Search
  • Follow NativePlanet
Share
» »ಆಕರ್ಷಕವಾಗಿ ಅರಳುತ್ತಿರುವ ನವೀ ಮುಂಬೈ

ಆಕರ್ಷಕವಾಗಿ ಅರಳುತ್ತಿರುವ ನವೀ ಮುಂಬೈ

ಭಾರತದಲ್ಲಿ ಇಂದು ಮಹಾನಗರಗಳಲ್ಲಿ ವಾಸಿಸುತ್ತಿರುವವರ ಸಂಖ್ಯೆ ಏರುತ್ತಿದೆ. ಜನದಟ್ಟನೆ, ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೆ ಆಗಿದೆ. ಅಲ್ಲದೆ ಸಾಕಷ್ಟು ಒತ್ತಡದ ಜೀವನ, ಸಮಯದ ಅಭಾವ ಆಗಾಗ ಮನಸ್ಸಿಗೆ ಕಿರಿ ಕಿರಿ ಉಂಟುಮಾಡುತ್ತದೆ. ಒಮ್ಮೊಮ್ಮೆ ಇವೆಲ್ಲವುಗಳಿಂದ ತಪ್ಪಿಸಿಕೊಂಡು ಶಾಂತ ಪ್ರದೇಶದಲ್ಲಿ, ಆದರೆ ಮಹಾನಗರಗಳಿಗೆ ಅತಿ ಹತ್ತಿರದಲ್ಲೆ ಇರುವ ಪ್ರದೇಶದಲ್ಲಿ ವಾಸಿಸಬೇಕೆನಿಸುತ್ತದೆ ಹಲವರಿಗೆ.

ಇಂತಹ ಆಸೆ ಹೊತ್ತಿರುವ ಅದೆಷ್ಟೊ ಜನರ ಕನಸನ್ನು ನೆನಸಾಗಿಸುವ ಉದ್ದೇಶದಿಂದ ರೂಪ ತಳೆದಿದ್ದೆ ಯೋಜನಾಬದ್ಧ ನಗರ (ಪ್ಲ್ಯಾನಡ್ ಸಿಟಿ / ಟೌನ್ ಶಿಪ್). ಈ ತಾಣಗಳು ಸಾಮಾನ್ಯವಾಗಿ ಮಹಾ ನಗರಗಳಿಗೆ ಅವಳಿ ನಗರದಂತೆ ಇರುತ್ತದೆ ಹಾಗೂ ಎಲ್ಲ ರೀತಿಯು ಮೂಲಭೂತ ಸೌಕರ್ಯಗಳನ್ನು ಹಾಗೂ ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ಇಂತಹುದೆ ಒಂದು ಶಿಸ್ತುಬದ್ಧ ಯೋಜನಾ ನಗರವಾಗಿದೆ ಮುಂಬೈ ನಗರಕ್ಕೆ ಹೊಂದಿಕೊಂಡಂತೆ ಇರುವ ನವೀ ಮುಂಬೈ ಅಥವಾ ನವೀನ್ (ಹೊಸ) ಮುಂಬೈ ನಗರ. ಅರಬ್ಬಿ ಸಮುದ್ರ, ದಟ್ಟ ಹಸಿರಿನ ಬೆಟ್ಟ ಗುಡ್ಡಗಳನ್ನು ಹೊಂದಿರುವ ಈ ತಾಣ ಭೇಟಿ ನೀಡಲು ಹಾಗೂ ವಾಸಿಸಲು ಯೋಗ್ಯವಾದ ಸ್ಥಳವಾಗಿದೆ.

ವಿಶೇಷ ಲೇಖನ : ಲಾವಸಾ, ಭಾರತದ ಹೊಚ್ಚ ಹೊಸ ಗಿರಿಧಾಮ

ಹೊಸ ಮುಂಬೈ ಶಹರ ಅಥವಾ ಹೊಸ ಮುಂಬೈ ಅಂತ ಅರ್ಥ ಕೊಡುವ ನವೀ ಮುಂಬೈ ಪ್ರಸ್ತುತ ಮುಂಬೈ ನಗರದ ಹೊರವಲಯದಲ್ಲಿ ಅರಬ್ಬಿ ಸಮುದ್ರಕ್ಕೆ ಅಭಿಮುಖವಾಗಿ ನೆಲೆ ನಿಂತಿರುವ, ಹಚ್ಚಹಸಿರಿನಿಂದ ಕೂಡಿದ ಬೆಟ್ಟಗುಡ್ಡಗಳ ಮಧ್ಯೆ ತಲೆ ಎತ್ತಿ ನಿಂತಿರುವ ವಾಸ ಯೋಗ್ಯ ವಸತಿ ಸಮುಚ್ಚಯಗಳ ಪ್ರದೇಶವಾಗಿದೆ. ಇದೊಂದು ಉತ್ತಮ ಯೋಜನಾಬದ್ಧ (ಟೌನ್ ಶಿಪ್) ನಗರವಾಗಿದ್ದು, ಜಗತ್ತಿನಲ್ಲಿ ಈ ರೀತಿಯಲ್ಲಿ ಕಂಡುಬರುವ ದೊಡ್ಡ ನಗರಗಳ ಪೈಕಿ ಒಂದಾಗಿದೆ. ಮುಂಬೈ ನಗರದಂತೆ ಹೆಚ್ಚಿನ ಸದ್ದು ಗದ್ದಲ ಇಲ್ಲಿಲ್ಲ. ಎಲ್ಲ ರೀತಿಯ ವಾಣಿಜ್ಯ ಕೇಂದ್ರಗಳನ್ನು ಕಾಣಬಹುದು. ಹೀಗಾಗಿ ಇದು ಬಹು ಜನರ ನೆಚ್ಚಿನ ತಾಣವೂ ಸಹ ಆಗಿದೆ.

ಪ್ರಸ್ತುತ ಲೇಖನದ ಮೂಲಕ ನವೀ ಮುಂಬೈ ನಗರದ ಕುರಿತು ಸಮಗ್ರ ಮಾಹಿತಿ ತಿಳಿಯಿರಿ.

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಕರಾವಳಿಯಲ್ಲಿ ನೆಲೆಸಿರುವ ನವೀ ಮುಂಬೈ, ಮೂಲತಃ 1972 ರಲ್ಲಿ ಪ್ರವರ್ಧಮಾನಕ್ಕೆ ಬಂದಿತು. ಠಾಣೆಯ ಪೂರ್ವ ಕರಾವಳಿಗೆ ಹತ್ತಿರದಲ್ಲಿರುವ ನವೀ ಮುಂಬೈ, ಐರೋಳಿ, ನೆರೂಳ್, ಖಾರ್ಘರ್, ಕಾಮೋಠೆ, ಪನವೇಲ್, ವಾಶಿ ಮುಂತಾದ ಪ್ರಖ್ಯಾತ ಪ್ರದೇಶಗಳನ್ನು ಒಳಗೊಂಡಿದೆ. ವಾಶಿ ಮತ್ತು ಐರೋಳಿ ಎಂಬ ಸೇತುವೆಗಳಿದ್ದು ಇವು ನವೀ ಮುಂಬೈ ಅನ್ನು ಮುಖ್ಯ ಮುಂಬೈ ನಗರದೊಂದಿಗೆ ಬೆಸೆಯುತ್ತವೆ.

ಚಿತ್ರಕೃಪೆ:

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲಿರುವ ನೆರೂಳ್ ಹಾಗೂ ವಾಶಿ ಪ್ರದೇಶಗಳನ್ನು ಅತಿ ದುಬಾರಿ ಪ್ರದೇಶಗಳೆನ್ನಲಾಗಿದೆ. ಅಂತೆಯೆ ವಾಶಿಯನ್ನು ನವೀ ಮುಂಬೈನ ರಾಜನೆಂತಲೂ, ನೆರೂಳ್ ಅನ್ನು ರಾಣಿ ಎಂತಲೂ ಪ್ರೀತಿಯಿಂದ ಕರೆಯಲಾಗುತ್ತದೆ. ಮಿಕ್ಕ ಪ್ರದೇಶಗಳಿಗೆ ಹೋಲಿಸಿದರೆ ಇಲ್ಲಿ ಹೆಚ್ಚಿನ ಮಟ್ಟದ ಅಭಿವೃದ್ಧಿಯಾಗಿರುವುದನ್ನು ಕಾಣಬಹುದು.

ಚಿತ್ರಕೃಪೆ: Gsnair88

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈ ನಗರವು, ನವೀ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ (ಎನ್ ಎಂ ಎಂ ಸಿ) ಎಂಬ ಪ್ರತ್ಯೇಕವಾದ ನಗರ ಸಭೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಎನ್ ಎಂ ಎಂ ಸಿ ಏಷಿಯಾದ ಶ್ರೀಮಂತ ನಗರ ಸಭೆಗಳ ಪೈಕಿ ಮಂಚೂಣಿಯಲ್ಲಿರುವ ನಗರಸಭೆ ಎಂಬ ಹಿರಿಮೆಯನ್ನು ಹೊಂದಿದೆ. ನವೀ ಮುಂಬೈ ನ್ಯಾಷನಲ್ ಜಿಯಾಗ್ರಾಫಿಕ್ ಚಾನಲ್ ನ ಸೂಪರ್ ಸಿಟಿ ಆಫ್ ದ ವರ್ಲ್ಡ್ ನಲ್ಲಿಯೂ ಪ್ರಾಧಾನ್ಯತೆ ಪಡೆದ ಭಾರತದ ನಗರವಾಗಿದೆ.

ಚಿತ್ರಕೃಪೆ: Nikkul

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬಯಿ ಜಗತ್ತಿನ ದೊಡ್ಡ ಯೋಜನಾಬದ್ಧ ನಗರವಾಗಿದೆ. ಇದನ್ನು ಮೊದಲಿಗೆ ನಿರ್ದಿಷ್ಟವಾದ ಉದ್ದೇಶಕ್ಕೆ ಯೋಜಿಸಲಾಗಿತ್ತು. ಭಾರತದ ವಿವಿಧ ಭಾಗದಿಂದ ಬಂದ ಬಹುಸಂಖ್ಯೆಯ ಜನಸಂದಣಿಯ ಮುಂಬಯಿಗೆ ಬರಲಾಗಿ ಮುಂಬಯಿಯ ಅತಿ ಜನಸಂದಣಿ ಕಡಿಮೆ ಮಾಡುವುದು. ಇಂದು, ನವೀ ಮುಂಬೈ ಎಲ್ಲ ರೀತಿಯಲ್ಲಿಯೂ ಮುಂಬೈಗೆ ಸಮೀಪದ ಸ್ಪರ್ಧಿಯಾಗಿದೆ.

ಚಿತ್ರಕೃಪೆ: Gaurav

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರದಲ್ಲಿ ಕೈಗೆತ್ತಿಕೊಳ್ಳಲಾದ ಒಂದು ಬೃಹತ್ ಯೋಜನೆ ಇದಾಗಿತ್ತು. ಮುಂಬೈಗೆಂದು ಮೊದಲ ಅಭಿವೃದ್ದಿ ಯೋಜನೆ, 1948 ರ ಸಮಯದಲ್ಲಿ ಮೇಯರ್-ಮೋಡಕ್ ಸಮೀತಿಯಿಂದ ರೂಪಿಸಲ್ಪಟ್ಟಿತು. ಆ ಸಮೀತಿತು ಒಂದು ಉಪನಗರದ ನಿರ್ಮಾಣದ ಕುರಿತು ಸಲಹೆ ನೀಡಿತ್ತು. ಅದಾಗಲೆ ಮುಂಬೈ ಅಂದು ಗ್ರೇಟರ್ ಬಾಂಬೆ ಎಂದು ಗುರುತಿಸಿಕೊಳ್ಳಲಾರಂಭಿಸಿತ್ತು.

ಚಿತ್ರಕೃಪೆ: gentlesound

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಇದಾದ ಹತ್ತು ವರ್ಷಗಳ ನಂತರ ಹೆಚ್ಚುತ್ತಿರುವ ಜನ ದಟ್ಟನೆಯನ್ನು ಗಮನದಲ್ಲಿರಿಸಿ 1958 ರಲ್ಲಿ, ಎಸ್.ಜಿ.ಬರ್ವೆ ಎಂಬುವವರ ಅಧ್ಯಕ್ಷತೆಯಲ್ಲಿ ದೊಡ್ಡ ಬಾಂಬೆ ನಗರದ ಕುರಿತು ಸಮಗ್ರ ಅಧ್ಯಯನ ನಡೆಸಲು ತಂಡ ರಚಿಸಲಾಯಿತು. ಈ ಸಮೀತಿಯು ತಮಗೆ ಒಪ್ಪಿಸಿದ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ 1959 ರಲ್ಲಿ ಅಂದಿನ ಮುಂಬೈನ ಜನದಟ್ಟಣೆ ಕಡಿಮೆ ಮಾಡಲು ಅನುವು ಮಾಡಿಕೊಡುವಂತೆ ಠಾಣೆ ಕೊಲ್ಲಿ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಮುಖ್ಯಭೂಮಿಗೆ ಅಡ್ಡವಾಗಿ ಪಟ್ಟಣವೊಂದನ್ನು ನಿರ್ಮಿಸಲು ಸಲಹೆ ನೀಡಿತು.

ಚಿತ್ರಕೃಪೆ: Nil.bhadane 1984

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಈ ಸಮೀತಿಯ ಒಂದು ಮುಖ್ಯ ಶಿಫಾರಸು ಹೀಗಿತ್ತು: ಠಾಣೆ ಕೊಲ್ಲಿಗೆ ಅಡ್ಡವಾಗಿ ಪರ್ಯಾಯ ಮುಂಬೈನ ಮುಖ್ಯ ಭೂಮಿಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ರೈಲುಹಳಿ ಸೇತುವೆಯ ನಿರ್ಮಾಣ. ಇದರ ಪರಿಣಾಮವಾಗಿ ಕೊಲ್ಲಿಗೆ ಸೇತುವೆಯನ್ನು ಶೀಘ್ರದಲ್ಲಿಯೆ ನಿರ್ಮಾಣ ಮಾಡಲಾಯಿತು. ನಿರೀಕ್ಷಿಸಿದ ಹಾಗೆ ಈ ಸೇತುವೆಯ ನಿರ್ಮಾಣದಿಂದ ನಗರದ ರೈಲುಗಳಿಗೆ ಮತ್ತು ರಸ್ತೆಸಾರಿಗೆ ಮೇಲಿದ್ದ ಹೆಚ್ಚುವರಿ ಒತ್ತಡವು ಕಡಿಮೆಯಾಯಿತು.

ಚಿತ್ರಕೃಪೆ: swapnil m gharat

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಇತ್ತ ಕೈಗಾರಿಕೆಗಳು ಮತ್ತು ವಸತಿಗೃಹಗಳು ಪೂರ್ವದ ಮುಖ್ಯಭೂಮಿ ಮೇಲೆ ಕೇಂದ್ರಿಕರಿಸಿದವು. ನಂತರ ಪ್ರೊಫೆಸರ್ ಡಿ.ಆರ್. ಗಾಡ್ಗೀಳ್ ಹೊಸ ಕಮಿಟಿಯ ಅಧಿಕಾರ ವಹಿಸಿಕೊಂಡರು, ನಂತರ 1965 ರಲ್ಲಿ ಗೋಖಲೆ ಇನ್ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಆ‍ಯ್‌೦ಡ್ ಇಕನಾಮಿಕ್ಸ್‌ನ ನಿರ್ದೇಶಕ, ಪ್ರಾದೇಶಿಕ ಯೋಜನೆಯ ವಿಶಾಲ ತತ್ವಗಳನ್ನು ರೂಪಿಸಲು ಗಾಡ್ಗೀಳ್ ಕಮಿಟಿ ಬಂದರಿಗೆ ಅಡ್ಡವಾಗಿ ಹೊಸ ನಗರ ಸ್ಥಾಪಿಸಲು ಬಲವಾಗಿ ಶಿಫಾರಸು ಮಾಡಿತು.

ಚಿತ್ರಕೃಪೆ: Jpullokaran

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

1966 ರ ಮಾರ್ಚ್‌ನಲ್ಲಿ, ಗಾಡ್ಗೀಳ್ ಕಮಿಟಿಯು ಪ್ರಾದೇಶಿಕ ಯೋಜನೆ ಶಾಸನ ಮತ್ತು ಪ್ರಾದೇಶಿಕ ಯೋಜನಾ ಬೋರ್ಡ್‌ಗೆ ಶಿಫಾರಸು ಮಾಡಿತು. 1967ರ ಜನವರಿಯಲ್ಲಿ, ಮಹಾರಾಷ್ಟ್ರ ಪ್ರಾದೇಶಿಕ ಮತ್ತು ನಗರ ಯೀಜನಾ ಕಾಯಿದೆ‌ ಇದನ್ನು ಅಂಗೀಕರಿಸಿ 1967ರ ಜುಲೈನಲ್ಲಿ ಐಸಿಎಸ್ ಆಫೀಸರ್ ಎಲ್.ಜಿ.ರಾಜವಾಡೆ ಅಧ್ಯಕ್ಷತೆಯಲ್ಲಿ ಬಾಂಬೆ ಮೆಟ್ರೋಪಾಲಿಟನ್ ಮತ್ತು ಪ್ರಾದೇಶಿಕ ಯೋಜನಾ ಬೋರ್ಡ್ ರಚನೆ ಮಾಡಲಾಯಿತು.

ಚಿತ್ರಕೃಪೆ: Deepak Bansi

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಈ ಕಮಿಟಿಯು ಕೊಲ್ಲಿಯ ಮೇಲೆ ನ್ಯೂ ಬಾಂಬೆ ಅಥವಾ ಹೊಸ ಮೆಟ್ರೋ-ಸೆಂಟರ್ (ಈಗೀನ ನವೀ ಮುಂಬೈ) ಸ್ಥಾಪಿಸುವ ಶಿಫಾರಸ್ಸಿಗೆ ಕರಡು ಯೋಜನೆ ಪ್ರಕಟಿಸಿತು. ಹೊಸ ಅವಳಿ ನಗರ ಮುಂಬಯಿಯ ಜನದಟ್ಟಣೆ ಕಡಿಮೆ ಮಾಡಲು ಬಾಂಬೆ ಮೆಟ್ರೋ ಪಾಲಿಟನ್ ಪ್ರಾಂತಕ್ಕೆ ಸುಲಭವಾದ ಯೋಜನೆಯಾಗಿ ಬಾಂಬೆ ಮುನ್ಸಿಪಲ್ ಕಾರ್ಪೊರೇಶನ್ ಈ ಯೋಜನೆಗೆ ಒಪ್ಪಿಗೆ ನೀಡಿತು. ಈ ರೀತಿಯಾಗಿ ನವೀ ಮುಂಬೈನ ನಿರ್ಮಾಣವಾಯಿತು.

ಚಿತ್ರಕೃಪೆ: Deepak Bansi

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಭಾರತದ ಕಂಪನಿ ಕಾಯ್ದೆ 1956 ರ ಅಡಿಯಲ್ಲಿ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮ (ಸಿಡ್ಕೊ) ಸಂಸ್ಥೆಯು 17 ಮಾರ್ಚ್ 1971 ಸ್ಥಾಪನೆಗೊಂಡಿತು ಹಾಗೂ ನವೀ ಮುಂಬೈ ಪ್ರದೇಶದಲ್ಲಿ ಹಲವು ಉಪನಗರಗಳ ನಿರ್ಮಾಣ ಮಾಡಿತು. ದರ ಉದ್ದೇಶ ಈ ನಗರದ ಸಂಪೂರ್ಣ ಬೆಳವಣಿಗೆ ಮತ್ತು ಹೊಸ ನಗರವಾಗಿ ಗುರುತು ನೀಡುವುದಾಗಿತ್ತು.

ಚಿತ್ರಕೃಪೆ: Gentlesound

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಸಿಡ್ಕೊ ರಚಿಸಿದ ಆ ಉಪನಗರಗಳೆ ಏರೋಲಿ, ಗಾನ್ಸೋಲಿ, ಕೋಪರ್ ಕೈರೇನ್, ವಾಶಿ, ಸನ್ ಪಾಡಾ, ನೆರೂಳ್, ಸಿಬಿಡಿ ಬೆಲಾಪೂರ್, ಖಾರ್ಘರ್, ಕಾಲಾಂಬೋಲಿ, ಕಮೋಠೆ, ನ್ಯೂ ಪನವೇಲ್, ಉಳ್ವೆ, ಪುಷ್ಪಕ್ ಮತ್ತು ದ್ರೋಣಗಿರಿ.

ಚಿತ್ರಕೃಪೆ: New City Limits

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಸಿಡ್ಕೊ ಈ ಪ್ರದೇಶದಲ್ಲಿ ರೈಲು ನಿಲ್ದಾಣಗಳು, ಸೇತುವೆ ಮುಂತಾದ ಅನೇಕ ಲೋಲ್ಕೋಪಯೋಗಿ ಯೋಜನೆಗಳನ್ನು ಸಂಪೂರ್ಣಗೊಳಿಸಿದ್ದು ಮುಂಬೈ ಮುಖ್ಯವಾಹಿನಿ ನಗರದೊಂದಿಗೆ ಸಂಪರ್ಕ ಮಾಧ್ಯಮವನ್ನು ಸುಲಲಿತಗೊಳಿಸಿದೆ. ಮುಂಬೈ ನಗರ ವ್ಯಾಪ್ತಿಯ ಕೊನೆಯ ಸ್ಥಳವಾದ ಸಿಯಾನ್ ನಿಂದ ನವೀ ಮುಂಬೈನ ಪನವೇಲ್ ಗೆ ಸಂಪರ್ಕ ಬೆಸೆಯಲು ಪನವೇಲ್ ಎಕ್ಸ್ ಪ್ರೆಸ್ ವೇ ನಿರ್ಮಿಸಲಾಗಿದೆ. ಮೊದ ಮೊದಲು ಅಷ್ಟೊಂದು ಉತ್ತಮ ಪ್ರತಿಕ್ರಿಯೆ ಇದಕ್ಕೆ ದೊರೆಯಲಿಲ್ಲವಾದರೂ 90 ರ ನಂತರ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು.

ಚಿತ್ರಕೃಪೆ: Mathsonm

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

92 ರ ನಂತರ ವಾಶಿಯಲ್ಲಿ ಸಗಟು ಕೃಷಿ ಮಾರುಕಟ್ಟೆ ಹಾಗೂ ನಿತ್ಯ ಸಂಚರಿಸಲು ಮನ್ಕರ್ದ್ ನಿಂದ ವಾಶಿಯವರೆಗೆ ರೈಲು ಸಂಪರ್ಕದ ವ್ಯವಸ್ಥೆ ಕಲ್ಪಿಸಲಾಯಿತು. ಇದಾದ ಕೆಲ ಸಮಯದ ಬಳಿಕೆ ಹೆಚ್ಚು ಹೆಚ್ಚು ಜನರು ನವೀ ಮುಂಬೈನೆಡೆಗೆ ಆಕರ್ಷಿತರಾದರು ಮತ್ತು ಆರ್ಥಿಕ ಚಟುವಟಿಕೆಗಳು ಬೆಳೆಯತೊಡಗಿದವು. ಈ ರೀತಿ ನವೀ ಮುಂಬೈ ಸಾಕಷ್ಟು ಜನರನ್ನು ಆಕರ್ಷಿಸತೊಡಗಿತು.

ಚಿತ್ರಕೃಪೆ: Anurupa Chowdhury

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಪ್ರಾಕೃತಿಕವಾಗಿಯೂ ನವೀ ಮುಂಬೈ ವಿಶಿಷ್ಟವಾಗಿದೆ. ಆ ಕಾರಣ ಪ್ರವಾಸಿ ದೃಷ್ಟಿಯಿಂದಲೂ ಜನ ಮನ್ನಣೆಗಳಿಸಿದೆ. ಇದು ಮಹಾರಾಷ್ಟ್ರದ ಠಾಣೆ ಮತ್ತು ರಾಯಗಡ್ ಜಿಲ್ಲೆಗಳಲ್ಲಿ ಹರಡಿಕೊಂಡಿದೆ. ಪ್ರದೇಶದ ಕೆಲವು ಭಾಗಗಳು ರಮಣೀಯವಾದ ಬೆಟ್ಟ ಪ್ರದೇಶಗಳಿಂದ ಕೂಡಿದ್ದರೆ, ಇನ್ನೂ ಕೆಲವು ಭಾಗಗಳು ಜೌಗ ಪ್ರದೇಶಗಳಾಗಿವೆ. ಇದರ ದೊಡ್ಡ ನೆರೆಹೊರೆಗಿಂತ ಭಿನ್ನವಾಗಿದೆ ,ನಗರವು ವಿರಳವಾದ ಜನಸಂಖ್ಯೆ ಹೊಂದಿದೆ.

ಚಿತ್ರಕೃಪೆ: Rudolph.A.furtado

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈ, ಮಹಾರಾಷ್ಟ್ರದ ದಕ್ಷಿಣ ಕೊಂಕಣ ಕರಾವಳಿ ಪ್ರದೇಶದ ಗಡಿ ಭಾಗವಾಗಿದೆ. ಈ ಕರಾವಳಿ ತೀರವು ದಕ್ಷಿಣಕ್ಕೆ ಸಹ್ಯಾದ್ರಿ ಪರ್ವತ ಶ್ರೇಣಿಯನ್ನೂ ಪೂರ್ವಕ್ಕೆ ಇತರೆ ಎತ್ತರದ ಬೆಟ್ಟಗಳನ್ನು ಹೊಂದಿದೆ. ಹೀಗೆ ಪ್ರಾಕೃತಿಕವಾಗಿ ವಿಶೇಷವಾದ ಸ್ಥಳದಲ್ಲಿ ನವೀ ಮುಂಬೈ ಇರುವುದರಿಂದ ಹೆಚ್ಚು ಪ್ರಶಾಂತಮಯವಾಗಿದೆ. ಈ ಪ್ರದೇಶವು ಮುಂಬೈನಂತಿರದೆ ಕಡಿಮೆ ಪ್ರಮಾಣದ ಜನಸಂಖ್ಯೆಯನ್ನು ಹೊಂದಿದೆ.

ಚಿತ್ರಕೃಪೆ: Metasur

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಏರೋಲಿ ಹೆಚ್ಚು ಅಭಿವೃದ್ಧಿ ಹೊಂದಿದ ನವೀ ಮುಂಬೈನ ಒಂದು ಉಪನಗರವಾಗಿದೆ. ಇದು ಮುಖ್ಯ ಮುಂಬೈ ನಗರ ಹಾಗೂ ಇದರ ನೆರೆಹೊರೆಯ, ವಾಶಿ ಮತ್ತು ನೆರೂಳ್ ನಗರಗಳಿಗೆ ರಸ್ತೆ ಸಾರಿಗೆ ಮತ್ತು ಸ್ಥಳೀಯ ರೈಲು ಸೇವೆಗಳ ಮೂಲಕ ಸುಲಭವಾದ ಸಂಪರ್ಕ ಕಲ್ಪಿಸುತ್ತದೆ. ರೈಲಿನಲ್ಲಿ ಏರೋಲಿಯಿಂದ ಠಾಣೆಗೆ 8 ನಿಮಿಷದಲ್ಲಿ ಮತ್ತು ರಸ್ತೆ ಸಾರಿಗೆಯಿಂದ ಮುಳುಂದ್ ಗೆ 10 ನಿಮಿಷದಲ್ಲಿಯೂ ತಲುಪಬಹುದಾಗಿದೆ.

ಚಿತ್ರಕೃಪೆ: Intap2007

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಏರೋಲಿ ಎರಡು ಮುಖ್ಯ ನಿವಾಸಿ ಪ್ರದೇಶಗಳನ್ನು ಹೊಂದಿದೆ, ಏರೋಲಿ ಮತ್ತು ದಿವಾ ವಿಲೇಜ್. ಉಳಿದ ಪ್ರದೇಶವು ಸಿಡ್ಕೊನಿಂದ ಅಭಿವೃದ್ಧಿ ಹೊಂದಿದೆ (ನಗರ ಕೈಗರಿಕಾ ಅಭಿವೃದ್ಧಿ ಮಂಡಳಿ) ಮತ್ತು ನಂತರ ಆಡಳಿತಕ್ಕಾಗಿ ಎನ್‌ಎಂಎಂಸಿಗೆ ಹಸ್ತಾಂತರಿಸಲಾಯಿತು (ಹೊಸ ಮುಂಬಯಿ ಮುನ್ಸಿಪಲ್ ಕರ್ಪೊರೇಶನ್). ಏರೋಲಿಯನ್ನು 28 ವಲಯಗಳಾಗಿ ವಿಭಾಗಿಸಲಾಗಿದೆ.

ಚಿತ್ರಕೃಪೆ: Nikhil Ramakrishnan

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈ ದೂರದೃಷ್ಟಿಯುಳ್ಳ ವಿಶಾಲ ನಗರವಾಗಿದ್ದು ವೈವಿಧ್ಯತೆಯಿಂದ ಕೂಡಿದ ಪ್ರದೇಶವಾಗಿದೆ. ಇಲ್ಲಿ ವಿವಿಧ ಧರ್ಮಗಳ, ಜಾತಿಗಳ ಜನರು ಸ್ನೇಹ ಭಾವದಿಂದ ಜೊತೆಯಾಗಿಯೆ ಬದುಕುತ್ತಿದ್ದಾರೆ. ಜನಸಂಖ್ಯೆಯ ಬಹುಪಾಲು ಹಿಂದೂಗಳನ್ನು, ಮುಸ್ಲಿಂರನ್ನು, ಕ್ರೈಸ್ತರನ್ನು ಮತ್ತು ಸಿಖ್ ಜನರನ್ನು ಕಾಣಬಹುದು.

ಚಿತ್ರಕೃಪೆ: Rait

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಸಿಡ್ಕೊ ಯೋಜಿಸಿದ ದಾರಿಯಲ್ಲಿ ನೆರೂಳ್ ನ ರೈಲು ನಿಲ್ದಾಣದ ಪಶ್ಚಿಮ ಭಾಗದ ಬೆಟ್ಟ ಪ್ರದೇಶದ ಭೂಮಿಯನ್ನು ಧಾರ್ಮಿಕ ಚಟುವಟಿಕೆಗಳಿಗೆಂದೆ ಮೀಸಲಿರಿಸಲಾಗಿದೆ. ಈ ಪ್ರದೇಶವು ಬಾಲಾಜಿ ದೇವಸ್ಥಾನ, ಸ್ವಾಮಿನಾರಾಯಣ ದೇವಸ್ಥಾನ ಸಮುಚ್ಛಯ, ಅಮಿರ್ತಾನಂದಮಯಿದೇವಸ್ಥಾನ ಸಮುಚ್ಛಯ, ನಾರಾಯಣಗುರು ದೇವಸ್ಥಾನ ಸಮುಚ್ಛಯ, ಲಿಟ್ಲ್ ಫ್ಲವರ್ ಚರ್ಚ್ ಮತ್ತು ಎಪ್ವರ್ಥ್ ಮೆಥೊಡಿಸ್ಟ್ ತಮಿಳ್ ಚರ್ಚ್ ಗಳನ್ನು ಹೊಂದಿದೆ. ಈ ಎಲ್ಲ ಧಾರ್ಮಿಕ ಸಂಸ್ಥೆಗಳು ನವೀ ಮುಂಬೈ ಜನರಿಂದ ಮಾತ್ರವಲ್ಲದೇ ಮುಂಬೈ ನಗರದ ಜನರಿಂದಲೂ ಸಹ ಪೋಷಿಸಲ್ಪಡುತ್ತವೆ.

ಚಿತ್ರಕೃಪೆ: Shailendra Kamath

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಹೊಸ ಮುಂಬಯಿ ಸಾರಿಗೆಯಲ್ಲಿ ಕೆಂಪು ಎನ್‌ಎಂಎಂಟಿ ಬಸ್ಸುಗಳು ಮತ್ತು ಸಬ್‍ಅರ್ಬನ್ ರೈಲುಗಳು ಸಾಮಾನ್ಯವಾಗಿವೆ. ಆಟೋ ರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಕೂಡ ಸಾರಿಗೆ ಪದ್ಧತಿಯಲ್ಲಿ ಪ್ರಸಿದ್ಧವಾಗಿದೆ. ಮುಳುಂದ್-ಏರೋಲಿ ಸಂಪರ್ಕದಿಂದ, ಪ್ರಸ್ತುತ ಮಧ್ಯಭಾಗಕ್ಕೆ ಎನ್‌ಎಂಎಂಟಿ ಮೂಲಕ ಅಥವಾ ಬೆಸ್ಟ್ ಬಸುಗಳಿಂದ ಮುಳುಂದ್‌ಗೆ ತ್ವರಿತ ಮಾರ್ಗವಾಗಿದೆ.

ಚಿತ್ರಕೃಪೆ: Kunaldaud

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲಿ ಎಲ್ಲ ರೀತಿಯ ಉಪಯುಕ್ತ ಸೇವೆಗಳು ಲಭ್ಯವಿದೆ. ಬ್ಯಾಂಕುಗಳು, ಉಪಹಾರಗೃಹಗಳು, ರೆಸ್ಟೋರೆಂಟ್‌ಗಳು, ಶಾಪಿಂಗ್ ಮಾಲ್‍ಗಳು, ಮಲ್ಟಿ‌ಪ್ಲೆಕ್ಸುಗಳು ಹಾಗೂ ಇತರೆ ದಿನೋಪಯೋಗಿಯ ಅಂಗಡಿಮುಗ್ಗಟ್ಟುಗಳಿವೆ. ಸೆಂಟರ್ ಒನ್, ಪಾಮ್ ಬೀಚ್ ಗ್ಯಾಲರಿಯಾ, ಸಿಟಿ ಸೆಂಟರ್, ರಘುಲೀಲಾ ಮತ್ತು ಇನಾರ್ಬಿಟ್ ಮಾಲ್ ನಂತಹ ಉನ್ನತ ವ್ಯಾಪ್ತಿಯ ಮಾಲ್‌ಗಳು ವಾಶಿಯಲ್ಲಿವೆ.

ಚಿತ್ರಕೃಪೆ: Khariharan

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ಮುಂಬೈ ಮಖ್ಯ ನಗರದಲ್ಲಿರುವ ಬಹುತೇಕ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ತಮ್ಮ ಶಾಖಾ ಕಚೇರಿಗಳನ್ನು ನವೀ ಮುಂಬೈನಲ್ಲಿ ಹೊಂದಿವೆ. ಬೆಳೆಯುತ್ತಿರುವ ಬೇಡಿಕೆಯನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ಕೂಡ ಸಾಫ್ಟ್‌ವೇರ್ ಪಾರ್ಕ್ ಸ್ಥಾಪಿಸಲು ನೆರವು ನೀಡಿದೆ. ಇಲ್ಲಿ ಹಲವಾರು ದೊಡ್ಡ ಸಂಸ್ಥೆಗಳು ಕೂಡ ತಮ್ಮ ಶಾಖಾ ಕಚೇರಿಗಳನ್ನು ಹೊಂದಿವೆ.

ಚಿತ್ರಕೃಪೆ: Chithiraiyan

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ತಾಜಾ ಹಣ್ಣು, ತರಕಾರಿ ಹಾಗೂ ಸಮುದ್ರ ಜೀವಿಗಳ ಖರೀದಿಗೆ ವಾಶಿ ಪ್ರಸಿದ್ಧ ಪಡೆದ ಸ್ಥಳವಾಗಿದೆ. ಒಂದು ಪ್ರಮುಖ ವ್ಯಾಪಾರಿ ಹೆಗ್ಗುರುತು ಎಂದೆ ಹೇಳಬಹುದಾದ ನಾವಾ ಸೇನಾ - ದ್ರೋಣಗಿರಿ ಘಟಕದಲ್ಲಿನ ಜೆ‌ಎನ್‌ಪಿಟಿ ಹಡಗು ಬಂದರು (ಜವಾಹಾರಲಾಲ್ ನೆಹರು ಪೋರ್ಟ್ ಟ್ರಸ್ಟ್). ಅಲ್ಲದೆ ನಗರದಲ್ಲಿನ ಮುಖ್ಯ ವ್ಯಾಪಾರಿ ಸ್ಥಳಗಳು ಸಿಬಿಡಿ ಬೆಲಾಪೂರ್,ವಾಶಿ,ನೆರೂಲ್ ಮತ್ತು ಮಹಾಪೆ.

ಚಿತ್ರಕೃಪೆ: Jaxer

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನ ನೆರೂಳ್ ನಲ್ಲಿರುವ ಡಿವೈ ಪಾಟೀಲ್ ಕ್ರೀಡಾಂಗಣ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ಹೊಂದಿದ್ದು, ಇಲ್ಲಿಯವರೆಗೆ ಮೂರು ಐಪಿಎಲ್ ಟಿ-20 ಮ್ಯಾಚುಗಳು ಮತ್ತು ಐಪಿಎಲ್ ಟಿ-20 ಅಂತಿಮ ಕ್ರಿಕೆಟ್ ಪಂದ್ಯಗಳಿಗೆ ಆತಿಥೇಯ ಒದಗಿಸಿದೆ. ಭಾರತದಲ್ಲಿರುವ ಉತ್ತಮ ಕ್ರೀಡಾಂಗಣಗಳ ಪೈಕಿ ಇದೂ ಸಹ ಒಂದಾಗಿದೆ.

ಚಿತ್ರಕೃಪೆ: Metasur

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈನಲ್ಲೊಂದು ಸುತ್ತು:

ನವೀ ಮುಂಬೈಗೆ ಭೇಟಿ ನೀಡಲಿಚ್ಛಿಸುವವರು ಮುಂಬೈ ಮುಖ್ಯ ನಗರಕ್ಕೆ ತೆರಳಿ ಅಲ್ಲಿಂದ ಸುಲಭವಾಗಿ ನವೀ ಮುಂಬೈಗೆ ತೆರಳಿ ಸುತ್ತಾಡಿಕೊಂಡು ಬರಬಹುದು.

ಚಿತ್ರಕೃಪೆ: imrankasu

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X