Search
  • Follow NativePlanet
Share
» »ಕೋಲಾರಿನ ಚಿನ್ನದಂತಹ ಪ್ರವಾಸ ತಾಣಗಳು

ಕೋಲಾರಿನ ಚಿನ್ನದಂತಹ ಪ್ರವಾಸ ತಾಣಗಳು

By Vijay

ನಮ್ಮ ಸುತ್ತಮುತ್ತಲಿರುವ ಅದೆಷ್ಟೊ ಸ್ಥಳಗಳು ತಮ್ಮದೆ ಆದ ಕಥೆಯನ್ನು ಹೊಂದಿರುತ್ತವೆ, ಶ್ರೀಮಂತ ಇತಿಹಾಸ ಹೊಂದಿರುತ್ತವೆ. ಆದರೆ ಅವುಗಳ ಕುರಿತು ತಿಳಿಯಲು ನಮಗೆ ಸಮಯವೆ ಇಲ್ಲದಂತಾಗಿದೆ. ಹಾಗೂ ಹೀಗೂ ಒಮ್ಮೊಮ್ಮೆ ಅಂತರ್ಜಾಲವನ್ನು ತಡಕಾಡಿದಾಗ ಕೆಲವು ಸಂಗತಿಗಳು ನಮಗೆ ತಿಳಿದೆ ಬಿಡುತ್ತವೆ. ಆಗ, ಅರೆ ಈ ಸ್ಥಳ ಹತ್ತಿರವೆ ಇದೆಯಲ್ಲ, ನಂಗೊತ್ತೆ ಇರಲಿಲ್ಲ ಎಂದೆನಿಸುವುದು ಸಾಮಾನ್ಯ.

ಅಷ್ಟಕ್ಕೂ ಪ್ರತಿಯೊಬ್ಬರಿಗೂ ನಮ್ಮ ಸುತ್ತಮುತ್ತಲಿರುವ ಅನೇಕ ಸ್ಥಳಗಳ ಕುರಿತು ಪರಿಚಯ ಮಾಡಿಸುವುದು ಈ ಪ್ರವಾಸಿ ಲೇಖನಗಳ ಉದ್ದೇಶ. ಈ ಲೇಖನಗಳಿಂದ ನಿಮಗೆ ಎಷ್ಟೊ ವಿಷಯಗಳು ಗೊತ್ತಾಗಿ ಅಲ್ಲಿಗೆ ಪ್ರವಾಸ ಹೊರಡಲು ನಿಮಗೆ ಪ್ರಭಾವ ಬೀರಿದರೆ ನಮ್ಮ ಪ್ರಯತ್ನ ಸಾರ್ಥಕ. ಇಂದಿನ ಈ ಲೆಖನದ ಮೂಲಕ ಕೋಲಾರಿನಲ್ಲಿರುವ ಹಲವು ಆಕರ್ಷಕ ಪ್ರವಾಸಿ ತಾಣಗಳ ಕುರಿತು ತಿಳಿಯಿರಿ.

ನಿಮಗಿಷ್ಟವಾಗಬಹುದಾದ ಲೇಖನ : ಮಂಡ್ಯ ಜಿಲ್ಲೆಯ ಸವಿ ಸವಿಯಾದ ಆಕರ್ಷಣೆಗಳು

ಕೋಲಾರಿನ ಪ್ರವಾಸಿ ಕೇಂದ್ರಗಳು ಸಾಕಷ್ಟು ಹೆಸರುವಾಸಿಯಾಗಿದ್ದು ಧಾರ್ಮಿಕತೆಯಿಂದ ಹಿಡಿದು ಸಾಹಸಮಯ ಚಟುವಟಿಕೆಗಳವರೆಗೆ ಅವಕಾಶ ನೀಡುವ ಹಲವು ಗಮ್ಯ ತಾಣಗಳನ್ನು ಈ ಜಿಲ್ಲೆಯ ತುಂಬೆಲ್ಲ ಕಾನಬಹುದಾಗಿದೆ. ಕೋಲಾರಿನ ಕುರಿತು ಹಲವು ರೋಚಕ ಸಂಗತಿಗಳು ನಿಮಗಾಗಿ, ಸ್ಲೈಡ್ ಗಳ ಮೂಲಕ ತಿಳಿಯುತ್ತಾ ಸಾಗಿರಿ.

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರವು ಕರ್ನಾಟಕ ಪೂರ್ವ ಭಾಗದಲ್ಲಿ ನೆಲೆಸಿರುವ ಒಂದು ಸಣ್ಣ ಪಟ್ಟಣವಾಗಿದೆ. ಈ ಜಿಲ್ಲೆಯು ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಗಡಿಭಾಗದಲ್ಲಿದ್ದು ಅಲ್ಲಿನ ಸಂಸ್ಕೃತಿಯ ಪ್ರಭಾವ ಇಲ್ಲಿ ಹಾಸುಹೊಕ್ಕಾಗಿರುವುದನ್ನು ಕಾಣಬಹುದು.

ಚಿತ್ರಕೃಪೆ: Souvik Chakraborty

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಚಿನ್ನದ ಗಣಿಯಿಂದಾಗಿ ಖ್ಯಾತಿ ಪಡೆದಿರುವ ಕೋಲಾರವು "ಕರ್ನಾಟಕದ ಪೂರ್ವದ ಹೆಬ್ಬಾಗಿಲು" ಎಂದೂ ಸಹ ಗುರುತಿಸಿಕೊಳ್ಳುತ್ತದೆ. ಹಿಂದೆ ಇಲ್ಲಿರುವ ಚಿನ್ನದ ಗಣಿಯಿಂದಾಗಿ ಈ ಭಾಗವು ಸುವರ್ಣಯುಗವನ್ನೆ ಕಂಡಿತ್ತು. ನಂತರ ಅದರ ಪ್ರಭಾವ ಕಡಿಮೆಯಾದರೂ ಸಹ ಇಲ್ಲಿರುವ ದೇವಾಲಯ ತಾಣಗಳಿಂದಾಗಿ ಇಂದಿಗೂ ಸಾಕಷ್ಟು ಜನರ ಅಚ್ಚುಮೆಚ್ಚಿನ ಪ್ರದೇಶವಾಗಿದೆ ಕೋಲಾರ.

ಚಿತ್ರಕೃಪೆ: Souvik Chakraborty

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರದ ಸುತ್ತ ಹಲವು ದಂತಕಥೆಗಳು ಹರಡಿವೆ. ಅವುಗಳ ಪ್ರಕಾರ, ಕೋಲಾರವು ಹಿಂದೆ ಮಹರ್ಷಿ ವಾಲ್ಮೀಕಿಯ ವಾಸಸ್ಥಾನವಾಗಿತ್ತು. ರಾಮನು ವನವಾಸದ ಸಮಯದಲ್ಲಿ ಇದೆ ವಾಲ್ಮೀಕಿಯ ಆಶ್ರಮಕ್ಕೆ ಭೇಟಿಕೊಟ್ಟಿದ್ದ. ನಂತರದ ಕಾಲದಲ್ಲಿ ಸೀತೆಯು ರಾಮನಿಂದ ರಾಜ್ಯ ಬಹಿಷ್ಕಾರಕ್ಕೊಳಪಟ್ಟಾಗ ಇದೇ ವಾಲ್ಮೀಕಿಯ ಆಶ್ರಮದಲ್ಲಿ ಆಶ್ರಯ ಪಡೆದಿದ್ದಳು. ಕೋಲಾರ ನಗರ ಕೇಂದ್ರದಲ್ಲಿರುವ ಸೋಮೇಶ್ವರ ದೇವಸ್ಥಾನ ಶಿಖರ.

ಚಿತ್ರಕೃಪೆ: kumararun85

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರದಲ್ಲಿನ ಇದೇ ಆಶ್ರಮದಲ್ಲಿ ಸೀತೆಯು ಲವ-ಕುಶರಿಗೆ ಜನ್ಮನೀಡಿದಳು. ವಿಷ್ಣುವಿನ ಅವತಾರಗಳಲ್ಲಿ ಒಬ್ಬನೆಂದು ಪರಿಗಣಿಸಲಾಗಿರುವ ವೀರ ಋಷಿ ಪರಶುರಾಮನು ಇದೇ ಕೋಲಾರದ ಪಶ್ಚಿಮಕ್ಕೆ ಇರುವ ಹಚ್ಚ ಹಸಿರಿನ ಬೆಟ್ಟಗಳಲ್ಲಿ ಕೆಲ ಕಾಲ ತಂಗಿದ್ದನೆಂದು ಹೇಳಲಾಗುತ್ತದೆ. ಕೋಲಾರ ನಗರ ಕೇಂದ್ರದಲ್ಲಿರುವ ಕೋಲಾರಮ್ಮನ ದೇವಸ್ಥಾನ

ಚಿತ್ರಕೃಪೆ: Hariharan Arunachalam

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಇತಿಹಾಸದ ಆಧಾರದ ಮೇಲೆ 'ಕೋಲಾರ' ಎಂಬ ಪದವು ಕೋಲಾಹಲ ಪುರ ಎಂಬ ಮೂಲದಿಂದ ಬಂದಿದೆ. ಇದರರ್ಥ ಜಗಳದ, ಯುದ್ಧದ ಊರು ಎಂದಾಗುತ್ತದೆ.ಬೆಟ್ಟಗಳ ನಡುವಿನ ತಂಪಾದ ಈ ಊರು ಚಾಲುಕ್ಯ ಮತ್ತು ಚೋಳ ಸಾಮ್ರಾಜ್ಯಗಳ ನಡುವಿನ ಭೀಕರ ಕದನಗಳಿಗೆ ಸಾಕ್ಷಿಯಾಗಿದೆ. ಕೋಲಾರ ನಗರ ಪ್ರದೇಶದ ಒಂದು ಬಡಾವಣೆ.

ಚಿತ್ರಕೃಪೆ: Ganesha1

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಗತ ಕಾಲದ ಕುತೂಹಲಕರ ಅವಶೇಷಗಳನ್ನು ನಾವು ಇಂದಿಗು ಕೋಲಾರದಲ್ಲಿ ನೋಡಬಹುದಾಗಿದೆ. ಈ ಪಟ್ಟಣದಲ್ಲಿ ಕೋಲಾರಮ್ಮ ದೇವಾಲಯ ಮತ್ತು ಸೋಮೇಶ್ವರ ದೇವಾಲಯ ನೋಡಲೇಬೇಕಾದ ದೇವಾಲಯಗಳಾಗಿವೆ. ಕೋಲಾರವು ಬೆಂಗಳೂರಿನಿಂದ 65 ಕಿ.ಮೀ ಗಳಷ್ಟು ದೂರದಲ್ಲಿದ್ದು ಬಸ್ಸು ಹಾಗೂ ರೈಲಿನ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಕೋಲಾರಿನಲ್ಲಿರುವ ಸೋಮನಾಥೇಶ್ವರ ದೇವಾಲಯ.

ಚಿತ್ರಕೃಪೆ: Shailesh.patil

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಪ್ರವಾಸಿಗರು ಕೋಲಾರ ಜಿಲ್ಲೆಗೆ ಭೇಟಿಕೊಟ್ಟಾಗ ಇಲ್ಲಿನ ಕೋಲಾರಮ್ಮ ದೇವಾಲಯವನ್ನು ತಪ್ಪದೆ ನೋಡಬೇಕು. ಇದು ಪಾರ್ವತಿ (ಕೋಲಾರಮ್ಮ) ದೇವಿಯ ದೇವಾಲಯವಾಗಿದೆ. ಇದು L ಆಕಾರದ ದೇವಾಲಯವಾಗಿದ್ದು ದ್ರಾವಿಡ ವಿಮಾನ ವಾಸ್ತು ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಕೋಲಾರಮ್ಮ ದೇವಸ್ಥಾನದ ಪ್ರವೇಶ ದ್ವಾರ.

ಚಿತ್ರಕೃಪೆ: Hariharan Arunachalam

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಮೈಸೂರಿನ ಹಿಂದಿನ ಅರಸರು ಇಲ್ಲಿನ ದೇವಿಯ ಅನುಗ್ರಹ ಪಡೆಯುವ ಸಲುವಾಗಿ ಇಲ್ಲಿಗೆ ಆಗಾಗ ಭೇಟಿಕೊಡುತ್ತಿದ್ದರಂತೆ. ಇಂದು ಪ್ರವಾಸಿಗರು ಈ ದೇವಾಲಯಕ್ಕೆ ಭೇಟಿಕೊಟ್ಟ ತಕ್ಷಣ ಈ ದೇವಾಲಯದಲ್ಲಿನ ಗ್ರಾನೈಟ್ ಕಲ್ಲಿನಲ್ಲಿ ಕೆತ್ತಲಾಗಿರುವ ಮೂರ್ತಿಗಳು ಮತ್ತು ಶಿಲ್ಪಕಲಾ ರಚನೆಗೆ ಮಾರು ಹೋಗದೆ ಇರಲಾರರು.

ಚಿತ್ರಕೃಪೆ: Shailesh.patil

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಚೇಳುಗಳ ದೇವತೆಯಾದ ಚೇಳಮ್ಮ, ಕೋಲಾರಮ್ಮ ದೇವಾಲಯದಲ್ಲಿರುವ ಮತ್ತೊಂದು ದೇವತೆ. ಸ್ಥಳೀಯರ ನಂಬಿಕೆಯಂತೆ ಚೇಳಮ್ಮನನ್ನು ಪೂಜಿಸಿದರೆ ಆಕೆ ಭಕ್ತಾಧಿಗಳನ್ನು ಚೇಳಿನ ಕಡಿತದಿಂದ ಕಾಪಾಡುತ್ತಾಳಂತೆ. ಇಲ್ಲೊಂದು ಹುಂಡಿಯಿದ್ದು ಭಕ್ತಾದಿಗಳಿಂದ ಕಾಣಿಕೆ ಸಂಗ್ರಹಿಸಲು ಇದನ್ನು ಸ್ಥಾಪಿಸಲಾಗಿದೆ. ಸಂಪ್ರದಾಯದಂತೆ ಭಕ್ತಾಧಿಗಳು ಈ ಸ್ಥಳಕ್ಕೆ ಬಂದಾಗ ಒಂದು ನಾಣ್ಯವನ್ನು ಇದರಲ್ಲಿ ಹಾಕುತ್ತಾರೆ.

ಚಿತ್ರಕೃಪೆ: Hariharan Arunachalam

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ನಗರ ಕೇಂದ್ರದಿಂದ ಕೇವಲ ನಾಲ್ಕೈದು ಕಿ.ಮೀ ಗಳಷ್ಟು ದೂರದಲ್ಲಿದೆ ಅಂತರಗಂಗೆ. ರಾಶಿ ರಾಶಿ ಬಂಡೆಗಳು, ಬೆಟ್ಟಗಳಿಂದ ಕೂಡಿರುವ ಈ ಸ್ಥಳ ಒಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯೂ ಹೌದು.

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ದಕ್ಷಿಣ ಕಾಶಿ ಕ್ಷೇತ್ರ ಎಂತಲೂ ಕರೆಯಲ್ಪಡುವ ಅಂತರಗಂಗೆಯಲ್ಲಿ ಶಿವನಿಗೆ ಮುಡಿಪಾದ ದೇವಾಲಯವೊಂದಿದ್ದು ಅಲ್ಲಿನ ಕಲ್ಯಾಣಿಯಲ್ಲಿನ ನೀರಿಗೆ ಮೂಲ ನಿರಂತರವಾಗಿ ನೆಲದಾಳದಿಂದ ಹರಿಯುವ ನೀರು. ಹೀಗಾಗಿಯೆ ಇದಕ್ಕೆ ಅಂತರಗಂಗೆ ಎಂಬ ಹೆಸರು ಬಂದಿದೆ.

ಚಿತ್ರಕೃಪೆ: Vedamurthy J

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಇನ್ನೂ ದೇವಸ್ಥಾನ ಹೊರತುಪಡಿಸಿದರೆ ಇಲ್ಲಿನ ಬೆಟ್ಟಗಳಲ್ಲಿ ಅನ್ವೇಷಿಸುತ್ತ ಸಾಗುವುದೆ ಒಂದು ರೋಮಾಂಚಕ ಅನುಭವ ನೀಡುತ್ತದೆ. ಕೆಲವು ಸ್ಥಳಗಳಲ್ಲಿ ಬಂಡೆಗಳ ಮಧ್ಯೆ ಸಂದಿಗಳಲ್ಲಿ ತೆವಳುತ್ತಾ ಸಾಗುವುದು ಒಂದು ರೀತಿಯ ಸಾಹಸವೆ ಹೌದು. ಗುಹೆಗಳ ರೀತಿಯಲ್ಲಿ ಅಲ್ಲಲ್ಲಿ ಬಂಡೆಗಳಿದ್ದು ಅದ್ಭುತ ಅನುಭವ ನೀಡುತ್ತವೆ.

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಅಂತರಗಂಗೆಯಲ್ಲಿ ಕಲ್ಲು ಬಂಡೆಗಳ ಮಧ್ಯೆ ಚಾರಣ ಮಾಡುವುದು ಒಂದು ರೋಮಾಂಚಕ ಅನುಭವ ನೀಡುತ್ತದೆ. ಬಂಡೆಗಳ ಅದಿ ಬದಿಗಳಲ್ಲಿ ನಡೆದು ಸಾಗಬೇಕಾಗಿರುವುದು ವಿಶೇಷ. ಆದರೆ ಜಾಗರೂಕತೆಯಿರಲಿ.

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ನಗರ ಕೇಂದ್ರದ ಪಶ್ಚಿಮಕ್ಕೆ ಸುಮಾರು 34 ಕಿ.ಮೀ ದೂರದಲ್ಲಿರುವ ಮುಳಬಾಗಿಲು ತಾಲೂಕು ಕೇಂದ್ರವು ತನ್ನಲ್ಲಿರುವ ಸೋಮೇಶ್ವರ ದೇವಾಲಯಕ್ಕೆ ಪ್ರಸಿದ್ಧಿ ಪಡೆದಿದೆ. ಮೂಡಲ ಅಂದರೆ ಪೂರ್ವದ ಬಾಗಿಲು ಎಂಬ ಅರ್ಥದಿಂದ ಮೂಡಲಬಾಗಿಲು ಕಾಲಕ್ರಮೇಣ ಮೂಳಬಾಗಿಲು ಎಂಬ ಹೆಸರು ಪಡೆದಿದೆ. ಇಲ್ಲಿರುವ ಶಿವಲಿಂಗವು ಪವಿತ್ರ ಕಾಶಿಯ ಶಿವಲಿಂಗದೊಂದಿಗೆ ಸಾಕಷ್ಟು ಸಾಮ್ಯತೆ ಹೊಂದಿದೆ ಎನ್ನಲಾಗಿದೆ. ಅಲ್ಲದೆ, ಮಕ್ಕಳಿಲ್ಲದ ದಂಪತಿಗಳು ಈ ಶಿವಲಿಂಗಕ್ಕೆ ಭಕ್ತಿಯಿಂದ ನಮಿಸಿ ಪ್ರದಕ್ಷಿಣೆ ಹಾಕಿದರೆ ಶೀಘ್ರದಲ್ಲೆ ಸಂತಾನಫಲ ಪಡೆಯುತ್ತಾರೆನ್ನುವ ನಂಬಿಕೆಯಿದೆ.

ಚಿತ್ರಕೃಪೆ: Dineshkannambadi

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಮುಳಬಾಗಿಲುವಿನಿಂದ ಪೂರ್ವಕ್ಕೆ ರಾಷ್ಟ್ರೀಯ ಹೆದ್ದಾರಿ ನಾಲ್ಕರ ಮೇಲೆ ಸುಮಾರು ಎರಡು ಕಿ.ಮೀ ದೂರದಲ್ಲಿ ನರಸಿಂಹತೀರ್ಥ ಕ್ಷೇತ್ರವಿದೆ. ಇಲ್ಲಿ ಶ್ರೀಪಾದರಾಜರ ಮಠವಿದ್ದು ಅವರ ಬೃಂದಾವನವಿದೆ. ಇಂದು ಇದು ಪಾದರಾಜ ಮಠಗಳ ಪ್ರಧಾನ ಶಾಖೆಯಾಗಿದೆ.

ಚಿತ್ರಕೃಪೆ: Usha Hariprasad

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿರುವ ಪುಣ್ಯಕ್ಷೇತ್ರ ಆವನಿ. ಇದು ಮುಳಬಾಗಿಲುವಿನ ನೈರುತ್ಯಕ್ಕೆ 11 ಕಿ.ಮೀ ದೂರದಲ್ಲಿದೆ. ಇದರ ವಿಶೇಷವೆಂದರೆ ಇದು ರಾಮಾಯಣ ಬರೆದ ಆದಿ ಕವಿ ವಾಲ್ಮೀಕಿ ಮಹರ್ಷಿಗಳ ತಪೋಭೂಮಿಯೂ, ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರದ ಧರ್ಮಪತ್ನಿ ಸೀತಾಮಾತೆ, "ಲವ" ಮತ್ತು "ಕುಶ" ರಿಗೆ ಜನ್ಮ ನೀಡಿದ ಪುಣ್ಯಭೂಮಿಯೂ ಆಗಿದೆ. ಇಂದು ಇಲ್ಲಿ ಪ್ರಮುಖವಾಗಿ ರಾಮಲಿಂಗೇಶ್ವರ ದೇವಸ್ಥಾನವನ್ನು ಕಾಣಬಹುದು.

ಚಿತ್ರಕೃಪೆ: Dineshkannambadi

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಹಿಂದೆ ಈ ಕ್ಷೇತ್ರ ವಾಲ್ಮೀಕಿ ಮಹರ್ಷಿಗಳ ತಪೋಭೂಮಿಯಾಗಿ ಅಹವನೀಯಾಗಿತ್ತು, ನಂತರ ಅವಣ್ಯ, ಅವಣೆ ಎಂದೂ ಕರೆಸಿಕೊಂಡಿದ್ದ ಈ ಊರು ಕಾಲಾನಂತರದಲ್ಲಿ ಆವನಿಯಾಯಿತು. ಈ ಕ್ಷೇತ್ರದಲ್ಲಿ ರುದ್ರಭಟ್ಟಾರಕರು ಅಹವನೀಯ ಯಾಗ ಮಾಡಿದ ಕಾರಣ ಈ ಕ್ಷೇತ್ರ ಆಹವನೀಯ ಎಂಬ ಹೆಸರಿತ್ತು. ಆಲದೆ ಇಲ್ಲಿ ವಾಲ್ಮೀಕಿ ಮಹರ್ಷಿಗಳ ಆಶ್ರಮವೂ ಇತ್ತೆಂಬುದು ನಂಬಲಾಗಿದೆ. ರಾಮಲಿಂಗೇಶ್ವರ ದೇವಸ್ಥಾನ.

ಚಿತ್ರಕೃಪೆ: Dineshkannambadi

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಈ ಕ್ಷೇತ್ರದಲ್ಲಿರುವ ಬೆಟ್ಟದ ಮೇಲೆ ಸೀತಾ ಮಾತೆಯು, ವಾಲ್ಮೀಕಿ ಮಹರ್ಷಿಗಳ ಆಣತಿಯಂತೆ ಸ್ವರ್ಣಗೌರಿ ವ್ರತವನ್ನಾಚರಿಸಿದ್ದಳಂತೆ. ಆಗ ಪಾರ್ವತಿ ಇಲ್ಲಿ ಸೀತಾದೇವಿಗೆ ದರ್ಶನವಿತ್ತು ಹರಸಿದಳು. ಹೀಗಾಗಿ ಈ ಬೆಟ್ಟ ಪಾರ್ವತಿ ಬೆಟ್ಟವೆಂದೇ ಕರೆಸಿಕೊಂಡಿತ್ತು. ಅಲ್ಲದೆ ಸೀತಾ ದೇವಿಗೆ ಮುಡಿಪಾದ ದೇವಾಲಯವನ್ನೂ ಸಹ ಇಲ್ಲಿ ಕಾಣಬಹುದು. ಸೀತಾ ದೇವಿ ದೇವಾಲಯದ ಗೋಪುರ.

ಚಿತ್ರಕೃಪೆ: Suma-nanjunda

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಜಿಲ್ಲೆಯ ಮುಳಬಾಗಿಲುವಿನಿಂದ ಕೇವಲ ಎಂಟು ಕಿ.ಮೀ ದೂರದಲ್ಲಿದೆ ಕುರುಡುಮಲೆ. ಇದನ್ನು ದೇವತೆಗಳು ಸ್ವರ್ಗದಿಂದ ಧರೆಗಿಳಿದು ಉತ್ಸಾಹಗೊಳ್ಳುವ ಕ್ಷೇತ್ರವೆಂದು ಹೇಳಲಾಗಿದೆ. ಇದು ಮುಖ್ಯವಾಗಿ ಎರಡು ದೇವಸ್ಥಾನಗಳಿಂದಾಗಿ ಪ್ರಸಿದ್ಧವಾಗಿದೆ. ಒಂದು ಸಾಲಿಗ್ರಾಮ ಗಣೇಶ ದೇವಾಲಯ. ಇದನ್ನು ಅತ್ಯಂತ ಶಕ್ತಿಶಾಲಿ ಗಣಪ ಎಂದು ಭಾವಿಸಲಾಗಿದೆ. ಇದರ ಕುರಿತು ತಿಳಿದಿರುವ ಬಹುತೇಕ ಜನರು ತಮ್ಮ ಹೊಸ ಕಾರ್ಯ ಅಥವಾ ಕಚೇರಿ ಪ್ರಾರಂಭಿಸುವುದಕ್ಕಿಂತ ಮುಂಚೆ ಈ ಗಣಪನ ದರುಶನ ಕೋರಿ ಪ್ರಾರಂಭಿಸುತ್ತಾರೆ. ಇದರಿಂದ ಕೆಲಸ ಕಾರ್ಯಗಳಲ್ಲಿ ಯಾವುದೆ ಅಡೆ ತಡೆಗಳುಂಟಾಗುವುದಿಲ್ಲ ಎಂಬ ನಂಬಿಕೆಯಿದೆ.

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಇನ್ನುಳಿದಂತೆ ಸೋಮೇಶ್ವರ ದೇವಸ್ಥಾನ. ಈ ದೇವಸ್ಥಾನವನ್ನು ಎರಡು ಭಾಗಗಳಲ್ಲಿ ಕಾನಬಹುದಾಗಿದೆ. ಒಂದು ಭಾಗವು ಒಂದು ರೀತಿಯ ಶಿಲ್ಪಕಲೆ ಹೊಂದಿದ್ದರೆ ಇನ್ನೊಂದು ಭಾಗವು ವಿಗ್ರಹ, ಮೂರ್ತಿ ಇತ್ಯಾದಿಗಳ ಶಿಲ್ಪಕಲೆ ಹೊಂದಿದ್ದು ಮತ್ತಷ್ಟು ವಿಭಿನ್ನವಾಗಿದೆ. ಸ್ಥಳ ಪುರಾಣದ ಪ್ರಕಾರ ಒಂದು ಭಾಗವು ಪ್ರಸಿದ್ಧ ಶಿಲ್ಪಿ ಜಕಣಾಚಾರ್ಯರಿಂದ ಕೆತ್ತಲ್ಪಟ್ಟಿದೆ ಎನ್ನಲಾಗುತ್ತದೆ.

ಚಿತ್ರಕೃಪೆ: Ganesha1

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ವಿಗ್ರಹ, ಮೂರ್ತಿ, ಸಂಕೀರ್ಣ ಕಲಾತ್ಮಕತೆಯುಳ್ಳ ದೇವಸ್ಥಾನದ ಇನ್ನೊಂದು ಭಾಗವು ಜಕಣಾಚಾರ್ಯನ ಮಗನಾದ ಡಂಕಣಾಚಾರ್ಯರಿಂದ ಕೆತ್ತಲ್ಪಟ್ಟಿದೆ ಎನ್ನಲಾಗುತ್ತದೆ. ಈ ದೇವಸ್ಥಾನ ಶತಮಾನಗಳಷ್ಟು ಹಳೆಯದಾಗಿದ್ದು ಭೇಟಿ ನೀಡ ಯೋಗ್ಯ ಐತಿಹಾಸಿಕ ಪ್ರವಾಸಿ ಆಕರ್ಷಣೆಗಳಾಗಿವೆ.

ಚಿತ್ರಕೃಪೆ: Dineshkannambadi

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಜಿಲ್ಲೆಯ ಕಮ್ಮಸಂದ್ರ ಗ್ರಾಮದಲ್ಲಿರುವ ಕೋಟಿಲಿಂಗೇಶ್ವರ ದೇವಾಲಯವು ಪ್ರವಾಸಿ ಆಕರ್ಷಣೆಯುಳ್ಳ ಪ್ರಸಿದ್ಧ ದೇವಾಲಯವಾಗಿದೆ. ಹೆಸರಿಗೆ ತಕ್ಕ ಹಾಗೆ ಇಲ್ಲಿ ಹಲವು ವಿವಿಧ ಗಾತ್ರ ಹಾಗೂ ಆಕರಗಳ ಲಕ್ಷ ಲಕಷ್ ಸಂಖ್ಯೆಯಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪಿಅಸಲಾಗಿದೆ. ಎಲ್ಲಿ ನೋಡಿದರೂ ಬರೀ ಶಿವಲಿಂಗಗಳೆ ಕಂಡುಬರುವಂತಿದ್ದು ಒಂದು ರೀತಿಯಲ್ಲಿ ಆಕರ್ಷಕವಾಗಿ ಗೋಚರಿಸುತ್ತದೆ.

ಚಿತ್ರಕೃಪೆ: Pponnada

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರಿನ ಬಂಗಾರಪೇಟೆ ಹಾಗೂ ಬೇತಮಂಗಲದ ಮೂಲಕ ಈ ತಾಣವನ್ನು ತಲುಪಬಹುದು. ಕೋಲಾರ್ ಗೋಲ್ಡ್ ಫೀಲ್ಡ್ ನಿಂದ ಕೇವಲ ಆರು ಕಿ.ಮೀ ದೂರದಲ್ಲಿದ್ದು ಸುಲಭವಾಗಿ ಕೋಟಿಲಿಂಗೇಶ್ವರಕ್ಕೆ ತಲುಪಬಹುದು. ಬೆಂಗಳೂರಿನಿಂದ ಹೊರಡುವವರಿದ್ದರೆ ರೈಲಿನಲ್ಲಿ ಬಂಗಾರಪೇಟೆಗೆ ತಲುಪಿ ಅಲ್ಲಿಂದ ಅರ್ಧ ಘಂಟೆಯ ಸಮಯದಲ್ಲಿ ಕೋಟಿಲಿಂಗೇಶ್ವರ ತಲುಪಬಹುದು.

ಚಿತ್ರಕೃಪೆ: Pponnada

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಈ ಕ್ಷೇತ್ರದ ಪ್ರಮುಖ ಆಕರ್ಷಣೆ ಎಂದರೆ ಬೃಹತ್ತಾದ ಶಿವಲಿಂಗ ಹಾಗೂ ಅದಕ್ಕೆ ತಕ್ಕಂತೆ ನಿರ್ಮಾಣವಾಗಿರುವ ನಂದಿ ವಿಗ್ರಹ ಮತ್ತು ಇಲ್ಲಿಯವರೆಗೂ ಹೆಚ್ಚು ಕಮ್ಮಿ ಕೋಟಿ ಸಂಖ್ಯೆಯಲ್ಲಿ ಪ್ರತಿಷ್ಠಾಪಿತವಾಗಿರುವ ಶಿವಲಿಂಗಗಳು. ಶಿವಲಿಂಗವು 108 ಅಡಿಗಳಷ್ಟು ಎತ್ತರವಿದ್ದು ಜಗತ್ತಿನ ಏಕೈಕ ಈ ರೀತಿಯ ಎತ್ತರದ ಶಿವಲಿಂಗ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಚಿತ್ರಕೃಪೆ: Mithila

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಇನ್ನೂ ಶಿವಲಿಂಗಕ್ಕೆ ಜೊತೆಯಾಗಿ ಬೃಹತ್ತಾದ ನಂದಿ ವಿಗ್ರಹವನ್ನೂ ಸಹ ಕಾಣಬಹುದು. ಇದು ಸುಮಾರು 35 ಅಡಿಗಳಷ್ಟು ಎತ್ತರ ಹೊಂದಿದೆ.

ಚಿತ್ರಕೃಪೆ: Mithila

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರದಲ್ಲಿ ಭೇಟಿ ನೀಡಬಹುದಾದ ಮತ್ತೊಂದು ಪ್ರಮುಖ ಧಾರ್ಮಿಕ ಸ್ಥಳವೆಂದರೆ ಬಂಗಾರು ತಿರುಪತಿ. ಕೋಲಾರಿನಿಂದ 35 ಕಿ.ಮೀ, ಮುಳಬಾಗಿಲುವಿನಿಂದ 18 ಕಿ.ಮೀ ಹಾಗೂ ಕೋಟಿಲಿಂಗೇಶ್ವರದಿಂದ ಎಂಟು ಕಿ.ಮೀ ಗಳಷ್ಟು ದೂರದಲ್ಲಿದೆ ಈ ಕ್ಷೇತ್ರ. ಚಿಕ್ಕದಾದ ಬೆಟ್ಟವೊಂದರ ಮೇಲೆ ವೆಂಕಟರಮಣ ಹಾಗೂ ಪದ್ಮಾವತಿಯ ದೇವಾಲಯಗಳಿವೆ. ಆಸಕ್ತಿಕರ ವಿಷಯವೆಂದರೆ ವಿಷ್ಣುವಿನ ದರ್ಶನವನ್ನು ಕೇವಲ ಕಿಟಕಿಯಿಂದ ಮಾತ್ರ ಮಾಡಬಹುದಾಗಿದೆ. ಉಳಿದಂತೆ ಪದ್ಮಾವತಿಯ ದೇವಸ್ಥಾನಕ್ಕೆ ನೇರವಾಗಿ ಭೇಟಿ ನೀಡಬಹುದು.

ಚಿತ್ರಕೃಪೆ: Manjunatha DN

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಚಿಕ್ಕ ತಿರುಪತಿ ಕೋಲಾರ ಜಿಲ್ಲೆಯಲ್ಲಿರುವ ಇನ್ನೊಂದು ಪ್ರಮುಖ ಧಾರ್ಮಿಕ ಕೇಂದ್ರ. ಈ ದೇವಾಲಯವು ಆಂಧ್ರದ ಪ್ರಖ್ಯಾತ ತಿರುಪತಿ ತಿರುಮಲ ದೇವಸ್ಥಾನದಂತೆಯೆ ಇದ್ದು ಇಲ್ಲಿ ವಿಷ್ಣು ವೆಂಕಟೇಶ್ವರನಾಗಿ ತನ್ನ ಪತ್ನಿ ಅಲಮೇಲುಮಂಗೈ ಜೊತೆಯಾಗಿ ನೆಲೆಸಿದ್ದಾನೆ. ವಿಶೇಷವೆಂದರೆ ವೆಂಕಟೇಶ್ವರನು ತಿರುಮಲದಲ್ಲಿ ಕೈಯನ್ನು ಕೆಳಮುಖವಾಗಿ ಹಿಡಿದಿರುವ ಭಂಗಿಗೆ ವಿರುದ್ಧವಾಗಿ ಇಲ್ಲಿ ಆಶೀರ್ವದಿಸುತ್ತಿರುವ ಭಂಗಿಯಲ್ಲಿದೆ. ಹೀಗಾಗಿ ಪಕ್ಕದ ಆಂಧ್ರ ಹಾಗೂ ತಮಿಳುನಾಡಿನ ಅಸಂಖ್ಯಾತ ಶ್ರೀನಿವಾಸನ ಭಕ್ತರೂ ಸಹ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಚಿತ್ರಕೃಪೆ: Ssriram mt

ಕೋಲಾರ ಹಾಗೂ ಸುತ್ತಮುತ್ತ:

ಕೋಲಾರ ಹಾಗೂ ಸುತ್ತಮುತ್ತ:

ಈ ದೇವಾಲಯದ ಮಾದರಿಯು ತಿರುಪತಿ ದೇವಸ್ಥಾನದ ಹಾಗೆ ಇರುವುದರಿಂದ ಹಾಗೂ ವೆಂಕಟೇಶ್ವರ ನೆಲೆಸಿರುವುದರಿಂದ ಇದನ್ನು ಚಿಕ್ಕ ತಿರುಪತಿ ಎಂದೆ ಕರೆಯಲಾಗುತ್ತದೆ. ಈ ಕ್ಷೇತ್ರವು ಕೋಲಾರಿನ ನೈರುತ್ಯಕ್ಕೆ 42 ಕಿ.ಮೀ ಇದ್ದು ಮಾಲೂರಿನ ಮೂಲಕ ತಲುಪಬಹುದಾಗಿದೆ. ಕೊಲಾರ ಜಿಲ್ಲೆಯ ಮಾಲೂರು ತಾಲೂಕು ವ್ಯಾಪ್ತಿಗೆ ಒಳಪಡುವ ಈ ಕ್ಷೇತ್ರವು ಮಾಲೂರು ತಾಲೂಕು ಕೇಂದ್ರದಿಂದ ಸುಮಾರು 18 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Ssriram mt

Read more about: ಕೋಲಾರ kolar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X