ ಕೆರೆಯಲ್ಲಿ ಶುದ್ಧವಾದ ಕುಡಿಯುವ ನೀರಿನ ಸೌಲಭ್ಯವನ್ನೂ ಸಹ ಒದಗಿಸಲಾಗಿದೆ. ಅಲ್ಲದೆ ಪ್ರವೇಶ ದ್ವಾರದ ಬಳಿ ಬಾಯಲ್ಲಿ ನೀರೂರಿಸುವಂತಹ ಚಾಟ್ ತಿಂಡಿಗಳೂ ಲಭ್ಯ.

ಚಿತ್ರಕೃಪೆ: Ramakrishna Reddy Y

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ವತಿಯಿಂದ "ಮಯೂರ ಸ್ಯಾಂಕಿ ಬೋಟ್ ಕ್ಲಬ್" ಇದ್ದು ವಿವಿಧ ದೋಣಿ ಸವಾರಿಗಳನ್ನು ಒದಗಿಸುತ್ತದೆ. ಅದು ನಿರ್ದಿಷ್ಟ ಸಮಯದಲ್ಲಿ ಮಾತ್ರವೆ. ಆದ್ದರಿಂದ ದೋಣಿ ಸವಾರಿಯ ಕುರಿತು ಮುಂಚೆಯೆ ತಿಳಿದುಕೊಂಡರೆ ಉತ್ತಮ.

ಚಿತ್ರಕೃಪೆ: Mr Thinktank

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆಯು ಸದಾಶಿವ ನಗರ, ವಯ್ಯಾಲಿಕಾವಲ್ ಹಾಗೂ ಮಲ್ಲೇಶ್ವರಂ ಪ್ರದೇಶಗಳಲ್ಲಿ ಹರಡಿದ್ದು ಇಲ್ಲಿಗೆ ತೆರಳುವುದು ಸುಲಭವಾಗಿದೆ. ಬಸ್ಸಿನಲ್ಲಿ ಪ್ರಯಾಣಿಸಲು ಬಯಸಿದರೆ ಮಜೆಸ್ಟಿಕ್ ನಿಂದ ಮಲ್ಲೇಶ್ವರಂ 18 ನೇಯ ಕ್ರಾಸ್ ನಿಲ್ದಾಣದಲ್ಲಿ ಇಳಿದು ತಲುಪಬಹುದು. ಇಲ್ಲವೆ ರಾಜಾಜಿನಗರದ ಭಾಷ್ಯಂ ವೃತ್ತದಿಂದಲೂ ಸಹ ಬಸ್ಸು ಹಿಡಿಯಬಹುದು. ಬೇಕಿದ್ದರೆ ಆಟೊದಲ್ಲೂ ಸಹ ಜಾಲಿಯಾಗಿ ಪಯಣಿಸಬಹುದು.

ಚಿತ್ರಕೃಪೆ: David Brossard

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಪ್ರಕೃತಿ ಪ್ರಿಯ, ಮನರಂಜನಾ ಪ್ರಿಯ, ವಿಶ್ರಾಂತಿ ಪ್ರಿಯ ಪ್ರವಾಸಿಗರಿಗೆ ಆದರ್ಶ ಸ್ಥಳವಾಗಿರುವ ಸ್ಯಾಂಕಿ ಕೆರೆಯ ಕೆಲವು ಸುಂದರ ಚಿತ್ರಗಳು. ಈ ಕೆರೆಯು ಬೆಳಿಗ್ಗೆ ಆರು ಘಂಟೆಯಿಂದ ಹತ್ತು ಘಂಟೆಯವರೆಗೆ ಹಾಗೂ ಮಧ್ಯಾಹ್ನ ನಾಲ್ಕು ಘಂಟೆಯಿಂದ ರಾತ್ರಿ ಎಂಟು ಘಂಟೆಯವರೆಗೆ ತೆರೆದಿರುತ್ತದೆ.

ಚಿತ್ರಕೃಪೆ: Marc Smith

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Ayan Mukherjee

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Manjunath.bhat

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Nvvchar

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: L. Shyamal

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Nvvchar

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆ:

ಸ್ಯಾಂಕಿ ಕೆರೆಯ ಕೆಲವು ಸುಂದರ ಚಿತ್ರಗಳು.

ಚಿತ್ರಕೃಪೆ: Ramakrishna Reddy y

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X