Search
  • Follow NativePlanet
Share
» »ತೇಲುವ ಮನೆಯಲ್ಲಿ ಸ್ವರ್ಗದ ಅನುಭವ

ತೇಲುವ ಮನೆಯಲ್ಲಿ ಸ್ವರ್ಗದ ಅನುಭವ

ಹೀಗೆ ಕಲ್ಪನೆ ಮಾಡಿಕೊಳ್ಳಿ... ಸುತ್ತಲು ನೀರಿನ ರಾಶಿ, ಅದರಾಚೆ ಹಚ್ಚಹಸುರಿನ ಸಿರಿ, ನೀರಿನ ಮಧ್ಯೆಯಲ್ಲಿರುವ ಮನೆಯಲ್ಲಿ ಕುಳಿತಿದ್ದೀರಿ, ಆ ಮನೆ ಹಾಗೇ ತೇಲಿ ಸಾಗುತ್ತಿದೆ...

By Divya

ಹೀಗೆ ಕಲ್ಪನೆ ಮಾಡಿಕೊಳ್ಳಿ... ಸುತ್ತಲು ನೀರಿನ ರಾಶಿ, ಅದರಾಚೆ ಹಚ್ಚಹಸುರಿನ ಸಿರಿ, ನೀರಿನ ಮಧ್ಯೆಯಲ್ಲಿರುವ ಮನೆಯಲ್ಲಿ ಕುಳಿತಿದ್ದೀರಿ, ಆ ಮನೆ ಹಾಗೇ ತೇಲಿ ಸಾಗುತ್ತಿದೆ... ಹೊರಗಡೆ ಸೂರ್ಯ ನೆತ್ತಿಯಮೇಲಿದ್ದರೂ, ಒಳಗಡೆ ತಂಪಾಗಿ ಕುಳಿತಿರುವ ನಿಮಗೆ ಸ್ವರ್ಗವೆಂದರೆ ಇದೇ ಇರಬೇಕು ಎನ್ನುವ ಅನುಭವ... ಅಬ್ಬಾ! ಕಲ್ಪನೆಯೇ ಇಷ್ಟು ಖುಷಿ ಕೊಡುವಾಗ ನಿಜವಾದ ಅನುಭವ ಇನ್ನೆಷ್ಟು ಸಂತೋಷ ನೀಡಬಲ್ಲದು ಅಲ್ಲವಾ?

ಬೋಟ್-ಹೌಸ್ ಬಗ್ಗೆ ಹೆಚ್ಚು ಓದಲು ಇಷ್ಟವಿದೆಯೇ?

Alleppey Houseboats

PC: wikipedia.org

ನಿಜ, ಇಂತಹ ಕಲ್ಪನೆಗೆ ವಾಸ್ತವ ರೂಪ ನೀಡುವುದು ದೋಣಿ ಮನೆಗಳು. ಇದು ಇರುವುದು ಕೇರಳದ ಅಲಪ್ಪಿ (ಆಲಪುಳ)ದಲ್ಲಿ. ವರ್ಷ ಪೂರ್ತಿ ಹಸಿರು ಸಿರಿಯಿಂದ ಕಂಗೊಳಿಸುತ್ತ, ಪ್ರವಾಸಿಗರನ್ನು ಆಕರ್ಷಿಸುವ ತಾಣವಿದು. ಇಲ್ಲಿ ಹರಿಯುವ ಹಿನ್ನೀರಿನ ದೋಣಿ ಪ್ರಯಾಣ ಹೆಚ್ಚು ಆಕರ್ಷಣೆಯಿಂದ ಕೂಡಿದೆ. ಅದರಲ್ಲೂ ಅಕ್ಕಿ ದೋಣಿಗಳು ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದನ್ನು ಈಗ ಸುಖವಿಲಾಸದ ದೋಣಿಗಳಾಗಿ ಬಳಸಿಕೊಳ್ಳಲಾಗುತ್ತಿದೆ.

ಕೇರಳದ ಆಕರ್ಷಣೆಗಳ ಬಗ್ಗೆ ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಕಿ ದೋಣಿಗೆ ಮೊದಲು ಕೆಟ್ಟುವಲ್ಲಮ್ ಎಂದು ಕರೆಯುತ್ತಿದ್ದರು. ಕೆಟ್ಟುವಲ್ಲಮ್ ಎಂದರೆ "ಗಂಟು ಹೆಣೆದ ದೋಣಿ' ಎಂದಾಗುತ್ತದೆ. ಹೆಬ್ಬಲಸಿನ ಮರದಿಂದ ಮಾಡಲಾಗುವ ಈ ದೋಣಿಗೆ ಹುರಿ ಹಗ್ಗಗಳನ್ನು ಗಂಟುಹಾಕಿಯೇ ನಿರ್ಮಿಸಲಾಗುತ್ತದೆ. ಹಿಂದಿನ ಕಾಲದಲ್ಲಿ ಇದನ್ನು ದಿನಸಿ ವಸ್ತುಗಳ ಸಾಗಟಕ್ಕೆ ಬಳಸುತ್ತಿದ್ದರು. ಆಧುನಿಕ ವಾಹನಗಳ ಬಳಕೆ ಆರಂಭವಾದಮೇಲೆ ಇವು ದೋಣಿ ಮನೆಗಳಾಗಿ ಮಾರ್ಪಟ್ಟವು.

Alleppey Houseboats

PC: wikipedia.org

ದೋಣಿ ಮನೆಯೊಳಗೆ ಮಲಗುವ ಕೊಠಡಿ, ಶೌಚಾಲಯ, ವೀಕ್ಷಣಾ ಸ್ಥಳ, ಮನರಂಜನೆಗೆ ಟಿವಿ, ಪುಸ್ತಕ-ಪತ್ರಿಕೆ ಹಾಗೂ ಆಗಾಗ ಬಾಯಿ ಚಪ್ಪರಿಸಲು ಬೇಕಾದ ತಿಂಡಿ-ತಿನಿಸುಗಳನ್ನು ಇಲ್ಲಿಯೇ ಸಿದ್ಧಪಡಿಸಲಾಗುತ್ತದೆ. ಕತ್ತಲಾಗುತ್ತಿದ್ದಂತೆ ಹಿನ್ನೀರಿನ ತೀರದಲ್ಲಿ, ನೀವು ಬಯಸುವುದಾದರೆ ಹಿನ್ನೀರಿನ ಮಧ್ಯಭಾಗದಲ್ಲಿ ಲಂಗರು ಹಾಕಿ ನಿಲ್ಲಿಸಲಾಗುತ್ತದೆ. ಸಂಜೆ ಪ್ರಶಾಂತ ವಾತಾವರಣ, ತಂಪಾದ ಗಾಳಿ, ದೋಣಿಯೊಳಗೆ ಇರುವ ದೀಪ, ಆಗಾಗ ಕೇಳಿಸುವ ಹಕ್ಕಿಗಳ ಕಲರವ ಎಲ್ಲವೂ ಅದ್ಭುತ ಅನುಭವ ನೀಡುತ್ತವೆ.

Alleppey Houseboats

PC: wikipedia.org

ಬೆಂಗಳೂರಿನಿಂದ 593.6 ಕಿ.ಮೀ. ದೂರದಲ್ಲಿರುವ ಅಲಪ್ಪಿಗೆ ಪ್ರಯಾಣ ಬೆಳೆಸಿದರೆ ಅನೇಕ ದೋಣಿ ಮನೆಗಳು ಸಿಗುತ್ತವೆ. ಅನುಕೂಲಕ್ಕೆ ಬೇಕಂತೆ ಬೆಂಗಳೂರಿನಿಂದಲೇ ದೋಣಿ ಮನೆಗಳನ್ನು ನಿಮಗಾಗಿ ಕಾಯ್ದಿರಿಸಿಕೊಳ್ಳಬಹುದು. ಹತ್ತಿರದ ಕಡಲ ತೀರ, ಮುಲ್ಲಕ್ಕಲ್ ದೇವಾಲಯ, ಕೃಷ್ಣಪುರ ಅರಮನೆಗೂ ಭೇಟಿ ನೀಡಬಹುದು.

Read more about: kerala allepey
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X