ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಶನಿ ಕೃಪೆಗೆ ಪಾತ್ರರಾಗಬೇಕೆ? ಇಲ್ಲಿಗೆ ಭೇಟಿ ನೀಡಿ!

Written by:
Published: Tuesday, August 30, 2016, 12:35 [IST]
Share this on your social network:
   Facebook Twitter Google+ Pin it  Comments

ಹಿಂದುಗಳು ನಂಬುವಂತೆ ಅಥವಾ ಜ್ಯೋತಿಷ್ಯದ ಪ್ರಕಾರವಾಗಿ ಪ್ರತಿಯೊಬ್ಬರ ಜೀವನದಲ್ಲೂ ಶನಿಯು ಬಂದು ಹೋಗಲೇಬೇಕು. ಇದು ಯಾವಾಗ ಎಂಬುದು ಅವರವರ ಜಾತಕ ರಾಶಿಯ ಮೇಲೆ ಅವಲಂಬಿತವಾಗಿದೆ ಎನ್ನಲಾಗಿದೆ. ಇನ್ನೂ ಬಹುತೇಕರು ತಿಳಿದಿರುವ ಪ್ರಕಾರ ಶನಿಯು ಕೇವಲ ಕೆಡುಕುಗಳನ್ನಲ್ಲ ಅವರವರ ಕರ್ಮಗಳಿಗನುಸಾರವಾಗಿ ಫಲಗಳನ್ನು ನೀಡುತ್ತಾನೆನ್ನಲಾಗಿದೆ.

ಕ್ರಮಬದ್ಧವಾದ ನವಗ್ರಹಗಳ ಪವಿತ್ರ ಯಾತ್ರೆ

ಜಾತಕವನ್ನು ಅನುಸರಿಸುವವರ ಪ್ರಕಾರ ಶನಿ ದಶೆ ಇರುವವರು, ಸಾಡೆ ಸಾತಿಯನ್ನು ಅನುಭವಿಸುತ್ತಿರುವವರು ಅಥವಾ ಸಾಮಾನ್ಯವಾಗಿ ಎಲ್ಲರೂ ಶನಿ ದೇವರನ್ನು ಪೂಜಿಸ್ವುದರ ಮೂಲಕ ಅವನ ಕೃಪೆಗೆ ಪಾತ್ರರಾಗಬಹುದೆಂದು ಹೇಳಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಶನಿ ದೇವರ ಪ್ರಭಾವ ಉಚ್ಛ ಮಟ್ಟದಲ್ಲಿರುವ ಸ್ಥಳದಲ್ಲಿ ಶನಿಯನ್ನು ಪೂಜಿಸಿದರೆ ಉತ್ತಮ ಫಲ ದೊರಕಬಹುದೆಂದು ನಂಬಲಾಗುತ್ತದೆ.

ಶನಿ ಕೃಪೆಗೆ ಪಾತ್ರರಾಗಬೇಕೆ? ಇಲ್ಲಿಗೆ ಭೇಟಿ ನೀಡಿ!

ಶನಿ ದೇವರು, ಸಾಂದರ್ಭಿಕ, ಚಿತ್ರಕೃಪೆ: Yogesa

ಇದಕ್ಕೆಂದೆ ನವಗೃಹ ಯಾತ್ರೆ ಪ್ರಸಿದ್ಧವಾಗಿದೆ. ಮೂಲತಃ ನವಗೃಹ ಯಾತ್ರೆ ಪ್ರತಿಯೊಬ್ಬನ ಜೀವನದಲ್ಲಿರುವ ಜಾತಕಕ್ಕೆ ಸಂಬಂಧಿಸಿದಂತೆ ಒಂಭತ್ತು ಗೃಹಗಳನ್ನು ಪೂಜಿಸುವುದಾಗಿದೆ. ಅದರಲ್ಲಿ ಶನಿ ದೇವನೂ ಒಬ್ಬ. ಶನಿ ದೇವನ ಜಾಗೃತ ಸ್ಥಳವಾಗಿರುವ ದೇವಾಲಯದ ಕುರಿತು ಈ ಲೇಖನದಲ್ಲಿ ತಿಳಿಸಲಾಗಿದೆ. ಇದನ್ನೆ ತಿರುನಲ್ಲಾರ್ ಶನೀಶ್ವರ ದೇವಾಲಯ ಎಂದು ಕರೆಯಲಾಗುತ್ತದೆ.

ಒಂಭತ್ತು ಶಕ್ತಿಶಾಲಿ ನವಗೃಹ ದೇವಾಲಯಗಳ ಪೈಕಿ ಒಂದಾಗಿರುವ ತಿರುನಲ್ಲಾರ್ ಶನೀಶ್ವರನ್ ದೇವಾಲಯವು ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿ ಅಥವಾ ಪುದುಚೆರಿಯಲ್ಲಿರುವ ಕಾರೈಕಾಲ್ ಜಿಲ್ಲೆಯ ತಿರುನಲ್ಲಾರ್ ಎಂಬ ಪಟ್ಟಣದಲ್ಲಿದೆ. ಕಾರೈಕಾಲ್ ನಿಂದ ಬೆಂಗಳೂರು, ತಂಜಾವೂರು, ಚೆನ್ನೈ, ಎರ್ನಾಕುಲಂ ಹಾಗೂ ಮುಂಬೈಗಳಿಗೆ ರೈಲುಗಳು ಲಭ್ಯವಿದೆ. ಇನ್ನೂ ತಿರುನಲ್ಲಾರ್ ಕಾರೈಕಾಲ್ ಪಟ್ಟಣದಿಂದ ಕೇವಲ 7 ಕಿ.ಮೀ ದೂರವಿದೆ.

ಶನಿ ಕೃಪೆಗೆ ಪಾತ್ರರಾಗಬೇಕೆ? ಇಲ್ಲಿಗೆ ಭೇಟಿ ನೀಡಿ!

ಚಿತ್ರಕೃಪೆ: Rsmn

ತಿರುನಲ್ಲಾರ್ ನಲ್ಲಿರುವ ಮುಖ್ಯ ದೇವಾಲಯವು ಮೂಲತಃ ಶಿವನ ರೂಪವಾದ ದರ್ಭಾರಣ್ಯೇಶ್ವರನಿಗೆ ಮುಡಿಪಾಗಿದೆ. ಹಾಗಾಗಿ ತಿರುನಲ್ಲಾರ್ ನನ್ನು ಹಿಂದೆ ದರ್ಭಾರಣ್ಯ ಕ್ಷೇತ್ರವೆಂದೆ ಕರೆಯಲಾಗುತ್ತಿತ್ತು. ಈ ಮುಖ್ಯ ದೇವಾಲಯದ ಸಮ್ಕೀರ್ಣದಲ್ಲೆ ಸ್ಥಿತವಿರುವ ಶನೀಶ್ವರನ ದೇವಾಲಯದಿಂದಾಗಿ ತಿರುನಲ್ಲಾರ್ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದೆ.

ಈ ಶನೀಶ್ವರನ ದೇವಾಲಯ ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ ಇಲ್ಲಿ ಯಾರು ಬಂದು ಶನಿಯನ್ನು ಭಕ್ತಿಯಿಂದ ಪೂಜಿಸಿದ್ದಾರೊ ಅವರು ಜೀವನದ ಸಾಕಷ್ಟು ಸಮಸ್ಯೆಗಳಿಂದ ಮುಕ್ತಿ ಪಡೆದಿದ್ದಾರೆ ಅಥವಾ ಕಷ್ಟಗಳು ಅತಿ ಗಂಭೀರ ಸ್ವರೂಪದಿಂದ ತಿಳಿಗೊಂಡು ಸಹಿಸಲು ಸಾಧ್ಯವಾಗುವಷ್ಟು ಪರಿವರ್ತಿತವಾಗಿವೆ ಎನ್ನಲಾಗುತ್ತದೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ದಂತಕಥೆಯೂ ಪ್ರಚಲಿತದಲ್ಲಿದೆ.

ಶನಿ ಕೃಪೆಗೆ ಪಾತ್ರರಾಗಬೇಕೆ? ಇಲ್ಲಿಗೆ ಭೇಟಿ ನೀಡಿ!

ಚಿತ್ರಕೃಪೆ: VasuVR

ಹಿಂದೆ ಏಳನೇಯ ಶತಮಾನದಲ್ಲಿ ಮದುರೈ ಅನ್ನು ರಾಜಧಾನಿ ಮಾಡಿಕೊಂಡು ಆಳುತ್ತಿದ್ದ ಪಾಂಡ್ಯರ ಕಾಲದಲ್ಲಿ ಜೈನ ಧರ್ಮದ ಪ್ರಭಾವ ಪ್ರದೇಶದಲ್ಲಿ ಹೆಚ್ಚಾಗತೊಡಗಿತು. ಪಾಂಡ್ಯ ರಾಜ ನೀನ್ರಾ ಸೀರ್ ನೆಡುಮಾರನ್ ಎಂಬಾತನು ಜೈನ ಧರ್ಮದ ಪ್ರಭಾವಕ್ಕೊಳಗಾಗಿ ಅದನ್ನು ಸ್ವೀಕರಿಸಿದನು. ಇದರಿಂದ ಆತನ ಮಂತ್ರಿ ಹಾಗೂ ಆತನ ರಾಣಿ ಬೇಸರಿಸಿಕೊಂಡು ಆ ಪ್ರದೇಶದಲ್ಲಿ ಬಂದಿದ್ದ ತಿರುಜ್ಞಾನ ಸಂಬಂದರ್ ಎಂಬ ಸಂತರ ಸಹಾಯ ಕೇಳಿದರು.

ಶನಿ ಕೃಪೆಗೆ ಪಾತ್ರರಾಗಬೇಕೆ? ಇಲ್ಲಿಗೆ ಭೇಟಿ ನೀಡಿ!

ಚಿತ್ರಕೃಪೆ: Dinesh Kumar (DK)

ಹೀಗೆ ತಿರುಜ್ಞಾನ ಸಂಬಂದರ್ ಆಸ್ಥಾನಕ್ಕೆ ಬಂದಾಗ ಜೈನರ ಹಾಗೂ ಆ ಸಂತನ ಮಧ್ಯೆ ಯಾವ ಧರ್ಮದ ಶಕ್ತಿ ಹೆಚ್ಚೆಂಬುದರ ಕುರಿತು ವಾಗ್ವಾದ ನಡೆಯಿತು ಹಾಗೂ ಕೊನೆಯದಾಗಿ ತಾಳೆ ಎಲೆಗಳ ಮೇಲೆ ಬರೆಯಲಾಗಿರುವ ಎರಡು ಧರ್ಮಾಳ ಶ್ಲೋಕಗಳಿರುವ ಎಲೆಗಳನ್ನು ಬೆಂಕಿಯಲ್ಲಿ ಹಾಕಿ ಯಾವುದು ಉಳಿಯುತ್ತದೆಂದು ನೋಡಲಾಯಿತು.

ಗಣೇಶ ಕರಾವಳಿಯ 6 ಮುಖ್ಯ ಗಣೇಶನ ದೇವಾಲಯಗಳು

ಹೀಗೆ ಮಾಡಿದ ಸಂದರ್ಭದಲ್ಲಿ ಜೈನ ಶ್ಲೋಕಗಳಿರುವ ಎಲೆಗಳು ಬೆಂಕಿಗೆ ಆಹುತಿಯಾದವೇಂದೂ ಆದರೆ ತಿರುಜ್ಞಾನರ ಶ್ಲೋಕಗಳಿರುವ ಎಲೆಗಳಿಗೆ ಬೆಂಕಿಯ ಸ್ಪರ್ಶವೂ ಆಗಲಿಲ್ಲವೆಂದು ದಂತಕಥೆಯ ಪ್ರಕಾರವಾಗಿ ಹೇಳಲಾಗುತ್ತದೆ. ತಿರುಜ್ಞಾನರ್ ಸಂತನ ಆ ಶ್ಲೋಕಗಳನ್ನು ಈ ಪ್ರಸಿದ್ಧ ದೇವಾಲಯದಲ್ಲೆ ರಚಿಸಿಲಾಗಿತ್ತೆಂದು ಹೇಳಲಾಗಿದೆ.

ಕಾರೈಕಾಲ್ ಗಿರುವ ರೈಲುಗಳು

English summary

Powerful Tirunallar Saneeswaran Temple

Thirunallar Saniswaran temple is considered to be the powerful temple of the Lord Shani. It is one among the famous navagraha yatra temples. It is located in the Thirunallar town of Karaikal district in Pondicherry the Union Territory of India.
Please Wait while comments are loading...