ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಮೋಡಿ ಮಾಡುವ ಪಾಂಡಿಚೆರಿ ತಾಣಗಳು

Written by: Divya
Updated: Monday, March 20, 2017, 15:15 [IST]
Share this on your social network:
   Facebook Twitter Google+ Pin it  Comments

ಭವ್ಯವಾದ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುವ ತಾಣಗಳಲ್ಲಿ ಪಾಂಡಿಚೆರಿಯು ಒಂದು. ಇಲ್ಲಿ ಬಿಜಾಪುರದ ಸುಲ್ತಾನರು, ಡಚ್ಚರು, ಫ್ರೆಂಚರು, ಪಾಂಡ್ಯರು, ವಿಜಯನಗರ ಅರಸರು ಆಳಿಹೋಗಿದ್ದಾರೆ. ಇವರ ನೆನಪಿಗಾಗಿ ಅನೇಕ ಐತಿಹಾಸಿಕ ತಾಣಗಳು ಹಾಗೂ ಸುಂದರ ಕಲಾಕೃತಿಯ ದೇಗುಲಗಳು ಇಂದಿಗೂ ಕಂಗೊಳಿಸುತ್ತಿವೆ.

ತಾಂತ್ರಿಕವಾಗಿ ಮುಂದುವರಿದ ಈ ತಾಣದಲ್ಲಿ ಪ್ರವಾಸಿಗರು ಬಯಸುವಂತಹ ಕಾಫಿ ಮಳಿಗೆ, ಶಾಪಿಂಗ್ ಮಾಲ್, ಮದ್ಯ ಪ್ರಿಯರಿಗಾಗಿ ವಿನೂತನ ಶೈಲಿಯ ಬಾರ್ ರೆಸ್ಟೋರೆಂಟಗಳು, ಮನಸ್ಸಿಗೆ ಮುದನೀಡುವ ಸುಂದರ ಸಮುದ್ರ ತೀರಗಳು ಹಾಗೂ ಪವಿತ್ರ ಕ್ಷೇತ್ರಗಳನ್ನು ಒಳಗೊಂಡಿದೆ. ಬೆಂಗಳೂರಿನಿಂದ 271 ಕಿ.ಮೀ. ವ್ಯಾಪ್ತಿಯಲ್ಲಿರುವ ಈ ತಾಣದಲ್ಲಿ ಅನೇಕ ಸುಂದರ ಪ್ರವಾಸ ಸ್ಥಳಗಳಿವೆ. ಅವುಗಳ ಪರಿಚಯ ನಮಗಿದ್ದರೆ ಪ್ರವಾಸ ಸರಾಗವಾಗಿ ಆಗುತ್ತದೆ.

ಮನಕುಲ ವಿನಾಯಕ ದೇವಸ್ಥಾನ

ಪಾಂಡಿಚೆರಿಯಲ್ಲಿರುವ ಪುರಾತನ ಕಾಲದ ಪ್ರಸಿದ್ಧ ದೇವಾಲಯಗಳಲ್ಲಿ ಮನಕುಲ ವಿನಾಯಕ ದೇಗುಲವು ಒಂದು. ಬಂಗಾಳಕೊಲ್ಲಿ ಸಮುದ್ರ ತೀರದಿಂದ 400 ಮೀ. ಅಂತರದಲ್ಲಿದೆ. ಫ್ರೆಂಚರ ಆಡಳಿತದ ಪೂರ್ವದಲ್ಲಿಯೇ ಈ ದೇವಾಲಯವಿತ್ತು. ನಂತರ ಫ್ರೆಂಚರು ತಮ್ಮ ಅಧಿಕಾರಕ್ಕೆ ತೆಗೆದುಕೊಂಡರು ಎನ್ನಲಾಗುತ್ತದೆ. ಈ ದೇವಾಲಯದಲ್ಲಿ ಗಣೇಶನು 16 ಅವತಾರಗಳಲ್ಲಿ ಇರುವುದನ್ನು ನೋಡಬಹುದು. ಪೂರ್ವಕ್ಕೆ ಮುಖವಾಗಿರುವ ಈ ಗಣೇಶನನ್ನು ಭುವನೇಶ್ವರ ಗಣಪತಿ ಎಂತಲೂ ಕರೆಯುತ್ತಾರೆ. ಈ ದೇಗುಲ ಪ್ರತಿ ದಿನ ಬೆಳಗ್ಗೆ 5.45 ರಿಂದ 12.30ರ ವರೆಗೆ ಹಾಗೂ ಸಂಜೆ 4 ರಿಂದ 9.30 ರವರೆಗೆ ತೆರೆದಿರುತ್ತದೆ.
PC: wikipedia.org

ಕಡಲ ತೀರದ ವಾಯು ವಿಹಾರ

ಫ್ರೆಂಚ್ ವಸಾಹತು ಕಾಲೂನಿಯು ಕಡಲ ತೀರದ ವಾಯು ವಿಹಾರಕ್ಕೆ ಸೂಕ್ತ ಪ್ರದೇಶ. ಸುಮಾರು 1.5 ಕಿ.ಮೀ ಉದ್ದದಲ್ಲಿ ಕಡಲ ತೀರದಲ್ಲಿಯೇ ರಸ್ತೆ ಮಾರ್ಗವಿದೆ. ಇಲ್ಲಿ ಸಂಜೆಯ ವೇಳೆ ವಾಯು ವಿಹಾರ ಕೈಗೊಳ್ಳಬಹುದು. ಪ್ರಕೃತಿಯ ಸುಂದರ ದೃಶ್ಯವನ್ನು ಸೆರೆ ಹಿಡಿಯಲು ಯೋಗ್ಯವಾದ ಈ ತಾಣದಲ್ಲಿ ಮಹಾತ್ಮ ಗಾಂಧಿಯ ಪ್ರತಿಮೆ ಇರುವುದು ನೋಡಬಹುದು. ಇಲ್ಲಿಗೆ ಹತ್ತಿರವಾಗಿ ಒಂದು ಲೈಟ್ ಹೌಸ್ ಸಹ ಇದೆ. ಇದು ಪುರಾತನ ಕಾಲದಿಂದಲೂ ಅತ್ಯಂತ ಆಕರ್ಷಕ ತಣವಾಗಿರುವುದರಿಂದ ಜನಜಂಗುಳಿ ಹೆಚ್ಚಾಗಿಯೇ ಇರುತ್ತವೆ.
PC: flickr.com

ಪ್ಯಾರಡೈಸ್ ಸಮುದ್ರ ತೀರ

ಚುನ್ನಂಬಾರ್‍ನಲ್ಲಿರುವ ಈ ಸಮುದ್ರ ತೀರ ಪಾಂಡಿಚೆರಿ ನಗರ ಪ್ರದೇಶಕ್ಕೆ ಹತ್ತಿರ. ಸುವರ್ಣ ಬಣ್ಣದ ಮರಳು ರಾಶಿಯಿಂದ ಕೂಡಿರುವ ಈ ತೀರದಲ್ಲಿ ಸುಂದರ ಚಿತ್ರಗಳನ್ನು ಸೆರೆ ಹಿಡಿಯಬಹುದು. ಇದಕ್ಕೆ ಸಮೀಪದಲ್ಲೇ ಹಿನ್ನೀರಿನ ತಾಣವಿದೆ. ಇಲ್ಲಿಯೂ ಜಲಕ್ರೀಡೆಯನ್ನು ಆಡಬಹುದು. ಮಳೆಗಾಲದಲ್ಲಿ ಈ ತಾಣ ನಯನ ಮನೋಹರವಾಗಿರುತ್ತದೆ.
PC: flickr.com

ಯೇಸುವಿನ ಸೇಕ್ರೆಡ್ ಹಾರ್ಟ್ ಬೆಸಿಲಿಕಾ

ಕ್ರೈಸ್ತರ ಪವಿತ್ರ ಕ್ಷೇತ್ರವಾದ ಈ ತಾಣ ಪಾಂಡಿಚೆರಿಯ ದಕ್ಷಿಣ ಹೆದ್ದಾರಿ ಮಾರ್ಗದಲ್ಲಿದೆ. 1895ರಲ್ಲಿ ನಿರ್ಮಾಣ ಗೊಂಡ ಈ ದೇಗುಲ ವಿಶಿಷ್ಟ ವಿನ್ಯಾಸದಲ್ಲಿ ನೆಲೆಗೊಂಡಿದೆ.
PC: wikipedia.org

ರಾಕ್ ಕಡಲು

ಈ ಕಡಲ ತೀರವನ್ನು ಗಾಂಧಿ ಬೀಚ್, ವಾಯುವಿಹಾರ ಕಡಲ ತೀರ ಎಂತಲೂ ಕರೆಯುತ್ತಾರೆ. ಇದು ನಗರದ ಹೃದಯ ಭಾಗದಲ್ಲಿದೆ. ಈ ಕಡಲ ತೀರದಲ್ಲಿರುವ ಕಲ್ಲುಗಳ ರಾಶಿಯ ಮೇಲೆ ಕುಳಿತು ಸಮುದ್ರ ಸುಂದರ ಸೊಬಗನ್ನು ಸವಿಯಬಹುವುದು. ಇಲ್ಲಿಯ ಸೂರ್ಯೋದಯ ಹಾಗೂ ಸೂರ್ಯಾಸ್ತದ ಸೌಂದರ್ಯವನ್ನು ತಪ್ಪದೆ ವೀಕ್ಷಿಸಬೇಕು.
PC: flickr.com

ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಕ್ಯಾಥೆಡ್ರಲ್

ಕ್ಯಾಥೆಡ್ರಲ್ ಚರ್ಚ್ ಅನ್ನು ಸಾಂಬಾ ಕೋವಿಲ್ ಎಂತಲೂ ಕರೆಯುತ್ತಾರೆ. 300 ವರ್ಷದ ಇತಿಹಾಸವನ್ನು ಹೊಂದಿರುವ ಈ ದೇಗುಲ ಸುಂದರ ವಿನ್ಯಾಸದಿಂದ ಕೂಡಿದೆ.
PC: wikipedia.org

ಪ್ರಶಾಂತತೆಯ ಸಮುದ್ರ ತೀರ

ಕೊಟ್ಟಕುಪ್ಪಂ ಕಡಲು ಎಂತಲೂ ಕರೆಯುವ ಈ ಸಮುದ್ರ ತೀರ ಜನ ಜಂಗುಳಿಯಿಂದ ದೂರವಿದೆ. ಹಾಗಾಗಿಯೇ ಇದೊಂದು ಶಾಂತತೆಯಿಂದ ಕೂಡಿರುವ ಸಮುದ್ರ ತೀರ ಎಂದು ಕರೆಯುತ್ತಾರೆ. ಇಲ್ಲಿ ಪ್ರಶಾಂತವಾದ ವಾತಾವರಣ ಇರುವುದರಿಂದ ನಮ್ಮವರೊಂದಿಗೆ ಮುಕ್ತವಾಗಿ ಸಮಯ ಕಳೆಯಬಹುದು. ಕಡಲ ದಡದಲ್ಲಿ ವಿಶಾಲವಾದ ಪ್ರದೇಶವಿರುವುದರಿಂದ ಕೆಲವು ಮನರಂಜನೆಯ ಆಟಗಳನ್ನು ಆಡಬಹುದು.
PC: flickr.com

ಭಾರತಿ ಉದ್ಯಾನ

ಪಾಂಡಿಚೆರಿಯ ಪ್ರಮುಖ ಆಕರ್ಷಕ ಕೇಂದ್ರಗಳಲ್ಲಿ ಭಾರತಿ ಉದ್ಯಾನವೂ ಒಂದು. ಉದ್ಯಾನದ ಮಧ್ಯ ಭಾಗದಲ್ಲಿ ಆಯಿ ಮಂಟಪ ಎನ್ನುವ ಸಮಾಧಿಯನ್ನು ಕಾಣಬಹುದು. ಹಸಿರು ಸಿರಿಯಿಂದ ಕೂಡಿರುವ ಈ ಉದ್ಯಾನ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ.
PC: wikimedia.org

ಬಟಾನಿಕಲ್ ಉದ್ಯಾನ

ಇದು ಪಾಂಡಿಚೆರಿಯ ದಕ್ಷಿಣ ಭಾಗದಲ್ಲಿರುವ ಹೊಸ ಬಸ್ ನಿಲ್ದಾಣದ ಬಳಿಯಿದೆ. ಇದರ ಗೇಟ್‍ಅನ್ನು ಫ್ರೆಂಚ್ ವಾಸ್ತುಶಿಲ್ಪದ ನೆನಪಿಗಾಗಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಉದ್ಯಾನದ ಮರಗಿಡಗಳು ಹಾಗೂ ವಿಶೇಷ ಆಕೃತಿಗಳು ಫ್ರೆಂಚ್ ಶೈಲಿಯಲ್ಲೇ ಕತ್ತರಿಸಲಾಗಿವೆ. ವಾರದ ರಜೆಯಲ್ಲಿ ಸಂಗೀತ ಕಾರಂಜಿಯನ್ನು ನಡೆಸುತ್ತಾರೆ. ಹಲವು ಬಗೆಯ ವಿಶೇಷ ಗಿಡ-ಮರಗಳೇ ಉದ್ಯಾನದ ಪ್ರಮುಖ ಆಕರ್ಷಣೆ.
PC: wikipedia.org

ಮಾತ್ರಿಮಂದಿರ

37 ವರ್ಷದ ಹಿಂದೆ ನಿರ್ಮಾಣಗೊಂಡ ಮಾತ್ರಿಮಂದಿರ ಇಲ್ಲಿಯ ಸುಂದರ ಪ್ರವಾಸ ತಾಣಗಳಲ್ಲೊಂದು. ಧ್ಯಾನಕ್ಕೆ ಸೀಮಿತವಾಗಿರುವ ಈ ಮಂದಿರ ಸುತ್ತಲೂ ಹಸಿರು ಉದ್ಯಾನವನಗಳಿಂದ ಕೂಡಿದೆ. ಗುಮ್ಮಟದ ಆಕೃತಿಯಲ್ಲಿ ರಚನೆಗೊಂಡಿದ್ದು, ಚಿನ್ನದ ಡಿಸ್ಕ್ ಗಳ  ರಚನೆಯಿಂದ ಕೂಡಿದೆ. ಇವು ಸೂರ್ಯನ ಕಿರಣಕ್ಕೆ ಆಕರ್ಷಕವಾಗಿ ಹೊಳೆಯುತ್ತವೆ. ಇದಕ್ಕೆ ಆಧಾರವಾಗಿ ನಾಲ್ಕು ಕಂಬಗಳನ್ನು ಇಡಲಾಗಿದೆ.
PC: wikipedia.org

Read more about: pondicherry
English summary

Places to Visit in Pondicherry

If peace and a break is the most sough after, then Pondicherry is surely one of the choicest holiday destinations in South India. The town offers a unique experience with its mix of modern heritage and spiritual culture. With a predominantly historical background, Pondicherry takes one centuries back in time.
Please Wait while comments are loading...