Search
  • Follow NativePlanet
Share
» »ಊಟಿಯಲ್ಲಿ ನೀವು ಭೇಟಿ ನೀಡಲೇಬೇಕಾದ 5 ಅದ್ಭುತ ಪ್ರವಾಸಿ ತಾಣಗಳು

ಊಟಿಯಲ್ಲಿ ನೀವು ಭೇಟಿ ನೀಡಲೇಬೇಕಾದ 5 ಅದ್ಭುತ ಪ್ರವಾಸಿ ತಾಣಗಳು

ಊಟಿ ಒಂದು ಅತ್ಯುತ್ತಮವಾದ ಪ್ರವಾಸಿತಾಣ. ಇಲ್ಲಿನ ವಾತಾವರಣ, ಪ್ರಕೃತಿ ಸೌಂದರ್ಯಕ್ಕೆ ಮರುಳಾಗದ ಜನರು ಯಾರು ಇಲ್ಲ. ಹೆಚ್ಚಾಗಿ ನವ ದಂಪತಿಗಳು ಇಲ್ಲಿಗೆ ಮಧುಚಂದ್ರಕ್ಕೆ ಭೇಟಿ ನೀಡುವ ತಾಣ ಎಂದು ಪ್ರಸಿದ್ಧಿಯನ್ನು ಪಡೆದಿದೆ.

ಊಟಿ ಒಂದು ಅತ್ಯುತ್ತಮವಾದ ಪ್ರವಾಸಿತಾಣ. ಇಲ್ಲಿನ ವಾತಾವರಣ, ಪ್ರಕೃತಿ ಸೌಂದರ್ಯಕ್ಕೆ ಮರುಳಾಗದ ಜನರು ಯಾರು ಇಲ್ಲ. ಹೆಚ್ಚಾಗಿ ನವ ದಂಪತಿಗಳು ಇಲ್ಲಿಗೆ ಮಧುಚಂದ್ರಕ್ಕೆ ಭೇಟಿ ನೀಡುವ ತಾಣ ಎಂದು ಪ್ರಸಿದ್ಧಿಯನ್ನು ಪಡೆದಿದೆ. ದೇಶ, ವಿದೇಶಗಳಿಗೂ ಕೂಡ ಊಟಿ ಪ್ರಖ್ಯಾತಿ ಪಡೆದಿದೆ. ಊಟಿ ತಮಿಳುನಾಡು ರಾಜ್ಯದಲ್ಲಿದೆ. ಊಟಿ ಬೆಂಗಳೂರಿನಿಂದ ಸುಮಾರು 266 ಕಿ,ಮೀ ದೂರದಲ್ಲಿದ್ದು, ಇದು ಸಮುದ್ರ ಮಟ್ಟದಿಂದ ಸುಮಾರು 7,500 ಅಡಿ ಎತ್ತರದಲ್ಲಿದೆ.

ಊಟಿಯಲ್ಲಿ ಒಟ್ಟು 48 ಪ್ರವಾಸಿ ತಾಣಗಳಿವೆ. ಹಾಗಾಗಿ ಪ್ರವಾಸಿಗರು ಒಂದೇ ಪ್ರದೇಶದಲ್ಲಿ ಸುಮಾರು 48 ಅದ್ಭುತ ತಾಣವನ್ನು ಸವಿಯಬಹುದಾಗಿದೆ. ಪ್ರವಾಸಿಗರು ಊಟಿಯಲ್ಲಿನ ಎಲ್ಲಾ ಸುಂದರವಾದ ಸ್ಥಳಗಳಿಗೆ ಭೇಟಿ ನೀಡಲು 3 ರಿಂದ 4 ದಿನಗಳವೆರಗೆ ಇರಬೇಕಾಗುತ್ತದೆ. ಒಮ್ಮೆ ಊಟಿಗೆ ಭೇಟಿ ನೀಡಿದಾಗ ಲೇಖನದಲ್ಲಿ ತಿಳಿಸುವ ಸುಂದರವಾದ ಸ್ಥಳಗಳಿಗೆ ಒಮ್ಮೆ ಭೇಟಿ ನೀಡಿ ಆನಂದಿಸಿ.

ಪ್ರಸ್ತುತ ಲೇಖನದಲ್ಲಿ ಊಟಿಯಲ್ಲಿ ನೀವು ನೋಡಲೇಬೇಕಾದ 5 ಅದ್ಭುತವಾದ ತಾಣದ ಬಗ್ಗೆ ತಿಳಿಯಿರಿ.

ಬೋಟಾನಿಕಲ್ ಗಾರ್ಡನ್

ಬೋಟಾನಿಕಲ್ ಗಾರ್ಡನ್

ಊಟಿಯಲ್ಲಿರುವ ಬೋಟಾನಿಕಲ್ ಗಾರ್ಡನ್ ಅತ್ಯಂತ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಈ ಗಾರ್ಡನ್ ಸುಮಾರು 22 ಹೆಕ್ಟೆರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಈ ಉದ್ಯಾನವನವು ಸಮುದ್ರ ಮಟ್ಟದಿಂದ ಸುಮಾರು 2400 ಮೀಟರ್ ಎತ್ತರದಲ್ಲಿದೆ.


PC:Swaminathan

ಬೋಟಾನಿಕಲ್ ಗಾರ್ಡನ್

ಬೋಟಾನಿಕಲ್ ಗಾರ್ಡನ್

ಇಲ್ಲಿ ಹಲವಾರು ರೀತಿಯ ಸಸ್ಯಗಳನ್ನು ಕಾಣಬಹುದಾಗಿದೆ. ಅಪರೂಪದ ಹೂವುಗಳು ಮತ್ತು ಪೊದೆಗಳನ್ನು ಇಲ್ಲಿ ಕಂಡು ಆನಂದಿಸಬಹುದಾಗಿದೆ. ಇಲ್ಲಿನ ವೃಕ್ಷಗಳು ಹಲವಾರು ವರ್ಷಗಳಷ್ಟು ಪುರಾತನವಾದುದು. ಇಲ್ಲಿ ಸುಮಾರು 20 ದಶಲಕ್ಷ ಹಳೆಯ ಪಳೆಯುಳಿಕೆಯುಳ್ಳ ಮರಗಳಿವೆ. ತಮಿಳುನಾಡಿನ ತೋಟಗಾರಿಕಾ ಇಲಾಖೆಯು ಈ ಉದ್ಯಾನದ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಬೋಟಾನಿಕಲ್ "ಬೇಸಿಗೆಯ ಕಾಲ"ದ ಉತ್ಸವಕ್ಕೆ ಹೆಸರುವಾಸಿ.

PC:Adam Jones

ದೊಡ್ಡಬೆಟ್ಟ ಪೀಕ್

ದೊಡ್ಡಬೆಟ್ಟ ಪೀಕ್

ಈ ದೊಡ್ಡಬೆಟ್ಟ ಪೀಕ್ ಊಟಿಯಲ್ಲಿನ ಅತ್ಯಂತ ಎತ್ತರವಾದ ಬೆಟ್ಟವಾಗಿದೆ. ಇದು ಸುಮಾರು 2,623 ಮೀಟರ್ ಎತ್ತರದಲ್ಲಿದೆ. ಈ ಬೆಟ್ಟವನ್ನು ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ಈ ಬೆಟ್ಟದಿಂದ ಸುಂದರವಾದ ಕಣಿವೆಗಳು, ಕೊಯಮತ್ತೂರು ಬಯಲು ಮತ್ತು ಮೈಸೂರಿನ ಸಮತಟ್ಟಾದ ಎತ್ತರದ ಪ್ರದೇಶಗಳು ಈ ಬೆಟ್ಟದ ಪೀಕ್‍ನಿಂದ ಕಣ್ಣಾರೆ ಕಂಡು ಅನುಭವಿಸಬಹುದು.

PC:grish gopi

ದೊಡ್ಡಬೆಟ್ಟ ಪೀಕ್

ದೊಡ್ಡಬೆಟ್ಟ ಪೀಕ್

ವಿಶೇಷವೆನೆಂದರೆ ತಮಿಳುನಾಡು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆಯು ಟೆಲಿಸ್ಕೋಪ್ ಹೌಸ್ ಅನ್ನು ನಿರ್ವಹಿಸುತ್ತದೆ. ಇದರಿಂದ ಪ್ರವಾಸಿಗರು ಸುಲಭವಾಗಿ ಬೆಟ್ಟದ ಮೇಲಿಂದ ಸುಂದರವಾದ ಪ್ರದೇಶಗಳ ವೀಕ್ಷಣೆಯನ್ನು ಕಾಣಬಹುದಾಗಿದೆ.

PC:Keshav Mukund Kandhadai

ಅವಲಾಂಚೆ ಅಭಯಾರಣ್ಯ

ಅವಲಾಂಚೆ ಅಭಯಾರಣ್ಯ

ಅವಲಾಂಚೆ ಅಭಯಾರಣ್ಯವು ನೀಲಗಿರಿಯ ಮಧ್ಯೆಯಲ್ಲಿರುವ ಸುಂದರವಾದ ಅಭಯಾರಣ್ಯವಾಗಿದೆ. ಈ ಅವಲಾಂಚೆ ಅಭಯಾರಣ್ಯವು ಊಟಿಯಿಂದ ಸುಮಾರು 25 ಕಿ,ಮೀ ದೂರದಲ್ಲಿದೆ. ಈ ಸುಂದರವಾದ ಅಭಯಾರಣ್ಯದಲ್ಲಿ ಶೊಲಾ ಮರಗಳು, ಆರ್ಕಿಡ್ಸ್ ಮರಗಳನ್ನು ಕಾಣಬಹುದಾಗಿದೆ. ಈ ಅಭಯಾರಣ್ಯದಲ್ಲಿ ಜೀಪ್ ಸಫಾರಿ ಕೂಡ ಆನಂದಿಸಬಹುದಾಗಿದೆ.

PC:YOUTUBE

ಅವಲಾಂಚೆ ಅಭಯಾರಣ್ಯ

ಅವಲಾಂಚೆ ಅಭಯಾರಣ್ಯ

ಈ ಅಭಯಾರಣ್ಯದಲ್ಲಿ ಹಲವಾರು ವೈವಿಧ್ಯಮಯವಾದ ಸಸ್ಯ ಹಾಗೂ ಪ್ರಾಣಿಗಳನ್ನು ಹೊಂದಿದೆ. ಅರಣ್ಯದಲ್ಲಿ ಅಡ್ಡಾಡಲು ಇಷ್ಟ ಪಡುವವರಿಗೆ ಈ ಅವಲಾಂಚೆ ಅಭಯಾರಣ್ಯ ಸೂಕ್ತವಾದುದು. ಈ ಅಭಯಾರಣ್ಯದ ಸರೋವರದಲ್ಲಿ ದೋಣಿ ವಿಹಾರ ಸೌಲಭ್ಯವಿದೆ. ನಿಮ್ಮ ಸಂಗಾತಿ ಅಥವಾ ಸ್ನೇಹಿತರ ಜೊತೆಗೆ ಮಾಡಬಹುದಾಗಿದೆ. ಈ ಸುಂದರವಾದ ಅಭಯಾರಣ್ಯಕ್ಕೆ ಭೇಟಿ ನೀಡಲು ಉತ್ತಮವಾದ ಕಾಲಾವಧಿಯೆಂದರೆ ಅದು ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ.


PC:YOUTUBE

ಲ್ಯಾಂಬ್ಸ್ ರಾಕ್(ಕೂನೂರ್)

ಲ್ಯಾಂಬ್ಸ್ ರಾಕ್(ಕೂನೂರ್)

ಊಟಿಯ ಕೂನೂರಿನಿಂದ ಸುಮಾರು 8 ಕಿ,ಮೀ ದೂರದಲ್ಲಿ ಲ್ಯಾಂಬ್ಸ್ ರಾಕ್ ಪ್ರವಾಸಿತಾಣವಿದೆ. ಲ್ಯಾಂಬ್ ರಾಕ್‍ನ ಸುತ್ತಲೂ ಇರುವ ಪರ್ವತ ಬಂಡೆಗಳು ಸಮುದ್ರ ಮಟ್ಟದಿಂದ ಸುಮಾರು 5000 ಅಡಿ ಎತ್ತರದಲ್ಲಿದೆ. ಇಲ್ಲಿನ ಲ್ಯಾಂಬ್ಸ್ ರಾಕ್ ಪ್ರವಾಸಿಗರಿಗೆ ಅದ್ಭುತವಾದ ನೋಟವನ್ನು ಒದಗಿಸುತ್ತದೆ. ಈ ಪ್ರದೇಶವು ದಟ್ಟವಾದ ಕಾಡು, ಮೋಡಗಳಿಂದ ಅವರಿಸಿರುವ ವಾತಾವರಣವನ್ನು ಆನಂದಿಸಬಹುದಾಗಿದೆ.


PC:Mrunmaikulkarni

ಲ್ಯಾಂಬ್ಸ್ ರಾಕ್(ಕೂನೂರ್)

ಲ್ಯಾಂಬ್ಸ್ ರಾಕ್(ಕೂನೂರ್)

ಈ ಸುಂದರವಾದ ಲ್ಯಾಂಬ್ಸ್ ರಾಕ್‍ಗೆ ಟ್ರೆಕ್ಕಿಂಗ್ ಮಾಡಲು ಆಸಕ್ತಿ ಹೊಂದಿದವರು ಕೂಡ ತೆರಳಬಹುದಾಗಿದೆ. ಕೂನೂರಿನಿಂದ ಲ್ಯಾಂಬ್ಸ್ ರಾಕ್‍ಗೆ ರಸ್ತೆ ಹಾಗೂ ರೈಲಿನ ಸಂಪರ್ಕವಿದ್ದು ಪ್ರವಾಸಿಗರು ಸುಲಭವಾಗಿ ತಲುಪಬಹುದಾಗಿದೆ. ಇದು ದಂಪತಿಗಳ ಏಕಾಂತಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮವಾದ ಕಾಲಾವಧಿಯೆಂದರೆ ಬೇಸಿಗೆ ಕಾಲದಲ್ಲಿ.


PC:Mrunmaikulkarni

ಕೆಟ್ಟಿ ವ್ಯಾಲಿ

ಕೆಟ್ಟಿ ವ್ಯಾಲಿ

ಕೆಟ್ಟಿ ವ್ಯಾಲಿ ಊಟಿಯಲ್ಲಿನ ಅತ್ಯಂತ ಪ್ರಸಿದ್ಧವಾದ ಪ್ರವಾಸಿತಾಣವಾಗಿದೆ. ಊಟಿ ಬಸ್ ನಿಲ್ದಾಣದಿಂದ ಸುಮಾರು 4 ಕಿ,ಮೀ ದೂರದಲ್ಲಿದೆ. ಊಟಿಗೆ ಭೇಟಿ ನೀಡುವ ಹಲವಾರು ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ ಎಂದರೆ ತಪ್ಪಾಗಲಾರದು. ಇಲ್ಲಿಗೆ ಪ್ರಕೃತಿ ಪ್ರೇಮಿಗಳು, ಸಹಾಸಕಾರರು, ಅನುಭವದ ಅನ್ವೇಷಕರು ಈ ಕೆಟ್ಟಿ ವ್ಯಾಲಿಗೆ ತೆರಳಬಹುದಾಗಿದೆ.

PC:rajaraman sundaram

ಕೆಟ್ಟಿ ವ್ಯಾಲಿ

ಕೆಟ್ಟಿ ವ್ಯಾಲಿ

ಕಿಟ್ಟಿ ವ್ಯಾಲಿ ಸಮೀಪದ ಕೆಲವು ಪ್ರಮುಖವಾದ ಪ್ರವಾಸಿ ಆರ್ಕಷಣೆಗಳೆಂದರೆ, ಊಟಿ ಸರೋವರ, ಸ್ಟೋನ್ ಹೌಸ್, ಮಾರಿಯಮ್ಮನ್ ದೇವಾಲಯ, ಊಟಿ ಗಾಲ್ಫ್ ಕೋರ್ಸ್, ಸೇಂಟ್ ಸ್ಟೀಫನ್ಸ್ ಚರ್ಚ್, ಪೈಕಾರ ಸರೋವರ ಇನ್ನೂ ಹಲವಾರು..

PC:YOUTUBE

ಉತ್ತಮವಾದ ಕಾಲಾವಧಿ

ಉತ್ತಮವಾದ ಕಾಲಾವಧಿ

ಈ ಸುಂದರವಾದ ಪ್ರದೇಶವನ್ನು ಸವಿಯಲು ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳು ಅತ್ಯುತ್ತಮವಾದ ಕಾಲವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X