Search
  • Follow NativePlanet
Share
» »ಬಿಸಿಯಲ್ಲೂ ಹಸಿಯಾಗಿ ಕೈಬಿಸಿ ಕರೆಯುವ ವನಸಿರಿಗಳು

ಬಿಸಿಯಲ್ಲೂ ಹಸಿಯಾಗಿ ಕೈಬಿಸಿ ಕರೆಯುವ ವನಸಿರಿಗಳು

By Vijay

ನಾವು ವಾಸ ಮಾಡುತ್ತಿರುವ ಭೂಮಿ ಅದೆಷ್ಟೊ ಮಿಲಿಯನ್ ವರ್ಷಗಳ ಹಿಂದೆ ರೂಪಿಸಲ್ಪಟ್ಟ ರಚನೆಯಾಗಿದೆ ಎಂದು ವಿಜ್ಞಾನದಿಂದ ತಿಳಿದು ಬರುವ ವಿಷಯ. ಭೂಮಿ ರೂಪಗೊಂಡ ನಂತರ ಅದಕ್ಕೆ ಪೂರಕವಾಗಿ ಪ್ರಕೃತಿಯ ನಿರ್ಮಾಣವಾಗಿ ಅದಕ್ಕೊಂದು ವಾತಾವರಣ ರೂಪಗೊಂಡಿತು. ಮೂಲತಃ ಪ್ರಕೃತಿ ಮತ್ತು ವಾತಾವರಣ ಒಂದಕ್ಕೊಂದು ಬಿಡಿಸಲಾಗದ ನಂಟನ್ನು ಹೊಂದಿವೆ.

ಮೇಕ್ ಮೈ ಟ್ರಿಪ್ ಕೂಪನ್ನುಗಳನ್ನು ಉಚಿತವಾಗಿ ಪಡೆದುಕೊಳ್ಳಿ

ಪ್ರಕೃತಿ ಎಂಬುದು ದಟ್ಟವಾದ ಗಿಡಮರಗಳು, ಗಿರಿ-ಪರ್ವತಗಳು, ನದಿ, ಕೆರೆ-ತೊರೆಗಳು, ಹಳ್ಳಗಳು, ಬಯಲು ಭೂಮಿ ಮುಂತಾದವುಗಳನ್ನು ಹೊಂದಿದ್ದರೆ, ವಾತಾವರಣವು ಅವುಗಳಿಂದ ಆಗುವ ಉತ್ಪತ್ತಿಯ ಅಂಶಗಳು ಸೂರ್ಯನ ಕಿರಣಗಳಲ್ಲಿ ಸಂಯೋಗಗೊಂಡು ನಿರ್ಮಾಣಗೊಂಡಿರುವ ಅಂಶವಾಗಿದೆ. ಕಾಲ ಕಾಲಕ್ಕೆ ಆಗುವ ಭೂಮಿಯ ಮೇಲಿನ ಬದಲಾವಣೆಗಳು ವಾತಾವರಣವನ್ನು ಸೂಚಿಸುತ್ತವೆ ಎಂದು ಹೇಳಬಹುದು.

ಹೀಗೆ ಅದ್ಭುತವಾದ, ವಿಸ್ಮಯಕರವಾದ ವಾತಾವರಣಗಳನ್ನು ಇಂದು ನಾವು ಭೂಮಿಯ ಮೇಲೆ ಕಾಣಬಹುದಾಗಿದೆ. ಅದರಲ್ಲೊಂದಾಗಿದೆ ರೇನ್ ಫಾರೆಸ್ಟ್ ಅಂದರೆ ಮಳೆಕಾಡುಗಳು. ಈ ಕಾಡುಗಳು ಇತರೆ ಸಾಮಾನ್ಯ ಕಾಡುಗಳಂತಿರದೆ ವಿಶಿಷ್ಟವಾಗಿರುತ್ತವೆ. ಸರಳವಾಗಿ ಹೇಳಬೇಕೆಂದರೆ ಇಲ್ಲಿ ಮಳೆಯ ಪ್ರಮಾಣ ಅಧಿಕವಾಗಿರುತ್ತದೆ. ಅಲ್ಲದೆ ಇಲ್ಲಿ ಜೀವ ವೈವಿಧ್ಯತೆ ಹಾಗೂ ಅದರ ಪ್ರಮಾಣವೂ ಅಪಾರವಾಗಿರುತ್ತದೆ.

ವಿಶೇಷ ಲೇಖನ : ಮಳೆ ಪ್ರದೇಶಗಳಲ್ಲಿನ ಜೀವಕಲರವ

ಈ ಮಳೆಕಾಡುಗಳನ್ನು ಜಗತ್ತಿನ ಕೆಲವೆ ಪ್ರದೇಶಗಳಲ್ಲಿ ಕಾಣಬಹುದಾಗಿದ್ದು ಅದರಲ್ಲಿ ಭಾರತವೂ ಸಹ ಒಂದು. ಅದರಲ್ಲೂ ವಿಶೇಷವಾಗಿ ಭಾರತದಲ್ಲಿಯೂ ಸಹ ಕೆಲವೆ ಕೆಲವು ಪ್ರದೇಶಗಳಲ್ಲಿ ಈ ಕಾಡುಗಳನ್ನು ಕಾಣಬಹುದಾಗಿದೆ. ಪ್ರಸ್ತುತ ಲೇಖನವು ಭಾರತದ ಯಾವ ಪ್ರದೇಶಗಳಲ್ಲಿ ಈ ಕಾಡುಗಳನ್ನು ನೋಡಬಹುದೆಂಬುದರ ಕುರಿತು ಹಾಗೂ ಅಲ್ಲಿನ ಶ್ರೀಮಂತ ಪ್ರಕೃತಿ ಸೌಂದರ್ಯ ಮತ್ತು ಜೀವ ವೈವಿಧ್ಯದ ಕುರಿತು ತಿಳಿಸುತ್ತದೆ.

ಸಮಯ ಸಿಕ್ಕರೆ ಖಂಡಿತವಾಗಿಯೂ ಒಂದೊಮ್ಮೆ ಈ ಕಾಡುಗಳಿಗೊಮ್ಮೆ ಭೇಟಿ ನೀಡಿ, ಅಲ್ಲಿನ ವೈಭವವನ್ನು ನಿಮ್ಮ ಕಣ್ಮನಗಳಲ್ಲಿ ತುಂಬಿಕೊಳ್ಳಿ.

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಸಾಮಾನ್ಯವಾಗಿ ಮಳೆಕಾಡುಗಳಲ್ಲಿ ಮಳೆಯ ಪ್ರಮಾಣ ಜಾಸ್ತಿಯೆ ಆಗಿರುತ್ತದೆ. ಆದ್ದರಿಂದ ಈ ಕಾಡುಗಳು ವರ್ಷಪೂರ್ತಿ ಹಸಿರಾಗಿರುವುದಲ್ಲದೆ ಹಸಿ ಹಸಿಯಾಗಿಯೂ ಇರುತ್ತದೆ. ಪ್ರಕೃತಿಯ ಸಂಪತ್ತು ಅಗಾಧವಾಗಿದ್ದು ಅಪಾರ ಪ್ರಮಾಣದಲ್ಲಿ ಜೀವ ಸಂಪತ್ತು ನೆಲೆಸಿರುವುದನ್ನು ಕಾಣಬಹುದು.

ಚಿತ್ರಕೃಪೆ: Harsha K R

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಅಂಕಿ ಅಂಶಗಳ ಪ್ರಕಾರ, ಜಗತ್ತಿನ ಸುಮಾರು 40% ರಿಂದ 75% ರಷ್ಟು ಜೈವಿಕ ಪ್ರಬೇಧಗಳು ಮಳೆಕಾಡು ಪ್ರದೇಶಗಳಲ್ಲೆ ಕಂಡುಬರುತ್ತವೆ. ಈ ಕಾಡುಗಳಲ್ಲಿ ಮಿಲಿಯನ್ ಸಂಖ್ಯೆಗಳಷ್ಟು ಸಸ್ಯ, ಕೀಟಗಳ ಪ್ರಬೇಧಗಳಿರಬಹುದಾಗಿದ್ದು ಅವುಗಳಲ್ಲಿ ಎಷ್ಟೊ ಪ್ರಬೇಧಗಳು ಇನ್ನೂ ಕಂಡುಹಿಡಿಯಲಾರದಾಗಿರಬಹುದೆಂದು ಅಂದಾಜಿಸಲಾಗಿದೆ.

ಚಿತ್ರಕೃಪೆ: Anupom sarmah

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಈ ರೀತಿಯ ಶ್ರೀಮಂತ ಪ್ರಕೃತಿಯನ್ನು, ಈ ಕಾಡುಗಳು ಹೊಂದಿರುವುದರಿಂದ ಪ್ರಕೃತಿ ಪ್ರಿಯ ಪ್ರವಾಸಿಗರಿಗೆ, ಸಂಶೋಧಕರಿಗೆ, ಸಂಶೋಧನಾ ವಿದ್ಯಾರ್ಥಿಗಳಿಗೆ, ವಿಜ್ಞಾನಿಗಳಿಗೆ ಭೇಟಿ ನೀಡಲು ಬಲು ನೆಚ್ಚಿನ ತಾಣಗಳಾಗಿವೆ. ಭಾರತದ ಯಾವೆಲ್ಲ ಸ್ಥಳಗಳಲ್ಲಿ ಈ ಕಾಡುಗಳನ್ನು ಕಾಣಬಹುದೆಂಬುದರ ಕುರಿತು ಮುಂದಿನ ಸ್ಲೈಡುಗಳಲ್ಲಿ ತಿಳಿಯಿರಿ.

ಚಿತ್ರಕೃಪೆ: Anupom sarmah

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಮೊದಲಿಗೆ ಈ ರೀತಿಯ ಕಾಡುಗಳು ಕರ್ನಾಟಕದಲ್ಲಿರುವುದು ನಮಗೆಲ್ಲ ಬಲು ಹೆಮ್ಮೆಯ ವಿಷಯ. ಹೌದು ಪಶ್ಚಿಮ ಘಟ್ಟಗಳು ಈ ರೀತಿಯ ಕಾಡುಗಳಿಗೆ ಆಶ್ರಯ ಒದಗಿಸಿದೆ. ಅದರಲ್ಲೂ ವಿಶೇಷವಾಗಿ ಆಗುಂಬೆಯ ಮಳೆಕಾಡು ಅಪಾರವಾದ ಪ್ರಕೃತಿ ಸೊಬಗಿನಿಂದ ಕೂಡಿದೆ.

ಚಿತ್ರಕೃಪೆ: Karunakar Rayker

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಇದು ಆಗುಂಬೆಯಲ್ಲಿರುವ ಮಳೆಕಾಡು ಸಂಶೋಧನಾ ಸಂಸ್ಥೆ. ಆಗುಂಬೆ ಮಳೆಕಾಡು ವಾರ್ಷಿಕವಾಗಿ 7000 ಮಿ.ಮೀ ಗಿಂತಲೂ ಹೆಚ್ಚಿನ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಇಲ್ಲಿ ಮುಖ್ಯವಾಗಿ ಹಾವುಗಳು ಅದರಲ್ಲೂ ವಿಶೇಷವಾಗಿ ಕಿಂಗ್ ಕೋಬ್ರಾ ಹಾವುಗಳನ್ನು ಕಾಣಬಗುದು.

ಚಿತ್ರಕೃಪೆ: Vaikoovery

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಆಗುಂಬೆ ಮಳೆಕಾಡಿನಲ್ಲಿ ಕಂಡುಬರುವ ಕಿಂಗ್ ಕೋಬ್ರಾ ಎಂಬ ವಿಷ ಸರ್ಪ. ಸುಮಾರು 15 ರಿಂದ 18 ಅಡಿಗಳಷ್ಟು ಉದ್ದವಾಗಿ ಬೆಳೆಯುವ ಈ ವಿಶಿಷ್ಟ ಸರ್ಪಗಳು ತಮ್ಮ ಮುಖ್ಯ ಆಹಾರವಾಗಿ ಇತರೆ ಸರ್ಪಗಳನ್ನು ತಿಂದು/ನುಂಗಿ ಬದುಕುತ್ತವೆ.

ಚಿತ್ರಕೃಪೆ: Michael Allen Smith

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಆಗುಂಬೆ ಮಳೆಕಾಡಿನಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಸಿರು ಬಣ್ಣದ ಆಕರ್ಷಕ ವೈನ್ ಸ್ನೇಕ್.

ಚಿತ್ರಕೃಪೆ: Shaunak Modi

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಆಗುಂಬೆ ಅಭಯಾರಣ್ಯವು ಟ್ರೆಕ್ಕಿಂಗ್ ಚಟುವಟಿಕೆಗೂ ಸಹ ಪ್ರಸಿದ್ಧವಾಗಿದೆ. ಬೆಂಗಳೂರು ಹಾಗೂ ಇತರೆ ರಾಜ್ಯಗಳ ಮಹಾನಗರಗಳಿಂದ ಸಾಕಷ್ಟು ಯುವ ಚಾರಣಿಗರು ಈ ಪ್ರದೇಶಕ್ಕೆ ಭೇಟಿ ನೀಡುತ್ತಿರುತ್ತಾರೆ.

ಚಿತ್ರಕೃಪೆ: Harsha K R

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಕರ್ನಾಟಕದ ಹೊರತಾಗಿ ಈ ರೀತಿಯ ಕಾಡುಗಳು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡು ಬರುತ್ತವೆ. ಮೊದಲೆ ಅಂಡಮಾನ್ ನಿಕೋಬಾರ್ ದ್ವೀಪಗಳು ಪ್ರಸಿದ್ಧ ಪ್ರವಾಸಿ ಸ್ಥಳಗಳಾಗಿವೆ, ಅಂತಹುದರಲ್ಲಿ ಮಳೆಕಾಡುಗಳ ಉಪಸ್ಥಿತಿಯು ಇದನ್ನು ಮತ್ತಷ್ಟು ಆಕರ್ಷಕ ತಾಣವನ್ನಾಗಿಸಿದೆ. ಬಾರಾಟಾಂಗ್ ನಲ್ಲಿ ಬೋಟಿಂಗ್.

ಚಿತ್ರಕೃಪೆ: Ankur P

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಅಂಡಮಾನ್ ದ್ವೀಪಗಳಲ್ಲಿ ಕಂಡುಬರುವ ಮಳೆಕಾಡು ಅದರಲ್ಲೂ ವಿಶೇಷವಗಿ ಬೆಳೆದಿರುವ ಮ್ಯಾಂಗ್ರೋವ್ ಅರಣ್ಯ.

ಚಿತ್ರಕೃಪೆ: Ankur P

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಅಂಡಮಾನ್ ನ ಮ್ಯಾಂಗ್ರೋವ್ ಕಾಡುಗಳ ಮಧ್ಯದಲ್ಲೊಂದು ರಮಣೀಯವಾದ ಸುತ್ತು.

ಚಿತ್ರಕೃಪೆ: Ankur P

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಮಳೆಕಾಡು ಇರುವ ಭಾರತದ ಕೆಲವು ಪ್ರದೇಶಗಳಲ್ಲಿ ಒಂದಾಗಿದೆ ಮಣಿಪುರ. ಈ ರಾಜ್ಯದ ತಮೆಂಗ್ಲಾಂಗ್ ಪ್ರದೇಶವು ನಿತ್ಯ ಹರಿದ್ವರ್ಣದ ಕಾಡುಗಳಿಂದ ಭೂಷಿತವಾಗಿದ್ದು ಅದ್ಭುತವಾದ ಪ್ರವಾಸಿ ಆಕರ್ಷಣೆಯಾಗಿದೆ. ಕಾಡಿನಲ್ಲಿರುವ ಬರಾಕ್ ಜಲಪಾತ.

ಚಿತ್ರಕೃಪೆ: Dangmei

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಭಾರತದ ಅಸ್ಸಾಂ ರಾಜ್ಯವೂ ಸಹ ಮಳೆಕಾಡುಗಳಿಗೆ ಹೆಸರುವಾಸಿಯಾಗಿದೆ. ಅಸ್ಸಾಂನಲ್ಲಿರುವ ದಿಬ್ರು-ಸೈಖೋವಾ ರಾಷ್ಟ್ರೀಯ ಉದ್ಯಾನ.

ಚಿತ್ರಕೃಪೆ: Rubul Deka

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಅಸ್ಸಾಮಿನ ಚಹಾ ತೋಟದ ಹಿನ್ನಿಲೆಯಲ್ಲಿ ಶೋಭಿಸುತ್ತಿರುವ ಮಳೆಕಾಡು.

ಚಿತ್ರಕೃಪೆ: Pankaj Kaushal

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಅಸ್ಸಾಮಿನ ಕಾಜಿರಂಗಾ ರಾಷ್ಟ್ರೀಯ ಉದ್ಯಾನ.

ಚಿತ್ರಕೃಪೆ: Pankaj Kaushal

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಅಸ್ಸಾಮಿನ ಮಳೆಕಾಡಿನ ಪ್ರದೇಶದಲ್ಲೊಂದು ಸುತ್ತು.

ಚಿತ್ರಕೃಪೆ: Pankaj Kaushal

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಮಳೆಕಾಡುಗಳಲ್ಲಿ ಮಾತ್ರವೆ ಕಂಡುಬರುವ ವಿಶಿಷ್ಟವಾದ ಚಿಟ್ಟೆ. ಇದನ್ನು ಬ್ಲ್ಯೂ ಕ್ಲಿಪ್ಪರ್ ಎಂದು ಕರೆಯಲಾಗುತ್ತದೆ. ಇದು ಇತರೆ ಚಿಟ್ಟೆಗಳಂತಿಲ್ಲದೆ ವೇಗವಾಗಿ ಹಾರುತ್ತದೆ.

ಚಿತ್ರಕೃಪೆ: John

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಮೇಘಾಲಯ ರಾಜ್ಯ ಮಳೆಕಾಡುಗಳಿಗೆ ಅತಿ ಪ್ರಸಿದ್ಧವಾದ ಭೂಭಾಗವಾಗಿದೆ. ಚಿರಾಪುಂಜಿ ಹಾಗೂ ಮಾವ್ಸಿನ್ರಾಮ್ ಗಳು ಮಳೆಕಾಡುಗಳು ಹಾಗೂ ಅಲ್ಲಿರುವ ದಟ್ಟ ಹಸಿರಿನ ಪ್ರಕೃತಿ ಸೌಂದರ್ಯ ಮತ್ತುಅ ಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿದೆ.

ಚಿತ್ರಕೃಪೆ: Sharada Prasad CS

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಮೇಘಾಲಯ ರಾಜ್ಯದಲ್ಲಿರುವ ಮಳೆಕಾಡಿನ ಪರಿಸರದ ಒಂದು ಸುಂದರ ದೃಶ್ಯ.

ಚಿತ್ರಕೃಪೆ: Ashwin Kumar

ಭಾರತದ ಮಳೆಕಾಡುಗಳು:

ಭಾರತದ ಮಳೆಕಾಡುಗಳು:

ಮಳೆಕಾಡಿನಲ್ಲಿ ರೂಪಗೊಂಡಿರುವ ನೈಸರ್ಗಿಕ ಸೇತುವೆ.

ಚಿತ್ರಕೃಪೆ: Ashwin Kumar

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X