Search
  • Follow NativePlanet
Share
» »ಪುನಃ ನಿರ್ಮಾಣಗೊಂಡ ಅದ್ದೂರಿ ರಚನೆಗಳು

ಪುನಃ ನಿರ್ಮಾಣಗೊಂಡ ಅದ್ದೂರಿ ರಚನೆಗಳು

By Vijay

ನಮ್ಮ ದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಐತಿಹಾಸಿಕ ಸ್ಮಾರಕಗಳಾಗಲಿ, ಕಟ್ಟಡಗಳಾಗಲಿ, ಕೋಟೆಗಳಾಗಲಿ ಕಾಣಸಿಗುತ್ತವೆ. ಎಷ್ಟೊ ರಚನೆಗಳು ನಾಶ ಹೊಂದಿದಾಗ ಅವುಗಳ ಸ್ಥಳದಲ್ಲಿ ಮತ್ತಿನೇನೊ ನಿರ್ಮಿಸಲ್ಪಡುವುದು ಸಾಮಾನ್ಯವಾಗಿವೆ. ಆದರೆ ಕೆಲ ರಚನೆಗಳು ಸಾಕಷ್ಟು ಪುರಾತನವಾಗಿದ್ದು ಕಾಲಕ್ರಮೇಣ ಮತ್ತೆ ಶಿಥಿಲಗೊಳ್ಳುವಾಗ ಮತ್ತೆ ಪುನಾ ರಚಿಸಲ್ಪಟ್ಟು ಮತ್ತೆ ಮೆರುಗನ್ನು ಪಡೆದುಕೊಂಡವುಗಳಾಗಿವೆ.

ಪ್ರಸ್ತುತ ಲೇಖನದಲ್ಲಿ ಅಂತಹ ಕೆಲ ಪ್ರಮುಖ ರಚನೆಗಳ ಕುರಿತು ತಿಳಿಯಿರಿ. ಈ ರಚನೆಗಳು ಎಂದೊ ನಿರ್ಮಿಸಲ್ಪಟ್ಟಿದ್ದವು. ನಂತರ ಕಾಲವೆಂಬ ಚಕ್ಕ್ರಕ್ಕೆ ಸಿಲುಕಿ ಮುದುಡಿಕೊಳ್ಳುತ್ತಿರುವಾಗ ಪುನಃ ನಿರ್ಮಾಣ ಅಥವಾ ನವೀಕರಣ ಎಂಬ ಲೇಪನದಿಂದ ಮತ್ತೆ ಚಿಗುರಿಕೊಂಡವು.

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ನಿಜಾಮತ್ ಇಮಾಂಬರಾ: ಪಶ್ಚಿಮ ಬಂಗಾಳ ಜಿಲ್ಲೆಯ ಮುರ್ಶಿದಾಬಾದ್ ಪಟ್ಟಣದಲ್ಲಿರುವ ಈ ಬೃಹತ್ ಇಮಾಂಬರಾ ಕಟ್ಟಡವು ಮತ್ತೆ ರಚಿಸಲ್ಪಟ್ಟ ರಚನೆಯಾಗಿದೆ. ಇದು ಭಾರತದಲ್ಲೆ ದೊಡ್ಡ ಇಮಾಂಬರಾ ಕಟ್ಟಡವಾಗಿದೆ. ಸಿರಾಜ್ ಉದ್ ದೌಲ್ ನಿರ್ಮಿಸಿದ್ದ ಇಮಾಂಬರಾ 1842 ಮತ್ತು 1846 ರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ನಾಶ ಹೊಂದಿದಾಗ, ನಂತರ 1847 ರಲ್ಲಿ ನವಾಬ್ ನಾಜಿಮ್ ಮನ್ಸೂರ್ ಅಲಿ ಖಾನ್ ಎಂಬುವವರಿಂದ ಇದು ಮತ್ತೆ ನಿರ್ಮಿಸಲ್ಪಟ್ಟಿತು.

ಚಿತ್ರಕೃಪೆ: Debashis Mitra

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ಅಂಬರನಾಥ ಶಿವ ಮಂದಿರ: ಮುಂಬೈ ಮಹಾನಗರಕ್ಕೆ ಒಳಪಡುವ ಅಂಬರನಾಥ ಒಂದು ನಗರ ಪ್ರದೇಶವಾಗಿದ್ದು ಇಲ್ಲಿರುವ ಶಿವ ಮಂದಿರವನ್ನು ಅಂಬರೇಶ್ವರ ಶಿವ ಎಂತಲೂ ಕೂಡ ಕರೆಯಲಾಗುತ್ತದೆ. ಹಿಂದೆ ಶಿಲಾಹಾರದ ರಾಜನಾಗಿದ್ದ ಚಿತ್ತರಾಜ ಇದನ್ನು ನಿರ್ಮಿಸಿದ್ದನು ನಂತರ ಅವನ ಮಗನು ಇದನ್ನು ಮತ್ತೆ ಪುನಾ ರಚಿಸಿದನು ಎಂದು ಹೇಳಲಾಗಿದೆ. ಹೇಮದ್ಪಂಥಿ ವಾಸ್ತುಶೈಲಿಯ ಈ ದೇಗುಲವು ವಾಲ್ಧುನು ನದಿಯ ದಡದ ಮೇಲಿದೆ.

ಚಿತ್ರಕೃಪೆ: Mony Panicker

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ಟಾಬೊ ಬೌದ್ಧ ವಿಹಾರ: ಹಿಮಾಚಲ ಪ್ರದೇಶ ರಾಜ್ಯದ ಸ್ಪಿತಿ ಕಣಿವೆಯಲ್ಲಿರುವ ಟಾಗೊ ಎಂಬ ಹಳ್ಳಿಯಲ್ಲಿರುವ ಈ ಬೌದ್ಧ ವಿಹಾರವು ಮತ್ತೆ ಪುನಾ ರಚಿಸಲ್ಪಟ್ಟ ಐತಿಹಾಸಿಕ ರಚನೆಯಾಗಿದೆ. 1975 ರಲ್ಲಿ ಸಂಭವಿಸಿದ ಭೂಕಂಪನದ ನಂತರ ಮತ್ತೆ ಈ ವಿಹಾರವನ್ನು ನಿರ್ಮಿಸಲಾಯಿತು. ಸಾಕಷ್ಟು ಅಮೂಲ್ಯವಾದ ಬೌದ್ಧ ಸಂಗ್ರಹಗಳನ್ನು ಇಲ್ಲಿ ಕಾಣಬಹುದಾಗಿದೆ.

ಚಿತ್ರಕೃಪೆ: John Hill

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ಸಂತ ಅಂಡ್ರೀವರ ಬೆಸಿಲಿಕಾ: ಕೇರಳದ ಅಲಪುಳಾ ಜಿಲ್ಲೆಯ ಅರ್ಥಂಕಲ್ ಎಂಬಲ್ಲಿರುವ ಈ ಚರ್ಚ್ ಮತ್ತೆ ಪುನಾ ರಚಿಸಲ್ಪಟ್ಟ ಚರ್ಚ್ ಕಟ್ಟಡವಾಗಿದೆ.

ಚಿತ್ರಕೃಪೆ: Challiyan

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ಸ್ಯಾಂಥೋಮ್ ಬೆಸಿಲಿಕಾ: ಚೆನ್ನೈ ನಗರದಲ್ಲಿರುವ ಸ್ಯಾಂಥೋಮ್ ಬೆಸಿಲಿಕಾ ಮತ್ತೆ ನಿರ್ಮಿಸಲ್ಪಟ್ಟ ಅದ್ದೂರಿ ಕಟ್ಟಡ ರಚನೆಯಾಗಿದೆ. 16 ನೇಯ ಶತಮಾನದಲ್ಲಿ ಪೋರ್ಚುಗೀಸರಿಂದ ನಿರ್ಮಿಸಲ್ಪಟ್ಟ ಈ ಕಟ್ಟಡವು ನಂತರ 1893 ರಲ್ಲಿ ಬ್ರಿಟೀಷರಿಂದ ಮತ್ತೆ ರೂಪ ತಳೆಯಿತು.

ಚಿತ್ರಕೃಪೆ: PlaneMad

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ಕುಮಾರಕೊಟ್ಟಂ ದೇವಸ್ಥಾನ: ಮುರುಗನ್ (ಸುಬ್ರಮಣ್ಯ) ದೇವರಿಗೆ ಮುಡಿಪಾದ ಈ ಪುರಾತನ ದೇವಾಲಯವು ತಮಿಳುನಾಡಿನ ಕಂಚೀಪುರಂ ಪಟ್ಟಣದಲ್ಲಿದೆ. 1915 ರಲ್ಲಿ ದೇವಸ್ಥಾನವನ್ನು ಇಂದಿನ ಪ್ರಸ್ತುತ ರೂಪದಲ್ಲಿ ಮತ್ತೆ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿರುವುದು ದೇವಸ್ಥಾನ ಆವರಣದಲ್ಲಿರುವ ಒಮ್ದು ಮಂಟಪ.

ಚಿತ್ರಕೃಪೆ: Rajendran Ganesan

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ಖಡಕ್ವಾಸ್ಲಾ ಅಣೆಕಟ್ಟು: ಮಹಾರಾಷ್ಟ್ರದ ಪುಣೆ ನಗರದಿಂದ 20 ಕಿ.ಮೀ ದೂರದಲ್ಲಿರುವ ಖಡಕ್ವಾಸ್ಲಾ ಅಣೆಕಟ್ಟು ಮತ್ತೆ ಪುನಾ ನಿರ್ಮಿಸಲ್ಪಟ್ಟ ರಚನೆಯಾಗಿದೆ. 1961 ರಲ್ಲಿ ಪನ್ಶೆಟ್ ಅಣೆಕಟ್ಟಿನಲ್ಲಿ ನೀರು ಮಿತಿ ಮೀರಿ ಪುಣೆ ನಗರದಲ್ಲಿ ಅತಿವೃಷ್ಟಿಯ ಸಂದರ್ಭ ಒದಗಿದಾಗ ಖಡಕ್ವಾಸ್ಲಾ ಅಣೆಕಟ್ಟನ್ನು ಒಡೆಯಬೇಕಾಗಿ ಬಂದಿತು. ನಂತರ ಈ ಅಣೆಕಟ್ಟನ್ನು ಮತ್ತೆ ನಿರ್ಮಿಸಲಾಯಿತು.

ಚಿತ್ರಕೃಪೆ: chinmay22

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ಹೋಲಿ ಕ್ರಾಸ್ ಚರ್ಚ್: ಮುಂಬೈನ ಕುರ್ಲಾ ಪ್ರದೇಶದಲ್ಲಿರುವ ಈ ಚರ್ಚ್ ಮತ್ತೆ ಪುನಾ ರಚಿಸಲ್ಪಟ್ಟ ರಚನೆಯಾಗಿದೆ. 1588 ರಲ್ಲಿ ಪೋರ್ಚುಗೀಸರಿಂದ ಒಮ್ಮೆ ನಿರ್ಮಿಸಲ್ಪಟ್ಟು ನಂತರ 1848 ರಲ್ಲಿ ಪುನಾ ನಿರ್ಮಿಸಲ್ಪಟ್ಟಿತು.

ಚಿತ್ರಕೃಪೆ: Trinidade

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ಹರ್ಮಿಂದರ್ ಸಾಹಿಬ್: ಅಮೃತಸರ ಪಟ್ಟಣದಲ್ಲಿರುವ, ಸಿಖ್ಖರ ಪ್ರಮುಖ ತೀರ್ಥ ಸ್ಥಳವಾದ ಹರ್ಮಿಂದರ್ ಸಾಹಿಬ್ ಗುರುದ್ವಾರವು ಪುನಾ ರಚಿಸಲ್ಪಟ್ಟ ರಚನೆಯಾಗಿದೆ. ಈ ಗುರುದ್ವಾರವು "ಗೋಲ್ಡನ್ ಟೆಂಪಲ್" ಎಂದೆ ಪ್ರಖ್ಯಾತವಾಗಿದೆ. ಹದಿನಾರನೇಯ ಶತಮಾನದಲ್ಲಿ ಮೂಲ ರಚನೆಯು ನಿರ್ಮಿಸಲ್ಪಟ್ಟಿದ್ದು, ಪ್ರಸ್ತುತ ರಚನೆಯು 1764 ರಲ್ಲಿ ಜಸ್ಸಾ ಸಿಂಗ್ ಅಹ್ಲುವಾಲಿಯಾ ಅವರಿಂದ ನಿರ್ಮಿಸಲ್ಪಟ್ಟಿದೆ.

ಚಿತ್ರಕೃಪೆ: Nicholas

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣ: ದೆಹಲಿಯಲ್ಲಿರುವ ಈ ಕ್ರೀಡಾಂಗಣವು ಭಾವನಗರ್ ಮಹಾರಜರಿಂದ ದೆಹಲಿಗೆ ಕೊಡುಗೆಯ ರೂಪದಲ್ಲಿ 1933 ರಲ್ಲಿ ಮೊದಲ್ ಬಾರಿಗೆ ನಿರ್ಮಿಸಲ್ಪಟ್ಟಿತು. ನಂತರ 2010 ರಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡೆಯ ಅಂಗವಾಗಿ ಮತ್ತೆ ಇದನ್ನು ಅದ್ದೂರಿಯಾಗಿ ನವೀಕರಿಸಲಾಯಿತು. ಇದು ಮೂಲತಃ ಹಾಕಿ ಕ್ರೀಡಾಂಗಣವಾಗಿದೆ.

ಚಿತ್ರಕೃಪೆ: Rohit Markande

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ಅರ್ನಾಲಾ ಕೋಟೆ: ಮಹಾರಾಷ್ಟ್ರದ ವಸಾಯ್ ಪ್ರದೇಶದಿಂದ 8 ಮೈಲಿ ದೂರದಲ್ಲಿರುವ ಅರ್ನಾಲಾ ಚಿಕ್ಕ ದ್ವೀಪದಲ್ಲಿರುವ ಈ ಕೋಟೆಯು ಪುನಾ ರಚಿಸಲ್ಪಟ್ಟ ಕೋಟೆಯಾಗಿದೆ. ಜಲದುರ್ಗ್ ಎಂತಲೂ ಕರೆಯಲಾಗಿದ್ದ ಈ ಕೋಟೆಯನ್ನು ಪೋರ್ಚುಗೀಸರು ವಶಪಡಿಸಿಕೊಂಡು ಮತ್ತೆ ಪುನಾ ರಚಿಸಿದರು. ಅರ್ನಾಲಾ ಕೋಟೆಗೆ ಪ್ರವೇಶ ದ್ವಾರ.

ಚಿತ್ರಕೃಪೆ: Damitr

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ಛತ್ರಪತಿ ಶಿವಾಜಿ ಟರ್ಮಿನಸ್: ಹಿಂದೆ ವಿಕ್ಟೋರಿಯಾ ಟರ್ಮಿನಸ್ ಎಂದು ಕರೆಯಲ್ಪಡುತ್ತಿದ್ದ ಇಂದಿನ ಮಹಾರಾಷ್ಟ್ರದ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ ಯುನೆಸ್ಕೊ ತಾಣವಾಗಿರುವುದು ಅಲ್ಲದೆ ಮತ್ತೆ ಪುನಾ ರಚಿಸಲ್ಪಟ್ಟ ರಚನೆಯಾಗಿದೆ.

ಚಿತ್ರಕೃಪೆ: Aaditya Ganapathy

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ದಕ್ಷೀಣೆಶ್ವರ ಮಹಾದೇವ ಮಂದಿರ: ದಕ್ಷ ಮಹಾದೇವ ದೇವಾಲಯ ಎಂತಲೂ ಕರೆಯಲ್ಪಡುವ ಈ ದೇವಸ್ಥಾನವು ಉತ್ತರಾಖಂಡದ ಹರಿದ್ವಾರದ ಬಳಿಯಿರುವ ಕಂಖಲ್ ಎಂಬ ಪಟ್ಟಣದಲ್ಲಿದೆ. ರಾಣಿ ಧನಕೌರ್ ಎಂಬುವವಳಿಂದ ಈ ದೇವಸ್ಥಾನ ಮೊದಲಿಗೆ 1810 ರಲ್ಲಿ ನಿರ್ಮಿಸಲ್ಪಟ್ಟಿದ್ದರೂ ನಂತರ ಮತ್ತೆ 1962 ರಲ್ಲಿ ಇದನ್ನು ಪುನಾ ರಚಿಸಲಾಯಿತು. ಶಿವನ ಮಡದಿಯಾಗಿದ್ದ ಸತಿಯ ತಂದೆ ಪ್ರಜಾಪತಿ ದಕ್ಷನ ಹೆಸರನ್ನು ಇದಕ್ಕೆ ಇಡಲಾಗಿದೆ.

ಚಿತ್ರಕೃಪೆ: rajkumar1220

ಪುನಾರಚಿಸಲಟ್ಟ ರಚನೆಗಳು:

ಪುನಾರಚಿಸಲಟ್ಟ ರಚನೆಗಳು:

ಜಗನ್ನಾಥ ದೇವಾಲಯ: ಜಾರ್ಖಂಡ್ ರಾಜಧಾನಿ ಪಟ್ಟಣ ರಾಂಚಿಯಲ್ಲಿರುವ ವಿಷ್ಣು ದೇವರಿಗೆ ಮುಡಿಪಾದ ಜಗನ್ನಾಥ ದೇವಾಲಯವು ಪುನಾ ರಚಿಸಲ್ಪಟ್ಟ ದೇವಾಲಯ ಕಟ್ಟಡವಾಗಿದೆ. 17 ನೇಯ ಶಾಮಾನದಲ್ಲಿ ನಿರ್ಮಿಸಲ್ಪಟ್ಟ ಈ ದೇವಾಲಯವು 1991 ರಲ್ಲಿ ಕುಸಿದಿತ್ತು. ನಂತರ ಅಂದಿನ ಸರ್ಕಾರದ ತ್ವರಿತಗತಿಯ ಕೆಲಸದಿಂದಾಗಿ ಮತ್ತೆ ಈ ದೇವಸ್ಥಾನವು ಪುನಾ ರಚಿಸಲ್ಪಟ್ಟಿತು. ಪುರಿಯ ಜಗನ್ನಾಥ ದೇವಸ್ಥಾನಕ್ಕೆ ಹೋಲುವ ಈ ದೇವಸ್ಥಾನವು ಆಕಾರದಲ್ಲಿ ಚಿಕ್ಕದಾಗಿದೆ.

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X