Search
  • Follow NativePlanet
Share
» »ಶಿಲೆಗಳಲ್ಲಿ ಕೆತ್ತಲಾದ ಅಸಾಧಾರಣ ರಚನೆಗಳು

ಶಿಲೆಗಳಲ್ಲಿ ಕೆತ್ತಲಾದ ಅಸಾಧಾರಣ ರಚನೆಗಳು

By Vijay

"ಇಂಡಿಯನ್ ರಾಕ್ ಕಟ್ ಆರ್ಕಿಟೆಕ್ಚರ್‍" ಅಂದರೆ ಶಿಲೆ ಅಥವಾ ಕಲ್ಲಿನಲ್ಲೆ ಯೋಜನಾಬದ್ಧವಾಗಿ ಸುಂದರ ವಾಸ್ತು ಶಿಲ್ಪದೊಂದಿಗೆ ಕೆತ್ತಲಾದ ಹಲವಾರು ರಚನೆಗಳು. ಇಂತಹ ರಚನೆಗಳು ನಮ್ಮ ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇವು ಹಿಂದು, ಜೈನ ಅಥವಾ ಬೌದ್ಧ ದೇವಾಲಯಗಳಾಗಿರಬಹುದು ಅಥವಾ ಪುರಾತನ ಮನುಷ್ಯ ವಾಸಿಸುತ್ತಿದ್ದ ಗುಹೆಗಳಾಗಿರಬಹುದು. ಇಂತಹ ರಚನೆಗಳಿಗೆ ಭೇಟಿ ನೀಡಿದಾಗ ಮಾತ್ರವೆ ಅವುಗಳ ಅಸಾಮಾನ್ಯ ಅಗಾಧತೆಯ ಅರಿವು ನಮಗೆ ಮೂಡುತ್ತದೆ. ಬೆರುಗುಗೊಳಿಸುವ ಇಂತಹ ರಚನೆಗಳು ಭಾರತದಲ್ಲಿ ಸಾಕಷ್ಟಿದ್ದು ಜಗತ್ತಿನಲ್ಲೆ ಸುಪ್ರಸಿದ್ಧವಾಗಿವೆ.

ಈ ಶಿಲಾರಚನೆಗಳು ನಮ್ಮ ಪೂರ್ವಜರಿಗಿದ್ದ ಕಲಾ ಕೌಶಲ್ಯ, ನಿಪುಣತೆಯನ್ನು ಇಡೀ ಜಗತ್ತಿಗೆ ಸಾರುತ್ತಿವೆ. ಅಷ್ಟೆ ಅಲ್ಲ ವಿದೇಶಿಯರಲ್ಲೂ ಇವು ಆಸಕ್ತಿ ಕೆರಳಿಸಿದ್ದು ಇಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿವೆ. ನಮ್ಮಲ್ಲಿರುವ ಇಂತಹ ಕಲಾ ಶ್ರೀಮಂತಿಕೆಯ ಕುರಿತು ತಿಳಿದು ಅವುಗಳನ್ನು ಉಳಿಸಿ ಹಾಗು ರಕ್ಷಿಸಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ.

ಪ್ರಸ್ತುತ, ಲೇಖನವು ನಮ್ಮನ್ನು ಮೂಕವಿಸ್ಮಿತರನ್ನಾಗಿಸುವಂತಹ ಹಲವು ರಾಜ್ಯಗಳ ಗಮ್ಯ ರಚನೆಗಳ ಪರಿಚಯ ಮಾಡಿಸುತ್ತದೆ.

ನೆಲ್ಲಿ ತೀರ್ಥ ಗುಹಾಲಯ:

ನೆಲ್ಲಿ ತೀರ್ಥ ಗುಹಾಲಯ:

ಶ್ರೀ ಸೋಮನಾಥೇಶ್ವರನಿಗೆ ಮುಡಿಪಾದ ಗುಹಾ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಲಿ ತೀರ್ಥ ಎಂಬಲ್ಲಿದೆ. ನೆಲ್ಲಿ ತೀರ್ಥವನ್ನು ಮಂಗಳೂರಿನ ಬಜ್ಪೆಯಿಂದ ಕಾಥೇಲ್ಸಾರ್ ತಲುಪಿ ಅಲ್ಲಿಂದ ಮುಂದುವರೆಯುತ್ತ ತಲುಪಬಹುದು. ಇಲ್ಲಿರುವ ದೇವಾಲಯದ ಬಲ ಬದಿಗೆ ಸುಮಾರು 600 ಅಡಿಗಳಷ್ಟು ಉದ್ದವಾದ ಪ್ರಾಕೃತಿಕ ಗುಹೆಯೊಂದನ್ನು ಕಾಣಬಹುದು. ಈ ಪೂರ್ಣ ಉದ್ದವನ್ನು ತೆವಳುತ್ತ ಸಾಗಬೇಕು. ಕೊನೆಯಲ್ಲಿ ಒಂದು ಕೊಳ ಹಾಗೂ ಶಿವಲಿಂಗವನ್ನು ಕಾಣಬಹುದು.

ನೆಲ್ಲಿ ತೀರ್ಥ ಗುಹಾಲಯ:

ನೆಲ್ಲಿ ತೀರ್ಥ ಗುಹಾಲಯ:

ನೆಲ್ಲಿ ತೀರ್ಥ ದೇವಾಲಯದ ಬಲಬದಿಯಲ್ಲಿರುವ ಗುಹಾ ದಾರಿ.

ಗವಿ ಗಂಗಾಧರೇಶ್ವರ ದೇವಸ್ಥಾನ:

ಗವಿ ಗಂಗಾಧರೇಶ್ವರ ದೇವಸ್ಥಾನ:

ರಾಜಧಾನಿ ಬೆಂಗಳೂರು ನಗರ ವಲಯದಲ್ಲಿ ಬಂಡೆಯಲ್ಲಿ ಕೆತ್ತಲಾದ ಈ ಸುಂದರ ಪುರಾತನ ದೇವಸ್ಥಾನವನ್ನು ಕಾಣಬಹುದು. ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ ಸೂರ್ಯನ ಪ್ರಥಮ ರಷ್ಮಿಯು ಇಲ್ಲಿನ ಶಿವ ಲಿಂಗದ ಮೇಲೆ ಬಿಳುವ ಹಾಗೆ ಚಾಣಾಕ್ಷತನದಿಂದ ಈ ರಚನೆಯನ್ನು ನಿರ್ಮಿಸಲಾಗಿದೆ.

ಚಿತ್ರಕೃಪೆ: Pavithrah

ಬಾದಾಮಿ ಗುಹಾ ದೇವಾಲಯಗಳು:

ಬಾದಾಮಿ ಗುಹಾ ದೇವಾಲಯಗಳು:

ಬಾಗಲಕೋಟೆ ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರ ಬಾದಾಮಿ ಪಟ್ಟಣದಲ್ಲಿ ಈ ಗುಹಾ ದೇವಾಲಯಗಳ ಸಂಕೀರ್ಣವನ್ನು ಕಾಣಬಹುದು. ಇಂಡಿಯನ್ ರಾಕ್ ಕಟ್ ಆರ್ಕಿಟೆಕ್ಚರ್ ಗೆ ಉತ್ತಮ ಉದಾಹರಣೆಯಾಗಿರುವ ಈ ಬಂಡೆಯಲ್ಲಿ ಕೆತ್ತಲಾದ ಗುಹೆಗಳು ಬಾದಾಮಿ ಚಾಲುಕ್ಯರ ವಾಸ್ತು ಶೈಲಿಯಲ್ಲಿ ನಿರ್ಮಾಣವಾಗಿವೆ.

ಚಿತ್ರಕೃಪೆ: Anirudh Bhat

ಬಾದಾಮಿ ಗುಹಾ ದೇವಾಲಯಗಳು:

ಬಾದಾಮಿ ಗುಹಾ ದೇವಾಲಯಗಳು:

ಬಾದಾಮಿ ಗುಹಾಲಯದಲ್ಲಿ ಕಂಡುಬರುವ ಬಹು ಭುಜಾಕೃತಿಯ ನೃತ್ಯ ಭಂಗಿಯ ಶಿವನ ಪ್ರತಿಮೆ.

ಚಿತ್ರಕೃಪೆ: Dineshkannambadi

ಬಾದಾಮಿ ಗುಹಾ ದೇವಾಲಯಗಳು:

ಬಾದಾಮಿ ಗುಹಾ ದೇವಾಲಯಗಳು:

ಬಾದಾಮಿಯ ಗುಹಾಲಯದಲ್ಲಿ ಕಂಡುಬರುವ ವರಾಹ ಅವತಾರದ ವಿಷ್ಣುವಿನ ಶಿಲ್ಪಕಲೆ.

ಚಿತ್ರಕೃಪೆ: Dineshkannambadi

ಉಂಡವಲ್ಲಿ ಗುಹೆಗಳು:

ಉಂಡವಲ್ಲಿ ಗುಹೆಗಳು:

ಏಕಶಿಲೆಯಲ್ಲಿ ಕೆತ್ತಲಾದ ಅದ್ಭುತ ಗುಹಾಲಯ ಇದಾಗಿದೆ. ಆಂಧ್ರದ ಗುಂಟೂರು ಜಿಲ್ಲೆಯಲ್ಲಿ ಇದನ್ನು ಕಾಣಬಹುದಾಗಿದೆ. ಅಲ್ಲದೆ ವಿಜಯವಾಡಾದ ನೈರುತ್ಯ ಭಾಗಕ್ಕೆ ಕೇವಲ ಆರು ಕಿ.ಮೀ ದೂರದಲ್ಲಿ ಇದು ಸ್ಥಿತವಿದೆ. ಸುಮಾರು ಐದನೇಯ ಶತಮಾನದಲ್ಲಿ ನಿರ್ಮಾಣವಾಗಿರುವ ಈ ಗುಹಾಲಯದಲ್ಲಿ ವಿಷ್ಣು, ಆಂಜನೇಯರ ಕಲಾಕೃತಿಗಳನ್ನು ಕಾಣಬಹುದು.

ಚಿತ್ರಕೃಪೆ: Ramireddy.y

ಉಂಡವಲ್ಲಿ ಗುಹೆಗಳು:

ಉಂಡವಲ್ಲಿ ಗುಹೆಗಳು:

ಏಕಶಿಲೆಯಲ್ಲಿ ಕೆತ್ತಲಾದ ವಿಷ್ಣುವಿನ ಶಯನಾವಸ್ಥೆಯ ಭಂಗಿ.

ಚಿತ್ರಕೃಪೆ: Ramireddy.y

ಉಂಡವಲ್ಲಿ ಗುಹೆಗಳು:

ಉಂಡವಲ್ಲಿ ಗುಹೆಗಳು:

ಕೇವಲ ಒಂದೆ ಬಂಡೆಯಲ್ಲಿ ಮನೋಜ್ಞವಾಗಿ ಕೆತ್ತಲಾದ ಖಂಬಗಳು.

ಚಿತ್ರಕೃಪೆ: Chaitanya Vuddanti

ಅಕ್ಕಣ್ಣ ಮಾದಣ್ಣ ಗುಹೆಗಳು:

ಅಕ್ಕಣ್ಣ ಮಾದಣ್ಣ ಗುಹೆಗಳು:

ಆಂಧ್ರದ ವಿಜಯವಾಡಾದಲ್ಲಿ ಏಕ ಬಂಡೆಯಲ್ಲಿ ನಿರ್ಮಿಸಲಾದ ಈ ಸುಂದರ ಗುಹಾ ದೇವಾಲಯಗಳು ಕಂಡುಬರುತ್ತವೆ.

ಚಿತ್ರಕೃಪೆ: Adityamadhav83

ಬೊಜ್ಜನಕೊಂಡ:

ಬೊಜ್ಜನಕೊಂಡ:

ವಿಶಾಖಾಪಟ್ಟಣದಿಂದ 45 ಕಿ.ಮೀ ದೂರದಲ್ಲಿ ಸ್ಥಿತವಿರುವ ಶಂಕರಂ ಎಂಬ ಹಳ್ಳಿಯಲ್ಲಿ ಬೊಜ್ಜನಕೊಂಡ ಹಾಗೂ ಲಿಂಗಲಕೊಂಡ ಎಂಬ ಬಂಡೆಯಲ್ಲಿ ಕೆತ್ತಲಾದ ಬೌದ್ಧ ತಾಣಗಳನ್ನು ಕಾಣಬಹುದು.

ಚಿತ್ರಕೃಪೆ: Kkkishore

ಲಿಂಗಲಕೊಂಡ:

ಲಿಂಗಲಕೊಂಡ:

ಲಿಂಗಲಕೊಂಡ ಬೌದ್ಧ ತಾಣ.

ಚಿತ್ರಕೃಪೆ: Aitijhya

ಕವಿಯೂರ್ ಗುಹಾ ದೇವಾಲಯ:

ಕವಿಯೂರ್ ಗುಹಾ ದೇವಾಲಯ:

ಇತಿಹಾಸದ ಪುಟದಲ್ಲಿ ಕೇರಳದ ಪುರಾತನ 64 ಬ್ರಾಹ್ಮಣ ಸಮಾಜದ ಪೈಕಿ ಒಂದೆನಿಸಿಕೊಂಡಿದ್ದ ಕವಿಯೂರ್ ಒಂದು ಪುಟ್ಟ ಗ್ರಾಮವಾಗಿದೆ. ಪತನಾಂತಿಟ್ಟ ಜಿಲ್ಲೆಯ ತಿರುವಲ್ಲಾ ತಾಲೂಕಿನಲ್ಲಿದೆ ಈ ಹಳ್ಳಿ. ಇಂಡಿಯನ್ ರಾಕ್ ಕಟ್ ಆರ್ಕಿಟೆಕ್ಚರ್ ಗೆ ಸಂಬಂಧಿಸಿದಂತೆ ಗುಹಾ ದೇವಾಲಯವನ್ನು ಇಲ್ಲಿ ಕಾಣಬಹುದು.

ತ್ರಿಕ್ಕೂರು ಮಹಾದೇವ ದೇವಾಲಯ:

ತ್ರಿಕ್ಕೂರು ಮಹಾದೇವ ದೇವಾಲಯ:

ಭಾರತೀಯ ಬಂಡೆಯಲ್ಲಿ ಅರಳಿದ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿ ಕೇರಳದ ತ್ರಿಶ್ಶೂರ್ ಜಿಲ್ಲೆಯ ತ್ರಿಕ್ಕೂರು ಮಹಾದೇವ ದೇವಾಲಯವನ್ನು ಕಾಣಬಹುದು.

ಚಿತ್ರಕೃಪೆ: Aruna

ಕೊಟ್ಟುಕಲ್ ಗುಹಾ ದೇವಾಲಯ:

ಕೊಟ್ಟುಕಲ್ ಗುಹಾ ದೇವಾಲಯ:

6 ರಿಂದ 8 ನೇಯ ಶತಮಾನದ ಮಧ್ಯದಲ್ಲಿ ನಿರ್ಮಿತವಾದ ಕೊಟ್ಟುಕಲ್ ಗುಹಾ ದೇವಾಲಯವು ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟುಕಲ್ ಎಂಬ ಗ್ರಾಮದಲ್ಲಿ ಸ್ಥಿತವಿದೆ. ಬಂಡೆಯಲ್ಲಿ ಕೆತ್ತಲಾದ ಎರಡು ಗುಹೆಗಳನ್ನು ಕಾಣಬಹುದಾಗಿದ್ದು ಪ್ರಮುಖ ದೇವತೆಯಾಗಿ ಗಣಪತಿಯ ಶಿಲ್ಪವನ್ನು ಕೆತ್ತಲಾಗಿದೆ.

ಚಿತ್ರಕೃಪೆ: kannan

ಬಾಗ್ ಗುಹೆಗಳು:

ಬಾಗ್ ಗುಹೆಗಳು:

ಮಧ್ಯ ಪ್ರದೇಶದ ಧಾರ್ ಜಿಲ್ಲೆಯ ಕುಕ್ಷಿ ತಾಲೂಕಿನಲ್ಲಿರುವ ಬಾಗ್ ಗುಹೆಗಳ ಸಂಕೀರ್ಣವು ಪುರಾತನ ಮಾನವ ನಿರ್ಮಿತ ಗುಹೆಗಳಾಗಿವೆ.

ಚಿತ್ರಕೃಪೆ: Nikhil2789

ಉದಯಗಿರಿ ಗುಹೆಗಳು:

ಉದಯಗಿರಿ ಗುಹೆಗಳು:

ಮಧ್ಯಪ್ರದೇಶದ ವಿಧಿಶಾ ಎಂಬಲ್ಲಿ ಕಾಣಬಹುದಾಗಿದೆ ಈ ಉದಯಗಿರಿ ಗುಹೆಗಳನ್ನು. ಎರಡನೇಯ ಚಂದ್ರಗುಪ್ತನ ಕಾಲದಲ್ಲಿ ಈ ಗುಹೆಗಳು ನವೀಕರಿಸಲ್ಪಟ್ಟವು.

ಚಿತ್ರಕೃಪೆ: Asitjain

ಅಜಂತಾ ಗುಹೆಗಳು:

ಅಜಂತಾ ಗುಹೆಗಳು:

ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಅಜಂತಾ ಗುಹೆಗಳು ಸುಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಾಗಿವೆ ಹಾಗೂ ರಾಕ್ ಕಟ್ ಆರ್ಕಿಟೆಕ್ಚರ್ ಗೆ ಒಂದು ಉತ್ತಮ ಉದಾಹರಣೆಯಾಗಿವೆ.

ಚಿತ್ರಕೃಪೆ: Soman

ಕೈಲಾಸನಾಥ ದೇವಾಲಯ:

ಕೈಲಾಸನಾಥ ದೇವಾಲಯ:

ಮಹಾರಾಷ್ಟ್ರದ ಎಲ್ಲೋರಾ ಗುಹೆಗಳ ಒಂದು ಭಾಗವಾಗಿರುವ ಕೈಲಾಸನಾಥ ದೇವಾಲಯವು ಶಿಲೆಯಲ್ಲಿ ಕೆತ್ತಲಾದ ಸುಂದರ ದೇವಾಲಯ ಸಂಕೀರ್ಣವಾಗಿದೆ.

ಚಿತ್ರಕೃಪೆ: World8115

ಲೇಣ್ಯಾದ್ರಿ:

ಲೇಣ್ಯಾದ್ರಿ:

ಬೌದ್ಧ ಧರ್ಮದ ಶಿಲೆಯಲ್ಲಿ ಕೆತ್ತಲಾದ 30 ಗುಹಾ ದೇವಾಲಯಗಳನ್ನು ಲೇಣ್ಯಾದ್ರಿಯಲ್ಲಿ ಕಾಣಬಹುದು. ಇದು ಪುಣೆ ಜಿಲ್ಲೆಯ ಜುನ್ನಾರ್ ಪ್ರದೇಶದಲ್ಲಿದೆ. ಇವುಗಳಲ್ಲಿ ಏಳನೇಯ ಗುಹೆಯು ಗಣೇಶನಿಗೆ ಸಮರ್ಪಿತವಾದ ಹಿಂದೂ ದೇಗುಲವಾಗಿದೆ.

ಚಿತ್ರಕೃಪೆ: Niemru

ಲೇಣ್ಯಾದ್ರಿ:

ಲೇಣ್ಯಾದ್ರಿ:

ಏಳನೇಯ ಸಂಖ್ಯೆಯ ಗುಹೆ ಗಣೇಶನಿಗೆ ಮುಡಿಪಾಗಿದೆ.

ಚಿತ್ರಕೃಪೆ: Magiceye

ಮಂಡಪೇಶ್ವರ ಗುಹೆಗಳು:

ಮಂಡಪೇಶ್ವರ ಗುಹೆಗಳು:

ಮುಂಬೈನಗರದ ಉಪವಲಯವಾದ ಬೋರಿವಲಿಯಲ್ಲಿ ಶಿವನಿಗೆ ಮುಡಿಪಾದ ಈ ಗುಹಾಲಯವನ್ನು ಕಾಣಬಹುದು. ಇವು ಸುಮಾರು ಎಂಟನೇಯ ಶತಮಾನದಲ್ಲಿ ನಿರ್ಮಾಣವಾದದ್ದಾಗಿವೆ.

ಚಿತ್ರಕೃಪೆ: Grv rtd490

ಪಾತಾಳೇಶ್ವರ:

ಪಾತಾಳೇಶ್ವರ:

ಈ ಗುಹಾಂತರ ದೇವಾಲಯವು ಎಂಟನೇಯ ಶತಮಾನದ ರಾಷ್ಟ್ರಕೂಟರ ಕಾಲದ್ದಾಗಿದ್ದು, ಪುಣೆಯಲ್ಲಿ ಇದನ್ನು ಕಾಣಬಹುದಾಗಿದೆ.

ಹರಿಶಂಕರ ದೇವಸ್ಥಾನ:

ಹರಿಶಂಕರ ದೇವಸ್ಥಾನ:

ಒಡಿಶಾದ ಗಂಧಮರ್ದನ ಪರ್ವತ ಶ್ರೇಣಿಗಳಲ್ಲಿ ಈ ಶಿಲೆಯಲ್ಲಿ ಕೆತ್ತಲಾದ ದೇವಸ್ಥಾನವನ್ನು ಕಾಣಬಹುದು.

ಅನಂತ ವಾಸುದೇವ ದೇವಸ್ಥಾನ:

ಅನಂತ ವಾಸುದೇವ ದೇವಸ್ಥಾನ:

ಕೃಷ್ಣನಿಗೆ ಮುಡಿಪಾದ ಈ ದೇವಸ್ಥಾನವು ಶಿಲೆಯಲ್ಲರಳಿದ ಶಿಲ್ಪಕಲಾಕೃತಿಗೆ ಉತ್ತಮ ಉದಾಹರಣೆಯಾಗಿದ್ದು, ಒಡಿಶಾದ ಭುವನೇಶ್ವರದಲ್ಲಿ ಕಂಡುಬರುತ್ತದೆ.

ಚಿತ್ರಕೃಪೆ: Nayansatya

ಯಾಮೇಶ್ವರ ದೇವಸ್ಥಾನ:

ಯಾಮೇಶ್ವರ ದೇವಸ್ಥಾನ:

ಒಡಿಶಾದ ಭುವನೇಶ್ವರ ಬಳಿಯಿರುವ ಈ ದೇವಸ್ಥಾನವು ಶಿವನಿಗೆ ಮುಡಿಪಾದ ಒಂದು ಪುರಾತನ ದೇವಾಲಯವಾಗಿದ್ದು ಸ್ವತಃ ಯಮಧರ್ಮರಾಯನಿಂದ ಪೂಜಿಸಲ್ಪಡುತ್ತಿತ್ತೆಂದು ಹೇಳುತ್ತದೆ ಇಲ್ಲಿನ ಸ್ಥಳ ಪುರಾಣ.

ಚಿತ್ರಕೃಪೆ: Sujit kumar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X