Search
  • Follow NativePlanet
Share
» »ದ್ವೈತ ಗುರು ಮಧ್ವಾಚಾರ್ಯರು ಜನಿಸಿದ ಶ್ರೀಕ್ಷೇತ್ರ ಪಾಜಕ!

ದ್ವೈತ ಗುರು ಮಧ್ವಾಚಾರ್ಯರು ಜನಿಸಿದ ಶ್ರೀಕ್ಷೇತ್ರ ಪಾಜಕ!

By Vijay

ಇದೊಂದು ಪ್ರಶಾಂತ ಪರಿಸರ ಹಾಗೂ ಹಚ್ಚ ಹಸಿರಿನ ವನರಾಶಿಯಿಂದ ಆವೃತವಾಗಿರುವ ಪವಿತ್ರ ಶ್ರೀಕ್ಷೇತ್ರ. ನಗರದಿಂದ ಈ ಸ್ಥಳಕ್ಕೆ ಬರುತ್ತಲೆ ಏನೊ ಒಂದು ಸಂತಸದ ಅನುಭವ ಉಂಟಾದ ಹಾಗೆ ಅನಿಸುತ್ತದೆ. ಪ್ರಸನ್ನತಾ ಭಾವ ಮನದಲ್ಲಿ ಒಡಮೂಡುತ್ತದೆ. ಸುತ್ತಲಿನ ನಿರ್ಮಲ ಪರಿಸರ ಮನಸಿಗೆ ಮುದ ನೀಡಿದರೆ, ಸ್ಥಳದ ಪಾವಿತ್ರ್ಯತೆಯು ಆಧ್ಯಾತ್ಮಿಕ ಲೋಕದತ್ತ ಕರೆದೊಯ್ಯುತ್ತದೆ.

ಹೌದು, ಈ ರೀತಿಯ ಅನುಭವ ಈ ಸ್ಥಳಕ್ಕೆ ಬಂದಾಗ ಉಂಟಾಗುವುದು ಸಹಜ ಎಂದು ಇಲ್ಲಿಗೆ ಭೆಟಿ ನೀಡುವ ಸಹಸ್ರ ಸಹಸ್ರ ಭಕ್ತಾದಿಗಳ ಅನಿಸಿಕೆ. ಏಕೆಂದರೆ ಇದು ಅಂತಿಂಥ ಸಾಮಾನ್ಯ ಕ್ಷೇತ್ರವಲ್ಲ. ದ್ವೈತ ಪಂಥದ ಪ್ರತಿಪಾದಕರಾದ, ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರು ಜನಿಸಿದ ಮಹಾ ತಾಣ. ಇದನ್ನೆ ಶ್ರೀಕ್ಷೇತ್ರ ಪಾಜಕ ಎಂದು ಕರೆಯುತ್ತಾರೆ.

ಪ್ರಸ್ತುತ ಲೇಖನದ ಮೂಲಕ ಪಾಜಕ ಕ್ಷೇತ್ರ ಹಾಗೂ ಇಲ್ಲಿ ತಮ್ಮ ಬಾಲ್ಯ ಕಳೆದ ಮಧ್ವಾಚಾರ್ಯರರ ಕ್ಷೇತ್ರದೊಂದಿಗಿರುವ ನಂಟಿನ ಕುರಿತು ತಿಳಿಯಿರಿ. ಅವಕಾಶ ದೊರೆತರೆ ಖಂಡಿತವಗಿಯೂ ಈ ಶ್ರೀಕ್ಷೇತ್ರಕ್ಕೊಮ್ಮೆ ಭೇಟಿ ನೀಡಿ ಇಲ್ಲಿನ ನಿರ್ಮಲ ವಾತಾವರಣದಿಂದ ನಿಮ್ಮೆಲ್ಲ ಒತ್ತಡಗಳನ್ನು ಕಡಿಮೆ ಮಾಡಿಕೊಂಡು ಮತ್ತೆ ಜೀವನೋತ್ಸಾಹ ಪಡೆಯಿರಿ.

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಕಥೆಯಂತೆ, ನಾದ್ದಾಂತಿಲ್ಲಾಯಾ ಹಾಗೂ ವೇದವತಿ ದಂಪತಿಗಳಿಗೆ ಮದುವೆಯಾಗಿ ಬಹು ಸಮಯದವರೆಗೂ ಸಂತಾನವಾಗಿರಲಿಲ್ಲ. ದೇವರ ಪರಮ ಭಕ್ತರಾದ ದಂಪತಿಗಳು ಸಂತಾನ ಭಾಗ್ಯಕ್ಕಾಗಿ ದೇವರಲ್ಲಿ ಸಾಕಷ್ಟು ಪ್ರಾರ್ಥಿಸುತ್ತಿದ್ದರು.

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಉಡುಪಿಯ ಅನಂತೇಶ್ವರನ ಸನ್ನಿಧಿಯಲ್ಲಿ ಸುಮಾರು ಹನ್ನೆರಡು ವರ್ಷಗಳ ಕಾಲ ಸತತವಾಗಿ ಪ್ರಾರ್ಥಿಸಿದುದರ ಫಲವಾಗಿ ಕ್ರಿ.ಶ. 1238 ರಲ್ಲಿ ಅವರಿಗೆ ಗಂಡು ಸಂತಾನವಾಯಿತು. ಆ ಸಂತಾನವೆ ಶ್ರೀ ಮಧ್ವಾಚಾರ್ಯರು. ಚಿಕ್ಕಂದಿನಿಂದಲೂ ಸಾಕಷ್ಟು ಚತುರ ಹಾಗೂ ದೈವಿಕ ಭಕ್ತರಾಗಿದ್ದರು ಶ್ರೀ ಆಚಾರ್ಯರು.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ವೈಷ್ಣವ ಸಂಪ್ರದಾಯಕ್ಕೆ ಸೇರಿದ್ದ ಇವರ ತಾಯಿ-ತಂದೆಯರು ಮೊದಲು ಇವರಿಗೆ ವಾಸುದೇವ ಎಂದು ನಾಮಕರಣ ಮಾಡಿದ್ದರು. ತದ ನಂತರ ಇವರು ಪೂರ್ಣಪ್ರಜ್ಞ, ಆನಂದತೀರ್ಥ ಎಂಬೆಲ್ಲ ಹೆಸರುಗಳನ್ನು ಪಡೆದರು ಹಾಗೂ ಕೊನೆಯದಾಗಿ ಮಧ್ವಾಚಾರ್ಯರೆಂದೆ ಪ್ರಸಿದ್ಧಿ ಪಡೆದರು.

ಚಿತ್ರಕೃಪೆ: Nharipra

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಇವರು ಜನಿಸಿದ ಪಾಜಕ ಕ್ಷೇತ್ರವು ಕರ್ನಾಟಕದ ಉಡುಪಿ ನಗರದಿಂದ ಸುಮಾರು ಹನ್ನೆರಡು ಕಿ.ಮೀ ಗಳಷ್ಟು ದೂರದಲ್ಲಿದ್ದು ಸುಲಭವಾಗಿ ತಲುಪಬಹುದಾಗಿದೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಕುಂಜಾರು ಬೆಟ್ಟಕ್ಕೆ ಹತ್ತಿರದಲ್ಲಿರುವ ಪಾಜಕ ಕ್ಷೇತ್ರವು ಪ್ರಾಕೃತಿಕವಾಗಿಯೂ ಸಾಕಷ್ಟು ನಯನಮನೋಹರವಾದ ಕ್ಷೇತ್ರವಾಗಿದೆ. ಕುಂಜಾರು ಬೆಟ್ಟದ ತುದಿಯಲ್ಲಿ ದುರ್ಗಾ ದೇವಿಯ ದೇಗುಲವಿದ್ದು ಇದನ್ನು ದುರ್ಗಾ ಬೆಟ್ಟ ಎಂಬ ಹೆಸರಿನಿಂದಲೂ ಸಹ ಕರೆಯಲಾಗುತ್ತದೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಕುಂಜಾರುಬೆಟ್ಟದ ನಾಲ್ಕು ದಿಕ್ಕುಗಳಲ್ಲೂ ಪವಿತ್ರವಾದ ತೀರ್ಥಗಳಿವೆ. ನಂಬಿಕೆಯಂತೆ ಈ ನಾಲ್ಕೂ ತೀರ್ಥಗಳಲ್ಲಿ ಸ್ನಾನ ಮಾಡುವುದರಿಂದ ಎಲ್ಲ ಮಾಡಿದ ಪಾಪ-ಕರ್ಮಗಳು ನಶಿಸುತ್ತವೆ ಎಂದು ನಂಬಲಾಗಿದೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಈ ನಾಲ್ಕೂ ತೀರ್ಥಗಳು ಹಾಗೂ ಪಾಜಕವು ವಿಷ್ಣುವಿನ ಅವತಾರವಾದ ಪರಶುರಾಮರಿಂದ ನಿರ್ಮಿಸಲ್ಪಟ್ಟಿದೆ ಎಂಬ ಪ್ರತೀತಿಯಿದೆ. ಇಲ್ಲಿರುವ ನಾಲ್ಕು ತೀರ್ಥಗಳೆಂದರೆ ಪೂರ್ವಕ್ಕಿರುವ ಪರಶು ತೀರ್ಥ, ದಕ್ಷಿಣಕ್ಕಿರುವ ಧನುಶ ತೀರ್ಥ, ಪಶ್ಚಿಮಕ್ಕಿರುವ ಗದಾ ತೀರ್ಥ ಹಾಗೂ ಉತ್ತರಕ್ಕಿರುವ ಬಾಣ ತೀರ್ಥ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಆಚಾರ್ಯರ ಬಾಲ್ಯದ ಪವಾಡಗಳಿಗೆ ಸಂಬಂಧಿಸಿದಂತೆ ಹಲವು ಕುರುಹುಗಳನ್ನು ಇಂದಿಗೂ ಪಾಜಕದಲ್ಲಿ ಕಾಣಬಹುದಾಗಿದೆ. ಒಂದೊಮ್ಮೆ ಆಚಾರ್ಯರು ದುರ್ಗಾ ಬೆಟ್ಟ ಏರಿದ್ದರು. ಇತ್ತ ತಾಯಿ ಅವರನ್ನು ಕರೆದಾಗ ಆಚಾರ್ಯರು ಒಂದೆ ಒಂದು ನೆಗೆತದಲ್ಲಿ ಬೆಟ್ಟದಿಂದ ನೇರವಗಿ ತಮ್ಮ ಮನೆಯ ಅಂಗಳಕ್ಕೆ ಹಾರಿದ್ದರು ಹಾಗೂ ಅವರ ಪಾದದ ಗುರುತು ಇಂದಿಗೂ ಇದೆ ಎನ್ನಲಾಗಿದೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಹೀಗೆ ಪಾದದ ಗುರುತುಗಳು ಒಡಮೂಡಿರುವ ಸ್ಥಳದಲ್ಲಿಯೆ ಶ್ರೀ ವಾದಿರಾಜ ತೀರ್ಥರು ಮಧ್ವಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆನ್ನಲಾಗಿದೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ವಾದಿರಾಜ ತೀರ್ಥರು ಪ್ರತಿಷ್ಠಾಪಿಸಿದ ಮಾಧ್ವರ ವಿಗ್ರಹದ ಪಕ್ಕದಲ್ಲಿಯೆ ಆಚಾರ್ಯರ ಪೂರ್ವಜರ ಮನೆಯಿದ್ದು ಅದನ್ನು ಮೂಡು ಮಠ ಎಂದು ಕರೆಯುತ್ತಾರೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಉಡುಪಿಯಿಂದ ಪಾಜಕ ಕ್ಷೇತ್ರ ತಲುಪುತ್ತಿದ್ದಂತೆಯೆ ಮೊದಲಿಗೆ ಕಾಣುವುದು ಅನಂತಪದ್ಮನಾಭನ ದೇವಾಲಯ. ಇಲ್ಲಿ ಶ್ರೀದೇವಿ ಹಾಗೂ ಭೂದೇವಿಯರ ವಿಗ್ರಹಗಳನ್ನೂ ಸಹ ಕಾಣಬಹುದಾಗಿದೆ. ವಿಗ್ರಹಗಳು ಸುಮಾರು ಎರಡು ಅಡಿಗಳಷ್ಟು ಎತ್ತರವಿದ್ದು ಪಂಚಲೋಹಗಳಿಂದ ಮಾಡಲ್ಪಟ್ಟಿವೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಮಧ್ವಾಚಾರ್ಯರ ಬಾಲ್ಯ ಪವಾಡಗಳ ಕುರಿತು ಸಾಕ್ಷ್ಟು ಕಡೆ ಉಲ್ಲೇಖಿಸಲಾಗಿದ್ದು ಕೆಲವು ಕುರುಹುಗಳನ್ನು ಪಾಜಕ ಕ್ಷೇತ್ರದಲ್ಲಿ ಕಾಣಬಹುದು. ಅವುಗಳಲ್ಲೊಂದಾಗಿದೆ. ಮಣಿಮಂತ ದೈತ್ಯನ ಸಂಹಾರ ಸ್ಥಳ. ಮಣಿಮಂತನು ಹಾವಿನ ರೂಪದಲ್ಲಿ ಬಂದಾಗ ಆಚಾರ್ಯರು ಆತನನ್ನು ಸಂಹರಿಸಿದ್ದರು. ಇಂದು ಈ ಸ್ಥಳವು ಪಾಜಕದಲ್ಲಿ ಮಣಿಮಂತ ದೈತ್ಯ ಸಂಹಾರ ಸ್ಥಳ ಎಂದೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ದೈತ್ಯನನ್ನು ಸಂಹರಿಸಲಾದ ಕರಾರುವಕ್ಕಾದ ಸ್ಥಳ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಬಾಲ್ಯದಲ್ಲೊಮ್ಮೆ ಮಧ್ವಾಚಾರ್ಯರು ಹಾಲು ಹಾಗೂ ಮೊಸರಿನ ಪಾತ್ರೆಗಳನ್ನು ಮುಚ್ಚಿ ಸಂರಕ್ಷಿಸಲೆಂದು ಕಲ್ಲಿನ ದೊಡ್ಡ ಚಪ್ಪಡಿಗಳನ್ನು ನಿರಾಯಾಸವಾಗಿ ಎತ್ತಿ ಎಲ್ಲರನ್ನೂ ಬೆರುಗುಗೊಳಿಸಿದ್ದರು. ಇಂದಿಗೂ ಆ ಕಲ್ಲು ಚಪ್ಪಡಿಗಳನ್ನು ಸಂರಕ್ಷಿಸಿಡಲಾಗಿದ್ದು ಪಾಜಕದ ಆಕರ್ಷಣೆಗಳಲ್ಲೊಂದಾಗಿದೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಒಂದೊಮ್ಮೆ ಆಚಾರ್ಯರ ತಂದೆ ಶ್ರೀಮಂತನೊಬ್ಬನಿಂದ ಎತ್ತೊಂದನ್ನು ಪಡೆದಿದ್ದರು. ಅದಕ್ಕೆ ಪಾವತಿಸಬೇಕಾದ ಹಣ ನೀಡಲು ಅಸಹಾಯಕರಾದಾಗ ಶ್ರೀಮಂತನು ಅವರಿಗೆ ಮನೆಯೊಳಗೆ ಪ್ರವೇಶಿಸಲು ತಡೆದನು. ಅಲ್ಲಿಗೆ ಬಂದ ಬಾಲ್ಯಾವಸ್ಥೆಯ ಆಚಾರ್ಯರು ನಡೆದ ಸಂಗತಿಯನ್ನು ತಿಳಿದು ಹುಣಸೆ ಬೀಜಗಳನ್ನು ಆ ಶ್ರೀಮಂತನಿಗೆ ಕೊಟ್ಟು ಕಳುಹಿಸಿದರು. ಸ್ವಲ ಸಮಯದ ನಂತರ ಆಚಾರ್ಯರ ತಂದೆ ಆ ಶ್ರೀಮಂತನಿಗೆ ಹಣ ಮರಳಿಸಲು ತೆರಳಿದಾಗ ಶ್ರೀಮಂತನು ಹಣವು ತನಗೆ ಈಗಾಗಲೆ ಸಿಕ್ಕಿದೆ ಎಂದು ಹೇಳಿ ಕಳುಹಿಸಿದನು. ವಾಸುದೇವತೀರ್ಥದ ಬಳಿ ಈ ಸ್ಥಳವಿದ್ದು ಅಲ್ಲಿ ದೊಡ್ಡದಾದ ಹುಣಸೆ ಮರವೊಂದನ್ನು ಕಾಣಬಹುದಾಗಿದೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಪಾಜಕದಲ್ಲಿ ಭೇಟಿ ನೀಡಬಹುದಾದ ಇನ್ನೊಂದು ಆಸಕ್ತಿಕರ ಸ್ಥಳವೆಂದರೆ ಬುಡಮೇಲಾಗಿ ಚೆನ್ನಾಗಿ ಬೆಳೆದಿರುವ ಅಶ್ವತ್ಥ ವೃಕ್ಷ. ಇದು ಬೆಳೆದ ಸ್ಥಳದಲ್ಲಿ ನಾಗ ಶಿಲೆಗಳನ್ನು ಪ್ರತಿಷ್ಠಾಪಿಸಲಾಗಿದೆ ಹಾಗೂ ಸಾಕಷ್ಟು ಪೂಜಾ ವಿಧಿ ವಿಧಾನಗಳು ಇಲ್ಲಿ ಜರುಗುತ್ತವೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಹಿಂದುಗಳಲ್ಲಿ ಅಕ್ಷರಾಭ್ಯಾಸ ಶಾಸ್ತ್ರ ಮಾಡಿಸುವ ಸಂಪ್ರದಾಯವಿದೆ. ಈ ರೀತಿಯ ಶಾಸ್ತ್ರವನ್ನು ನೆರವೇರಿಸಲು ಪಾಜಕ ಕ್ಷೇತ್ರಕ್ಕೆ ಸಾಕಷ್ಟು ಜನ ಭಕ್ತಾದಿಗಳು ಬರುತ್ತಾರೆ. ಇಲ್ಲಿರುವ ಅನಂತಪದ್ಮನಾಭನ ದೇವಾಲಯ ಅಂಗಳದಲ್ಲಿರುವ ತುಳಸಿ ಬೃಂದಾವನದ ಸ್ಥಳದಲ್ಲಿ ಈ ಆಚರಣೆ ಇಂದಿಗೂ ಕ್ರಮಬದ್ಧವಾಗಿ ನಡೆಯುತ್ತದೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಕುಂಜಾರುಗಿರಿಯ ಪಾಜಕ ಕ್ಷೇತ್ರದಲ್ಲಿ ಹಿಂದೆ ರಚಿಸಲಾಗಿರುವ ಮಹತ್ವದ ತಾಳೆ ಎಲೆಯಲ್ಲಿ ಬರೆಯಲಾಗಿರುವ ಹಲವಾರು ಹಸ್ತಪ್ರತಿಗಳನ್ನು ಇಂದಿಗೂ ಸಂರಕ್ಷಿಸಿಡಲಾಗಿದೆ. ಅಲ್ಲದೆ ದೇವಾಲಯ ಆವರಣದದಲ್ಲಿ ಮಹಾ ಗುರುಗಳ ಪ್ರವಚನಗಳಿಗೆಂದು ಮಂಟಪವನ್ನೂ ಸಹ ನಿರ್ಮಿಸಲಾಗಿರುವುದನ್ನು ಕಾಣಬಹುದು.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಉಪನಯನದ ನಂತರ ಪುಟ್ಟ ಮಧ್ವಾಚಾರ್ಯರು ಪ್ರತಿ ದಿನ ಸ್ನಾನ ಮಾಡಲೆಂದು ಪರಶು ತೀರ್ಥ, ಧನುಶ ತೀರ್ಥ, ಗದಾ ತೀರ್ಥ ಹಾಗೂ ಬಾಣ ತೀರ್ಥಗಳಿಗೆ ಭೇಟಿ ನೀಡುತ್ತಿದ್ದರು. ಇದರಿಂದ ಅವರ ತಾಯಿಯು ಪುಟ್ಟ ಬಾಲಕನೊಬ್ಬನೆ ಈ ನಾಲ್ಕೂ ತೀರ್ಥಗಳಿಗೆ ಭೇಟಿ ನೀಡಬೇಕಾಗಿರುವುದರಿಂದ ಚಿಂತಾಕ್ರಾಂತರಾಗಿದ್ದರು. ಅವಳ ಈ ದುಗುಡವನ್ನು ನಿವಾರಿಸಲು ಆಚಾರ್ಯರು ಈ ನಾಲ್ಕೂ ತೀರ್ಥಗಳ ಅಂಶವುಳ್ಳ ವಾಸುದೇವ ತೀರ್ಥವನ್ನು ನಿರ್ಮಿಸಿದರು ಹಾಗೂ ಅಲ್ಲಿಯೆ ಸ್ನಾನ ಮಾಡುತ್ತಿದ್ದರು.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಪಾಜಕದಲ್ಲಿರುವ ಪರಶುರಾಮರ ದೇವಾಲಯ. ಇದೂ ಸಹ ಪಾಜಕದಲ್ಲಿ ಭೇಟಿ ನೀಡಬಹುದಾದ ಧಾರ್ಮಿಕ ಮಹತ್ವದ ಸ್ಥಳವಾಗಿದೆ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಪಾಜಕ ಕ್ಷೇತ್ರದಲ್ಲಿರುವ ಬಾಣ ತೀರ್ಥ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಪಾಜಕ ಕ್ಷೇತ್ರದಲ್ಲಿರುವ ಗದ ತೀರ್ಥ.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಪಾಜಕ ಕ್ಷೇತ್ರದಲ್ಲಿರುವ ಕುಂಜಾರುಗಿರಿ ಬೆಟ್ಟ ಅಥವಾ ದುರ್ಗಾ ಬೆಟ್ಟ. ಈ ಬೆಟ್ಟದ ತುದಿಯಲ್ಲಿ ದುರ್ಗಾದೇವಿಯ ದೇವಾಲಯವಿದೆ. ಪುಟ್ಟ ಆಚಾರ್ಯರು ಈ ಬೆಟ್ಟವನ್ನು ಆಗಾಗ ಹತ್ತುತ್ತಿದ್ದರು.

ಚಿತ್ರಕೃಪೆ: Brunda Nagaraj

ಪಾಜಕ ಶ್ರೀಕ್ಷೇತ್ರ:

ಪಾಜಕ ಶ್ರೀಕ್ಷೇತ್ರ:

ಉಡುಪಿಯಿಂದ ಪಾಜಕವು ಕೇವಲ ಹನ್ನೆರಡು ಕಿ.ಮೀ ದೂರವಿದ್ದು ಬಸ್ಸು ಅಥವಾ ರಿಕ್ಷಾಗಳ ಮೂಲಕ ಸುಲಭವಾಗಿ ತಲುಪಬಹುದು. ತಂಗಲು ಉಡುಪಿ ನಗರ ಉತ್ತಮವಾದ ಆಯ್ಕೆ. ಇನ್ನೂ ತಿಂಡಿ-ಉಪಹಾರಗಳಿಗೆ ಪಾಜಕದಲ್ಲಿ ಉಪಹಾರಗೃಹವಿದೆ. ದುರ್ಗಾ ಬೆಟ್ಟದಲ್ಲಿ ಶೌಚಾಲಯಗಳ ವ್ಯವಸ್ಥೆಯಿದ್ದು ಉತ್ತಮವಾಗಿ ನಿರ್ವಹಿಸಲ್ಪಟ್ಟಿವೆ.

ಚಿತ್ರಕೃಪೆ: Brunda Nagaraj

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X