Search
  • Follow NativePlanet
Share
» »ಇಷ್ಟಾರ್ಥ ಈಡೇರಿದಲ್ಲಿ ಘಂಟೆ ನೀಡಿ ಕೃತಾರ್ಥರಾಗಿ

ಇಷ್ಟಾರ್ಥ ಈಡೇರಿದಲ್ಲಿ ಘಂಟೆ ನೀಡಿ ಕೃತಾರ್ಥರಾಗಿ

By Vijay

ಈ ದೇವಾಲಯ ಒಂದು ರೀತಿಯಲ್ಲಿ ವಿಶೇಷವೆಂದೆ ಹೇಳಬಹುದು. ಬಹುಶಃ ಇಲ್ಲಿ ಕಂಡುಬರುವ ನೋಟ ದೇಶದ ಮತ್ತಿನ್ಯಾವ ದೇವಾಲಯಗಳಲ್ಲಿಯೂ ಕಂಡುಬರಲಿಕ್ಕಿಲ್ಲ. ಆ ನಿಟ್ಟಿನಿಂದಲೂ ಇದು ಸಾಕಷ್ಟು ಜನರ ಗಮನ ಸೆಳೆಯುತ್ತದೆ. ಇದನ್ನೊಮ್ಮೆ ನೋಡಿದರೆ ಇದು ದೇವಾಲಯವೋ ಅಥವಾ ಘಂಟಾಲಯವೋ ಎಂಬ ಸಂದೇಹ ಮೂಡಿದರೆ ಅಚ್ಚರಿ ಪಡಬೇಕಾಗಿಲ್ಲ.

ಮೂಗಿನ ಮೇಲೆ ಬೆರಳಿಡುವಂತೆ ಮಾಡುವ ವಿಚಿತ್ರ ದೇವಾಲಯಗಳು

ಈ ದೇವಾಲಯದಲ್ಲಿ ಎಲ್ಲಿ ನೋಡಿದರಲ್ಲಿ ಬರಿ ಘಂಟೆಗಳೆ ಕಾಣಸಿಗುತ್ತವೆ. ಇದು ಘಂಟೆಗಳಿಗೆಂದೆ ಮುಡಿಪಾದ ದೇವಾಲಯವಾಗಿರಬಹುದೆಂದು ಅನಿಸುವುದು ಸಹಜ. ಆದರೆ ಇದೊಂದು ಶಕ್ತಿ ದೇವಿಯ ದೇವಾಲಯವಾಗಿದೆ. ಈ ಶಕ್ತಿ ದೇವಿಯನ್ನು ಘಂಟೇಶ್ವರಿ ಎಂಬ ಹೆಸರಿನಿಂದಲೆ ಆರಾಧಿಸಲಾಗುತ್ತದೆ.

ಇಷ್ಟಾರ್ಥ ಈಡೇರಿದಲ್ಲಿ ಘಂಟೆ ನೀಡಿ ಕೃತಾರ್ಥರಾಗಿ

ಚಿತ್ರಕೃಪೆ: Aditya Mahar

ಒಡಿಶಾ ರಾಜ್ಯದ ಸಂಬಲಪುರ ಪಟ್ಟಣದಲ್ಲಿರುವ ಘಂಟೇಶ್ವರಿಯ ಈ ದೇವಾಲಯವು ಸಂಬಲಪುರ ಜಿಲ್ಲೆಯಲ್ಲೆ ಹೆಚ್ಚು ಪ್ರಖ್ಯಾತವಾಗಿದ್ದು ಒಡಿಶಾ ರಾಜ್ಯದ ಹಲವಾರು ಭಾಗಗಳಿಂದ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತಾದಿಗಳು ಈ ದೇವಾಲಯಕ್ಕೆ ಭೆಟಿ ನೀಡುತ್ತಾರೆ ಹಾಗೂ ದೇವಿಗೆ ತಮ್ಮ ಪ್ರಾರ್ಥನೆ ಅರ್ಪಿಸುತ್ತಾರೆ.

ಇಷ್ಟಾರ್ಥ ಈಡೇರಿದಲ್ಲಿ ಘಂಟೆ ನೀಡಿ ಕೃತಾರ್ಥರಾಗಿ

ಚಿತ್ರಕೃಪೆ: Aditya Mahar

ಇಲ್ಲಿನ ವಿಶೇಷವೆಂದರೆ, ಈ ಶಕ್ತಿ ದೇವಿಯು ದುರದಿಂದ ಬಂದ ಭಕ್ತರ ಕಷ್ಟ-ದುಖಗಳನ್ನು ಕೇಳುತ್ತಾಳೆ ಹಾಗೂ ಅವರ ಬೇಡಿಕೆ, ಆಸೆಗಳು ನ್ಯಾಯಯುತವಾಗಿದ್ದಲ್ಲಿ ಅಲ್ಲದೆ ಅವರು ಸಂಪೂರ್ಣವಾಗಿ ದೇವಿಯನ್ನು ಭಕ್ತಿಯಿಂದ ನಂಬಿದ್ದಲ್ಲಿ ಅವರ ಎಲ್ಲ ಆಸೆಗಳು ಅತಿ ಶೀಘ್ರದಲ್ಲೆ ಈ ದೇವಿಯಿಂದ ಈಡೇರಿಸಲ್ಪಡುತ್ತದೆ.

ಇಷ್ಟಾರ್ಥ ಈಡೇರಿದಲ್ಲಿ ಘಂಟೆ ನೀಡಿ ಕೃತಾರ್ಥರಾಗಿ

ಚಿತ್ರಕೃಪೆ: Aditya Mahar

ಹೀಗೆ ಹರಕೆಗಳು, ಆಸೆಗಳು ಈಡೇರಿದ ನಂತರ ಆಯಾ ಭಕ್ತರು ಈ ದೇವಾಲಯಕ್ಕೆ ಮತ್ತೊಮ್ಮೆ ಭೇಟಿ ನೀಡಿ ಘಂಟೆಯೊಂದನ್ನು ದೇವಿಗೆ ಸಮರ್ಪಿಸಬೇಕೆಂಬ ನಿಯಮ, ಪದ್ಧತಿ ಮೊದಲಿನಿಂದಲೂ ಪ್ರಚಲಿತದಲ್ಲಿದೆ ಎಂದು ಹೇಳಲಾಗುತ್ತದೆ. ಹೀಗೆ ಎಲ್ಲೆಡೆ ನೋಡಿದರೂ ಈ ದೇವಾಲಯದಲ್ಲಿ ಘಂಟೆಗಳೆ ಹೆಚ್ಚು ಹೆಚ್ಚು ಕಂಡುಬರುತ್ತವೆ.

ಇಷ್ಟಾರ್ಥ ಈಡೇರಿದಲ್ಲಿ ಘಂಟೆ ನೀಡಿ ಕೃತಾರ್ಥರಾಗಿ

ಚಿತ್ರಕೃಪೆ: Aditya Mahar

ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ದೇವಿಯು ಅಪಾರ ಶಕ್ತಿಯ ಕುರಿತು. ಇಲ್ಲಿ ಕಂಡುಬರುವ ಅಪಾರ ಸಂಖ್ಯೆಯಲ್ಲಿರುವ ಘಂಟೆಗಳೆ ಇದಕ್ಕೆ ಸಾಕ್ಷಿಯಾಗಿವೆ. ಇದರರ್ಥ ಇಲ್ಲಿಗೆ ಭೇಟಿ ನೀಡಿ ದೇವಿಯನ್ನು ಬೇಡಿಕೊಂಡಿರುವ ಸಾಕಷ್ಟು ಜನರ ಇಚ್ಛೆಗಳು ಪೂರ್ಣಗೊಂಡಿರುವುದೆ ಇದಕ್ಕೆ ಉತ್ತರವಾಗಿದೆಯಲ್ಲವೆ?

ಇಷ್ಟಾರ್ಥ ಈಡೇರಿದಲ್ಲಿ ಘಂಟೆ ನೀಡಿ ಕೃತಾರ್ಥರಾಗಿ

ಚಿತ್ರಕೃಪೆ: Aditya Mahar

ಮೂರು ನೀರಿನ ತೊರೆಗಳು ಕೂಡಿ ಉಂಟಾಗಿರುವ ಮಹಾನದಿಯ ತಟದಲ್ಲಿ ಈ ಘಂಟೇಶ್ವರಿಯ ದೇವಾಲಯವಿದೆ. ಹಿಂದೆ ದೋಣಿಯಲ್ಲಿ ವಿಹರಿಸುತ್ತಿದ್ದವರಿಗೆ ಈ ದೇವಾಲಯ ಸಾಕಷ್ಟು ಸಹಾಯ ಮಾಡುತ್ತಿತ್ತು. ಇದನ್ನು ನಾವಿಕರು ದೀಪವಿಲ್ಲದ ದೀಪಗೃಹ (ಲೈಟ್ ಹೌಸ್) ಎಂದು ಕರೆಯುತ್ತಿದ್ದರು. ಕಾರಣ ಲೈಟ್ ಹೌಸ್ ನೀರಿನಲ್ಲಿರುವ ನಾವಿಕರಿಗೆ ದೀಪದ ಪ್ರಕಾಶದಿಂದ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿತ್ತು.

ಶಕ್ತಿಸ್ವರೂಪಿಣಿಯ ಶಕ್ತಿಶಾಲಿ ದೇವಾಲಯಗಳು

ಆದರೆ, ಈ ದೇವಾಲಯದಲ್ಲಿ ತೂಗಿ ಹಾಕಲಾದ ಅಪಾರ ಸಂಖ್ಯೆಯ ಘಂಟೆಗಳಿಂದ ಗಾಳಿ ಬೀಸುವಾಗ ಅದ್ಭುತವಾದ ಶಬ್ದವು ಸಾಕಷ್ಟು ದೂರದವರೆಗೆ ಕೇಳಿಬರುತ್ತಿತ್ತು. ಇದರಿಂದ ಇಲ್ಲಿ ಭೂಮಿಯಿರುವುದರ ಕುರಿತು ನಾವಿಕರು ಎಚ್ಚೆತ್ತುಕೊಳ್ಳುತ್ತಿದ್ದರು. ಅಲ್ಲದೆ ಮಹಾನದಿಯು ಬಿರುಗಾಳಿಯ ಸಂದರ್ಭದಲ್ಲಿ ಸಾಕಷ್ಟು ಉಗ್ರರೂಪ ತಾಳುತ್ತಿತ್ತು. ಈ ಸಂದರ್ಭದಲ್ಲಿ ರಾತ್ರಿಯ ಸಮಯದಲ್ಲಿ ದೊಡ್ಡದಾದ ಘಂಟಾನಾದ ಉಂಟಾಗಿ ದೋಣಿಯಲ್ಲಿರುವವರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಸಹಾಯವಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X