Search
  • Follow NativePlanet
Share
» »ಸಾಗರದಷ್ಟು ಆನಂದ ಕರುಣಿಸುವ ಸಾಗರ

ಸಾಗರದಷ್ಟು ಆನಂದ ಕರುಣಿಸುವ ಸಾಗರ

By Vijay

ಸಾಗರ, ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಸುಂದರ, ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ತಾಲೂಕು ಪ್ರದೇಶ. ಬೆಂಗಳೂರು ನಗರದಿಂದ 360 ಕಿ.ಮೀ ಗಳಷ್ಟು ಅಂತರದಲ್ಲಿರುವ ಸಾಗರ ಪಟ್ಟಣವು ಮಲೆನಾಡು ಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆ. ಮಳೆಗಾಲದ ಸಂದರ್ಭದಲ್ಲಿ ಈ ಪ್ರದೇಶವು ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯುವುದರಿಂದ ಇಲ್ಲಿ ಸಹಜವಾಗಿ ದಟ್ಟವಾದ ಮರಗಳಿಂದ ತುಂಬಿರುವ ಕಾಡುಗಳು ಹಾಗೂ ವೈವಿಧ್ಯಮಯ ಜೀವ ಜಂತುಗಳನ್ನು ಕಾಣಬಹುದಾಗಿದೆ.

ಹೋಟೆಲ್ ಮತ್ತು ವಿಮಾನ ಹಾರಾಟ ದರಗಳ ಮೇಲೆ 50% ರಷ್ಟು ಕಡಿತ, ತ್ವರೆ ಮಾಡಿ!

ವಿಶೇಷ ಲೇಖನ : ಪಶ್ಚಿಮ ಘಟ್ಟಗಳ ವಿಶಿಷ್ಟ ಜೀವಿಗಳು

ಪ್ರಕೃತಿಪ್ರಿಯರಿಗೆ ಮತ್ತು ಚಾರಣಪ್ರಿಯರಿಗೆ ಸಾಗರ ಸ್ವರ್ಗಕ್ಕೆ ಸಮ ಎಂದರೂ ತಪ್ಪಾಗಲಾರದು. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಸಹ ಕರೆಯಲಾಗಿದೆ.
ಪ್ರದೇಶದ ಇತಿಹಾಸವನ್ನು ಕೆದಕಿದಾಗ ಸಾಗರವು ನಮ್ಮನ್ನು ಸುಮಾರು ನಾಲ್ಕುನೂರು ವರ್ಷಗಳಷ್ಟು ಹಿಂದೆ ಕರೆದೊಯ್ಯುತ್ತದೆ. ಕೆಳದಿ ವಂಶಸ್ಥರ ಕಾಲದಿಂದಲೂ ಈ ನಗರ ಇತ್ತು ಎಂಬ ಅಂಶವು ತಿಳಿದುಬರುತ್ತದೆ. ಇಂದು ಸಾಗರದ ಸಮೀಪವಿರುವ ಕೆರೆ ಅಂದಿನ ಸಮಯದಲ್ಲಿ ಅತ್ಯಂತ ವಿಶಾಲವಾಗಿದ್ದು, ಸಾಗರದಂತೆ (ಸಮುದ್ರದಂತೆ) ಗೋಚರಿಸುತ್ತಿತ್ತಂತೆ.

ವಿಶೇಷ ಲೇಖನ : ಶಿವನ ವಿಶಿಷ್ಟ ದೇವಾಲಯಗಳು

ಮೊದಲಿಗೆ ಈ ಪ್ರದೇಶಕ್ಕೆ "ಸದಾಶಿವ ಸಾಗರ" ಎಂಬ ಹೆಸರಿತ್ತು. ಕಾಲ ಉರುಳಿದಂತೆ ಸದಾಶಿವ ಹೊರಟು ಹೋಗಿ ಕೇವಲ ಸಾಗರ ಮಾತ್ರ ಉಳಿದು ಸಾಗರ ಎಂಬ ಹೆಸರೆ ಪ್ರಚಲಿತದಲ್ಲಿ ಬಂದಿತು ಎಂದು ಹೇಳಲಾಗುತ್ತದೆ. ಸಾಗರ ಹಾಗೂ ಅದರ ಸುತ್ತ ಮುತ್ತಲು ಸಕಷ್ಟು ಪ್ರೇಕ್ಷಣೀಯ ಸ್ಥಳಗಳು ನೆಲೆಸಿದ್ದು ಪ್ರವಾಸಿಗರನ್ನು ಚುಂಬಕದಂತೆ ಆಕರ್ಷಿಸುತ್ತವೆ. ಬೆಂಗಳೂರು ಹಾಗೂ ಶಿವಮೊಗ್ಗ ಗಳಿಂದ ಸಾಗರಕ್ಕೆ ತೆರಳಲು ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ನಿರಾಯಾಸವಾಗಿ ದೊರೆಯುತ್ತವೆ. ಬೆಂಗಳೂರಿನಿಂದ ಸಾಗರಕ್ಕೆ ರೈಲಿನ ವ್ಯವಸ್ಥೆಯೂ ಸಹ ಇದೆ. ಶಿವಮೊಗ್ಗ ಎಕ್ಸ್ ಪ್ರೆಸ್ (ತಲಗುಪ್ಪ ಎಕ್ಸ್ ಪ್ರೆಸ್) ರೈಲು ಬೆಂಗಳೂರಿನಿಂದ ಹೊರಟು ಶಿವಮೊಗ್ಗ ತಲುಪಿ ಅಲ್ಲಿಂದ ಸಾಗರಕ್ಕೆ ತೆರಳುತ್ತದೆ.

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಪ್ರಸ್ತುತ ಲೇಖನದ ಮೂಲಕ ಸಾಗರದ ಸುತ್ತ ಮುತ್ತ ಏನೇಲ್ಲ ಪ್ರೇಕ್ಷಣೀಯ ಸ್ಥಳಗಳಿವೆ ಎಂಬುದರ ಕುರಿತು ತಿಳಿಯೋಣ.

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಐತಿಹಾಸಿಕ ಮಹತ್ವ ಪಡೆದಿರುವ ಸಾಗರದಲ್ಲಿರುವ ಸಾಗರ ಕೆರೆ. ಐತಿಹ್ಯಗಳ ಪ್ರಕಾರ, ಹಿಂದೆ ಈ ಕೆರೆಯು ಅತ್ಯಂತ ವಿಶಾಲವಾಗಿ ಹರಡಿತ್ತು ಹಾಗೂ ಸಮುದ್ರದಂತೆ ಗೋಚರಿಸುತ್ತಿತ್ತು.

ಚಿತ್ರಕೃಪೆ: Vmjmalali

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಯಕ್ಷಗಾನ ಕಲೆಯು ಸಾಗರದಲ್ಲಿ ಕಂಡುಬರುವ ಬಹು ಪ್ರಮುಖ ಕಲಾಪ್ರಕಾರವಾಗಿದೆ. ಬೇಸಿಗೆಯ ಋತುವಿನಲ್ಲಿ ಬಹುತೇಕ ಪ್ರತಿದಿನವೂ ಒಂದಿಲ್ಲೊಂದು ಯಕ್ಷಗಾನ ಮೇಳದ ಪ್ರದರ್ಶನ ಆಯೋಜಿಸಲಾಗಿರುವುದನ್ನು ಸಾಗರದಲ್ಲಿ ಕಾಣಬಹುದು.

ಚಿತ್ರಕೃಪೆ: Hegades

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರದ ನಿವಾಸಿಗಳು ಸಾಮಾನ್ಯವಾಗಿ ಶಾಂತಪ್ರಿಯ ಹಾಗೂ ಸ್ನೇಹ ಜೀವಿಗಳಾಗಿದ್ದು ಹೆಚ್ಚಿನ ಜನರು ಜೀವನಕ್ಕೆ ವ್ಯವಸಾಯವನ್ನು ಅದರಲ್ಲೂ ವಿಶೇಷವಾಗಿ ಅಡಿಕೆ ಬೆಳೆ ಮೇಲೆ ಅವಲಂಬಿತರಾಗಿದ್ದಾರೆ. ಇದಲ್ಲದೆ ಭತ್ತ. ಕಬ್ಬು, ವೆನಿಲ್ಲಾ, ರಬ್ಬರ್ ಅಂತಹ ಬೆಳೆಗಳು ಕೂಡ ಇಲ್ಲಿ ಪ್ರಚಲಿತದಲ್ಲಿವೆ.

ಚಿತ್ರಕೃಪೆ: Vmjmalali

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರವು ಪಶ್ಚಿಮ ಘಟ್ಟಗಳೊಂದಿಗೆ ಹೊಂದಿಕೊಂಡಿರುವುದರಿಂದ ದಟ್ಟವಾದ ಕಾಡು, ಬೆಟ್ಟ ಗುಡ್ಡಗಳನ್ನು ಇಲ್ಲಿ ಕಾಣಬಹುದು. ಅಲ್ಲದೆ ಸಾಗರ ಪ್ರದೇಶದದ ಬಹುಭಾಗವು ಲಿಂಗನಮಕ್ಕಿ ಜಲಾಶಯದ ಹಿನ್ನೀರಿನಿಂದ ಆವೃತವಾಗಿದೆ ಎನ್ನಬಹುದು.

ಚಿತ್ರಕೃಪೆ: Vmjmalali

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರದ ದಟ್ಟವಾದ ಕಾಡುಗಳಲ್ಲಿ ವೈವಿಧ್ಯಮಯ ಜೀವ ಜಂತುಗಳನ್ನು ಕಾಣಬಹುದಾಗಿದೆ. ಹಾವು, ಜಿಂಕೆ, ಕಾಡು ಕುರಿಗಳು, ಉಡ, ಕಾಡು ಹಂದಿ, ನವಿಲು, ಕೆಂದಳಿಲು ಮುಂತಾದ ವಿಶೇಷ ಪ್ರಾಣಿ ಪಕ್ಷಿಗಳನ್ನು ಕಾಣಬಹುದಾಗಿದೆ. ಕೆಂದಳಿಲಿನ ಸಾಂದರ್ಭಿಕ ಚಿತ್ರ.

ಚಿತ್ರಕೃಪೆ: Yathin S Krishnappa

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಜೋಗ - ಭಾರತದಲ್ಲಿ ಕಂಡುಬರುವ ಅತ್ಯಂತ ಎತ್ತರದ ಜಲಪಾತಗಳ ಪೈಕಿ ಒಂದಾಗಿರುವ ಜೋಗ ಜಲಪಾತವು ವಿಶ್ವಪ್ರಸಿದ್ಧ ಜಲಪಾತ ಧಾರೆಯಾಗಿದೆ. ಇದು ಸಾಗರದಿಂದ 29 ಕಿ.ಮೀ ಗಳಷ್ಟು ದೂರದಲ್ಲಿದೆ. ಶರಾವತಿ ನದಿಯಿಂದ ರೂಪಗೊಂಡ ಈ ಜಲಪಾತವು ರಾಜ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಕವಲುಗಳಾಗಿ 273 ಮೀ ಎತ್ತರದಿಂದ ಭೂಮಿಗೆ ಧುಮುಕುತ್ತದೆ. ಜೋಗ ಜಲಪಾತ ತಾಣಕ್ಕೆ ಸಾಗರದಿಂದ ಪ್ರತೀ ಐದು ನಿಮಿಷಗಳಿಗೊಂದಂತೆ ಬಸ್ಸುಗಳು ದೊರೆಯುತ್ತವೆ.

ಚಿತ್ರಕೃಪೆ: Vmjmalali

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಮಾರಿಕಾಂಬಾ ದೇವಸ್ಥಾನ ಮತ್ತು ಜಾತ್ರೆ - ಸಾಗರ ನಗರದ ಮಧ್ಯದಲ್ಲಿರುವ ಮಾರಿಕಾಂಬ ದೇವಸ್ಥಾನವು ಸಾಗರದ ಜನಜೀವನ ಹಾಗೂ ಇತಿಹಾಸದೊಂದಿಗೆ ಸಾಕಷ್ಟು ನಂಟು ಹೊಂದಿದೆ. ಪ್ರತಿ ಮೂರು ವರ್ಷಗಳಿಗೆ ಇಲ್ಲಿ ಜರುಗುವ ಸಾಗರ ಮಾರಿಕಾಂಬ ಜಾತ್ರೆಯು ಸಾಕಷ್ಟು ಹೆಸರುವಾಸಿಯಾಗಿದ್ದು ರಾಜ್ಯದೆಲ್ಲೆಡೆಯಿಂದ ಈ ಜಾತ್ರೆಗೆ ಜನರು ಬರುತ್ತಾರೆ.

ಚಿತ್ರಕೃಪೆ: Vmjmalali

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಹೊನ್ನೇಮರಡು - ಇತ್ತೀಚಿನ ಕೆಲ ದಿನಗಳಿಂದ ಹೆಚ್ಚು ಹೆಚ್ಚು ಜನಪ್ರೀಯವಾಗುತ್ತಿರುವ ಹೊನ್ನೇಮರಡು ಪ್ರದೇಶವು ಶರಾವತಿ ನದಿಯ ಹಿನ್ನೀರಿನಲ್ಲಿ ಆವೃತವಾಗಿದ್ದು, ಸಾಹಸಪ್ರಿಯರನ್ನು ಕೈಬಿಸಿ ಕರೆಯುತಿದೆ. ಜೋಗಕ್ಕೆ ಹೋಗುವ ದಾರಿಯಲ್ಲಿ ಸಾಗರದಿಂದ 25 ಕಿ.ಮೀ ಗಳಷ್ಟು ದೂರದಲ್ಲಿರುವ ಹೊನ್ನೇಮರಡು ಸಾಹಸಕ್ರೀಡೆಗಳಿಗೆ ಆದರ್ಶಮಯವಾದ ಸ್ಥಳವಾಗಿದೆ.

ಚಿತ್ರಕೃಪೆ: Srinath.holla

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಕೆಳದಿ - ಸಾಗರದ ಐತಿಹಾಸಿಕ ಪರಂಪರೆಗೆ ಸಾಕ್ಷಿಯಾಗಿದೆ ಕೆಳದಿ ಪಟ್ಟಣ. ಸಾಗರದಿಂದ ಎಂಟು ಕಿ.ಮೀ ಗಳಷ್ಟು ದೂರದಲ್ಲಿರುವ ಕೆಳದಿಯು ಕೆಲ ಐತಿಹಾಸಿಕ ಸ್ಮಾರಕಗಳಿಗೆ ಪ್ರಸಿದ್ಧವಾಗಿದೆ. ಕೆಳದಿಯ ಅರಮನೆ, ಆಕರ್ಷಕ ಕೆತ್ತನೆಗಳಿಂದ ಕೂಡಿರುವ ದೇವಸ್ಥಾನ ಹಾಗೂ ಐತಿಹಾಸಿಕ ವಸ್ತು ಸಂಗ್ರಹಾಲಯವು ಈ ಪಟ್ಟಣದ ಆಕರ್ಷಣೆಗಳಾಗಿವೆ. ಸಾಗರದಿಂದ ಇಲ್ಲಿಗೆ ತೆರಳಲು ಬಸ್ಸುಗಳು ಸುಲಭವಾಗಿ ದೊರೆಯುತ್ತವೆ. ಕೆಳದಿಯ ರಾಮೇಶ್ವರ ದೇವಸ್ಥಾನ.

ಚಿತ್ರಕೃಪೆ: Dineshkannambadi

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಇಕ್ಕೇರಿ - ಸಾಗರದ ಬಳಿಯಿರುವ ಮತ್ತೊಂದು ಪ್ರಸಿದ್ಧ ಐತಿಹಾಸಿಕ ಸ್ಥಳ ಇಕ್ಕೇರಿ. ಇದು ಸಾಗರದಿಂದ ಕೇವಲ ಐದು ಕಿ.ಮೀ ಗಳಷ್ಟು ದೂರದಲ್ಲಿದ್ದು ಆಟೊ, ಟ್ಯಾಕ್ಸಿ ಹಾಗೂ ಬಸ್ಸುಗಳಿಂದ ಸುಲಭವಾಗಿ ಇಲ್ಲಿಗೆ ತೆರಳಬಹುದು. ಕೆಳದಿ ಸಂಸ್ಥಾನಕ್ಕೆ ಸೇರಿದ್ದ ಹೊಯ್ಸಳ ವಾಸ್ತು ಶೈಲಿಯ ಆಕರ್ಷಕ ಕೆತ್ತನೆಗಳಿರುವ ದೇವಸ್ಥಾನವನ್ನು ಇಕ್ಕೇರಿಯಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: VASANTH S.N.

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಇಕ್ಕೇರಿಯಲ್ಲಿರುವ ಮತ್ತೊಂದು ಪುರಾತನ ದೇವಾಲಯ ಅಘೋರೇಶ್ವರ ದೇವಾಲಯ. ಇದು ತನ್ನ ಕಲಾತ್ಮಕ ಕೆತ್ತನೆಯ ಖಂಬಗಳಿಗಾಗಿ ಹೆಚ್ಚು ಪ್ರಖ್ಯಾತವಾಗಿದೆ.

ಚಿತ್ರಕೃಪೆ: Suvarnini Konale

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ವರದಹಳ್ಳಿ - ತಾಲೂಕು ಕೇಂದ್ರವಾದ ಸಾಗರದಿಂದ ಕೇವಲ ಎಂಟು ಕಿ.ಮೀ ದೂರದಲ್ಲಿ ಕ್ರಮಿಸಿದಾಗ ಪಶ್ಚಿಮ ಘಟ್ಟಗಳ ಭವ್ಯ ವನಸಿರಿಯ ಮಡಿಲಲ್ಲಿ ನೆಲೆಸಿರುವ ಪವಿತ್ರ ಕ್ಷೇತ್ರವಾದ ವರದಹಳ್ಳಿಯನ್ನು ತಲುಪಬಹುದು. ಸ್ಥಳೀಯವಾಗಿ ವದ್ದಳ್ಳಿ ಅಥವಾ ವರದಪುರ ಎಂತಲೂ ಕರೆಯಲ್ಪಡುವ ಈ ಕ್ಷೇತ್ರವು ಶಕ್ಟಿ ಸ್ವರೂಪಿಣಿ ಶ್ರೀ ದುರ್ಗೆಯ ನೆಲೆಯಾಗಿದೆ.

ಚಿತ್ರಕೃಪೆ: Manjappabg

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಹೊಸಗುಂದ - ಸಾಗರದ ನೈರುತ್ಯಕ್ಕೆ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ 16 ಕಿ.ಮೀ ದೂರ ಕ್ರಮಿಸಿ ಹೊಸಗುಂದವನ್ನು ತಲುಪಬಹುದು. ಇಲ್ಲಿ 10 ನೇ ಶತಮಾನದಲ್ಲಿ ಸಂತರಸರಿಂದ ನಿರ್ಮಾಣಗೊಂಡ ಉಮಾಮಹೇಶ್ವರ ದೇಗುಲವನ್ನು ಕಾಣಬಹುದು.

ಚಿತ್ರಕೃಪೆ: Pavanaja

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ನಾಡಕಲಸಿ- ಸಾಗರದ ಪೂರ್ವಕ್ಕೆ ಹತ್ತು ಕಿ.ಮೀ ದೂರ್ದಲ್ಲಿದೆ ನಾಡಕಲಸಿ ಗ್ರಾಮ. ಇದು ಶಿವನ ದೇವಸ್ಥಾನಕ್ಕೆ ಪ್ರಸಿದ್ಧವಾಗಿದೆ. ಈ ದೇವಸ್ಥಾನ ಪೂರ್ಣ ಕಲ್ಲಿನಿಂದ ನಿರ್ಮಾಣವಾಗಿರುವುದು ವಿಶೇಷ.

ಚಿತ್ರಕೃಪೆ: Bschandrasgr

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ವರದಹಳ್ಳಿ - ಶ್ರೀಧರ ಸ್ವಾಮಿಗಳ ಸಮಾಧಿ ಮತ್ತು ಆಶ್ರಮವಿರುವ ಯಾತ್ರಾಸ್ಥಳವಾದ ವರದಹಳ್ಳಿ ಸಾಗರದಿಂದ 7 ಕಿ.ಮೀ ದೂರದಲ್ಲಿದೆ. ಶ್ರೀಧರ ಸ್ವಾಮಿಗಳ ಹೆಚ್ಚಿನ ಪ್ರಮಾಣದ ಅನುಯಾಯಿಗಳು, ಮಹಾರಾಷ್ಟ್ರ ರಾಜ್ಯದಲ್ಲಿ ನೆಲೆಸಿದ್ದು, ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಹಿತಕರವಾದ ವಾತಾವರಣ ಹಾಗೂ ಶಾಂತ ಪರಿಸರದಲ್ಲಿ ನೆಲೆಸಿರುವ ಆಶ್ರಮವು ಆಧ್ಯಾತ್ಮಿಕ ಚಿಂತನೆ ಹಾಗೂ ಧ್ಯಾನಕ್ಕೆ ಪ್ರಶಸ್ತವಾದ ಸ್ಥಳವಾಗಿದೆ. ಚಿತ್ರದಲ್ಲಿ ಶ್ರೀಧರ ಸ್ವಾಮಿಗಳು.

ಚಿತ್ರಕೃಪೆ: Manjappabg

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಸಿಗಂದೂರು - ಚೌಡೇಶ್ವರಿ ಅಮ್ಮನವರ ದೇವಾಲಯವಿರುವ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಸಿಗಂದೂರು ಸಾಗರದಿಂದ 32 ಕಿ.ಮಿ. ಗಳಷ್ಟು ದೂರದಲ್ಲಿದೆ. ಇಲ್ಲಿಗೆ ಹೋಗಲು ಶರಾವತಿಯ ಹಿನ್ನೀರನ್ನು (ಲಿಂಗನಮಕ್ಕಿ ಜಲಾಶಯ) ಲಾಂಚ್ ಮುಖಾಂತರ ದಾಟಿ ಹೋಗಬೇಕು. ಸಾಂದರ್ಭಿಕ ಚಿತ್ರ. ಥಟ್ ಪರಿಹಾರ ಕರುಣಿಸುವ ಚೌಡೇಶ್ವರಿ

ಚಿತ್ರಕೃಪೆ: Bpdg

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ವರದಾಮೂಲ - ವರದಾಮೂಲವು ವರದಾ ನದಿಯ ಉಗಮ ಸ್ಥಳವಾಗಿದ್ದು, ವರದಾಂಬ ದೇವಿಯ ದೇವಸ್ಥಾನಕ್ಕೆ ಹೆಸರುವಾಸಿಯಾಗಿದೆ. ಇದು ಅಗ್ನಿ, ವರದಾ ಮತ್ತು ಲಕ್ಷ್ಮಿಯೆಂಬ ಮೂರು ನದಿಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತದೆ. ಪ್ರತಿ ವರ್ಷ ಎಳ್ಳು ಅಮವಾಸ್ಯೆಯ ದಿನದಂದು ಇಲ್ಲಿ ಜಾತ್ರೆ ನೆಡೆಯುತ್ತದೆ. ಚಿತ್ರದಲ್ಲಿ ವರದಾಂಬೆ.

ಚಿತ್ರಕೃಪೆ: Manjappabg

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಲಿಂಗನಮಕ್ಕಿ ಜಲಾಶಯ - ಕರ್ನಾಟಕದ ಸಾಗರ ತಾಲೂಕಿನಲ್ಲಿ ಶರಾವತಿ ನದಿಗೆ ಅಡ್ಡವಾಗಿ 1964 ರಲ್ಲಿ ನಿರ್ಮಿತವಾದ ಆಣೆಕಟ್ಟಾಗಿದೆ. ಆಣೆಕ‌ಟ್ಟಯ ಕೆಳಭಾಗದಲ್ಲಿ ಶರಾವತಿ ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದ್ದು ಇದು ಜೋಗದಿಂದ ಕೇವಲ ಆರು ಕಿ.ಮೀ. ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: ಜಿ.ಎಸ್. ಜಯಕೃಷ್ಣ ತಲವಾಟ

ಸಾಗರ ಹಾಗೂ ಇತರೆ ಸ್ಥಳಗಳು:

ಸಾಗರ ಹಾಗೂ ಇತರೆ ಸ್ಥಳಗಳು:

ಕೊನೆಯದಾಗಿ, ಸಾಗರಕ್ಕೆ ನೀವು ಪ್ರವಾಸ ಕೈಗೊಂಡಿದ್ದಾಗ ಅಲ್ಲಿ ವಿಶಿಷ್ಟವಾಗಿ ದೊರೆಯುವ ಬಾಯಲ್ಲಿ ಉಪ್ಪು ನೀರೂರಿಸುವ ಅಪ್ಪೆ ಮಿಡಿ ಉಪ್ಪಿನ ಕಾಯಿಯನ್ನು ತೆಗೆದುಕೊಳ್ಳಲು ಮಾತ್ರ ಮರೆಯಬೇಡಿ. ಸಾಗರದ ಶ್ರೀ ಟಾಕೀಸ್ ರಸ್ತೆಯಲ್ಲಿ ಯಾರಿಗಾದರೂ ಕೇಳಿ ಉಪ್ಪಿನಕಾಯಿ ಭಟ್ರು ಮನೆ ಎಲ್ಲಿ ಅಂತ..ಥಟ್ಟನೆ ತೋರಿಸಿಯೆ ಬಿಡುತ್ತಾರೆ. ಇಲ್ಲಿ ದೊರೆಯುವ ಈ ಮಿಡಿ ಉಪ್ಪಿನಕಾಯಿ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಕಂಡುಬರುವುದಿಲ್ಲ ಹಾಗೂ ಇದರ ರುಚಿಯೂ ಸಹ ನಿಮ್ಮನ್ನು ಮಂತ್ರಮುಗ್ಧಗೊಳಿಸದೆ ಇರಲಾರದು. ಅಪ್ಪೆ ಮಿಡಿ ಉಪ್ಪಿನಕಾಯಿ ಬೇಕಾ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X