Search
  • Follow NativePlanet
Share
» »ಶತಮಾನ ಇತಿಹಾಸದ ಸುಂದರ ದೇಗುಲ

ಶತಮಾನ ಇತಿಹಾಸದ ಸುಂದರ ದೇಗುಲ

ಪುರಾತನ ಕಾಲದ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಬೇಕು, ಸುಂದರ ವಾಸ್ತು ಶಿಲ್ಪಗಳ ಸೌಂದರ್ಯವನ್ನು ಸೆರೆ ಹಿಡಿಯಬೇಕೆನ್ನುವ ಬಯಕೆ ಇದ್ದರೆ ಕಾಂಚಿಪುರಂನ ಕೈಲಾಸನಾಥರ್ ದೇಗುಲಕ್ಕೆ ಬನ್ನಿ.

By Divya

ಪುರಾತನ ಕಾಲದ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಬೇಕು. ಸುಂದರ ವಾಸ್ತು ಶಿಲ್ಪಗಳ ಸೌಂದರ್ಯವನ್ನು ಸೆರೆ ಹಿಡಿಯಬೇಕೆನ್ನುವ ಬಯಕೆ ಇದ್ದರೆ ಕಾಂಚಿಪುರಂನ ಕೈಲಾಸನಾಥರ್ ದೇಗುಲಕ್ಕೆ ಬನ್ನಿ. ಶಿವನನ್ನು ಆರಾಧಿಸುವ ಈ ದೇಗುಲ ಹಿತವಾದ ಅನುಭವ ನೀಡುವುದು. ತಮಿಳುನಾಡಿನ ಆವೃತ್ತಿಯಲ್ಲಿ ಇರುವ ಈ ದೇಗುಲವನ್ನು ಕ್ರಿ.ಶ. 685 ರಿಂದ 705ರ ಅವಧಿಯಲ್ಲಿ ಪಲ್ಲವರು ನಿರ್ಮಿಸಿದ್ದರು ಎನ್ನಲಾಗುತ್ತದೆ.

ಬೆಂಗಳೂರಿನಿಂದ 277.2 ಕಿ.ಮೀ. ದೂರದಲ್ಲಿರುವ ತಾಣಕ್ಕೆ 4 ರಿಂದ 5 ತಾಸುಗಳ ಪ್ರಯಾಣ ಬೆಳೆಸಬೇಕು. ಕಾಂಚಿಪುರಂ ಸೀರೆಗಳಿಗೆ ಪ್ರಸಿದ್ಧಿ ಪಡೆದ ಈ ತಾಣದಲ್ಲಿ ನೋಡಬಹುದಾದ ಅನೇಕ ಸ್ಥಳಗಳಿವೆ. ಸಾವಿರ ದೇವಾಲಯಗಳ ತವರು ಎನ್ನುವ ಹಿರಿಮೆಯ ಕಿರೀಟವನ್ನು ಹೊತ್ತಿದೆ. ಸಾವಿರಾರು ದೇಗುಲಗಳಲ್ಲಿ ಪ್ರಮುಖ ಸ್ಥಾನ ಪಡೆದ ಕೈಲಾಸ ನಾಥರ್ ದೇಗುಲದ ಫೋಟೋ ಪರಿಚಯ ಮಾಡಿಕೊಳ್ಳೋಣ ಬನ್ನಿ...

ದೇಗುಲದ ಪರಿಚಯ

ದೇಗುಲದ ಪರಿಚಯ

ವೇದಾವತಿ ನದಿ ದಡದಲ್ಲಿ ನಿಂತಿರುವ ದೇವಾಲಯವಿದು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇಗುಲದ ದ್ವಾರವು ಪೂರ್ವ ಮುಖವಾಗಿದೆ. ಶಿವನನ್ನು ಆರಾಧಿಸುವ ಈ ದೇಗುಲ ಸುಂದರ ಪುರಾಣ ಇತಿಹಾಸವನ್ನು ಹೊಂದಿದೆ.
PC: wikimedia.org

ಪುರಾಣದ ಕಥೆ

ಪುರಾಣದ ಕಥೆ

ಪುರಾಣದ ಪ್ರಕಾರ 'ಕ' ಎಂದರೆ ಬ್ರಹ್ಮ ಮತ್ತು ಅಂಚಿ ಎಂದರೆ ವಿಷ್ಣು ಎಂದರ್ಥ. ಈ ಕ್ಷೇತ್ರದಲ್ಲಿ ಶಿವನ ಆರಾಧನೆಯ ಜೊತೆಯಲ್ಲೇ ವಿಷ್ಣುವಿನ ಆರಾಧನೆಯೂ ಇಲ್ಲಿ ನಡೆಯುತ್ತದೆ ಎನ್ನುವ ಕಥೆಯನ್ನು ಹೇಳುತ್ತದೆ.
PC: wikimedia.org

ಅರಸರ ಕಾಲ

ಅರಸರ ಕಾಲ

7 ಮತ್ತು 9ನೇ ಶತಮಾನದಲ್ಲಿ ಪಲ್ಲವರು ತಮಿಳುನಾಡನ್ನು ಆಳುತ್ತಿದ್ದರು. ಆ ಸಂದರ್ಭದಲ್ಲಿ ಈ ಪ್ರದೇಶವನ್ನು ಸಪ್ತಪುರಿ ಎಂದು ಕರೆಯುತ್ತಿದ್ದರು. ಆಗಲೂ ಇದು ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿತ್ತು.
PC: wikimedia.org

ಇವರು ಆಳಿದವರು

ಇವರು ಆಳಿದವರು

ಈ ಪ್ರದೇಶವನ್ನು ಕಾಲಕ್ಕನುಗುಣವಾಗಿ ವಿಜಯನಗರ ಅರಸರು, ಪಾಂಡ್ಯರು, ಚೋಳರು ಹಾಗೂ ಬ್ರಿಟಿಷರು ಆಳಿದರು ಎನ್ನಲಾಗುತ್ತದೆ.
PC: wikimedia.org

ಇಲ್ಲಿಯ ಪ್ರಮುಖ ದೇವಾಲಯ

ಇಲ್ಲಿಯ ಪ್ರಮುಖ ದೇವಾಲಯ

ಕೈಲಾಸನಾಥರ್ ದೇವಾಲಯ, ಏಕಾಂಬರೇಶ್ವರ ದೇಗುಲ, ವೈಕುಂಠ ಪೆರುಮಾಳ್ ದೇವಾಲಯ, ಕುಮಾರಕೊಟ್ಟನ್, ಕಾಮಾಕ್ಷಿ ಅಮ್ಮನ್ ದೇವಾಲಯ ಪ್ರಮುಖವಾದದ್ದು. ಇಲ್ಲಿ ಶಂಕರಾಚಾರ್ಯರ ಮಠವೂ ಇದೆ.
PC: wikimedia.org

ವಿದ್ಯಾ ತಾಣ

ವಿದ್ಯಾ ತಾಣ

ಈ ಪ್ರದೇಶ ಕಲಿಕೆಗೆ ಹೆಚ್ಚು ಪ್ರಸಿದ್ಧಿ ಪಡೆದಿತ್ತು ಎನ್ನಲಾಗುತ್ತದೆ. ಘಟಿಕಾಸ್ಥಾನ ಎಂದು ಹೆಸರಾಗಿತ್ತು. ಹಾಗಾಗಿಯೇ ಆಗ ದೇವಾಲಯಗಳಲ್ಲಿ ವಿದ್ಯಾ ಪ್ರಧಾನ ಮಾಡಲಾಗುತ್ತಿತ್ತು. 1 ಮತ್ತು 5ನೇ ಶತಮಾನದಲ್ಲಿಯೂ ಜೈನ ಮತ್ತು ಬೌದ್ಧರ ವಿದ್ಯೆಕಲಿಕೆಯ ಕೇಂದ್ರವಾಗಿತ್ತು ಇದು ಎನ್ನಲಾಗುತ್ತದೆ.
PC: wikimedia.org

ಸಂಪ್ರದಾಯದ ಕೇಂದ್ರ

ಸಂಪ್ರದಾಯದ ಕೇಂದ್ರ

ಈ ಪ್ರದೇಶವು ವೈಷ್ಣವರ ಸಂಪ್ರದಾಯದ ಕೇಂದ್ರವಾಗಿತ್ತು ಎನ್ನಲಾಗುತ್ತದೆ. ಹಾಗಾಗಿಯೇ ಇದು ಶೈವರಿಗೂ ಪವಿತ್ರ ಯಾತ್ರಾಸ್ಥಳವಾಗಿದೆ.
PC: wikimedia.org

ಕಾಮಾಕ್ಷಿ ಅಮ್ಮನ ದೇಗುಲ

ಕಾಮಾಕ್ಷಿ ಅಮ್ಮನ ದೇಗುಲ

ಇಲ್ಲಿರುವ ಇನ್ನೊಂದು ಪ್ರಸಿದ್ಧ ದೇಗುಲ ಇದು. ಕಾಮಾಕ್ಷಿ ದೇವಿಯು ಮರಳಿನಲ್ಲಿ ಶಿವಲಿಂಗವನ್ನು ಮಾಡಿ ಭಕ್ತಿಯಿಂದ ಪೂಜಿಸಿದಳು. ಇದರ ಫಲವಾಗಿಯೇ ಇವನು ಈಕೆಯನ್ನು ವಿವಾಹವಾದ ಎನ್ನುವ ಕಥೆಯನ್ನು ಹೇಳುತ್ತದೆ.
PC: wikimedia.org

ಕಾಮಾಕ್ಷಿ ಅಮ್ಮನ ದೇಗುಲದ ಒಳಗೆ

ಕಾಮಾಕ್ಷಿ ಅಮ್ಮನ ದೇಗುಲದ ಒಳಗೆ

ಈ ದೇಗುಲದ ಗರ್ಭಗುಡಿಯ ಗೋಪುರವನ್ನು ಚಿನ್ನದ ತಗಡಿನಿಂದ ಅಲಂಕರಿಸಲಾಗಿದೆ. ಕಾಮಾಕ್ಷಿ ದೇವಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರೊಂದಿಗೆ ಕುಳಿತಿರುವ ಭಂಗಿಯಲ್ಲಿರುವುದಕ್ಕೆ "ಪರಬ್ರಹ್ಮ ಸ್ವರೂಪಿಣಿ' ಎಂದು ಕರೆಯುತ್ತಾರೆ.
PC: wikimedia.org

ಕೈಲಾಸನಾಥರ್ ದೇಗುಲದ ಒಳಗೆ

ಕೈಲಾಸನಾಥರ್ ದೇಗುಲದ ಒಳಗೆ

ಈ ದೇವಾಲಯದ ಸುತ್ತ ವಿಭಿನ್ನ ಶೈಲಿಯ ಅದ್ಭುತ ಕೆತ್ತನೆಗಳನ್ನು ಕಾಣಬಹುದು. ಗರ್ಭ ಗುಡಿಯಲ್ಲಿ 16 ಕಪ್ಪು ಗ್ರಾನೈಟ್ ಕಲ್ಲಿನ ಶಿವಲಿಂಗ ಇರುವುದನ್ನು ಕಾಣಬಹುದು.
PC: wikimedia.org

ಸಿಂಹದ ಪ್ರತಿಮೆ

ಸಿಂಹದ ಪ್ರತಿಮೆ

ದೇಗುಲದ ಹೊರ ಭಾಗದಲ್ಲಿ ಕಂಬಗಳ ಮೇಲೆ ವಿಶಿಷ್ಟ ಭಂಗಿಯಲ್ಲಿ ಸಿಂಹಗಳು ನಿಂತಿರುವುದು ನಯನ ಮನೋಹರವಾಗಿದೆ. ಕಂಬದ ಬುಡದಲ್ಲಿ ಈ ಕೆತ್ತನೆ ಇದ್ದರೆ ಮೇಲ್ಭಾಗದಲ್ಲಿ ಭಿನ್ನಶೈಲಿಯ ಕೆತ್ತನೆ ಕೆತ್ತಲಾಗಿದೆ.
PC: wikimedia.org

ವಿಶಾಲ ಹೊರಾಂಗಣ

ವಿಶಾಲ ಹೊರಾಂಗಣ

ದೇಗುಲದ ಹೊರ ಭಾಗದಲ್ಲಿ ವಿಶಾಲವಾದ ಹೊರಾಂಗಣವಿದೆ. ಇದು ದೇಗುಲದ ವಿಸ್ತಾರವನ್ನು ಹೆಚ್ಚಿಸುವಂತೆ ಕಾಣುತ್ತದೆ.
PC: wikimedia.org

ಒಳಾಂಗಣದ ವಿಶೇಷ

ಒಳಾಂಗಣದ ವಿಶೇಷ

ದೇಗುಲದ ಹೊರವಲಯದಲ್ಲಷ್ಟೇ ಅಲ್ಲ. ಒಳಾಂಗಣದಲ್ಲೂ ಸುಂದರ ಕೆತ್ತನೆಗಳಿವೆ. ಪ್ರಾಣಿಗಳ ತಲೆಯ ಮೇಲೆ ಕಂಬ ನಿಂತಿರುವಂತೆ ಇರುವ ಕೆತ್ತನೆ ವಿಶೇಷವಾಗಿವೆ. ಅಲ್ಲಲ್ಲಿ ಪುಟ್ಟ ಪುಟ್ಟ ಗುಮ್ಮಟವಿರುವ ದೇವರಿಲ್ಲದ ಗುಡಿಗಳು ಇವೆ.
PC: wikimedia.org

ಹಾಳಾದ ಕೆತ್ತನೆಗಳು

ಹಾಳಾದ ಕೆತ್ತನೆಗಳು

ದೇಗುಲದ ಒಳಗೆ ಹಾಗೂ ಹೊರ ಭಾಗದಲ್ಲಿರುವ ಕೆತ್ತನೆಗಳು ವಾತಾವರಣಗಳ ವೈಪರೀತ್ಯದಿಂದ ಹಾಳಾಗಿರುವುದನ್ನು ಗಮನಿಸಬಹುದು.
PC: wikimedia.org

ಸುಂದರ ನೋಟ

ಸುಂದರ ನೋಟ

ವಿಶಾಲವಾದ ಪರಿಸರ ಹಾಗೂ ಹಿತಕರ ವಾತಾವರಣದಲ್ಲಿ ಎದ್ದು ನಿಂತ ಈ ದೇವಾಲಯ ಸುಂದರ ಸೊಬಗನ್ನು ಹೊಂದಿದೆ. ಇಲ್ಲಿ ಪ್ರತಿದಿನ ನೂರಾರು ಪ್ರವಾಸಿಗರು ಆಗಮಿಸುತ್ತಾರೆ.
PC: wikimedia.org

ಬಸವ ಮೂರ್ತಿ

ಬಸವ ಮೂರ್ತಿ

ಈಶ್ವರನ ದೇಗುಲವಾಗಿರುವುದರಿಂದ ದೇವಾಲಯದ ಎದುರು ಸುಂದರವಾದ ಬಸವನ ಮೂರ್ತಿ ಇರುವುದನ್ನು ಕಾಣಬಹುದು. ಪವಿತ್ರ ಕ್ಷೇತ್ರವಾದ ಈ ತಾಣದ ರಮ್ಯ ಸೊಬಗನ್ನು ಕಣ್ತುಂಬಿಕೊಳ್ಳುವುದೇ ಒಂದು ಖುಷಿ.
PC: wikimedia.org

Read more about: tamil nadu kanchipuram
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X