Search
  • Follow NativePlanet
Share
» »ಪುಷ್ಪಾಂಜಲಿ : ಮನೆಯ ಹೊರಗೊಂದು ನಮ್ಮನೆ

ಪುಷ್ಪಾಂಜಲಿ : ಮನೆಯ ಹೊರಗೊಂದು ನಮ್ಮನೆ

By Vijay

ಅಬ್ಬಾ...ಅಂತೂ ಸ್ವಲ್ಪ ಫ್ರೀ ಯಾದೆ. ಇನ್ನೂ ಸ್ವಲ್ಪ ದಿನ ಹಾಯಾಗಿ ಮನೆಯಲ್ಲಿ ಸಮಯ ಕಳೆಯಬಹುದು. ಬೆಳಿಗ್ಗೆ ತಡವಾಗಿ ಏಳಬಹುದು, ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಕಾಫಿ ಹೀರಬಹುದು. ಮನೆಯೊಡತಿ, ಮಕ್ಕಳಿಗೆ ಸಾಕಷ್ಟು ಸಮಯ ನೀಡಬಹುದು. ರಜೆ ಸಿಕ್ಕಾಗ ಬಹುತೇಕರಿಗೆ ಈ ರೀತಿ ಅನ್ನಿಸದೆ ಇರಲಾರದು. ಒತ್ತಡದ ಜೀವನದ ನಡುವೆ ಅಲ್ಲಲ್ಲಿ ರಜೆಗಳು ಬಂದಾಗ ಮಾತ್ರವೆ ಜೀವನದಲ್ಲಿ ಮತ್ತೆ ಉತ್ಸಾಹ ಬಂದಂತಾಗುತ್ತದೆ ಅಲ್ಲವೆ?

ವಿಶೇಷ ಲೇಖನ : ಮರದ ಮೆಲಿರುವ ಪ್ರವಾಸಿ ಮನೆಗಳು

ಆದರೆ ಏನು ಮಾಡುವುದು, ಸಾಕಷ್ಟು ಜನರು ರಜೆಗಳು ಸಿಕ್ಕಾಗಲೂ ಸಹ ಆ ಸಮಯವನ್ನು ಮಹಾನಗರಗಳಲ್ಲೆ ಕಳೆಯುತ್ತಾರೆ. ದಿನ ನಿತ್ಯದ ಕೆಲಸದಿಂದ ಬೆಂಡಾದ ಅದೆಷ್ಟೊ ಜನ ರಜೆ ಇದ್ದಾಗಲೂ ಹೊರ ಹೋಗಲು ಹಿಂದೇಟು ಹಾಕುತ್ತಾರೆ, ಪ್ರವಾಸ ಮಾಡಲು ನಿರಾಕರಿಸುತ್ತಾರೆ. ಅದಕ್ಕೆ ಕಾರಣವೂ ಇಲ್ಲದಿಲ್ಲ ಅಂತೇನಿಲ್ಲ. ಪ್ರವಾಸ ಎಂದಾಕ್ಷಣ ಸಾಕಷ್ಟು ಸುತ್ತಾಡುವುದಿದ್ದೆ ಇರುತ್ತದೆ. ವಿಶ್ರಾಂತಿಗೆಂದು ಸಮಯ ಸಿಗುವುದೆ ಕಷ್ಟ, ಸಿಕ್ಕರೂ ಅದು ಅಲ್ಪ ಕಾಲವೆ ಆಗಿರುತ್ತದೆ.

ಬಹುತೇಕರಿಗೆ ಪ್ರಕೃತಿಯ ಮಡಿಲಲ್ಲಿ ಕೊಂಚ ಸಮಯ ಯಾವ ಚಿಂತೆಗಳಿಲ್ಲದೆ ಹಾಯಾಗಿ ಸಮಯ ಕಳೆಯಬೇಕೆಂದೆನಿಸಿದರೂ ಇದ್ದ ಸ್ವಲ್ಪ ಸಮಯವನ್ನು ಸಾರ್ಥಕಗೊಳಿಸುವ ದೃಷ್ಟಿಯಿಂದ ನಿರಂತರವಾಗಿ ಪ್ರವಾಸ ಮಾಡುವುದು ಬೇಸರ ಮೂಡಿಸಬಹುದು. ಹಾಗಾದರೆ ಇದಕ್ಕೆಲ್ಲ ಪರಿಹಾರವೇನು? ಎಂದೆನಿಸದೆ ಇರಲಾರದು. ಆದರೆ ಚಿಂತೆ ಬಿಡಿ...ಇಂದು ಪ್ರವಾಸೋದ್ಯಮ ಎಷ್ಟೊಂದು ಗಾಢ ಹಾಗೂ ವೈವಿಧ್ಯಮಯವಾಗಿ ಬೆಳೆದಿದೆ ಎಂದರೆ "ಹೋಂ ಸ್ಟೇ" ಎಂಬ ಪರಿಕಲ್ಪನೆಯು ಇದಕ್ಕೆ ಸೂಕ್ತ ಪರಿಹಾರ ದೊರಕಿಸಿದೆ.

ಮಾಹಿತಿ ಹಾಗೂ ಚಿತ್ರಕೃಪೆ : ಓಕರ್ ಮೂನ್ ಹಾಲಿಡೇಸ್ ಕೊಡಗು

ಓಕರ್ ಮೂನ್ ಹಾಲಿಡೇಸ್, ಕೊಡಗು:

ಓಕರ್ ಮೂನ್ ಹಾಲಿಡೇಸ್, ಕೊಡಗು:

ಹೋಂ ಸ್ಟೇ ಎಂದರೆ ನೀವು ನಿಮ್ಮ ಮನೆಯಲ್ಲಿ ಹೇಗೆ ಸ್ವತಂತ್ರ ಹಾಗೂ ಖಸಗೀಯವಾಗಿ ಬದುಕುತ್ತೀರೊ ಅದೇ ರೀತಿಯಲ್ಲೆ ಇಲ್ಲಿಯೂ ಸಹ ಸಮಯ ಕಳೆಯಬಹುದು. ಇದರ ಬಹು ಮುಖ್ಯ ಉಪಯೋಗವೆಂದರೆ, ಹೋಟೆಲ್, ಲಾಡ್ಜ್, ರಿಸಾರ್ಟುಗಳಲ್ಲಿ ಕಂಡುಬರುವ ಹಾಗೆ ಯಾರ ಹಂಗಿನಲ್ಲಿಯೂ ಇರದೆ ನಮ್ಮ ಮನೆಯಲ್ಲಿ ಇರುವ ರೀತಿಯಲ್ಲೆ ಕುಟುಂಬದೊಡನೆ ಮನೆಯಲ್ಲಿದ್ದ ಹಾಗೆಯೆ ಇರಬಹುದು. ಹೌದು ಇಲ್ಲಿ ಬರೀ ರೂಮುಗಳಿಲ್ಲ. ಬದಲಿಗೆ ನೈಜವಾದ ಎರಡು/ಮೂರು ಕೋಣೆಗಳುಳ್ಳ ಮನೆಯೆ ಇದಾಗಿರುತ್ತದೆ.

ಓಕರ್ ಮೂನ್ ಹಾಲಿಡೇಸ್, ಕೊಡಗು:

ಓಕರ್ ಮೂನ್ ಹಾಲಿಡೇಸ್, ಕೊಡಗು:

ಭಾರತದ ಅತ್ಯದ್ಭುತ ಗಿರಿಧಾಮಗಳ ಪೈಕಿ ಒಂದಾದ, ಕರ್ನಾಟಕದ ಅಗ್ರಗಣ್ಯ ಪ್ರವಾಸಿ ತಾಣವಾದ ಕೊಡಗಿನಲ್ಲಿರುವ ಓಕರ್ ಮೂನ್ ಹಾಲಿಡೇಸ್ ಅವರ "ಪುಷ್ಪಾಂಜಲಿ ಹೋಂ ಸ್ಟೇ" ನಿಮಗೆ ನಿಮ್ಮ ಮನೆಯಿಂದ ಹೊರಗಿರುವ ನಿಮ್ಮದೆ ಆದ ಮತ್ತೊಂದು ಮನೆಯಾಗಿದೆ ಎಂದರೆ ತಪ್ಪಾಗಲಾರದು. ಸುಂದರವಾದ ಪುಷ್ಪಗಿರಿ ಬೆಟ್ಟಗಳನ್ನು ಅಭಿಮುಖವಾಗಿ ನೋಡುತ್ತ, ಪಶ್ಚಿಮ ಘಟ್ಟಗಳ ಹಚ್ಚ ಹಸಿರಿನಿಂದ ಕೂಡಿದ ಪ್ರಾಕೃತಿಕ ಸೊಬಗಿನ ಮಡಿಲಲ್ಲಿ ಎಲೆ ಮರೆಯ ಕಾಯಿಯಂತೆ ನೆಲೆಸಿರುವ ಪುಷ್ಪಾಂಜಲಿ ಹೋಂ ಸ್ಟೇ ಅಥವಾ ವಸತಿ ಮನೆಯು ನಿಮಗೊಂದು ವಿನೂತನವಾದ ಹಾಗೂ ಎಂದಿಗೂ ಮರೆಯಲಾಗದ ಸುಂದರ ಅನುಭವವನ್ನು ಕಟ್ಟಿ ಕೊಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಓಕರ್ ಮೂನ್ ಹಾಲಿಡೇಸ್, ಕೊಡಗು:

ಓಕರ್ ಮೂನ್ ಹಾಲಿಡೇಸ್, ಕೊಡಗು:

ಮೂಲತಃ ಇದೊಂದು ಹಳೆಯದಾದ ಅಂದರೆ 1936 ರ ಸಮಯದ ಬಂಗಲೆಯಾಗಿತ್ತು. ಪ್ರಸ್ತುತ ಇದನ್ನು ವೈಭವಯುತವಾಗಿ ನವೀಕರಣಗೊಳಿಸಲಾಗಿದೆ. ಆದರೆ ಹಳೆಯ ಕೆಲವು ಎಂದಿಗೂ ಮಾಸದ ಸುಮಧುರ ಅನುಭವಗಳನ್ನು, ನೆನಪುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಹಾಗೆಯೆ ಇರಿಸಿಕೊಳ್ಳಲಾಗಿದೆ. ಇದು ಹಿರಿಯರಿಗೆ ತಮ್ಮ ಮನೆಗಳು ಯಾವ ರೀತಿ ಇತ್ತೆಂದು ನೆನಪುಗಳನ್ನು ಮೆಲುಕು ಹಾಕಿಕೊಳ್ಳಲು ಅವಕಾಶ ನೀಡುತ್ತವೆಯಲ್ಲದೆ ಕಿರಿಯರಿಗೆ ಒಂದು ವಿನೂತನ ಅನುಭವ ನೀಡುತ್ತದೆ.

ಓಕರ್ ಮೂನ್ ಹಾಲಿಡೇಸ್, ಕೊಡಗು:

ಓಕರ್ ಮೂನ್ ಹಾಲಿಡೇಸ್, ಕೊಡಗು:

ಕೊಡಗಿನ ಮಡಿಕೇರಿ ನಗರದಿಂದ ವಿರಾಜಪೇಟೆ ಮಾರ್ಗವಾಗಿ ಒಂದು ಕಿ.ಮೀ ದೂರದಲ್ಲಿರುವ ದೇಚೂರು ಎಂಬ ಹಚ್ಚ ಹಸಿರಿನ ಮಧ್ಯದಲ್ಲಿ ನೆಲೆಸಿರುವ ಗ್ರಾಮದಲ್ಲಿ ಪುಷ್ಪಾಂಜಲಿ ವಸತಿ ಮನೆಯಿದೆ. ಈ ಮನೆಯು ಸಾಂಪ್ರದಾಯಿಕ ರೀತಿಯಲ್ಲಿರುವುದು ವಿಶೇಷ. ಆದ್ದರಿಂದ ಸ್ಥಳೀಯ ಸಂಸ್ಕೃತಿಯ ಪರಿಚಯವನ್ನು ಬಹು ಹತ್ತಿರದಿಂದ ಮಾಡಿಸುತ್ತದೆ. ಆದರೆ ಇಂದಿನ ಅವಶ್ಯಕತೆಗೆ ತಕ್ಕಂತೆ ಆಧುನಿಕ ಸೌಲಭ್ಯಗಳನ್ನೂ ಸಹ ಒಳಗೊಂಡಿದೆ. ಮೂರು ಕೋಣೆಗಳುಳ್ಳ ಈ ವಿಶಾಲವಾದ ಮನೆಯಲ್ಲಿ ಪ್ರತಿ ಕೋಣೆಗೂ ಹೊಂದಿಕೊಂಡ ಸ್ನಾನ ಗೃಹಗಳಿವೆ. ಬಿಸಿ ನೀರು ಸದಾ ಲಭ್ಯ. ನಿಮಗೆ ಬೇಕಿದ್ದರೆ ಆಧುನಿಕ "ಗೀಸರ್" ಗಳಿಂದ ಇಲ್ಲವೆ ಸಾಂಪ್ರದಾಯಿಕವಾಗಿ ಒಣಗಿದ ಕಟ್ಟಿಗೆಗಳನ್ನು ಬಾಯ್ಲರ್ ಗಳಲ್ಲಿ ಸುಟ್ಟು ಬಿಸಿ ನೀರನ್ನು ಪಡೆಯಬಹುದು.

ಓಕರ್ ಮೂನ್ ಹಾಲಿಡೇಸ್, ಕೊಡಗು:

ಓಕರ್ ಮೂನ್ ಹಾಲಿಡೇಸ್, ಕೊಡಗು:

ವಿಶಾಲವಾದ ಹೊರ ಕೊಣೆ, ಊಟದ ಮನೆ, ಸಾಂಪ್ರದಾಯಿಕ ನೆಲ, ದಟ್ಟವಾಗಿ ಬೆಳಕು, ಗಾಳಿಯಾಡಲು ಸುಂದರವಾದ ಕಿಟಕಿಗಳು, ಹೊರಾಂಗಣದಲ್ಲಿರುವ ಸುಂದರವಾದ ಉದ್ಯಾನ, ಸುತ್ತ ಮುತ್ತಲಿನಲ್ಲಿರುವ ದಟ್ಟವಾದ ಗಿಡ ಮರಗಳು, ದೂರದಿಂದ ಮೋಹಕ ನೋಟ ಒದಗಿಸುವ ಪುಷ್ಪಗಿರಿ ಬೆಟ್ಟಗಳು, ವಾಹನಗಳ ಯಾವ ರೀತಿಯ ಕಿರಿ ಕಿರಿ ಸದಿಲ್ಲದೆ, ಕೇವಲ ಇಂಪಾಗಿ ಕೇಳಿಬರುವ ಹಕ್ಕಿಗಳ ಚಿಲಿಪಿಲಿಯ ಕಲರವ, ಗಿಡ ಮರಗಳ ಗಾಳಿಯೊಂದಿಗಿನ ಸರಸ ಸಲ್ಲಾಪ ಎಲ್ಲವೂ ಸೇರಿ ಸಾಕ್ಷಾತ್ ಸ್ವರ್ಗವೆ ಇಲ್ಲಿ ಇಳಿದು ಬಂದಿದೆಯೇನೊ ಅನ್ನುವ ರೀತಿಯಲ್ಲಿ ನಿಮ್ಮನ್ನು ಪ್ರಸನ್ನಗೊಳಿಸುತ್ತವೆ.

ಓಕರ್ ಮೂನ್ ಹಾಲಿಡೇಸ್, ಕೊಡಗು:

ಓಕರ್ ಮೂನ್ ಹಾಲಿಡೇಸ್, ಕೊಡಗು:

ನೀವು ನಿಮ್ಮ ಕುಟುಂಬದವರೊಂದಿಗೆ ಇಲ್ಲಿ ಕಳೆಯುವ ಪ್ರತಿ ಕ್ಷಣವೂ ನಿಮ್ಮ ಜೀವನದ ಅತ್ಯಮೂಲ್ಯವಾದ ಘಳಿಗೆಯಾಗಬಲ್ಲದು. ಅಷ್ಟೆ ಅಲ್ಲ, ನಿಮ್ಮ ಅವಶ್ಯಕತೆ ಹಾಗೂ ಅನುಕೂಲಕ್ಕಾಗಿ ಒಬ್ಬ ಅಡುಗೆಯವನ ವ್ಯವಸ್ಥೆಯೂ ಇದೆ. ಸ್ಥಳೀಯ ಅಂದರೆ ಕೊಡಗು ಸಂಸ್ಕೃತಿಯ ಪಾಕಶಾಸ್ತ್ರಜ್ಞನಾಗಿರುವ ಅಡುಗೆಯವನು ಪ್ರತಿ ಆಹಾರ ಸೇವಿಸುವ ಸಮಯದಲ್ಲಿ ನಿಮ್ಮ ಮನ ಹಾಗೂ ನಾಲಿಗೆಯ ಚಪಲವನ್ನು ತಣಿಸುವಂತಹ ರುಚಿ ರುಚಿ ಹಾಗೂ ಬಿಸಿ ಬಿಸಿಯಾದ ಸ್ಥಳೀಯ ವ್ಯಂಜನ ಹಾಗೂ ಖಾದ್ಯಗಳನ್ನು ಮಾಡಿ ಉಪಚರಿಸುತ್ತಾನೆ. ಪುಷ್ಪಾಂಜಲಿಯ ಕಾಫಿ ಎಸ್ಟೇಟಿನಿಂದಲೆ ತಾಜಾ ಆಗಿ ಉತ್ಪಾದಿಸಲಾದ ಕಾಫಿ ಬೀಜಗಳ ಬಿಸಿ ಕಾಫಿ ಇಲ್ಲವೆ ನಿಮಗೆ ಬೇಕಾದ ಘಮ ಘಮ ಸುವಾಸನೆಯ ಚಹಾ ಸಹ ಲಭ್ಯ.

ಓಕರ್ ಮೂನ್ ಹಾಲಿಡೇಸ್, ಕೊಡಗು:

ಓಕರ್ ಮೂನ್ ಹಾಲಿಡೇಸ್, ಕೊಡಗು:

ವಿಶಾಲವಾದ ಕೋಣೆಗಳು, ಸ್ವಚ್ಛ ಹಾಗೂ ಶುದ್ಧವಾಗಿರುವ ಮನೆಯ ಪರಿಸರ, ಐಷಾರಾಮಿ ಸೋಫಾ, ಮೇಜು ಹಾಗೂ ಕುರ್ಚಿಗಳು, ಮನರಂಜನೆಗೆಂದು ಟಿ ವಿ, ಸ್ವಚ್ಛತೆಯಿಂದ ಕೂಡಿದ ಅಡುಗೆ ಮನೆ, ನಿರ್ಮಲವಾದ ಪರಿಸರ, ಸ್ವಚ್ಛಂದವಾಗಿ ಬರುವ ತಾಜಾ ಗಾಳಿ ಬೆಳಕು, ಆಗಾಗ ಮನಸ್ಸಿಗೆ ತಂಪು ನೀಡುವಂತೆ ಗಾಳಿಯಲ್ಲಿ ಪಸರಿಸಿದ ತಾಜಾ ಕಾಫಿ ತೋಟಗಳ ಸುವಾಸನೆಯ ಕಂಪು, ಪ್ರಶಾಂತ ವಾತಾವರಣ ನಿಮ್ಮನ್ನು ಮತ್ತಷ್ಟು ಪ್ರಸನ್ನಗೊಳಿಸುವುದಲ್ಲದೆ ನೂರು ಪ್ರತಿಶತದಷ್ಟು ನೈಜವಾದ ವಿಶ್ರಾಂತಿ ಪಡೆಯಲು ಸಹಕಾರಿಯಾಗುತ್ತದೆ. ನಿಮ್ಮ ಕುಟುಂಬದವರೊಡನೆ ಸಂತಸಮಯವಾದ ಕ್ಷಣಗಳು ನಿಮ್ಮದಾಗುತ್ತವೆ.

ಓಕರ್ ಮೂನ್ ಹಾಲಿಡೇಸ್, ಕೊಡಗು:

ಓಕರ್ ಮೂನ್ ಹಾಲಿಡೇಸ್, ಕೊಡಗು:

ಇನ್ನೂ ಕೊಡಗನ್ನು ಕರ್ನಾಟಕದ ಎಲ್ಲ ಭಾಗಗಳಿಂದಲೂ ಸುಲಭವಾಗಿ ತಲುಪಬಹುದಾಗಿದೆ. ಮಂಗಳೂರು, ಹಾಸನ, ಬೆಂಗಳೂರು, ಕೇರಳ ರಾಜ್ಯದ ಕಣ್ಣೂರು, ತಲಶೇರಿ ಮತ್ತು ವಯನಾಡಿನಿಂದ ಕೂಡಾ ಕೊಡಗಿಗೆ ರಸ್ತೆ ಸಂಪರ್ಕವಿದೆ. ಮಡಿಕೇರಿಯು ಬೆಂಗಳೂರಿನಿಂದ 270 ಹಾಗೂ ಮಂಗಳೂರಿನಿಂದ 138 ಕಿ.ಮೀ ಗಳಷ್ಟು ದೂರದಲ್ಲಿದೆ. ಇದಕ್ಕೆ ಹತ್ತಿರದಲ್ಲಿರುವ ರೈಲು ನಿಲ್ದಾಣವೆಂದರೆ ಮಂಗಳೂರು. ಸರಿ ಇನ್ನೇಕೆ ತಡ, ಇಂದೆ ನಿಮ್ಮ ಕುಟುಂಬದವರೊಂದಿಗೆ ಪುಷ್ಪಾಂಜಲಿ ಹೋಂ ಸ್ಟೇ ಗೆ ಕೆಲವು ದಿನಗಳ ಕಾಲ ಹಾಯಾಗಿ ವಿಶ್ರಾಂತಿ ಪಡೆಯಲು ತೆರಳಿರಿ. ನಿಮ್ಮ ಪ್ರಯಾಣ ಸುಖಕರವಾಗಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X