Search
  • Follow NativePlanet
Share
» »ಗಂಡಾಂತರದಿಂದ ಕಾಪಾಡುವ ಪ್ರತ್ಯಂಗಿರಾ ದೇವಿ!

ಗಂಡಾಂತರದಿಂದ ಕಾಪಾಡುವ ಪ್ರತ್ಯಂಗಿರಾ ದೇವಿ!

ಮಾಟ ಮಂತ್ರಗಳಿಗೆ ತಿರುಗು ಮಂತ್ರ ಹಾಕುವಂತಹ ಶಕ್ತಿ ಇರುವ ಪ್ರತ್ಯಂಗಿರಾ ದೇವಿಗೆ ಮುಡಿಪಾದ ವಿಶೇಷ ದೇವಾಲಯವೊಂದು ಬೆಂಗಳೂರಿಗೆ ಹತ್ತಿರದಲ್ಲಿರುವ ಹೊಸೂರಿನಲ್ಲಿ ನೆಲೆಸಿದೆ

By Vijay

ನಿರ್ಗುಣ ತತ್ವದಿಂದ ಬಂದ ಅಗಾಧ ಶಕ್ತಿ ದೇವಿಯೆ ಪ್ರತ್ಯಂಗಿರಾ ದೇವಿ. ನಿರ್ಗುಣ, ನಿರಾಕಾರಗಳನ್ನು ಯಾವುದನ್ನು ಸೂಚಿಸುತ್ತದೋ ಅದೆ ಈ ದೇವಿಯ ಸ್ಥಾನ. ಅಂದರೆ ಈ ಸ್ಥಿತಿಯಲ್ಲಿ ಯಾವುದೆ ರೀತಿಯ ಸಂಕಟಗಳಾಗಲಿ, ಅಪಾಯಗಳಾಗಲಿ, ಭಯಗಳಾಗಲಿ, ವಿಚಾರಗಳಾಗಲಿ, ಇಚ್ಛೆಗಳಾಗಲಿ ಏನು ಇರುವುದಿಲ್ಲ.

ಅಂದರೆ ಯಾವುದೂ ಇರದೆ ಇರುವ ಸ್ಥಿತಿ ಅದು. ಹಾಗಾಗಿ ಅದನ್ನು ಪ್ರತ್ಯಂಗಿರಾ ದೇವಿಗೆ ಪ್ರತಿನಿಧಿಸಲಾಗಿದೆ. ಅಂದರೆ ಈ ಲೋಕಾರ್ಥವಾಗಿ ಸರಳವಾಗಿ ಹೇಳಬೇಕೆಂದರೆ ಈ ದೇವಿಯನ್ನು ಆರಾಧಿಸುವವರಿಗೆ ಯಾವುದೆ ರೀತಿಯ, ಗಂಡಾಂತರವಾಗಲಿ, ಅಪಾಯಗಳಾಗಲಿ, ಶತ್ರು ಬಾಧೆಯಾಗಲಿ ಇಲ್ಲವೆ ಭಯವಾಗಲಿ ಇರುವುದೆ ಇಲ್ಲ ಎಂದರ್ಥ. ಅಷ್ಟು ಮಹತ್ವ ಪಡೆದಿದ್ದಾಳೆ ಪ್ರತ್ಯಂಗಿರಾ ದೇವಿ.

ಗಂಡಾಂತರದಿಂದ ಕಾಪಾಡುವ ಪ್ರತ್ಯಂಗಿರಾ ದೇವಿ!

ಚಿತ್ರಕೃಪೆ: Wayoyo

ಹಾಗಾಗಿ ಪ್ರತ್ಯಂಗಿರಾ ದೇವಿಯ ಕುರಿತು ಹಿಂದುಗಳಲ್ಲಿ ಅತ್ಯಂತ ವಿಶೇಷವಾದ ಸ್ಥಾನಮಾನಗಳಿವೆ. ಇನ್ನೂ ಹೆಚ್ಚಾಗಿ ತಿಳಿಯಬೇಕೆಂದರೆ ಸಾಕಷ್ಟು ಜನರು ಇಂದಿಗೂ ಮಾಟ, ಮಂತ್ರಶಕ್ತಿಗಳಲ್ಲಿ ನಂಬಿಕೆಯುಟ್ಟವರಾಗಿದ್ದಾರೆ. ಯಾರಾದರೂ ತಾವು ಮಾಟ-ಮಂತ್ರಶಕ್ತಿಗಳಿಗೆ ಒಳಗಾಗಿವೆಯೇನೊ ಎಮ್ಬ ಸಂದೇಶ ಉಂಟಾದರೆ ಸಾಮಾನ್ಯವಾಗಿ ಪ್ರತ್ಯಂಗಿರಾ ಹೋಮ ಮಾಡಿಸುತ್ತಾರೆ ಹಾಗೂ ಆಕೆಯ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಇನ್ನೂ ಪ್ರತ್ಯಂಗಿರಾ ದೇವಿಗೆ ಸಂಬಂಧಿಸಿದಂತೆ ಕೆಲವು ದೇವಾಲಯಗಳಿದ್ದು ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಮಾತ್ರವೆ ಅಂತಹ ದೇವಾಲಯಗಳನ್ನು ಕಾಣಬಹುದಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ತಮಿಳುನಾಡಿನಲ್ಲಿ ಪ್ರತ್ಯಂಗಿರಾ ದೇವಿಗೆ ಮುಡಿಪಾದ ಕೆಲವು ಪ್ರಮುಖ ದೇವಾಲಯಗಳನ್ನು ಕಾಣಬಹುದು.

ಗಂಡಾಂತರದಿಂದ ಕಾಪಾಡುವ ಪ್ರತ್ಯಂಗಿರಾ ದೇವಿ!

ಚಿತ್ರಕೃಪೆ: Wayoyo

ಅಂತಹ ಒಂದು ದೇವಾಲಯದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಅದೆ ತಮಿಳುನಾಡಿನ ಹೊಸೂರು ನಗರದಲ್ಲಿರುವ ಪ್ರತ್ಯಂಗಿರಾ ದೇವಿಯ ದೇವಾಲಯ. ಹೊಸೂರಿನ ಮೋರನಪಲ್ಲಿ ಎಂಬಲ್ಲಿ ಪ್ರತ್ಯಂಗಿರಾ ದೇವಿಯ ಈ ದೇವಾಲಯವಿದೆ. ಇದರ ವಿಶೇಷತೆ ಎಂದರೆ ರಾಜಗೋಪುರಕ್ಕೆ ಹೊಂದಿಕೊಂಡಂತೆಯೆ ವಿಶಾಲ ಕಾಯದ ಪ್ರತ್ಯಂಗಿರಾ ದೇವಿಯ ಪ್ರತಿಮೆಯಿರುವುದು.

ಇದು ಪ್ರತ್ಯಂಗಿರಾ ದೇವಿಯ ಏಕೈಕ ಅಷ್ಟು ದೊಡ್ಡದಾದ ಪ್ರತಿಮೆಯಾಗಿದೆ. ಪ್ರತಿನಿತ್ಯ ಹಾಗೂ ವಾರಾಂತ್ಯಗಳಲ್ಲಂತೂ ವಿಶೇಷವಾಗಿ ಜನಸಾಗರವೆ ದೇವಿಯ ದರ್ಶನ ಪಡೇಯಲೆಂದು ಈ ದೇವಾಲಯಕ್ಕೆ ಹರಿದುಬರುತ್ತದೆ. ಸಾಕಷ್ಟು ಹೊತ್ತು ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುವ ನೋಟ ವಾರಾಂತ್ಯದಲ್ಲಿ ಸಾಮಾನ್ಯವಾಗಿರುತ್ತದೆ.

ಗಂಡಾಂತರದಿಂದ ಕಾಪಾಡುವ ಪ್ರತ್ಯಂಗಿರಾ ದೇವಿ!

ಚಿತ್ರಕೃಪೆ: Wayoyo

ಇದೊಂದು ವಿಶಿಷ್ಟ ದೇವಾಲಯವೆಂದೆ ಹೇಳಬಹುದು. ಏಕೆಂದರೆ ಇಲ್ಲಿ ಪೂಜಿಸಲಾಗುವ ಇತರೆ ದೇವತೆಗಳೂ ಸಹ ಭಯಂಕರ ಹಾಗೂ ಶಕ್ತಿಶಾಲಿ. ಪ್ರತ್ಯಂಗಿರಾ ದೇವಿಯನ್ನು ಹೊರತುಪಡಿಸಿ ಇಲ್ಲಿ ಶರಭೇಶ್ವರ, ನರಸಿಂಹ, ಮಾರಿಯಮ್ಮನನ್ನೂ ಸಹ ವಿಶೇಶವಾಗಿ ಪೂಜಿಸಲಾಗುತ್ತದೆ. ಹೊಸೂರು ಬೆಂಗಳೂರಿಗೆ ಬಲು ಹತ್ತಿರದಲ್ಲಿದ್ದು ಸುಲಭವಾಗಿ ತೆರಳಬಹುದಾಗಿದೆ.

ತಮಿಳುನಾಡಿನಲ್ಲಿ ದೇವಿಗೆ ಮುಡಿಪಾದ ಪ್ರಮುಖ ದೇವಾಲಯಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X