Search
  • Follow NativePlanet
Share
» »ಹತ್ತುವ ಸಾಮರ್ಥ್ಯಕ್ಕೆ ಸವಾಲೆಸೆಯುವ ಕೋಟೆ

ಹತ್ತುವ ಸಾಮರ್ಥ್ಯಕ್ಕೆ ಸವಾಲೆಸೆಯುವ ಕೋಟೆ

By Vijay

ಮಹಾರಾಷ್ಟ್ರ ರಾಜ್ಯವು ಅನೇಕ ಕೌತುಕಮಯ ಸ್ಥಳಗಳಿಂದ ಕೂಡಿದೆ. ಒಂದಕ್ಕಿಂತ ಒಂದು ಭಿನ್ನವಾದ ಸ್ಥಳಗಳನ್ನು ಈ ರಾಜ್ಯದ ಎಲ್ಲೆಡೆ ಕಾಣಬಹುದಾಗಿದ್ದು ಪ್ರವಾಸೋದ್ಯಮದ ಹಿರಿಮೆಯನ್ನು ಹೆಚ್ಚಿಸಿವೆ. ಪ್ರಳಯ ಸೂಚಕವಿರುವ ಹರಿಶ್ಚಂದ್ರಗಡ್ ಇರಲಿ, ಉಲ್ಕಾಪಾತದಿಂದ ಉಂಟಾದ ಬೃಹತ್ ಉಲ್ಕಾ ಗುಂಡಿಯ ಕೆರೆಯಿರಲಿ ಅಥವಾ ವಾಹನಗಳ ಓಡಾಟವೆ ಇರದ ಮಾಥೇರಾನ್ ಎಂಬ ಗಮ್ಯ ಗಿರಿಧಾಮವಿರಲಿ ಪ್ರತಿಯೊಂದು ಸ್ಥಳಗಳು ಪ್ರವಾಸಿಗರಲ್ಲಿ ಆಸಕ್ತಿಯನ್ನು ಕೆರಳಿಸುತ್ತ ತಮ್ಮೆಡೆ ಸೆಳೆಯುತ್ತವೆ.

ವಿಶೇಷ ಲೇಖನ : ಪ್ರಳಯ ಸೂಚಕ ಹರಿಶ್ಚಂದ್ರಗಡ್

ಹತ್ತುವ ಸಾಮರ್ಥ್ಯಕ್ಕೆ ಸವಾಲೆಸೆಯುವ ಕೋಟೆ

ಚಿತ್ರಕೃಪೆ: Sunilbhar

ಚಾರಣ ಮಾರ್ಗಳಿಗೂ ಸಹ ಮಹಾರಾಷ್ಟ್ರದಲ್ಲಿ ಬರವೇನೂ ಇಲ್ಲ. ಒಂದಕಿಂತ ಒಂದು ಆಕರ್ಷಕ ಚಾರಣ ಮಾರ್ಗಗಳನ್ನು ಈ ರಾಜ್ಯದಲ್ಲಿ ಕಾಣಬಹುದಾಗಿದೆ. ಕೆಲ ಚಾರಣ ಮಾರ್ಗಗಳು ಬೆಟ್ಟಗಳ ಮೇಲೆ ಜಾಗರೂಕತೆಯಿಂದ ನಡೆಯುತ್ತ ಮೇಲೆ ಸ್ಥಿತವಿರುವ ಪುರಾತನ ಕೋಟೆ ಕೊತ್ತಲಗಳಿಗೆ ಕರೆದೊಯ್ಯುತ್ತವೆ. ನಿರ್ಜನವಾದ ಇಂತಹ ಸ್ಥಳಗಳಲ್ಲಿ ಏರುವ ಚಟುವಟಿಕೆಯು ಸಾಕಷ್ಟು ಸಾಹಸಮಯವಾಗಿದ್ದು ಪ್ರತಿ ಚಾರಣಿಗನಿಗೆ ಸವಾಲೆಸೆಯುವಂತಿರುತ್ತವೆ. ಒಂದೊಮ್ಮೆ ಈ ಟ್ರೆಕ್ ಮಾಡಿದಾಗ ಅಲ್ಲಿಂದ ಕಂಡುಬರುವ ನೋಟವು ನಮ್ಮನ್ನು ಮೂಕ ವಿಸ್ಮಿತರನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ.

ವಿಶೇಷ ಲೇಖನ : ಲೋಣಾರ್ ಉಲ್ಕಾ ಗುಂಡಿ

ಹತ್ತುವ ಸಾಮರ್ಥ್ಯಕ್ಕೆ ಸವಾಲೆಸೆಯುವ ಕೋಟೆ

ಚಿತ್ರಕೃಪೆ: Damodar Magdum

ಈ ಒಂದು ದೃಷ್ಟಿಯಲ್ಲಿ ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಮಹಾಡ್ ಎಂಬಲ್ಲಿರುವ ರಾಯಗಡ್ ಕೋಟೆಯೂ ಸಹ ಒಂದಾಗಿದೆ. ಮರಾಠಾ ವೀರ ದೊರೆ ಛತ್ರಪತಿ ಶಿವಾಜಿ ಮಹಾರಾಜನು ಈ ಕೋಟೆಯನ್ನು ತನ್ನ ರಾಜಧಾನಿ ಕೇಂದ್ರವನ್ನಾಗಿ ಮಾಡಿ ಸಾಕಷ್ಟು ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದನು. ಈ ಕೋಟೆಯುಸಹ್ಯಾದ್ರಿ ಪರ್ವತ ಶ್ರೇಣಿಗಳ ಒಂದು ಬೆಟ್ಟದ ತುದಿಯಲ್ಲಿ ನಿರ್ಮಾಣವಾಗಿದ್ದುದರಿಂದ ಶತ್ರುಗಳಿಗೆ ಇದನ್ನು ಪ್ರವೇಶಿಸಲು ಬಹಳವೆ ಕಷ್ಟಕರವಾಗಿತ್ತು. ಈ ಕೋಟೆಯನ್ನು ತಲುಪಲು ಏನಿಲ್ಲವೆಂದರೂ 1737 ಮೆಟ್ಟಿಲುಗಳಿವೆ.

ವಿಶೇಷ ಲೇಖನ : ಮಹಾರಾಷ್ಟ್ರದ ಸವಾಲೊಡ್ಡುವ ಟ್ರೆಕ್‍ಗಳು

ಹತ್ತುವ ಸಾಮರ್ಥ್ಯಕ್ಕೆ ಸವಾಲೆಸೆಯುವ ಕೋಟೆ

ಚಿತ್ರಕೃಪೆ: Cj.samson

ಪ್ರಸ್ತುತ, ಈ ಕೋಟೆಯು ಒಂದು ಗಮ್ಯವಾದ ಪ್ರವಾಸಿ ಆಕರ್ಷಣೆಯಾಗಿದ್ದು, ಸಾಕಷ್ಟು ಜನ ಪ್ರವಾಸಿಗರು ಅದರಲ್ಲೂ ವಿಶೇಷವಾಗಿ ಚಾರಣ ಪ್ರೀಯರು ಈ ಕೋಟೆಗೆ ಟ್ರೆಕ್ ಮಾಡುತ್ತಲೆ ಇರುತ್ತಾರೆ. ಮಳೆಗಾಲದ ಸಂದರ್ಭದಲ್ಲಂತೂ ಈ ಟ್ರೆಕ್ ಒಂದು ವಿನೂತನವಾದ ಅನುಭವವನ್ನು ಕರುಣಿಸುತ್ತದೆ. ಆದರೆ ಈ ಸಂದರ್ಭದಲ್ಲಿ ಜಾರುವಿಕೆ ಹೆಚ್ಚಾಗಿರುವುದರಿಂದ ಜಾಗರೂಕತೆ ವಹಿಸುವುದು ಅವಶ್ಯಕವಾಗಿದೆ. ಅಲ್ಲದೆ ಏರುತ್ತಿರುವಾಗ ಸಹ್ಯಾದ್ರಿ ಪರ್ವತಗಳ ವಿಹಂಗಮ ನೋಟವು ಕಣ್ಮುಂದೆ ಸುಳಿದಾಡುತ್ತದೆ. ಕೋಟೆಯಲ್ಲಿ ಶಿವಾಜಿ ಪ್ರತಿಮೆಯನ್ನು ಕಾಣಬಹುದಾಗಿದೆ.

ಹತ್ತುವ ಸಾಮರ್ಥ್ಯಕ್ಕೆ ಸವಾಲೆಸೆಯುವ ಕೋಟೆ

ಚಿತ್ರಕೃಪೆ: Joshi detroit

ಮತ್ತೊಂದು ವಿಶೇಷವೆಂದರೆ, ಈ ಕೋಟೆಗೆ ತೆರಳಲು ಅನುಕೂಲವಾಗುವಂತೆ ರೋಪ್ ವೇ (ಕೇಬಲ್ ಕಾರುಗಳು) ಸೇವೆಯನ್ನು ಕಲ್ಪಿಸಲಾಗಿದೆ. ಹಿರಿಯರಿಗೆ ಅಥವಾ ದೇಹ ಸಾಮರ್ಥ್ಯದ ಕೊರತೆಯಿರುವವರಿಗೆಂದು ಈ ರೋಪ್ ವೇ ಬಳಸಲ್ಪಡುತ್ತದೆ. ಬಾಲ ಗಂಗಾಧರ ತಿಲಕರವರು 1886 ರಲ್ಲಿ ಸ್ಥಾಪಿಸಿದ್ದ ಇಂದಿಗೂ ಚಾಲ್ತಿಯಲ್ಲಿರುವ ಶಿವಾಜಿ ಸ್ಮಾರಕ ರಾಯಗಡ್ ಸ್ಮಾರಕ ಮಂಡಳದ ವತಿಯಿಂದ ಈ ಅನುಕೂಲತೆಯನ್ನು ಅಭಿವೃದ್ಧಿಪಡಿಸಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X