Search
  • Follow NativePlanet
Share
» »ನೃತ್ಯಪ್ರಿಯ ಬೆಂಗಳೂರಿಗರ ಮನ ಕದಿಯುವ ನೃತ್ಯಗ್ರಾಮ

ನೃತ್ಯಪ್ರಿಯ ಬೆಂಗಳೂರಿಗರ ಮನ ಕದಿಯುವ ನೃತ್ಯಗ್ರಾಮ

By Vijay

ಭಾರತೀಯ ಪರಂಪರೆಯನ್ನು ಅಣು ಅಣುವಾಗಿ ಬಿಂಬಿಸಲು ಸಾಕಷ್ಟು ಶ್ರೀಮಂತ ಕಲೆಗಳನ್ನು ನಮ್ಮ ದೇಶದಲ್ಲಿ ಇಂದಿಗೂ ಕಾಣಬಹುದು. ಇಂತಹ ಕಲೆಗಳಲ್ಲಿ ಒಂದಾಗಿದೆ ಕಲಾತ್ಮಕ ನೃತ್ಯ. ಭರತನಾಟ್ಯವಿರಲಿ, ಕುಚಿಪುಡಿಯಿರಲಿ ಇಲ್ಲವೆ ಒಡಿಶಿ ನೃತ್ಯವಿರಲಿ ಪ್ರತಿಯೊಂದು ಕಲೆಯೂ ತನ್ನದೆ ಆದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಕಲಾಪ್ರಧಾನ ದೇಶವಾದ ಭಾರತದಲ್ಲಿ ಬಹುತೇಕ ಎಲ್ಲ ಜನರಲ್ಲೂ ಕಲಾ ಆರಾಧನೆಯ ಪ್ರಜ್ಞಾನ ಇರುವುದಿಂದಲೋ ಏನೊ ಇಂದಿಗೂ ಶಾಸ್ತ್ರೀಯ ನೃತ್ಯಗಳು ಗಟ್ಟಿಯಾಗಿ ನೆಲೆ ನಿಂತಿರುವುದನ್ನು ಕಾಣಬಹುದು.

ಪ್ರಸ್ತುತ ಈ ಲೇಖನವು ನೃತ್ಯಕ್ಕೆಂದೆ ಸಮರ್ಪಿತವಾದ ಹಾಗೂ ಪ್ರವಾಸಿ ಆಕರ್ಷಣೆಯೂ ಸಹ ಆದ ಬೆಂಗಳೂರಿನ ಹೊರವಲಯದಲ್ಲಿ ಸುಂದರವಾದ ಹಸಿರಿನ ನೆಲೆಯಲ್ಲಿ ಶಾಂತವಾಗಿ ಸ್ಥಿತವಿರುವ ನೃತ್ಯಗ್ರಾಮದ ಕುರಿತು ತಿಳಿಸುತ್ತದೆ. ಈ ನೃತ್ಯಗ್ರಾಮವು ಆಧುನಿಕ ಶೈಲಿಯ ಗುರುಕುಲವಾಗಿದ್ದು ನೃತ್ಯಾರಾಧಕರ ಪಾಲಿನ ಸ್ವರ್ಗವಾಗಿದೆ. ಪ್ರೊತಿಮಾ ಗೌರಿ (ಪ್ರೊತಿಮಾ ಗೌರಿ ಬೇಡಿ) ಎಂಬ ಒಡಿಶಿ ನೃತ್ಯಗಾರ್ತಿಯಿಂದ ಮೇ 11, 1990 ರಲ್ಲಿ ಸ್ಥಾಪಿಸಲ್ಪಟ್ಟಿದೆ. ವಿವಿಧ ನೃತ್ಯಗಳ ಪ್ರಕಾರಗಳು ಹಾಗೂ ಪ್ರದರ್ಶನಗಳು ಇಲ್ಲಿ ಅವ್ಯಾಹತವಾಗಿ ಜರುಗುತ್ತಿರುತ್ತವೆ.

ಅಷ್ಟೆ ಅಲ್ಲ, ಹಳ್ಳಿಯ ನೈಜ ವಾತಾವರಣವನ್ನು ಬಿಂಬಿಸುವಂತಹ ಪರಿಸರವನ್ನು ಈ ನೃತ್ಯಗ್ರಾಮದಲ್ಲಿ ಕಾಣಬಹುದು. ಕೇವಲ ಪ್ರದರ್ಶನಗಳಲ್ಲದೆ ಒಡಿಶಿ, ಕಥಕ್ ಹಾಗೂ ಭರತನಾಟ್ಯಂ ನೃತ್ಯಗಳ ತರಬೇತಿಯನ್ನೂ ಸಹ ಇಲ್ಲಿ ನೀಡಲಾಗುತ್ತದೆ. ಬೆಂಗಳೂರು ನಗರ ವಲಯದಿಂದ ಸುಮಾರು 35 ಕಿ.ಮೀ ದೂರದಲ್ಲಿ ಹೆಸರಘಟ್ಟ ಪ್ರದೇಶದಲ್ಲಿ ಈ ನೃತ್ಯಗ್ರಾಮ ಸ್ಥಿತವಿದೆ. ಸಂದರ್ಶಕರಿಗೆಂದು ಮಂಗಳವಾರದಿಂದ ರವಿವಾರದವರೆಗೆ ಬೆಳಿಗ್ಗೆ 10 ಘಂಟೆಯಿಂದ ಮಧ್ಯಾಹ್ನ 2 ಘಂಟೆಯವರೆಗೆ ತೆರೆದಿರುತ್ತದೆ.

ಬೆಂಗಳೂರಿನ ಕೆಂಪೇಗೌಡ ಬಸ್ಸು ನಿಲ್ದಾಣ ಹಾಗೂ ಕೆ.ಆರ್ ಮಾರುಕಟ್ಟೆಯಿಂದ ಹೆಸರಘಟ್ಟಕ್ಕೆ ಬಸ್ಸುಗಳು ಲಭ್ಯವಿದೆ. ಹೆಸರಘಟ್ಟದಿಂದ ನೃತ್ಯಗ್ರಾಮವು ಕೇವಲ ಐದು ಕಿ.ಮೀ ದೂರದಲ್ಲಿದೆ.

ನೃತ್ಯಗ್ರಾಮ:

ನೃತ್ಯಗ್ರಾಮ:

ಸುಂದರವಾಗಿ ಹಸಿರಿನ ರಾಶಿಯಲ್ಲಿ ಕಂಗೊಳಿಸುವ ನೃತ್ಯಗ್ರಾಮ.

ಚಿತ್ರಕೃಪೆ: Tim Schapker

ನೃತ್ಯಗ್ರಾಮ:

ನೃತ್ಯಗ್ರಾಮ:

ಪ್ರಕೃತಿಯ ಸೊಬಗಿನಲ್ಲಿ ವಿಶಿಷ್ಟವಾಗಿ ನಿರ್ಮಿಸಲ್ಪಟ್ಟ ರಚನೆಗಳು.

ಚಿತ್ರಕೃಪೆ: Tim Schapker

ನೃತ್ಯಗ್ರಾಮ:

ನೃತ್ಯಗ್ರಾಮ:

ಭಾರತೀಯ ಈ ನೃತ್ಯಕಲೆಗಳಲ್ಲಿ ಆಸಕ್ತಿ ಹೊಂದಿರುವ ವಿದೇಶಿ ಹಾಗೂ ದೇಶಿಯ ನೃತ್ಯಗಾರರು.

ಚಿತ್ರಕೃಪೆ: Kailasher

ನೃತ್ಯಗ್ರಾಮ:

ನೃತ್ಯಗ್ರಾಮ:

ಪುರಾತನ ಕಾಲದ ಕಲ್ಲಿನ ರಚನೆಗಳಂತೆ ಗೋಚರಿಸುವ ನೃತ್ಯಗ್ರಾಮ.

ಚಿತ್ರಕೃಪೆ: Tim Schapker

ನೃತ್ಯಗ್ರಾಮ:

ನೃತ್ಯಗ್ರಾಮ:

ಗುಡಿಸಲುಗಳನ್ನು ಹೋಲುವಂತಹ ಸುಂದರ ರಚನೆಗಳು ಅದೂ ಪ್ರಕೃತಿಯ ಮಧ್ಯೆ...

ಚಿತ್ರಕೃಪೆ: Tim Schapker

ನೃತ್ಯಗ್ರಾಮ:

ನೃತ್ಯಗ್ರಾಮ:

ವಿಶಿಷ್ಟ ಶಿಲ್ಪ ಕಲಾಕೃತಿಗಳನ್ನು ಹೊಂದಿರುವ ನೃತ್ಯಗ್ರಾಮ.

ಚಿತ್ರಕೃಪೆ: Parthan

ನೃತ್ಯಗ್ರಾಮ:

ನೃತ್ಯಗ್ರಾಮ:

ವಿರಮಿಸಿಕೊಳ್ಳಲು ಇರುವ ಜಗುಲಿ. ಹಳ್ಳಿಯ ವಾತಾವರಣವನ್ನು ನೆನಪಿಸುತ್ತದೆ.

ಚಿತ್ರಕೃಪೆ: Pavithrah

ನೃತ್ಯಗ್ರಾಮ:

ನೃತ್ಯಗ್ರಾಮ:

ಆನಂದದಿಂದ ಕಟ್ಟೆಗಳ ಮೇಲೆ ಕುಳಿತು ಹರಟೆ ಹೊಡೆಯಲೂ ಬಹುದು.

ಚಿತ್ರಕೃಪೆ: Pavithrah

ನೃತ್ಯಗ್ರಾಮ:

ನೃತ್ಯಗ್ರಾಮ:

ಅನನ್ಯ ರೀತಿಯ ಗುಡಿಸಲು ಮನೆ...ನೃತ್ಯಗ್ರಾಮದೊಳಗೆ

ಚಿತ್ರಕೃಪೆ: Pavithrah

ನೃತ್ಯಗ್ರಾಮ:

ನೃತ್ಯಗ್ರಾಮ:

ಘಂಟೆ ಬಾರಿಸಲು ಕ್ರಿಯಾಶೀಲ ತಂತ್ರಗಾರಿಕೆ ನೃತ್ಯಗ್ರಾಮದಲ್ಲಿ...

ಚಿತ್ರಕೃಪೆ: Pavithrah

ನೃತ್ಯಗ್ರಾಮ:

ನೃತ್ಯಗ್ರಾಮ:

ಕಾಡಿನೊಳಗೊಂದು ಮನೆಯ ಮಾಡಿ...ಎಂಬಂತೆ

ಚಿತ್ರಕೃಪೆ: Pavithrah

ನೃತ್ಯಗ್ರಾಮ:

ನೃತ್ಯಗ್ರಾಮ:

ನೃತ್ಯಗ್ರಾಮದಲ್ಲಿರುವ ಒಂದು ವೀಕ್ಷಣಾ ಗೋಪುರ.

ಚಿತ್ರಕೃಪೆ: Pavithrah

ನೃತ್ಯಗ್ರಾಮ:

ನೃತ್ಯಗ್ರಾಮ:

ನೃತ್ಯಗ್ರಾಮದಲ್ಲಿರುವ ಸುಂದರ ಕೊಳ ಹಾಗೂ ಹಿತಕರವಾದ ಸುತ್ತಮುತ್ತಲಿನ ಪರಿಸರ.

ಚಿತ್ರಕೃಪೆ: Tim Schapker

ನೃತ್ಯಗ್ರಾಮ:

ನೃತ್ಯಗ್ರಾಮ:

ನೃತ್ಯಗ್ರಾಮದಲ್ಲಿ ಕಾಣಬಹುದಾದ ವಿವಿಧ ಶಿಲ್ಪ ಕಲೆಗಳು.

ಚಿತ್ರಕೃಪೆ: Tim Schapker

ನೃತ್ಯಗ್ರಾಮ:

ನೃತ್ಯಗ್ರಾಮ:

ನೃತ್ಯದ ಒಂದು ಭಂಗಿಯಲ್ಲಿ ನಿರತ ಕಲಾಪಟು.

ಚಿತ್ರಕೃಪೆ: Kailasher

ನೃತ್ಯಗ್ರಾಮ:

ನೃತ್ಯಗ್ರಾಮ:

ನೃತ್ಯಗ್ರಾಮದ ವಿವಿಧ ನೃತ್ಯಗಾರರು ಹಾಗೂ ನೃತ್ಯಗಾರ್ತಿಯರು.

ಚಿತ್ರಕೃಪೆ: Kailasher

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X