Search
  • Follow NativePlanet
Share
» »ಬೆಂಗಳೂರಿನಿಂದ ಮುಖ್ಯ ಸ್ಥಳಗಳಿಗಿರುವ ರೈಲುಗಳು

ಬೆಂಗಳೂರಿನಿಂದ ಮುಖ್ಯ ಸ್ಥಳಗಳಿಗಿರುವ ರೈಲುಗಳು

By Vijay

ದೀರ್ಘ ಪ್ರವಾಸ ಹಾಗೂ ಗುಂಪಿನೊಂದಿಗೆ ಪ್ರವಾಸ ಮಾಡುವ ಉದ್ದೇಶವಿದ್ದಲ್ಲಿ, ಎಲ್ಲರೂ ಅವಲಂಬಿತರಾಗುವುದು ಹೆಚ್ಚಾಗಿ ರೈಲುಗಳ ಮೇಲೆ. ರೈಲುಗಳೆಂದರೆ ಹಾಗೆಯೆ...ಒಂದು ರೀತಿಯ ಮನೆಯ ವಾತಾವರಣ ನಿರ್ಮಿಸಿ ಎಲ್ಲರೂ ಕುಳಿತು, ಬೆರೆತು ಹರಟಿಸಲು ಅನುಕೂಲಕರವಾದ ವಾತಾವರಣ ನಿರ್ಮಿಸಿ ಬಿಡುತ್ತದೆ.

ಎಕ್ಸ್ಪೆಡಿಯಾದಲ್ಲಿ ಫ್ಲೈಟ್ ಬುಕ್ ಮಾಡಿ 50% ಕಡಿತ ಪಡೆಯಿರಿ, ತ್ವರೆ ಮಾಡಿ

ಅಲ್ಲದೆ ದೀರ್ಘ ಪ್ರಯಾಣ ಅದರಲ್ಲೂ ವಿಶೇಷವಾಗಿ ಕಡಿಮೆ ಅಥವಾ ಮೌಲ್ಯಯುತ ದರದಲ್ಲಿ ಪ್ರಯಾಣಿಸಲು ರೈಲುಗಳು ಯೋಗ್ಯ ಸಂಚಾರಿ ಮೂಲಗಳಾಗಿವೆ. ಇದನ್ನು ಪುಷ್ಟಿಕರಿಸಲು ಒಂದೊಮ್ಮೆ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಸಾಕು. ಅಲ್ಲಿರುವ ಉದ್ದನೆಯ ಸಾಲಿನಿಂದಲೆ ರೈಲು ಪ್ರಯಾಣದ ಮಹತ್ವ ತಿಳಿದುಬಿಡುತ್ತದೆ.

ವಿಶೇಷ ಲೇಖನ : ಭಾರತದ ಅತಿ ವೇಗದ ರೈಲುಗಳು

ಕರ್ನಾಟಕದ ರಾಜಧಾನಿ ಹಾಗೂ ಭಾರತದ ಸಿಲಿಕಾನ್ ಕಣಿವೆ ಎಂಬ ಹೆಸರು ಪಡೆದಿರುವ ಬೆಂಗಳೂರಿಗೆ ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದು ಹೋಗುತ್ತಿರುತ್ತಾರೆ. ಕೆಲವರು ಪ್ರವಾಸಕ್ಕಾಗಿ ಸಂಚರಿಸುತ್ತಿದ್ದರೆ ಇನ್ನೂ ಕೆಲವರು ವಿವಿಧ ಕಾರ್ಯಕ್ರಮಗಳಿಗೋ ಇಲ್ಲವೆ ತಮ್ಮ ಕೆಲಸ ಕಾರ್ಯಗಳ ಪ್ರಯುಕ್ತಲೊ ಚಲಿಸುತ್ತಿರುತ್ತಾರೆ.

ವಿಶೇಷ ಲೇಖನ : ವಿಶಿಷ್ಟ ಸಂತಸ ನೀಡುವ ರೈಲು ಮಾರ್ಗಗಳು

ಒಮ್ಮೊಮ್ಮೆ ನೀವು ಯಾವುದೋ ಕೆಲಸದ ಪ್ರಯುಕ್ತ ಇನ್ನೇಲ್ಲೊ ಭೇಟಿ ನೀಡಬೇಕಾದ ಸಂದರ್ಭ ಬಂದಾಗ ಅಲ್ಲಿಗೆ ಹೋಗುವ ರೈಲುಗಳ ಕುರಿತು ತಿಳಿಯಲು ಕೊಂಚ ತಡುಕಾಡಬೇಕಾದ ಸಂದರ್ಭ ಒದಗಿಯೂ ಬರಬಹುದು. ಈ ಒಂದು ದೃಷ್ಟಿಯಿಂದ ಪ್ರಸ್ತುತ ಲೇಖನವು ಬೆಂಗಳೂರಿನಿಂದ ಕೆಲ ಪ್ರಮುಖ ಸ್ಥಳಗಳಿಗೆ (ಕರ್ನಾಟಕ ಒಳಗೊಂಡಂತೆ) ಯಾವ ಯಾವ ರೈಲುಗಳು ಲಭ್ಯವಿದೆ ಎಂಬುದರ ಕುರಿತು ಚುಟುಕಾಗಿ ತಿಳಿಯಪಡಿಸುತ್ತದೆ.

ವಿಶೇಷ ಲೇಖನ : ಅನನ್ಯ ನೀಲ್ಗಿರಿ ಮೌಂಟೆನ್ ರೈಲು

ಸೂಚನೆ : ಇಲ್ಲಿ ತಿಳಿಯಪಡಿಸಲಾಗಿರುವ ರೈಲುಗಳ ಮಾಹಿತಿ ಭಾರತೀಯ ರೈಲಿನ ಅಧಿಕೃತ ವೆಬ್ ತಾಣದಿಂದ ಪಡೆಯಲಾಗಿದೆ. ಒಂದು ವೇಳೆ ರೈಲು ಸಂಖ್ಯೆ ಹಾಗೂ ಸಮಯ ಬದಲಾದ ಸಂದರ್ಭದಲ್ಲಿ, ಹೆಚ್ಚಿನ ವಿವಿರಗಳಿಗೆ ಭೇಟಿ ನೀಡಿ ಭಾರತೀಯ ರೈಲು

ಬೆಂಗಳೂರಿನಿಂದ ಮುಖ್ಯ ರೈಲುಗಳು:

ಬೆಂಗಳೂರಿನಿಂದ ಮುಖ್ಯ ರೈಲುಗಳು:

ಮೈಸೂರು : ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆ ಪಡೆದ ಮೈಸೂರು ನಗರವು ಬೆಂಗಳೂರಿಗೆ ಹತ್ತಿರದಲ್ಲಿರುವ ಕರ್ನಾಟಕದ ಪ್ರಮುಖ ನಗರವಾಗಿದೆ. ದಿನ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಬೆಂಗಳೂರು ಹಾಗೂ ಮೈಸೂರಿನ ಮಧ್ಯೆ ಜನರು ಸಂಚರಿಸುತ್ತಾರೆ. ಬೆಂಗಳೂರಿನಿಂದ ಮೈಸೂರಿಗಿರುವ ರೈಲುಗಳು : ಕಾವೇರಿ ಎಕ್ಸ್ ಪ್ರೆಸ್ (16021) ಬೆಳಿಗ್ಗೆ 4 ಗಂಟೆಗೆ, ಮೈಸೂರು ಎಕ್ಸ್ ಪ್ರೆಸ್ (16231) ಬೆಳಿಗ್ಗೆ 6 ಗಂಟೆಗೆ, ಹಂಪಿ ಎಕ್ಸ್ ಪ್ರೆಸ್ (16591) ಬೆಳಿಗ್ಗೆ 6.30 ಗಂಟೆಗೆ, ಮೈಸೂರು ಎಕ್ಸ್ ಪ್ರೆಸ್ (16235) ಬೆಳಿಗ್ಗೆ 7 ಗಂಟೆಗೆ, ತಿರುಪತಿ ಚಾಮರಾಜನಗರ ಪ್ಯಾಸೆಂಜರ್ (56214) ಬೆಳಿಗ್ಗೆ 7.30 ಗಂಟೆಗೆ, ಗೋಲಗುಂಬಜ್ ಎಕ್ಸ್ ಪ್ರೆಸ್ (16536) ಬೆಳಿಗ್ಗೆ 8.15 ಗಂಟೆಗೆ, ರಾಜ್ಯರಾಣಿ ಎಕ್ಸ್ ಪ್ರೆಸ್ (16558) ಬೆಳಿಗ್ಗೆ 10.30 ಗಂಟೆಗೆ, ಬಸವ ಎಕ್ಸ್ ಪ್ರೆಸ್ (17308) ಬೆಳಿಗ್ಗೆ 11.15 ಗಂಟೆಗೆ, ಜೈಪುರ್- ಮೈಸೂರು ಎಕ್ಸ್ ಪ್ರೆಸ್ (12976) ಮಧ್ಯಾಹ್ನ 1 ಗಂಟೆಗೆ, ಟಿಪ್ಪು ಎಕ್ಸ್ ಪ್ರೆಸ್ (12614) ಮಧ್ಯಾಹ್ನ 3 ಗಂಟೆಗೆ, ಚಾಮುಂಡಿ ಎಕ್ಸ್ ಪ್ರೆಸ್ (16216) ಸಂಜೆ 6.15 ಗಂಟೆಗೆ, ಕಣ್ಣೂರು ಎಕ್ಸ್ ಪ್ರೆಸ್ (16517) ರಾತ್ರಿ 8 ಗಂಟೆಗೆ, ಕಾರವಾರ ಎಕ್ಸ್ ಪ್ರೆಸ್ (16523) ರಾತ್ರಿ 8 ಗಂಟೆಗೆ, ಮೈಸೂರು ಪ್ಯಾಸೆಂಜರ್ (56264) ರಾತ್ರಿ 11.55 ಗಂಟೆಗೆ. ಮೈಸೂರು ಪ್ರವಾಸಿ ಆಕರ್ಷಣೆಗಳು

ಚಿತ್ರಕೃಪೆ: Sanjay Acharya

ಬೆಂಗಳೂರಿನಿಂದ ಮುಖ್ಯ ರೈಲುಗಳು:

ಬೆಂಗಳೂರಿನಿಂದ ಮುಖ್ಯ ರೈಲುಗಳು:

ಮಂಗಳೂರು : ಬೆಂಗಳೂರಿನಿಂದ ದಿನ ನಿತ್ಯ ಸಾಕಷ್ಟು ಜನರು ಪ್ರಯಾಣಿಸುವ ಕರ್ನಾಟಕದ ಮತ್ತೊಂದು ನಗರ ಮಂಗಳೂರು. ಮಂಗಳೂರಿಗಿರುವ ರೈಲುಗಳೆಂದರೆ ಯಶವಂತಪುರ-ಕಾರವಾರ ಎಕ್ಸ್ ಪ್ರೆಸ್ (16515) ಬೆಳಿಗ್ಗೆ 6.30 ಗಂಟೆಗೆ, ಕಣ್ಣೂರು ಎಕ್ಸ್ ಪ್ರೆಸ್ (16517) ರಾತ್ರಿ 8 ಗಂಟೆಗೆ, ಕಾರವಾರ ಎಕ್ಸ್ ಪ್ರೆಸ್ (16523) ರಾತ್ರಿ 8 ಗಂಟೆಗೆ. ಮಂಗಳೂರಿನ ಸುಂದರ ಆಕರ್ಷಣೆಗಳು.

ಚಿತ್ರಕೃಪೆ: Nithin Bolar k

ಬೆಂಗಳೂರಿನಿಂದ ಮುಖ್ಯ ರೈಲುಗಳು:

ಬೆಂಗಳೂರಿನಿಂದ ಮುಖ್ಯ ರೈಲುಗಳು:

ಹುಬ್ಬಳ್ಳಿ : "ಚೋಟಾ ಮುಂಬೈ" ಎಂದು ಖ್ಯಾತಿಗಳಿಸಿರುವ ಹಾಗೂ ಉತ್ತರ ಕರ್ನಾಟಕ ಭಾಗದ ಹೆಬ್ಬಾಗಿಲಾದ ನಗರ ಹುಬ್ಬಳ್ಳಿ. ಉತ್ತರ ಕರ್ನಾಟಕ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಹುಬ್ಬಳ್ಳಿಗೆ ಪ್ರತಿ ನಿತ್ಯ ನೂರಾರು ಸಂಖ್ಯೆಯಲ್ಲಿ ಜನರು ಬೆಂಗಳೂರಿನಿಂದ ಹೊರಡುತ್ತಿರುತ್ತಾರೆ. ಹುಬ್ಬಳ್ಳಿಗಿರುವ ರೈಲುಗಳೆಂದರೆ, ಚಾಲುಕ್ಯ ಎಕ್ಸ್ ಪ್ರೆಸ್ (11006) ಬೆಳಿಗ್ಗೆ 4.45 ಗಂಟೆಗೆ, ಜನಶತಾಬ್ದಿ ಎಕ್ಸ್ ಪ್ರೆಸ್ (12079) ಬೆಳಿಗ್ಗೆ 6 ಗಂಟೆಗೆ, ವೆಲಂಕನಿ ವಾಸ್ಕೊ ಡ ಗಾಮಾ ಎಕ್ಸ್ ಪ್ರೆಸ್ (17316) ಮಧ್ಯಾಹ್ನ 12 ಗಂಟೆಗೆ (ಬುಧವಾರ ಮಾತ್ರ), ಇಂಟರ್ ಸಿಟಿ ಎಕ್ಸ್ ಪ್ರೆಸ್ (12725) ಮಧ್ಯಾಹ್ನ 1 ಗಂಟೆಗೆ, ಯಶವಂತಪುರ ಸಂಪರ್ಕಕ್ರಾಂತಿ ಎಕ್ಸ್ ಪ್ರೆಸ್ (22685) ಮಧ್ಯಾಹ್ನ 2.50 ಗಂಟೆಗೆ, ಗೋಲಗುಂಬಜ್ ಎಕ್ಸ್ ಪ್ರೆಸ್ (16535) ರಾತ್ರಿ 6.45 ಗಂಟೆಗೆ, ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ (16589) ರಾತ್ರಿ 9.15 ಗಂಟೆಗೆ, ಜೋಧಪುರ್ ಎಕ್ಸ್ ಪ್ರೆಸ್ (16508) ರಾತ್ರಿ 9.50 ಗಂಟೆಗೆ, ಹಂಪಿ ಎಕ್ಸ್ ಪ್ರೆಸ್ (16592) ರಾತ್ರಿ 10 ಗಂಟೆಗೆ, ಹೊಸಪೇಟೆ ಪ್ಯಾಸೆಂಜರ್ (56909) ರಾತ್ರಿ 10.15 ಗಂಟೆಗೆ. ಹುಬ್ಬಳ್ಳಿ ಆಕರ್ಷಣೆಗಳು

ಚಿತ್ರಕೃಪೆ: Goudar

ಬೆಂಗಳೂರಿನಿಂದ ಮುಖ್ಯ ರೈಲುಗಳು:

ಬೆಂಗಳೂರಿನಿಂದ ಮುಖ್ಯ ರೈಲುಗಳು:

ವಿಜಯಪುರ (ಬಿಜಾಪುರ) : ಆದಿಲ್ ಶಾಹಿ ಸಂಸ್ಥಾನದ ಅತ್ಯದ್ಭುತ ಸ್ಮಾರಕಗಳನ್ನು ಒಳಗೊಂಡ, ಐತಿಹಾಸಿಕವಾಗಿ ಪ್ರಮುಖವಾಗಿರುವ, ಕರ್ನಾಟಕದ ಐದು ನದಿಗಳು ಹರಿದಿರುವ ಜಿಲ್ಲೆ ಎಂಬ ಖ್ಯಾತಿಗೆ ಪಾತ್ರವಾಗಿರುವ ವಿಜಯಪುರವು ಪ್ರವಾಸಿ ದೃಷ್ಟಿಯಿಂದ ಮಹತ್ವ ಪಡೆದ ಪಟ್ಟಣವಾಗಿದೆ. ಇಲ್ಲಿರುವ ಗೋಲ ಗುಮ್ಮಟವು ಒಂದು ಅದ್ಭುತ ರಚನೆಯಾಗಿದ್ದು, ಇದನ್ನು ನೋಡಲು ವಿದೇಶಗಳಿಂದಲೂ ಸಹ ಪ್ರವಾಸಿಗರು ಬರುತ್ತಾರೆ. ಬಿಜಾಪುರಿಗಿರುವ ರೈಲುಗಳು: ಬಸವ ಎಕ್ಸ್ ಪ್ರೆಸ್ (17307) ಸಂಜೆ 5ಗಂಟೆಗೆ, ಗೋಲಗುಂಬಜ್ ಎಕ್ಸ್ ಪ್ರೆಸ್ (16535) ರಾತ್ರಿ 6.45 ಗಂಟೆಗೆ. ಬಿಸಿ ನಗರದ ತಂಪಾದ ಆಕರ್ಷಣೆಗಳು

ಚಿತ್ರಕೃಪೆ: Amith

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಬೆಳಗಾವಿ : ಕರ್ನಾಟಕದ ಎರಡನೆಯ ರಾಜಧಾನಿ ಎಂದೆ ಬಿಂಬಿತವಾಗಿರುವ, ಉತ್ತರ ಕರ್ನಾಟಕ ಭಾಗದ ಮಲೆನಾಡು ಎಂದು ಕರೆಯಲ್ಪಡುವ ಕುಂದಾ ನಗರಿ ಬೆಳಗಾವಿಯು ಒಂದು ಆಸಕ್ತಿಕರ ಪ್ರವಾಸಿ ನೆಲೆವಾಗಿದೆ. ಮಹಾರಾಷ್ಟ್ರ ಹಾಗೂ ಗೋವಾರಾಜ್ಯಗಳಿಗೆ ಸಾಮಿಪ್ಯ ಹೊಂದಿರುವುದರಿಂದ ಅಲ್ಲಿನ ಅನೇಕ ಪ್ರವಾಸಿ ಆಕರ್ಷಣೆಗಳು ಬೆಳಗಾವಿಗೆ ಹತ್ತಿರದಲ್ಲಿವೆ. ಪ್ರವಾಸಿ ದೃಷ್ಟಿಯಿಂದಲೂ ಸಹ ಬೆಳಗಾವಿ ಮಹತ್ವ ಪಡೆದಿದೆ. ಹಿಂದೆ ವೇಣುಗ್ರಾಮ ಎಂದು ಕರೆಯಲ್ಪಡುತ್ತಿದ್ದ ಈ ನಗರಕ್ಕೆ ಬೆಂಗಳೂರಿನಿಂದಿರುವ ರೈಲುಗಳು: ಚಾಲುಕ್ಯ ಎಕ್ಸ್ ಪ್ರೆಸ್ (11006) ನಸುಕಿನ 4.45 ಗಂಟೆಗೆ, ಸಂಪರ್ಕಕ್ರಾಂತಿ ಎಕ್ಸ್ ಪ್ರೆಸ್ (12629) ಮಧ್ಯಾಹ್ನ 1.50 ಗಂಟೆಗೆ, ಯಶವಂತಪುರ-ಮಿರಜ್ ಎಕ್ಸ್ ಪ್ರೆಸ್(06517) ರಾತ್ರಿ 8.40 ಗಂಟೆಗೆ(ಯಾವಾಗಲೂ ಇರುವುದಿಲ್ಲ, ಒಂದೊಮ್ಮೆ ರೈಲ್ವೆ ವೆಬ್ ತಾಣದಲ್ಲಿ ದೃಢಪಡಿಸಿಕೊಳ್ಳಿ), ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ (16589) ರಾತ್ರಿ 9.15 ಗಂಟೆಗೆ, ಅಜ್ಮೇರ್ ಎಕ್ಸ್ ಪ್ರೆಸ್ (16210) ರಾತ್ರಿ 9.50 ಗಂಟೆಗೆ. ಬೆಳಗಾವಿ ಜಿಲ್ಲೆಯ ಅಮೋಘ ಪ್ರವಾಸ

ಚಿತ್ರಕೃಪೆ: Mahant025

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಕಲಬುರಗಿ : ಹೈದರಾಬಾದ್ ಕರ್ನಾಟಕದ ಪ್ರಮುಖ ಜಿಲ್ಲೆಯಾದ ಕಲಬುರಗಿ (ಗುಲಬರಗಾ) ಒಂದು ಐತಿಹಾಸಿಕ ಪ್ರಸಿದ್ಧ ಪಟ್ಟಣವಾಗಿದೆ, ರಾಷ್ಟ್ರಕೂಟರಿಂದ ಹಿಡಿದು ಬಹುಮನಿ ಸಾಮ್ರಾಜ್ಯದವರೆಗೆ ಹಲವಾರು ಸಾಮ್ರಾಜ್ಯಗಳನ್ನು ಈ ಜಿಲ್ಲೆ ಕಂಡಿದೆ. ಕಲಬುರಗಿಗಿರುವ ರೈಲುಗಳು: ಮೈಸೂರು-ವಾರಣಾಸಿ ವಾರಕ್ಕೊಮ್ಮಿರುವ ವಿಶೇಷ ರೈಲು (16229) ಬೆಳಿಗ್ಗೆ10 ಗಂಟೆಗೆ, ಯಶವಂತಪುರ-ಜೈಪುರ ಪ್ರಿಮೀಯಮ್ (22695) ಬೆಳಿಗ್ಗೆ 11.30 ಗಂಟೆಗೆ, ಲೋಕಮಾನ್ಯ ಟಿಟಿ ಎಕ್ಸ್ ಪ್ರೆಸ್ (11014) ಮಧ್ಯಾಹ್ನ 4 ಗಂಟೆಗೆ, ಬಸವ ಎಕ್ಸ್ ಪ್ರೆಸ್ (17307) ಸಂಜೆ 5 ಗಂಟೆಗೆ, ಕರ್ನಾಟಕಾ ಎಕ್ಸ್ ಪ್ರೆಸ್ (12627) ಸಂಜೆ 7.20 ಗಂಟೆಗೆ, ಉದ್ಯಾನ ಎಕ್ಸ್ ಪ್ರೆಸ್ (11302) ರಾತ್ರಿ 8.30 ಗಂಟೆಗೆ, ಸೋಲಾಪುರ ಎಕ್ಸ್ ಪ್ರೆಸ್ (22134) ರಾತ್ರಿ 8.50 ಗಂಟೆಗೆ.

ಚಿತ್ರಕೃಪೆ: SridharSaraf

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಂಬೈ : ಭಾರತದ ಆರ್ಥಿಕ ರಾಜಧಾನಿ ಎಂದು ಕರೆಯಲ್ಪಡುವ ಮುಂಬೈ ಎಂದಿಗೂ ನಿದ್ರಿಸಲಾರದ ನಗರ ಎಂತಲೆ ಹೇಳಬಹುದು. ನಿಜ ಹೇಳಬೇಕೆಂದರೆ ಮುಂಬೈ ಏಳುವುದೇ ರಾತ್ರಿಯಲ್ಲಿ ಎಂದು ಹೇಳಲಾಗುತ್ತದೆ. ದೇಶದ ಮೂಲೆ ಮೂಲೆಗಳಿಂದ ಮುಂಬೈಗೆ ಬದುಕು ಅರಸುತ್ತ ದಿನ ನಿತ್ಯ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಬರುತ್ತಾರೆ. ಇಲ್ಲಿರುವ ಪ್ರವಾಸಿ ಆಕರ್ಷಣೆಗಳೂ ಸಹ ಅಪಾರ. ಮುಂಬೈಗೆ ತೆರಳಲು ಬೆಂಗಳೂರಿನಿಂದಿರುವ ರೈಲುಗಳು: ಚಾಲುಕ್ಯ ಎಕ್ಸ್ ಪ್ರೆಸ್ (11006) ನಸುಕಿನ 4.45 ಗಂಟೆಗೆ, ಲೋಕಮಾನ್ಯ ಟಿಟಿ ಎಕ್ಸ್ ಪ್ರೆಸ್ (11014) ಮಧ್ಯಾಹ್ನ 4 ಗಂಟೆಗೆ, ಉದ್ಯಾನ ಎಕ್ಸ್ ಪ್ರೆಸ್ (11302) ರಾತ್ರಿ 8.30 ಗಂಟೆಗೆ, ಅಜ್ಮೇರ್ ಎಕ್ಸ್ ಪ್ರೆಸ್ (16210) ರಾತ್ರಿ 9.50 ಗಂಟೆಗೆ. ಮುಂಬೈ ನಗರದ ಮಾಯಾ ಜೀವನ

ಚಿತ್ರಕೃಪೆ: Jeet221990

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಪುಣೆ : ಮುಂಬೈಗೆ ತೆರಳುವ ಎಲ್ಲ ರೈಲುಗಳು ಪುಣೆ ನಗರದ ಮುಲಕವೆ ಹಾದು ಹೋಗುತ್ತವೆ. ಆದ್ದರಿಂದ ಪುಣೆಗೆ ಹೊರಡುವ ರೈಲುಗಳೂ ಮುಂಬೈಗೆ ಹೊರಡುವ ರೈಲುಗಳೇ ಆಗಿರುತ್ತವೆ. ಪುಣ್ಯ ನಗರಿ ಪುಣೆಯ ಧಾರ್ಮಿಕ ಆಕರ್ಷಣೆಗಳು

ಚಿತ್ರಕೃಪೆ: Astroamey

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಹೈದರಾಬಾದ್ : ದಕ್ಷಿಣ ಭಾರತದ ಮತ್ತೊಂದು ಪ್ರಮುಖ ಮಹಾನಗರವಾದ ಹಾಗೂ ನೂತನ ತೆಲಂಗಾಣ ರಾಜ್ಯದ ರಾಜಧಾನಿ ಪಟ್ಟಣವಾದ ಹೈದರಾಬಾದಿಗೆ ಬೆಂಗಳೂರಿನಿಂದಿರುವ ರೈಲುಗಳು: ಯಶವಂತಪುರ-ಗೋರಕಪುರ್ ಎಕ್ಸ್ ಪ್ರೆಸ್ (15016) ಬೆಳಿಗ್ಗೆ 7.40 ಗಂಟೆಗೆ, ಜೈಪುರ ಎಕ್ಸ್ ಪ್ರೆಸ್ (12975) ಅಪರಾಹ್ನ 1 ಗಂಟೆಗೆ, ಕಾಚಿಗುಡಾ ಎಕ್ಸ್ ಪ್ರೆಸ್ (12786) ಸಂಜೆ 6.20 ಗಂಟೆಗೆ, ರಾಜಧಾನಿ ಎಕ್ಸ್ ಪ್ರೆಸ್ (22691) ರಾತ್ರಿ 8.20 ಗಂಟೆಗೆ.

ಚಿತ್ರಕೃಪೆ: Poreddy Sagar

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ತಿರುಪತಿ : ದಕ್ಷಿಣ ಭಾರತದ ಅತಿ ದೊಡ್ಡ ಯಾತ್ರಾ ಕೇಂದ್ರವಾದ ತಿರುಪತಿಗೆ ಭಾರತದೆಲ್ಲೆಡೆಯಿಂದ ಭಕ್ತಾದಿಗಳು ನಿತ್ಯ ಭೇಟಿ ನೀಡುತ್ತಾರೆ. ಬೆಂಗಳೂರಿನಿಂದಲೂ ಸಹ ಸಾಕಷ್ಟು ಜನ ತಿರುಪತಿಗೆ ನಿತ್ಯ ಭೇಟಿ ನೀಡುತ್ತಲೆ ಇರುತ್ತಾರೆ. ತಿರುಪತಿಗಿರುವ ರೈಲುಗಳು: ಶೇಷಾದ್ರಿ ಎಕ್ಸ್ ಪ್ರೆಸ್ (17209) ಬೆಳಿಗ್ಗೆ 11 ಗಂಟೆಗೆ, ಯಶವಂತಪುರ-ಹೌರಾ ಎಕ್ಸ್ ಪ್ರೆಸ್ (12864) ರಾತ್ರಿ 7.35 ಗಂಟೆಗೆ, ತಿರುಪತಿ ಪ್ಯಾಸೆಂಜರ್ ರೈಲು (56213) ರಾತ್ರಿ 8.45 ಗಂಟೆಗೆ. ತಿರುಪತಿ ತಿರುಮಲ ದರುಶನ /travel-guide/tirumala-tirupathi-the-lord-seven-hills-000115.html

ಚಿತ್ರಕೃಪೆ: Raji.srinivas

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ವಿಜಯವಾಡಾ : ಬೆಂಗಳೂರಿನಿಂದ ವಿಜಯವಾಡಾಗಿರುವ ರೈಲುಗಳು: ಮುಜಫರ್ಪುರ್ ಎಕ್ಸ್ ಪ್ರೆಸ್ (15227) ಮಧ್ಯರಾತ್ರಿ 12.40 ಗಂಟೆಗೆ, ವಿಜಯವಾಡಾ ಪ್ಯಾಸೆಂಜರ್ (56503) ಬೆಳಿಗ್ಗೆ 7.40, ಸಂಘಮಿತ್ರಾ ಎಕ್ಸ್ ಪ್ರೆಸ್ (12295) ಬೆಳಿಗ್ಗೆ 9 ಗಂಟೆಗೆ, ಶೇಷಾದ್ರಿ ಎಕ್ಸ್ ಪ್ರೆಸ್, ಪ್ರಶಾಂತಿ ಎಕ್ಸ್ ಪ್ರೆಸ್ (18464) ಮಧ್ಯಾಹ್ನ 2 ಗಂಟೆಗೆ, ಕೊಂಡಾವೀಡು ಎಕ್ಸ್ ಪ್ರೆಸ್ (17212) ಮಧ್ಯಾಹ್ನ 2.30 ಗಂಟೆಗೆ, ಯಶವಂತಪುರ-ಹೌರಾ ಎಕ್ಸ್ ಪ್ರೆಸ್, ಗೌಹಾಟಿ ಎಕ್ಸ್ ಪ್ರೆಸ್ (12509) ರಾತ್ರಿ 11.30 ಗಂಟೆಗೆ. ವಿಜಯವಾಡಾದ ಕೃಷ್ಣಾ ನದಿ.

ಚಿತ್ರಕೃಪೆ: Ashwin Kumar

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ವೈಜಾಗ್ : ವೈಜಾಗ್ ಅಥವಾ ವಿಶಾಖಾಪಟ್ಟಣಂ ಆಂಧ್ರ ಪ್ರದೇಶ ರಾಜ್ಯದ ಪ್ರಮುಖ ಬಂದರು ಪಟ್ಟಣವಾಗಿದೆ. ಬಂಗಾಳ ಕೊಲ್ಲಿಗೆ ಹೊಂದಿಕೊಂಡಂತಿರುವ ಈ ನಗರವು ಭೇಟಿ ನೀಡುವವರಿಗೆ ವಿಶಿಷ್ಟ ಪ್ರವಾಸಿ ಆಕರ್ಷಣೆಗಳನ್ನು ಉಣಬಡಿಸುತ್ತದೆ. ವೈಜಾಗಿಗಿರುವ ರೈಲುಗಳು: ಮುಜಫರ್ಪುರ್ ಎಕ್ಸ್ ಪ್ರೆಸ್ (15227) ಮಧ್ಯರಾತ್ರಿ 12.40 ಗಂಟೆಗೆ, ಪ್ರಶಾಂತಿ ಎಕ್ಸ್ ಪ್ರೆಸ್ (18464) ಮಧ್ಯಾಹ್ನ 2 ಗಂಟೆಗೆ, ಯಶವಂತಪುರ-ಹೌರಾ ಎಕ್ಸ್ ಪ್ರೆಸ್ (12864) ರಾತ್ರಿ 7.35 ಗಂಟೆಗೆ, ಗೌಹಾಟಿ ಎಕ್ಸ್ ಪ್ರೆಸ್ (12509) ರಾತ್ರಿ 11.30 ಗಂಟೆಗೆ. ವಿಶಾಖಾಪಟ್ಟಣದ ವಿಶಿಷ್ಟ ಆಕರ್ಷಣೆಗಳು

ಚಿತ್ರಕೃಪೆ: vijay chennupati

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಚೆನ್ನೈ : ಸಾಕಷ್ಟು ಚಟುವಟಿಕೆಗಳಿಂದ ಕೂಡಿರುವ ದಕ್ಷಿಣ ಭಾರತದ ಪ್ರಮುಖ ಮಹಾನಗರ ಚೆನ್ನೈ. ದಿನ ನಿತ್ಯ ಬೆಂಗಳೂರು ಹಾಗೂ ಚೆನ್ನೈ ನಗರಗಳ ಮಧ್ಯೆ ಓಡಾಡುವ ಜನಗಳ ಸಂಖ್ಯೆಯೂ ಅಪಾರ. ಚೆನ್ನೈಗಿರುವ ವಿವಿಧ ರೈಲುಗಳು : ಮುಜಫರ್ಪುರ್ ಎಕ್ಸ್ ಪ್ರೆಸ್ (15227) ಮಧ್ಯರಾತ್ರಿ 12.40 ಗಂಟೆಗೆ, ಸಂಘಮಿತ್ರಾ ಎಕ್ಸ್ ಪ್ರೆಸ್ (12295) ಬೆಳಿಗ್ಗೆ 9 ಗಂಟೆಗೆ, ಗೌಹಾಟಿ ಎಕ್ಸ್ ಪ್ರೆಸ್ (12509) ರಾತ್ರಿ 11.30 ಗಂಟೆಗೆ, ಶತಾಬ್ದಿ ಎಕ್ಸ್ ಪ್ರೆಸ್ (12028) ಬೆಳಿಗ್ಗೆ 6 ಗಂಟೆಗೆ, ಲಾಲ್ ಬಾಗ್ ಎಕ್ಸ್ ಪ್ರೆಸ್ (12608) ಬೆಳಿಗ್ಗೆ 6.30 ಗಂಟೆಗೆ, ಬೃಂದಾವನ ಎಕ್ಸ್ ಪ್ರೆಸ್ (12640) ಮಧ್ಯಾನ 3 ಗಂಟೆಗೆ, ಚೆನ್ನೈ ಎಕ್ಸ್ ಪ್ರೆಸ್ (12610) ಬೆಳಿಗ್ಗೆ 8 ಗಂಟೆಗೆ, ಡಬಲ್ ಡೆಕ್ಕರ್ (22626) ಮಧ್ಯಾನ 2.30 ಗಂಟೆಗೆ, ಚೆನ್ನೈ ಮೇಲ್ (12658) ರಾತ್ರಿ10.40 ಗಂಟೆಗೆ, ಕಾವೇರಿ ಎಕ್ಸ್ ಪ್ರೆಸ್ (16022) ರಾತ್ರಿ 11.45 ಗಂಟೆಗೆ, ಶತಾಬ್ದಿ ಎಕ್ಸ್ ಪ್ರೆಸ್ (12008) ಸಂಜೆ 4.25 ಗಂಟೆಗೆ.

ಚಿತ್ರಕೃಪೆ: getmahesh

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮದುರೈ : ತಮಿಳುನಾಡಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾಗಿ ಕಂಗೊಳಿಸುತ್ತದೆ ಮದುರೈ ನಗರ. ಸಾಕಷ್ಟು ದೇವಾಲಯಗಳಿರುವ ಈ ದೇವಾಲಯ ಪಟ್ಟಣವು ಪ್ರಮುಖವಾಗಿ ಮೀನಾಕ್ಷಿ ಅಮ್ಮನವರ ದೇವಸ್ಥಾನಕ್ಕೆ ಪ್ರಸಿದ್ಧಿ ಪಡೆದಿದೆ. ದ.ಭಾರತದಿಂದ ದಿನ ನಿತ್ಯ ಪ್ರವಾಸಿಗರು ಈ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುತ್ತಾರೆ. ಮದುರೈಗಿರುವ ರೈಲುಗಳು: ನಾಗರಕೋಯಿಲ್ ಎಕ್ಸ್ ಪ್ರೆಸ್ (ಕೆ.ಆರ್ ಪುರಂನಿಂದ) (16339) ಬೆಳಿಗ್ಗೆ 10.30 ಗಂಟೆಗೆ, ನಾಗರಕೋಯಿಲ್ ಎಕ್ಸ್ ಪ್ರೆಸ್(ಎಸ್ಬಿಸಿ)(17235) ಸಂಜೆ 5 ಗಂಟೆಗೆ, ಟ್ಯೂಟಿಕಾರಿನ್ ಎಕ್ಸ್ ಪ್ರೆಸ್(ತುತೂಕುಡಿ) (16236) ರಾತ್ರಿ 9.15 ಗಂಟೆಗೆ, ತಿರುನೇಲ್ವೆಲಿ ಎಕ್ಸ್ ಪ್ರೆಸ್ (11021) ರಾತ್ರಿ 10 ಗಂಟೆಗೆ. ಎಂದಿಗೂ ನಿದ್ರಿಸಲಾರದ ಮದುರೈ ನಗರ ಮದುರೈ ಜಂಕ್ಷನ್ ರೈಲು ನಿಲ್ದಾಣ.

ಚಿತ್ರಕೃಪೆ: Coppercholride

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಕನ್ಯಾಕುಮಾರಿ : ಭಾರತದ ದಕ್ಷಿಣ ಭಾಗದ ತುತ್ತ ತುದಿಯಲ್ಲಿರುವ ಕನ್ಯಾಕುಮಾರಿ ಒಂದು ಸುಪ್ರಸಿದ್ಧ ಧಾರ್ಮಿಕ ಯಾತ್ರಾ ಕೇಂದ್ರವಾಗಿದೆ. ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭಾರತದೆಲ್ಲೆಡೆಯಿಂದ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಕನ್ಯಾಕುಮಾರಿಗಿರುವ ರೈಲುಗಳು: ನಾಗರಕೋಯಿಲ್ ಎಕ್ಸ್ ಪ್ರೆಸ್ (ಕೆ.ಆರ್ ಪುರಂನಿಂದ) (16339) ಬೆಳಿಗ್ಗೆ 10.30 ಗಂಟೆಗೆ, ನಾಗರಕೋಯಿಲ್ ಎಕ್ಸ್ ಪ್ರೆಸ್(ಎಸ್ಬಿಸಿ)(17235) ಸಂಜೆ 5 ಗಂಟೆಗೆ, ಕನ್ಯಾಕುಮಾರಿ ಎಕ್ಸ್ ಪ್ರೆಸ್ (16526) ರಾತ್ರಿ 8 ಗಂಟೆಗೆ. ಬೆಂಗಳೂರಿನಿಂದ ಕನ್ಯಾಕುಮಾರಿಗೆ ರಸ್ತೆ ಪ್ರವಾಸ

ಚಿತ್ರಕೃಪೆ: Pranchiyettan

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ರಾಮೇಶ್ವರಂ : ರಾಮೇಶ್ವರಂ ಒಂದು ಮಹತ್ವದ ತೀರ್ಥಕ್ಷೇತ್ರವಾಗಿದ್ದು ತಮಿಳುನಾಡು ರಾಜ್ಯದಲ್ಲಿದೆ. ದ.ಭಾರತದ ಏಕೈಕ ಜ್ಯೋತಿರ್ಲಿಂಗ ತಾಣವಾಗಿರುವ ರಾಮೇಶ್ವರಂ ಪ್ರತಿನಿತ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೆಂಗಳೂರಿನಿಂದ ರಾಮೇಶ್ವರಂಗೆ ಯಾವುದೇ ನೇರವಾದ ರೈಲುಗಳಿಲ್ಲ, ಆದಾಗ್ಯೂ ರೈಲು ಪ್ರಯಾಣವೆ ಬೇಕಿದ್ದಲ್ಲಿ ಈರೋಡ್ ಅಥವಾ ತಿರುಚಿರಾಪಳ್ಳಿಗೆ ತಲುಪಿ ಅಲ್ಲಿಂದ ರಾಮೇಶ್ವರಂಗೆ ತೆರಳಬಹುದು. ಬೆಂಗಳೂರಿನಿಂದ ಈರೋಡ್ ಗೆ ಸಾಕಷ್ಟು ರೈಲುಗಳು ಲಭ್ಯವಿದೆ ಹಾಗೂ ತಿರುಚಿರಾಪಳ್ಳಿಗೆ ಎರಡು ರೈಲುಗಳು ಲಭ್ಯವಿದೆ. ಈರೋಡ್ ಗೆ ಹೋಲಿಸಿದಾಗ ರಾಮೇಶ್ವರಂ, ತಿರುಚಿರಾಪಳ್ಳಿಗೆ ಹತ್ತಿರವಾಗಿರುವುದರಿಂದ ಈ ಮಾರ್ಗವನ್ನು ಇಲ್ಲಿ ಆಯ್ಕೆ ಮಾಡಲಾಗಿದೆ. ಬೆಂಗಳೂರಿನಿಂದ ತಿರುಚಿರಾಪಳ್ಳಿಗೆ : ಮೈಲಾಡುತುರೈ ಎಕ್ಸ್ ಪ್ರೆಸ್ (16232)ರಾತ್ರಿ 7 ಗಂಟೆಗೆ, ವೆಲಾಂಕನಿ ಎಕ್ಸ್ ಪ್ರೆಸ್ (17315) ರಾತ್ರಿ 11.30 ಗಂಟೆಗೆ. ತಿರುಚಿರಾಪಳ್ಳಿಯಿಂದ ರಾಮೇಶ್ವರಂಗೆ: ರಾಮೇಶ್ವರಂ ಎಕ್ಸ್ ಪ್ರೆಸ್ (16101) ಬೆಳಿಗ್ಗೆ 5.30 ಗಂಟೆಗೆ, ರಾಮೇಶ್ವರಂ ಎಕ್ಸ್ ಪ್ರೆಸ್ (16713) ರಾತ್ರಿ 10.35 ಗಂಟೆಗೆ.

ಚಿತ್ರಕೃಪೆ: PP Yoonus

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಎರ್ನಾಕುಲಂ : ಕೊಚ್ಚಿ ಜಿಲ್ಲಾ ಕೇಂದ್ರವಿರುವ ಎರ್ನಾಕುಲಂ ಜಿಲ್ಲೆ ಕೇರಲ ರಾಜ್ಯದ ಬಹು ಚಟುವಟಿಕೆಯುಕ್ತ ಪಟ್ಟಣವಾಗಿದೆ. ವಾಣಿಜ್ಯ ದೃಷ್ಟಿಯಿಂದಲೂ ಸಹ ಮಹತ್ವ ಪಡೆದಿರುವುದರಿಂದ ದಿನ ನಿತ್ಯ ಸಾಕಷ್ಟು ಜನರು ಇಲ್ಲಿಗೆ ಬರುತ್ತಿರುತ್ತಾರೆ. ಬೆಂಗಳೂರಿನಿಂದಲೂ ಸಹ ಸಾಕಷ್ಟು ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿಗಿರುವ ರೈಲುಗಳು: ಕೊಚುವೇಲಿ ಎಕ್ಸ್ ಪ್ರೆಸ್ (16315) ಸಂಜೆ 5.15 ಗಂಟೆಗೆ, ಎರ್ನಾಕುಲಂ ಎಕ್ಸ್ ಪ್ರೆಸ್ (12684) ಸಂಜೆ 6.45 ಗಂಟೆಗೆ, ಕನ್ಯಾಕುಮಾರಿ ಎಕ್ಸ್ ಪ್ರೆಸ್ (16526) ರಾತ್ರಿ 8 ಗಂಟೆಗೆ.

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ತಿರುವನಂತಪುರಂ : ಕೇರಳದ ರಾಜಧಾನಿ ಪಟ್ಟಣವಾದ ತಿರುವನಂತಪುರಂ ಸುಪ್ರಸಿದ್ಧ ಯಾತ್ರಾ ಕೇಂದ್ರವೂ ಸಹ ಆಗಿದೆ. ಬೆಂಗಳೂರಿನಿಂದ ಇಲ್ಲಿಗಿರುವ ರೈಲುಗಳು : ಕೊಚುವೇಲಿ ಎಕ್ಸ್ ಪ್ರೆಸ್ (16315) ಸಂಜೆ 5.15 ಗಂಟೆಗೆ, ಕನ್ಯಾಕುಮಾರಿ ಎಕ್ಸ್ ಪ್ರೆಸ್ (16526) ರಾತ್ರಿ 8 ಗಂಟೆಗೆ. ತಿರುವನಂತಪುರಂ ಕುರಿತು ತಿಳಿಯಿರಿ

ಚಿತ್ರಕೃಪೆ: Aravind Sivaraj

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಕೊಯಮತ್ತೂರು : ಬೆಂಗಳೂರು ಹಾಗೂ ಕೊಯಮತ್ತೂರಿನ ಮಧ್ಯ ಸಂಚರಿಸುವ ಜನಗಳ ಸಂಖ್ಯೆ ಅಪಾರ. ಕೊಯಮತ್ತೂರಿಗಿರುವ ರೈಲುಗಳು : ಕೊಚುವೇಲಿ ಎಕ್ಸ್ ಪ್ರೆಸ್ (16315) ಸಂಜೆ 5.15 ಗಂಟೆಗೆ, ಎರ್ನಾಕುಲಂ ಎಸ್ ಎಫ್ ಎಕ್ಸ್ ಪ್ರೆಸ್ (12684) ಸಂಜೆ 6.45 ಗಂಟೆಗೆ, ಯಶವಂತಪುರ - ಕಣ್ಣೋರ್ ಎಕ್ಸ್ ಪ್ರೆಸ್ (16527) ರಾತ್ರಿ 8 ಗಂಟೆಗೆ, ಕೊಯಮತ್ತೂರು ಎಕ್ಸ್ ಪ್ರೆಸ್ (11013) ರಾತ್ರಿ 10.15 ಗಂಟೆಗೆ, ಕನ್ಯಾಕುಮಾರಿ ಎಕ್ಸ್ ಪ್ರೆಸ್ (16526) ರಾತ್ರಿ 8 ಗಂಟೆಗೆ. ಕೊಯಮತ್ತೂರು ಜಂಕ್ಷನ್ ರೈಲು ನಿಲ್ದಾಣ.

ಚಿತ್ರಕೃಪೆ: Ragunathan

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಕಾರವಾರ : ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸ ಪ್ರಸಿದ್ಧ ಕರಾವಳಿ ಪಟ್ಟಣವಾಗಿದೆ ಕಾರವಾರ. ಸುಂದರ ಹಾಗೂ ಪ್ರಶಾಂತ ಕಡಲ ತೀರದ ಈ ಪಟ್ಟಣಕ್ಕೆ ತೆರಳಲು ಇರುವ ರೈಲುಗಳು : ಕಾರವಾರ ಎಕ್ಸ್ ಪ್ರೆಸ್ (16523) ರಾತ್ರಿ 8 ಗಂಟೆಗೆ. ಕೈಬಿಸಿ ಕರೆಯುತಿದೆ ಕಾರವಾರ

ಚಿತ್ರಕೃಪೆ: Rane.abhijeet

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಪಣಜಿ : ಗೋವಾದ ರಾಜಧಾನಿಯಾದ ಪಣಜಿ ಅತ್ಯಾಕರ್ಷಕ ಪ್ರವಾಸಿ ತಾಣವಾಗಿದೆ. ಪಣಜಿಗಿರುವ ರೈಲುಗಳು: ಪಣಜಿಗೆ ನೇರ ರೈಲು ಲಭ್ಯವಿಲ್ಲ. ಬೆಂಗಳೂರಿನಿಂದ ಲೊಂಡಾ ಜಂಕ್ಷನ್ ಗೆ ತೆರಳಿ ಅಲ್ಲಿಂದ ಗೋವಾದ ವಾಸ್ಕೊ ಡಾ ಗಾಮಾ ಪಟ್ಟಣಕ್ಕೆ ತೆರಳಬೇಕು. ವಾಸ್ಕೊ ಪಣಜಿಯಿಂದ ಕೇವಲ 30 ಕಿ.ಮೀ ದೂರದಲ್ಲಿದೆ. ಬೆಂಗಳೂರಿನಿಂದ ಲೊಂಡಾಗಿರುವ ರೈಲುಗಳು : ಚಾಲುಕ್ಯ ಎಕ್ಸ್ ಪ್ರೆಸ್ (11006) ನಸುಕಿನ 4.45 ಗಂಟೆಗೆ, ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ (16589) ರಾತ್ರಿ 9.15 ಗಂಟೆಗೆ, ಅಜ್ಮೇರ್ ಎಕ್ಸ್ ಪ್ರೆಸ್ (16210) ರಾತ್ರಿ 9.50 ಗಂಟೆಗೆ. ಲೊಂಡಾದಿಂದ ವಾಸ್ಕೊಗೆ: ವಿ ಲಿಂಕ್ ವಾಸ್ಕೊ ಎಕ್ಸ್ ಪ್ರೆಸ್ (17316) ಮಧ್ಯರಾತ್ರಿ 1.45 ಗಂಟೆಗೆ, ಗೋವಾ ಎಕ್ಸ್ ಪ್ರೆಸ್ (12780) ಮಧ್ಯ್ರಾತ್ರಿ 2.15 ಗಂಟೆಗೆ, ಯುಬಿಎಲ್ ಹುಬ್ಬಳ್ಳಿ ವಾಸ್ಕೊ ಎಕ್ಸ್ ಪ್ರೆಸ್ (06948) ಮಧ್ಯ್ರಾತ್ರಿ 2.15 ಗಂಟೆಗೆ, ಅಮರಾವತಿ ಎಕ್ಸ್ ಪ್ರೆಸ್ (18047) ಬೆಳಿಗ್ಗೆ 10.40 ಗಂಟೆಗೆ.

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ವೈಷ್ಣೊದೇವಿ : ವೈಷ್ಣೋದೇವಿಗೆ ನಡೆದುಕೊಳ್ಳುವ ಭಕ್ತರ ಸಂಖ್ಯೆ ಅಪಾರ. ದಕ್ಷಿಣ ಭಾರತದ ಜನರಿಗೆ, ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿರುವ ಪ್ರಖ್ಯಾತ ಧಾರ್ಮಿಕ ಕ್ಷೇತ್ರ ವೈಷ್ಣೋದೇವಿಗೆ ತೆರಳಲು ಮೊದಲಿಗೆ ಬಲು ತೊಂದರೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಹೊಚ್ಚ ಹೊಸ ರೈಲೊಂದನ್ನು ದ.ಭಾರತದಿಂದ ವೈಷ್ಣೋದೇವಿಗೆ ಪರಿಚಯಿಸಲಾಗಿದ್ದು ಸಾಕಷ್ಟು ಜನ ಭಕ್ತರಿಗೆ ಹೆಚ್ಚಿನ ಸಂತಸ ಉಂಟು ಮಾಡಿದೆ. ಏನಿಲ್ಲವೆಂದರೂ ಈ ಪ್ರಯಾಣ ದ.ಭಾರತದ ಮೊದಲ ಉದ್ದ ಪ್ರಯಾಣವಾಗಿದ್ದು ಸುಮಾರು 56 ಗಂಟೆಗಳಷ್ಟು ಪ್ರಯಾಣಾವಧಿ ಹೊಂದಿದೆ. ಮತ್ತೊಂದು ಹೆಮ್ಮೆಯ ಸಂಗತಿಯೆಂದರೆ ಇದು ಪ್ರಾರಂಭವಾಗುವುದು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ. ಯಶವಂತಪುರ - ಕಾಟ್ರಾ ಪ್ರಿಮೀಯಮ್ ಎಕ್ಸ್ ಪ್ರೆಸ್ (ವಾರಕ್ಕೊಂದು ದಿನ, ಶನಿವಾರ ಮಾತ್ರ) (22679) ಬೆಳಿಗ್ಗೆ 11.30 ಗಂಟೆಗೆ.

ಚಿತ್ರಕೃಪೆ: Abhishek Chandra

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಜೋಧಪುರ : ಬೆಂಗಳೂರಿನಿಂದ ಜೋಧಪುರ್ ಗೆ ಇರುವ ರೈಲುಗಳು : ಜೋಧಪುರ ಎಕ್ಸ್ ಪ್ರೆಸ್ (16534) (ರವಿವಾರ ಮಾತ್ರ) ಸಂಜೆ 5.20 ಗಂಟೆಗೆ, ಯಶವಂತಪುರ - ಬಿಕಾನೇರ್ ಎಕ್ಸ್ ಪ್ರೆಸ್ (16587) (ಶುಕ್ರವಾರ ಮತ್ತು ರವಿವಾರ ಮಾತ್ರ) ಬೆಳಿಗ್ಗೆ 5 ಗಂಟೆಗೆ.

ಚಿತ್ರಕೃಪೆ: Owen Young

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಜೈಪುರ : ಬೆಂಗಳೂರಿನಿಂದ ಜೈಪುರಕ್ಕಿರುವ ರೈಲುಗಳು: ಯಶವಂತಪುರ - ಜೈಪುರ ಪ್ರಿಮೀಯಮ್ (22695)(ಗುರುವಾರ ಮಾತ್ರ) ಬೆಳಿಗ್ಗೆ 11.30 ಗಂಟೆಗೆ, ಜೈಪುರ ಎಕ್ಸ್ ಪ್ರೆಸ್ (12975) (ಗುರುವಾರ ಮತ್ತು ಶನಿವಾರ) ಮಧ್ಯಾಹ್ನ 1 ಗಂಟೆಗೆ.

ಚಿತ್ರಕೃಪೆ: Superfast1111

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಲಖನೌ : ಬೆಂಗಳೂರಿನಿಂದ ಲಖನೌಗಿರುವ ರೈಲುಗಳು: ಯಶವಂತಪುರ - ಗೋರಕ್ಪುರ ಎಕ್ಸ್ ಪ್ರೆಸ್ (15016) ಬೆಳಿಗ್ಗೆ 7.40 ಗಂಟೆಗೆ, ಯಶವಂತಪುರ - ಗೋರಕ್ಪುರ ಎಕ್ಸ್ ಪ್ರೆಸ್ (15024) ರಾತ್ರಿ 11.40 ಗಂಟೆಗೆ. ಎರಡು ರೈಲುಗಳು ಕೇವಲ ಗುರುವಾರದಂದು ಮಾತ್ರ. ಸುಂದರಮಯ ಲಖನೌ ರೈಲು ನಿಲ್ದಾಣ.

ಚಿತ್ರಕೃಪೆ: Mohit

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಅಹ್ಮದಾಬಾದ : ಬೆಂಗಳೂರಿನಿಂದ ಅಹ್ಮದಾಬಾದಿಗಿರುವ ರೈಲುಗಳು: ಯಶವಂತಪುರ - ಬಿಕಾನೇರ್ ಎಕ್ಸ್ ಪ್ರೆಸ್ (16587) (ಶುಕ್ರವಾರ ಮತ್ತು ರವಿವಾರ ಮಾತ್ರ) ಬೆಳಿಗ್ಗೆ 5 ಗಂಟೆಗೆ, ಜೋಧಪುರ ಎಕ್ಸ್ ಪ್ರೆಸ್ (16534) (ರವಿವಾರ ಮಾತ್ರ) ಸಂಜೆ 5.20 ಗಂಟೆಗೆ, ಅಹ್ಮದಾಬಾದ್ ಎಕ್ಸ್ ಪ್ರೆಸ್ (16502) ಮಧ್ಯಾಹ್ನ 1.30 ಗಂಟೆಗೆ, ಅಜ್ಮೇರ್ ಎಕ್ಸ್ ಪ್ರೆಸ್ (16210) ರಾತ್ರಿ 9.50 ಗಂಟೆಗೆ.

ಚಿತ್ರಕೃಪೆ: FabSubeject

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ದೆಹಲಿ : ಬೆಂಗಳೂರಿನಿಂದ ದೆಹಲಿಗಿರುವ ರೈಲುಗಳು: ಕರ್ನಾಟಕಾ ಎಕ್ಸ್ ಪ್ರೆಸ್ (12627) ರಾತ್ರಿ 7.20 ಗಂಟೆಗೆ, ರಾಜಧಾನಿ ಎಕ್ಸ್ ಪ್ರೆಸ್ (22691) ರಾತ್ರಿ 8.20 ಗಂಟೆಗೆ, ಸಂಪರ್ಕಕ್ರಾಂತಿ ಎಕ್ಸ್ ಪ್ರೆಸ್ (12649) ರಾತ್ರಿ 10.10 ಗಂಟೆಗೆ, ಕೊಂಗು ಎಕ್ಸ್ ಪ್ರೆಸ್ (12647) ರಾತ್ರಿ 11.40 ಗಂಟೆಗೆ.

ಚಿತ್ರಕೃಪೆ: SAGAR PRADHAN

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಕೊಲ್ಕತ್ತಾ : ಬೆಂಗಳೂರಿನಿಂದ ಕೊಲ್ಕತ್ತಾಗಿರುವ ರೈಲುಗಳು: ಮುಜಫರ್ಪುರ್ ಎಕ್ಸ್ ಪ್ರೆಸ್ (15227) ಮಧ್ಯರಾತ್ರಿ 12.40 ಗಂಟೆಗೆ, ಯಶವಂತಪುರ-ಹೌರಾ ಎಕ್ಸ್ ಪ್ರೆಸ್ (12864) ರಾತ್ರಿ 7.35 ಗಂಟೆಗೆ, ಗೌಹಾಟಿ ಎಕ್ಸ್ ಪ್ರೆಸ್ (12509) ರಾತ್ರಿ 11.30 ಗಂಟೆಗೆ, ಡೊರಂಟೊ ಎಕ್ಸ್ ಪ್ರೆಸ್ (12246) ಬೆಳಿಗ್ಗೆ 11.15 ಗಂಟೆಗೆ.

ಚಿತ್ರಕೃಪೆ: Bibek2011

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಪಾಟ್ನಾ : ಬೆಂಗಳೂರಿನಿಂದ ಪಾಟ್ನಾಗಿರುವ ರೈಲುಗಳು: ಸಂಘಮಿತ್ರಾ ಎಕ್ಸ್ ಪ್ರೆಸ್ (12295) ಬೆಳಿಗ್ಗೆ 9 ಗಂಟೆಗೆ.

ಚಿತ್ರಕೃಪೆ: Ahmad5.farah

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಮುಖ್ಯ ಸ್ಥಳಗಳಿಗಿರುವ ರೈಲುಗಳು:

ಗೌಹಾಟಿ : ಬೆಂಗಳೂರಿನಿಂದ ಗೌಹಾಟಿಗಿರುವ ರೈಲುಗಳು: ಗೌಹಾಟಿ ಎಕ್ಸ್ ಪ್ರೆಸ್ (12509) ರಾತ್ರಿ 11.30 ಗಂಟೆಗೆ.

ಚಿತ್ರಕೃಪೆ: Suraj Kumar Das

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X