Search
  • Follow NativePlanet
Share
» »ಇದು ಸಿಕ್ಕಿಂ ತಾಣ... ಒಮ್ಮೆ ನೋಡಬೇಕಣ್ಣ...

ಇದು ಸಿಕ್ಕಿಂ ತಾಣ... ಒಮ್ಮೆ ನೋಡಬೇಕಣ್ಣ...

ಹಿಮಾಲಯದ ಪರ್ವತ ಶ್ರೇಣಿಯಲ್ಲಿ ನೆಲೆ ನಿಂತಿರುವ ಪುಟ್ಟ ರಾಜ್ಯ ಸಿಕ್ಕಿಂ. ಸಮುದ್ರ ಮಟ್ಟದಿಂದ 280 ಅಡಿ ಎತ್ತರದಲ್ಲಿರುವ ಈ ತಾಣ ರಮಣೀಯ ಗಿರಿ ಪರ್ವತಗಳಿಂದ ಕೂಡಿದೆ.

By Super Admin

ಭೂ ಲೋಕದ ಸ್ವರ್ಗ ಎಂದು ಹಿಮಾಲಯ ಪರ್ವತವನ್ನು ಬಣ್ಣಿಸಲಾಗುತ್ತದೆ. ಇಲ್ಲಿಯ ನಿತ್ಯಹರಿದ್ವರ್ಣ ಕಾಡುಗಳು, ಹಿಮದಿಂದ ಕೂಡಿರುವ ಪರ್ವತ ಶ್ರೇಣಿಗಳು, ಗತಕಾಲದ ದೇಗುಲಗಳು ಹಾಗೂ ಐತಿಹಾಸಿಕ ತಾಣಗಳು ಪ್ರವಾಸಿಗರಿಗೆ ಸುಂದರ ಅನುಭವ ನೀಡುತ್ತವೆ. ವರ್ಷಪೂರ್ತಿ ತಂಪಾದ ವಾತಾವರಣ ಹಸಿರು ಸಿರಿಯಿಂದ ಕಂಗೊಳಿಸುವ ತಾಣವೆಂದರೆ ಸಿಕ್ಕಿಂ.

ಸಿಕ್ಕಿಂ ಆಕರ್ಷಣೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಿಮಾಲಯದ ಪರ್ವತ ಶ್ರೇಣಿಯಲ್ಲಿ ನೆಲೆ ನಿಂತಿರುವ ಪುಟ್ಟ ರಾಜ್ಯ ಸಿಕ್ಕಿಂ. ಸಮುದ್ರ ಮಟ್ಟದಿಂದ 280 ಅಡಿ ಎತ್ತರದಲ್ಲಿರುವ ಈ ತಾಣ ರಮಣೀಯ ಗಿರಿ ಪರ್ವತಗಳಿಂದ ಕೂಡಿದೆ. ಸುಮಾರು 28 ಗಿರಿ ಶೃಂಗಗಳು, 80 ಹಿಮ ನದಿಗಳು ಹಾಗೂ ಅನೇಕ ಬಿಸಿ ನೀರಿನ ಬುಗ್ಗೆಗಳು ಇಲ್ಲಿವೆ. ಈ ಬಿಸಿ ನೀರಿನ ಬುಗ್ಗೆಗಳು ಔಷಧಿ ಗುಣಗಳನ್ನು ಒಳಗೊಂಡಿವೆ ಎನ್ನಲಾಗುತ್ತದೆ. ಬೇಸಿಗೆಯ ಬಿಸಿಯಿಂದ ದೂರ ಇರಬೇಕೆಂದರೆ ಇಲ್ಲಿಗೆ ಬರಬಹುದು. ಬೆಂಗಳೂರಿನಿಂದ 2,553.8 ಕಿ.ಮೀ. ದೂರದಲ್ಲಿರುವ ಈ ತಾಣಕ್ಕೆ 47 ಗಂಟೆಗಳ ಪ್ರಯಾಣ ಮಾಡಬೇಕು. ಹಲವಾರು ವಿಮಾನ ಮಾರ್ಗಗಳ ಸೌಲಭ್ಯ ಇರುವುದರಿಂದ ಸಾರಿಗೆ ತೊಂದರೆ ಉಂಟಾಗದು.

ಯುಮ್ಥಾಂಗ್ ವ್ಯಾಲಿ

ಯುಮ್ಥಾಂಗ್ ವ್ಯಾಲಿ

ಸಿಕ್ಕಿಂನ ಉತ್ತರ ಭಾಗದಲ್ಲಿರುವ ಈ ತಾಣ ಸುಂದರವಾದ ಗಿರಿಧಾಮಗಳಿಂದ ಕೂಡಿದೆ. ಸಮುದ್ರ ಮಟ್ಟಕ್ಕಿಂತ 3500 ಮೀ. ಎತ್ತರದಲ್ಲಿರುವ ಈ ತಾಣ ಕಾಡು ಹೂವುಗಳ ಪರಿಮಳದಿಂದ ಕಂಗೊಳಿಸುತ್ತದೆ. ಇದು ಚಾರಣ ಪ್ರಿಯರಿಗೆ ಸ್ವರ್ಗದ ಅನುಭವ ನೀಡುವುದು. ಇಲ್ಲಿ ಶಿಂಗ್ಬಾ ರೊಡೋಡ್ರೆಂಡ್ರಾನ್ ಧಾಮವಿದೆ. ಇದು ನೈಸರ್ಗಿಕ ಉದ್ಯಾನವಾಗಿದ್ದು, ಇಲ್ಲಿ 49 ಬಗೆಯ ದೊಡ್ಡ ಗುಲ್ಮಾ ಹೂಗಳನ್ನು ಕಣ್ತುಂಬಿಕೊಳ್ಳಬಹುದು. 33 ಹೆಕ್ಟೇರ್ ಪ್ರದೇಶದಲ್ಲಿ ಈ ಹೂಗಿಡಗಳು ಹರಡಿಕೊಂಡಿವೆ. ಸಿಕ್ಕಿಂನ ರಾಜ್ಯ ಪಕ್ಷಿ ಬ್ಲಡ್-ಫೀಸಂಟ್‍ನ ತವರು ಪ್ರದೇಶ ಎನ್ನಲಾಗುತ್ತದೆ.
PC: wikipedia.org

ರಾವಂಗ್ಲಾ

ರಾವಂಗ್ಲಾ

ಸಿಕ್ಕಿಂನ ದಕ್ಷಿಣ ಭಾಗದಿಂದ 7000 ಅಡಿ ಎತ್ತರದಲ್ಲಿರುವ ಒಂದು ಸಣ್ಣ ಪ್ರವಾಸ ತಾಣ. ಚಹಾ ತೋಟಗಳಿಂದ ಆಕರ್ಷಿಸುವ ಈ ತಾಣದಲ್ಲಿ ಮೀನಮ್ ವನ್ಯಜೀವಿ ಧಾಮವಿದೆ. ಇಲ್ಲಿ ವಿಶೇಷವಾದ ಹಕ್ಕಿಗಳನ್ನು ವೀಕ್ಷಿಸಬಹುದು. ಇನ್ನೊಂದು ಪ್ರಮುಖ ಆಕರ್ಷಣೆಯೆಂದರೆ ಸುಂದರವಾದ ಸುವರ್ಣ ಲೇಪಿತ ಬೌದ್ಧ ವಿಗ್ರಹ ಇರುವುದು.
PC: wikipedia.org

ಸೊಂಗಮೊ/ಚಾಂಗು ಕೆರೆ

ಸೊಂಗಮೊ/ಚಾಂಗು ಕೆರೆ

ಗ್ಯಾಂಗ್ವಾಕ್ ನಿಂದ 40 ಕಿ.ಮೀ. ದೂರದಲ್ಲಿರುವ ಈ ತಾಣ ಸಿಕ್ಕಿಂನ ಪೂರ್ವ ಭಾಗದಲ್ಲಿದೆ. ಸಮುದ್ರ ಮಟ್ಟದಿಂದ 3,780 ಕಿ.ಮೀ. ದೂರದಲ್ಲಿದೆ. ನಾಥು ಲಾ ಪಾಸ್‍ಗೆ ಹೋಗುವ ದಾರಿಯಲ್ಲಿ ಸಿಗುತ್ತದೆ. ಅಕ್ಕ ಪಕ್ಕದಲ್ಲಿ ಸುಂದರ ಗಿರಿಧಾಮಗಳನ್ನು ಹೊಂದಿರುವ ಈ ಕೆರೆಯ ಸೊಬಗನ್ನು ನೋಡಿಯೇ ಅನುಭವಿಸಬೇಕು. ಹಿಮ ಹಾಗೂ ಹಸಿರು ಸಿರಿಯಿಂದ ಕೂಡಿರುವ ಗಿರಿಗಳಲ್ಲಿ ಸುಂದರ ಚಾರಣದ ಅನುಭವ ಪಡೆಯಬಹುದು.
PC: wikipedia.org

ವರ್ಸೆ ರೊಡೋಡ್ರೆಂಡ್ರಾನ್ ಧಾಮ

ವರ್ಸೆ ರೊಡೋಡ್ರೆಂಡ್ರಾನ್ ಧಾಮ

ಸಿಕ್ಕಿಂನ ಪಶ್ಚಿಮ ಭಾಗದಲ್ಲಿ ಬರುವ ಈ ತಾಣ ವಿವಿಧ ಬಣ್ಣಗಗಳ ಹೂಗಳಿಂದ ಕಂಗೊಳಿಸುತ್ತದೆ. ಚಾರಣಕ್ಕೆ ಅನುಕೂಲವಾಗುವಂತಹ ಭವ್ಯವಾದ ಶಿಗಖರಗಳು ಇಲ್ಲಿವೆ. ಪರೂಪದ ರೆಡ್ ಪಾಂಡಗಳನ್ನು ಇಲ್ಲಿ ನೋಡಬಹುದು. ಚಳಿಯ ನಡುವೆ ಸೂರ್ಯನ ಬಿಸಿಯನ್ನು ಅನುಭವಿಸುವುದು ಮರೆಯಲಾಗದ ಅನುಭವ ನೀಡುತ್ತದೆ.
PC: wikipedia.org

ಗ್ಯಾಲ್‍ಶಿಂಗ್

ಗ್ಯಾಲ್‍ಶಿಂಗ್

ಗ್ಯಾಲ್‍ಶಿಂಗ್ ಎಂದರೆ ಉದ್ಯಾನಗಳ ರಾಜ ಎಂದರ್ಥ. ವರ್ಷಪೂರ್ತಿ ಚಳಿ ಹಾಗೂ ಆಗಾಗ ಹಿಮ ಬೀಳುತ್ತಲೇ ಇರುತ್ತದೆ. ನೇಪಾಳಿಯರನ್ನೇ ಹೆಚ್ಚು ಸಂಖ್ಯೆಯಲ್ಲಿ ಹೊಂದಿದೆ. ಸಿಕ್ಕಿಂರ ಪವಿತ್ರ ಗೋಡೆಯು ಈ ಉದ್ಯಾನದ ಬಲ ಭಾಗದಲ್ಲಿದೆ. ಅಲ್ಲದೆ ಮನಮೋಹಕ ಕೆರೆ ಇರುವುದನ್ನು ಕಾಣಬಹುದು.
PC: wikipedia.org

ಕಾಲುಕ್

ಕಾಲುಕ್

ಹಿಮಾಲಯದ ನೈಸರ್ಗಿಕ ಸೌಂದರ್ಯದಿಂದ ಕೂಡಿರುವ ತಾಣಗಳಲ್ಲಿ ಕಾಲುಕ್ ಸಹ ಒಂದು. ಇದು ಸಿಕ್ಕಿಂನ ಪಶ್ಚಿಮ ಭಾಗದಲ್ಲಿದೆ. ಇಲ್ಲಿಯ ಅರಣ್ಯ ಪ್ರದೇಶ ಹಾಗೂ ಗಿರಿಧಾಮಗಳ ಮೇಲೆ ಮೋಡಗಳು ತೇಲಾಡುತ್ತಿರುವಂತೆ ಕಾಣುತ್ತದೆ. ಇವು ಪ್ರಪಂಚದಲ್ಲೇ ಅತಿ ಎತ್ತರವಿರುವ 3ನೇ ಗಿರಿಧಾಮ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
PC: wikipedia.org

ಸುಂಬಕ್

ಸುಂಬಕ್

ಸುಂಬಕ್ ಸಿಕ್ಕಿಂನ ಅತಿ ಸಣ್ಣ ನಗರ. ಪಕ್ಷಿಗಳ ವಾಸಸ್ಥಳವಾದ ಇಲ್ಲಿ ಹಲವು ಜಾತಿಯ ಪಕ್ಷಿ ಸಂಕುಲವನ್ನು ನೋಡಬಹುದು. ರಂಗಿತ್ ನದಿ ದಡದಲ್ಲಿರುವ ಈ ತಾಣದಲ್ಲಿ ನವಿಲುಗಳ ವನ್ಯಧಾಮ, ಪುರಾತನ ಕಾಲದ ದೇವಾಲಯಗಳು ಹಾಗೂ ಅನೇಕ ಪ್ರಾಣಿ ಸಂಕುಲಗಳನ್ನು ನೋಡಬಹುದು. ಇಲ್ಲಿರುವ ಬೆಟ್ಟಗಳು ಹೂವಿನ ರಾಶಿಯಿಂದಲೇ ಕೂಡಿವೆ. ಇವುಗಳ ಮಧ್ಯೆ ಚಾರಣ ಮಾಡಿದರೆ ಅಮೋಘ ಅನುಭವ ಸಿಗುವುದು.
PC: flickr.com

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X