Search
  • Follow NativePlanet
Share
» »ಭಾರತ ದರ್ಶನ : ಭೂಲೋಕದ ಸ್ವರ್ಗ!

ಭಾರತ ದರ್ಶನ : ಭೂಲೋಕದ ಸ್ವರ್ಗ!

ಭಾರತದ ಸಾಕಷ್ಟು ಸ್ಥಳಗಳು ಅಪರಿಮಿತ ಸೌಂದರ್ಯವನ್ನು ಹೊಂದಿದ್ದು ಅದನ್ನು ಸವಿಯಲು ಸಂವೇದನಾಶಿಲ ಮನಸ್ಸಿರಬೇಕಷ್ಟೆ..ಒಂದೊಂದು ಸ್ಥಳಗಳು ಅದ್ಭುತ ಅನುಭವ ನೀಡಿ ಪ್ರವಾಸದಾನಂದ ಹೆಚ್ಚಿಸುತ್ತವೆ

By Vijay

ನಿಗದಿತ ದೃಷ್ಟಿಕೋನದಲ್ಲಿ, ನಿರ್ದಿಷ್ಟವಾದ ಸಮಯದಲ್ಲಿ ಯಾವುದಾದರೂ ವಸ್ತು ಆಗಲಿ, ಸ್ಥಳವಾಗಲಿ ಅಥವಾ ಇನ್ನ್ಯಾವುದೆ ರಚನೆಗಳನ್ನಾಗಲಿ ಕಂಡಾಗ ಅದರ ನೈಜ ಸೌಂದರ್ಯವು ಕಂಡುಬರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಹಲವು ಉದಾಹರಣೆಗಳನ್ನು ನೀಡಬಹುದು. ಬೇಕಾದರೆ ನದಿಯನ್ನೆ ತೆಗೆದುಕೊಳ್ಳಿ.

ಸಾಮಾನ್ಯವಾಗಿ ನದಿಗಳು ಬೇಸಿಗೆಯ ಸಮಯದಲ್ಲಿ ನೀರು ಆವಿಯಾಗಿ ಸಾಕಷ್ಟು ಬರಿದಾಗುವುದರಿಂದ ತನ್ನ ಅಗಾಧತೆಯನ್ನು ತೋರಿಸಲಾಗದು. ಅದೆ ಮಳೆಗಾಲದಲ್ಲಿ ಸೊಂಪಾದ ಮಳೆಯಾದಾಗ ಆ ನದಿಯು ತುಂಬಿ ಹರಿಯುವುದಲ್ಲದೆ ತನ್ನ ವಿಶಾಲತೆಯನ್ನೂ ಪ್ರಖರತೆಯನ್ನೂ ಅನಾವರಣಗೊಳಿಸುತ್ತದೆ. ಇದು ನಿರ್ದಿಷ್ಟ ಕಾಲಕ್ಕೆ ಸಂಬಂಧಿಸಿದ ಉದಾಹರಣೆಯಾಯಿತು.

ನಯನಮನೋಹರ ಭೂದೃಶ್ಯಗಳ ಕರ್ನಾಟಕ!

ಇನ್ನು ನಿರ್ದಿಷ್ಟ ಸ್ಥಳ/ದೃಷ್ಟಿಕೋನಕ್ಕೆ ಸಂಬಂಧಿಸಿದಂತೆ ವೀಕ್ಷಣಾ ಕೇಂದ್ರಗಳನ್ನು ಉದಾಹರಿಸಬಹುದು. ಉದಾಹರಣೆಗೆ ನಂದಿ ಬೆಟ್ಟ. ನಂದಿ ಬೆಟ್ಟ ಸುಂದರ ಸೂರ್ಯೋದಯದ ನೋಟಕ್ಕೆ ಹೆಸರುವಾಸಿಯಾಗಿದ್ದರೂ ಎಲ್ಲಿ ಬೇಕೆಂದರಲ್ಲಿ ನಿಂತು ನೋಡಿದರೆ ನಿಮಗೆ ಆ ಸೂರ್ಯೋದಯದ ನೋಟ ಸಿಗುವುದೆ? ಖಂಡಿತ ಇಲ್ಲ, ಅದಕ್ಕೆಂದೆ ನಂದಿ ಬೆಟ್ಟದ ನಿರ್ದಿಷ್ಟ ಸ್ಥಳದಲ್ಲಿ ವೀಕ್ಷಣಾ ಕೇಂದ್ರವಿದ್ದು ಅಲ್ಲಿಂದ ಆ ನೋಟವನ್ನು ಸವಿಯಬಹುದು.

ಅದೆ ರೀತಿಯಾಗಿ ಭಾರತದ ಅದೆಷ್ಟೊ ಸಾವಿರಾರು ಸ್ಥಳಗಳು ತಮ್ಮ ಅತ್ಯದ್ಭುತ ದೃಶ್ಯಗಳಿಂದಾಗಿ ಮೂಕವಿಸ್ಮಿತರಾಗುವಂತೆ ಮಾಡುತ್ತದೆ. ಆದರೆ ಆಯಾ ಸ್ಥಳಗಳು, ರಚನೆಗಳು ಯಾವ್ಯಾವ ಸಮಯದಲ್ಲಿ, ಎಲ್ಲಿಂದ ಹೇಗೆ ಕಾಣುತ್ತದೆ ಎಂಬ ಅರಿವು ಮಾಡಿಕೊಂಡು ಪ್ರವಾಸ ಮಾಡಿದರೆ, ನೀವು ಖಂಡಿತವಾಗಿ ಭುಲೋಕದ ಸ್ವರ್ಗವನ್ನೆ ನೋಡಿದಂತಹ ಆಭಾಸ ನಿಮಗಾಗುತ್ತದೆ. ಆ ಒಂದು ನಿಟ್ಟಿನಲ್ಲಿ ಪ್ರಸ್ತುತ ಲೇಖನವು ಭಾರತದ ಕೆಲವು ಆಕರ್ಷಕ ಸ್ಥಳಗಳು, ರಚನೆಗಳು ಯಾವ ರೀತಿಯಾಗಿ ಪ್ರವಾಸಿ ಛಾಯಾಗ್ರಾಹಕರ ಲೆನ್ಸುಗಳಲ್ಲಿ ಬಂಧಿಸಲ್ಪಟ್ಟಿವೆ ಎಂಬುದರ ಕುರಿತು ತಿಳಿಸುತ್ತದೆ. ನಿಮಗಿಷ್ಟವಾದರೆ ನೀವು ಒಮ್ಮೆ ಸ್ಥಳಕ್ಕೆ ಪ್ರವಾಸ ಮಾಡಿ ಆನಂದಿಸಿ.

ವಿಸ್ಮಯಕರ

ವಿಸ್ಮಯಕರ

ನೀವು ಸಮುದ್ರ, ನದಿ, ಕೆರೆಗಳನ್ನು ತಟಗಳಲ್ಲಿ ನಿಂತು ನೋಡಿ ಆನಂದಿಸಿರಬಹುದು. ಆದರೆ ಮೋಡಗಳ ಸಾಗರ ಎಂದಾದರೂ ನೋಡಿದ್ದೀರಾ? ಇಲ್ಲವೆಂದಾದಲ್ಲಿ ಬೆಂಗಳೂರು ಬಳಿಯಿರುವ ನಂದಿ ಬೆಟ್ಟಕ್ಕೊಮ್ಮೆ ಪ್ರವಾಸ ಮಾಡಿ. ನಸುಕಿನಲ್ಲೆ ಬೆಂಗಳೂರಿನಿಂದ ಹೊರಟು ಸೂರ್ಯೋದಯಕ್ಕೆ ಮುಂಚಿತವಾಗಿಯೆ ಅಲ್ಲಿರಲು ಪ್ರಯತ್ನಿಸಿ. ಮೋಡಗಳ ಸಾಗರದ ಒಂದು ಅದ್ಭುತ ನೋಟ ನಿಮ್ಮೆಲ್ಲ ಒತ್ತಡವನ್ನು ಶಮನಗೊಳಿಸಬಹುದು.

ಚಿತ್ರಕೃಪೆ: Yasmeen syeda

ಟ್ರೆಕ್

ಟ್ರೆಕ್

ಕುಕ್ಕೆ ಸುಬ್ರಮಣ್ಯದಿಂದಲೂ ಚಾರಣ ಮಾಡಬಹುದಾದ ಕುಮಾರ ಪರ್ವತವು ಡಿಸೆಂಬರ್-ಜನವರಿ ಸಂದರ್ಭದಲ್ಲಿ ಅದ್ಭುತವಾಗಿ ಕಂಡುಬರುತ್ತದೆ. ಕೊಡಗಿನ ಸೋಮವಾರಪೇಟೆಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಈ ಪರ್ವತವನ್ನು ಸುಬ್ರಹ್ಮಣ್ಯ ಬೆಟ್ಟಗಳು ಹಾಗೂ ಪುಷ್ಪಗಿರಿ ಎಂಬ ಹೆಸರಿನಿಂದಲೂ ಸಹ ಕರೆಯುತ್ತಾರೆ.

ಚಿತ್ರಕೃಪೆ: Gaurav Kapatia

ಉತ್ತರಾಖಂಡ

ಉತ್ತರಾಖಂಡ

ಉತ್ತರಾಖಂಡ ರಾಜ್ಯದ ವ್ಯಾಪ್ತಿಯಲ್ಲಿ ಕಂಡುಬರುವ ಹಿಮಾಲಯ ಪರ್ವತ ಶ್ರೇಣಿಯ ನೋಟಗಳು ಅತ್ಯಾಕರ್ಷಕವಾಗಿ ಕಂಡುಬರುತ್ತವೆ. ಅಂತಹ ಒಂದು ಹಿಮಾಲಯ ಪರ್ವತವೊಂದರ ಹಿನ್ನೆಲೆಯಲ್ಲಿ ಅದ್ಭುತವಾಗಿ ಗೋಚರಿಸುವ ಚಂದಿರ.

ಚಿತ್ರಕೃಪೆ: Sp2702

ಮೇಘಾಲಯ

ಮೇಘಾಲಯ

ಮೇಘಾಲಯ ರಾಜ್ಯದ ಡಾವ್ಕಿ ಎಂಬ ಚಿಕ್ಕ ಪಟ್ಟಣದಲ್ಲಿ ಹರಿದಿರುವ ಡಾವಿಕೆ ನದಿಯ ಅದ್ಭುತ ನೋಟ. ಈ ನೀರು ಎಷ್ಟು ಸ್ಪಷ್ಟವಾಗಿದೆ ಎಂದರೆ ಸೇತುವೆಯ ಮೇಲಿನಿಂದ ನೋಡಿದಾಗಲೂ ಸಹ ನೀರಿನ ತಳವನ್ನು ಕಾಣಬಹುದಾಗಿದೆ. ಸ್ಥಳೀಯವಾಗಿ ಮೀನುಗಾರರು ಪ್ರವಾಸಿಗರಿಗೆ ದೋಣಿ ವಿಹಾರದ ಸೌಲಭ್ಯವನ್ನೂ ಸಹ ಒದಗಿಸುತ್ತಾರೆ.

ಚಿತ್ರಕೃಪೆ: AditiVerma2193

ಅಸ್ಸಾಂ ರಾಜ್ಯ

ಅಸ್ಸಾಂ ರಾಜ್ಯ

ಅಸ್ಸಾಂ ರಾಜ್ಯದ ತಿನ್ಸುಕಿಯಾ ಜಿಲ್ಲೆಯಲ್ಲಿರುವ ಡಿಬ್ರೂ-ಸೈಖೋವ ರಾಷ್ಟ್ರೀಯ ಉದ್ಯಾನ.

ಚಿತ್ರಕೃಪೆ: Dhruba Jyoti Baruah

ಮನಮೋಹಕ

ಮನಮೋಹಕ

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸುಲೂರು.

ಚಿತ್ರಕೃಪೆ: Ashokkumar S T

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದ ಏಕೈಕ ಮ್ಯಾಂಗ್ರೋವ್ ಕಾಡನ್ನು ಹೊಂದಿರುವ ಸುಂದರಬನ್ ಅರಣ್ಯದ ಅದ್ಭುತ ದೃಶ್ಯ.

ಚಿತ್ರಕೃಪೆ: Samim Akhter

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರ ರಾಜ್ಯದ ಲಡಾಖ್ ಪ್ರಾಂತ್ಯವು ತನ್ನ ಅತ್ಯದ್ಭುತ ಭೂದೃಶ್ಯಾವಳಿಗಳಿಂದಾಗಿ ವಿಶ್ವದಲ್ಲೆ ಪ್ರಖ್ಯಾತಿಗಳಿಸಿದ ತಾಣವಾಗಿದೆ.

ಚಿತ್ರಕೃಪೆ: Parth Patel

ಲಡಾಖ್

ಲಡಾಖ್

ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರಾಂತ್ಯದಲ್ಲಿರುವ ಬೌದ್ಧರ ಶಾಂತಿ ಸ್ತೂಪವಿದು. ರಾತ್ರಿಯ ಬಾನಂಗಳದಲಿ ಸುಂದರವಾಗಿ ಕಾಣುವ ಈ ದೃಶ್ಯ ಸಾವಿರಾರು ನಕ್ಷತ್ರಗಳ ಅವಿನಾಭಾವ ನೋಟವನ್ನು ಒದಗಿಸುತ್ತದೆ.

ಚಿತ್ರಕೃಪೆ: Ashish swaroop

ಹಸಿರಿನ ಪ್ರಭಾವ

ಹಸಿರಿನ ಪ್ರಭಾವ

ವಿಶ್ವ ವಿಖ್ಯಾತಿಗಳಿಸಿರುವ ಬಳ್ಳಾರಿ ಜಿಲ್ಲೆಯ ಪಾರಂಪರಿಕ ತಾಣವಾದ ಹಂಪಿಯ ಭೌತಿಕ ಸೌಂದರ್ಯವನ್ನು ಅನಾವರಣಗೊಳಿಸುವ ದೃಶ್ಯ.

ಚಿತ್ರಕೃಪೆ: Biddanda Somaya Nanjapa

ಕೋವಿಲ್ಲೂರು

ಕೋವಿಲ್ಲೂರು

ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಕೋವಿಲ್ಲೂರು ಒಂದು ಸುಂದರ ಭೂದೃಶ್ಯಾವಳಿಗಳನ್ನು ಹೊಂದಿರುವ ಪುಟ್ಟ ಗ್ರಾಮವಾಗಿದೆ. ಮುನ್ನಾರ್ ಹಾಗೂ ಕೊಚ್ಚಿಯ ಬಳಿ ಈ ಗ್ರಾಮ ಸ್ಥಿತವಿದೆ. ಕೊಚ್ಚಿಯಿಂದ 120 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Joseph Lazer

ಮಹಾರಾಷ್ಟ್ರ

ಮಹಾರಾಷ್ಟ್ರ

ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ತೋಶೆಘರ್ ಜಲಪಾತದ ಅತ್ಯಂತ ವಿಹಂಗಮ ನೋಟ.

ಚಿತ್ರಕೃಪೆ: Amit Shinde

ಸತಾರಾ

ಸತಾರಾ

ಮಹಾರಾಷ್ಟ್ರದ ಸತಾರಾ ಪಟ್ಟಣದಿಂದ ಕೇವಲ 25 ಕಿ.ಮೀ ಗಳಷ್ಟು ದೂರದಲ್ಲಿರುವ ಕಾಸ್ ಹೂವಿನ ಕಣಿವೆಯಿರುವ ಸ್ಥಳದ ಆಸು ಪಾಸಿನಲ್ಲಿ ಕಂಡುಬರುವ ಅದ್ಭುತ ಭೂದೃಶ್ಯಾವಳಿ.

ಚಿತ್ರಕೃಪೆ: Apoorva Karlekar

ಎಲ್ಲೆಡೆ ಬಣ್ಣ

ಎಲ್ಲೆಡೆ ಬಣ್ಣ

ಕಾಸ್ ಹೂವಿನ ಕಣಿವೆಯು ಭೇಟಿ ನೀಡಲೇಬೇಕಾದ ತಾಣವಾಗಿದ್ದು ಇದರ ಭೇಟಿಯು ಸಮಯದ ಮೇಲೆ ಅವಲಂಬಿಸಿದೆ. ಸಾಮಾನ್ಯವಾಗಿ ಮಳೆಗಾಲ ಅಂತಿಮ ದಿನಗಳಿಂದ ಹಿಡಿದು ನವಂಬರ್-ಡಿಸೆಂಬರ್ ವರೆಗಿನ ಸಮಯವು ಇದಕ್ಕೆ ಭೇಟಿ ನೀಡಲು ಪ್ರಶಸ್ತವಾಗಿದೆ. ಎಲ್ಲೆಡೆ ಕಂಡುಬರುವ ಹೂವಿನ ರಾಶಿಯು ಭೂತಾಯಿಯೊಂದಿಗೆ ಬಾಂಧವ್ಯ ಓಕುಳಿ ಹಬ್ಬ ಆಚರಿಸಿದಂತಿರುತ್ತದೆ.

ಚಿತ್ರಕೃಪೆ: Nidrini

ಮಣಿಪುರ

ಮಣಿಪುರ

ಮಣಿಪುರ ರಾಜ್ಯದ ಬಿಷ್ಣುಪುರ ಜಿಲ್ಲೆಯ ಮೋಯಿರಾಂಗ್ ನಗರದಲ್ಲಿರುವ ಲೋಕ್ತಕ್ ಕೆರೆ. ಇದು ಜಗತ್ತಿನ ಏಕೈಕ ತೇಲುವ ಕೆರೆಯಾಗಿದೆ.

ಚಿತ್ರಕೃಪೆ: Sudiptorana

ಒಡಿಶಾ

ಒಡಿಶಾ

ಒಡಿಶಾ ರಾಜ್ಯದ ಭುವನೇಶವರ ನಗರದ ಬಳಿಯಿರುವ ಐತಿಹಾಸಿಕ ಪ್ರಾಮುಖ್ಯತೆಯ ಉದಯಗಿರಿ ಹಾಗೂ ಖಂಡಗಿರಿಯ ಪೈಕಿ ಖಂಡಗಿರಿಯ ಮೇಲಿರುವ ಜೈನ ಮಂದಿರ.

ಚಿತ್ರಕೃಪೆ: LOKANATH NAYAK

ರಾಜಸ್ಥಾನ

ರಾಜಸ್ಥಾನ

ರಾಜಸ್ಥಾನದ ಜೈಸಲ್ಮೇರ್ ಪಟ್ಟಣದಲ್ಲಿರುವ ಅದ್ಭುತ ಸರೋವರ ಇದಾಗಿದೆ. ಸಾಕಷ್ಟು ಧಾರ್ಮಿಕ ಮಹತ್ವವನ್ನೂ ಸಹ ಪಡೆದಿರುವ ಈ ಕೆರೆಯ ತಟದಲ್ಲಿ ಪ್ರಶಾಂತ ಮನಸ್ಸಿನಿಂದ ಧ್ಯಾನ ಮಾಡಿದರೆ ಸಾಕಷ್ಟು ಮಾನಸಿಕ ಶಾಂತಿ ಲಭಿಸುತ್ತದೆಂದು ಹೇಳಲಾಗುತ್ತದೆ.

ಚಿತ್ರಕೃಪೆ: Sanyamgoyal007

ಉದಯಪುರ

ಉದಯಪುರ

ರಾಜಸ್ಥಾನದ ಪ್ರಸಿದ್ಧ ಪ್ರವಾಸಿ ತಾಣವಾದ ಉದಯಪುರದಲ್ಲಿರುವ ಪ್ರಖ್ಯಾತ ಲೇಕ್ ಪ್ಯಾಲೆಸ್. ಕೆರೆಯ ಮಧ್ಯದಲ್ಲಿರುವ ಈ ಐಷಾರಾಮಿ ಹೋಟೆಲ್ ಹೆಚ್ಚಾಗಿ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಚಿತ್ರಕೃಪೆ: ArishG

ವಾಲ್ಪಾರೈ

ವಾಲ್ಪಾರೈ

ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಸುಂದರ ಗಿರಿಧಾಮವಾದ ವಾಲ್ಪಾರೈನ ನೀರಾರ್ ಜಲಾಶಯದ ಸುತ್ತಮುತ್ತಲಿನಲ್ಲಿ ಕಂಡು ಬರುವ ಅದ್ಭುತ ದೃಶ್ಯ.

ಚಿತ್ರಕೃಪೆ: JohnJoelraj

ತಿರುವಣ್ಣಾಮಲೈ

ತಿರುವಣ್ಣಾಮಲೈ

ತಮಿಳುನಾಡಿನ ತಿರುವಣ್ಣಾಮಲೈನ ವಿಹಂಗಮ ನೋಟ. ಅರುಣಾಚಲೇಶ್ವರ ದೇವಾಲಯ ಸಂಕೀರ್ಣದ ಎಲ್ಲ ಒಂಭತ್ತು ಗೋಪುರಗಳೂ ಕಂಡುಬರುವಂತಹ ಅದ್ಭುತ ಚಿತ್ರವಲ್ಲವೆ ಇದು?

ಚಿತ್ರಕೃಪೆ: Thriyambak J. Kannan

ಕನ್ಯಾಕುಮಾರಿ

ಕನ್ಯಾಕುಮಾರಿ

ಕನ್ಯಾಕುಮಾರಿಯ ಸಮುದ್ರ ತೀರದಿಂದ ನೂರಾರು ಅಡಿಗಳಷ್ಟು ದೂರದಲ್ಲಿ ಸಮುದ್ರದಲ್ಲೆ ಇರುವ ಬಂಡೆಯೊಂದರ ಮೇಲೆ ನಿರ್ಮಿಸಲಾಗಿರುವ ತಮಿಳು ಭಾಷೆಯ ಪ್ರಖ್ಯಾತ ಸಂತ ಕವಿ ತಿರುವಳ್ಳಾರ್ ಪ್ರತಿಮೆ.

ಚಿತ್ರಕೃಪೆ: Sathishkagitha

ಮೂಡಿಗೆರೆ

ಮೂಡಿಗೆರೆ

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಅಗಾಧ ಪ್ರಾಕೃತಿಕ ಸಂಪತ್ತಿನಿಂದ ಕಂಗೊಳಿಸುತ್ತದೆ. ಇಲ್ಲಿನ ವೀಕ್ಷಣಾ ತಾಣಗಳು ಹೊಸ ಹುಮ್ಮಸ್ಸನ್ನು ಮನದಲ್ಲಿ ಬಿತ್ತುತ್ತವೆ ಎಂದರೆ ತಪ್ಪಾಗಲಾರದು.

ಚಿತ್ರಕೃಪೆ: SachinRM

ಹೊಳೆಗುಂಡಿ

ಹೊಳೆಗುಂಡಿ

ಬೆಂಗಳೂರು-ಧರ್ಮಸ್ಥಳ ಮಾರ್ಗದಲ್ಲಿ ಧರ್ಮಸ್ಥಳ ತಲುಪುವ 20 ಕಿ.ಮೀ ಮುಂಚೆಯೆ ಸಿಗುವ ಕೊಕ್ಕಡ ಕ್ರಾಸ್ ನಲ್ಲಿ ಇಳಿದು ಅಲ್ಲಿಂದ ಖಾಸಗಿ ಜೀಪುಗಳ ಮೂಲಕವಾಗಿ ಶಿಶಿಲಾ ಮಾರ್ಗವಾಗಿ ಹೊಳೆಗುಂಡಿಯನ್ನು ತಲುಪಿದರೆ ಸಾಕು, ಅಲ್ಲಿಂದ ಪ್ರಾರಂಭವಾಗುತ್ತದೆ ಎತ್ತಿನ ಭುಜ ಚಾರಣ.

ಚಿತ್ರಕೃಪೆ: L. Shyamal

ಮುರುಡೇಶ್ವರ

ಮುರುಡೇಶ್ವರ

ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರಖ್ಯಾತ ಮುರುಡೇಶ್ವರದ ಶಿವ ಪ್ರತಿಮೆ. ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರ.

ಚಿತ್ರಕೃಪೆ: Harikuttan333

ನಯಾಗ್ರಾ

ನಯಾಗ್ರಾ

ಇದನ್ನು ಭಾರತದ ನಯಾಗ್ರಾ ಜಲಪಾತ ಎಂದೆ ಕರೆಯುತ್ತಾರೆ. ಸಾಕಷ್ಟು ಅಗಲವಾಗಿದ್ದು ಅದ್ಭುತವಾಗಿ ಭೂಮಿಗೆ ಧುಮುಕುತ್ತದೆ. ಛತ್ತೀಸಗಡ್ ಜಿಲ್ಲೆಯ ಬಸ್ತರ್ ಜಿಲ್ಲೆಯ ಜಗ್ದಲ್ಪುರ್ ಬಳಿ ಈ ಜಲಪಾತವಿದೆ.

ಚಿತ್ರಕೃಪೆ: Joe Watzmo

ಮಧ್ಯಮಹೇಶ್ವರ

ಮಧ್ಯಮಹೇಶ್ವರ

ಉತ್ತರಾಖಂಡ ರಾಜ್ಯದಲ್ಲಿರುವ ಬೂಢಾ ಮಧ್ಯಮಹೇಶ್ವರದಿಂದ ಕಂಡುಬರುವ ಚೌಖಂಬಾ ಹಿಮ ಶ್ರೂಂಗದ ಭವ್ಯ ನೋಟ.

ಚಿತ್ರಕೃಪೆ: Abhishek.ghosh1984

ಅತ್ಯದ್ಭುತ

ಅತ್ಯದ್ಭುತ

ಉತ್ತರಾಖಂಡದ ಗೋಮುಖದಿಂದ ಪ್ರಾರಂಭವಾಗುವ ಈ ಚಾರಣ ಸಾಕಷ್ಟು ಅಪಾಯಕಾರಿಯಾಗಿದ್ದು ನಿಪುಣರಿಗೂ ಸವಾಲೆಸೆಯುತ್ತದೆ. ಇಲ್ಲಿನ ದ್ರ್‍ಶ್ಯ ವೈಭೋಗಗಳನ್ನು ನೋಡಿಯೆ ಆನಂದಿಸಬೇಕು.

ಚಿತ್ರಕೃಪೆ: Sharada Prasad CS

ಸಿಯೋಮ್

ಸಿಯೋಮ್

ಅರುಣಾಚಲ ಪ್ರದೇಶದ ಪಶ್ಚಿಮ ಸಿಯಾಂಗ್ ಜಿಲ್ಲೆಯ ಆಲೊ ಎಂಬ ಪಟ್ಟಣದಲ್ಲಿರುವ ಸಿಯೋಮ್ ನದಿಯ ಅದ್ಭುತ ನೋಟ. ನದಿಯು "ಯೂಟರ್ನ್" ಸಾಕಷ್ಟು ಗಮನಸೆಳೆಯುತ್ತದೆ.

ಚಿತ್ರಕೃಪೆ: Mousourik

ಚಂದ್ರಶಿಲಾ ಶೃಂಗ

ಚಂದ್ರಶಿಲಾ ಶೃಂಗ

ಉತ್ತರಾಖಂಡದ ಗಡ್ವಾಲ್ ಹಿಮಾಲಯ ಭಾಗದಲ್ಲಿರುವ ತುಂಗನಾಥ ಬಳಿಯ ಚಂದ್ರಶಿಲಾ ಶಿಖರ ಶೃಂಗ ಚಾರಣವು ಸಾಕಷ್ಟು ರೋಮಾಂಚನ ನೀದುತ್ತದೆ. ಈ ಚಾರಣ ಮಾರ್ಗದಲ್ಲಿ ಅದ್ಭುತವಾಗಿ ಕಂಡುಬರುವ ರೊಡೋಡೆಂಡ್ರಾನ್ ಗಿಡ ಮರಗಳನ್ನು ಕಾಣಬಹುದು. ಇದು ವೈವಿಧ್ಯಮಯ ನೋಟವನ್ನು ಕರುಣಿಸುತ್ತದೆ.

ಚಿತ್ರಕೃಪೆ: Sharath chandra mudalkar

ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶ

ಈಶಾನ್ಯ ಭಾರತದ ಅರುಣಾಚಲ ಪ್ರದೇಶ ರಾಜ್ಯದ ತವಾಂಗ್ ಜಿಲ್ಲೆಯಲ್ಲಿರುವ ಜಿಮಿಥಾಂಗ್ ಪಟ್ಟಣವು ಸಾಕಷ್ಟು ಅದ್ಭುತವಾದ ಸೃಷ್ಟಿ ಸೌಂದರ್ಯದಿಂದ ಕೂಡಿದ್ದು ಇಲ್ಲಿನ ಪರಿಸರವು ಭೂಲೋಕದಲ್ಲಿರುವ ಸ್ವರ್ಗವೆಂದೆ ಅನಿಸುವಂತೆ ಮಾಡುತ್ತದೆ.

ಚಿತ್ರಕೃಪೆ: Keerooz

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X