Search
  • Follow NativePlanet
Share
» »ಕರ್ನಾಟಕದ ಈ ಸುಂದರ ಅರಮನೆಗಳಿಗೆ ಭೇಟಿ ನೀಡಿ

ಕರ್ನಾಟಕದ ಈ ಸುಂದರ ಅರಮನೆಗಳಿಗೆ ಭೇಟಿ ನೀಡಿ

By Vijay

ಇಂದು ಬರೀ 1 ಬಿಹೆಚ್‍ಕೆ, 2 ಬಿಹೆಚ್‍ಕೆ ಇದ್ದರೆ ಸಾಕು ಶ್ರೀಮಂತರೆನಿಸಿಕೊಳ್ಳುವ ಕಾಲ. ಅದೆ ಹಿಂದಿನ ಸಮಯದಲ್ಲಿ ಅಂದರೆ ರಾಜರಾಳುತ್ತಿದ್ದ ಸಂದರ್ಭದಲ್ಲಿ ಮನೆಗಳೆಲ್ಲ ಕೊನೆಗೆ ಜಾಗದ ದೃಷ್ಟಿಯಿಂದಾರರೂ ಇಂದಿನ ಅರಮನೆಗಳಿಗೆ ಹೋಲುವಂತಿದ್ದವು. ಇನ್ನೂ ಅಂದಿನ ಅರಮನೆಗಳು ಹೇಗಿರುತ್ತಿದ್ದವು ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ.

ಬುಕ್ಕಿಂಗ್ ಖಜಾನಾದಿಂದ ಹೋಟೆಲ್ ಬುಕ್ಕಿಂಗ್ ಮೇಲೆ 50% ರಷ್ಟು ಕಡಿತ ಪಡೆಯಿರಿ

ಹಿಂದೆ ರಾಜರು ತಮ್ಮ ಪರಿವಾರದೊಂದಿಗೆ ವಾಸ ಮಾಡುತ್ತಿದ್ದ ಜಾಗವು ಸಾಮಾನ್ಯವಾಗಿ ಅರಮನೆಗಳೆಂದು ಕರೆಯಲ್ಪಡುತ್ತಿದ್ದವು. ಭವ್ಯ ಹಾಗೂ ವಿಶಾಲವಾದ ಕಟ್ಟಡ, ಹಲವಾರು ಕೋಣೆಗಳು, ಪರಿಕರರಿಗೆ ನಿರ್ದಿಷ್ಟ ಸ್ಥಳ, ಭವ್ಯ ಉದ್ಯಾನ, ಕೊಳ ಮುಂತಾದವುಗಳು ಅರಮನೆಯ ಸಾಮಾನ್ಯ ಲಕ್ಷಣಗಳು.

ವಿಶೇಷ ಲೇಖನ : ದೇಶದ ಅತ್ಯದ್ಭುತ ಕೋಟೆಗಳು

ಇಂದಿನ ಯುಗದಲ್ಲಿ ಅರಮನೆಗಳು ಭವ್ಯ ಪಂಚತಾರಾ ಹೋಟೆಲುಗಳಾಗಿ ಇಲ್ಲವೆ ಪ್ರವಾಸಿ ಆಕರ್ಷಣೆಗಳಾಗಿ ಉಳಿದಿವೆ. ಪ್ರಸ್ತುತ ಲೇಖನದ ಮೂಲಕ ಕರ್ನಾಟಕದಲ್ಲಿರುವ ಕೆಲ ಪ್ರಮುಖ ಅರಮನೆಗಳ ಕುರಿತು ತಿಳಿಯಿರಿ ಹಾಗೂ ಅವಕಾಶ ದೊರೆತರೆ ಇವುಗಳಿಗೆ ಭೇಟಿ ನೀಡಲು ಮರೆಯದಿರಿ.

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಶಿವಪ್ಪ ನಾಯಕನ ಅರಮನೆ: ಇದು ಶಿವಮೊಗ್ಗದಲ್ಲಿದೆ. ಒಂದಾನೊಂದು ಕಾಲದಲ್ಲಿ ನಾಯಕನಾಗಿದ್ದ ಶಿವಪ್ಪ ನಾಯಕನು ವಾಸ ಮಾಡುತ್ತಿದ್ದ ಮನೆ ಇದಾಗಿದ್ದು ಇಂದಿಗೂ ಶಿವಮೊಗ್ಗದಲ್ಲಿ ಅರಮನೆ ಎಂಬ ಹೆಸರಿನಿಂದ ಮಾತ್ರವೆ ಜನಜನಿತವಾಗಿದೆ.

ಚಿತ್ರಕೃಪೆ: Anuradha Shankar

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಇದು ಅರಮನೆ ಆಗಿದ್ದರೂ ಸಹ ನಾವು ಸಾಮಾನ್ಯವಾಗಿ ಅಂದುಕೊಳ್ಳುವ ಹಾಗೆ ಅಷ್ಟೊಂದು ದೊಡ್ಡದಾಗಿಲ್ಲ. ಆದರೂ ಇದರ ಒಳಾಂಗಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇಲ್ಲಿನ ಕಲಾತ್ಮಕತೆಯು ರಾಜನಂತಹ ವ್ಯಕ್ತಿ ವಾಸಯೋಗ್ಯವಾಗಿರುವುದನ್ನು ಮನಗಾಣಬಹುದು. ಅಲ್ಲದೆ ಇದರ ಹಿಂಭಾಗ ಹಾಗೂ ಉದ್ಯಾನದಲ್ಲಿ ಸ್ಥಳೀಯವಾಗಿ ದೊರಕಿದ ಪುರಾತನ ವಿಗ್ರಹಗಳು ಹಾಗೂ ಶಾಸನಗಳ ಸಂಗ್ರಹಾಲಯವಿದೆ.

ಚಿತ್ರಕೃಪೆ: Anuradha Shankar

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಜಗನ್ಮೋಹನ ಅರಮನೆ: ಮೈಸೂರು ನಗರದಲ್ಲಿ ಕಂಡುಬರುವ ಈ ಅರಮನೆಯನ್ನು 1861 ರಲ್ಲಿ ನಿರ್ಮಿಸಲಾಗಿದ್ದು, ಮೈಸೂರಿನ ಆಡಳಿತಗಾರರಾಗಿದ್ದ ವಡೇಯರ್ ರಾಜರುಗಳಿಂದ ಈ ಅರಮನೆ ಬಳಸಲ್ಪಡುತ್ತಿತ್ತು.

ಚಿತ್ರಕೃಪೆ: Vedamurthy J

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಮೈಸೂರಿನ ಏಳು ಅರಮನೆಗಳಲ್ಲಿ ಒಂದಾಗಿರುವ ಈ ಅರಮನೆಯು ಈಗ ಆರ್ಟ್ ಗ್ಯಾಲರಿಯಾಗಿದ್ದು, ಸಭೆ ಸಮಾರಂಭಗಳಿಗೆ ಬಳಸಲ್ಪಡುತ್ತದೆ. ಇದು ಪ್ರಮುಖವಾಗಿ ಅದ್ಭುತ ಚಿತ್ರಕಾರ ರಾಜಾ ರವಿ ವರ್ಮನ ಕುಂಚಿನಿಂದ ಜೀವ ಪಡೆದ ಅದ್ಭುತ ವರ್ಣಚಿತ್ರಗಳಿಗೆ ಆಶ್ರಯವಾಗಿದೆ. ರವಿ ವರ್ಮನ ಕುಂಚದ ಕಲೆಯನ್ನು ಕೆಲ ಚಿತ್ರಗಳ ರೂಪದಲ್ಲಿ ಸ್ಲೈಡುಗಳಲ್ಲಿ ನೋಡಿ.

ಚಿತ್ರಕೃಪೆ: Praveenp

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ರಾಜಾ ಹರಿಶ್ಚಂದ್ರನ ವ್ಯಥೆಯನ್ನು ತೋರಿಸುವ ಮನ ಕಲುಕುವ ವರ್ಣ ಚಿತ್ರ.

ಚಿತ್ರಕೃಪೆ: Praveenp

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಪಾಂಡವ ಹಾಗೂ ಕೌರವರ ನಡುವೆ ಕೃಷ್ಣ ಸಂಧಾನಕಾರನಾಗಿ...

ಚಿತ್ರಕೃಪೆ: Praveenp

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಶ್ರೀಕೃಷ್ಣನು ತನ್ನ ಹೆತ್ತ ಪಾಲಕರನ್ನು ಭೇಟಿ ಮಾಡಿದ ಕ್ಷಣ.

ಚಿತ್ರಕೃಪೆ: Redtigerxyz

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ರಾಜಾ ರವಿ ವರ್ಮನ ಕುಂಚದಲ್ಲರಳಿದ ಸಂಗೀತಗಾರರ ಒಂದು ಸಮೂಹ. ಜಗನ್ಮೋಹನ ಅರಮನೆಯಲ್ಲಿ...

ಚಿತ್ರಕೃಪೆ: Ranveig

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ರಾವಣ ಸೀತೆಯನ್ನು ಅಪಹರಿಸಿ ಕರೆದೊಯ್ಯುತ್ತಿರುವಾಗ ತಡೆಯಲು ಪ್ರಯತ್ನಿಸಿ ಪ್ರಾಣ ತೆತ್ತ ಜಟಾಯುವಿನ ಪ್ರಸಂಗವನ್ನು ವಿವರಿಸುವ ತೈಲ ವರ್ಣ ಚಿತ್ರ.

ಚಿತ್ರಕೃಪೆ: Redtigerxyz

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಮಗುವಿಗೆ ಹಾಲುಣಿಸುತ್ತಿರುವ ತಾಯಿಯ ಚಿತ್ರವನ್ನು ರವಿ ವರ್ಮನು ಕಲಾತ್ಮಕವಾಗಿ ಬಿಡಿಸಿದ ರೀತಿ. ಇಂತಹ ಕೆಲವು ಅದ್ಭುತ ಕಲಾತ್ಮಕತೆಯ ತೈಲ ವರ್ಣಚಿತ್ರಗಳನ್ನು ಜಗನ್ಮೋಹನ ಅರಮನೆಗೆ ಭೇಟಿ ನೀಡಿದಾಗ ಕಾಣಬಹುದು.

ಚಿತ್ರಕೃಪೆ: Ranveig

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಲಲಿತಾ ಮಹಲ್ : ಮೈಸೂರಿನ ಎರಡನೆಯ ಅತಿ ದೊಡ್ಡ ಅರಮನೆ ಇದಾಗಿದೆ. ನಾಲ್ಕನೆಯ ಕೃಷ್ಣರಾಜ ವಡೇಯರ್ ಅವರು 1921 ರಲ್ಲಿ ಈ ಭವ್ಯ ಅರಮನೆಯನ್ನು ನಿರ್ಮಿಸಿದ್ದಾರೆ.

ಚಿತ್ರಕೃಪೆ: Ezhuttukari

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಭಾರತದ ವೈಸ್ ರಾಯ್ ಅವರ ಪ್ರತ್ಯೇಕವಾದ ವಾಸಕ್ಕೆಂದು ಈ ಅರಮನೆಯ ನೀರ್ಮಾಣ ಮಾಡಲಾಗಿತ್ತು. ಲಂಡನ್ನಿನ ಸೇಂಟ್ ಪೌಲ್ ಕ್ಯಾಥೇಡ್ರಲ್ ಗೆ ಹೋಲುವ ರೀತಿಯಲ್ಲಿ ಇದರ ನಿರ್ಮಾಣ ಮಾಡಲಾಗಿದೆ. ಶುದ್ಧ ಶ್ವೇತ ವರ್ಣದ ಈ ಅದ್ದೂರಿ ಅರಮನೆಯು 1974 ರಲ್ಲಿ ಸಾಂಪ್ರದಾಯಿಕ ಹೋಟೆಲ್ ಆಗಿ ಪರಿವರ್ತನಗೊಂಡಿತು.

ಚಿತ್ರಕೃಪೆ: Curt Smith

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಹಿಂದಿನ ವೈಭವವನ್ನು ನಕಲು ಮಾಡಿಯೆ ಆದರೂ ಒಂದು ವಿಶಿಷ್ಟ ಅನುಭೂತಿ ನೀಡುವ ಹೋಟೆಲ್ ಸುತ್ತಲೂ ತಿರುಗಾಡಿಸುವ ಕುದುರೆ ಗಾಡಿ ಸವಾರಿ.

ಚಿತ್ರಕೃಪೆ: Curt Smith

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಅರಮನೆಯ ಮೇಲಿನಿಂದ ಕಂಡುಬರುವ ಸುತ್ತಲಿನ ಅದ್ಭುತ ನೋಟ.

ಚಿತ್ರಕೃಪೆ: Curt Smith

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಮೈಸೂರು ಅರಮನೆ: ಮೈಸೂರು ಅರಮನೆಯು ಅತಿ ಪ್ರಸಿದ್ಧಿಯನ್ನು ಹೊಂದಿದ್ದು, ಮೈಸೂರು ನಗರಕ್ಕೆ ಭೇಟಿ ಕೊಡುವ ಎಲ್ಲ ಪ್ರವಾಸಿಗರಲ್ಲೂ ಅತ್ಯಂತ ಸೂಚಿತ ಸ್ಥಳವಾಗಿದೆ. ಅರಮನೆಯಲ್ಲಿ ಇಂಡೋ-ಅರೇಬಿಯನ್, ದ್ರಾವಿಡ, ರೋಮನ್ ಮತ್ತು ಓರಿಯೆಂಟಲ್ ವಾಸ್ತುಶಿಲ್ಪ ಶೈಲಿಗಳು ಪ್ರದರ್ಶಿತವಾಗಿದೆ.

ಚಿತ್ರಕೃಪೆ: Muhammad Mahdi

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಅರಮನೆಯು, 44.2 ಮೀ ಎತ್ತರದ ಐದು ಅಂತಸ್ತಿನ ಗೋಪುರವನ್ನು ಹೊಂದಿದ್ದು ಅದರ ಮೇಲಿನ ಗುಮ್ಮಟವನ್ನು ಚಿನ್ನದಲ್ಲಿ ಕೊರೆಯಲಾಗಿದೆ. ನಿಜವಾಗಿಯೂ ಇದೊಂದು ಪ್ರಪಂಚದಲ್ಲೆ ಅದ್ಭುತ ಮಾನವ ನಿರ್ಮಿತ ಪ್ರವಾಸಿ ಆಕರ್ಷಣೆಯಾಗಿದ್ದು, ಪ್ರತಿಷ್ಠಿತ ಪತ್ರಿಕೆಯಾದ 'ನಿವ್ ಯಾರ್ಕ್ ಟೈಮ್ಸ್' ಕೂಡ ಈ ತಾಣವನ್ನು ಜಗತ್ತಿನಲ್ಲಿ 31 ನೋಡಲೇ ಬೇಕಾದ ಪಟ್ಟಿಯಲ್ಲಿ ನಮೂದಿಸಿದೆ.

ಚಿತ್ರಕೃಪೆ: Jim Ankan Deka

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು, ರಾಜವಂಶಸ್ಥರ ವೈಭವದ ಉಡುಗೆತೊಡುಗೆಗಳು, ಚಿತ್ರ ಕಲಾಕೃತಿ ಮತ್ತು ಉಪಯೋಗಿಸುತ್ತಿದ್ದ ಒಡವೆಗಳನ್ನು ಪ್ರತ್ಯೇಕವಾದ ಪ್ರದರ್ಶನಾ ಕೋಣೆಗಳಲ್ಲಿ ಕಾಣಬಹುದು.

ಚಿತ್ರಕೃಪೆ: Arian Zwegers

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ನಾಲ್ಕುನಾಡು ಅರಮನೆ: ಈ ವಿಶಿಷ್ಟ ಅರಮನೆಯು ಕೊಡಗು ನಾಡಿನಲ್ಲಿದೆ. ಕೊಡಗು ಬಳಿಯ ಯಾವಕುಪಾಡಿ ಎಂಬ ಹಳ್ಳಿಯ ಬಳಿ ಈ ಅರಮನೆಯಿದೆ. 1791 ರಿಂದ 1794 ರ ಮಧ್ಯೆ ಈ ಅರಮನೆಯ ನಿರ್ಮಾಣವಾಗಿದೆ. ಕೊಡಗಿನ ಕೊನೆಯ ದೊರೆ ಚಿಕ್ಕ ವೀರರಾಜೇಂದ್ರರು ಇಲ್ಲಿ ಆಶ್ರಯ ಪಡೆದಿದ್ದರು.

ಚಿತ್ರಕೃಪೆ: Hitha Nanjappa

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಬೆಂಗಳೂರು ಅರಮನೆ: ಬೆಂಗಳೂರು ಅರಮನೆಯು ಸದಾಶಿವನಗರ ಮತ್ತು ಜಯಮಹಲ ಮಧ್ಯದ, ನಗರದ ಹೃದಯ ಭಾಗವಾದ ಪ್ಯಾಲೇಸ್ ಉದ್ಯಾನದಲ್ಲಿದೆ. 45000 ಚದರ ಅಡಿ ವಿಸ್ತಿರ್ಣ ಹೊಂದಿರುವ ಈ ಅರಮನೆಯ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು 82 ವರ್ಷಗಳು ಬೇಕಾಯಿತು.ಇದರ ಸೌಂದರ್ಯವು ಎಷ್ಟೊಂದು ಹೆಸರುವಾಸಿಯಾಗಿದೆ ಎಂದರೆ, ಒಮ್ಮೆ ನೀವು ಮುಖದ್ವಾರದ ಮೂಲಕ ಒಳಗೆ ಪ್ರವೇಶಿಸಿದರೆ, ಅದರ ಅದ್ವಿತೀಯ ಸೌಂದರ್ಯವು ನಿಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಅರಮನೆಯು ಇತ್ತಿಚಿಗಷ್ಟೆ ನವೀಕರಣಗೊಂಡಿದೆ.

ಚಿತ್ರಕೃಪೆ: Nikkul

ಸುಂದರ ಅರಮನೆಗಳು:

ಸುಂದರ ಅರಮನೆಗಳು:

ಟಿಪ್ಪು ಬೇಸಿಗೆ ಅರಮನೆ: ಬೆಂಗಳೂರಿನ ಕೆ.ಆರ್ ಮಾರುಕಟ್ಟೆಯ ಕೋಟೆಯ ಬಳಿಯಿದೆ ಟಿಪ್ಪುವಿನ ಬೇಸಿಗೆ ಅರಮನೆ. ಈ ಅರಮನೆಯ ಕಾಮಗಾರಿಯನ್ನು 1791 ರಲ್ಲಿ ಪೂರ್ಣಗೊಳಿಸಲಾಯಿತು. ಇದು ಕಲಾಸಿಪಾಳ್ಯಂ ಬಸ್ಸು ನಿಲ್ದಾಣಕ್ಕೆ ಹತ್ತಿರವಾಗಿದ್ದು ಇದರ ಪಕ್ಕದಲ್ಲಿಯೆ ಕೋಟೆ ವೆಂಕಟರಮಣನ ದೊಡ್ಡ ದೇವಸ್ಥಾನವನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Pamri

http://en.wikipedia.org/wiki/File:Tipu_Sultans_summer_palace_bangalore_frontview.jpg

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X