ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದಲ್ಲಿ ಇಲ್ಲದ ಪ್ರಾಣಿಗಳಿಲ್ಲ

Written by:
Updated: Friday, June 16, 2017, 18:20 [IST]
Share this on your social network:
   Facebook Twitter Google+ Pin it  Comments

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ಅತ್ಯಂತ ಸುಂದರವಾದ ತಾಣವಾಗಿದೆ. ಈ ಅಭಯಾರಣ್ಯವು ಕರ್ನಾಕದ ಸುಂದರ ಜಿಲ್ಲೆಯ ಕೊಡಗಿನ ಸೋಮವಾರ ಪೇಟೆ ತಾಲ್ಲೂಕಿನಲ್ಲಿದೆ. ಕರ್ನಾಕದ ವನ್ಯಜೀವಿ ಧಾಮಗಳಲ್ಲಿ ಈ ಪುಷ್ಪಗಿರಿಯು ಒಂದು. ಇಲ್ಲಿನ ಪ್ರಾಕೃತಿಕ ಸೌಂದರ್ಯ, ಮುಗಿಲೆತ್ತರದ ಮರಗಳು, ತಂಪಾದ ಗಾಳಿ, ನೀರಿನ ಝರಿಗಳ ಗಾನ, ಹಕ್ಕಿಗಳ ಇಂಪಾದ ಕಲರವ ಇವೆಲ್ಲವೂ ಪಡೆಯಬೇಕಾದರೆ ಒಮ್ಮೆ ಪುಷ್ಪಗಿರಿಗೆ ಹೋಗಬೇಕಾಗಿದೆ.

ಸಾಮಾನ್ಯವಾಗಿ ಮಕ್ಕಳಿಗೆ ಪುಸ್ತಕದಲ್ಲಿರುವ ಅಥವಾ ಅಂತರ್‍ಜಾಲದಿಂದ ಪ್ರಾಣಿಗಳನ್ನು ತೋರಿಸಿ ಸುಮ್ಮನೆ ಇದ್ದು ಬಿಡುತ್ತೇವೆ. ದೊಡ್ಡವರು ಹೇಳಿದ ಮಾತಿನ ಪ್ರಕಾರ ಪುಸ್ತಕದ ಬದನೆಕಾಯಿಗಿಂತ ಹೊರಗೆ ಕಲಿಯುವ ಕಲಿಕೆಯೇ ನಿಜವಾದ ಕಲಿಕೆ. ಈ ಮಾತು ಖಂಡಿತವಾಗಿಯೋ ನಿಜ. ಮಕ್ಕಳಿಗೆ ನೇರವಾಗಿ ಪ್ರಾಣಿಗಳ ಪರಿಚಯ ಮಾಡಿಸಿ ಪುಸ್ತಕದ ಜೊತೆ ಜೊತೆಗೆ ನೈತಿಕವಾದ, ವಾಸ್ತವವಾದ ಬದುಕನ್ನು ರೂಪಿಸುವುದು ಪ್ರತಿಯೊಬ್ಬ ತಂದೆ ತಾಯಿಯ ಕರ್ತವ್ಯವಾಗಿದೆ.

ಪ್ರಸ್ತುತ ಲೇಖನದಲ್ಲಿ ಪುಷ್ಪಕಗಿರಿಯಲ್ಲಿರುವ ವನ್ಯ ಜೀವಿ ಅಭಯಾರಣ್ಯಕ್ಕೆ ಒಮ್ಮೆ ಭೇಟಿ ಕೊಟ್ಟು ಬರೋಣ.

ಎಲ್ಲಿದೆ?

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ಕರ್ನಾಟದ ರಾಜ್ಯದ ಕೊಡಗು ಜಿಲ್ಲೆಯ ಸೋಮವಾರ ಪೇಟೆಯಲ್ಲಿದೆ. ಬೆಂಗಳೂರಿನಿಂದ ಈ ಅಭಯಾರಣ್ಯಕ್ಕೆ ಸುಮಾರು 287 ಕಿ,ಮೀಯಷ್ಟಿದೆ. ಸುಮಾರು 102 ಕಿ,ಮೀಯಷ್ಟು ಅಭಯಾರಣ್ಯವು ಹಬ್ಬಿಕೊಂಡಿದೆ.


PC:Altug Karakoc

ವಿಶ್ವ ಪಾರಂಪರಿಕ ತಾಣ

1987 ರಲ್ಲಿ ಈ ಸುಂದರವಾದ ಅಭಯಾರಣ್ಯಕ್ಕೆ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸೇರಿಸಲಾಗಿದೆ.


PC:Manamohana Holla K

ವ್ಯಾಪ್ತಿ

ಪುಷ್ಪಗಿರಿ ವನ್ಯಜೀವಿ ಧಾಮವು ಒಂದು ಕಡೆ ಕುಕ್ಕೇ ಸುಬ್ರಹ್ಮಣ್ಯ ಅರಣ್ಯದ ವ್ಯಾಪ್ತಿಯನ್ನು ಹೊಂದಿದೆ ಹಾಗೂ ಇನ್ನೊಂದು ಬಿಸಲ್ ರಿಸರ್ವ್ ಅರಣ್ಯವನ್ನು ಹೊಂದಿದೆ. ಈ ಅಭಯಾರಣ್ಯವನ್ನು ಆನೇಕ ಪರ್ವತದ ಪ್ರವಾಹಗಳ ಪಕ್ಕದಲ್ಲಿ ಕಡಿದಾದ ಭೂಪ್ರದೇಶಗಳು ಹಾಗೂ ಜಲಪಾತಗಳನ್ನು ಒಳಗೊಂಡಿದೆ.


PC:Kenny

ಪುಷ್ಪಗಿರಿ ಗಿರಿಶಿಖರ

ಈ ಅಭಯಾರಣ್ಯವು 160 ರಿಂದ 1712 ಮೀ ಎತ್ತರದಲ್ಲಿದೆ. ಪುಷ್ಪಗಿರಿಯನ್ನು ಅತ್ಯಂತ ಎತ್ತರದ ಶಿಖರ ಎಂದು ಕರೆಯುತ್ತಾರೆ. ಇಲ್ಲಿ ಹಲವಾರು ಜೌಗು ಪ್ರದೇಶಗಳನ್ನು ಕಾಣಬಹುದಾಗಿದೆ.


PC:bm.iphone

ದಟ್ಟ ಕಾಡು

ಈ ಅಭಯಾರಣ್ಯವು ಸುಮಾರು 70%ರಷ್ಟು ಅಭಯಾರಣ್ಯವನ್ನು ದಟ್ಟ ಕಾಡುಗಳಿಂದ ಅವೃತ್ತಗೊಂಡಿದೆ. ಅಭಯಾರಣ್ಯದ ಹೆಚ್ಚಿನ ಭಾಗವು ಅರಣ್ಯ ಪ್ರದೇಶದಿಂದ ಅವರಿಸಿಕೊಂಡಿದೆ.


PC:bm.iphone

ವನ್ಯಜೀವಿಗಳು

ಪುಷ್ಪಗಿರಿಯಲ್ಲಿ ಸಸ್ಯ ಹಾಗೂ ಪ್ರಾಣಿಗಳ ಸಮೃದ್ಧ ವೈವಿಧ್ಯಯಿದೆ. ಇಲ್ಲಿ ಚುಕ್ಕೆಗಳ ಜಿಂಕೆ, ಜೈಂಟ್ ಪ್ಪೈಯಿಂಗ್ ಅಳಿಲು, ಓಟರ್ ಸ್ಪೀಸೀಸ್, ಇಂಡಿಯನ್ ವೈಲ್ಡ್ ಡಾಗ್, ವೈಲ್ಟ್ ಪಿಗ್, ಪಟ್ಟೆ ಕುತ್ತಿಗೆಯ ಮುಂಗುಸಿ, ಸಾಂಬಾರ್, ಏಷ್ಯನ್ ಎಲಿಫೆಂಟ್, ಗೌರ್, ಇಂಡಿಯನ್ ಮುಂಟ್ಜಾಕ್ ಮತ್ತು ಮೌಸ್ ಜಿಂಕೆ ಇನ್ನೂ ಹಲವಾರು ಪ್ರಾಣಿ ಸಂಕುಲವನ್ನು ಇಲ್ಲಿ ಕಾಣಬಹುದಾಗಿದೆ.


PC:bm.iphone

ಪಕ್ಷಿ ಪ್ರಪಂಚ

ಈ ಪುಷ್ಪಗಿರಿಯಲ್ಲಿ ಎಂದೂ ನೋಡಿರದ ಪಕ್ಷಿ ಪ್ರಪಂಚವನ್ನು ಸವಿಯಬಹುದಾಗಿದೆ. ಇಲ್ಲಿ ನೀಲಗಿರಿ ಮರದ ಪಾರಿವಾಳ, ಮಲಬಾರ್ ಗ್ರೇ ಹಾನ್ರ್ವಿಲ್, ಗ್ರೇ ಹೆಡೆಡ್ ಬುಲ್ಬುಲ್, ನೀಲಿ ವಿಂಗ್ಡ್ ಪ್ಯಾರಕೆಟ್, ಸಣ್ಣ ಸೂರ್ಯ ಬರ್ಡ್ ಮುಂತಾದ ಹಕ್ಕಿಗಳನ್ನು ಕಾಣಬಹುದಾಗಿದೆ.

PC:bm.iphone

 

ಸರಿಸೃಪಗಳು

ಇಲ್ಲಿ ಅಲಿವ್ ಕಿಲ್ಬ್ಯಾಕ್, ಕಿಂಗ್ ಕೋಬ್ರಾ, ಇಂಡಿಯನ್ ರಾಕ್ ಪೈಥಾನ್, ಸಾಮಾನ್ಯ ನಾಗರ, ಇಲಿ ಹಾವುಗಳನ್ನು ಕಾಣಬಹುದಾಗಿದೆ.

PC:bm.iphone

 

ಭೇಡಿ ನೀಡಲು ಸಮಯ

ಈ ವನ್ಯ ಜೀವಿ ಧಾಮವು ಪ್ರವಾಸಿಗರಿಗೆ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

PC:bm.iphone

 

ಪ್ರವೇಶ ಶುಲ್ಕ

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಲು ಪ್ರವೇಶ ಶುಲ್ಕ 10 ರೂಪಾಯಿಯನ್ನು ಪಾವತಿಸಬೇಕಾಗುತ್ತದೆ.

PC:bm.iphone

 

ಸುತ್ತಾಡಿ ಬರಲು ತೆಗೆದುಕೊಳ್ಳುವ ಸಮಯ

ಈ ಸುಂದರವಾದ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವನ್ನು ಸುತ್ತಾಡಿ ಬರಲು ತೆಗೆದುಕೊಳ್ಳುವ ಸಮಯ 3 ರಿಂದ 4 ಗಂಟೆಗಳ ಕಾಲ ಒಂದು ಸುಂದರವಾದ ಪ್ರಂಪಚಕ್ಕೆ ಭೇಟಿ ನೀಡಬಹುದಾಗಿದೆ.

PC:Thomas Rousing

 

ಪುಷಗಿರಿ ಭೇಟಿ ನೀಡಲು ಉತ್ತಮವಾದ ಸಮಯ

ಈ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಲು ಉತ್ತಮವಾದ ಸಮಯ ನವೆಂಬರ್‍ನಿಂದ ಮಾರ್ಚ್‍ನವರೆಗೆ.

PC:TD Photography NL

 

ವಿಮಾನ ಮಾರ್ಗದ ಮೂಲಕ

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಕ್ಕೆ ಭೇಟಿ ನೀಡಲು ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ವಿಮಾನ ನಿಲ್ದಾಣ. ಇಲ್ಲಿಮದ 135 ಕಿ,ಮೀ ಬೇಕಾಗುತ್ತದೆ.

PC:Charlie Day

 

ರೈಲ್ವೆ ಮಾರ್ಗದ ಮೂಲಕ

ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಕ್ಕೆ ರೈಲ್ವೆ ಮಾರ್ಗದ ಮೂಲಕ ತಲುಪಲು ಸಮೀಪವಾದ ರೈಲ್ವೆ ನಿಲ್ದಾಣವೆಂದರೆ ಮೈಸೂರು. ಇಲ್ಲಿಂದ ಸುಮಾರು 146 ಕಿ,ಮೀನಷ್ಟು ದೂರದಲ್ಲಿದೆ.

PC:Daniel Lerps

 

ರಸ್ತೆ ಮಾರ್ಗದ ಮೂಲಕ

ಬೆಂಗಳೂರಿನಿಂದ ಕೊಡಗಿಗೆ 287 ಕಿ,ಮೀಯಷ್ಟು ತೆಗೆದುಕೊಳ್ಳುತ್ತದೆ. ಇಲ್ಲಿಗೆ ಬೆಂಗಳೂರಿನಿಂದ ಹಲವಾರು ಬಸ್ ಸಂಚಾರ ವ್ಯವಸ್ಥೆ ಇದೆ.

PC:chester Zoo

 

English summary

Pushpagiri Wildlife Sanctuary, Coorg

Pushpagiri Wildlife Sanctuary is one of the most important bird santuries of the world. It is located in the State of Karnataka. The sanctuary is in the Kogadu (Coorg) district in Somwarpet taluk. This wildlife sanctuary is one of the 21 well-known wildlife sanctuaries in the State of Karnataka, it holds importance because it is home to endangered and very rare species of birds.
Please Wait while comments are loading...