Search
  • Follow NativePlanet
Share
» »ಶಬರಿಮಲೆ: ಸ್ವಾಮಿಯೇ ಶರಣಂ ಅಯ್ಯಪ್ಪ

ಶಬರಿಮಲೆ: ಸ್ವಾಮಿಯೇ ಶರಣಂ ಅಯ್ಯಪ್ಪ

By Vijay

ಸ್ವಾಮಿ ಅಯ್ಯಪ್ಪನಿಗೆ ಸಮರ್ಪಿತವಾಗಿರುವ ಶಬರಿಮಲೆ ಶ್ರೀ ಧರ್ಮ ಶಾಸ್ತ ದೇವಾಲಯವು ಕೇರಳದಲ್ಲಿ ಕಂಡುಬರುವ ಶಾಸ್ತ ದೇವಾಲಯಗಳ ಪೈಕಿ ಬಹು ಪ್ರಮುಖವಾದ ದೇವಾಲಯವಾಗಿದೆ. ಇದೊಂದು ಪವಿತ್ರವಾದ ವಾರ್ಷಿಕ ಹಿಂದು ಯಾತ್ರಾ ಕ್ಷೇತ್ರವಾಗಿದ್ದು ಜಗತ್ತಿನ ಅತಿ ದೊಡ್ಡ ಯಾತ್ರಾಕ್ಷೇತ್ರಗಳ ಪೈಕಿ ಒಂದಾಗಿದೆ. ಅಯ್ಯಪ್ಪನ ಈ ಪವಿತ್ರ ದೇವಾಲಯವು ಕೇರಳ ರಾಜ್ಯದ ಪಥನಾಂತಿಟ್ಟ ಜಿಲ್ಲೆಯ ಪೆರುನಾಡ್ ಗ್ರಾಮ ಪಂಚಾಯತ್ತಿನ ಶಬರಿ ಬೆಟ್ಟ (ಮಲೈ)ದ ತುದಿಯಲ್ಲಿ ನೆಲೆಸಿದೆ. ಸಮುದ್ರ ಮಟ್ಟದಿಂದ ಸುಮಾರು 1535 ಅಡಿಗಳಷ್ಟು ಎತ್ತರದಲ್ಲಿ ನೆಲೆಸಿರುವ ಈ ದೇವಾಲಯದ ಸುತ್ತಮುತ್ತಲು ಹಲವಾರು ಬೆಟ್ಟಗಳಿದ್ದು ಪ್ರತಿಯೊಂದು ಬೆಟ್ಟದಲ್ಲಿ ಇತರೆ ದೇವಾಲಯಗಳನ್ನು ಕಾಣಬಹುದು.

ಹಿಂದು ಪುರಾಣದ ಪ್ರಕಾರ, ಶಬರಿ ಬೆಟ್ಟದಲ್ಲಿ ಸುಬ್ರಮಣ್ಯ ಅರ್ಥಾತ್ ಅಯ್ಯಪ್ಪ ಸ್ವಾಮಿಯು ಅತ್ಯಂತ ಕ್ರೂರಿಯಾಗಿದ್ದ ಮಹಿಷಿ ರಕ್ಕಸಳನ್ನು ಸಂಹರಿಸಿ ತಪಸ್ಸು ಮಾಡಿದ್ದರು. ಪರಮಪೂಜ್ಯನಾದ ಅಯ್ಯಪ್ಪ ಸ್ವಾಮಿಯನ್ನು ಕಠಿಣವಾದ ವೃತಾಚರಣೆಗಳಿಂದ ಪೂಜೆ ಮಾಡುವವರಿಗೆ ಮೋಕ್ಷ ಲಭಿಸಿ ಸ್ವರ್ಗ ಪ್ರಾಪ್ತಿಯಾಗುತ್ತದೆಂದು ದೃಢವಾದ ನಂಬಿಕೆಯಿದೆ. ವರ್ಷದಲ್ಲಿ ಕೆಲವೆ ಬಾರಿ ಅಂದರೆ, ನವಂಬರ್ ನಲ್ಲಿ ಪ್ರಾರಂಭವಾಗುವ ಮಂಡಲಪೂಜೆ, ಜನವರಿಯಲ್ಲಿನ ಮಕರವಿಳಕ್ಕು, ಏಪ್ರಿಲ್ 14 ರಂದು ಜರುಗುವ ವಿಷು ಉತ್ಸವ ಹಾಗು ಪ್ರತಿ ಮಹಾಲಯಂ ತಿಂಗಳಿನ ಮೊದಲ ಆರು ದಿನಗಳ ವರೆಗೆ ಮಾತ್ರ ಈ ದೇವಾಲಯವು ಭಕ್ತಾದಿಗಳಿಗೆ ತೆರೆದಿರುತ್ತದೆ.

ಕಠಿಣ ವೃತ:

ವಾರ್ಷಿಕವಾಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಅಯ್ಯಪ್ಪನ ದರುಶನ ಕೋರಿ ಬರುವ ಭಕ್ತರು ಕ್ಷೇತ್ರ ದರ್ಶನಕ್ಕೆ ಹೊರಡುವ ಮುನ್ನ 60 ದಿನಗಳ ಕಾಲ ಕಠಿಣವಾದ ಆಚರಣೆಯನ್ನು ಕೈಗೊಳ್ಳಬೇಕಾಗುತ್ತದೆ. ಇದು ಮಂಡಲ ಪೂಜೆಯ ಹಿಂದಿನ 41 ದಿನಗಳನ್ನೂ ಒಳಗೊಂಡಿರುತ್ತದೆ. ಈ ವೃತವನ್ನು ದೇವಾಲಯದ ಗುರುಸ್ವಾಮಿಯ ಮೂಲಕ ರುದ್ರಾಕ್ಷಿ ಅಥವಾ ತುಳಸಿಮಣಿಗಳ ಮಾಲೆಯನ್ನು ಪೂಜೆಯ ನಂತರ ಗುರುದಕ್ಷಿಣೆ ಸಲ್ಲಿಸಿ ಕೊರಳಲ್ಲಿ ಹಾಕಿಕೊಳ್ಳುವುದರ ಮೂಲಕ ಆರಂಭಗೊಳ್ಳುತ್ತದೆ. ಇದನ್ನು ಧರಿಸಿದ ನಂತರ ವೃತಕ್ಕೊಳಪಡುವನನ್ನು "ಅಯ್ಯಪ್ಪನ್" ಎಂದು ಕರೆಯಲಾಗುತ್ತದೆ.

ವೃತಾಚರಣೆಯ ಸಂದರ್ಭದಲ್ಲಿ ಎಲ್ಲ ದಿನಗಳಲ್ಲೂ ಅಯ್ಯಪ್ಪನ್ ನು ಕಪ್ಪು ಬಟ್ಟೆ, ಹಣೆಗೆ ಗಂಧದ ತಿಲಕವಿಟ್ಟುಕೊಂಡು ಸರಳ ಹಾಗು ಶುದ್ಧವಾದ ಜೀವನವನ್ನು ನಡೆಸಬೇಕು. ಈ ಎಲ್ಲ ದಿನಗಳೂ ಪ್ರಸ್ತುತ ನಾವು ನಡೆಸುತ್ತಿರುವ ಜೀವನದಲ್ಲಿ ಕಠಿಣವೆಂದೆ ಹೇಳಬಹುದಾದ ಕೆಲವು ನಿಯಮಗಳನ್ನು ಹೊಂದಿದೆ. ಅವುಗಳೆಂದರೆ, ಸಂಪೂರ್ಣ ಶಾಖಾಹಾರ ಸೇವನೆ, ಮದ್ಯ ತೆಗೆದುಕೊಳ್ಳದೆ ಇರುವುದು, ಬರಿಗಾಲಿನಲ್ಲೆ ಓಡಾಡುವುದು, ಶೌರ ಮಾಡಿಕೊಳ್ಳದೆ ಇರುವುದು, ಬೈಗುಳಗಳನ್ನು ಬೈಯ್ಯದೆ ಇರುವುದು, ಸಂಭೋಗ ಕ್ರೀಯೆಯಲ್ಲಿ ತೊಡಗದೆ ಇರುವುದು, ದಿನಕ್ಕೆರಡು ಬಾರು ಸ್ನಾನ ಮಾಡಿ ಶುಚಿಯಾಗುವುದು, ದೇವಸ್ಥಾನಕ್ಕೆ ಭೇಟಿ ನೀಡುವುದು ಇತ್ಯಾದಿ.

ಇನ್ನೂ ಮನೆಯಿಂದ ಕ್ಷೇತ್ರಕ್ಕೆ ಹೊರಡುವ ಮುನ್ನ ಪೆರಿಯಾಸ್ವಾಮಿಗಳ ನೆತೃತ್ವದಲ್ಲಿ ನಡೆಯುವ ಪೂಜೆಯಲ್ಲಿ ಪಾಲ್ಗೊಂಡು "ಶರಣಂ ಅಯ್ಯಪ್ಪ" ಎಂಬ ವಾಘ್ಘೋಷದೊಂದಿಗೆ ತಲೆಯ ಮೇಲೆ "ಇರುಮುಡಿ ಕೆಟ್ಟು" ಅಥವಾ ಇರುಮುಡಿಯನ್ನು ಹೊತ್ತುಕೊಂಡು ಪ್ರಯಾಣ ಬೆಳೆಸಬೇಕು. ಅಲ್ಲದೆ ಹೊರಡುವ ಮುಂಚೆ ಮನೆ ಬಳಿಯ ಕಲ್ಲಿನ ಮೇಲೆ ತೆಂಗಿನ ಕಾಯಿಯನ್ನು ಒಡೆದು ತೆರಳಬೇಕು. ನಂತರ ಆ ಜಾಗದಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ. ಮನೆಯ ಇತರೆ ಸದಸ್ಯರು ಪ್ರತಿನಿತ್ಯ ರಾತ್ರಿ ಆ ದೀಪವು ಕೆಲವು ಘಂಟೆಗಳಷ್ಟು ಕಾಲ ಉರಿಯುವಂತೆ ನೋಡಿಕೊಳ್ಳುತ್ತಾರೆ.

ತಲೆಯ ಮೇಲೆ ಹೊತ್ತೊಯ್ಯಲಾಗುವ ಇರುಮುಡಿಯು ಎರಡು ಜೋಳಿಗೆಗಳನ್ನು ಹೊಂದಿರುತ್ತದೆ. ತಲೆಯ ಮುಂಭಾಗದಲ್ಲಿ ಇಟ್ಟುಕೊಳ್ಳಲಾಗುವ "ಓಂ" ಚಿಹ್ನೆ ಜೋಳಿಗೆಯು ಪೂಜಾ ಸಾಮಗ್ರಿಗಳಾದ ತೆಂಗಿನ ಚೂರುಗಳು, ಕರ್ಪೂರ, ಅರಿಷಿಣ, ಕುಂಕುಮ, ಗಂಧ, ತುಪ್ಪ, ಬೆಲ್ಲ, ಅಕ್ಕಿ, ಕಲ್ಲುಸಕ್ಕರೆ ಮುಂತಾದವುಗಳನ್ನು ಹೊಂದಿರುತ್ತದೆ. ಹಿಂಭಾಗದ ಜೋಳಿಗೆಯು ಆಚರಿಸುವಾತನಿಗೆ ಸಂಚರಿಸುವಾಗ ಬೇಕಾಗುವ ಅವಶ್ಯಕ ಸಾಮಗ್ರಿಗಳನ್ನು ಒಳಗೊಂಡಿರುತ್ತದೆ. ಮತ್ತೊಂದು ಗಮನಿಸಬೇಕಾದ ಸಂಗತಿಯೆಂದರೆ ಇರುಮುಡಿ ಹೊತ್ತಿರುವವರಿಗೆ ಮಾತ್ರ ಅಯ್ಯಪ್ಪನ 18 ಮೆಟ್ಟಿಲುಗಳನ್ನು ಏರಿ ದರುಶನ ಪಡೆಯಲು ಅವಕಾಶವಿರುತ್ತದೆ.

ಮತ್ತೊಂದು ವಿಶೀಷ್ಟ ಸಂಗತಿಯೆಂದರೆ, ಅಯ್ಯಪ್ಪನು ಕಠಿಣ ಬ್ರಹ್ಮಚಾರಿಯಾಗಿದ್ದು ಋತುಚಕ್ರದಲ್ಲಿರುವ ಮಹಿಳೆಯ ಭೇಟಿಗೆ ನಿಶೇಧಿಸಿರುವ ಕುರಿತು ನಂಬಿಕೆಯಿರುವುದರಿಂದ 10 ರಿಂದ 50 ರ ವಯೋಮಾನದೊಳಗಿನ ಮಹಿಳೆಯರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ.

ಕೋಮು ಸಾಮರಸ್ಯ:

ಈ ಪವಿತ್ರ ಕ್ಷೇತ್ರವು ಕೋಮು ಸಾಮರಸ್ಯದಿಂದ ಕೂಡಿರುವುದು ವಿಶೇಷ. ಇಲ್ಲಿ ಸುಫಿ ಸಂತನಾದ ವಾವರ್ ಎಂಬುವವರಿಗೆ ಸಮರ್ಪಿಸಲಾದ ದರ್ಗಾವೊಂದನ್ನು ಕಾಣಬಹುದು. ವಾವರ್ ಅಯ್ಯಪ್ಪನ ಅಪ್ರತಿಮ ಭಕ್ತರಾಗಿದ್ದರೆನ್ನಲಾಗಿದೆ. ಕೆಲವರ ಪ್ರಕಾರ ವಾವರ್ ಅರೇಬಿಯಾದಿಂದ ಇಲ್ಲಿ ಕೊಳ್ಳೆ ಹೊಡೆಯಲು ಬಂದಿದ್ದನಂತೆ. ನಂತರ ಅಯ್ಯಪ್ಪನ ಸಾಂಗತ್ಯವುಂಟಾಗಿ ಕ್ರಮೇಣ ಒಳ್ಳೆಯವನಾಗಿ ಅಯ್ಯಪ್ಪನ ಕೇವಲ ಮಿತ್ರನಲ್ಲದೆ ಭಕ್ತನಾಗಿಯು ಅಯ್ಯಪ್ಪನನ್ನು ಪೂಜಿಸಿದನಂತೆ. ಸ್ವತಃ ಅಯ್ಯಪ್ಪನೆ ವಾವರ್ ನಿಗೆಂದು ಮಸೀದಿ ನಿರ್ಮಿಸಲು ಆ ಪ್ರಾಂತ್ಯದ ರಾಜನಿಗೆ ಸೂಚಿಸಿದ್ದನಂತೆ. ಶಬರಿಮಲೆಗೆ ಹೆಬ್ಬಾಗಿಲಾದ ಇರುಮಲೆಯಲ್ಲಿ ಈ ಪವಿತ್ರ ದೇಗುಲವು ನೆಲೆಸಿದೆ. ಅಲ್ಲದೆ ಪ್ರದೇಶದಲ್ಲಿ ಹಿಂದು, ಮುಸ್ಲಿಮ್ ಹಾಗು ಕ್ರೈಸ್ತರು ಪರಸ್ಪರ ಸ್ನೇಹದಿಂದಿದ್ದು ಕೋಮು ಸಾಮರಸ್ಯವನ್ನು ಇಲ್ಲಿ ಕಾಣಬಹುದು.

ತೆರಳುವ ಬಗೆ:

82 ಕಿ.ಮೀ ದೂರವಿರುವ ಚೆಂಗಣ್ಣೂರು ಹಾಗು 120 ಕಿ.ಮೀ ದೂರವಿರುವ ಕೊಟ್ಟಾಯಂ ಶಬರಿಮಲೆಗೆ ಹತ್ತಿರದಲ್ಲಿರುವ ರೈಲು ನಿಲ್ದಾಣಗಳಾಗಿವೆ. ಬೆಂಗಳೂರಿನಿಂದ 550 ಕಿ.ಮೀ ದೂರವಿರುವ ಈ ತಾಣಕ್ಕೆ ತೆರಳಲು ಬೆಂಗಳೂರಿನಿಂದ ತಲುಪಲು ಕೊಟ್ಟಾಯಂವರೆಗೆ ರೈಲುಗಳು ದೊರೆಯುತ್ತವೆ. ಪಥನಾಂತಿಟ್ಟ ಹಾಗು ಪಂಬಾಗಳ ಮಧ್ಯೆ ಸಂಚರಿಸುವ ಬಸ್ಸು ಶಬರಿಮಲೈ ಮೂಲಕ ಹಾದು ಹೋಗುತ್ತದೆ. ರೈಲು ವೇಳಾ ಪಟ್ಟಿಯನ್ನು ಇಲ್ಲಿ ತಿಳಿಯಿರಿ.

ಶಬರಿಮಲೆಯ ಚಿತ್ರಗಳನ್ನು ನೋಡಲು ಬಯಸಿದ್ದಲ್ಲಿ ಕೆಳಗಿನ ಸ್ಲೈಡುಗಳನ್ನು ಕ್ಲಿಕ್ ಮಾಡುತ್ತ ಕ್ಷೆತ್ರದ ಅನುಭವವನ್ನು ಚಿತ್ರಗಳ ಮೂಲಕ ಪಡೆಯಿರಿ.

ಶಬರಿಮಲೆ:

ಶಬರಿಮಲೆ:

ಏಳು ಬೆಟ್ಟದೊಡೆಯನ ದರುಶನಾರ್ಥ ಬಂದಿರುವ ಅಪಾರವಾದ ಜನರಾಶಿ

ಚಿತ್ರಕೃಪೆ: Avsnarayan

ಶಬರಿಮಲೆ:

ಶಬರಿಮಲೆ:

ಜೀವಾತ್ಮನು ಪರಮಾತ್ಮನಲ್ಲಿ ಸೇರಲು ಸಾಧಿಸಬೇಕಾದ 18 ವಾಸನಗಳನ್ನು ಈ ಮೆಟ್ಟಿಲುಗಳು ಸೂಚಿಸುತ್ತವೆ. ಮೊದಲ ಐದು ಮೆಟ್ಟಿಲುಗಳು ಪಂಚೇಂದ್ರಿಯಗಳನ್ನು ನಿಗ್ರಹಿಸುವುದನ್ನು, ನಂತರದ ಎಂಟು ಮೆಟ್ಟಿಲುಗಳು ಅಷ್ಟ ರಾಗ ಅಥವಾ ಗುಣಗಳಾದ ಕಾಮ, ಕ್ರೋಧ, ಮೋಹ, ಲೋಭ, ಮದ, ಮತ್ಸರ, ಅಹಂಕಾರ, ಅಸೂಯೆ ಗಳನ್ನು ಗೆಲ್ಲುವುದನ್ನು, ತದನಂತರ ಮೂರು ಮೆಟ್ಟಿಲುಗಳು ಗುಣಗಳಾದ ಸತ್ವ, ತಮಸ್ಸು, ರಜಸ್ಸುಗಳನ್ನು ಹಾಗು 17 ನೆಯ ಮೆಟ್ಟಿಲು ಅವಿದ್ಯಾ ಹಾಗು ಕೊನೆಯ 18 ನೆಯ ಮೆಟ್ಟಿಲು ಜ್ಞಾನ/ವಿದ್ಯೆಯ ಸಂಕೇತವಾಗಿದೆ.

ಚಿತ್ರಕೃಪೆ: Aruna

ಮಕರವಿಳಕ್ಕು:

ಮಕರವಿಳಕ್ಕು:

ಮಕರ ಸಂಕ್ರಾಂತಿಯಂದು ಕಾಣುವ ಪವಿತ್ರ ಮಕರ ಜ್ಯೋತಿ

ಚಿತ್ರಕೃಪೆ: Harhar2008

ಶಬರಿಮಲೆ:

ಶಬರಿಮಲೆ:

ಶಬರಿಪೀಠಕ್ಕೆ ಹೋಗುವ ಮಾರ್ಗ

ಚಿತ್ರಕೃಪೆ: Sailesh

ಶಬರಿಮಲೆ:

ಶಬರಿಮಲೆ:

ಶ್ರೀಕ್ಷೇತ್ರ ಶಬರಿಮಲೆ ದೇವಸ್ಥಾನ ಆವರಣ

ಚಿತ್ರಕೃಪೆ: AnjanaMenon

ಶಬರಿಮಲೆ:

ಶಬರಿಮಲೆ:

ಇರುಮಲೆಯಲ್ಲಿರುವ ಸೂಫಿ ಸಂತ ಹಾಗು ಅಯ್ಯಪ್ಪನ ಭಕ್ತ ವಾವರನ ದರ್ಗಾ.

ಚಿತ್ರಕೃಪೆ: Avsnarayan

ಶಬರಿಮಲೆ:

ಶಬರಿಮಲೆ:

ಶಬರಿಮಲೆ ಕ್ಷೇತ್ರದಲ್ಲಿನ ಒಂದು ನೋಟ

ಚಿತ್ರಕೃಪೆ: Chitra sivakumar

ಶಬರಿಮಲೆ:

ಶಬರಿಮಲೆ:

ಶ್ರೀಕ್ಷೇತ್ರದಲ್ಲಿನ ನಾಗ ಪ್ರತಿಷ್ಠಾನ

ಚಿತ್ರಕೃಪೆ: Aruna

ಶಬರಿಮಲೆ:

ಶಬರಿಮಲೆ:

ನವಗ್ರಹ ದೇವಸ್ಥಾನದ ಒಂದು ನೋಟ

ಚಿತ್ರಕೃಪೆ: Aruna

ಶಬರಿಮಲೆ:

ಶಬರಿಮಲೆ:

ಶ್ರೀಕ್ಷೇತ್ರದ ಬಳಿಯಿರುವ ನೀಲಕಲ್ ದೇವಸ್ಥಾನದ ಪ್ರವೇಶ ಮಾರ್ಗ

ಚಿತ್ರಕೃಪೆ: Sailesh

ಶಬರಿಮಲೆ:

ಶಬರಿಮಲೆ:

ಅಯ್ಯಪ್ಪಸ್ವಾಮಿಯ ವಿಶೀಷ್ಟ ಪ್ರಸಾದವಾದ ಅರವಣ ಪಾಯಸ.

ಚಿತ್ರಕೃಪೆ: Anoopan

ಶಬರಿಮಲೆ:

ಶಬರಿಮಲೆ:

ದೇವಸ್ಥಾನದ ಆವರಣದಿಂದ ಒಂದು ನೋಟ

ಚಿತ್ರಕೃಪೆ: Chitra sivakumar

ಶಬರಿಮಲೆ:

ಶಬರಿಮಲೆ:

ಸುತ್ತಲೂ ಆವರಿಸಿರುವ ಬೆಟ್ಟ ಗುಡ್ಡಗಳು

ಚಿತ್ರಕೃಪೆ: Chitra sivakumar

ಶಬರಿಮಲೆ:

ಶಬರಿಮಲೆ:

ಒಂದು ನೋಟ

ಚಿತ್ರಕೃಪೆ: AnjanaMenon

ಶಬರಿಮಲೆ:

ಶಬರಿಮಲೆ:

ಒಂದು ನೋಟ

ಚಿತ್ರಕೃಪೆ: AnjanaMenon

ಶಬರಿಮಲೆ:

ಶಬರಿಮಲೆ:

ಶಬರಿಮಲೆ:

ಒಂದು ನೋಟ

ಚಿತ್ರಕೃಪೆ: Chitra sivakumar

ಶಬರಿಮಲೆ:

ಶಬರಿಮಲೆ:

ಒಂದು ನೋಟ

ಚಿತ್ರಕೃಪೆ: Challiyan

ಶಬರಿಮಲೆ:

ಶಬರಿಮಲೆ:

ಒಂದು ನೋಟ

ಚಿತ್ರಕೃಪೆ: ragesh ev

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X