Search
  • Follow NativePlanet
Share
» »ಪುಷ್‍ಕರದ ಸ್ನಾನದಿಂದ ಮೋಕ್ಷದ ದಾರಿ

ಪುಷ್‍ಕರದ ಸ್ನಾನದಿಂದ ಮೋಕ್ಷದ ದಾರಿ

By Sowmyabhai

ರಾಜಸ್ಥಾನದ ಪುಷ್‍ಕರ್ ಸರೋವರವು ಅತ್ಯಂತ ಸುಂದರವಾದ ಸರೋವರಗಳಲ್ಲೇ ಒಂದಾಗಿದೆ. ಆಶ್ಚರ್ಯವೆನೆಂದರೆ ಈ ಸರೋವರವು ಅರ್ಧ ವೃತ್ತಾಕಾರದಿಂದ ಅವೃತ್ತಗೊಂಡಿರುವ ಪವಿತ್ರ ಜಲವಾಗಿದೆ. ಈ ಪವಿತ್ರ ಸರೋವರವನ್ನು ತೀರ್ಥರಾಜವೆಂದೂ ಸಹ ಕರೆಯಲಾಗುತ್ತದೆ. ಪ್ರಸುತ್ತ ಲೇಖನದಲ್ಲಿ ಪುಷ್‍ಕರದ ಸರೋವರದ ಮಹತ್ವವನ್ನು ತಿಳಿಯೋಣ.

How to Reach Pushkar by Bus

PC:k: Ekabhishek

ಈ ಸರೋವರಕ್ಕೆ ಒಂದು ಇತಿಹಾಸವಿದೆ ಅದೆನೆಂದರೆ ಹಿಂದು ಪುರಾಣದ ಪ್ರಕಾರ, ಬ್ರಹ್ಮದೇವನು ವಜ್ರನಾಭನೆಂಬ ಅರಸನನ್ನು ಸಂಹರಿಸಲು ಬಳಸಿದ ಒಂದು ಕಮಲದ ಹೂವಿನ ಪಕುಳಿಯಿಂದ ಈ ಸರೋವರವು ಉತ್ಪತ್ತಿಯಾಗಿದೆ ಎಂದು ಪುರಾಣಗಳು ತಿಳಿಸುತ್ತವೆ. ಈ ಸರೋವರವು ಸುಮಾರು 10 ಮೀಟರ್ ಆಳವನ್ನು ಹೊಂದಿದ್ದು, ಸರೋವರದ ಬಳಿ 300ಕ್ಕೂ ಅಧಿಕ ದೇವಾಲಯಗಳು ಹಾಗೂ 52 ಘಾಟ್‍ಗಳನ್ನು ಕಾಣಬಹುದು. ಇಲ್ಲಿಗೆ ಬರುವ ಭಕ್ತಾದಿಗಳು ಸಾಲು ಸಾಲಾಗಿ ಈ ಪವಿತ್ರ ಸರೋವರದಲ್ಲಿ ಸಾನ್ನ ಮಾಡುತ್ತಾರೆ. ಈ ಸರೋವರದ ಪವಿತ್ರ ಸ್ನಾನ ಮಾಡಿದರೆ ಸಕಲ ಪಾಪ, ರೋಗಗಳು, ಚರ್ಮವ್ಯಾಧಿಗಳೆಲ್ಲಾ ಪರಿಹಾರವಾಗಿ, ಮೋಕ್ಷ ದೊರೆಯುತ್ತದೆ ಎಂಬ ಕಾರಣದಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕಾರ್ತಿಕ ಪೌರಣಿಮದಂದು ಈ ಸರೋವರದಲ್ಲಿ ಸುಮಾರು 50.000 ಸಾವಿರ ಒಂಟೆಗಳಿಂದ ಉತ್ಸವ ನಡೆಸಲಾಗುತ್ತದೆ.

How to Reach Pushkar by Bus

PC:Tatai

ಪ್ರಮುಖ ಆಕರ್ಷಣೆಗಳು
ದೇವಾಲಯಗಳು: ಇಲ್ಲಿನ ಸರೋವರದ ಸುತ್ತಮುತ್ತ ಸುಮಾರು 500 ದೇವಾಲಯವಿದ್ದು, ಒಂದೆಸುರಿನಲ್ಲಿ ಎಲ್ಲಾ ದೇಗುಲವನ್ನು ಭೇಟಿ ನೀಡಬಹುದು. ಇಲ್ಲಿನ ಪ್ರಮುಖ ದೇವಾಲಯದಲ್ಲಿ ಒಂದಾದ ಬ್ರಹ್ಮ ದೇವಾಲಯ ಇದು ಅತ್ಯಂತ ಪುರಾತನವಾದುದು ಅಂದರೆ ಸುಮಾರು 2000 ಸಾವಿರ ವರ್ಷಗಳಿಗಿಂತಲೂ ಹಳೆಯದು. ಇಡೀ ಪ್ರಪಂಚದಲ್ಲೇ ಏಕೈಕ ಬ್ರಮ್ಮನ ದೇವಾಲಯ ಇದಾಗಿದೆ.

ಪ್ರಮುಖ ಘಾಟ್‍ಗಳು: ಈ ಸರೋವರದ ಬಳಿ ಸರಾಸರಿ 52 ಘಾಟ್‍ಗಳಿದ್ದು ಅವುಗಳಲ್ಲಿ ಪ್ರಮುಖವಾದ ಘಾಟ್‍ಗಳೆಂದರೆ, ವರಹ ಘಾಟ್, ಸಪ್ತಋಷಿ
ಘಾಟ್, ಗ್ವಾಲಿರ್ ಘಾಟ್, ಕೋಟ ಘಾಟ್, ಗೋವ ಘಾಟ್, ಯಾಗ್ ಘಾಟ್, ಜೈಪುರ್ ಘಾಟ್, ಕರಣೀ ಘಾಟ್ ಮತ್ತು ಗೊಂಗುರ್ ಘಾಟ್‍ಗಳಾಗಿವೆ.

How to Reach Pushkar by Bus

PC:Singh92karan

ಭೇಟಿ ನೀಡಲು ಉತ್ತಮ ಕಾಲಾವಧಿ
ಈ ಸರೋವರದಲ್ಲಿ ಕಾರ್ತಿಕ ಪೌರಣೀಮದಂದು ವಿಶೇಷವಾಗಿ ಒಂಟೆಗಳ ಉತ್ಸವವಿರುವುದರಿಂದ ಅಕ್ಟೋಬರ್‍ನಿಂದ ನವೆಂಬರ್‍ವರೆಗೂ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಲು ಉತ್ತಮವಾದ ಕಾಲಾವಧಿಯಾಗಿದೆ.

ಪುಷ್ಕರಕ್ಕೆ ತೆರಳುವ ಬಗೆ ಹೇಗೆ?

ವಿಮಾನ ಮಾರ್ಗದ ಮೂಲಕ: ಬೆಂಗಳೂರಿನಿಂದ ಜೈಪುರಕ್ಕೆ ವಿಮಾನಯಾನದಿಂದ ಪುಷ್ಕರಕ್ಕೆ ಸುಲಭವಾಗಿ ತಲುಪಬಹುದು. ಜೈಪುರದಿಂದ ಪುಷ್ಕರಕ್ಕೆ ಕೇವಲ 140 ಕಿ.ಮೀ ಅಂತರದಲ್ಲಿದೆ.

ರಸ್ತೆಯ ಮಾರ್ಗದ ಮೂಲಕ: ರಾಜಸ್ಥಾನ ಬೆಂಗಳೂರಿನಿಂದ ಅತ್ಯಂತ ದೀರ್ಘವಾದ ಪ್ರವಾಸವಾದ್ದರಿಂದ ಹತ್ತಿರದ ಪ್ರದೇಶಗಳಿಂದ ಬಸ್‍ನ ಮೂಲಕ ಹಲವಾರು ರಾಜ್ಯಗಳನ್ನು ಹಾದು ಹೋಗಬಹುದು.

ರೈಲ್‍ನ ಮಾರ್ಗದ ಮೂಲಕ: ರೈಲಿನಲ್ಲಿ ಪುಷ್ಕರಕ್ಕೆ ಪ್ರವಾಸ ಮಾಡುವಾಗ ಅಜ್‍ಮೀರ್ ರೈಲ್ವೆ ನಿಲ್ದಾಣದಿಂದ ಕೇವಲ 30 ನಿಮಿಷಗಳ ಕಾಲ ತೆಗೆದುಕೊಳ್ಳುವುದರಿಂದ ಇದೊಂದು ಉತ್ತಮವಾದ ಮಾರ್ಗವಾಗಿದೆ. ಈ ಮಾರ್ಗದ ಮೂಲಕ ಹಾದು ಹೋದಾಗ ಭಾರತದ ಪ್ರಸಿದ್ದ ಸ್ಥಳಗಳಾದ ದೆಹಲಿ, ಮುಂಬೈ, ಜೈಪುರ್, ಅಲಹಾಬಾದ್, ಲಕೋನೌ, ಭೋಪಾಲ್‍ಗಳೆಲ್ಲಾ ವಿಕ್ಷೀಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X