Search
  • Follow NativePlanet
Share
» »ನಿರಾಳ ಭಾವಕ್ಕೆ ಹಾವೇರಿಯೆಡೆಗೆ ಪಯಣ

ನಿರಾಳ ಭಾವಕ್ಕೆ ಹಾವೇರಿಯೆಡೆಗೆ ಪಯಣ

ಕೃಷಿ ಪ್ರಧಾನ ಜಿಲ್ಲೆ ಎನಿಸಿಕೊಂಡಿರುವ ಹಾವೇರಿ ಕರ್ನಾಟಕದ ಮಧ್ಯ ಭಾಗದಲ್ಲಿದೆ. ಏಳು ತಾಲೂಕು ಕೇಂದ್ರಗಳನ್ನು ಹೊಂದಿರುವ ಈ ತಾಣದಲ್ಲಿ ರಮ್ಯ ಕಲಾಕೃತಿಯಿಂದ ಕೂಡಿರುವ ದೇಗುಲ ಹಾಗೂ ವನ್ಯ ಜೀವಿಧಾಮಗಳನ್ನು ನೋಡಬಹುದು.

By Divya

ಕೃಷಿ ಪ್ರಧಾನ ಜಿಲ್ಲೆ ಎನಿಸಿಕೊಂಡಿರುವ ಹಾವೇರಿ ಕರ್ನಾಟಕದ ಮಧ್ಯ ಭಾಗದಲ್ಲಿದೆ. ಬ್ಯಾಡಗಿ ಮೆಣಸಿಗೆ ಪ್ರಸಿದ್ಧಿ ಪಡೆದ ಈ ತಾಣ ಐತಿಹಾಸಿಕ ವಿಚಾರದಲ್ಲೂ ತನ್ನದೇ ಆದ ವಿಶೇಷತೆಯನ್ನು ಪಡೆದುಕೊಂಡಿದೆ. ಇಲ್ಲಿ ಹರಿಯುವ ವರದಾ ಹಾಗೂ ತುಂಗಭದ್ರಾ ನದಿಯು ಜನರ ಜೀವನಾಡಿ. ಏಳು ತಾಲೂಕು ಕೇಂದ್ರಗಳನ್ನು ಹೊಂದಿರುವ ಈ ತಾಣದಲ್ಲಿ ರಮ್ಯ ಕಲಾಕೃತಿಯಿಂದ ಕೂಡಿರುವ ದೇಗುಲ ಹಾಗೂ ವನ್ಯ ಜೀವಿಧಾಮಗಳನ್ನು ನೋಡಬಹುದು.

ಬೆಂಗಳೂರಿನಿಂದ 335 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ 5 ತಾಸುಗಳ ಪ್ರಯಾಣ ಮಾಡಬೇಕು. ಕಲೆಯ ಮೆರಗು, ವಿವಿಧ ಬಗೆಯ ಕೃಷಿ ಉತ್ಪನ್ನಗಳು, ಮಹಿಳೆಯರೇ ಸಿದ್ಧಗೊಳಿಸುವ ಉತ್ಪನ್ನಗಳು ಹಾಗೂ ವಿವಿಧ ಮಾರಾಟ ಮಳಿಗೆಗಳನ್ನು ಒಳಗೊಂಡಿರುವ ಹಾವೇರಿಯಲ್ಲಿ ನೋಡಬಹುದಾದ ಪ್ರಮುಖ ಪ್ರವಾಸ ತಾಣಗಳ ಪರಿಚಯ ಇಲ್ಲಿದೆ.

ತಾರಕೇಶ್ವರ ದೇಗುಲ

ತಾರಕೇಶ್ವರ ದೇಗುಲ

12ನೇ ಶತಮಾನದ ಇತಿಹಾಸ ಹೊಂದಿರುವ ಈ ದೇಗುಲ ಶಿವನಿಗೆ ಮೀಸಲಾಗಿದೆ. ಚಾಲುಕ್ಯರ ಶಿಲ್ಪ ಕಲೆಯನ್ನು ಹೋಲುವ ಹೊಯ್ಸಳರ ಕಲಾಕೃತಿಯಿಂದ ದೇಗುಲ ಕಂಗೊಳಿಸುತ್ತದೆ. ಇಲ್ಲಿ ಶಿವನ ಆರಾಧನೆಯ ಜೊತೆಗೆ ಗಣೇಶ ಹಾಗೂ ನಂದಿಯನ್ನು ಪೂಜಿಸಲಾಗುತ್ತದೆ. ವಿಶಾಲವಾದ ಜಾಗದಲ್ಲಿ ಕಂಗೊಳಿಸುವ ಈ ದೇವಾಲಯದ ಸಭಾಂಗಣದಲ್ಲಿ 12 ಕಂಬಗಳಿವೆ. ಪ್ರತಿಯೊಂದರ ಮೇಲೂ ಅಪರೂಪದ ಕೆತ್ತನೆಗಳಿರುವುದು ವಿಶೇಷ.

PC: en.wikipedia.org

ಮುಕ್ತೇಶ್ವರ ದೇವಾಲಯ

ಮುಕ್ತೇಶ್ವರ ದೇವಾಲಯ

ಜಕ್ಕಣಾಚಾರಿ ಶೈಲಿಯಲ್ಲಿ ನಿರ್ಮಾಣಗೊಂಡ ಅಪರೂಪದ ದೇಗುಲ ಇದು. 12ನೇ ಶತಮಾನದ ಈ ದೇಗುಲದಲ್ಲಿ ಉದ್ಭವ ಶಿವಲಿಂಗವನ್ನು ಆರಾಧಿಸಲಾಗುತ್ತದೆ. ಕಲ್ಯಾಣ ಚಾಲುಕ್ಯರ ಆಡಳಿತದ ಅವಧಿಯಲ್ಲಿ ನಿರ್ಮಾಣಗೊಂಡ ಈ ದೇವಾಲಯ ಸೂಕ್ಷ್ಮ ಕಲಾಕೃತಿಯಿಂದ ಕೂಡಿದೆ. ಆ ಕಾಲಕ್ಕೆ ಸಂಬಂಧಿಸಿದ ಕೆಲವು ಶಾಸನಗಳು ಹಾಗೂ ಬರಹಗಳನ್ನು ಇಲ್ಲಿ ಕಾಣಬಹುದು.

PC: en.wikipedia.org

ಗಳಗನಾಥ ದೇಗುಲ

ಗಳಗನಾಥ ದೇಗುಲ

ಹಾವೇರಿಯ ಪವಿತ್ರ ಕ್ಷೇತ್ರಗಳಲ್ಲೊಂದಾದ ಈ ದೇಗುಲ ವರದಾ ಮತ್ತು ತುಂಗಭದ್ರಾ ನದಿಯ ಸಂಗಮ ಸ್ಥಳದಲ್ಲಿದೆ. ಗಳಗೇಶ್ವರ ದೇಗುಲದಿಂದಲೇ ಈ ಊರಿಗೆ ಗಳಗನಾಥ ಎನ್ನುವ ಹೆಸರು ಬಂತು ಎನ್ನಲಾಗುತ್ತದೆ. ಈ ದೇವಾಲಯ 28ಮೀ. ಉದ್ದ, 14ಮೀ. ಅಗಲವನ್ನು ಹೊಂದಿದೆ. ದೇವಸ್ಥಾನದ ಸುತ್ತಲೂ ಪೌರಾಣಿಕ ಕಥೆಯನ್ನು ಕೆತ್ತಲಾಗಿದೆ. ಇದರ ವಿಶೇಷತೆ ಎಂದರೆ ಅಡಿಪಾಯವು ಪಿರಾಮಿಡ್ ರೀತಿಯಲ್ಲಿರುವುದು. ಗರ್ಭಗೃಹದಲ್ಲಿ ಶಿವಲಿಂಗ ಹಾಗೂ ಸುಂದರ ಕೆತ್ತನೆಗಳಿರುವುದನ್ನು ವೀಕ್ಷಿಸಬಹುದು.

PC: en.wikipedia.org

 ಕೃಷ್ಣ ಮೃಗ ಅಭಯಾರಣ್ಯ

ಕೃಷ್ಣ ಮೃಗ ಅಭಯಾರಣ್ಯ

ದಟ್ಟವಾದ ಗಿಡಮರಗಳು ಹಾಗೂ ಪೊದೆಗಳಿಂದ ಕೂಡಿರುವ ಈ ಅಭಯಾರಣ್ಯದಲ್ಲಿ ಕೃಷ್ಣ ಮೃಗಗಳನ್ನು ಸಂರಕ್ಷಿಸಲಾಗುತ್ತದೆ. 14.87 ಸ್ಕ್ವೇರ್ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಅಭಯಾರಣ್ಯ ಬೆಂಗಳೂರಿನಿಂದ 301 ಕಿ.ಮೀ. ದೂರದಲ್ಲಿದೆ. ಕೃಷ್ಣ ಮೃಗಗಳ ಸುಂದರ ದೃಶ್ಯವನ್ನು ಸೆರೆಹಿಡಿಯಲು ಸೂಕ್ತ ಸ್ಥಳವಿದು.

PC: en.wikipedia.org

ಸಿದ್ಧೇಶ್ವರ ದೇವಾಲಯ

ಸಿದ್ಧೇಶ್ವರ ದೇವಾಲಯ

ಶಿವನ್ನು ಆರಾಧಿಸುವ ಈ ದೇಗುಲ ಹಾವೇರಿಯ ನಗರ ಪ್ರದೇಶದಲ್ಲಿದೆ. ಪಶ್ಚಿಮ ಮುಖವಾಗಿರುವ ಈ ದೇಗುಲ 11ನೇ ಶತಮಾನದ್ದು. ವಿಶೇಷ ಕೆತ್ತನೆಗಳಿಂದ ಕೂಡಿರುವ ಈ ದೇಗುಲದ ಸಭಾಂಗಣದಲ್ಲಿ ಉಮಾ ಮಹೇಶ್ವರ, ವಿಷ್ಣು, ಲಕ್ಷ್ಮಿ, ಸೂರ್ಯದೇವ, ನಾಗದೇವತೆಗಳು ಹಾಗೂ ಗಣಪತಿಯ ಕೆತ್ತನೆಗಳಿರುವುದನ್ನು ಕಾಣಬಹುದು.

PC: en.wikipedia.org

ಕದಂಬೇಶ್ವರ ದೇಗುಲ

ಕದಂಬೇಶ್ವರ ದೇಗುಲ

ಚೋಳರ ವಾಸ್ತುಶಿಲ್ಪವನ್ನು ಒಳಗೊಂಡಿರುವ ಕದಂಬೇಶ್ವರ ದೇಗುಲ ಹಾವೇರಿಯ ರಟ್ಟಿಹಳ್ಳಿ ವ್ಯಾಪ್ತಿಯಲ್ಲಿದೆ. ಸೂಕ್ಷ್ಮ ಕಲಾಕೃತಿಯನ್ನು ಹೊಂದಿರುವ ಈ ದೇಗುಲ ಸುಂದರ ಇತಿಹಾಸವನ್ನು ಹೊಂದಿದೆ. ನಗರ ಪ್ರದೇಶದದಿಂದ 60 ಕಿ.ಮೀ. ದೂರದಲ್ಲಿರುವ ಈ ದೇಗುಲ ರಾಷ್ಟ್ರಕೂಟರ ಆಳ್ವಿಕೆಯ ಅವಧಿಯಲ್ಲಿ ನಿರ್ಮಾಣಗೊಂಡಿತು ಎನ್ನಲಾಗುತ್ತದೆ.

ಬಂಕಾಪುರ ನವಿಲುಧಾಮ

ಬಂಕಾಪುರ ನವಿಲುಧಾಮ

ಹಾವೇರಿ ನಗರದಿಂದ 22 ಕಿ.ಮೀ. ದೂರದಲ್ಲಿರುವ ಈ ತಾಣ ಬಂಕಾಪುರ ಎನ್ನುವ ಹಳ್ಳಿಯಲ್ಲಿದೆ. 139 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಈ ಧಾಮ ನೋಡುಗರಿಗೆ ಸುಂದರ ಅನುಭವ ನೀಡುತ್ತದೆ. ಇಲ್ಲಿರುವ ಒಂದು ಕೋಟೆಯು ನವಿಲುಗಳಿಗೆ ವಾಸಸ್ಥಾನ ವಾಗಿದೆ. ವಿವಿಧ ಬಗೆಯ ನವಿಲುಗಳನ್ನು ಇಲ್ಲಿ ಕಾಣಬಹುದು.

PC: en.wikipedia.org

Read more about: ಹಾವೇರಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X