Search
  • Follow NativePlanet
Share
» »ಜೀವ ಕೈಯಲ್ಲಿ ಹಿಡಿದು ತೆರಳಿ ನಿಷ್ಕಳಂಕ ಮಹಾದೇವನ ದರ್ಶನಕ್ಕೆ!!

ಜೀವ ಕೈಯಲ್ಲಿ ಹಿಡಿದು ತೆರಳಿ ನಿಷ್ಕಳಂಕ ಮಹಾದೇವನ ದರ್ಶನಕ್ಕೆ!!

ಅರೇಬಿಯಾ ಸಮುದ್ರದಲ್ಲಿ ಒಂದು ಅದ್ಭುತವಾದ ಶಿವಲಿಂಗವಿದೆ ಎಂದರೆ ನಂಬಲು ಸಾಧ್ಯವೇ? ಆದರೆ ಆ ದೇವಾಲಯಕ್ಕೆ ತೆರಳಬೇಕಾದರೆ ಅದೊಂದು ಸಾಹಸ ಯಾತ್ರೆಯೇ ಸರಿ. ಏಕೆಂದರೆ ಸಮುದ್ರ ಅಲೆಗಳು ನಮ್ಮನ್ನು ಎಳೆದುಕೊಂಡು ಹೋದರೆ ಅಥವಾ ಸಮಯ ದಾಟಿ ಹೋದರೆ ಶಿವನಲ್ಲಿ

ಪ್ರಪಂಚದಲ್ಲಿ ನಮಗೆ ತಿಳಿಯದ ಎಷ್ಟೋ ಅದ್ಭುತಗಳಿವೆ. ಕೆಲವು ಬಾರಿ ಅವುಗಳನ್ನು ಕೇಳಿದರೆ ಶರೀರ ರೋಮಾಂಚನವಾಗದೇ ಇರದು. ಅದರಲ್ಲೂ ಶಿವನ ದೇವಾಲಯಗಳು ಮಹಾ ಅದ್ಭುತವಾದುದು. ಶಿವನ ಲೀಲೆಗಳು ಅಪಾರವಾದುದು. ಪರಮಶಿವನು ಲಿಂಗ ಸ್ವರೂಪಿಯಾಗಿ ಕಲಿಯುಗದಲ್ಲಿಯು ಹಲವಾರು ಚಮತ್ಕಾರವನ್ನು ಮಾಡುತ್ತಿದ್ದಾನೆ.

ಅರೇಬಿಯಾ ಸಮುದ್ರದಲ್ಲಿ ಒಂದು ಅದ್ಭುತವಾದ ಶಿವಲಿಂಗವಿದೆ ಎಂದರೆ ನಂಬಲು ಸಾಧ್ಯವೇ? ಆದರೆ ಆ ದೇವಾಲಯಕ್ಕೆ ತೆರಳಬೇಕಾದರೆ ಅದೊಂದು ಸಾಹಸ ಯಾತ್ರೆಯೇ ಸರಿ. ಏಕೆಂದರೆ ಸಮುದ್ರ ಅಲೆಗಳು ನಮ್ಮನ್ನು ಎಳೆದುಕೊಂಡು ಹೋದರೆ ಅಥವಾ ಸಮಯ ದಾಟಿ ಹೋದರೆ ಶಿವನಲ್ಲಿ ಐಕ್ಯವಾಗುವುದಂತು ಖಂಡಿತ.

ಅರೇಬಿಯಾ ಸಮುದ್ರದಲ್ಲಿ ಇರುವ ನಿಷ್ಕಳಂಕ ಲಿಂಗೇಶ್ವರನ ದೇವಾಲಯದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಅತುರದಲ್ಲಿದ್ದೀರಾ? ಹಾಗಾದರೆ ಲೇಖನದ ಮೂಲಕ ತಿಳಿದುಕೊಳ್ಳಿ...

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್ ರಾಜ್ಯದ ಅಹಮದಾಬಾದ್‍ಗೆ ಸಮೀಪದಲ್ಲಿನ ಬಾಲಾನಗರದಲ್ಲಿನ ಅರೇಬಿಯಾ ಸಮುದ್ರ ತೀರದಲ್ಲಿ ನಿಷ್ಕಳಂಕ ಮಹಾದೇವ ದೇವಾಲಯವನ್ನು ಕಾಣಬಹುದಾಗಿದೆ.

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಕುಳಿಯಾಕ್ ಎಂಬ ಗ್ರಾಮದ ಮುಖಾಂತರ ತೆರಳಿ ಈ ದೇವಾಲಯವನ್ನು ದರ್ಶನ ಮಾಡಿಕೊಳ್ಳಬಹುದು. ಸಮುದ್ರದಲ್ಲಿ ಸುಮಾರು 2 ಕಿ,ಮೀ ಅಂತರದಲ್ಲಿ ಈ ದೇವಾಲಯ ನಿರ್ಮಾಣಗೊಂಡಿದೆ.

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಸಮುದ್ರದಲ್ಲಿ ಭಾರಿ ಅಲೆಗಳು ಹುಟ್ಟುವುದರಿಂದ ಆ ಸಮಯದಲ್ಲಿ ದೇವಾಲಯಕ್ಕೆ ತೆರಳಬಾರದು. ಬದಲಾಗಿ ಮಧ್ಯಾಹ್ನದ ಸಮಯದಲ್ಲಿ ಶಿವಲಿಂಗದ ದರ್ಶನವನ್ನು ಮಾಡಬಹುದಾಗಿದೆ. ಇಲ್ಲಿ 5 ಪವಿತ್ರವಾದ ಶಿವಲಿಂಗವಿದೆ.

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಇಲ್ಲಿ ಶಿವನಿಗೆ ನಿತ್ಯವೂ ಸಮುದ್ರ ಅಲೆಗಳ ಮೂಲಕ ಅಭಿಷೇಕವಾಗುತ್ತಾ ಇರುತ್ತದೆ. ಮಧ್ಯಾಹ್ನ ಸರಿ ಸುಮಾರು 2 ಗಂಟೆಯ ನಂತರ ಈ ದೇವಾಲಯಕ್ಕೆ ತೆರಳುವುದು ಉತ್ತಮವಾದುದು.

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಮತ್ತೆ ಸಂಜೆ 8 ಗಂಟೆ ಸಮಯದ ನಂತರ ಅಲ್ಲಿಂದ ಹೊರಡಬೇಕು. ಇಲ್ಲವಾದರೆ ಆ ಗುಡಿಯ ಜೊತೆ ಜೊತೆಗೆ ನಾವು ಕೂಡ ಮುಳುಗಿ ಹೋಗುವ ಸಂಭವವಿದೆ. ಹೀಗಾಗಿ ಇಲ್ಲಿ ಸಮಯ ಪ್ರಮುಖವಾದುದು.

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

2 ಕಿ,ಮೀ ದೂರದಲ್ಲಿ ನಮಗೆ ದೇವಾಲಯದ ಧ್ವಜಸ್ತಂಭ ಮಾತ್ರ ಕಾಣಿಸುತ್ತದೆ. ಅಲೆಗಳು ಬರುವ ಸಮಯದಲ್ಲಿಯೇ ಈ ದೇವಾಲಯಕ್ಕೆ ತೆರಳುವುದು ಅಪಾಯಕರವಾದುದು. ಮಧ್ಯಾಹ್ನದ ಸಮಯದಲ್ಲಿ ಈ ದೇವಾಲಯಕ್ಕೆ ತೆರಳಿ ಶಿವಲಿಂಗದ ದರ್ಶನವನ್ನು ಮಾಡಬಹುದಾಗಿದೆ.

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಈ ಸಮುದ್ರದಲ್ಲಿನ ಮಹಾ ಶಿವಲಿಂಗದ ಮಹಿಮೆ ಏನೆಂದರೆ ಮನಸ್ಸಿನಲ್ಲಿ ಒಂದು ಕೋರಿಕೆಯನ್ನು ಕೋರಿಕೊಂಡು ಭಕ್ತಿಯಿಂದ ಪ್ರಧಾನ ಶಿವಲಿಂಗಕ್ಕೆ ಪೂಜೆಯನ್ನು ಸಲ್ಲಿಸಿದರೆ ತಮ್ಮ ಇಷ್ಟಾರ್ಥಗಳು ನೆರವೇರುತ್ತದೆಯಂತೆ.

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಏಕೆಂದರೆ ಈ ದೇವಾಲಯದಲ್ಲಿನ 5 ಶಿವಲಿಂಗವನ್ನು ಪಂಚ ಪಾಂಡವರು ಪ್ರತಿಷ್ಟಾಪಿಸಿರುವುದು ಎಂದು ಪುರಾಣಗಳು ಹೇಳುತ್ತವೆ. ಧರ್ಮರಾಜ ಪ್ರತಿಷ್ಟಾಪಿಸಿದ ಲಿಂಗೇಶ್ವರಕ್ಕೆ ಇಲ್ಲಿನ ಭಕ್ತರು ಅತ್ಯಂತ ಶ್ರಧ್ದೆ ಭಕ್ತಿಯಿಂದ ಪೂಜಿಸುತ್ತಾರೆ.

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಭೀಮ, ಅರ್ಜುನ, ನಕುಲ, ಸಹದೇವರು ಕೂಡ ಉಳಿದ 4 ಶಿವಲಿಂಗವನ್ನು ಪ್ರತಿಷ್ಟಾಪಿಸಿದ್ದಾರೆ. ಅದ್ದರಿಂದಲೇ ಇಲ್ಲಿ ನಮಗೆ 5 ಶಿವಲಿಂಗವನ್ನು ದರ್ಶಿಸುವ ಭಾಗ್ಯ ದೊರೆಯುತ್ತದೆ. ಚಂದ್ರನ ಕಾಂತಿ ಈ ಶಿವಲಿಂಗಗಳ ಮೇಲೆ ಬಿದ್ದಾಗ ಅದ್ಭುತವಾಗಿ ಕಾಣಿಸುತ್ತದೆ. ಆ ಸಮಯವನ್ನು ಖಂಡಿತವಾಗಿಯೂ ಭಕ್ತರು ನೋಡಲೇಬೇಕು ಎಂದು ಹೇಳುತ್ತಾರೆ ಅಲ್ಲಿನ ಜನರು.

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಆಶ್ಚರ್ಯ ಏನಪ್ಪ ಎಂದರೆ ಇಲ್ಲಿ ಪೂಜಾರಿಗಳು ಯಾರು ಇರುವುದಿಲ್ಲ. ಕೇವಲ ಭಕ್ತರೊಂದಿಗೆ ಬಂದು ಭಕ್ತರೊಂದಿಗೆ ಹೊರಟು ಹೋಗುತ್ತಾರೆ. ಅವರ ಜೊತೆ ತೆರಳಿ ಪೂಜೆಯನ್ನು ನೇರವೇರಿಸಿಕೊಂಡು ಹಿಂದಿರುಗಬೇಕು ಅಷ್ಟೇ..

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಮುಖ್ಯವಾಗಿ ಈ ದೇವಾಲಯಕ್ಕೆ ಚಿಕ್ಕ ಮಕ್ಕಳ ಪ್ರವೇಶವನ್ನು ನಿಷೇಧಿಸಲಾಗಿದೆ. ಏಕೆಂದರೆ ಚಿಕ್ಕ ಮಕ್ಕಳು ಸಮುದ್ರದಲ್ಲಿ ನಡೆಯಲು ಆಗುವುದಿಲ್ಲ. ಮಕ್ಕಳಿಗೆ 10 ವರ್ಷ ದಾಟಿದ್ದರೇ ಮಾತ್ರ ಅನುಮತಿ ನೀಡುತ್ತಾರೆ.

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ನಿಧಾನವಾಗಿ ಸಮುದ್ರದ ಆಳದಲ್ಲಿ ಕಾಲು ನಡಿಗೆಯನ್ನು ಇಡಬೇಕು. ಅಲೆಗಳನ್ನು ದಾಟುತ್ತಾ ಈ ದೇವಾಲಯಕ್ಕೆ ಭಕ್ತರು ಪ್ರವೇಶಿಸುತ್ತಾರೆ. ಜಾಗ್ರತೆ ಇಲ್ಲದೇ ಹೋದರೆ ಪ್ರಾಣವನ್ನು ಸಹ ಕಳೆದುಕೊಳ್ಳಬಹುದು.

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಗುಜರಾತ್‍ನಲ್ಲಿನ ನಿಷ್ಕಳಂಕ ಮಹಾದೇವ ದೇವಾಲಯ

ಸಮುದ್ರದಲ್ಲಿ ಇಂತಹ ದೇವಾಲಯವಿರುವುದು ಭಾರತ ದೇಶದ ಪುಣ್ಯವೇ ಸರಿ. ಇಂಥಹ ಅದ್ಭುತವನ್ನು ಕಣ್ಣಾರೆ ಕಂಡೇ ಅನುಭವಿಸಬೇಕು. ಗುಜರಾತ್ ರಾಜ್ಯಕ್ಕೆ ತೆರಳುವ ಪ್ರವಾಸಿಗರಿಗೆ ಈ ದೇವಾಲಯದ ಬಗ್ಗೆ ತಿಳಿಸಿ ನಂತರ ಅವರಿಗೆ ಇಷ್ಟವಾದರೆ ಮಾತ್ರ ಅಲ್ಲಿಗೆ ಕರೆದುಕೊಂಡು ಹೋಗುತ್ತಾರೆ.

ಬ್ರಹ್ಮ ಕುಂಡ

ಬ್ರಹ್ಮ ಕುಂಡ

ಗುಜರಾತ್‍ನಲ್ಲಿನ ಭಾವ ನಗರ ಜಿಲ್ಲೆಯಲ್ಲಿನ ಸಿಹೋರ್ ಎಂಬ ನಗರದಲ್ಲಿ ಬ್ರಹ್ಮ ಕುಂಡ ಎಂಬ ಪ್ರವಿತ್ರವಾದ ಕುಂಡವಿದೆ. ಇದು ಒಂದು ಮೆಟ್ಟಿಲುಗಳನ್ನು ಹೊಂದಿರುವ ಬಾವಿಯಾಗಿದೆ. ಎಷ್ಟೋ ಹಿಂದೂ ದೇವತೆಗಳ ಶಿಲ್ಪಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ.

ಗಾಂಧಿ ಸ್ಮ್ರತಿ ಭವನ

ಗಾಂಧಿ ಸ್ಮ್ರತಿ ಭವನ

ಗಾಂಧಿ ಸ್ಮ್ರತಿ ಭವನವನ್ನು 1955 ರಲ್ಲಿ ಮಹಾತ್ಮ ಗಾಂಧಿಯವರಿಗೆ ಸ್ಮಾರಕವಾಗಿ ನಿರ್ಮಿಸಿದರು. ಇಲ್ಲಿ ಗಾಂಧಿಯವರು ಉಪಯೋಗಿಸುತ್ತಿದ್ದ ಹಲವಾರು ವಸ್ತುಗಳನ್ನು ಕಾಣಬಹುದಾಗಿದೆ. ಗಾಂಧಿಯ ನಡೆದು ಬಂದ ಜೀವನ ದಾರಿಯ ಕುರಿತಾಗಿ ಹಲವಾರು ಚಿತ್ರಗಳನ್ನು ಸ್ಮ್ರತಿ ಭವನದಲ್ಲಿ ಕಾಣಬಹುದಾಗಿದೆ.

ಹೇಗೆ ತಲುಪಬೇಕು?

ಹೇಗೆ ತಲುಪಬೇಕು?

ಗುಜರಾತಿನಲ್ಲಿರುವ ನಿಷ್ಕಳಂಕ ಮಹಾ ದೇವ ದೇವಾಲಯಕ್ಕೆ ಭೇಟಿ ನೀಡಬೇಕು ಎಂದು ಕೊಂಡಿರುವವರು ಅಹಮದಾಬಾದ್ ಸೇರಿ ಅಲ್ಲಿಂದ ಬಾಲಾನಗರಕ್ಕೆ ತೆರಳಿ ಈ ದೇವಾಲಯದಲ್ಲಿ ಪ್ರತಿಷ್ಟಾಪಿಸಿದ ಲಿಂಗೇಶ್ವರ ಸ್ವಾಮಿಯನ್ನು ದರ್ಶಿಸಿಕೊಳ್ಳಬಹುದು.

ರಸ್ತೆ ಮಾರ್ಗದ ಮೂಲಕ: ಭಾವ ನಗರದಿಂದ ಅಹಮದಾಬಾದ್, ಸೂರತ್‍ನ ವಿವಿಧ ಪ್ರದೇಶಗಳಲ್ಲಿ ನಿಷ್ಕಳಂಕ ದೇವಾಲಯಕ್ಕೆ ನೇರವಾದ ಬಸ್ಸುಗಳು ಇರುತ್ತವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X